‘ಇಂಡಿಯನ್ ಫಿಲಂ ಫೆಸ್ಟಿವಲ್’ನಲ್ಲಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ

ಬೆಂಗಳೂರು, ಮಾರ್ಚ್ 09, 2020 (www.justkannada.in): ‘ಅಮೃತಮತಿ’ ಐತಿಹಾಸಿಕ ಸಿನಿಮಾದ ಪಾತ್ರಕ್ಕಾಗಿ ಹರಿಪ್ರಿಯಾ ‘ಇಂಡಿಯನ್ ಫಿಲಂ ಫೆಸ್ಟಿವಲ್’ ನಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ.

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಐತಿಹಾಸಿಕ ಸಿನಿಮಾವಾಗಿದ್ದು, ಇದರಲ್ಲಿ ಹರಿಪ್ರಿಯಾ ಅಮೃತಮತಿ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿನ ಅವರ ಶ್ರೇಷ್ಠ ಅಭಿನಯಕ್ಕಾಗಿ ಪ್ರಶಸ್ತಿ ಲಭಿಸಿದೆ.

ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಹರಿಪ್ರಿಯಾ ಮಹಿಳಾ ದಿನಾಚರಣೆಯಂದೇ ನನಗೆ ಈ ಮಹಿಳಾ ಪ್ರಧಾನ ಕಥಾ ವಸ್ತು ಹೊಂದಿದ್ದ ಪಾತ್ರಕ್ಕೆ ಪ್ರಶಸ್ತಿ ಸಂದಿರುವುದು ಖುಷಿ ತಂದಿದೆ. ಈ ಪ್ರಶಸ್ತಿಯನ್ನು ನನ್ನ ಅಮ್ಮ ಹಾಗೂ ಎಲ್ಲಾ ಮಹಿಳೆಯರಿಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ.