Activity Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಎಫ್ ಎಆರ್ ನಿರ್ಬಂಧ ಸಡಿಲ, ಕೈಗಾರಿಕಾ ಚಟುವಟಿಕೆಗೆ ಆನೆಬಲ-ಸಚಿವ ಎಂ.ಬಿ ಪಾಟೀಲ್
ಬೆಂಗಳೂರು,ಫೆಬ್ರವರಿ,12,2026 (www.justkannada.in): ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಮಹತ್ತ್ವದ ಸುಧಾರಣಾ ಕ್ರಮದಲ್ಲಿ ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತ (ಎಫ್ಎಆರ್= ಫ್ಲೋರ್ ಏರಿಯಾ ರೇಶಿಯೋ)ವನ್ನು ಕೈಗಾರಿಕಾ ಸ್ನೇಹಿಯಾಗಿ ಮಾರ್ಪಡಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಸರಕಾರದ ಈ ಕ್ರಮದಿಂದ ಕೆಐಎಡಿಬಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳ ಪರಿಸರದಲ್ಲಿ ಉದ್ಯಮ ಮತ್ತು ವಸತಿ ಉದ್ದೇಶದ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, `ಇದುವರೆಗೂ ಕೈಗಾರಿಕಾ ನಿವೇಶನಗಳಲ್ಲಿ ಶೇಕಡ 65ರಷ್ಟು ಭೂಮಿಯನ್ನು ಮಾತ್ರ ಉದ್ಯಮದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಅವಕಾಶವಿತ್ತು. ಈಗ ಇದನ್ನು ಶೇಕಡ 75ಕ್ಕೆ ಹೆಚ್ಚಿಸಿದ್ದೇವೆ. ಸರಕಾರದ ಈ ಕ್ರಮ ಚಾರಿತ್ರಿಕವಾಗಿದ್ದು, ಕೈಗಾರಿಕೆಗಳಿಗೋಸ್ಕರ ಹೆಚ್ಚು ಹೆಚ್ಚು ಜಮೀನು/ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ತಪ್ಪಲಿದೆ. ಇದರ ಫಲವಾಗಿ, ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗೆಂದೇ ವಿಪರೀತ ಹಣ ಹಾಕಬೇಕಾಗಿದ್ದ ಹೊರೆ ಇಳಿಯಲಿದೆ. ಇನ್ನೊಂದೆಡೆಯಲ್ಲಿ ರೈತರ ಜಮೀನು ಕೂಡ ಹೆಚ್ಚಾಗಿ ಅವರಲ್ಲೇ ಉಳಿಯಲಿದೆ. ಇದು ಸುಲಲಿತ ವಹಿವಾಟು ಸಂಸ್ಕೃತಿಗೆ ನಿದರ್ಶನವಾಗಿದೆ’ ಎಂದಿದ್ದಾರೆ.

ಇದುವರೆಗೂ ಇದ್ದ ಹಳೆಯ ಎಫ್ಎಆರ್ ಪ್ರಮಾಣದಲ್ಲಿ ಹೂಡಿಕೆದಾರರಿಗೆ ಅನೇಕ ಅಡಚಣೆಗಳಿದ್ದವು. ಉದಾಹರಣೆಗೆ, ಒಂದು ಉದ್ಯಮಕ್ಕೆ 10 ಎಕರೆ ಜಾಗ ಕೊಟ್ಟರೆ ಅದರಲ್ಲಿ ಆರೂವರೆ ಎಕರೆಯನ್ನು ಮಾತ್ರ ಅವರು ಬಳಸಿಕೊಳ್ಳಬಹುದಿತ್ತು. ಉಳಿದ ಜಾಗವನ್ನು ಮೇಲ್ಮೈ ಪಾರ್ಕಿಂಗ್, ಕಟ್ಟಡದ ನಾಲ್ಕೂ ಬದಿಗಳಲ್ಲಿ ಸೆಟ್ ಬ್ಯಾಕ್ ಇತ್ಯಾದಿ ಉದ್ದೇಶಗಳಿಗೆಂದು ಸಾಕಷ್ಟು ಜಾಗ ಬಿಡಬೇಕಿತ್ತು. ಈಗ ಇದನ್ನು ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದುವರೆಗೂ 7 ಮೀ. ಎತ್ತರದ ಕೈಗಾರಿಕಾ ಕಟ್ಟಡಗಳಲ್ಲಿ ಸೆಟ್-ಬ್ಯಾಕ್ ಉದ್ದೇಶಕ್ಕೆ ಮುಂಭಾಗದಲ್ಲಿ 1.5 ಮೀ, ಹಿಂಭಾಗ, ಎಡ ಮತ್ತು ಬಲ ಬದಿಗಳಲ್ಲಿ ತಲಾ 1 ಮೀ. ಜಾಗ ಬಿಡಬೇಕಿತ್ತು. ಇನ್ನು ಮುಂದೆ ಮುಂಭಾಗದಲ್ಲಿ 1.5 ಮೀ. ಮತ್ತು ಯಾವುದಾದರೂ ಒಂದು ಪಾರ್ಶ್ವದಲ್ಲಿ (ಎಡ/ಬಲ) 1 ಮೀ. ಬಿಟ್ಟರೆ ಸಾಕು. ಇದೇ ರೀತಿಯಲ್ಲಿ 15 ಮೀ. ಎತ್ತರದ ಕಟ್ಟಡಗಳಿಗೆ ಮುಂಬದಿಯಲ್ಲಿ ಇದುವರೆಗೆ 3ರಿಂದ 10 ಮೀ. ಮತ್ತು ಉಳಿದ ಮೂರು ಕಡೆಗಳಲ್ಲಿ 1.5 ಮೀ.ನಿಂದ 8 ಮೀ.ವರೆಗೆ ಜಾಗವನ್ನು ಖಾಲಿ ಬಿಡಬೇಕಿತ್ತು. ಈಗ ಇದನ್ನು ಕ್ರಮವಾಗಿ 2ರಿಂದ 6 ಮೀ. ಮತ್ತು 1.5 ಮೀ.ನಿಂದ 6 ಮೀ.ಗೆ ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ನಿಯಮಾವಳಿಗಳಲ್ಲಿ ಉದ್ಯೋಗಿಗಳ ವಸತಿ ಸೌಕರ್ಯ ಮತ್ತು ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಯನ್ನು ನಿರ್ಬಂಧಿಸಲಾಗಿತ್ತು. ಪರಿಷ್ಕೃತ ಎಫ್.ಎ.ಆರ್. ಅಡಿಯಲ್ಲಿ ಸಾಮಾನ್ಯ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.15ರಷ್ಟು ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಲು ಮತ್ತು ಕನಿಷ್ಠ 50 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.10ರಷ್ಟು ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಡಲಾಗುವುದು. ಹಾಗೆಯೇ ವಾಹನಗಳ ನಿಲುಗಡೆಗೆ ಈಗ ಸಾಮಾನ್ಯ ಕೈಗಾರಿಕೆಗಳಿರುವ ನಿವೇಶನಗಳಲ್ಲಿ ಮತ್ತು ಡೇಟಾ ಸೆಂಟರುಗಳಲ್ಲಿ ಶೇ.2ರಷ್ಟು ಮತ್ತು ವೇರ್-ಹೌಸಿಂಗ್ ಹಾಗೂ ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿ ಶೇ.3ರಷ್ಟು ಜಾಗವನ್ನು ಮಾತ್ರ ಮೀಸಲಿಟ್ಟರೆ ಸಾಕು ಎಂದು ಅವರು ವಿವರಿಸಿದ್ದಾರೆ.

