ಲಿಂಗಾಯತರು ಹಾಗೂ ಒಕ್ಕಲಿಗರ ಮುಷ್ಠಿಯಲ್ಲಿ ಕರ್ನಾಟಕದ ಅಣಕು-ಪ್ರಜಾಪ್ರಭುತ್ವ.

Karnataka's mock-democracy is in the grip of the Lingayats & Vokkaligas.

kannada t-shirts

 

ಆಶಾಕೃಷ್ಣಸ್ವಾಮಿ, ಸೀನಿಯರ್ ಜರ್ನಲಿಸ್ಟ್.

ಬೆಂಗಳೂರು, ಜು.30, 2022: (www.justkannada.in news ) ಕರ್ನಾಟಕದ ಚುನಾವಣೆಗಳಲ್ಲಿ ಯಾವ ಸಿದ್ಧಾಂತಗಳು ಕೆಲಸ ಮಾಡುತ್ತವೆ? ಕಣ್ಣಿಗೆ ಕಾಣುತ್ತಿರುವ ಏಕೈಕ ಸಿದ್ಧಾಂತ-ಜಾತಿ ಮತ್ತು ಹಣ. ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಇಲ್ಲದ ವ್ಯವಸ್ಥೆ ಕರ್ನಾಟಕದಲ್ಲಿದೆ. ಕರ್ನಾಟಕದ ಚುನಾವಣೆಗಳ ಮೇಲೆ ಜಾತಿ ಮತ್ತು ಸಮುದಾಯಗಳು ಪ್ರಾಬಲ್ಯ ಸಾಧಿಸಿವೆ.

ಲಿಂಗಾಯತ-ಒಕ್ಕಲಿಗರ ಬಿಗಿಮುಷ್ಠಿಯನ್ನು ಮುರಿಯಲು ಪ್ರಯತ್ನಿಸಿದ ರಾಜ್ಯದ ಏಕೈಕ ರಾಜಕಾರಣಿ ಎಂದರೆ ದೇವರಾಜ ಅರಸು. ಹಿಂದುಳಿದ ವರ್ಗಗಳಿಗೆ ಸೇರಿದ ಜನರನ್ನು ರಾಜಕೀಯದ ಮುನ್ನೆಲೆಗೆ ತರುವ ಮೂಲಕ ಈ ಪ್ರಯತ್ನವನ್ನು ಮಾಡಿದರು. ಆದರೆ ಅವರ ನಂತರ, ಚಾರಿತ್ರಿಕವಾಗಿ ಮುಂದುವರೆದುಕೊಂಡು ಬಂದಿರುವ ಜಾತಿ ಪ್ರಾಬಲ್ಯ ಪುನರಾವರ್ತನೆಯಾಗುತ್ತಿದೆ.

ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಹ್ಮಣಿಯನ್ ಅವರು ತಮ್ಮ ‘ Fall From Grace – Memoirs of a Rebel IAS Officer ‘ ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ನೇರ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ಪುಸ್ತಕ ಇಂದು (ಜುಲೈ 30) ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಈ ಪುಸ್ತಕವು, 2001ರಲ್ಲಿ ಸೇವೆಯಿಂದ ನಿವೃತ್ತಿಯಾದ ಬಾಲಸುಬ್ರಹ್ಮಣಿಯನ್ ಅವರ ಅವಲೋಕನಗಳು ಹಾಗೂ ಅನುಭವವನ್ನು ಪ್ರತಿಬಿಂಬಿಸುತ್ತದೆ. ರಾಜಕಾರಣಿಗಳು ಹಾಗೂ ಒಂದು ಕಾಲದ ಸಹೋದ್ಯೋಗಿಗಳನ್ನು ನೇರವಾಗಿ ಟೀಕಿಸುವಲ್ಲಿ ಇವರು ಹಿಂಜರಿಯುವುದಿಲ್ಲ. ಕೆಲವು ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿದರೆ, ಇನ್ನೂ ಕೆಲವರ ಹೆಸರುಗಳನ್ನು ಬರೆದಿಲ್ಲ. ಆದರೆ, ಕೆಲವು ರಾಜಕಾರಣಿಗಳ ಹಾಗೂ ಅಧಿಕಾರಿಗಳನ್ನು ಪ್ರಶಂಸಿಸಿಯೂ ಇದ್ದಾರೆ. ಈ ಕಾರಣದಿಂದಾಗಿ ಇವರ ಅಭಿಪ್ರಾಯ ಸಿನಿಕತನದಿಂದ ಕೂಡಿಲ್ಲವೆನ್ನಿಸುತ್ತದೆ.

