ಚಿತ್ರ ಮಂದಿರಗಳಲ್ಲಿ ಶೇ.೭೫ರಷ್ಟು ಆಸನ ಭರ್ತಿಯಾಗುವವರೆಗೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ : ಆರ್.ಆರ್.ಓದುಗೌಡರ್

ಮೈಸೂರು,ಅಕ್ಟೋಬರ್,30,2020(www.justkannada.in) :  ಸಿನಿಮಾ ಮಂದಿರ ಆರಂಭಕ್ಕೂ ಮುನ್ನ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವಿನ ಹಂಚಿಕೆ ವ್ಯವಸ್ಥೆಯ ಗೊಂದಲ ಇತ್ಯರ್ಥಪಡಿಸಿ, ಚಿತ್ರಮಂದಿರದ ಆಸನದ ವ್ಯವಸ್ಥೆ ಕಲ್ಪಿಸಬೇಕು, ಚಿತ್ರ ಮಂದಿರಗಳಲ್ಲಿ ಶೇ. ೭೫ರಷ್ಟು ಆಸನ ಭರ್ತಿಯಾಗುವವರೆಗೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್.ಓದುಗೌಡರ್ ತಿಳಿಸಿದರು.jk-logo-justkannada-logo

ಗಾಯತ್ರಿ ಚಿತ್ರಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಅಂದಾಜು  ೫ ಸಾವಿರ ಕೋಟಿ ನಷ್ಟವಾಗಿದೆ. ವಿತರಕರು ಮತ್ತು ಜಿಎಸ್‌ಟಿ ಸೇರಿ  ೩೫೦ ರಿಂದ ೫೦೦ ಕೋಟಿ ನಷ್ಟವಾಗಿದೆ. ಕೋವಿಡ್‌ನಿಂದಾಗಿ ಎದುರಿಸುತ್ತಿರುವ ಅನಾನುಕೂಲ, ಸವಾಲು, ಸಮಸ್ಯೆಯನ್ನು ರಾಜ್ಯ ಸರ್ಕಾರ ಪರಿಹರಿಸಬೇಕು ಎಂದರು.

ಮೊದಲು ಸಾವಿರ ರೂ. ಕಟ್ಟುತ್ತಿದ್ದ ಶುಲ್ಕಕ್ಕೆ ಐದು ಸಾವಿರವಾಗಿದೆ

ಮಲ್ಟಿಫ್ಲೆಕ್ಸ್ ಚಿತ್ರಮಂದಿರಕ್ಕೂ ಹಾಗೂ ಸಿಂಗಲ್ ಪ್ರೊಜೆಕ್ಟರ್ ಚಿತ್ರಮಂದಿರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಂದು ವಾರ ಚಿತ್ರಮಂದಿರ ಚೆನ್ನಾಗಿ ಓಡಿದರ  ೧೫ ರೂ ಅದಾಯ ಬರುತ್ತದೆ. ಆದರೆ ಮಲ್ಟಿಫ್ಲೆಕ್ಸ್‌ನ ನಾಲ್ಕು ಸ್ಕ್ರೀನ್‌ಗಳಿಂದ  ೧೦ ರೂ. ಆದಾಯ ಬರುವುದಿಲ್ಲ. ಜನರು ಈಗಲೂ ಸಿಂಗಲ್ ಪ್ರೊಜೆಕ್ಟರ್ ಇರುವ ಸಿನಿಮಾ ಮಂದಿರಕ್ಕೆ ಬರುತ್ತಾರೆ. ಚಿತ್ರಮಂದಿರದ ಪರವಾನಗಿ ನವೀಕರಣವನ್ನು ಮೂರು ವರ್ಷಕ್ಕೆ ಒಮ್ಮೆ ಮಾಡಿಕೊಂಡು ಬರುತ್ತಿದ್ದು, ೨೦೧೮ ರಿಂದ ಐದು ವರ್ಷಕ್ಕೆ ಪರವಾನಗಿ ನೀಡಲಾಗುತ್ತಿದೆ. ಹಿಂದಿನ ಶುಲ್ಕ ತಗೆದು ಹಾಲಿ ಶುಲ್ಕ ಹೆಚ್ಚಿಸಲಾಗಿದೆ. ಮೊದಲು ಸಾವಿರ ರೂ. ಕಟ್ಟುತ್ತಿದ್ದ ಶುಲ್ಕಕ್ಕೆ ಐದು ಸಾವಿರವಾಗಿದ್ದು, ಒಂದು ಚಿತ್ರಮಂದಿರದ ಒಟ್ಟು ಚದರಡಿಗೆ  ೧೨ ಲಕ್ಷ ಶುಲ್ಕ ಭರಿಸಬೇಕಾಗುತ್ತದೆ ಎಂದು ಹೇಳಿದರು.

