Why not Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಶಾಸಕ ಮುನಿರತ್ನ, ರಮೇಶ್ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು- ಸಚಿವ ನಾರಾಯಣಗೌಡ.
ಮೈಸೂರು,ಜುಲೈ,1,2021(www.justkannada.in): ಶಾಸಕ ಮುನಿರತ್ನ ಕೇಸ್ ಈಗಾಗಲೇ‌ ಇತ್ಯರ್ಥವಾಗಿದೆ. ರಮೇಶ್ ಜಾರಕಿಹೊಳಿ ಕೇಸ್ ಕೂಡ ಕ್ಲಿಯರ್ ಆಗಲಿದೆ. ಹೀಗಾಗಿ ಶಾಸಕ ಮುನಿರತ್ನ, ರಮೇಶ್ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು ಎಂದು ಸಚಿವ ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ. ಮುಂದಿನ ಎರಡು ವರ್ಷ ಬಿಎಸ್‌ವೈ ಸಿಎಂ ಆಗಿರ್ತಾರೆ. ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಯಾರ್ಯಾರೋ ದೆಹಲಿಗೆ ಹೋಗಿ ಬಂದಿದ್ದಾರೆ‌. ದೆಹಲಿ ಪ್ರವಾಸ ಮಾಡಬಾರದೆಂದು ನಿಯಮ ಇದ್ಯಾ. ಅವರವರ ಕೆಲಸಕ್ಕೆ ಹೋಗಿ ಬಂದಿದ್ದಾರೆ‌. ಜಾರಕಿಹೊಳಿಗೆ ಬಾಂಬೆಯಲ್ಲಿ ಸ್ವಂತ ಮನೆ ಇದೆ. ಅವರು ಅಲ್ಲೇ ಆಫೀಸ್ ಮಾಡಿದ್ದಾರೆ. ಅವರ ಏರಿಯಾದಲ್ಲೇ ದೇವೇಂದ್ರ ಫಡ್ನವೀಸ್ ಮನೆ ಇದೆ. ಹೀಗಾಗಿ ಆಗಾಗ್ಗೆ ಫಡ್ನವೀಸ್,ಜಾರಕಿಹೊಳಿ ಭೇಟಿ ಆಗ್ತಾರೆ ಎಂದು ತಿಳಿಸಿದರು.

ಮಂಡ್ಯದಲ್ಲಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧ ಹಿನ್ನೆಲೆ‌ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ನೂರು ಕಿಟ್ ಕೊಡೋಕೆ ಸಾವಿರ ಜನ ಸೇರಿಕೊಂಡು ರಾಜಕಾರಣ ಮಾಡ್ತಾರೆ. ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಂದೇ‌ ಇಲ್ಲ‌. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಕಾ. ಅದಕ್ಕಾಗಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಮನ್ಮುಲ್ ಹಾಲು ನೀರು ಕೇಸ್ ಸಿಬಿಐ ತನಿಖೆಗೆ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಸಚಿವ ನಾರಾಯಣಗೌಡ, ಸ್ಥಳೀಯ ಪೊಲೀಸರ ತನಿಖೆ ಮುಗಿಯಲಿ ಅಂತ ವಿಳಂಬ ಆಗಿರಬಹುದು.ಲೋಕಲ್ ಪೊಲೀಸ್ ತನಿಖೆ ಮುಗಿದ ಮೇಲೆ ಸಿಐಡಿಗೆ ಕೊಡಬೇಕಲ್ವ. ಆಗಾಗಿ ಸಿಐಡಿ ತನಿಖೆಗೆ ಆದೇಶ ವಿಳಂಬ ಆಗಿದೆ ಎಂದು ತಿಳಿಸಿದರು.

ಕೆಆರ್‌ಎಸ್ ಜಲಾಶಯದಲ್ಲಿ ಬಿರುಕು ವದಂತಿ ಹಿನ್ನೆಲೆ. ಜಲಾಶಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ‌. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

Key words: MLA-Muniratna- Ramesh jarakiiholi -Why not -join –Cabinet- Minister -Narayana Gowda

The post ಶಾಸಕ ಮುನಿರತ್ನ, ರಮೇಶ್ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು- ಸಚಿವ ನಾರಾಯಣಗೌಡ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ರಾಮಮಂದಿರ ಏಕೆ ಬೇಡ’ ಕೃತಿ ಗ್ರಂಥಾಲಯಗಳಿಗೆ ಖರೀದಿಸುವುದನ್ನು ವಾಪಸ್ ಪಡೆದಿರುವ ನಿರ್ಣಯ ಖಂಡನೀಯ- ಪ್ರೊ. ಮಹೇಶ್ ಚಂದ್ರಗುರು
ಮೈಸೂರು,ಜನವರಿ,27,2021(www.justkannada.in):  ಪ್ರೊ. ಕೆ.ಎಸ್‌. ಭಗವಾನ್ ರಚಿಸಿರುವ ರಾಮಮಂದಿರ ಏಕೆ ಬೇಡ ಎಂಬ ಕೃತಿಯನ್ನು ಸಾರ್ವಜನಿಕ ಗ್ರಂಥಾಲಯಗಳಿಗೆ ಖರೀದಿಸುವುದನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ನಿರ್ಣಯ ಖಂಡನೀಯ ಎಂದು ಪ್ರೊ. ಮಹೇಶ್ ಚಂದ್ರಗುರು ಕಿಡಿಕಾರಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಭಗವಾನ್ ಅವರು ರಚಿಸಿರುವ ರಾಮಮಂದಿರ ಏಕೆ ಬೇಡ ಎಂಬ ಕೃತಿ ಕಳೆದ 2018ರಿಂದ ಇದುವರೆಗೂ ಮೂರು ಮುದ್ರಣ ಕಂಡಿದೆ. ಆದಾಗ್ಯೂ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಿಗೆ ಭಗವಾನ್ ರವರ ಪುಸ್ತಕವನ್ನು ಖರೀಸದಂತೆ ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದರು.

