village | Just Kannada - Daily News Updates
ಹಳ್ಳಿ ಅಧಿಕಾರ ಕಸಿದುಕೊಂಡು ಗ್ರಾಮೀಣ ಆರ್ಥಿಕತೆ ನಾಶಕ್ಕೆ ಮುಂದಾದ ಮೋದಿ ಸರ್ಕಾರ- ಸಿಎಂ ಸಿದ್ದರಾಮಯ್ಯ
ಬೆಂಗಳೂರು ಜನವರಿ,3,2026 (www.justkannada.in) : ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ  ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.‌
ಗೃಹ ಕಚೇರಿ ಕೃಷ್ಣಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ಧತಿ ಕುರಿತು ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಸಿಎಂ ಸಿದ್ದರಾಮಯ್ಯ,  ಮೋದಿ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಭಾರತೀಯರ ಅಭಿಪ್ರಾಯ ಪಡೆಯದೆ ನೇರವಾಗಿ ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದರು.
ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು ಮೊದಲಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಕಾರ್ಯವನ್ನು ಮಾಡಿತ್ತು. ಮೋದಿ ಸರ್ಕಾರ ಡಿಸೆಂಬರ್ 17ರಂದು ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಡಿ.18ರಂದು ಅಂಗೀಕಾರ ಪಡೆದಿದೆ. ಸುಮಾರು 12.16 ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ. ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ. 51.6 ಮಹಿಳೆಯರಿದ್ದಾರೆ ಎಂದು ವಿವರಿಸಿದರು.
ಮನಮೋಹನ್ ಸಿಂಗ್ ಅವರ ಜನಪರ ಕಾಯ್ದೆಯನ್ನು ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ.‌ ನರೇಗಾ ಕಾಯ್ದೆ ಪ್ರಕಾರ ಜನಸಾಮಾನ್ಯರು, ಕೂಲಿ ಕಾರ್ಮಿಕರು, ಕೃಷಿ ಕಾರ್ಯಗಳ ಜೊತೆಯಲ್ಲಿ ತಾವಿದ್ದ ಸ್ಥಳದಲ್ಲೇ ನರೇಗಾ ಅಡಿ ಕೂಲಿ ಕೆಲಸ ಮಾಡಲು ಅವಕಾಶವಿತ್ತು. ಆ ಮೂಲಕ ಹಳ್ಳಿಗಾಡಿನ ಆರ್ಥಿಕತೆ ಕಟ್ಟಲು ಸಾಧ್ಯವಾಗಿತ್ತು. ಸ್ಥಳೀಯವಾಗಿ ಆಸ್ತಿ ಸೃಜನೆಯಾಗುತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಈಗ ಇದ್ಯಾವುದೂ ಇಲ್ಲವಾಗಿದೆ ಎಂದರು.‌
ಕಳೆದ 11 ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಅಂದರೆ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ.  ಪ್ರಸ್ತುತ  ಕಾಯ್ದೆಯಡಿ 100 ದಿನ ಕನಿಷ್ಟ ಕೆಲಸ ನೀಡಬೇಕಾಗಿತ್ತು.  ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಈಗ ಹೊಸ ಕಾಯ್ದೆ ಸೆಕ್ಷನ್ 5(1) ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ.  ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯತ್ ಗಳಿಗೂ ಖಾತ್ರಿಯಿರುವುದಿಲ್ಲ‌ ಎಂದರು.
ವರ್ಷದ ಯಾವುದೇ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸಲಾಗಿದ್ದು, ಕೃಷಿ ಚಟುವಟಿಕೆ ಅವಧಿಯ 60 ದಿನ ಯೋಜನೆಯಡಿ ಯಾವುದೇ ಉದ್ಯೋಗ ನೀಡಲಾಗುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ತೆಗೆದು ಹಾಕಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಹೊಸ ಕಾಯ್ದೆ ಪ್ರಕಾರ ಶೇ.60 ರಷ್ಟು ಕೇಂದ್ರ ಹಾಗೂ ಶೇ.40ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಇದು ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸು ಹೊರೆಯನ್ನು ಹೇರಲಿದ್ದು, ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280ಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ಗಳಿಗೆ ಇದ್ದ ಅಧಿಕಾರವನ್ನು ಇದೀಗ ಕೇಂದ್ರ ಸರ್ಕಾರ ಕಿತ್ತು ಕೊಂಡಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ.  ಹೊಸ ಕಾಯ್ದೆಯನ್ನು ಜಾರಿಗೊಳಿಸದಿರುವಂತೆ ಕೋರಿ ಪ್ರಧಾನಿಯವರಿಗೆ ಡಿ.30ರಂದು ನಾನು ಪತ್ರ ಬರೆದಿದ್ದೇನೆ. ಹೊಸ ಕಾಯ್ದೆಯನ್ನು ರದ್ದುಪಡಿಸಬೇಕು. ನರೇಗಾ ಕಾಯ್ದೆ ಮತ್ತೆ ಜಾರಿಗೊಳಿಸಬೇಕು. ಮಹಿಳೆಯರು, ದಲಿತರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಪಂಚಾಯತ್ಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ‌ ಎಂದರು.