ಕೈಗಾರಿಕೆಗಳಿಗೆ ಭೂಮಿ ಒದಗಿಸುವುದು ಸವಾಲಿನ ಕೆಲಸವಾಗಿದೆ. ಭೂಮಿಯ ಲಭ್ಯತೆ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಈಗ ಎಫ್ಎಆರ್ ಅನ್ನು ಕೈಗಾರಿಕೆಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬದಲಿಸಲಾಗಿದೆ. ಇದರಿಂದ ಕೈಗಾರಿಕಾ ಪ್ರದೇಶ ಪರಿಸರಗಳ ಲಂಬ ಬೆಳವಣಿಗೆಗೆ (ವರ್ಟಿಕಲ್ ಡೆವಲಪ್ಮೆಂಟ್) ಅವಕಾಶ ಸಿಗಲಿದೆ. ಜತೆಗೆ ಕಡಿಮೆ ಭೂಮಿಯಲ್ಲೇ ಉದ್ಯಮಗಳ ನಿರ್ಮಾಣ, ಆರ್ಥಿಕ ಪ್ರಗತಿ ಮತ್ತು ಗರಿಷ್ಠ ಉದ್ಯೋಗಸೃಷ್ಟಿಯ ಸಾಧನೆಗಳನ್ನು ಮಾಡಬಹುದು ಎಂದು ಅವರು ವಿವರಿಸಿದ್ದಾರೆ.

ಕೆಐಎಡಿಬಿ ರಾಜ್ಯದ ಹಲವೆಡೆಗಳಲ್ಲಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಹೊಸ ನಿಯಮದ ಪ್ರಕಾರ, ಪ್ರೀಮಿಯಂ ದರ್ಜೆಯ ಕೈಗಾರಿಕಾ ನಿವೇಶನಗಳಲ್ಲಿ ಎಫ್ಎಆರ್ ಅನ್ನು 5.2ಕ್ಕೆ ಏರಿಸಲಾಗಿದೆ. ಈ ನಿಯಮಗಳು ಕೈಗಾರಿಕಾ ಪ್ರದೇಶಗಳು, ವಿಶೇಷ ಹೂಡಿಕೆ ವಲಯಗಳು (ಎಸ್ಇಆರ್), ಏಕಘಟಕ ಸಂಕೀರ್ಣಗಳು, ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿನ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನ್ವಯಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳಲ್ಲಿರುವ ರಸ್ತೆಗಳ ಅಗಲವನ್ನು ಆಧರಿಸಿ ಎಫ್ಎಆರ್ ಪ್ರಮಾಣವನ್ನು ತೀರ್ಮಾನಿಸಲಾಗುತ್ತದೆ. 30 ಮೀ. ಅಗಲದ ರಸ್ತೆಯ ಆಚೀಚೆ ಇರುವ ಕೈಗಾರಿಕಾ ನಿವೇಶನಗಳಲ್ಲಿ ಈವರೆಗೂ 3.25ರಷ್ಟು ಎಫ್ಎಆರ್ ಗೆ ಮಾತ್ರ ಅವಕಾಶವಿತ್ತು. ಈಗ ಇದನ್ನು 5.2ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿಯಲ್ಲಿ 24ರಿಂದ 30 ಮೀ. ಅಗಲದ ರಸ್ತೆ ಇರುವ ಕಡೆಗಳಲ್ಲಿ ಇದನ್ನು 4.8ಕ್ಕೆ, 18ರಿಂದ 24 ಮೀ. ಅಗಲದ ರಸ್ತೆ ಇರುವೆಡೆಗಳಲ್ಲಿ 4ಕ್ಕೆ ಮತ್ತು 12ರಿಂದ 18 ಮೀ. ಅಗಲದ ರಸ್ತೆ ಇರುವಂತಹ ಜಾಗಗಳಲ್ಲಿ 3.6ಕ್ಕೆ ಏರಿಸಲಾಗಿದೆ. 12 ಮೀ.ಗಿಂತ ಕಡಿಮೆ ಅಗಲವಿರುವ ರಸ್ತೆಗಳು ಇರುವಂತಹ ಕಡೆಗಳಲ್ಲಿ ಎಫ್ಎಆರ್ ಪ್ರಮಾಣವನ್ನು 2.45ರಿಂದ 2.8ರವರೆಗೆ ಪರಿಷ್ಕರಿಸಲಾಗಿದೆ ಎಂದು ಎಂಬಿ ಪಾಟೀಲ್ ನುಡಿದಿದ್ದಾರೆ.

ರೈತರಿಗೂ ಲಾಭ

ಪರಿಷ್ಕೃತ ನಿಯಮಗಳಿಂದಾಗಿ ಭೂ ಸ್ವಾಧೀನ ಕಡಿಮೆ ಮಾಡಬಹುದು. ಜತೆಗೆ ಭೂಮಿ ಕಳೆದುಕೊಳ್ಳುವ ಕೆಲವು ರೈತರು ನಗದು ಪರಿಹಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರ ರೂಪದಲ್ಲಿ ಪಡೆಯಲಿದ್ದು, ಅಂತಹವರಿಗೂ ಇದರಿಂದ ಹೆಚ್ಚಿನ ಲಾಭವಾಗಲಿದೆ. ಹೆಚ್ಚು ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದರಿಂದ ಸಹಜವಾಗಿ ರೈತರಿಗೂ ಅನುಕೂಲವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ವಿವರಿಸುತ್ತಾರೆ.

ವಾಹನ‌ ನಿಲುಗಡೆ ಮೀಸಲು ಜಾಗ ಇಳಿಕೆ

ವಾಹನ ನಿಲುಗಡೆಗೆ ಕಡ್ಡಾಯವಾಗಿ ಬಿಡಬೇಕಿದ್ದ ಜಾಗದ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಕೈಗಾರಿಕಾ ನಿವೇಶನದ ಒಟ್ಟು ಜಾಗದಲ್ಲಿ ಶೇ 5ರಷ್ಟು ಜಾಗವನ್ನು ಈ ಹಿಂದೆ ವಾಹನ ನಿಲುಗಡೆಗೆ ಮೀಸಲಿಡಬೇಕಿತ್ತು. ಅದರೆ ಈಗ ಅದನ್ನು ಶೇ 3ರಷ್ಟಕ್ಕೆ ಇಳಿಸಿದ್ದು, ಇದರಿಂದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಎಂ.ಬಿ ಪಾಟೀಲ್ ವಿವರಿಸಿದ್ದಾರೆ.

