ಮೈಸೂರು,ಮಾರ್ಚ್,12,2026 (www.justkannada.in): ಸುಮಾರು 15 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಸರಗೂರು ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮದ ಬಿ.ಕೆ.ವಿವೇಕ್, ಮೈಸೂರಿನ ನಜರಬಾದ್ ನಿವಾಸಿ ಪ್ರಸನ್ನ.ಎಸ್ @ ರಾಮು, ರಾಘವೇಂದ್ರನಗರದ ನಿವಾಸಿ ರಾಜೇಶ ಬಂಧಿತ ಆರೋಪಿಗಳು.
ಪೊಲೀಸ್ ಬೆಟ್ಟದಪುರ ವ್ಯಾಪ್ತಿಯ ಬೆಟ್ಟದತುಂಗಾ ಗ್ರಾಮದ ನಿವಾಸಿ ಟಿ.ಆರ್.ಶ್ರೀನಾಥ್ ರಾಜೇಅರಸ್ ಅವರು ಮಾರ್ಚ್ 3 ರಂದು ಬೆಟ್ಟದಪುರ ಪೊಲೀಸ್ ಠಾಣೆ ದೂರು ದಾಖಲಿಸಿದ್ದರು. ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅಡಿಕೆಯನ್ನು ಬೆಟ್ಟದತುಂಗ ಗ್ರಾಮದ ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದು ಸದರಿ ಗೋಡೌನ್‌ನಲ್ಲಿ ಇಟ್ಟಿದ್ದ 15 ಕ್ವಿಂಟಾಲ್ ನಷ್ಟು ಅಡಿಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್.ಎಂ.ಕೆ. ಪಿಎಸ್ಐ ಅಜಯ್ ಕುಮಾರ್ ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ದಳ ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ಕುಲಂಕುಷವಾಗಿ ವಿಚಾರಣೆ ಮಾಡಿದ್ದರು.
ಈ ವೇಳೆ ಮೂವರು ಆರೋಪಿಗಳು ಬೆಟ್ಟದಪುರ ಪೊಲೀಸ್ ಠಾಣೆಯ ಒಂದು ಪ್ರಕರಣ ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಒಂದು ಪ್ರಕರಣ, ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳು ಹಾಗೂ ಮೈಸೂರು ನಗರ ಪೊಲೀಸ್ ಘಟಕದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ ಸೇರಿದಂತೆ ಒಟ್ಟು 06 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬೆಳಿಕಿಗೆ ಬಂದಿದೆ.
ಬಂಧಿತರಿಂದ 3 ಲಕ್ಷ ಬೆಲೆ ಬಾಳುವ KA-04 AA-0900 ರ ಟಾಟಾ ಏಸ್ ಗೂಡ್ಸ್ ವಾಹನ. ಈ ವಾಹನದಲ್ಲಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ 3 ಚೀಲ ಬಟ್ಟೆಗಳು, ಒಟ್ಟು 8 ಲಕ್ಷ ಬೆಲೆ ಬಾಳುವ ಅಡಿಕೆ ಹಾಗೂ 2 ಲಕ್ಷ ರೂಪಾಯಿ ನಗದು ಹಣ, ಒಟ್ಟು 16 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Key words: Mysore,Police, three thieves, arrest