ಕರ್ನಾಟಕದ ಪಾಲಿಗೆ ಅಣಕು ಪ್ರಜಾಪ್ರಭುತ್ವವೇನೆಂದರೆ, ಪ್ರತಿ ಬಾರಿ ಯಾವುದಾದರೂ ಆಡಳಿತ ಪಕ್ಷ ದುರಾಡಳಿತವನ್ನು ಮಾಡಿದರೆ, ಜನರು ಆ ಪಕ್ಷವನ್ನು ತಿರಸ್ಕರಿಸುತ್ತಾರೆ, ಹಾಗೂ ಮುಂದಿನ ಚುನಾವಣೆಯಲ್ಲಿ ಮತ್ತೊಂದು ದುರಾಡಳಿತ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ. ಅಸಹಾಯಕ ಪ್ರಜಾಪ್ರಭುತ್ವದ ವಿಷವರ್ತುಲದಲ್ಲಿ, ಹಿಂದಿನ ಭ್ರಷ್ಟ ಪಕ್ಷ ತನ್ನ ದುರಾಡಳಿತದ ನಂತರ ಮತ್ತೊಮ್ಮೆ ಚುನಾಯಿತಗೊಳ್ಳುತ್ತದೆ. ಈ ನಕಲಿ ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಲಭಿಸುವುದಿಲ್ಲ. ಆದರೇನಂತೆ, “ರೆಸಾರ್ಟ್ ಪ್ರಜಾಪ್ರಭುತ್ವ’’ವನ್ನು ಮಾಡಬಹುದು” – ಈ ರೆಸಾರ್ಟ್ ರಾಜಕಾರಣವನ್ನು ಅವಿಷ್ಕರಿಸಿದ್ದು ಕರ್ನಾಟಕ. ಹಾಗಾಗಿ ಇದು ಕರ್ನಾಟಕದ ಪೇಟೆಂಟ್ ಹೊಂದಿರುವ ಆವಿಷ್ಕಾರ ಎನ್ನಬಹುದು. ಇದನ್ನು ನ್ಯಾಯಾಂಗವೂ ಒಳಗೊಂಡಂತೆ ಎಲ್ಲಾ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಸಂಸ್ಥೆಗಳು, ಹಾಗೂ ಎಲ್ಲಾ ‘ಬುದ್ಧಿವಂತರು’ ಸಹ ಹೊಸ ಈ ರೂಢಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಎನ್ನುವುದು ಲೇಖಕರ ಅಭಿಪ್ರಾಯ.

ರಾಮಕೃಷ್ಣ ಹೆಗಡೆಯವರಿಂದಲೇ ‘ರೆಸಾರ್ಟ್’ ರಾಜಕಾರಣ ಆರಂಭವಾಯಿತು ಎನ್ನುತ್ತಾರೆ. ಅವರ ಆಡಳಿತಾವಧಿಯಲ್ಲಿ ತೆಲುಗು ದೇಶಂನ ಎಂಎಲ್ ಎಗಳನ್ನು ಮೈಸೂರಿನ ದಾಸಪ್ರಕಾಶ್ ಹೋಟೆಲ್ ಗೆ ಕರೆತರುವ ಮೂಲಕ ಎನ್ ಟಿಆರ್ ಅವರನ್ನು ರಕ್ಷಿಸಿದ್ದರು. ಹೆಗಡೆಯವರ ಬಹುಚರ್ಚಿತ ಮೌಲ್ಯಾಧಾರಿತ ರಾಜಕಾರಣ, ಬಹುಪಾಲು ರಾಜಕಾರಣ ಆಧಾರಿತ ಮೌಲ್ಯವುಳ್ಳದಾಗಿತ್ತು ಎಂದು ವ್ಯಂಗ್ಯವಾಡುತ್ತಾರೆ ಬಾಲಸುಬ್ರಹ್ಮಣಿಯನ್.

