‘ ಅನಂತ ಸಂಪತ್ತು ‘ ಕೋರ್ಟ್ ಐತಿಹಾಸಿಕ ತೀರ್ಪು : ಈ ಚಿತ್ರವೇ ಹೇಳುತ್ತದೆ ಸಾವಿರ ಪದಗಳನ್ನು.

kannada t-shirts

 

ಮೈಸೂರು, ಜು.13, 2020 : (www.justkannada.in news) ಕೇರಳದ ಐತಿಹಾಸಿಕ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ರಾಜಮನೆತನದ ಸುಪರ್ದಿಗೆ ಸೇರಿದ್ದು ಎಂಬ ಸುಪ್ರೀಂಕೋರ್ಟ್ ತೀರ್ಪು ಕೇಳಿ ಟ್ರಾವಂಕೂರ್ ರಾಜಮನೆತನದ ಸಂತಸಕ್ಕೆ ಪಾರವೇ ಇಲ್ಲ.

jk-logo-justkannada-logo

ರಾಜಮನೆತನಕ್ಕೆ ಸಭಾಹಿತ ಅಧಿಕಾರ ( ಪೂಜೆ ನಡೆಸುವ ಅಧಿಕಾರ) ವಿದ್ದು, ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಈ ಸಮಿತಿಯೇ ದೇವಾಲಯದ ಆಡಳಿತ ನೋಡಿಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿರುವುದು ರಾಜಮನೆತನದ ಸಂತಸವನ್ನು ಇಮ್ಮಡಿಗೊಳಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉದಯ್.ಯು ಲಲಿತ್ ಹಾಗೂ ಮಲ್ಹೋತ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿತು.
ತೀರ್ಪು ಪ್ರಕಟಗೊಂಡಲ್ಲೇ ಟ್ರಾವಂಕೂರ್ ರಾಜವಂಶದ ಯುವರಾಜ ಆದಿತ್ಯ ವರ್ಮ ತಂಪೂರನ್, ತಾಯಿಯನ್ನು ಬಲವಾಗಿ ಆಲಂಗಿಸಿಕೊಂಡಿರುವ ಫೋಟೋ ತೀರ್ಪಿನ ಸಾವಿರ ಕಥೆ ಹೇಳುತ್ತದೆ.

Kerala-tiruvanthapuram-anantha-padbhanabha-temple-court

ಅನಂತ ಪದ್ಮನಾಭ ದೇವಾಲಯದ ಲಕ್ಷಾಂತರ ಕೋಟಿ ರೂ.ಮೌಲ್ಯದ ಆಸ್ತಿ, ಚಿನ್ನಾಭರಣಗಳಿದ್ದು, ಈ ಭಾರಿ ಆಸ್ತಿಯೇ ವಿವಾದಕ್ಕೆ ಕಾರಣವಾಗಿ ಕೋರ್ಟ್ ಮೆಟ್ಟಿಲೇರಿತ್ತು.

oooo

key words : Kerala-tiruvanthapuram-anantha-padbhanabha-temple-court

 

website developers in mysore