ಮೈಸೂರಿನ ಅರಮನೆಯಲ್ಲಿ ಹುಸಿಬಾಂಬ್ ಕರೆ: ಕುಡುಕನ ಎಡವಟ್ಟಿನಿಂದ ಆತಂಕಕ್ಕೀಡಾದ ಪ್ರವಾಸಿಗರು…

ಮೈಸೂರು,ಮೇ,14,2019(www.justkannada.in):  ಮೈಸೂರಿನ ಅರಮನೆ ಆವರಣದಲ್ಲಿ ಕುಡುಕನೊಬ್ಬ ಮಾಡಿದ ಎಡವಟ್ಟಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಆತಂಕಕ್ಕೀಡಾದ ಘಟನೆ ನಡೆದಿದೆ.

ಮೈಸೂರು ಅರಮನೆಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಹೇಳಿ ಗಂಗಾಧರ್‌ ಎಂಬ ಕುಡುಕ ಅರಮನೆ ಆವರಣದಲ್ಲಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ 9.30ರ ವೇಳೆಗೆ  ಅರಮನೆಗೆ ಬಾಂಬ್ ಕರೆ ಬಂದಿದ್ದು, ಬಾಂಬ್ ಇದೆ ಎಂಬ ಮಾಹಿತಿ ಮೇರೆಗೆ ಅರಮನೆಯಲ್ಲಿ ಹೈಅಲರ್ಟ್, ಭದ್ರತೆ ಹೆಚ್ಚಿಸಲಾಗಿತ್ತು.

ಅರಮನೆಯಲ್ಲಿ ನಗರದ ಬಾಂಬ್‌ ಸ್ವ್ಕಾಡ್‌ನಿಂದ ಸಹಜ ಭದ್ರತಾ ತಪಾಸಣೆ ನಡೆಸಲಾಗುತ್ತಿತ್ತು  ಇಂದು ಬೆಳಿಗ್ಗೆ 9.30 ವೇಳೆಯಲ್ಲಿ ಶ್ವಾನದಳ ಹಾಗ ಬಾಂಬ್‌ ನಿಷ್ಕ್ರೀಯದಳ ತಪಾಸಣೆಗೆ ಮುಂದಾದ ವೇಳೆ ಅಲ್ಲೆ ಮಲಗಿದ್ದ ಕುಡುಕ ಗಂಗಾಧರ್ ಬಾಂಬ್‌ ಇದೆ. ಬಾಂಬ್‌ ಇರೋದಕ್ಕೆ ಪೊಲೀಸರು ಚೆಕ್‌ ಮಾಡುತ್ತಿದ್ದಾರೆ ಎಂದು ಕೂಗಾಡಿದ್ದಾನೆ. ಗಂಗಾಧರ್ ಮಾತಿನಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಆತಂಕ್ಕಿಡಾಗಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ತಕ್ಷಣ ಗಂಗಧಾರ್‌ನ್ನ ವಶಕ್ಕೆ ಪಡೆದರು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯದಳದಿಂದ ಅರಮನೆ ಆವರಣದಲ್ಲಿ ಎಂದಿನಂತೆ ಪರಿಶೀಲನೆ ನಡೆಸಲಾಯಿತು. ಇದಾದ ಬಳಿಕ ಈ ಬಗ್ಗೆ ಡಿಸಿಪಿ ಮುತ್ತುರಾಜ್ ದೂರವಾಣಿ ಕರೆ ಮಾಡಿ ಯಾವುದೇ ಹುಸಿಬಾಂಬ್‌ ಕರೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

Key words: bomb-call -Mysore Palace-tourist-worried – drunken