ಈ ವರ್ಷ 150 ಕನಕದಾಸ ಹಾಸ್ಟೆಲ್ ಮಂಜೂರು: ಅರ್ಹ ಫಲಾನುಭವಿಗಳಿಗೆ ಬೈಕ್ ವಿತರಣೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,9,2023(www.justkannada.in): ವಿದ್ಯಾರ್ಥಿಗಳಿಗಾಗಿ  ಈ ವರ್ಷ 150 ಕನಕದಾಸ ಹಾಸ್ಟೆಲ್ ಮಂಜೂರು ಮಾಡಲಾಗಿದ್ದು, 1 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಲಭ್ಯ ಕೊಡಲಾಗಿದೆ. ವಿದ್ಯಾರ್ಥಿಗಳ ಸಮಸ್ಯೆ ಅರ್ಥಮಾಡಿಕೊಂಡರೇ ಮಾತ್ರ ಇದು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ವಿಧಾನಸೌಧದ ಮುಂಭಾಗ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಮೀಸಲಾತಿ ಕೆಲವೇ ಕೆಲವರಿಗೆ ಸಿಗುತ್ತಿತ್ತು.  ಸೌಲಭ್ಯವನ್ನ ಕೆಲವರು ಮಾತ್ರ ಕಬಳಿಸುತ್ತಿದ್ದರು.  ಅಶಿಕ್ಷಿತರಿಗೆ  ಮುಗ್ದರಿಗೆ ಸೌಲಭ್ಯ ಸಿಗುತ್ತಿರಲಿಲ್ಲ ಬಿಜೆಪಿ ಸರ್ಕಾರದದಿಂದ ಜಾಗೃತಿ ಮೂಡಿಸಲಾಗುತ್ತಿದೆ.  ಗಂಗಾಯಕಲ್ಯಾಣ ಯೋಜನೆ ಜನರಿಗೆ ತಲುಪುತ್ತಿದೆ ಎಂದರು.

ಈ ವರ್ಷ 150ಕನಕದಾಸ ಹಾಸ್ಟೆಲ್  ಮಂಜೂರು ಮಾಡಲಾಗುತ್ತಿದೆ . ಶಿಕ್ಷಣಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಬರುತ್ತಾರೆ. ಆದರೆ ಆ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯುತ್ತಿರಲಿಲ್ಲ. ಬಜೆಟ್ ಇಲ್ಲದಿದ್ದರೂ 450 ಕೋಟಿ ನೀಡಿದ್ದೇವೆ  ಅರ್ಹ ಫಲಾನುಭವಿಗಳಿಗೆ ಬೈಕ್ ವಿತರಣೆ ಮಾಡುತ್ತಿದ್ದೇವೆ. ಸಾಮಾಜಿಕ ನ್ಯಾಯ ಎನ್ನುವ ಪಕ್ಷಗಳು ಯಾಕೆ ಹಾಸ್ಟೆಲ್ ಮಾಡಲಿಲ್ಲ…? ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

Key words: 150 Kanakadasa -Hostel -sanctioned -this year-CM Basavaraja Bommai