ಎಸ್.ಎಂ. ಕೃಷ್ಣ ಅವರು, ಸ್ವತಃ ತಮ್ಮನ್ನು ಬಹಳ ಆಧುನಿಕ ಎಂದು ಹೊಗಳಿಕೊಳ್ಳುತ್ತಿದ್ದರು. ಆದರೆ ಅವರ ham-handed(ತಪ್ಪುಗಳ) ಶೈಲಿಯ ಆಡಳಿತ ಅವರಿಗೆ ತಿರುಗುಬಾಣವಾಯಿತು. ಎಸ್ ಎಂಕೆ ಅವರ ದುರಾಡಳಿತ, ಹೆಚ್.ಡಿ ದೇವೆಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಜಾತಿಯ ಮತಗಳನ್ನು ಕ್ರೋಢೀಕರಿಸಿಕೊಳ್ಳುವಂತಾಯಿತು. ಎಸ್ಸಿ/ಎಸ್ಟಿಗಳು ಹಾಗೂ ಇತರೆ ಅಲ್ಪಸಂಖ್ಯಾತರು ಕಾಂಗ್ರೆಸ್ ನ NPA (non-performing asset) ಗಳಾದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ತನಗೆ ತಾನೇ ಸ್ವಯಂ ಉಪದ್ರವವಾಗಿ ರೂಪುಗೊಂಡಿದೆ. ಹಾಗಿರುವಾಗ ಬಿಜೆಪಿಗೆ ಎಸ್ ಎಂಕೆ ಯವರ ಉಪದ್ರವಮೌಲ್ಯದ ಪಕ್ಷಾಂತರ ಅಗತ್ಯವಿರಲಿಲ್ಲ. ಏಕೆಂದರೆ ಅವರು ಆಗಲೇ ಎಲ್ಲಾ ರೀತಿಯಲ್ಲೂ ಸೋತಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎಸ್ ಎಂಕೆಯವರ ಮಂಡ್ಯದಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆದ್ದಿತು ಎಂದು ಬರೆಯುತ್ತಾರೆ.

ಎಸ್ ಎಂಕೆ ಅವರನ್ನು Fulbright ವಿದ್ವಾಂಸ ಎಂದು ವ್ಯಂಗ್ಯವಾಗಿ ಸಂಬೋಧಿಸುತ್ತಾ, ಅವರ ಕಾರ್ಯನಿರ್ವಹಣಾ ಶೈಲಿಯನ್ನು ಟೀಕಿಸುತ್ತಾರೆ. ಡಾ. ರಾಜ್ ಕುಮಾರ್ ಅವರ ಅಪಹರಣ ಎಸ್ಎಂಕೆಯವರ ನೀರಸ ಆಡಳಿತವನ್ನು ಇನ್ನಷ್ಟು ಕಳೆಗುಂದುವಂತೆ ಮಾಡಿತ್ತು. ಮುಖ್ಯಕಾರ್ಯದರ್ಶಿಗಳ ನೇಮಕವೂ ಇದಕ್ಕೆ ಪೂರಕವಾಯಿತು. ಆ ಹುದ್ದೆಗೆ ಮೈಸೂರಿನ ಓರ್ವ ಉತ್ತಮ ಹಾಗೂ ಪ್ರಾಮಾಣಿಕ ಅಧಿಕಾರಿ ನೇಮಕವಾಗಬೇಕಾಗಿತ್ತು. ಆದರೆ ಅವರನ್ನ ದೂರಕ್ಕೆ ಸರಿಸಿದರು. ತಪ್ಪಾದರೂ ಏನೀತ್ತು..? ಆ ಮೈಸೂರು ಮೂಲದ ಅಧಿಕಾರಿ ಯಾವುದೇ ರಾಜಕೀಯ ಪ್ರಭಾವವಿಲ್ಲದ ಬ್ರಾಹ್ಮಣ .