ಈ ಪುಸ್ತಕವನ್ನು ಕೇಂದ್ರ ರಾಜ್ಯ ಸರ್ಕಾರಗಳಾಗಲೀ ನಿಷೇಧಿಸಿಲ್ಲ. ಆದರೂ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಸಮಿತಿಯ ಅಧ್ಯಕ್ಷರಾದ, ಸಂಘಪರಿವಾರದ ನಿಷ್ಠ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ನಿರ್ಧರಿಸಿರುವುದು ಸರಿಯಲ್ಲ. ಇಂತಹ ನಿರ್ಧಾರದಿಂದ ರಾಜ್ಯ ಸರ್ಕಾರದ ಘನತೆಗೇ ಧಕ್ಕೆಯಾಗಲಿದೆ. ಕೂಡಲೇ ನಿರ್ಣಯವನ್ನು ಹಿಂಪಡೆಯಬೇಕು. ಪುಸ್ತಕ ಖರೀದಿಗೆ ಅ‌ನುವು ಮಾಡಿಕೊಡಬೇಕು ಎಂದು ಪ್ರೊಫೆಸರ್ ಮಹೇಶ್ ಚಂದ್ರಗುರು ಆಗ್ರಹಿಸಿದರು.

Key words: Why Not –Ramamandira-book-Pro. Mahesh Chandraguru-mysore

The post ‘ರಾಮಮಂದಿರ ಏಕೆ ಬೇಡ’ ಕೃತಿ ಗ್ರಂಥಾಲಯಗಳಿಗೆ ಖರೀದಿಸುವುದನ್ನು ವಾಪಸ್ ಪಡೆದಿರುವ ನಿರ್ಣಯ ಖಂಡನೀಯ- ಪ್ರೊ. ಮಹೇಶ್ ಚಂದ್ರಗುರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೇಕೆ..? ಡಿ.ಕೆ ಶಿವಕುಮಾರ್
ಬೆಂಗಳೂರು,ನವೆಂಬರ್,25,2020(www.justkannada.in): ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಸದಾಶಿವನಗರ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ  ಡಿ.ಕೆ ಶಿವಕುಮಾರ್, ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನು ಮಾಡಬಾರದ ಕೆಲಸ ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ. ಇದುವರೆಗೂ ಯಾರ ಮೇಲೆ ಈ ರೀತಿ ತನಿಖೆ ಮಾಡಿಸಿದ್ದಾರೆ? ರಾಜ್ಯದಲ್ಲಿ ನಾನೊಬ್ಬನೇ ಆಸ್ತಿ ಸಂಪಾದಿಸಿದ್ದೇನಾ? ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಯಾವುದಾದರೂ ಆರೋಪ ಸಾಬೀತಾಗಿದೆಯಾ? ಯಾರ ಬಳಿಯಾದರೂ ನಾನು ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವ ಆಗಿದ್ದಾಗ ಅಕ್ರಮ ಮಾಡಿದ್ದೇನಾ? ಯಡಿಯೂರಪ್ಪನವರೇ ಅಧಿಕಾರದಲ್ಲಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದರು.

ಇದೊಂದು ತನಿಖೆ ಮಾಡುವ ಪ್ರಕರಣವಲ್ಲ ಎಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದು ಎಂದು ತಿಳಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ ಎಂದು ಡಿ.ಕೆ ಶಿವಕುಮಾರ್ ದೂರಿದರು.

ಅಧಿಕಾರಿಗಳ ಕಾರ್ಯ ಪ್ರಶ್ನಿಸುವುದಿಲ್ಲ:

ನಾನು ಸಿಬಿಐ ಅಧಿಕಾರಿಗಳ ತನಿಖಾ ವ್ಯವಸ್ಥೆ ಪ್ರಶ್ನಿಸುವುದಿಲ್ಲ. ಅವರು ನಮಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಕೈಪಿಡಿ ನಾನು ಓದಿದ್ದೇನೆ. 48 ದಿನ ನಾನು ಈ ಕುರಿತ ಪುಸ್ತಕಗಳನ್ನು ಓದಿದ್ದೇನೆ. ಅವರಿಗೆ ಬರುವ ಮಾರ್ಗದರ್ಶನದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾನು ದೂರುವುದಿಲ್ಲ.