Key words: FAR, restrictions, industrial, activity, Minister, M.B. Patil

The post ಎಫ್ ಎಆರ್ ನಿರ್ಬಂಧ ಸಡಿಲ, ಕೈಗಾರಿಕಾ ಚಟುವಟಿಕೆಗೆ ಆನೆಬಲ-ಸಚಿವ ಎಂ.ಬಿ ಪಾಟೀಲ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆ ನಿರ್ಬಂಧ: ಪರಿಶೀಲನೆಗೆ ಸಿಎಸ್ ಗೆ ಸೂಚನೆ- ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ, ಅಕ್ಟೋಬರ್ 13,2025 (www.justkannada.in):  ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಚಿವ ಪ್ರಿಯಾಂಕ್ ಖರ್ಗೆಯವರು ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಲು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆರ್ ಎಸ್ ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ  ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಪತ್ರ ಬರೆದಿದ್ದಾರೆ ಎಂದರು.

ಸಂಪುಟ ಪುನರ್ ರಚನೆಗೂ ಇಂದಿನ ಭೋಜನಕೂಟಕ್ಕೂ ಸಂಬಂಧವಿಲ್ಲ

ರಾಜ್ಯದಲ್ಲಿ ಬದಲಾವಣೆಯಲ್ಲಿ ಹೈಕಮಾಂಡ್ ನವರ ನಿರ್ಧಾರವೇ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷದ ವರಿಷ್ಠರ ಮತ್ತು ಶಾಸಕರ ಅಭಿಪ್ರಾಯ ಬಹಳ ಮುಖ್ಯ. ಶಾಸಕರ ಒಮ್ಮತ ಹಾಗೂ ಹೈಕಮಾಂಡ್ ನ ಆರ್ಶೀವಾದವಿರಬೇಕು.  ಇಂದಿನ ಭೋಜನಕೂಟ ಕಾರ್ಯಕ್ರಮದಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಪುಟ ಪುನರ್ರಚನೆಗೂ ಇಂದಿನ ಭೋಜನಕೂಟಕ್ಕೂ ಯಾವುದೇ ಸಂಬಂಧವಿಲ್ಲ. ನವೆಂಬರ್ ತಿಂಗಳಲ್ಲಿ ಯಾವುದೇ ಕ್ರಾಂತಿಯೂ ಇಲ್ಲ ಎಂದರು.

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸುಧಾರಿಸಿದೆ

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಾ, ಅವರ  ಆರೋಗ್ಯ ಸುಧಾರಣೆಯಾಗುತ್ತಿದೆ ಎಂದರು.

ನನಗೆ ಮಾಟ ಮಂತ್ರಗಳಲ್ಲಿ ನಂಬಿಕೆಯಿಲ್ಲ

ಶಾಸಕ ಮುನಿರತ್ನ ಮತ್ತು ಡಿಕೆ ಶಿವಕುಮಾರ್ ಅವರ ನಡೆದ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಸಿಎಂ ಡಿ ಕೆ ಶಿವಕುಮಾರ್ ರವರು ನಿನ್ನೆ ಬೆಂಗಳೂರು ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಲ್ ಬಾಗ್  ನಂತೆ ಮತ್ತಿಕರೆಯ ಜೆ.ಪಿಪಾರ್ಕ್ ದಲ್ಲಿಯೂ ಕಾರ್ಯಕ್ರಮವಿತ್ತು. ಶಾಸಕ ಮುನಿರತ್ನರವರು ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ . ನಾನು  ಯಾವುದೇ ಮಾಟ ಮಂತ್ರಗಳಲ್ಲಿ ನಂಬಿಕೆಯಿರಿಸಿಲ್ಲ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸೂಕ್ತ ಅನುದಾನ ನೀಡಿ, ಮುಂದಿನ ನಾಲ್ಕು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಸಂಪುಟ ಪುನರ್ ರಚನೆ

ವಾಲ್ಮೀಕಿ ಸಮಾಜದವರಿಗೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಸಕರು ರಾಜೀನಾಮೆ ನೀಡಿದ್ದು, ಸರ್ಕಾರ ಅವರನ್ನು ತೆಗೆದುಹಾಕಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

Key words: RSS, activity, banned , CS, instructed, CM Siddaramaiah

The post ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆ ನಿರ್ಬಂಧ: ಪರಿಶೀಲನೆಗೆ ಸಿಎಸ್ ಗೆ ಸೂಚನೆ- ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಲೆ, ಸಂಸ್ಕೃತಿ ಸೊಬಗನ್ನು ಬಿಂಬಿಸುವ “ಗೋಡೆ ಬೆಂಗಳೂರು’’ ಚಟುವಟಿಕೆ ಘೋಷಿಸಿದ ಅನ್‌ ಬಾಕ್ಸಿಂಗ್‌ ಬೆಂಗಳೂರು
ಬೆಂಗಳೂರು,ಅಕ್ಟೋಬರ್,18,2024 (www.justkannada.in):  ಸಿಲಿಕಾನ್‌ ಸಿಟಿ ಬೆಂಗಳೂರಿನ ಗೋಡೆಗಳನ್ನು ಚಿತ್ರಗಳಿಂದ ಕಂಗೊಳಿಸುವಂತೆ ಮಾಡುವ ಉದ್ದೇಶದಿಂದ ಅನ್‌ ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌, ಬಿಎಂಆರ್‌ಸಿಎಲ್‌ ಸಹಯೋಗದೊಂದಿಗೆ “ಗೋಡೆ ಬೆಂಗಳೂರು” ಶೀರ್ಷಿಕೆಯಡಿ ಗೋಡೆಗಳ ಮೇಲೆ ಚಿತ್ರ ಬಿಡುಸುವ ಉಪಕ್ರಮವನ್ನು ಘೋಷಿಸಿದೆ.

ಬೆಂಗಳೂರಿನಾದ್ಯಂತ ಇರುವ ಗೋಡೆಗಳ ಮೇಲೆ ನಮ್ಮ ಕಲೆ, ಸಂಸ್ಕೃತಿ, ಆಚರಣೆ ಇತ್ಯಾದಿ ಸೊಬಗನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಚಟುವಟಿಕೆ ನಡೆಸುತ್ತಿದೆ. ಸರ್ಕಾರದ ಸಹಭಾಗಿತ್ವದಲ್ಲಿ ಇದೇ ನವೆಂಬರ್ 30 ರಿಂದ  ಡಿಸೆಂಬರ್ 15ರ ವರೆಗೆ  “ಬೆಂಗಳೂರು ಹಬ್ಬ”ವನ್ನು ಅದ್ಧೂರಿಯಿಂದ ಅನ್‌ಬಾಕ್ಸಿಂಗ್‌ ಫೌಂಡೇಷನ್‌ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ “ಗೋಡೆ ಬೆಂಗಳೂರು” ಚಟುವಟಿಕೆಯನ್ನು ಪ್ರಾರಂಭಿಸಲಾಗುತ್ತಿದೆ.

ಬಿಎಂಆರ್‌ಸಿಎಲ್‌ನ ಸಹಯೋಗದಿಂದಿಗೆ “ಗೋಡೆ ಬೆಂಗಳೂರು” ಚಟುವಟಿಕೆ ನಡೆಯಲಿದ್ದು, ನಮ್ಮ ಸಂಸ್ಕೃತಿ ಹಾಗೂ ಕ್ರಿಯಾತ್ಮಕ ಮನೋಭಾವದ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಿ ನಮ್ಮ ನಗರವನ್ನು ಸುಂದವಾಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಉಪಕ್ರಮವು ಮೆಟ್ರೋ ನಿಲ್ದಾಣಗಳು, ನಗರದ ಪ್ರಮುಖ ಗೋಡೆಗಳ ಮೇಲೆ ಚಿತ್ರಿಸಲಾಗುತ್ತದೆ. ಬೆಂಗಳೂರಿನ ನಿವಾಸಿಗಳು ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಈ ಸುಂದರ ಕಲೆಗಳ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಈಗಾಗಲೇ ಆಗಸ್ಟ್ ತಿಂಗಳಲ್ಲೇ “ ಗೋಡೆ ಬೆಂಗಳೂರು” ಚಟುವಟಿಕೆಗೆ ಕಲಾವಿದರಿಂದ ಅರ್ಜಿ ಆಹ್ವಾನಿಸಿ, ಹತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಈ ಅರ್ಜಿಗಳನ್ನು 1ಶಾಂತಿರೋಡ್ ಸ್ಟುಡಿಯೋ/ಗ್ಯಾಲರಿಯ ಸಂಸ್ಥಾಪಕ, ದೃಶ್ಯ ಕಲಾವಿದ, ಕಲಾ ಇತಿಹಾಸಕಾರ ಮತ್ತು ಮೇಲ್ವಿಚಾರಕರಾದ ಸುರೇಶ್ ಜಯರಾಮ್,  ಕಲಾವಿದೆ ಅರ್ಚನಾ ಹಂಡೆ, ಬಹುಶಿಸ್ತೀಯ ಕಲಾವಿದ ಮತ್ತು ಚಿತ್ರಕಲೆ, ಶಿಲ್ಪಕಲೆ ಕಲಾವಿದರಾದ ರವಿಕುಮಾರ್ ಕಾಶಿ ಈ ತೀರ್ಪುಗಾರರನ್ನು ಒಳಗೊಂಡ ಸ್ವತಂತ್ರ ಸಮಿತಿಯು ಪರಿಶೀಲನೆ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿದೆ.

ಆಯ್ಕೆಯಾಗಿರುವ ಹತ್ತು ಪ್ರತಿಭಾವಂತ ಕಲಾವಿದರು ಬೆಂಗಳೂರಿನ ಗೋಡೆಗಳ ಮೇಲೆ ಸುಂದರ ಕಲಾಕೃತಿಗಳನ್ನು ರಚಿಸಲಿದ್ದಾರೆ. ಈ ಕಲಾವಿದರು ‘ಬೆಂಗಳೂರು ವರ್ಣಗಳು’ ಎಂಬ ವಿಷಯದ ಸುತ್ತ ಚಿತ್ರಗಳನ್ನು ರಚಿಸಲಿದ್ದಾರೆ. ಇದು ನಗರದ ಸಾರವನ್ನು ಸೆರೆಹಿಡಿಯುವ ಪ್ರಯತ್ನವಾಗಿದೆ. ನಮ್ಮ ನಗರದ ಇತಿಹಾಸ, ಸಂಸ್ಕೃತಿ, ಹಬ್ಬಗಳು, ಸಸ್ಯ ಮತ್ತು ಪ್ರಾಣಿಗಳು ಮತ್ತು ಬೆಂಗಳೂರನ್ನು ಅನನ್ಯವಾಗಿಸುವ ದೈನಂದಿನ ಮೋಡಿ ಸೇರಿದಂತೆ ಹಲವು ಪ್ರಮುಖ ಆಕರ್ಷಣೆಗಳು ಒಳಗೊಂಡರಲಿದೆ.

ಗೋಡೆ ಬೆಂಗಳೂರಿನ ಮುಖ್ಯ ಕ್ಯುರೇಟರ್, ಕಾಮಿನಿ ಸಾಹ್ನಿ ಮಾತನಾಡಿ, ಈ ವಿನೂತನ ಉಪಕ್ರಮವು ನಮ್ಮ ಹೆಮ್ಮೆಯ ಕಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸಲಿದೆ. “ಗೋಡೆ ಬೆಂಗಳೂರು” ಶೀರ್ಷಿಕೆಯಲ್ಲಿ ಮೂಡಿ ಬರುವ ಗೋಡೆ ಚಿತ್ರಗಳು  ಬೆಂಗಳೂರಿನ ಜನರ ಮನಸ್ಸಿನಲ್ಲಿ ಅವಿನಾಭಾವ ಸೆಳೆತ ಸೃಷ್ಟಿಸುವ ಪ್ರಯತ್ನ ಮಾಡಲಿದೆ ಎಂದಿದ್ದಾರೆ.

ಈ ಗೋಡೆ ಚಿತ್ರಗಳು ನಮ್ಮ ಸಮುದಾಯ ಎತ್ತ ಸಾಗುತ್ತಿದೆ, ಸಂಸ್ಕೃತಿಯ ಮಹತ್ವ ಇತ್ಯಾದಿ ಅಂಶಗಳನ್ನು ಜನರ ನಡುವೆ ಸಂಭಾಷಣಾ ಕ್ಯಾನ್ವಾಸ್ ಆಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ಪ್ರತಿಯೊಂದು ಕಲೆಯು ಒಂದೊಂದು ವಿಶಿಷ್ಟವಾದ ಕಥೆಯನ್ನು ಹೇಳುತ್ತವೆ, ಈ ಉಪಕ್ರಮವು ಅನುಭವಿ ಮತ್ತು ಉದಯೋನ್ಮುಖ ಕಲಾವಿದರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಛಾಪು ಮೂಡಿಸಲು ಅನುವು ಮಾಡಿಕೊಡುತ್ತದೆ.

ಬೆಂಗಳೂರು ಹಬ್ಬ ಮುಖ್ಯ ಸಂಚಾಲಕ ರವಿಚಂದರ್ ವಿ ಅವರು, ಈ ಉಪಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು, “ಗೋಡೆ ಬೆಂಗಳೂರು” ಕೇವಲ ಕಲೆಯನ್ನು ಚಿತ್ರಿಸುವುದಷ್ಟೇ ಅಲ್ಲದೆ, ಇದು ಬೆಂಗಳೂರಿನ ಜನರ ನಡುವೆ ಅವಿನಾಭಾವ ಸಂಬಂಧ ಬೆಸೆಯಲಿದೆ.ಈ ಉಪಕ್ರಮದ ಮೂಲಕ, ನಾವು ನಗರದ ಚೈತನ್ಯ, ವೈವಿಧ್ಯತೆ ಮತ್ತು ಅದನ್ನು ವ್ಯಾಖ್ಯಾನಿಸುವ ನಾವೀನ್ಯತೆಯ ಮನೋಭಾವವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದ್ದೇವೆ. ಕಲೆಯು ಜನರನ್ನು ಒಟ್ಟುಗೂಡಿಸುವ ಮತ್ತು ಸಂಭಾಷಣೆಗಳನ್ನು ಪ್ರೇರೇಪಿಸುವ ಶಕ್ತಿಯನ್ನು ಹೊಂದಿದ್ದು, ಇದನ್ನು ಗೋಡೆ ಬೆಂಗಳೂರಿನ ಮೂಲಕ ಸಾಕಾರಗೊಳಿಸಲಿದ್ದೇವೆ ಎಂದರು.

