ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ನೀತಿ ಸಂಹಿತೆ ಕೇವಲ ಹುಣಸೂರು ಕ್ಷೇತ್ರಕ್ಕೆ ಮಾತ್ರ ಅನ್ವಯ-ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ….

ಮೈಸೂರು,ನ,11,2019(www.justkannada.in):  ಹುಣಸೂರು ವಿಧಾನಸಭಾ ಉಪಚುನಾವಣೆ ಹಿನ್ನಲೆ ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿದ್ದು ನಾಮಪತ್ರ ಸಲ್ಲಿಕೆ ಸ್ವೀಕಾರ ಆರಂಭವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ. ನಡೆಸಿ ಹುಣಸೂರು ಕ್ಷೇತ್ರದ ಉಪಚುನಾವಣೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಇಂದಿನಿಂದ ನಾಮಪತ್ರ ಸಲ್ಲಿಕೆ ಸ್ವೀಕಾರ ಆರಂಭವಾಗಿದ್ದು  ಉಮೇದುವಾರಿಗೆ ಸಲ್ಲಿಸಲು ನ.18 ಕೊನೆ ದಿನವಾಗಿದೆ. ನ.19 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು ನ.21 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದೆ. ಇನ್ನು ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ನೀತಿ‌ಸಂಹಿತೆ ಜಾರಿಯಾಗಲಿದೆ. ಇಡಿ ಜಿಲ್ಲೆಗೆ ನೀತಿಸಂಹಿತೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದರು.

ಹುಣಸೂರಿನಲ್ಲಿ ಒಟ್ಟು ಮತದಾರರು 2,26,920 ಮತದಾರರಿದ್ದು ಈ ಪೈಕಿ  ಪುರುಷ ಮತದಾರರು 1,14,150, ಮಹಿಳೆ ಮತದಾರರು 1,12,770 ಇದ್ದಾರೆ. ಒಟ್ಟು 274 ಭೂತ್ ಗಳ ಸ್ಥಾಪನೆ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ ಒಬ್ಬರು ಆರ್ ಒ, ಒಬ್ಬರು ಎಆರ್ ಒ,21 ಸೆಕ್ಟರ್ ಆಫಿಸರ್ ಹಾಗೂ 274 ಬಿಎಲ್ ಒಗಳನ್ನ ನಿಯೋಜಿಸಲಾಗಿದೆ ಎಂದು ಡಿಸಿ ಅಭಿರಾಮ್ ಜಿ ಶಂಕರ್ ತಿಳಿಸಿದರು.

ಹುಣಸೂರು ಕ್ಷೇತ್ರದಲ್ಲಿ ಇದೆ ಮೊದಲಬಾರಿಗೆ m3 ವಿದ್ಯುನ್ಮಾನ ಮತ ಯಂತ್ರ ಬಳಕೆ ‌ಮಾಡಲಾಗುತ್ತದೆ. ಮತ ಯಂತ್ರಗಳ ಪ್ರಥಮ ಹಂತದ ಪರಿಶೀಲನಾ ಕಾರ್ಯ ಮಾಡಲಾಗಿದೆ. ಮತಗಟ್ಟೆಗಟ್ಟೆ ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಮೂಲಭೂತ ಸೌಲಭ್ಯಗಳನ್ನ ಪರಿಶೀಲನೆ ಮಾಡಲಾಗಿದೆ. ಮಳೆಯಿಂದ ಹಾನಿಯಾದ ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಸೌಲಭ್ಯ ಒದಗಿಸಲು ಕ್ರಮವಹಿಸಲಾಗಿದೆ. ಮತದಾರರಿಗೆ ಗೊಂದಲವಾಗದ ರೀತಿಯಲ್ಲಿ ಕ್ರಮವಹಿಸಲಾಗುವುದು ಎಂದರು.

50 ಸಾವಿರ ಮೇಲ್ಪಟ್ಟ ಹಣ ಸಾಗಿಸಲು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದಾಸ್ತಾನು ಸರಬರಾಜು ಮಾಡುವರು ಅಗತ್ಯ ದಾಖಲೆಗಳನ್ನ ಇಟ್ಟುಕೊಳ್ಳಬೇಕು. ಇದರ ಬಗ್ಗೆ ನಿಗಾ ಇಡಲು ತಂಡಗಳ ರಚನೆ ಮಾಡಲಾಗಿದೆ. ಸರ್ಕಾರಿ ಕಟ್ಟಡಗಳು, ಕಚೇರಿಗಳು ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್ ಗಳು, ಗೊಡೆಬರಹಗಳ ತೆರವಿಗೆ ಕ್ರಮ ವಹಿಸಲಾಗುವುದು. ಸರ್ಕಾರಿ ವೆಬ್ ಸೈಟ್ ಗಳಲ್ಲಿ ಸಚಿವರ , ಪಕ್ಷದ ಚಿಹ್ನೆ ಇರುವುದನ್ನ ತೆರವುಗೊಳಿಸಲಾಗುತ್ತದೆ. ಮನುಗನಹಳ್ಳಿ , ವೀರನಹೊಸಹಳ್ಳಿ, ಮುತ್ತುರಾಯನ ಹೊಸಹಳ್ಳಿ, ಗೌಡಗೆರೆ , ಡೊಡ್ಡೆಕೊಪ್ಪಲು ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು ಎಂದು ಅಭೀರಾಂ ಜೀ ಶಂಕರ್ ಹೇಳಿದರು.

Key words: hunsur-by –election- mysore- DC-Abhiram ji Shankar-Information