ಸಿಬಿಐ ಅಧಿಕಾರಿಗಳು 23 ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ 23 ರಂದು ಮಸ್ಕಿ ಪ್ರವಾಸ ಪೂರ್ವನಿಗದಿಯಾಗಿದ್ದ ಹಿನ್ನೆಲೆಯಲ್ಲಿ, 25 ರಂದು ವಿಚಾರಣೆಗೆ ಹಾಜರಾಗುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ. ಇವತ್ತು ವಿಚಾರಣೆಗೆ ಹಾಜರಾಗುತ್ತೇನೆ. ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದ ಮೇಲೆ ಅದರಿಂದ ತಪ್ಪಿಸಿಕೊಳ್ಳುವುದಿಲ್ಲ. ನಾನು ಇ.ಡಿ. ಸೇರಿದಂತೆ ಎಲ್ಲ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇನೆ. ನಾನು 4 ಗಂಟೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ. ಸಾಧ್ಯವಾದರೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಸಿಬಿಐ ಕಚೇರಿ ಬಳಿ ಯಾರೂ ಬರಬೇಡಿ:

ಈಗಾಗಲೇ ನಾನು ಮನವಿ ಮಾಡಿಕೊಂಡಿರುವಂತೆ, ನಾನು ವಿಚಾರಣೆಗೆ ಹಾಜರಾಗಲು ಸಿಬಿಐ ಕಚೇರಿಗೆ ಹೋದಾಗ ಯಾರು ಕೂಡ ಅಲ್ಲಿಗೆ ಬರಬಾರದು. ನಿಮಗೆ ಮುಜುಗರ ತರುವ ಯಾವುದೇ ಕೆಲಸ ನಾನು ಮಾಡಿಲ್ಲ. ನನಗೆ ಏನಾಗುತ್ತದೋ ಎಂಬ ಆತಂಕ ಬೇಡ. ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ. ಅಲ್ಲಿಗೆ ಬಂದು ಯಾರ ವಿರುದ್ಧವೂ ಘೋಷಣೆ ಹಾಕುವುದು ಬೇಡ. ಪರಿಸ್ಥಿತಿ ಕೈಮೀರಿದರೆ ನಮಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನಾನು ಸ್ನೇಹಿತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಅಹ್ಮದ್ ಪಟೇಲರಿಗೆ ನನ್ನ ಮೇಲೆ ವಿಶೇಷವಾದ ನಂಬಿಕೆ ಇತ್ತು:

ಅಹ್ಮದ್ ಪಟೇಲ್ ಅವರ ನಿಧನ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ನಾಯಕರು.  ರಾಜ್ಯಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ಯಾವಾಗ ಬೇಕಾದರೂ ಮಂತ್ರಿ ಆಗಬಹುದಿತ್ತು. ಆದರೆ ಅವರು ಯಾವತ್ತೂ ಅಧಿಕಾರ ಬಯಸಲಿಲ್ಲ. ಪಕ್ಷ ಸಂಘಟನೆಯಲ್ಲೇ ಅವರು ತಮ್ಮನ್ನು ತೊಡಗಿಸಿಕೊಂಡರು. ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ನನ್ನ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟಿದ್ದರು. ನನ್ನ ಕಷ್ಟದ ದಿನಗಳಲ್ಲಿ ನನ್ನ ಜತೆ ನಿಂತರು.

ಅವರು ರಾಜ್ಯಸಭೆ ಚುನಾವಣೆಗೆ ನಿಂತಾಗ ಅದರ ಜವಾಬ್ದಾರಿ ಯಾರಿಗೆ ಬೇಕಾದರೂ ಕೊಡಬಹುದಿತ್ತು. ಅವರು ನನ್ನ ಮೇಲೆ ನಂಬಿಕೆ ಇಟ್ಟು ತಮ್ಮ ಶಾಸಕರನ್ನು ಕಳುಹಿಸಿಕೊಟ್ಟರು. ಒಂದು ವಾರದ ಹಿಂದೆ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೆ. ಅವರು ಕೊಟ್ಟ ಮಾರ್ಗದರ್ಶನ, ಧೈರ್ಯವೇ ನಮಗೆ ಶಕ್ತಿ. ದೇಶದ ಉದ್ದಗಲಕ್ಕೂ ಸಾವಿರಾರು ನಾಯಕರನ್ನು ಗುರುತಿಸಿ, ಬೆಳೆಸಿ ಶಕ್ತಿ ತುಂಬಿದ ಧೀಮಂತ ನಾಯಕ ಅವರು ಎಂದು ಡಿ.ಕೆ ಶಿವಕುಮಾರ್ ಶ್ಲಾಘಿಸಿದರು.

Key words: Bangalore- property –  Why not- investigate –me-kpcc president- DK Sivakumar.

The post ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೇಕೆ..? ಡಿ.ಕೆ ಶಿವಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.