“ಸಿಡಿ ಅನ್ನು ಆಡಳಿತ ಪಕ್ಷದವರೇ ಮಾಡಿರೋದು ಅಕ್ಷಮ್ಯ ಅಪರಾಧ” : ವಾಟಾಳ್​ ನಾಗರಾಜ್

ಮೈಸೂರು,ಜನವರಿ,15,2021(www.justkannada.in) : ಸಿಡಿ ಅನ್ನು ರಸ್ತೆಯಲ್ಲಿ ಹೋಗೋರು ಮಾಡ್ತಾರೆ ಅಂದ್ರೆ ಹೋಗಲಿ ಅನ್ನಬಹುದಿತ್ತು. ಆದರೆ, ಆಡಳಿತ ಪಕ್ಷದವರೇ ಮಾಡಿರೋದು ಅಕ್ಷಮ್ಯ ಅಪರಾಧ. ಯಾರು ಸಿಡಿ ಮಾಡಿದ್ದಾರೆ ಅವರನ್ನ ಕೂಡಲೇ ಬಂಧಿಸಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಆಕ್ರೋಶವ್ಯಕ್ತಪಡಿಸಿದ್ದಾರೆ. jk-logo-justkannada-mysore

ಸಿಡಿ ಬ್ಲ್ಯಾಕ್ ಮೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಡಿ ಮಾಡೋದು ಅಪರಾಧ. ಕರ್ನಾಟಕದ ಇತಿಹಾಸದಲ್ಲಿ ಇದನ್ನ ಕೇಳುತ್ತಿರೋದು ಇದೇ ಮೊದಲ ಬಾರಿಗೆ ಎಂದಿದ್ದಾರೆ.

ಇದೊಂದು 420 ಕೇಸ್, ಕ್ರಿಮಿನಲ್ ಕೇಸ್ ಆಗುತ್ತೆ. ಸಿಡಿ ಮಾಡಿದವರಿಗೆ ಜೈಲಿಗೆ ಹಾಕಲೇಬೇಕು. ಇದನ್ನ 24 ಗಂಟೆಯೊಳಗೆ ಈ ಪ್ರಕರಣ ಸಿಬಿಐಗೆ ವಹಿಸಿ. ಸದ್ಯ ರಾಜ್ಯದ ಮುಖ್ಯಮಂತ್ರಿಯನ್ನ ಸಿಡಿ ಮಾಡಿ ಹೆದರಿಸುತ್ತಿರೋದು ಪ್ರಜಾಪ್ರಭುತ್ವ ವಿರೋಧಿ. ಇದನ್ನ ರಾಷ್ಟ್ರಪತಿಗಳು ಗಮನಿಸಬೇಕು. ಚುನಾವಣಾ ಆಯೋಗ ಯಾರು ಸಿಡಿ ಮಾತಾಡ್ತಾರೆ ಗಮನಿಸಿ ಕ್ರಮಕೈಗೊಳ್ಳಲಿ ಎಂದು ಹೇಳಿದ್ದಾರೆ.

ಅದು ಹೇಗೆ ಸಿಡಿ ಮಾಡಿದ್ರು(?) ಯಾರ್ ಮಾಡಿದ್ರು ಎಂಬುದನ್ನ ಗಮನಿಸಬೇಕು. ಮುಖ್ಯಮಂತ್ರಿಗಳೇ ಇದನ್ನ ಸಿಬಿಐಗೆ ಕೊಡಬೇಕು. ಅಲ್ಲಿಯವರೆಗೂ ಸಿಎಂ ಹಾಗೂ ಶಾಸಕರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.CD,ruling,party,Do,Inexhaustible,Crime,Vatal Nagaraj

ಸಿಡಿ ಎಂದು ಹೆದರಿಸುತ್ತಿರುವುದು 420, ಇದು ರೌಡಿಗಳಿಗಿಂತಲು ಕಡೆ. ಇದು ಕರ್ನಾಟಕಕ್ಕೆ, ವಿಧಾನಸೌಧಕ್ಕೆ ಕೆಟ್ಟ ಹೆಸರು. ಕೂಡಲೇ ಸಿಬಿಐ ಇವರ ಮನೆಗಳನ್ನ ರೈಡ್ ಮಾಡಿ. ಕ್ರಿಮಿನಲ್ ಪ್ರೋಸಿಜರ್ ಪ್ರಕಾರ ಇದು ಅಪರಾಧ ಎಂದು ತಿಳಿಸಿದ್ದಾರೆ.

key words : CD-ruling-party-Do-Inexhaustible-Crime-Vatal Nagaraj