ಅನ್‌ ಬಾಕ್ಸಿಂಗ್ ಬೆಂಗಳೂರು ವತಿಯಿಂದ ಇದೇ ನವೆಂಬರ್‌ ತಿಂಗಳಲ್ಲಿ ಆಚರಿಸಲಾಗುತ್ತಿರುವ “ಬೆಂಗಳೂರು ಹಬ್ಬ”ದ ಮುನ್ನ ವಾರದಲ್ಲಿ “ಗೋಡೆ ಬೆಂಗಳೂರು” ಮೂಲಕ ಗೋಡೆಗಳ ಮೇಲೆ ಕಲಾಕೃತಿಗಳು ಲೈವ್‌ ಇನ್‌ಸ್ಟಾಲ್‌ ಆಗಲಿವೆ. ಈ ಅದ್ಭುತ ಕಲಾಕೃತಿಗಳನ್ನು ಬೆಂಗಳೂರಿಗರು ಕಣ್ತುಂಬಿಕೊಳ್ಳಬಹುದು.

ಬೆಂಗಳೂರು ಹಬ್ಬ 2024” ರ ಕುರಿತು:

ಬೆಂಗಳೂರು ಹಬ್ಬ ಸರ್ಕಾರಿ ಬೆಂಬಲಿತ, ನಾಗರಿಕ-ಆಧಾರಿತ ಉತ್ಸವವಾಗಿದ್ದು, ಬೆಂಗಳೂರಿಗರಿಗಾಗಿ ಆಚರಿಸುತ್ತದೆ. ಉತ್ಸವದ ಎರಡನೇ ಆವೃತ್ತಿಯು ನವೆಂಬರ್ 30 ರಿಂದ ಡಿಸೆಂಬರ್ 15, 2024 ರವರೆಗೆ ನಡೆಯಲಿದೆ. ಬೆಂಗಳೂರು ಹಬ್ಬಾವನ್ನು ಅನ್‌ಬಾಕ್ಸಿಂಗ್‌ ಬಿಎಲ್‌ಆರ್ ಫೌಂಡೇಶನ್ ಆಯೋಜಿಸುತ್ತಿದೆ, ಇದು ಲಾಭೋದ್ದೇಶವಿಲ್ಲದ ವೇದಿಕೆ ಆಗಿದ್ದು, ಜನಸಾಮ್ಯರನ್ನು ಸಕ್ರಿಯಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಬೆಂಗಳೂರಿನ ಪ್ರಯಾಣವನ್ನು ಜಾಗತಿಕ ಟೆಕ್ ಹಬ್ ಮತ್ತು ಸಾಂಸ್ಕೃತಿಕ ನಗರಿಯನ್ನಾಗಿ ಆಚರಿಸುತ್ತದೆ. ಬೆಂಗಳೂರು ಹಬ್ಬಾ ಬೆರಗುಗೊಳಿಸುವ ಪ್ರದರ್ಶನಗಳು ಮತ್ತು ಕಲಾತ್ಮಕ ಪ್ರದರ್ಶನಗಳು ಮತ್ತು ತಲ್ಲೀನಗೊಳಿಸುವ ಅನುಭವಗಳಿಂದ ನಗರದ ರೋಮಾಂಚಕ ಸಂಸ್ಕೃತಿಯನ್ನು ಆಚರಿಸುತ್ತದೆ.

Key words: Unboxing Bangalore, activity, Gode Bangalore

The post ಕಲೆ, ಸಂಸ್ಕೃತಿ ಸೊಬಗನ್ನು ಬಿಂಬಿಸುವ “ಗೋಡೆ ಬೆಂಗಳೂರು’’ ಚಟುವಟಿಕೆ ಘೋಷಿಸಿದ ಅನ್‌ ಬಾಕ್ಸಿಂಗ್‌ ಬೆಂಗಳೂರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದೇಶ ವಿರೋಧಿ ಚಟುವಟಿಕೆ ಮೇಲೆ ತೀವ್ರ ನಿಗಾ- ಸಿಎಂ ಬಸವರಾಜ ಬೊಮ್ಮಾಯಿ‌.
ಹುಬ್ಬಳ್ಳಿ,ಸೆಪ್ಟಂಬರ್,1,2021(www.justkannada.in):   ದೇಶವಿರೋಧಿ ಚಟುವಟಿಕೆ ಕುರಿತು ರಾಜ್ಯ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ. ಎನ್ ಐ ಎ ಜೊತೆ ನಿಕಟ ಸಂಪರ್ಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಆಧಾರದಲ್ಲಿಯೇ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಹಲವರನ್ನು ಎನ್ ಐ ಎ ಬಂಧಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌  ತಿಳಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ನಮ್ಮ ಪೊಲೀಸರು ನಿರಂತರವಾಗಿ ಕರಾವಳಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ. ಅದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ. ಎನ್ ಐಎ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲಾಗುತ್ತಿದೆ  ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಗಣೇಶೋತ್ಸವ ಆಚರಣೆ ಸಂಬಂಧ ಸೆ.5 ರಂದು ತೀರ್ಮಾನ.

ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಕೋವಿಡ್ ಸ್ಥಿತಿಗತಿ ಮತ್ತಿತರ ಮಾಹಿತಿ ಪಡೆದುಕೊಂಡು, ಸೆಪ್ಟೆಂಬರ್ 5 ರಂದು ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ‌  ತಿಳಿಸಿದರು.

ಗಣೇಶೋತ್ಸವ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತಿದೆ. ಹೀಗಾಗಿ ಕಳೆದ ಬಾರಿ ಹೇಗೆ ನಿರ್ವಹಣೆ ಮಾಡಲಾಗಿದೆ. ಈ ವರ್ಷದ ಪರಿಸ್ಥಿತಿಯಲ್ಲಿ ಹೇಗೆ ಆಚರಿಸಬೇಕು ಎಂಬ ಬಗ್ಗೆ ಜಿಲ್ಲೆಗಳಿಂದ  ಸಂಪೂರ್ಣ ವರದಿ ಪಡೆದು, ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದರು.

ಕೋವಿಡ್ 19 ಪರಿಸ್ಥಿತಿ ಸುಧಾರಿಸಿರುವ ಗಡಿ ಜಿಲ್ಲೆಗಳಲ್ಲಿ ಈಗಾಗಲೇ ವಾರಾಂತ್ಯ ಕರ್ಫ್ಯೂ ಹಿಂಪಡೆಯಲಾಗಿದೆ. ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು. ಪರಿಸ್ಥಿತಿ ಸುಧಾರಿಸಿದಂತೆಲ್ಲ, ನಿರ್ಬಂಧಗಳನ್ನು ಸಡಿಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಾಳೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ದಾವಣಗೆರೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇತರ ಹಲವು ಕೇಂದ್ರ ಸಚಿವರು ಸಹ ರಾಜ್ಯಕ್ಕೆ ಆಗಮಿಸಲಿದ್ದು, ಅವರೊಂದಿಗೆ ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಹಾಗೂ ರಾಜ್ಯದಲ್ಲಿ ಹಲವು ಕೇಂದ್ರದ ಯೋಜನೆಗಳಿಗೂ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ನಗರಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಬಡ ಜನರ ಜೀವನ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ  ಗೆಲುವು ಸಾಧಿಸಲಿದೆ. ಅಭಿವೃದ್ಧಿಗೆ ಜನ ಮತ ನೀಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: Intensive- action-anti-living –activity-  CM Basavaraja Bommai

