secular Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಯುವ ಕಾಂಗ್ರೆಸ್ ಸೇನಾನಿಗಳು ‘ಸಮಾಜವಾದ’ ಮತ್ತು ‘ಜಾತ್ಯತೀತ’ ಮೌಲ್ಯದ ರಕ್ಷಣೆಗೆ ನಿಲ್ಲುತ್ತಾರೆ- ಸಿಎಂ ಸಿದ್ದರಾಮಯ್ಯ
ಮೈಸೂರು ಜುಲೈ,18,2025 (www.justkannada.in): ಯುವ ಕಾಂಗ್ರೆಸ್ ಸೇನಾನಿಗಳು ನಮ್ಮ ಸಂವಿಧಾನದ “ಸಮಾಜವಾದ” ಮತ್ತು “ಜಾತ್ಯತೀತ” ಮೌಲ್ಯದ ರಕ್ಷಣೆಗೆ ನಿಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಶಕ್ರಿ ಪ್ರತಿಜ್ಞೆ 2025” ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸಂಘ ಪರಿವಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದವನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸುತ್ತಿದೆ. ಬಿಜೆಪಿ ತನ್ನ ಹುಟ್ಟಿನಿಂದಲೇ‌ ಸಾಮಾಜಿಕ ನ್ಯಾಯದ ವಿರೋಧಿ ಆಗಿರುವುದರಿಂದ ಹೀಗೆ ಮಾಡುತ್ತಿದೆ. ಈ ಷಡ್ಯಂತ್ರವನ್ನು ರಾಜ್ಯದ ಮತ್ತು ದೇಶದ ಯುವ ಜನತೆ ಸೋಲಿಸಲು ಕಟ್ಟಿಬದ್ದವಾಗಿ ನಿಂತು ಹೋರಾಟ ಮುನ್ನಡೆಸುತ್ತದೆ ಎನ್ನುವ ಭರವಸೆ ತಮಗಿದೆ ಎಂದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕವಾಗಿ ಯಾವತ್ತೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಪಕ್ಷಕ್ಕೆ ಭಾರತೀಯ ಸಮಾಜಕ್ಕೆ ಪೂರಕವಾದ ಸಿದ್ಧಾಂತವೇ ಇಲ್ಲ. ಸಮಾಜವನ್ನು ವಿಭಜಿಸುವ ಸಿದ್ಧಾಂತ ಬಿಜೆಪಿಯದ್ದು. ಜೆಡಿಎಸ್ ರಾಜ್ಯದ ಕೆಲವೇ ಸ್ಥಳಗಳಲ್ಲಿ ಅಸ್ತಿತ್ವದಲ್ಲಿದೆ. ಈ ಪಕ್ಷಕ್ಕೂ ಸರಿಯಾದ ಸಿದ್ಧಾಂತ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಡಲ್ ಕಮಿಷನ್ ವರದಿಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು ಇದೇ ಮನುವಾದಿಗಳು. ಇವರ ಈ ಜನವಿರೋಧಿ ಇತಿಹಾಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ನೆನಪಿಡಬೇಕು ಎಂದರು.

ಮಹಿಳಾ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು 35% ಮಹಿಳಾ ಮೀಸಲಾತಿ ತಂದರು. ಈ ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಹೋರಾಟ ಮಾಡಿದ್ದು ಸೋನಿಯಾಗಾಂಧಿ. ಇದನ್ನು ನೆನಪಿಡಬೇಕು ಎಂದರು.

ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಯುವ ಕಾಂಗ್ರೆಸ್ಸಿನ ಜಾತ್ಯತೀತ ಸೇನಾನಿಗಳು ಸೈದ್ಧಾಂತಿಕ ಹೋರಾಟ ಮುಂದುವರೆಸುತ್ತಾರೆ, ಸೈದ್ಧಾಂತಿಕವಾಗಿ ಯುವ ಸಂಘಟನೆಯನ್ನು ಬಲಗೊಳಿಸುತ್ತಾರೆ ಎನ್ನುವ ಭರವಸೆ ಇದೆ. ಕಾಂಗ್ರೆಸ್ ಭಾರತ ದೇಶವನ್ನು ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಕೊಡಿಸಿತು. ಆದರೆ ಸಂಘ ಪರಿವಾರದ ಬಿಜೆಪಿ ಬ್ರಿಟೀಷರ ಜೊತೆ ಶಾಮೀಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿತು‌ ಎನ್ನುವುದು ಇತಿಹಾಸ  ಎಂದರು.

