ಸಿಎಂ ಬಿಎಸ್ ವೈ ಕೊಟ್ಟ ಮಾತು ತಪ್ಪಲ್ಲ: ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ- ಶಾಸಕ ಮಹೇಶ್ ಕುಮುಟಳ್ಳಿ…

Promotion

ಬೆಂಗಳೂರು,ಫೆ,5,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತು ತಪ್ಪುವುದಿಲ್ಲ. ಹೀಗಾಗಿ ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ಮಹೇಶ್ ಕುಮುಟಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಗೆದ್ದ 11 ನೂತನ ಶಾಸಕರ ಪೈಕಿ ಮಹೇಶ್ ಕುಮುಟಳ್ಳಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ ಕುಮುಟಳ್ಳಿ,  ಗೆದ್ದ 11 ಶಾಸಕರ ಪೈಕಿ ನನಗೆ ಸಚಿವ ಸ್ಥಾನ ತಪ್ಪುತ್ತೆ ಅಂದರೇ ಬೇಸರವಾಗುತ್ತದೆ. ರಮೇಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿತ್ತು. ನಾನು ರನರ್ ಅಪ್ ನಲ್ಲಿದ್ದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತು ಈಡೇರಿಸುತ್ತಾರೆ ಎಂದು ತಿಳಿಸಿದರು.

ಈ ಸರ್ಕಾರ ಬರಲು ಸಿ.ಪಿ ಯೋಗೇಶ್ವರ್ ಶ್ರಮವಿದೆ. ಸರ್ಕಾರ ರಚನೆ ವೇಳೆ ಸಿ.ಪಿ ಯೋಗೇಶ್ವರ್ ನಮ್ಮ ಜತೆ ಇದ್ದರು. ಹೀಗಾಗಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು  ಮಹೇಶ್ ಕುಮುಟಳ್ಳಿ ಸಿ.ಪಿ ಯೋಗೇಶ್ವರ್ ಪರ ಬ್ಯಾಟ್ ಬೀಸಿದರು.

Key words:  CM BSY – I am- confident – ministerial position-mla Mahesh Kumutalli.