The post ದೇಶ ವಿರೋಧಿ ಚಟುವಟಿಕೆ ಮೇಲೆ ತೀವ್ರ ನಿಗಾ- ಸಿಎಂ ಬಸವರಾಜ ಬೊಮ್ಮಾಯಿ‌. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಬಜೆಟ್ ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗೆ ಸಿಎಂ ಬಿ.ಎಸ್.ವೈ ಆದ್ಯತೆ”
ಬೆಂಗಳೂರು, ಮಾರ್ಚ್,08,2021(www.justkannada.in) : ಗುಣಮಟ್ಟದ ಬಿತ್ತನೆ ಬೀಜ ಲಭ್ಯತೆ, ಬೆಳೆ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮಾರಾಟ ಹೀಗೆ ಪ್ರತಿ ಹಂತದಲ್ಲೂ ರೈತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ ಎಂದು  ಸಿಎಂ ಬಿ.ಎಸ್.ಯಡಿಯೂರಪ್ಪ ಬಜೆಟ್ ನಲ್ಲಿ ತಿಳಿಸಿದ್ದಾರೆ.2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಅದರಲ್ಲಿ  ಕೃಷಿ ಕ್ಷೇತ್ರಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಕೃಷಿ ಹಾಗೂ ಪೂರಕ ಚಟುವಟಿಕೆಗೆ ಒಟ್ಟಾರೆ ಬಜೆಟ್ ನಲ್ಲಿ  31,028 ಕೋಟಿ. ರೂ. ಮೀಸಲು ಇಡಲಾಗಿದೆ. ಕೃಷಿಕರ ಆದಾಯವನ್ನು 2023ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಕೈಜೋಡಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ.

“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟಾರೆ 7730 ಕೋಟಿ ರೂ. ಗಳ ಆರ್ಥಿಕ ನೆರವನ್ನು ವರ್ಗಾಯಿಸಲಾಗಿದೆ. ಈ ಯೋಜನೆಯಡಿ ದೇಶದಲ್ಲಿಯೇ ಅತ್ಯಂತ ಹೆಚ್ಚು ಆಧಾರ್ ದೃಢೀಕೃತ ಮಾಹಿತಿ (ಶೇ.97) ಹಾಗೂ ಆಧಾರ್ ಆಧಾರಿತ ನೇರ ನಗದು ವರ್ಗಾವಣೆಗಾಗಿ (ಶೇ.90) ರಾಜ್ಯವು ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನವಾಗಿದೆ.”

ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮ

“ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಸಿಂಚಾಯಿ ಯೋಜನೆ ಮುಂತಾದ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮವಹಿಸಿದೆ. ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ  ಫಸಲ್ ಭೀಮಾ ಯೋಜನೆಗೆ 900 ಕೋಟಿ ರೂ. ಗಳನ್ನು ಹಾಗೂ ಪ್ರಧಾನಮಂತ್ರಿ ಸಿಂಚಾಯಿ ಯೋಜನೆಗೆ 831 ಕೋಟಿ ರೂ. ಗಳನ್ನು ಒದಗಿಸಲಾಗಿದೆ.”

ಮಾರುಕಟ್ಟೆ ಶುಲ್ಕವನ್ನು ಶೇ.1.5 ರಿಂದ ಶೇ.0.60ಗೆ ಇಳಿಕೆ

“ರಾಜ್ಯ ಸರ್ಕಾರವು ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಶುಲ್ಕವನ್ನು ಶೇ.1.5 ರಿಂದ ಶೇ.0.60ಗೆ ಇಳಿಸಲಾಗಿದೆ. ಇದಲ್ಲದೇ, ಕೃಷಿ ಉತ್ಪನ್ನ ಸಂಗ್ರಹಣೆ ಹಾಗೂ ಸಂಸ್ಕರಣೆಗೆ ಕೂಡ ಆದ್ಯತೆ ನೀಡಿದೆ.”

“ಜನರಿಗೆ ಆರೋಗ್ಯಕರ ಹಾಗೂ ರಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯುವ ಕೃಷಿಯನ್ನು ಉತ್ತೇಜಿಸಲು 500 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗುವುದು.” ಕೃಷಿ ನವೋದ್ಯಮಗಳ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲು ಹಾಗೂ ಸ್ಥಳೀಯ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ ಪಾರ್ಕ್ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ ಗಳಿಗೆ ಸಹಾಯಧನ

ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.40 ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು. “ರೈತರು ಮಿತವ್ಯಯದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನೆರವಾಗುವಂತೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲಾಗುವುದು. ಈ ಉದ್ದೇಶಕ್ಕಾಗಿ ಯಂತ್ರೋಪಕರಣಗಳನ್ನು ಒದಗಿಸಲಾಗುವುದು. ವಿವಿಧ ಕೃಷಿ ಬೆಳೆಗಳನ್ನು ಒಕ್ಕಲು ಮಾಡಲು ಕಂಬೈನ್ಡ್ ಹಾರ್ವೆಸ್ಟರ್ ಗಳನ್ನೂ ಸಹ ಪೂರೈಸಲಾಗುವುದು. ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ ಗಳಿಗೆ ಸಹಾಯಧನ ನೀಡುತ್ತಿದ್ದು, ಇದನ್ನು 25-45 PTO HP ಟ್ರ್ಯಾಕ್ಟರ್ ಗಳಿಗೂ ವಿಸ್ತರಿಸುವುದಾಗಿ ಪ್ರಸ್ತಾಪಿಸಲಾಗಿದೆ.

“ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರದ ವಿತರಣೆ ಮಾಡಿ ಸಾವಯುವ ಇಂಗಾಲ ಹೆಚ್ಚಿರುವ ಅಭಿಯಾನ ಕಾರ್ಯಕ್ರಮವನ್ನು 75 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಉದ್ದೇಶಕ್ಕೆ 2021-22ನೇ ಸಾಲಿನಲ್ಲಿ 10 ಕೋಟಿ ರೂ, ಅನುದಾನವನ್ನು ಒದಗಿಸಲಾಗುವುದು.”

ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿಗೆ 50 ಕೋಟಿ ರೂ. ಹಂಚಿಕೆ

“ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಡಿಯಲ್ಲಿ ಶೇ.35ರಷ್ಟು ಸಹಾಯಧನವನ್ನು ವಿವಿಧ ಚಟುವಟಿಕೆಗಳಾದ ಶೀತಲಗೃಹ ನಿರ್ಮಾಣ, ಕೊಯ್ಲೋತ್ತರ ನಿರ್ವಹಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೀಡಲಾಗುತ್ತಿದೆ. ಈ ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರವು ಶೇ.15ರಷ್ಟು ಹೆಚ್ಚುವರಿ ಸಹಾಯಧನ ನೀಡಲಿದೆ. ಈ ಯೋಜನೆಗೆ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುವುದು.”

ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ

“ಅತ್ಯುತ್ತಮ ತರಬೇತಿ, ನೂತನ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ತೋಟಗಾರಿಕಾ ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲು ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು.”