ಕರ್ನಾಟಕದ ಆಡಳಿತ ಕಳೆದ ಐದು ದಶಕಗಳಲ್ಲಿ ಅಧೋನ್ನತಿಯಾಗಿದೆ ಎನ್ನುವುದು ಈ ನಿವೃತ್ತ ಅಧಿಕಾರಿಯ ಸ್ಪಷ್ಟ ಅಭಿಪ್ರಾಯ. “ನಾನು ವೀರೇಂದ್ರ ಪಾಟೀಲ್ ಅವರಿಂದ ಹಿಡಿದು ಸಿದ್ದರಾಮಯ್ಯನವರ ಆಡಳಿತದವರೆಗೆ ಸೇವೆ ಸಲ್ಲಿಸಿದ್ದೇನೆ. ಆಡಳಿತದ ಗುಣಮಟ್ಟ ಸ್ಪಷ್ಟವಾಗಿ ಕುಸಿದಿವೆ.
ಮುಖ್ಯ ಕಾರ್ಯದರ್ಶಿಗಳಾಗಿದ್ದ ಆರ್ ಜೆ ರೆಬೆಲ್ಲೊ, ಜಿವಿಕೆ ರಾವ್, ಆರ್ಎ ನಾಯಕ್, ಟಿಆರ್ ಸತೀಶ್ ಚಂದ್ರನ್ ಹಾಗೂ ಜೆಸಿ ಲಿನ್ನ್ ಅವರ ತಾತ್ವಿಕ ಅಧಿಕಾರಾವಧಿಗಳ ನಂತರ ಬಂದಂತಹ ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಕ್ಲರ್ಕ್ ಗಳಾಗಿದ್ದಾರೆ. ಇವರುಗಳು ಸಿಎಂ ಹೊರಡಿಸುವ ಕಾನೂನುಬಾಹಿರ ಆದೇಶಗಳನ್ನು ಪಾಲಿಸುತ್ತಿದ್ದಾರೆ. ಕಾನೂನುಬಾಹಿರ ಮದ್ಯ ಮಾರಾಟ, ಕ್ಲಾಸ್ಸಿಕ್ ಕಂಪ್ಯೂಟರ್ ಪ್ರಕರಣ, ಭೂಮಿಯನ್ನು ವಶಕ್ಕೆ ಪಡೆದುಕೊಂಡ ನಂತರ ಬಿಡಿಎ ಡೀನೋಟಿಫಿಕೇಷನ್ ಇವೆಲ್ಲವನ್ನೂ ಈ ಅಧಿಕಾರಿಗಳು ನೋಡಿದ್ದಾರೆ. ಸಿಕ್ಕಾಬಟ್ಟೆ ಭ್ರಷ್ಟಾಚಾರಕ್ಕೆ ಇಂಬು ಕೊಟ್ಟಿದ್ದಾರೆ. ಜೊತೆಗೆ, ಕೆರೆಗಳು ಹಾಗೂ ಸಾರ್ವಜನಿಕ ಭೂಮಿಯ ಅತಿಕ್ರಮಣವನ್ನು ಅನುಮತಿಸಿದ್ದಾರೆ, ಕಾನೂನಬಾಹಿರ ನೇಮಕಾತಿ ಹಾಗೂ ನಿರ್ಮಾಣಗಳನ್ನು ಕಾನೂನುಬದ್ಧಗೊಳಿಸಿದ್ದಾರೆ, ಎಂಎಲ್ ಎಗಳನ್ನು ಅಪಹರಿಸಿ, ಅವರನ್ನು ರೆಸಾರ್ಟ್ ಗಳಲ್ಲಿ ಒತ್ತೆಯಾಳುಗಳನ್ನಾಗಿ ಹಿಡಿದುಕೊಳ್ಳುವುದು, ಊಸರವಳ್ಳಿಗಳಂತೆ ಪಕ್ಷಗಳನ್ನು ಬದಲಾಯಿಸುವುದು.. ಇಂತಹ ಪ್ರಕರಣಗಳಲ್ಲಿ ಕ್ರಮ ವಹಿಸದೆ ಪರೋಕ್ಷವಾಗಿ ಕುಮ್ಮಕ್ಕನ್ನೂ ನೀಡಿದ್ದಾರೆ. ಉನ್ನತಮಟ್ಟದ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದಾರೆ. ಹಾಗೂ ಕೆಲವೊಮ್ಮೆ ಈ ರೀತಿಯ ಅನಾಚಾರದಲ್ಲೂ ಸ್ವತಃ ಭಾಗಿಯಾಗಿದ್ದಾರೆ. ಕೆಳಮಟ್ಟಕ್ಕೆ ತಲುಪಲು ಸೂಪರಸಾನಿಕ್ ವೇಗದಲ್ಲಿ ಓಟ ನಡೆಯುತ್ತಿದೆ.

