ದಬಂಗ್ 3 ಚಲನಚಿತ್ರದ ವಿರುದ್ಧ ದೂರು ದಾಖಲು: ಆಕ್ಷೇಪಾರ್ಹ ದೃಶ್ಯ ತೆಗೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು,ಡಿ,2,2019(www.justkannada.in): ಹಿಂದೂಧರ್ಮದ ಬಗ್ಗೆ ವಿವಾದಾತ್ಮಕ ಪ್ರಸಂಗ ತೋರಿಸಿರುವ ಆರೋಪದ ಮೇಲೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ದಬಂಗ್ 3’ ಚಲನಚಿತ್ರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ದೂರು ದಾಖಲು ಮಾಡಿದೆ.

ಈ ಬಗ್ಗೆ ಮಾತನಾಡಿರುವ ‘ಹಿಂದೂ ಜನಜಾಗೃತಿ ಸಮಿತಿಯ ಪರಾಗ ಗೋಖಲೆ, ದಬಂಗ್ 3 ಈ ಮುಂಬರುವ ಚಲನಚಿತ್ರದ ಒಂದು ಹಾಡಿನಲ್ಲಿ ಹಿಂದೂ ಸಾಧುಗಳನ್ನು ಅಶ್ಲೀಲವಾಗಿ ಕುಣಿಯುವಂತೆ, ಗಿಟಾರ್ ಬಾರಿಸುವಂತೆ ತೋರಿಸಲಾಗಿದೆ. ಹಾಡಿನ ತಾಳಕ್ಕೆ ಸಾಧುಗಳು ತಮ್ಮ ಜಟೆಯನ್ನು ಹಾರಿಸುವಂತೆ ತೋರಿಸಲಾಗಿದೆ. ಅದೇ ರೀತಿ ಹಾಡಿನ ತಾಳದಲ್ಲಿಯೇ ಶ್ರೀಕೃಷ್ಣ, ಶ್ರೀರಾಮ ಹಾಗೂ ಶಿವನ ವೇಷ ತೊಟ್ಟ ವ್ಯಕ್ತಿಗಳು ಸಲ್ಮಾನ ಖಾನ್ ಗೆ ಆಶೀರ್ವಾದ ಕೊಡುವಂತೆಯೂ ತೋರಿಸಲಾಗಿದೆ. ಈ ದೃಶ್ಯಗಳು ಅತ್ಯಂತ ಖೇದಕರವಾಗಿದ್ದು ಹಿಂದೂಗಳ ಶ್ರದ್ಧಾಸ್ಥಾನದ ಅವಮಾನ ಮಾಡುವಂತಿದೆ. ಅದನ್ನು ಈ ಚಲನಚಿತ್ರದಿಂದ ತೆಗೆಯಬೇಕು. ಅದಕ್ಕಾಗಿ ನಾವು ಸೆನ್ಸರ್ ಬೋರ್ಡ್‌ನವರಿಗೂ ಮನವಿಯನ್ನು ನೀಡಿದ್ದೇವೆ

ಆದರೆ ‘ವ್ಯಕ್ತಿಸ್ವಾತಂತ್ರ್ಯ’ ಹಾಗೂ ‘ಕಲಾಸ್ವಾತಂತ್ರ್ಯ’ದ ಹೆಸರಿನಲ್ಲಿ ಸೆನ್ಸರ್ ಬೋರ್ಡ್ ಯಾವಾಗಲೂ ಮೃದು ಧೋರಣೆ ತಾಳುತ್ತದೆ. ಸದ್ಯ ಸೆನ್ಸರ್ ಬೋರ್ಡ್ ನಿರ್ಮಾಪಕರ ಕೈಗೊಂಬೆಯಾಗಿದ್ದು, ಅವರು ಏನಾದರೂ ಮಾಡುವರು, ಎಂದು ಹೇಳಲಾಗದು. ಆದ್ದರಿಂದ ನಾವು ಈ ಚಲನಚಿತ್ರದ ವಿರುದ್ಧ ‘ಕಲಂ 295 ಅ’ಗನುಸಾರ ಧಾರ್ಮಿಕಭಾವನೆಯನ್ನು ಘಾಸಿಗೊಳಿಸಿದ  ಆರೋಪದ ಮೇಲೆ ಪುಣೆಯ ಡೆಕ್ಕನ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇವೆ. ಒಂದುವೇಳೆ ನಿರ್ಮಾಪಕರು ಅಥವಾ ಸೆನ್ಸರ್ ಬೋರ್ಡ್ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದೃಶ್ಯವನ್ನು ತೆಗೆಯದಿದ್ದಲ್ಲಿ, ಹಿಂದೂ ಸಮಾಜವು ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ಪರಾಗ ಗೋಖಲೆ  ಎಚ್ಚರಿಕೆಯನ್ನು ನೀಡಿದರು.
ಪುಣೆಯ ಡೆಕ್ಕನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ‘ಸಲ್ಮಾನ ಖಾನ ಫಿಲ್ಮ್ಸ್’, ಅರಬಾಜ ಖಾನ್ ಪ್ರೊಡಕ್ಷನ್’, ನಿರ್ಮಾಪಕ ಸಲ್ಮಾನ ಖಾನ್, ಅರಬಾಜ ಖಾನ್, ನಿಖಿಲ ದ್ವಿವೇದಿ ಹಾಗೂ ನಿರ್ದೆಶಕರಾದ ಪ್ರಭುದೇವಾ ಇವರ ಮೇಲೆ ಭಾರತೀಯ ದಂಡಸಂಹಿತೆ ‘295 ಅ’ ಈ ಕಲಂಗನುಸಾರ ಹಿಂದೂಗಳ  ಧಾರ್ಮಿಕ ಭಾವನೆಯನ್ನು ನೋಯಿಸಿದ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ

ಸದ್ಯ ಚಲನಚಿತ್ರರಂಗದಲ್ಲಿ ಒಳ್ಳೆಯ ಚಿತ್ರಕಥೆ ಹಾಗೂ ಒಳ್ಳೆಯ ಚಿತ್ರೀಕರಣ ಮಾಡಿ ಚಲನಚಿತ್ರವನ್ನು ನಿರ್ಮಿಸುವುದು ಎಂಬುದಾಗಿರದೇ ಚಲನಚಿತ್ರದಲ್ಲಿ ವಿವಾದಾತ್ಮಕ ಪ್ರಸಂಗವನ್ನು ತೋರಿಸಿ ಚಲನಚಿತ್ರಕ್ಕೆ ಮೊದಲೇ ಪ್ರಸಿದ್ಧಿ ಸಿಗುವಂತೆ ಮಾಡಲಾಗುತ್ತಿದೆ. ಯಾರೋ ಬರುತ್ತಾರೆ ಹಾಗೂ ಹಿಂದೂ ದೇವತೆ, ಸಂತ, ಸಾಧು ಇತ್ಯಾದಿಗಳ ಅಪಹಾಸ್ಯವನ್ನು ಮಾಡುತ್ತಾರೆ. ಇದೇ ಧೈರ್ಯ ಮುಲ್ಲಾ-ಮೌಲ್ವಿ ಅಥವಾ ಫಾದರ್-ಬಿಶಪ್ ಇವರ ಬಗ್ಗೆ ಯಾರೂ ಮಾಡುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಪರಿಣಾಮ ಏನಾಗಬಹುದು ಎಂಬುದು ಅವರಿಗೆ ಕಲ್ಪನೆ ಇದೆ. ಚಲನಚಿತ್ರದ ಮಾಧ್ಯಮದಿಂದ ಯಾರ ಧಾರ್ಮಿಕ ಭಾವನೆಯನ್ನು ನೋಯಿಸದಿರಲಿ, ಎಂಬುದು ನಮ್ಮ ನಿಲುವಾಗಿದೆ. ಆದ್ದರಿಂದ ಧಾರ್ಮಿಕ ಭಾವನೆಯನ್ನು ನೋಯಿಸುವ ಚಿತ್ರವನ್ನು ನಿರ್ಮಿಸದಿರಲಿ, ಅದಕ್ಕಾಗಿ ಕಾನೂನನ್ನು ನಿರ್ಮಿಸುವುದು, ಅದೇರೀತಿ ಸೆನ್ಸರ್ ಬೋರ್ಡನಲ್ಲಿಯೂ ಧಾರ್ಮಿಕ ಕ್ಷೇತ್ರದಲ್ಲಿಯ ತಜ್ಞ ವ್ಯಕ್ತಿಯನ್ನು ನೇಮಿಸುವುದು ಆವಶ್ಯಕವಿದೆ ಎಂದು. ಗೋಖಲೆಯವರು ಹೇಳಿದರು.

key words: Complaint- against- Dabangg 3 –movie-Hindu Janjagrati Committee