RSS 1925 ರಲ್ಲೇ ಆರಂಭವಾದರೂ ಯಾವತ್ತೂ ಕೂಡ ಹೆಡಗೇವಾರ್ ಆಗಲಿ, ಗುರುಜಿ ಹೆಸರಿನವರಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಲಿಲ್ಲ. ಇದನ್ನು ಯುವ‌ಮಿತ್ರರು ಅರ್ಥ ಮಾಡಿಕೊಳ್ಳಬೇಕು. RSSನ‌ ಮುಖವಾಣಿ ರಾಜಕೀಯ ಪಕ್ಷ ಜನಸಂಘ ಆರಂಭವಾಯಿತು. ಬಳಿಕ ಬಿಜೆಪಿ ಆಯಿತು. ಇವರು ದೇಶಭಕ್ತಿ ಬಗ್ಗೆ ಭಯಾನಕವಾಗಿ ಮಾತನಾಡ್ತಾರೆ. ಆದರೆ ದೇಶದ ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿದ್ದರು. ದೇಶದ ಪರವಾಗಿ ಇವರು ಬರಲೇ ಇಲ್ಲ ಎಂದು ಟೀಕಿಸಿದರು.

ಭಾರತೀಯ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಇವರು ಮಾಡುವುದೇ ಇಲ್ಲ. ಮೋದಿಯವರು ಬಾಯಲ್ಲಿ “ಸಬ್ ಕಾ ಸಾಥ್” ಅಂತ ಡೈಲಾಗ್ ಹೊಡಿತಾರೆ. ಆದರೆ, ಬಿಜೆಪಿಯಲ್ಲಿ 240 ಮಂದಿ MP ಗಳಲ್ಲಿ ಒಬ್ಬರೂ ಅಲ್ಪ ಸಂಖ್ಯಾತರಿಲ್ಲ. ಇವರು ಯಾವತ್ತೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸುವುದಿಲ್ಲ. ಇವರು ಕೊಟ್ಟ ಸಂವಿಧಾನವನ್ನು ಗೌರವಿಸುವುದಿಲ್ಲ ಎಂದರು.

ತನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು RSS ನ ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ಪತ್ರ ಬರೆದಿದ್ದಾರೆ. ಇದನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಸುವ ಕೆಲಸವನ್ನು ಯುವ ಕಾಂಗ್ರೆಸ್ ಸೇನಾನಿಗಳು ಮಾಡಬೇಕು ಎಂದರು.

ಸಂವಿಧಾನದ ಆಶಯ ಮತ್ತು ಮೌಲ್ಯಗಳ ಬಗ್ಗೆ ಬದ್ಧತೆ ಇರುವ ಏಕೈಕ ಪಕ್ಷ ಕಾಂಗ್ರೆಸ್ . ಯುವ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಮುಗಿಯಿತು. ಗೆದ್ದವರು, ಸೋತವರೆಲ್ಲಾ ಒಟ್ಟಾಗಿ ಹೋಗಬೇಕು. ಗುಂಪುಗಾರಿಕೆ ಬೇಡ, ಒಬ್ಬ ನಾಯಕರ ಹಿಂದೆ ಹೋಗಬಾರದು. ಸಿದ್ಧಾಂತವೇ ನಾಯಕತ್ವ. ಸಿದ್ಧಾಂತದ ಜೊತೆಗೆ ನೀವೆಲ್ಲಾ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಬಾವಿಯಲ್ಲಿ ಕಸ ಸೇರಿದಂತೆ ಜಾತಿ ಸೇರಿಕೊಳ್ಳುತ್ತದೆ. ದುರ್ಬಲ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ಬಂದಾಗ ಮಾತ್ರ ನಮಗೆ ಸಿಕ್ಕ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ.  ನೀವೆಲ್ಲರೂ ನಮ್ಮ ಸಂವಿಧಾನವನ್ನು ಮತ್ತು ಸಂವಿಧಾನ ಜಾರಿ ಸಭೆಯ ಚರ್ಚೆಯನ್ನು ತಪ್ಪದೇ ಓದಬೇಕು ಎಂದರು.