ಹೊಸ ಬಿಲ್ ಮೂಲಕ ಗ್ರಾಮೀಣ ಜನರ ಜೀವನೋಪಾಯ ಕಸಿಯಲಾಗುತ್ತಿದೆ. ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಆಯವ್ಯಯದ ಮೇಲೆ ಹೆಚ್ಚಿನ ಹೊರೆಯನ್ನು ಸಂವಿಧಾನ ಬಾಹಿರವಾಗಿ ಹೇರಲಾಗುತ್ತಿದೆ ಎಂದರು.
ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ದಲಿತ ಹಾಗೂ ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿ, ಗ್ರಾಮೀಣ ಜೀವನೋಪಾಯಗಳ ಕುಸಿತದಿಂದ ಗ್ರಾಮೀಣ ಬದುಕು ದುಸ್ತರಗೊಳ್ಳಲಿದೆ. ಪಂಚಾಯತ್ಗಳು ಕೇವಲ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುವಂತಾಗುತ್ತದೆ. ಈ ಮೂಲಕ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಾಗುತ್ತಿದೆ ಎಂದರು.
ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು
20 ವರ್ಷಗಳ ಹಿಂದೆ ಮನಮೋಹನ ಸಿಂಗ್ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸುವ ಸಂದರ್ಭದಲ್ಲೇ ಬಿಜೆಪಿ ಯೋಜನೆಯನ್ನು ವಿರೋಧಿಸಿತ್ತು. ಆಹಾರ ಭದ್ರತಾ ಕಾಯ್ದೆಯನ್ನು ಸಹ ಗೇಲಿ ಮಾಡಿತ್ತು. ಜನಪರವಾದ ಕಾನೂನುಗಳನ್ನು ನಾಶ ಮಾಡುವುದೇ ಬಿಜೆಪಿ ಕೆಲಸ.
ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು ಎಂದು ಹೇಳುತ್ತದೆ. ಅವರು ಸ್ವಾಭಿಮಾನದಿಂದ ಬದುಕಬಾರದು. ಅವರು ಪೂರ್ಣ ಸೇವಕರಾಗಿಯೇ ಇರಬೇಕು ಎಂದು ಹೇಳುತ್ತದೆ. ಇಂತಹ ಮನುಸ್ಮೃತಿಯಿಂದ ಪ್ರೇರಣೆ ಪಡೆದಿರುವ RSS ಬಿಜೆಪಿ ಸರ್ಕಾರಕ್ಕೆ ಮಾರ್ಗದರ್ಶಕವಾಗಿದೆ. ಮಹಾತ್ಮಾ ಗಾಂಧಿಯನ್ನು ಗೋಡ್ಸೆ ಮೊದಲ ಬಾರಿ ಕೊಂದು ಹಾಕಿದರೆ, ಇದೀಗ ನರೇಗಾ ಕಾಯ್ದೆಯಲ್ಲಿ ಇದ್ದ ಮಹಾತ್ಮಾ ಗಾಂಧಿ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಮತ್ತೆ ಅವರನ್ನು ಮತ್ತೆ ಮತ್ತೆ ಕೊಲ್ಲುವ ಕೆಲಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಚಲುವರಾಯ ಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.
Key words: Modi government, rural economy, village, power, CM Siddaramaiah
ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಹಿನಕಲ್ ಗ್ರಾಮ ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ: ಸಿಎಂ ಸಿದ್ದರಾಮಯ್ಯ
ಮೈಸೂರು ಮೇ, 24,2025 (www.justkannada.in):   ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ. ಹಂತ ಹಂತವಾಗಿ ಹಿನಕಲ್ ನ ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಹಿನಕಲ್ ನಲ್ಲಿ 9 ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೊದಲ ಬಾರಿ ಮುಖ್ಯಮಂತ್ರಿಯಾಗಿ ಇಂದಿರಾ ಕ್ಯಾಂಟೀನ್ ಗಳನ್ನು ಬಡವರು, ಕೂಲಿ ಕಾರ್ಮಿಕರು, ಆಸ್ಪತ್ರೆಗಳಿಗೆ ಬರುವ ಜನರ ಹಸಿವನ್ನು ಕಡಿಮೆ ದರದಲ್ಲಿ ನೀಗಿಸುವ ಉದ್ದೇಶದಿಂದ ಆರಂಭಿಸಿದೆ.