“ವಿನೂತನ ತಂತ್ರಜ್ಞಾನ, ಹೊಸ ಬೆಳೆ ತಳಿಗಳು, ಉತ್ತಮ ನಿರ್ವಹಣಾ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಮತ್ತು ರಾಜ್ಯದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಪ್ರಾತ್ಯಕ್ಷಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು.”

ಸಣ್ಣ ಹಿಡುವಳಿದಾರರು ಜಮೀನಿನಲ್ಲಿ ತೋಟಗಾರಿಕೆ ಉಪಕಸುಬುಗಳು

ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಜಮೀನಿನಲ್ಲಿ ತೋಟಗಾರಿಕೆ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ಸುಸ್ಥಿರವಾಗಿ ಮತ್ತಿತರ ವರ್ಷವಿಡೀ ವರಮಾನ ಪಡೆಯಲು ‘ ಸಮಗ್ರ ಕೃಷಿ ಪದ್ಧತಿ ‘ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆದ್ಯತೆ ನೀಡುವುದಾಗಿ ಸಿಎಂ ಬಜೆಟ್ ನಲ್ಲಿ ತಿಳಿಸಿದ್ದಾರೆ.

ಪ್ರಾತ್ಯಕ್ಷಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು

ರೈತರಿಗೆ ಉತ್ತಮ ಗುಣಮಟ್ಟದ ಹೈಬ್ರಿಡ್ ಬೀಜ ಮತ್ತು ಬೀಜ – ಒದಗಿಸಲು ,ಹೈಬ್ರಿಡ್ ಬೀಜ ರೈತರಿಗೆ ನೀಡಲು ಹೈಬ್ರೀಡ್ ಬೀಜ ನೀತಿ. ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು ವಿನೂತನ ತಂತ್ರಜ್ಞಾನ, ಹೊಸ ಬೆಳೆ ತಳಿಗಳು , ಉತ್ತಮ ನಿರ್ವಹಣಾ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ( ITHR ) ಮತ್ತು ರಾಜ್ಯದ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಪ್ರಾತ್ಯಕ್ಷಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು  ಎಂದಿದ್ದಾರೆ.

ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ತೋಟಗಾರಿಕೆ ಉತ್ಪನ್ನಗಳಿಗೆ ಏಕರೂಪದ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಿ ‘ ಬ್ರಾಂಡ್ ವ್ಯಾಲ್ಯೂ ‘ ಹೆಚ್ಚಿಸಲಾಗುವುದು . ಉತ್ಪಾದಕರ ಸಂಸ್ಥೆಗಳ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ , ಸಂಪರ್ಕ ಮತ್ತು ಪ್ರಚಾರಕ್ಕಾಗಿ ಏಕೀಕೃತ ಮಾರುಕಟ್ಟೆ ವೇದಿಕೆ ಕಲ್ಪಿಸಿ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸಲಾಗುವುದು.

ಏಕೀಕೃತ ಮಾರುಕಟ್ಟೆ ವೇದಿಕೆ ಕಲ್ಪಿಸಿ ತಂತ್ರಜ್ಞಾನ ಅಳವಡಿಕೆ

“ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕಾ ಉತ್ಪನ್ನಗಳಿಗೆ ಏಕರೂಪದ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಿ ‘ಬ್ರಾಂಡ್ ವ್ಯಾಲ್ಯೂ’ ಹೆಚ್ಚಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಸಂಪರ್ಕ ಮತ್ತು ಪ್ರಚಾರಕ್ಕಾಗಿ ಏಕೀಕೃತ ಮಾರುಕಟ್ಟೆ ವೇದಿಕೆ ಕಲ್ಪಿಸಿ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸಲಾಗುವುದು.”

‘ಸಮಗ್ರ ಕೃಷಿ ಪದ್ಧತಿ’ ಕಾರ್ಯಕ್ರಮ ಅನುಷ್ಠಾನ

“ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಕಡಿಮೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ ಮತ್ತಿತರ ಉಪ ಕಸುಬುಗಳನ್ನು ಕೈಗೊಳ್ಳುವ ಮೂಲಕ ಸುಸ್ಥಿರವಾಗಿ ವರ್ಷವಿಡೀ ವರಮಾನ ಪಡೆಯಲು ‘ಸಮಗ್ರ ಕೃಷಿ ಪದ್ಧತಿ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.” ರೈತರಿಗೆ ಉತ್ತಮ ಗುಣಮಟ್ಟದ ಹೈಬ್ರಿಡ್ ಬೀಜ ಮತ್ತು ಬೀಜ ತಂತ್ರಜ್ಞಾನವನ್ನು ಸುಲಭವಾಗಿ ಒದಗಿಸಲು ಅವುಗಳ ಉತ್ಪಾದಕತೆ, ಲಾಭದಾಯಕತೆ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಲು ಹೊಸ ಹೈಬ್ರಿಡ್ ಬೀಜ ನೀತಿಯನ್ನು ರೂಪಿಸಲಾಗುವುದು.

ಹಳದಿ ಎಲೆ ರೋಗದ ಕುರಿತು ಸಂಶೋಧನೆಗೆ 25 ಕೋಟಿ ರೂ.

“ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಯ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ರೂ.ಗಳಲ್ಲಿ ಕಾರ್ಯಕ್ರಮವನ್ನು ಯೋಜಿಸಲಾಗುವುದು.” “ರಾಜ್ಯಾದಾದ್ಯಂತ ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪಿಸಲಾಗುವುದು. ಈ ಉತ್ಪನ್ನಗಳ ರಫ್ತಿಗೆ ಅನುವಾಗುವಂತೆ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು.”

‘ ಸಮಗ್ರ ಸಂಕುಲ ಸಮೃದ್ಧಿ ‘ ಯೋಜನೆ ಜಾರಿ

ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಜಮೀನಿನಲ್ಲಿ ತೋಟಗಾರಿಕೆ ಉಪಕಸುಬುಗಳನ್ನುಹೊರರಾಜ್ಯದ ದೇಶಿ ತಳಿಗಳಾದ ಗಿರ್ , ಸಾಹಿವಾಲ್, ಒಂಗೋಲ್, ಥಾರ್‌ಪಾರ್ಕರ್ ಮತ್ತು ದೇವಣಿ ತಳಿಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ರೈತರಿಗೆ ಪರಿಚಯಿಸಲು ‘ ಸಮಗ್ರ ಸಂಕುಲ ಸಮೃದ್ಧಿ ‘ ಯೋಜನೆಯನ್ನು ಜಾರಿಗೊಳಿಸಲಾಗುವುದು, ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರ ವಿತರಣೆ

21ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ರ್ಯ ಸಂಪದ ಯೋಜನೆ ‘ ಯಡಿ ರಾಜ್ಯದ 137, ಸಾವಯವ ಮತ್ತು ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಮಾರಾಟ ಮಾಡಲು ಹಾಗೂ ರೈತರಿಗೆ ಗರಿಷ್ಠ ಬೆಲೆ ದೊರಕಿಸಲು ರಾಷ್ಟ್ರೀಯ ಇ – ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಅವಕಾಶ ಕಲ್ಪಿಸಲಾಗುವುದು . ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರ ವಿತರಣೆ ಮಾಡಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಕಾರ್ಯಕ್ರಮವನ್ನು 75 ಕೋಟಿ ರೂ . ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು . ಈ ಉದ್ದೇಶಕ್ಕೆ 2021-22ನೇ ಸಾಲಿನಲ್ಲಿ 10 ಕೋಟಿ ರೂ . ಅನುದಾನವನ್ನು ಒದಗಿಸಲಾಗುವುದು .