ಮಕ್ಕಳಿಗೆ ಅನ್ನಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಬಂದು ನಿಂತ ತಾಯಂದಿರನ್ನು ನಾನು ಕಂಡಿದ್ದೆ. ಈ ಪರಿಸ್ಥಿತಿ ಹೋಗಬೇಕು ಎನ್ನುವ ಕಾರಣಕ್ಕೆ ನಾನು ಅನ್ನಭಾಗ್ಯ ಜಾರಿ ತಂದೆ, ಅನ್ನಕ್ಕಾಗಿ ಯಾರೂ ಯಾರನ್ನೂ ಬೇಡುವ ಅಗತ್ಯವಿಲ್ಲದ ಪರಿಸ್ಥಿತಿ ತಂದೆ ಎಂದರು.

ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಎನ್ನುವುದನ್ನು ಮರೆಯಬಾರದು. ಮೋದಿ ಮುಖ್ಯಮಂತ್ರಿ ಆಗಿದ್ದಾಗ ಏನೇನು ಹೇಳಿದ್ದರೋ ಅದಕ್ಕೆ ವಿರುದ್ದವಾಗಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

ಬಿಜೆಪಿಯವರು ಮೈಸೂರಿಗೆ ಏನಾದ್ರೂ ಮಾಡಿದ್ರಾ ? ಬಿಜೆಪಿ ಬರೀ ಬುರುಡೆ ಬಿಡುತ್ತೆ

ಬಿಜೆಪಿಯವರು ಮೈಸೂರಿಗೆ ಏನಾದ್ರೂ ಮಾಡಿದ್ರಾ ? ಇಲ್ಲಿರುವ ಮಹಾರಾಣಿ ಕಾಲೇಜು, ಆಸ್ಪತ್ರೆ, ಜಯದೇವ ಆಸ್ಪತ್ರೆ ಸೇರಿ ಇಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೆಲ್ಲಾ ನಮ್ಮಿಂದ ಆಗಿದ್ದು. ನಾನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿ ಮಾಡಿದ್ದೇ ಹೊರತು ಬುರುಡೆ ಬಿಜೆಪಿ‌ ಮಾಡಿದ್ದೇನೂ ಇಲ್ಲ ಎಂದು ವಿವರಿಸಿದರು.

ಒಂದೇ ವೆದಿಕೆಗೆ ಬನ್ನಿ: ಸಿಎಂ ಸವಾಲು

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ನಮ್ಮ ಜೊತೆ ಒಂದೇ ವೇದಿಕೆಯಲ್ಲಿ‌ಬಹಿರಂಗ ಚರ್ಚೆಗೆ ಬರಲಿ. ನಾನೇ ಬರುತ್ತೇನೆ. ಈ ಸವಾಲನ್ನು‌ ಬಿಜೆಪಿ‌ ಸ್ವೀಕರಿಸಲು ಸಿದ್ದವಿಲ್ಲ ಏಕೆ? ಬಿಜೆಪಿ ಏನೂ ಕೆಲಸ ಮಾಡದೆ ಕೇವಲ ಬರೀ  ಬುರುಡೆ ಬಿಡತ್ತೆ. ಬಿಜೆಪಿ ಯವರು ಕೆಲಸ ಮಾಡಿದ ಸಾಕ್ಷಿ ಗುಡ್ಡೆ ತೋರಿಸಿ ಎಂದರು.

