ಚುನಾವಣೆ ಸಮೀಪಿಸುತ್ತಿದೆ ಎಂದು ತರಾತುರಿಯಲ್ಲಿ ಬೆಂಗಳೂರು ಮೈಸೂರು ಹೈವೆ ಉದ್ಘಾಟನೆ-ಸಿದ್ಧರಾಮಯ್ಯ ಟೀಕೆ.

ದಾವಣಗೆರೆ,ಮಾರ್ಚ್,14,2023(www.justkannada.in): ಚುನಾವಣೆ ಸಮೀಪಿಸುತ್ತಿದೆ ಎಂದು ಪ್ರಧಾನಿ ಮೋದಿಯನ್ನ ಕರೆ ತಂದು ತರಾತುರಿಯಲ್ಲಿ ಬೆಂಗಳೂರು -ಮೈಸೂರು  ದಶಪಥ ಹೆದ್ಧಾರಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.

ಇಂದು ಮಾಧ್ಯಮಗಳ  ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬೆಂಗಳೂರು- ಮೈಸೂರು ಹೈವೇ ಕಾಮಗಾರಿ ಪೂರ್ಣವಾಗಿಲ್ಲ. ಹೈವೇ ಸರ್ವಿಸ್ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುವಂತಿಲ್ಲ ಎಕ್ಸ್ ಪ್ರೆಸ್ ಹೈವೇನಲ್ಲಿ ಬೈಪಾಸ್, ಅಂಡರ್ ಪಾಸ್ ಮಾಡಿಲ್ಲ ಇಷ್ಟೆಲ್ಲಾ ಕೆಲಸ ಬಾಕಿ ಇದ್ದರೂ ಬಿಜೆಪಿಯವರು ಮೋದಿ ಕರೆಸಿ ಉದ್ಘಾಟನೆ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದೆ ಎಂದು ತರರುತಿಯಲ್ಲಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.

ಮೈಸೂರು-ಬೆಂಗಳೂರು ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಿದ್ದು ನಾವು.  ದಶಪಥ ರಸ್ತೆ ಮಾಡಬೇಕೆಂದು ಅನುಮೋದನೆ ಮಾಡುದ್ದು ನಾವು. ನಾವು ಮಾಡಿದ ಕೆಲಸವನ್ನ ಅವರು ಬಂದು ಉದ್ಘಾಟನೆ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: Opening -Bangalore -Mysore -Highway – elections – Siddaramaiah