“ಓದಿದವರೇ ಹೆಚ್ಚೆಚ್ಚು ಜಾತಿವಾದಿಗಳಾಗಿದ್ದಾರೆ” : ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ

ಮೈಸೂರು,ಜನವರಿ,17,2021(www.justkannada.in) : ಯೂನಿವರ್ಸಿಟಿಯಲ್ಲಿ ಓದಿದವರೇ ಹೆಚ್ಚೆಚ್ಚು ಜಾತಿವಾದಿಗಳಾಗಿದ್ದಾರೆ. ರಾಜಕೀಯದಲ್ಲಿ ಓಟು ಕೇಳಲು ಹೋದಾಗ ಇವೆಲ್ಲವೂ ಗೊತ್ತಾಗುತ್ತೆ. ವಿದ್ಯೆ ಕಲಿಯೋದು ಮನುಷ್ಯತ್ವ ಬೆಳೆಸಿಕೊಳ್ಳುವುದಕ್ಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರವ್ಯಕ್ತಪಡಿಸಿದರು.jk-logo-justkannada-mysore

ಇವ ನಮ್ಮವ, ಇವ ನಮ್ಮವ ಅಂತಾರೆ. ಆದರೆ, ನೀ ಯಾವ ಜಾತಿ ಅಂತ ಕೇಳ್ತಾರೆ. ಯಾರಿಗೆ ಮನುಷ್ಯತ್ವ ಇರೋದಿಲ್ಲ ಅವರು ಮಾತ್ರ ಅವಮಾನ ಆಗುವಂತೆ ಮಾತನಾಡುತ್ತಾರೆ. ಪುರೋಹಿತರಿಗೆ ತಲೆ ಬಗ್ಗಿಸಿ ನಮಸ್ಕರಿಸುತ್ತೇವೆ. ದಲಿತರನ್ನ ಕಂಡರೆ ಏನ್ಲಾ ಅಂತೀವಿ. ಈ ನಡವಳಿಕೆಯೇ ಗುಲಮಾಗಿರಿಯ ಸಂಕೇತ. ಒಂದೊಂದು ಜಯಂತಿ ಮಾಡೋರನ್ನ‌ ಒಂದೊಂದು ವರ್ಗ ಮಾಡಿಬಿಟ್ಟಿದ್ದಾರೆ, ಇದು ನಿಲ್ಲಬೇಕು ಎಂದರು.

ನಾನು ಯಾವತ್ತು ಸಲಾಂ ಹೊಡೆದು ರಾಜಕಾರಣ ಮಾಡುವುದಿಲ್ಲ

ನಮಗೆ ಸಾಮಾಜಿಕ, ಆರ್ಥಿಕ ಶಕ್ತಿ ಬಂದರಷ್ಟೆ ಇದೆಲ್ಲ ನಿಲ್ಲುತ್ತೆ. ನಾವು ಇದನ್ನ ಕಲಿಯದಿದ್ದರೆ ಸಮಾಜ ಬದಲಾವಣೆ ಆಗುವುದಿಲ್ಲ. ವಿದ್ಯಾವಂತರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ನಾನು ಯಾವತ್ತು ಸಲಾಂ ಹೊಡೆದು ರಾಜಕಾರಣ ಮಾಡುವುದಿಲ್ಲ. ಅಧಿಕಾರ ಬರುತ್ತೆ  ಹೋಗುತ್ತೆ, ಇನ್ನೊಬ್ಬರನ್ನ ಪ್ರೀತಿಸುವುದೆ ಧರ್ಮ‌. ಧರ್ಮಕ್ಕೆ ಬೇರೆ ವ್ಯಾಖ್ಯಾನವೇ ಇಲ್ಲ. ಬೇರೆಯವರಿಗೆ ಕೆಡಕು ಬಯಸದಿರುವುದೇ ಧರ್ಮ ಎಂದು ಹೇಳಿದರು.

ವಿವಿ ಆವರಣದಲ್ಲಿ ಕನಕದಾಸರ ಮೂರ್ತಿ ಸ್ಥಾಪಿಸಿCD-Disgustingly-Former CM-Siddaramaiah 

ಮೈಸೂರು ವಿವಿ ಆವರಣದಲ್ಲಿ ಯಾರ್ಯಾರದ್ದೋ ಮೂರ್ತಿ ಹಾಕ್ತಿರ ಕನಕದಾಸರ ಮೂರ್ತಿಯನ್ನು ಸ್ಥಾಪಿಸಿ. ಅಶ್ವತ್ ನಾರಾಯಣ್ ಗೆ ನಾನೇ ಬೇಕಾದ್ರೆ ಹೇಳುತ್ತೇನೆ. ಧೈರ್ಯವಾಗಿ ಮೂರ್ತಿ ಸ್ಥಾಪಿಸಿ ಏನು ಆಗೋಲ್ಲ ಎಂದು ವೇದಿಕೆಯಲ್ಲೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್‌ಗೆ ಸಿದ್ದರಾಮಯ್ಯ ಸಲಹೆ ನೀಡಿದರು.

key words : Readers-More-Casteist-become-Former CM- Siddaramai-Bored