ಅಭಿವೃದ್ಧಿಗೆ ನಾವು ಬೇಕು: ಮತ ಹಾಕಲು ಅವರು ಬೇಕಾ..?- ಗ್ರಾಮಸ್ಥರನ್ನ ತರಾಟೆ ತೆಗೆದುಕೊಂಡ ಸಚಿವ ಡಿ.ಸಿ ತಮ್ಮಣ್ಣ…

ಮಂಡ್ಯ,ಜೂ,8,2019(www.justkannada.in): ಜೆಡಿಎಸ್ ಗೆ ಮತಹಾಕದ ಹಿನ್ನೆಲೆ ಸಮಸ್ಯೆ ಹೇಳಿಕೊಂಡು ಬಂದ ಗ್ರಾಮಸ್ಥರನ್ನ ಸಾರಿಗೆ ಸಚಿವ ಡಿಸಿ ತಮ್ಮಣ್ಣ ತರಾಟೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ನಡೆದಿದೆ.

ಮದ್ದೂರು ತಾಲ್ಲೂಕಿನ ಮದ್ದೂರಮ್ಮ ಕೆರೆಯಲ್ಲಿ ಈ ಘಟನೆ ನಡೆದಿದೆ. ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ಈ ವೇಳೆ  ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸಚಿವ ಡಿಸಿ ತಮ್ಮಣ್ಣ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಸಿಟ್ಟಿಗೆದ್ದ ಸಚಿವ ಡಿಸಿ ತಮ್ಮಣ್ಣ ಗ್ರಾಮಸ್ಥರ ವಿರುದ್ದ ಗರಂ ಆಗಿ ಮಾತನಾಡಿದ್ದಾರೆ. ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ಅವರು ಬೇಕಾ? ಅಭಿವೃದ್ಧಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಹರಿಹಾಯ್ದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ಹಾಕದ ಹಿನ್ನೆಲೆ ನೆನ್ನೆ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಗ್ರಾಮಸ್ಥರಿಗೆ ಸಚಿವ ಡಿಸಿ ತಮ್ಮಣ್ಣ ತರಾಟೆ ತೆಗೆದುಕೊಂಡಿದ್ದಾರೆ.  ಶಂಕುಸ್ಥಾಪನೆ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೇನು ಜೋಡೆತ್ತುಗಳು ಬರುತ್ತವೆ ಕರೆದು ಹತ್ತಿಸಿಕೊಳ್ಳಿ, ಈಗ ಮೆಡಗಾರಿಕೆ ಮಾಡಲು ಬರ್ತೀರಾ ಆಗ ಎಲ್ಲೋಗಿತ್ತು? ಎಂದು ಪರೋಕ್ಷವಾಗಿ ದರ್ಶನ್ -ಯಶ್ ವಿರುದ್ಧ ಸಚಿವ ತಮ್ಮಣ್ಣ ವಾಗ್ದಾಳಿ ನಡೆಸಿದರು.

ನಾನು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದೀನಿ. ನೀವು ಅದನ್ನ ನೆನೆಸಿಕೊಂಡ್ರ..? ಈಗ ಬಂದು ಮಾತನಾಡ್ತೀರ..?ಎಂದು ನಿಖಿಲ್ ಗೆ ಮತಹಾಕದ ಜನರ ವಿರುದ್ಧ ಡಿಸಿ ತಮ್ಮಣ್ಣ ಗುಡುಗಿದರು.

Key words: Minister DC thammanna outraged against the villagers.

#mandya #DCthammanna #outraged #villagers #jds