Key words: Young Congress, stand, Socialism, secular, value, CM Siddaramaiah

The post ಯುವ ಕಾಂಗ್ರೆಸ್ ಸೇನಾನಿಗಳು ‘ಸಮಾಜವಾದ’  ಮತ್ತು ‘ಜಾತ್ಯತೀತ’ ಮೌಲ್ಯದ ರಕ್ಷಣೆಗೆ ನಿಲ್ಲುತ್ತಾರೆ- ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಪದ : ಸಿಎಂಗೆ ಮೂರು ಪ್ರಶ್ನೆಗಳನ್ನಾಕಿ ಕುಟುಕಿದ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ,ಜೂನ್,30,2025 (www.justkannada.in): ಸಂವಿಧಾನದ ಬಗ್ಗೆ ದಿನ ಸಿದ್ದರಾಮಯ್ಯ ತಿರುಚಿದ ಹೇಳಿಕೆ ಕೊಡುತ್ತಿದ್ದಾರೆ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು ಇದು ನನ್ನ ವಾದ ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ನುಡಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಜ್ಯಾತ್ಯಾತೀತ, ಸಮಾಜವಾದಿ ಪದಗಳು ಯಾವತ್ತು ಸೇರಿಸಿದರು ಅಂತ ನಾನು ಕೇಳುತ್ತೇನೆ. ಯಾವಾಗ ಸಂವಿಧಾದ ಒಳಗಡೆ ತುರುಕಿದರು ಅಂತ ಕೇಳುತ್ತೇನೆ. ಇಂದಿರಾಗಾಂಧಿಯವರು ತಮ್ಮ ಸರ್ವಾಧಿಕಾರಿ ನಡೆಯಿಂದ ಸಂವಿಧಾನದ ಮೂಲ ಪೀಠಿಕೆ ಬದಲಿಸಿದರು.  ಸಂವಿಧಾನದಲ್ಲಿ ಜ್ಯಾತ್ಯಾತೀತ, ಸಮಾಜವಾದಿ ಪದಗಳನ್ನು ಸೇರಿಸಿದರು ಎಂದರು.

ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು.