ರೈತರಿಗೆ ಗರಿಷ್ಠ ಬೆಲೆಗೆ ರಾಷ್ಟ್ರೀಯ ಇ – ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಅವಕಾಶ

ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಧಾನ ಮಂತ್ರಿಗಳ ಕಿರು ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಡಿಯಲ್ಲಿ ಶೇ . 35 ರಷ್ಟು ಸಹಾಯಧನವನ್ನು ವಿವಿಧ ಚಟುವಟಿಕೆಗಳಾದ ಶೀತಲಗೃಹ ನಿರ್ಮಾಣ , ಕೊಯ್ಲೊತ್ತರ ನಿರ್ವಹಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೀಡಲಾಗುತ್ತಿದೆ . ಸಾವಯವ ಮತ್ತು ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಮಾರಾಟ ಮಾಡಲು ಹಾಗೂ ರೈತರಿಗೆ ಗರಿಷ್ಠ ಬೆಲೆ ದೊರಕಿಸಲು ರಾಷ್ಟ್ರೀಯ ಇ – ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಅವಕಾಶ ಕಲ್ಪಿಸಲಾಗುವುದು  ಎಂದು ಹೇಳಿದ್ದಾರೆ.

52 ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರ ವಿತರಣೆ ಮಾಡಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಕಾರ್ಯಕ್ರಮವನ್ನು 75 ಕೋಟಿ ರೂ . ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು . ಈ ಉದ್ದೇಶಕ್ಕೆ 2021-22ನೇ ಸಾಲಿನಲ್ಲಿ 10 ಕೋಟಿ ರೂ . ಅನುದಾನವನ್ನು ಒದಗಿಸಲಾಗುವುದು.

ಶೀತಲಗೃಹ ನಿರ್ಮಾಣ , ಕೊಯ್ಲೊತ್ತರ ನಿರ್ವಹಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆ

ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಧಾನ ಮಂತ್ರಿಗಳ ಕಿರು ಸಂಸ್ಕರಣೆ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಡಿಯಲ್ಲಿ ಶೇ.35 ರಷ್ಟು ಸಹಾಯಧನವನ್ನು ವಿವಿಧ ಚಟುವಟಿಕೆಗಳಾದ ಶೀತಲಗೃಹ ನಿರ್ಮಾಣ , ಕೊಯ್ಲೊತ್ತರ ನಿರ್ವಹಣೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೀಡಲಾಗುತ್ತಿದೆ.

ಆಯವ್ಯಯ 2021-22 ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲು 57 , ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಜಮೀನಿನಲ್ಲಿ ತೋಟಗಾರಿಕೆ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ಸುಸ್ಥಿರವಾಗಿ ಮತ್ತಿತರ ವರ್ಷವಿಡೀ ವರಮಾನ ಪಡೆಯಲು ‘ ಸಮಗ್ರ ಕೃಷಿ ಪದ್ಧತಿ ‘ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.

ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ  ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚನೆ

ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ತೋಟಗಾರಿಕೆ ಉತ್ಪನ್ನಗಳಿಗೆ ಏಕರೂಪದ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಿ ‘ ಬ್ರಾಂಡ್ ವ್ಯಾಲ್ಯೂ ‘ ಹೆಚ್ಚಿಸಲಾಗುವುದು. ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ, ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರಗಳ ಉನ್ನತೀಕರಣವನ್ನು ಒಳಗೊಂಡಂತೆ ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ  ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚಿಸುವುದಾಗಿಯೂ ಪ್ರಸ್ತಾಪಮಾಡಿದ್ದಾರೆ.

key words : budget-Agriculture-And-Supplement-activity-CM-B.S.Y-Preference

The post “ಬಜೆಟ್ ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗೆ ಸಿಎಂ ಬಿ.ಎಸ್.ವೈ ಆದ್ಯತೆ” appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ಮಾಡುತ್ತಿದೆ : ರೈತಮುಖಂಡ ಬಡಗಲಪುರ ನಾಗೇಂದ್ರ
ಮೈಸೂರು,ಡಿಸೆಂಬರ್,13,2020(www.justkannada.in) : ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ಮಾಡುತ್ತಿದೆ. ಸ್ವಾತಂತ್ರ್ಯದ ನಂತರ ಈ ರೀತಿಯ ಹೊಲಸು  ನಾವು ನೋಡಿರಲಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.

ಕೊರೆವ ಚಳಿಯಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಆದರು ರೈತರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ವಹಿಸಿಲ್ಲ. ರೈತರ ಬಗ್ಗೆ ಸ್ವಲ್ಪವಾದರು ಕಾಳಜಿ ಇದ್ದರೆ ಖಾಸಗೀಕರಣ ಮಾಡಬೇಡಿ ಎಂದಿದ್ದಾರೆ.

ಕನಿಷ್ಠ ರೈತರ ಜೊತೆ ಮಾತುಕತೆಗೆ ಮುಂದಾಗಿಲ್ಲ. ಮೋದಿ ಸಾರ್ವಜನಿಕ ಧನಿ ದಮನವನ್ನ ಮಾಡುತ್ತ ಕಾರ್ಪೆಟ್ ಸೆಕ್ಟರ್ ಹದ ಮಾಡುತ್ತಿದೆ. ನಿಮ್ಮ ಈ‌ ಧೋರಣೆಯನ್ನ ರೈತ ಸಮುದಾಯ ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ನೀವೂ ಮಾಡಿದ 7ವರ್ಷದ ಕೆಲಸವನ್ನ ಪ್ರತಿಯೊಂದು ಮನೆಗೆ ತಲುಪಿಸುತ್ತೇವೆ. ಇದರಲ್ಲಿ ಸಾರ್ವಜನಿಕ ಜೀವನ ಖಾಸಗೀಕರಣ ಮಾಡಿರುವುದನ್ನ ತಿಳಿಸುತ್ತೇವೆ. ಡಿ.16ರಿಂದ 30ರ ವರೆಗೆ ದೆಹಲಿ ಚಲೋ ಚಳುವಳಿ ಆರಂಭಿಸುತ್ತೇವೆ. ಬೆಂಗಳೂರಿನಲ್ಲಿ ಇದಕ್ಕಾಗಿ ಎಲ್ಲರನ್ನು ಒಗ್ಗೂಡಿಸುತ್ತೇವೆ. ರೈತ, ದಲಿತ, ಐಕ್ಯ ಹೋರಾಟ ಸಮಿತಿಯಿಂದ ಈ‌ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

key words : Central-government-democracy-Doing-Anti-Activity-Badagalpur Nagendra

The post ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ಮಾಡುತ್ತಿದೆ : ರೈತಮುಖಂಡ ಬಡಗಲಪುರ ನಾಗೇಂದ್ರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.