ಪರವಾನಗಿ ನವೀಕರಣ ಶುಲ್ಕವನ್ನು ಪುನರ್ ಪರಿಶೀಲಿಸಬೇಕು

ಆನ್‌ಲಾಕ್-೦೫ರ ನಂತರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ ಸೀಟಿನ ಪ್ರಮಾಣ ಹೆಚ್ಚಿಸುವ ತನಕ ನಾವು ಚಿತ್ರಮಂದಿರ ತೆರೆಯುವುದಿಲ್ಲ. ಕೂಡಲೇ ರಾಜ್ಯ ಸರ್ಕಾರ ಪರವಾನಗಿ ನವೀಕರಣ ಶುಲ್ಕವನ್ನು ಪುನರ್ ಪರಿಶೀಲಿಸಬೇಕು. ಎಸಿಯೇತರಕ್ಕೆ  ೨, ಹವಾನಿಯಂತ್ರಿತ ಚಿತ್ರಮಂದಿರಕ್ಕೆ  ೩ ಸೇವಾ ಶುಲ್ಕ ಸಂಗ್ರಹಿಸಬಹಬುದು. ಚಿತ್ರಮಂದಿರಕ್ಕೆ ವಿದ್ಯುತ್ ಶುಲ್ಕವನ್ನು ವಾಣಿಜ್ಯ ಅನುಗುಣವಾಗಿ ಕಟ್ಟಿಸಿಕೊಳ್ಳುತ್ತಿದ್ದು, ಇದರಿಂದ ತೆರಿಗೆ ಹೊರೆಯು ಹೆಚ್ಚುತ್ತದೆ. ವಿದ್ಯುತ್ ಸರಬರಾಜಿನ ಶುಲ್ಕವನ್ನು ಕೈಗಾರಿಕಾ ವಲಯಕ್ಕೆ ಅನ್ವಯವಾಗುವ ದರದಲ್ಲಿ ಕಟ್ಟಿಸಿಕೊಳ್ಳಬೇಕು.  ಚಿತ್ರಮಂದಿರಗಳ ಕಟ್ಟಡ ತೆರಿಗೆಯನ್ನು ವಿಧಿಸುತ್ತಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಕರ್ನಾಟಕದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ವಿಭಿನ್ನ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಉದ್ದಿಮೆ ನಿರ್ವಹಣೆ ಕಷ್ಟವಾಗಿದೆ. ಪ್ರಸ್ತುತ ಸಿನಿಮಾ ಮಂದಿರಗಳಲ್ಲಿ ಡಿಜಿಟಿಲ್ ಪ್ರೊಜೆಕ್ಟರ್ ಅಳವಡಿಸಿಕೊಂಡಿರುವುದರಿಂದ ಆಪರೇಟರ್ ಪರವಾನಗಿ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಮಸ್ಯೆಗಳೊಂದಿಗೆ ಆರಂಭಿಸಿದರೆ ಶಾಶ್ವತವಾಗಿ ಮುಚ್ಚಬೇಕಾಗುತ್ತದೆ
ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಪರವಾನಗಿ, ಪರ್ಮೀಟ್‌ಗಳು ಮುಕ್ತಾಯವಾಗಿದೆ. ಮುಂದಿನ ಒಂದು ವರ್ಷದವರೆಗೆ ಪರವಾನಗಿಗಳ ಸ್ವಯಂ ನವೀಕರಣದ ಅಗತ್ಯವಿದೆ. ಒಂದು ವೇಳೆ ರಿಯಾಯಿತಿ, ಅನುಮತಿಗಳು ದೊರೆತು ನಿರ್ಬಂಧಿತ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ ನೀಡಿದ್ದರೂ ನಮ್ಮ ಚಿತ್ರಮಂದಿರವನ್ನು ಪ್ರಾರಂಭಿಸಲು ನಮಗೆ ಸಾಧ್ಯವಾಗುವುದಿಲ್ಲ. ಕೋವಿಡ್-೧೯ನಿಂದ ಸಮಸ್ಯೆ ಹೆಚ್ಚಾಗಿರುವಾಗಲೇ ಹಲವು ಸಮಸ್ಯೆಗಳೊಂದಿಗೆ ಆರಂಭಿಸಿದರೆ ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವೀಕ್ಷಕರ ಸಂಖ್ಯೆಯು ಸಾಮಾನ್ಯವಾಗಿ ಶೇ.೭೫ರಷ್ಟು ಸೀಟು ಬರಬೇಕು

ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಮತ್ತು ಪ್ರದರ್ಶಕರೊಂದಿಗಿನ ವ್ಯವಹಾರವನ್ನು ಪುನರ್ ವಿಮರ್ಶಿಸಬೇಕು. ನಿರ್ಮಾಪಕರು ಹಲವಾರು ಶೇಖಡಾವಾರು ಆಧಾರದ ಮೇಲೆ ಹಂಚಿಕೆ ವ್ಯವಸ್ಥೆಯ ಕುರಿತು ಒಮ್ಮತಕ್ಕೆ ಬರಬೇಕು. ಕೆಲವು ನಿರ್ಮಾಪಕರು ಚಿತ್ರಮಂದಿರ ಆರಂಭಿಸಲು ಮುಂದಾಗಿದ್ದರೂ ನಾವು ಶೇಖಡಾವಾರು ಇತ್ಯರ್ಥವಾಗಬೇಕು, ನಿರ್ಮಾಪಕರು- ಪ್ರದರ್ಶಕರು ಸಂಪೂರ್ಣವಾಗಿ ಎಂಜಿ, ಎಫ್‌ಎಚ್, ಎನ್‌ಆರ್‌ಎ ಇತರ ರೀತಿಯ ಮುಂಗಡ ಪಾವತಿಯನ್ನು ಪಾವತಿಸುವುದನ್ನು ಸಂಪೂರ್ಣ ರದ್ದುಗೊಳಿಸುವುದರೊಂದಿಗೆ ಅವರೊಂದಿಗೆ ಮುಕ್ತ ಚರ್ಚೆ ನಡೆಸಬೇಕು. ಜತೆಗೆ ವೀಕ್ಷಕರ ಸಂಖ್ಯೆಯು ಸಾಮಾನ್ಯವಾಗಿ ಶೇ.೭೫ರಷ್ಟು ಸೀಟು ಬರುವ ತನಕ ಆರಂಭಿಸುವುದಿಲ್ಲ ಎಂದರು.pening-theaters-meet-number-demands-including-reduction-renewal-fees-R.R.Odugowder-insists
ಸುದ್ದಿಗೋಷ್ಠಿಯಲ್ಲಿ ಮಹಾಮಂಡಲದ ಉಪಾಧ್ಯಕ್ಷ ಎಂ.ಆರ್. ರಾಜಾರಾಮ್, ಕಾರ್ಯದರ್ಶಿ ಉಮೇಶ್ ಕಾರಂತ್, ಮೈಸೂರು ವಲಯದ ಅಧ್ಯಕ್ಷ ಅಜಿತ್ ಕುಮಾರ್ ಇದ್ದರು.

key words : pening-theaters-meet-number-demands-including-reduction-renewal-fees-R.R.Odugowder-insists