ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ವಿಚಾರ: ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಜೂ,3,2019(www.justkannada.in):  ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹೆಚ್.ವಿಶ್ವನಾಥ್ ಚಿಂತಿಸಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸಾ.ರಾ ಮಹೇಶ್, ನಾಳೆ ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಸಭೆ ಕರೆಯಲಾಗಿದೆ. ಒಬ್ಬ ಹಿಂದುಳಿದ ನಾಯಕರಾಗಿದ್ದು ರಾಜೀನಾಮೆಯನ್ನು ಕೊಡುವುದು ಬೇಡವೆಂದು ನಾಳೆ ನಾನೇ ಒತ್ತಾಯ ಮಾಡುವೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ  ಸಚಿವ ಸಾ.ರಾ. ಮಹೇಶ್, ರಾಜಕಾರಣದಲ್ಲಿ ವಿಶ್ವನಾಥ್ ಅವ್ರು ತುಂಬಾ ಅನುಭವ ಇರುವಂತಹವರು. ಅವರು ಈಗಾಗಲೇ ಎರಡು ಬಾರಿ ರಾಜೀನಾಮೆ ಕೊಡಲು ಮುಂದಾಗಿದ್ರು. ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ. ಆ ಕಾರಣದಿಂದ ರಾಜ್ಯದಲ್ಲಿ ಸಂಘಟನೆಯನ್ನು ಮಾಡಲು ಕಷ್ಟವಾಗುತ್ತದೆ ಎಂದು ಅನೇಕ ಬಾರಿ ಚರ್ಚೆ ಮಾಡಿದ್ದಾರೆ. ಅದ್ದರಿಂದ ಅವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂದು‌ ಅನಿಸುತ್ತದೆ. ನಾಳೆ ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಸಭೆಯಲ್ಲಿ ಡ ಅವರನ್ನು ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜೀನಾಮೆ ಕೊಡದಂತೆ ಮನವೋಲಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಕೊಡಗಿನ ಮಕ್ಕಂದೂರು ಗ್ರಾಮದಲ್ಲಿ ಸ್ವಲ್ಪ ಮಟ್ಟಿಗೆ ಪ್ರವಾಹದ ಎಫೆಕ್ಟ್ ಸಾಧ್ಯತೆ ಹಿನ್ನೆಲೆ. ಆ ಭಾಗದ ಹೋಂ ಸ್ಟೇ ಬಂದ್ ಮಾಡಲು ಗ್ರಾಮ ಪಂಚಾಯತಿ ವ್ಯಾಪ್ತಿ ಈ ತೀರ್ಮಾನ ಮಾಡಿರುವ ಕುರಿತು ಮಾತನಾಢಿದ ಸಿಚವ ಸಾ.ರಾ ಮಹೇಶ್, ಸರ್ಕಾರ‌ ಅಥವಾ ಜಿಲ್ಲಾಡಳಿತದಿಂದ ಇಂತಹ ಯಾವುದೇ ತೀರ್ಮಾನವಿಲ್ಲ,  ಪ್ರವಾಸಿಗರು ಆತಂಕಕ್ಕೆ ಒಳಗಾಗದೆ ಎಂದಿನಂತೆ ಮಡಿಕೇರಿ ಹೋಂ ಸ್ಟೇ, ಹೋಟೆಲ್ ಉಳಿಯಬಹುದು. ಅಲ್ಲಿ ಎಲ್ಲಾ ರೀತಿಯ ಸೌಕರ್ಯವನ್ನು ತಲುಪಿಸುವಂತಹ ಕೆಲಸವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಮ್ಮ ಬಳಿಯು ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ.

ಅಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ನಮ್ಮ ಬಳಿಯು ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಆದರೆ ನಾವು ಆಪರೇಷನ್ ಮಾಡುವ ಹಂತಕ್ಕೆ ಹೋಗೋದಿಲ್ಲ. ಯಾವ ಸಮಯದಲ್ಲಿ ಕ್ಲೈಮಾಕ್ಸ್ ಆಗಬೇಕೋ ಅದು ಆಗತ್ತೆ. ನಾವು ಆಪರೇಷನ್ ಮಾಡಲ್ಲ,  ಅದರ ಅವಶ್ಯಕತೆಯು ನಮಗಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು.

