ಶೂಟಿಂಗ್ ವಿಶ್ವಕಪ್: ಚಿನ್ನಕ್ಕೆ ಗುರಿಯಿಟ್ಟ ಭಾರತದ ನಾರಿಯರು!

ಬೆಂಗಳೂರು, ಮಾರ್ಚ್ 26, 2021 (www.justkannada.in): ಭಾರತದ ಮನು ಭಾಕರ್​, ರಾಹಿ ಸರ್ನೋಬತ್​​ ಮತ್ತು ಚಿಂಕಿ ಯಾದವ್​ ತಂಡ 25 ಮೀಟರ್​ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್​ನಲ್ಲಿ ಭಾರತೀಯ ತಂಡ 17-7 ಅಂಕಗಳ ಅಂತರದಿಂದ ಪೋಲೆಂಡ್ ತಂಡವನ್ನು ಮಣಿಸಿ ಈ ಸಾಧನೆ ಮಾಡಿದೆ.

25 ಮೀಟರ್​ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಎಲ್ಲಾ ಮೂರು ಪದಕಗಳನ್ನು ಇವರು ತಮ್ಮದಾಗಿಸಿಕೊಂಡಿದ್ದರು.

ಇದಕ್ಕೂ ಮೊದಲು 50 ಮೀಟರ್ ರೈಫಲ್ 3 ಪೊಸಿಷನ್ ತಂಡದ ಇವೆಂಟ್​ನಲ್ಲಿ ಭಾರತದ ಅಂಜುಮ್ ಮೌದ್ಗಿಲ್, ಶ್ರೇಯಾ ಸಕ್ಸೆನಾ ಮತ್ತು ಗಾಯತ್ರಿ ನಿತ್ಯಾನಂದಂ ತಂಡ ಪೋಲೆಂಡ್ ವಿರುದ್ಧವೇ 43-47ರಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.