ನೆರೆ ಪೀಡಿತ ಪ್ರದೇಶಗಳಲ್ಲಿ ಡಿಸಿಎಂ ಗೋವಿಂದ ಕಾರಜೋಳ ಪರಿಶೀಲನೆ: ಶಿಥಿಲಗೊಂಡ ಮನೆ ನೋಡಿ ಅಧಿಕಾರಿಗೆ ಫುಲ್ ಕ್ಲಾಸ್…

ಬಾಗಲಕೋಟೆ,ನ,6,2019(www.justkannada.in): ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ, ಸಂಪೂರ್ಣ ಶಿಥಿಲಗೊಂಡಿರುವ ಮನೆಗಳನ್ನ ನೋಡಿ ಅಧಿಕಾರಿಗೆ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕು ಕಮತಗಿ ಗ್ರಾಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ ನೆರೆ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಗ್ರಾಮದ ರಾಮಣ್ಣ ಸಣಕಲ್ ಅವರ ಮನೆ ಸಂಪೂರ್ಣ ಶಿಥಿಲಗೊಂಡಿತ್ತು. ಮನೆಯನ್ನ ನೋಡಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಗೋವಿಂದ ಕಾರಜೋಳ,  ಯಾವನು ಅವನು ಇಂಜಿನಿಯರ್..? ಇಂತಹ ಮನೆಯಲ್ಲಿ ಹೇಗೆ ವಾಸಿಸಲು ಸಾಧ್ಯ..? ಎಂದು ಪ್ರಶ್ನಿಸಿದರು.

ಹಾಗೆಯೇ ಮನೆಯನ್ನ ಸಿ ಕೆಟಗರಿಯಿಂದ ಎ ಕೆಟಗರಿಗೆ ಸೇರಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಡಿಸಿಎಂ ಕಾರಜೋಳ ಸೂಚನೆ ನೀಡಿದರು. ಹಾಗೆಯೇ ಮಳೆಹಾನಿ ಬಗ್ಗೆ ಮಾಹಿತಿ ಒದಗಿಸದಿದ್ದಕ್ಕೆ ಗರಂ ಆದ ಗೋವಿಂದ ಕಾರಜೋಳ, ಮಳೆಹಾನಿ ಬಗ್ಗೆ ಮಾಹಿತಿ ಇಲ್ಲ. ನಿಮಗೆ ಕಾಮನ್ ಸೆನ್ಸ್ ಇಲ್ವಾ..? ಎಂದು ಕಿಡಿಕಾರಿದರು.

Key words:  Inspection – DCM Govinda karjol-flood- affected areas-class – officer.