ಬಾಲಸುಬ್ರಹ್ಮಣಿಯನ್ ಅವರ ಪ್ರಕಾರ, ಎಸ್ಎಂಕೆ ವಿಕಾಸಸೌಧ ನಿರ್ಮಾಣಕ್ಕಾಗಿ, ಯೋಜನೆಯ ರೂಪುರೇಷೆ ಸಿದ್ಧಗೊಳ್ಳುವ ಮೊದಲೇ ರೂ.100 ಕೋಟಿ ಹಣವನ್ನು ಮೀಸಲಿಟ್ಟಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಬಾಲಸುಬ್ರಹ್ಮಣಿಯನ್ ಅವರು ಎಸ್ಎಂಕೆ ಅವರಿಗೆ, ಈ ವಿಕಾಸಸೌಧದ ನಿರ್ಮಾಣ ಮಾಡುವುದರ ಅಗತ್ಯ ಏಕೆ ಇಲ್ಲ ಎಂದು ಹೇಳಿದ್ದರು. ಆದರೂ ಸಹ ಎಸ್ ಎಂಕೆ ಅವರು ವಿಕಾಸ ಸೌಧ ಕಟ್ಟಿದರು. ಅದು ಈಗ ಒಂದು ‘ಹಸು’ (ವಿಧಾನಸೌಧ) ವಿನ ಪಕ್ಕದಲ್ಲಿ ‘ಕರು’ (ವಿಕಾಸಸೌಧ) ವಿನ ಹಾಗೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ಎಲ್ಲಾ ಇಲಾಖೆಗಳ ಪೈಕಿ, ಭ್ರಷ್ಟಾಚಾರದಲ್ಲಿ ಪಿಡಬ್ಲ್ಯೂಡಿಗೆ ಮೊದಲ ಸ್ಥಾನ ಸಲ್ಲುತ್ತದೆ ಎನ್ನುತ್ತಾರೆ. ಈ ಇಲಾಖೆಯಲ್ಲಿ ಒಂದು ವಿಚಿತ್ರವಾದ ನಿಯಮವಿದೆ. ಅದೇನೆಂದರೆ ಕೇವಲ “ನೋಂದಣಿ”ಯಾಗಿರುವ ಗುತ್ತಿಗೆದಾರರು ಮಾತ್ರ ಯಾವುದೇ ಕಾಮಗಾರಿಯ ಗುತ್ತಿಗೆಯಲ್ಲಿ ಬಿಡ್ ಮಾಡಬಹುದು. ವಿಶ್ವದ ಅತ್ಯಂತ ಸಮರ್ಥ ನಿರ್ಮಾಣ ಕಂಪನಿಗಳಿಗೆ ಕರ್ನಾಟಕದ ಯೋಜನೆಗಳ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ವಿಶ್ವದಾದ್ಯಂತ ಎಲ್ಲಾ ಕಡೆ ಸಾಮಾನ್ಯವಾಗಿ ಒಪ್ಪಿಕೊಂಡಿರುವ ಉತ್ತಮ ಅಭ್ಯಾಸಗಳನ್ನು ಪಿಡಬ್ಲ್ಯುಡಿ ಅನುಸರಿಸುತ್ತಿಲ್ಲ. ಹಾಗಾಗಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ. ಸ್ವಜನಪಕ್ಷಪಾತ ಹಾಗೂ ಅಸಮರ್ಥ ನೋಂದಾಯಿತ ಕ್ರೋನಿ-ಬೇನಾಮಿ-ಕಂಪನಿಗಳಿಗೆ ಹಾಗೂ ಅಧಿಕಾರಿಗಳು ಅಲ್ಲದೆ ರಾಜಕಾರಣಿಗಳ ಸಂಬಂಧಿಕರಿಗೆ ಕಾಮಗಾರಿಗಳ ಗುತ್ತಿಗೆ ಲಭಿಸುತ್ತಿದೆ. ಎಸ್ಎಂಕೆ ಹಾಗೂ ಧರಂ ಸಿಂಗ್ ಅವರು ವಿಕಾಸ ಸೌಧ ನಿರ್ಮಾಣಕ್ಕಾಗಿ ನೋಂದಾಯಿತ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಲು ಎಲ್ಲಾ ಉತ್ತಮ ಅಭ್ಯಾಸಗಳನ್ನೂ ಸಹ ಬದಿಗೆ ಸರಿಸಿದರು. ಎಲ್ & ಟಿಯನ್ನು ಸರಿಸಿ, ಪುಣೆ ಮೂಲದ ಕಂಪನಿಯನ್ನು ಆಯ್ಕೆ ಮಾಡಲಾಯಿತು. ಎಲ್&ಟಿ ರೂ.76 ಕೋಟಿಯ ಅತ್ಯಂತ ಕಡಿಮೆ ಟೆಂಡರ್ ಸಲ್ಲಿಸಿತ್ತು. ಆ ಪುಣೆಯ ಕಂಪನಿ ಎಲ್ಲರಿಗಿಂತ ಹೆಚ್ಚಿನ ಮೊತ್ತದ ಟೆಂಡರ್ ಸಲ್ಲಿಸಿತ್ತು. ಆದರೆ ಸರ್ಕಾರ ಪುಣೆ ಕಂಪನಿಯವರನ್ನು ಕರೆದು ಮಾತನಾಡಿಸಿ ದರ ಕಡಿಮೆಗೊಳಿಸಿ ಯೋಜನೆಯ ಜವಾಬ್ದಾರಿಯನ್ನು ವಹಿಸಿದರು. ಅಂತಿಮವಾಗಿ, ಯೋಜನೆ ವಿಳಂಬವಾಗುವುದರ ಜೊತೆಗೆ, ವೆಚ್ಚ ರೂ.150 ಕೋಟಿ ತಲುಪಿತ್ತು.

