ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 300 ಕೋಟಿ ಅನುದಾನ ನೀಡುವಂತೆ ಕೋರಿ ಸಿಎಂಗೆ  ಪತ್ರ – ಸಚಿವ ವಿ.ಸೋಮಣ್ಣ…

ಮೈಸೂರು,ಫೆ,28,2020(www.justkannada.in): ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 300 ಕೋಟಿ ನೀಡುವಂತೆ  ಮನವಿ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಜಿ.ಪಂ ಸಭೆಯಲ್ಲಿ ಮಾತನಾಡಿದ  ವಸತಿ ಸಚಿವ ವಿ ಸೋಮಣ್ಣ ,  ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ತಲಾ 20 ಕೋಟಿ ಅನುದಾನ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೆನೆ. ಅಲ್ಲದೇ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 300 ಕೋಟಿ ನೀಡುವಂತೆ ಪತ್ರ ಬರೆದಿದ್ದೆನೆ. ಜೊತೆಗೆ ಆಯಾ ಪಟ್ಟಣ ಪುರಸಭೆ, ನಗರಸಭೆಗೆ ತಲಾ 10 ಕೋಟಿ ನೀಡುವಂತೆ ಕೇಳಿದ್ದೇನೆ.  ಜಿ.ಪಂ ಹಾಗೂ ಗ್ರಾ.ಪಂ ನಡುವೆ ಅನುದಾನ ಹಂಚಿಕೆ ಆಗಬೇಕು. ಈ ನಡುವೆ ತಾಲೂಕು ಪಂಚಾಯ್ತಿ ಸದಸ್ಯರನ್ನ ಕ್ಯಾರೆ ಅನ್ನೊರೆ ಇಲ್ಲ. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ ಅಗತ್ಯ ಇದೆಯಾ ಅನ್ನೊ ವಿಚಾರ ಚರ್ಚೆ ಮಾಡಬೇಕಿದೆ ಎಂದರು.

ವಸತಿ ಯೋಜನೆಯಲ್ಲಿ 17 ಲಕ್ಷ ಮನೆ ಬೇಡಿಕೆ ಇತ್ತು. ಅರ್ಜಿ ಕರೆದ ಬಳಿಕ ಪರಿಶೀಲನೆ ಮಾಡಿದ್ರೆ ಕೇವಲ 5 ಲಕ್ಷ ಅರ್ಜಿಗಳು ಮಾತ್ರ ನ್ಯಾಯಸಮ್ಮತವಾಗಿವೆ. ಸರ್ಕಾರದ ಯೋಜನೆಗಳು ಈ ರೀತಿ ದುರುಪಯೋಗ ಆಗ್ತಿವೆ, ಅದನ್ನು ತಪ್ಪಿಸಲಾಗ್ತಿದೆ ಎಂದು ಸಚಿವ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Key words: Letter -CM -requesting – grant – Rs 300 crore – development -Mysore district-Minister- V. Somanna.