2017 ರಲ್ಲಿ ರಾಹುಲ್ ಗಾಂಧಿಯವರನ್ನು ಕರೆಸಿ ಇಂದಿರಾ ಕ್ಯಾಂಟೀನ್ ಆರಂಭಿಸಿದೆವು. ಆದರೆ ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರ ಕ್ಯಾಂಟೀನ್ ಗಳು ಸೊರಗಿದವು. ಈಗ ನಾವೇ ಮತ್ತೆ ಅಧಿಕಾರಕ್ಕೆ ಬಂದು ಹಿನಕಲ್ ನಲ್ಲೇ ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಿರುವುದು ಮಾತ್ರವಲ್ಲದೆ, ಹೊಸದಾಗಿ ಇನ್ನೂ 184 ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ ಎಂದರು.
ಹಿನಕಲ್ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ. ಈ ಗ್ರಾಮದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲವನ್ನೂ ಹಂತ ಹಂತವಾಗಿ ಮಾಡಲಾಗುವುದು, ಎಂಜಿನಿಯರ್ ಗಳ ನೇಮಕಾತಿ, ಪಿಯುಸಿ ಕಾಲೇಜು ಸೇರಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ನೆರವೇರಿಸಲಾಗುವುದು ಎಂದರು.
Key words: Indira Canteen, Hinkal, village, political strength, CM Siddaramaiah
‘ಕೈ’ ಮುಖಂಡರಿಗೆ ಗ್ರಾಮಕ್ಕೆ ನಿಷೇಧ: ಸಿಎಂ ಕ್ಷೇತ್ರದಲ್ಲಿ ಹೀಗೊಂದು ಬೋರ್ಡ್..!
ಮೈಸೂರು,ಜನವರಿ,21,2025 (www.justkannada.in): ಸಿಎಂ ಸಿದ್ದರಾಮಯ್ಯ ಕ್ಷೇತ್ರ  ವರುಣ ವ್ಯಾಪ್ತಿಯ ನಗರ್ಲೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಗೆ ಗ್ರಾಮಕ್ಕೆ ನಿಷೇಧಿಸಲಾಗಿದೆ ಎಂದು ಬೋರ್ಡ್ ಹಾಕಲಾಗಿದೆ.
ಗ್ರಾಮದ ದಲಿತ ಸಮುದಾಯದಿಂದ ದಲಿತ ಸಮುದಾಯದ ಕಾಂಗ್ರೆಸ್ ಮುಖಂಡರ ವಿರುದ್ಧವೇ ಬೋರ್ಡ್  ಹಾಕಲಾಗಿದೆ. ಅಂಬೇಡ್ಕರ್ ಪ್ರತಿಮೆ ಮಾಡಿಸುತ್ತೇವೆ ಎಂದು ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಸಿ ಮಹದೇವಪ್ಪರಿಂದ ದಲಿತ ಸಮುದಾಯಕ್ಕೆ ಭರವಸೆ ನೀಡಿದ್ದರು.
ಲೋಕಸಭಾ ಚುನಾವಣೆಗೂ ಮುನ್ನ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ್ದರು. 3 ಲಕ್ಷ ರೂ. ನೀಡಿ ಬೆಸ್ ಮೆಂಟ್ ನಿರ್ಮಾಣ ಮಾಡಲಾಗಿದ್ದು, ಉಳಿದ ಕಾಮಗಾರಿಗೆ ಇನ್ನೂ 20 ಲಕ್ಷ  ರೂ. ಹಣಕ್ಕೆ ಬೇಡಿಕೆ ಇಡಲಾಗಿತ್ತು.
ಆದರೆ ಈಗ ಕೇವಲ 3 ಲಕ್ಷ ನೀಡುತ್ತೇವೆ ಎಂದು  ಸಿಎಂ ಆಪ್ತ ಸಿಟಿ ಕುಮಾರ್ ಹೇಳಿದ್ದು, ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ಪರ ನಿಂತಿದ್ದ ನಗರ್ಲೆ ದಲಿತ ಸಮುದಾಯದ ನಾಯಕರ ವಿರುದ್ಧ ಸಿಡಿದ ದಲಿತ ಮುಖಂಡರು ಕಾಂಗ್ರೆಸ್ ಮುಖಂಡರಿಗೆ ಗ್ರಾಮಕ್ಕೆ ನಿಷೇಧಿಸಲಾಗಿದೆ ಅ ಎಂದು ಬೋರ್ಡ್ ಹಾಕಿದ್ದಾರೆ.
ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು. ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರನ್ನು ನಿಷೇಧಿಸಲಾಗಿದೆ ಎಂದು ದಲಿತ ಸಮುದಾಯದ ಮುಖಂಡರು ಬೋರ್ಡ್ ಹಾಕಿದ್ದಾರೆ.
Key words: Ban, congress leaders, village, board, CM Siddaramaiah, constituency
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮವ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು
ಚಾಮರಾಜನಗರ,ಜನವರಿ,11,2025 (www.justkannada.in):  ಮೈಕ್ರೋ ಫೈನಾನ್ಸ್  ಕಂಪನಿಗಳ ಕಿರುಕುಳದಿಂದ ಬೇಸತ್ತು ಚಾಮರಾಜನಗರ ಜಿಲ್ಲೆಯ ಹಲವೆಡೆ  100 ಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದಿದ್ದಾರೆ.
ಹೌದು, ಸಾಲ ತೀರಿಸಲಾಗದೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು 100ಕ್ಕೂ ಹೆಚ್ಚು ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿದ್ದಾರೆ. ಅಲ್ಲದೆ  ಮಕ್ಕಳನ್ನು ಸಹ ಶಾಲೆ ಬಿಡಿಸಿ ತಮ್ಮ ಜೊತೆ ಪೋಷಕರು ‌ಕರೆದೊಯ್ದಿದ್ದು, ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗಿದೆ.
ಗ್ರಾಮಗಳಲ್ಲಿನ ಕುಟುಂಬಗಳು ಗೃಹ ಖರ್ಚು ವೆಚ್ಚಗಳಿಗೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದರು.  ಆದರೆ ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತು ಊರು ತೊರೆದಿರುವ ಕುಟುಂಬಗಳು  ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ.
ಸಾಲ ತೀರಿಸಲು ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ : ಬಾಲಕನ ಅಳಲು
ಇನ್ನು ಚಾಮರಾಜನಗರ ತಾಲ್ಲೂಕು‌ ಹೆಗ್ಗವಾಡಿಪುರದ ಮೋಹನ್ ಎಂಬ ಬಾಲಕ ಈ ಬಗ್ಗೆ  ಅಳಲು ತೋಡಿಕೊಂಡಿದ್ದಾನೆ.
ನಮ್ಮಮ್ಮನನ್ನು ಚಾಪೆ ಹಾಸಿ ಸಾಲ ಕಟ್ಟು ಅಂತಾರೆ  ಸಾರ್ . ಕೈ ಮುಗಿದು ಕೇಳಿ ಕೊಳ್ಳುತ್ತೇನೆ ನಿ ನನ್ನ ಒಂದು ಕಿಡ್ನಿ ಮಾರೋಕ್ಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ  ಅಪ್ಪ ಅಮ್ಮನ ಸಾಲ ತೀರಿಸಿ ಹೇಗೋ ಬದುಕಿಕೊಂಡು ಹೋಗುತ್ತೇವೆ . ಸರ್ಕಾರ ಪರ್ಮಿಷನ್ ಕೊಟ್ಟರೆ ನನ್ನ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸ್ತೀನಿ ಎಂದು  ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ‌ ಕಿರುಕುಳಕ್ಕೆ ಬೇಸತ್ತ ಬಾಲಕ ಕಣ್ಣೀರು ಹಾಕಿ ಈ ರೀತಿ ಹೇಳಿದ್ದಾನೆ.
ಅಲ್ಲದೆ ಫೈನಾನ್ಸ್ ನವರು ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿವೇಳೆ  ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ಯುತ್ತಾರೆ, ಕಿರುಕುಳ ಕೊಡುತ್ತಾರೆ. ನಾವು ಸತ್ತೋಗುತ್ತೇವೆ ಬದುಕಲ್ಲ, ನಿಮ್ಮ ಎಜುಕೇಷನ್ ನೀವು ನೋಡಿಕೊಂಡು  ಹೋಗಿ ಅಂತ ಅಪ್ಪ ಅಮ್ಮ ಹೇಳ್ತಿದ್ದಾರೆ. ನಮ್ಮ ಅಪ್ಪ ಅಮ್ಮನನ್ನು ಬಿಟ್ಟು ನಾನು ನನ್ನ ತಂಗಿ ಬದುಕೋಕೆ ಆಗುತ್ತಾ  ಸರ್. ನಾವೆಲ್ಲರೂ ಸಾಯಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ ಎಂದು ಬಾಲಕ ಅಳಲು ತೋಡಿಕೊಂಡಿದ್ದಾನೆ.