2012ರಲ್ಲಿ ಬೆಳಗಾವಿಯಲ್ಲಿ ಬರೋಬ್ಬರಿ ರೂ.500 ಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನ ಸೌಧ ನಿರ್ಮಾಣವಾಯಿತು. ಆಗಲೂ ಸಹ ಪುಣೆಯ ಅದೇ ಕಂಪನಿಯವರೇ ಗುತ್ತಿಗೆದಾರರಾಗಿದ್ದರು. ಇದರ ಮೂಲ ಅಂದಾಜು ರೂ.230 ಕೋಟಿಗಳಾಗಿತ್ತು. ಆದರೆ ಎರಡು ವರ್ಷಗಳ ಕಾಲ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಿ ನಿರ್ಮಾಣ ವೆಚ್ಚ ಹೆಚ್ಚು ಮಾಡಿಕೊಂಡರು. ಇದರ ಬಾಹ್ಯಗುಣಮಟ್ಟವನ್ನು ಯಾವುದೇ ಹೊರ ಉತ್ತಮ ಕಂಪನಿ ಪರಿಶೀಲಿಸಿಲ್ಲ. ಜೊತೆಗೆ ಈ ಕಟ್ಟಡವನ್ನ ವರ್ಷದಲ್ಲಿ ಒಂದೇ ಬಾರಿ ಬಳಸುತ್ತಿರುವುದು. ಇದಕ್ಕೆ ಯಾವುದೇ ಡಿಪಿಆರ್ ಅನ್ನೂ ಸಿದ್ಧಪಡಿಸಿಲ್ಲ.

ಈ ಕಟ್ಟಡ ಕಟ್ಟಲು ಕರ್ನಾಟಕದ ಸರ್ಕಾರದ ವಿಶೇಷ ಸಮರ್ಥನೆ ಎಂದರೇ ಮಹಾರಾಷ್ಟ್ರ ಬೆಳಗಾವಿ ತಮಗೆ ಸೇರಿದ್ದು ಎಂದು ಹೇಳುವ ಅಪಾಯಕಾರಿ ಬೆಳವಣಿಗೆಯನ್ನ ತಡೆಯಲು. ಇಂತಹ ಒಂದು ಭವ್ಯವಾದ ಕಟ್ಟಡ ನಿರ್ಮಾಣ ಮಾಡುವುದರ ಮೂಲಕ ಪರಿಣಾಮಕಾರಿಯಾದ ತಿರುಗೇಟು ನೀಡುತ್ತೇವೆ ಎಂದು ಕೊಂಡಿತ್ತು ಕರ್ನಾಟಕ.

ಭ್ರಷ್ಟಾಚಾರ ಎಲ್ಲೆಡೆ ಇದೆ!

ರಾಜಕೀಯ ನಾಯಕರೆಲ್ಲರೂ ಭ್ರಷ್ಟರೇ. ಅದರ ಪ್ರಮಾಣ ಬೇರೆಯಷ್ಟೆ. ರಾಜಕಾರಣಿಗಳಿಗೆ ಹಣದ ಪ್ರಮುಖ ಮೂಲಗಳು ಮೂರಿವೆ. ಮೊದಲಿದ್ದುದ್ದು ಅಬಕಾರಿ ಗುತ್ತಿಗೆದಾರರು. ನಂತರದ ದಿನಗಳಲ್ಲಿ ಹಲವು ಬೃಹತ್ ನೀರಾವರಿ ಯೋಜನೆಗಳ ಆಗಮನದೊಂದಿಗೆ ನೀರಾವರಿ ಗುತ್ತಿಗೆದಾರರು ರಾಜಕಾರಣಿಗಳ ಹಣದ ಮೂಲಗಳಾದರು. ಬಳಿಕ 1980ರ ದಶಕದಿಂದ ಆರಂಭವಾದ ಕಾನೂನುಬಾಹಿರ ಭೂ ಹಂಚಿಕೆಗಳು ಹಾಗೂ ಒತ್ತುವರಿಗಳು ಅವರ ಹಣದ ಮೂಲಗಳಾದವು.