ಸಿದ್ದರಾಮಯ್ಯನವರಿಗೆ ನಾನು ಮೂರು ಪ್ರಶ್ನೆ ಮಾಡುತ್ತೇನೆ. ಜ್ಯಾತ್ಯಾತೀತ, ಸಮಾಜವಾದಿ ಪದ ಸೇರಿಸಿದ್ದು ಯಾರು ಯಾವಾಗ? ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪದಗಳನ್ನು ತುರುಕಿದ್ದು ಹೌದೋ ಇಲ್ವೋ? ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಈ ಪದ ಇತ್ತಾ? ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿರುವ ವಿಷಯ ಚೆರ್ಚೆ ಆಗಬೇಕು. ನನ್ನ ಮೂರು ಪ್ರಶ್ನೆಗೆ ಸಿಎಂ ಸರಿಯಾಗಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಜೇಬಲ್ಲೇ ಇದೆ ಅಂತ ಕೂಗಿದರೇ ಸಂವಿಧಾನ ಬದಲಾಗಲ್ಲ. ಇಂದಿರಾಗಾಂಧಿ ಪ್ರಜಾಪ್ರಭುತ್ವದ ಕತ್ತು ಹಿಚುಕಿ ಕಗ್ಗೋಲೆ ಮಾಡಿದ್ದು ಹೌದೋ ಅಲ್ವೋ. ಎಲ್ಲಾ ನಾಯಕರು ಇದನ್ನು ಪ್ರಶ್ನಿಸಿ ಹೋರಾಟ ಮಾಡಿ ಜೈಲಿಗೆ ಹೋಗಿದ್ರು. ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದು ತಪ್ಪಾ?. ಶಿವಮೊಗ್ಗದಲ್ಲೂ ಶಂಕರಮೂರ್ತಿಯವರು ಜೈಲಿಗೆ ಹೋಗಿದ್ದರು. ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡುತ್ತಾರೆ ಪ್ರಧಾನಿಗಳಿಗೆ ಚೆರ್ಚೆಗೆ ಕರೆಯುತ್ತಾರೆ. 1973 ರಲ್ಲಿ ಕೇರಳ ಹೈಕೋರ್ಟ್ ಮತ್ತು ಸುಪ್ರೀಕೋರ್ಟ್ ಹೇಳುತ್ತೆ ಸಂವಿಧಾನದ ಮೂಲ ಪಿಠೀಕೆಯನ್ನು ಬದಲಿಸಬಾರದು ಅಂತ. ನಾನು ಕೂಡ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದವನು. ಅಂಬೇಡ್ಕರ್ ಗಿಂತ ಸಿದ್ದರಾಮಯ್ಯ ದೊಡ್ಡವರಾ? ಅವರಿಗಿಂತ ಇವರಿಗೆ ಹೆಚ್ಚು ಗೊತ್ತಾ. ಅಂಬೇಡ್ಕರ್ ಅವರನ್ನ ಸೊಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಶವ ಸಂಸ್ಕಾರ ಸಹ ಮಾಡಲು ಸಹ ಜಾಗ ಕೊಡದ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಹೇಳುತ್ತಾರೆ ಆರ್ ಎಸ್ಎಸ್ ಮುಖವಾಡ ಮತ್ತೆ ಕಳಚಿದೆ ಅನ್ನುತ್ತಾರೆ. ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿಯಲ್ಲಿ ಈ ಎರಡು ಪದ ಸೇರಿಸಿದ್ದಾರೆ ಅಂದಿದ್ದಾರೆ. ಜಯರಾಮ್ ರಮೇಶ್ ಬಾಳಂಗೊಚಿ ಸಹ ಮಾತಾಡಿದ್ದಾರೆ. ಆರ್ಎಸ್ಎಸ್ , ಬಿಜೆಪಿ ಮೇಲೆ ಹಾಕಿ ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಆಶಯದ ವಿರುದ್ದ ಹೋಗುವುದು ಸರಿಯಿಲ್ಲ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು ಇದು ನನ್ನ ವಾದ. ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು. ಆರ್ ಎಸ್ಎಸ್ ಬೇರೆ ಬಿಜೆಪಿ ಬೇರೆ ಆರ್ಎಸ್ಎಸ್ ಹೇಳಿದ್ದನ್ನೆಲ್ಲ ಬಿಜೆಪಿ ಕೇಳಬೇಕು ಅಂತೆನಿಲ್ಲ ಎಂದರು.

ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ

ಹಿಂದೂತ್ವ ಯಶಸ್ವಿಯಾದ್ರೆ ಹಿಂದೂ ಸಮಾಜದ ಎಲ್ಲಾ ಜಾತಿಗಳು ಯಶಸ್ವಿಯಾಗುತ್ತೆ. ಎಲ್ಲಾ ಜಾತಿಯವರು ನನಗೆ ಪೋನ್ ಮಾಡುತ್ತಿದ್ದಾರೆ ಬಿಜೆಪಿ ಸೇರಿ ಅಂತ. ನಾನು ಬಿಜೆಪಿಯ ಅನೇಕರ ಬಳಿ ಮಾತಾಡಬೇಕು ಆ ನಂತರ ಬಿಜೆಪಿ ಸೇರುತ್ತೇನೆ. ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ. ಬೇರೆ ಪಕ್ಷದವರು ನನಗೆ ಆಫರ್ ನೀಡುತ್ತಿದ್ದಾರೆ ನಿಮ್ಮ ಮಗನಿಗೆ ಕರ್ಕೊಂಡು ಬನ್ನಿ. ನಿಮಗೇನು ಬೇಕು ನಿಮ್ಮ ಮಗನಿಗೆ ಏನ್ ಕೊಡಬೇಕು ಅಂತ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇಳಿತಾರೋ ಹೋಗ್ತಾರೋ ಎನ್ನುವ ಚರ್ಚೆಗೆ ಕ್ರಾಂತಿ ಅಂತ ಹೆಸರು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಬಾಗಿಲು ಒದ್ದು ಒಳಗಡೆ ಬರ್ತಾರೋ ಗೊತ್ತಿಲ್ಲ. ಸುರ್ಜೇವಾಲ ಕೇವಲ 40 ಜನರನ್ನ ಮಾತ್ರ ಕರೆದು ಮಾತಾಡುತ್ತಿದ್ದಾರೆ. ರಾಜಣ್ಣ ಸೆಪ್ಟೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕಾದು ನೋಡೋಣ ಏನ್ ಏನ್ ಆಗುತ್ತೆ ಅಂತ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: secular, socialist, word,  KS Eshwarappa, CM Siddaramaiah