38/80 ಶಾಸಕರಿರುವ ನಮ್ಮ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ  ಇರುವಾಗ. ಅವರಲ್ಲಿ 104ಶಾಸಕರು ಇದ್ದಾರೆ, ಅವರಲ್ಲಿ ಭಿನ್ನಾಭಿಪ್ರಾಯ ಇರೋದಿಲ್ವಾ.? ಎಂದು ಬಿಜೆಪಿಗೆ ಟಾಂಗ್ ಕೊಡುವ ಮೂಲಕ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಇರೋದನ್ನ ಪರೋಕ್ಷವಾಗಿ ಒಪ್ಪಿಕೊಂಡರು.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಗ್ಗೆ  ಮಾತನಾಡಿದ ಸಾ.ರಾ ಮಹೇಶ್, ಜನರು ತುಂಬಾ ಬುದ್ದಿವಂತರಿದ್ದಾರೆ ಸ್ಥಳೀಯ ಚುನಾವಣೆಗಳೇ ಬೇರೆ, ವಿಧಾನಸಭಾ ಚುನಾವಣೆ ಹಾಗೂ  ಲೋಕಸಭಾ ಚುನಾವಣೆಗಳೆ ಬೇರೆ ಈ ಬಗ್ಗೆ ಜನ ತೀರ್ಪು ನೀಡಿದ್ದಾರೆ. ಇದು ಜನ ನೀಡಿರೋ ತೀರ್ಮಾನವಾಗಿದೆ. ದೇಶದಲ್ಲಿ ಹಾಗೂ  ರಾಜ್ಯದಲ್ಲಿ ಯಾರು ಆಡಳಿತ ನಡೆಸಬೇಕು ಎಂದು ಜನ ತೀರ್ಮಾನ ನೀಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಮುಂದಿನ ಜಿ.ಪಂ , ತಾ.ಪಂ ಚುನಾಚನೆಯಲ್ಲಿ  ಪುನರಾವರ್ತನೆಯಾಗತ್ತೆ, ಇದು ಮುಖ್ಯಮಂತ್ರಿ ಹೆಚ್ ಡಿ  ಕುಮಾರಸ್ವಾಮಿ ಕೊಟ್ಟಂತಹ  ಆಡಳಿತದ ಎಫೆಕ್ಟ್ ಎಂದು ಸಂತಸ ವ್ಯಕ್ತಪಡಿಸಿದರು.

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆತ್ಮ ಸ್ಥೈರ್ಯ ಹೆಚ್ಚಿಸಲು ಸಹಕಾರ..

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವಿಚಾರ ಸಂಬಂಧ, ಅವರು ಮಡಿಕೇರಿಯಿಂದಲೇ ಗ್ರಾಮ ವಾಸ್ತವ್ಯ ಮಾಡ್ತಾರೆಂಬ ಮಾಹಿತಿ ಇದೆ.ಹಾಗೆಯೇ ಅಲ್ಲಿಂದ ಶುರುವಾದರೆ ಅಲ್ಲಿನ ಜನರಿಗೆ ಧೈರ್ಯ ಬರತ್ತೆ. ಅವರ ಆತ್ಮ ಸ್ಥೈರ್ಯ ಹೆಚ್ಚಿಸಲು ಇದು ಸಹಕಾರಿಯಾಗಲಿದೆ. ನಾನು ಸಹ ಕುಮಾರಸ್ವಾಮಿ ಹಾದಿಯಲ್ಲಿ 7 ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಅಲ್ಲೆಲ್ಲವು ಇರುವಂತ ಕೆಲ ಸಮಸ್ಯೆಗಳನ್ನು ಈಡೇರಿಸಿದ್ದೇನೆ. ಆದರೆ ಕುಮಾರಸ್ವಾಮಿ ಅವರ ಮಟ್ಟಗೆ ಮಾಡಿಲ್ಲ ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸಹ ಗ್ರಾಮ ವಾಸ್ತವ್ಯಕ್ಕೆ ಸಾಥ್ ನೀಡಲಿದ್ದಾರೆ. ನಂತರ ಎಲ್ಲ ತಾಲೂಕು ಸೇರಿದಂತೆ ಪ್ರತಿ ಜಿಲ್ಲೆಯಲ್ಲು ಗ್ರಾಮ ವಾಸ್ತವ್ಯ ನಡೆಯಲಿದೆ. ಸಿಎಂ ಕುಮಾರಸ್ವಾಮಿ ಅವ್ರಿಗೆ ದೊಡ್ಡ ಹೆಸರು ತಂದು ಕೊಟ್ಟಿದ್ದೆ ಇದು. ಹಾಗಾಗಿ ಇದು ಮುಂದುವರೆಯಲಿದೆ ಜನರ ಸಮಸ್ಯೆ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾರಂಗಿ ಜಲಾಶಯ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರ ಒತ್ತಾಯ ಹಿನ್ನಲೆ. ಜಲಾಶಯ ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಆದರೆ ಅದರಿಂದ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಆ ವಿಚಾರ ನನ್ನ ಗಮನಕ್ಕೆ ಬಂದಿದೆ. ಅಲ್ಲಿನ ಸಮಸ್ಯೆ ಬಗ್ಗೆ ಸಿಎಂ ಕುಮಾರಸ್ವಾಮಿ ಅವ್ರ ಜೊತೆ ಚರ್ಚಿಸಲಾಗುವುದು. ಜಲಾಶಯದ ಶೀಟ್‌ಗಳನ್ನ ಬದಲಾವಣೆ ಮಾಡಬೇಕಾಗಿದೆ. ಜಲಾಶಯದಿಂದ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಸಾ.ರಾ ಮಹೇಶ್ ಧೈರ್ಯ ಹೇಳಿದರು.

Key words:  minister sa.ra Mahesh react about H.Vishwanath’s Resignation to the post of jds president.

#mysore #saramahesh #jds president #HVishwanath #Resignation