ಕರ್ನಾಟಕದಲ್ಲಿ ಆಗೆಲ್ಲಾ 10% ಮಾಮೂಲಿ ಇತ್ತು. ಆದರೆ ಕಳೆದ 50 ವರ್ಷಗಳಲ್ಲಿ ಇದು ಸಾಕಷ್ಟು ‘ಪ್ರಗತಿ’ಯನ್ನು ಸಾಧಿಸಿದ್ದು, ಪ್ರಸ್ತುತ 40% ತಲುಪಿದೆ ಎನ್ನುತ್ತಾರೆ ಪುಸ್ತಕದ ಲೇಖಕರು. ಲಂಚದ ವಿಚಾರದಲ್ಲಿ ಸ್ವಲ್ಪವಾದರೂ ಸಭ್ಯತೆ ಇರಬೇಕು. ಆದರೆ ನಮ್ಮ ರಾಜ್ಯದಲ್ಲಾಗಿರವುದು ಲಂಚದ ಜಿಗಿತ ಬಹಳ ದೊಡ್ಡದು. ಏಪ್ರಿಲ್ ತಿಂಗಳಲ್ಲಿ ಬಿಹಾರ್ ರಾಜ್ಯದಲ್ಲಿ ಕೇವಲ ಮೂರು ದಿನಗಳಲ್ಲಿ 500 ಟನ್ ತೂಕದ ಒಂದು ಇಡೀ ಸೇತುವೆಯನ್ನೇ ಕಳ್ಳತನ ಮಾಡಲಾಯಿತು. ಅದಕ್ಕೆ ಹೋಲಿಸಿದರೆ ಕರ್ನಾಟಕದ ಭ್ರಷ್ಟಾಚಾರ ಏನೇನೂ ಇಲ್ಲ. ಕರ್ನಾಟಕ ಬಿಹಾರದಂತಾಗಲೂ ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ, ಆದರೆ ಬಹಳ ವೇಗವಾಗಿ ಆ ಕಡೆ ಹೆಜ್ಜೆಗಳನ್ನು ಹಾಕುತ್ತಿದೆ, ಎಂದು ಬರೆಯುತ್ತಾರೆ ಬಾಲಸುಬ್ರಹ್ಮಣಿಯನ್.

ದೇವರಾಜ ಅರಸು ಅವರು ಮೃತಪಟ್ಟಾಗ, ಅವರ ಪಾರ್ಥಿವ ಶರೀರವನ್ನು ಕಲ್ಲಹಳ್ಳಿಗೆ ಸುಮಾರು 185 ಕಿ.ಮೀ.ಗಳಷ್ಟು ದೂರ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಆಗ ಜನರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದು ಸ್ವಯಂಪ್ರೇರಿತವಾಗಿ ಚಪ್ಪಾಳೆ ತಟ್ಟಿದ್ದರು. ಅದು ದೇವರಾಜ ಅರಸು ಅವರ ಕೆಲಸವನ್ನು ಮೆಚ್ಚಿ ಜನರು ತೋರಿಸಿದಂತಹ ಪ್ರಶಂಸೆ ಆಗಿತ್ತು. ಬಹುಶಃ ಅಂತಹ ಅಂತಿಮ ಬೀಳ್ಕೊಡುಗೆ ಇತರೆ ಯಾವುದೇ ನಾಯಕನಿಗೂ ದೊರೆಯುವುದೇ ಇಲ್ಲ.

key words : Karnataka’s mock-democracy is in the grip of the Lingayats & Vokkaligas.

ENGLISH SUMMARY :

“Karnataka’s mock-democracy is in the grip of the Lingayats & Vokkaligas”

 

ASHA KRISHNASWAMY, SENIOR JOURNALIST.

Bengaluru : What ideology is at work in the elections of Karnataka? The one and only philosophy is caste and cash. Unlike in other South Indian states, Karnataka elections are caste and community dominated.

The only leader who tried to break the Lingayat-Okkaliga udu-grip was Devaraj Urs, who brought the backward classes to political power. But after him, the historical pattern of caste domination and obscurantist normalcy has resumed.
These are the frank opinions expressed by V Balasubramanian, a retired IAS officer, in his book, Fall From Grace – Memoirs of a Rebel IAS Officer. It is going to be launched on July 30.

The book reflects the observations and experience of Balasubramanian, who retired from the service in 2001. He minces no words while hitting out at politicians as well as some of his one-time colleagues. While he has named some officers, he has avoided others. But he doesn’t sound bitter or cynical because he is also liberal in complimenting certain politicians and officers.

He writes that the tragedy of Karnataka’s mock-democracy is that every time the government misrules, the people vote out the ruling crook party and elect another crook party in the next elections. In a vicious circle of helpless democracy, the previous crook party is elected again after its misrule. In this fake democracy, no party gets a majority of seats. No matter, resort can be taken to “resort democracy”—a patented Karnataka invention which all democratic and constitutional institutions, including the judiciary, and all “intellectuals” have come to accept as the new norm, the author points out.