The post ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಪದ : ಸಿಎಂಗೆ ಮೂರು ಪ್ರಶ್ನೆಗಳನ್ನಾಕಿ ಕುಟುಕಿದ ಕೆ.ಎಸ್ ಈಶ್ವರಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಾತ್ಯಾತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಕಾಂಗ್ರೆಸ್ ನವರದ್ದು- ಮಾಜಿ ಸಿಎಂ ಹೆಚ್.ಡಿಕೆ ಕಿಡಿ.
ರಾಮನಗರ,ಡಿಸೆಂಬರ್,10,2021(www.justkannada.in):  ಕಾಂಗ್ರೆಸ್ ನಡವಳಿಕೆ ಹೊರ‌ನೋಟಕ್ಕೆ ಜಾತ್ಯತೀತ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿಯ ವಾತಾವರಣ ಇಲ್ಲ. ಜಾತ್ಯತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಅವರದ್ದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಇಂದು ಮಾಧ್ಯಮಗಳಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕೊಯ್ಯುವುದೇ ಇವರ ಕೆಲಸ. ಈ ರೀತಿ ನನಗೆ ಎರಡು ಮೂರು ಬಾರಿ ಅನುಭವವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ದೇವೇಗೌಡರು ಪ್ರಧಾನಿ ಆಗಿದ್ದು ಕಾಂಗ್ರೆಸ್ ನಿಂದ ಎನ್ನುತ್ತಾರೆ. ಆದರೆ  ದೇವೇಗೌಡರು ಪ್ರಧಾನಿ ಮಾಡಿ ಎಂದು ಅರ್ಜಿ‌ ಇಟ್ಟುಕೊಂಡು ಹೋಗಿದ್ರಾ. ನಾನು ಮುಖ್ಯಮಂತ್ರಿ ಆದಾಗ ಕಾಂಗ್ರೆಸ್ ಮುಂದೆ ಅರ್ಜಿ ಇಟ್ಟುಕೊಂಡು ಹೋಗಿದನ್ನಾ. ನಮ್ಮನ್ನ ಬೆಂಬಲ ಕೊಟ್ಟಾಗೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ ಎಂದು ಹೆಚ್.ಡಿಕೆ ಕಿಡಿಕಾರಿದರು.

ಆರು ವಿಧಾನಪರಿಷತ್ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಹೆಚ್.ಡಿಕೆ, ಒಂದು ವರ್ಷದ ಅವಧಿಯಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂದು ಯಾರು ನಿರೀಕ್ಷೆ ‌ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ನಮಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು ಅಷ್ಟೇ. ಎಲ್ಲಿ ನಿಮ್ಮ ಅಭ್ಯರ್ಥಿಗಳು ಇಲ್ಲವೂ ಬಿಜೆಪಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದರು. ಅದು ಅವರ ದೊಡ್ಡತನ ತೋರಿಸಿದೆ. ಯಡಿಯೂರಪ್ಪ ಕೃತಜ್ಞತೆ ಸಲ್ಲಿಸುವ ಔದಾರ್ಯ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸೌಜನ್ಯವೂ ಇಲ್ಲ ಎಂದು ಹರಿಹಾಯ್ದರು.

Key words: behavior – Congress – destroy – secular-Former CM HD Kumaraswamy

The post ಜಾತ್ಯಾತೀತ ಶಕ್ತಿಗಳನ್ನೇ ನಿರ್ನಾಮ ಮಾಡಬೇಕೆಂಬ ನಡವಳಿಕೆ ಕಾಂಗ್ರೆಸ್ ನವರದ್ದು- ಮಾಜಿ ಸಿಎಂ ಹೆಚ್.ಡಿಕೆ ಕಿಡಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.