He attributes the beginnings of’resort’ politics to Ramakrishna Hegde.He was the one who rescued NTR, whose Telugu Desam MLAs were brought to the Dasparakash Hotel in Mysore. Hegde’s much publicised value-based politics was more of a politics-based value, he says sarcastically.

SM Krishna’s ham-handed style of administration, which he flattered himself as modern, totally misfired, and it was Deve Gowda and BS Yediyurappa who consolidated their caste votes. The SC/STs and other minorities became the NPA (non-performing asset) of Congress. In Karnataka, the Congress itself has become its own nuisance, and the BJP did not require SMK’s nuisance-value defection. He was already a dead-duck, a spent force and a disaster. In the 2018 assembly elections, the JD (S) swept all the seats in SMK’s Mandya, he points out.

Lashing out at the style of functioning of SMK, whom he refers to sarcastically as the Fulbright Scholar, Balasubramanian says his lacklustre administration was in shambles with Dr Rajkumar kidnapped by Veerappan. He made it worse by appointing a junior officer as chief secretary at the expense of a good and honest Mysorean. The reason? He was a Brahmin sans any political clout.

The retired bureaucrat categorically says Karnataka’s administration in the past five decades is a great fall from grace. “I have worked in the regimes of Veerendra Patil and Sidddaramaiah. There is a clear fall in standards. Urs and Veerendra Patil were the only two who behaved politely with the officers,” he says.

The author says after the ethical tenures of chief secretaries RJ Rebello, GVK Rao, RA Naik, TR Satishchandran, and JC Lynn, others acted more like chief clerks, carrying out illegal orders of the CMs. They permitted the ‘second slae’ in liquor, promoted corruption as in the Classik Computer case, denotification of BDA land acquisitions after taking possession of lands, allowing grabbing of lakes and public lands, regularising illegal occupation and construction, kidnapping MLAs as hostages and keeping them in resorts, changing parties like chameleons-the race to the bottom has been supersonic with the ‘neutral’ higher bureaucracy being mute spectators and even participants, he says. PWD, the epitome of corruption

Balasubramanian writes that  SMK had set aside Rs 100 crore for the construction of Vikasa Soudha even before the project was conceived. As Additional Chief Secretary, he had advised SMK not to proceed with the construction of Vikasa Soudha, which now stands as a “calf” next to a “cow”.

The retired officer says among all the departments, the PWD tops the list of corruption. The department has a peculiar rule for the bidding of any work being open to only those who are “registered” with it. The world’s most competitive construction companies do not even know about Karnataka’s projects. The corruption in government contracts arises because of a failure to follow the best practises that are commonly accepted all over the world.

Nepotism and incompetent‘registered  crony-benami-firms and relatives of bureaucrats and politicians getting the contract. SMK and Dharam Singh had set aside all the best practises by going to a registered contractor for the Vikasa Soudha. Setting aside L & T, a Pune-based firm was selected. The lowest tender of Rs 76 crore was by L & T. The higher tender was from a Pune-based firm. The government negotiated with the Pune firm, made it reduce the cost, and later handed over the project. Finally, the project was delayed and the cost touched Rs 150 cr.

Much later, the monstrous Rs 500 cr Suvarna Vidhana Soudha in Belgaum was constructed in 2012 and the contractor was the same Pune firm. The original estimate was for Rs 230 cr. The engineered delay for two years pushed up the cost. No external quality check, no publicly-tendered agency prepared detailed project report (DPR) for a building which could be used for a month in a year. The specious excuse given was that the dangerous claim by Maharashtra that Belgaum belongs to it would be effectively repudiated by a great building!

Corruption is everywhere!

Corruption in political leaders is only a matter of degree. The three major sources of funding for politicians are: Traditionally, it used to be excise contractors. Later, the irrigation contractors became the sources, with mega irrigation projects coming up. Finally, illegal land allotments and encroachments, which began in the 1980s,
He traces the gentlemanly state of 10% mamool to Karnataka, which has made a great leap forward in the last 50 years, to 40%. There should be some decency in bribing. But the big jump is nothing compared to the incomparable Bihar, where in April 2022, an entire 500-tonne bridge was stolen away in three days. Karnataka still has a long way to go, but it is catching up, Balasubramanian writes.

When Devaraj Urs’s body was taken in procession to Kallahalli, covering a distance of 185 kms, people standing on the roadside clapped spontaneously. This was in appreciation of his work. He wonders if any leader can get such a farewell now!

website developers in mysore