Key words: Harassment, microfinance companies, 100 families, leave, village
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದ ಗೃಹ ಸಚಿವ ಡಾ.ಜಿ.ಪರಮೇಶ್ವರ್.
ಬೆಳಗಾವಿ, ಡಿಸೆಂಬರ್,11,2023(www.justkannada.in): ಬೆಳಗಾವಿ  ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆ  ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ವೇಳೆಯೇ ಇಂತಹ ಅಮಾನವೀಯ ಘಟನೆ ನಡೆದಿದೆ. ಯುವಕ ಪ್ರೀತಿಸಿದ ಯುವತಿ ಜೊತೆ ಓಡಿ ಹೋಗಿದ್ದಕ್ಕೆ ಯುವತಿಯ ಮನೆಯವರು ಯುವಕನ ಮನೆಗೆ ನುಗ್ಗಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಬಳಿಕ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು  ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತೆಯಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್,  ನಿನ್ನೆ ರಾತ್ರಿ ‌12.30ರ ಸುಮಾರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ದುಂಡಪ್ಪ ಯುವಕ 18 ವರ್ಷದ ಯುವತಿಯನ್ನು ಕರೆದುಕೊಂಡು ಓಡಿ‌ ಹೋಗಿದ್ದಾರೆ.  ಯುವತಿ ಕುಟುಂಬದವರು ಆಗಮಿಸಿ ಈ ರೀತಿ ಕೃತ್ಯವೆಸಗಿದ್ದಾರೆ.  ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣರಾದ 7 ಜನರನ್ನು ಬಂಧಿಸಲಾಗಿದೆ. ಇದು ಬಹಳ ಅನಿರೀಕ್ಷಿತ ಘಟನೆ ಓಡಿ ಹೋದ ಯುವಕ ಯುವತಿ ಇನ್ನೂ ಪತ್ತೆಯಾಗಿಲ್ಲ.  ಪತ್ತೆಗೆ ಕ್ರಮ ವಹಿಸಲಾಗಿದೆ. ಇದು ಯಾರಿಗೂ ಗೌರವ ತರುವಂತ ಕೆಲಸ ಅಲ್ಲ. ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದರು.
Key words: Woman – Assault –Case-Home Minister -Dr. G. Parameshwar -visited – village
ಸರ್ಕಾರಿ ಉದ್ಯೋಗದ ಭರವಸೆ ನೀಡಿ ಒಂದೇ ಗ್ರಾಮದ ಏಳು ವಿದ್ಯಾರ್ಥಿಗಳಿಗೆ ವಂಚನೆ: ಇಬ್ಬರ ಬಂಧನ.
ಬೆಂಗಳೂರು,ಜುಲೈ,2,2022(www.justkannada.in): ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತೆಯೇ ಆರೋಪಿಗಳು ಸರ್ಕಾರ ಉದ್ಯೋಗದ ಆಸೆ ತೋರಿಸಿ ಒಂದೇ ಗ್ರಾಮದ ಏಳು ವಿದ್ಯಾರ್ಥಿಗಳಿಗೆ 1.5 ಕೋಟಿ ಪಂಗನಾಮ ಹಾಕಿರುವ ಘಟನೆ ನಡೆದಿದೆ.
ಸದ್ಯ ಬಿಡಬ್ಲೂಎಸ್ಎಸ್​  ಮತ್ತು ಪಿಎಸ್​ ಐ  ಕೆಲಸ ಕೊಡಿಸುತ್ತೇವೆಂದು ಹೇಳಿ ಒಂದೇ ಗ್ರಾಮದ 7 ಜನ ವಿದ್ಯಾರ್ಥಿಗಳಿಗೆ ವಂಚಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ತರಹುಣಸೆ ಗ್ರಾಮದಲ್ಲಿ ಏಳು ವಿದ್ಯಾರ್ಥಿಗಳಿಂದ ಬರೋಬ್ಬರಿ ಒಂದೂವರೆ ಕೋಟಿ ಹಣ ಪಡೆದು ಮಹಾಮೋಸ ಮಾಡಿದ್ದಾರೆಂದು ದೂರು ದಾಖಲಾಗಿದೆ. BWSSB ಗುತ್ತಿಗೆದಾರ ಪ್ರಕಾಶ್ ಮತ್ತು ರಿಯಲ್ ಎಸ್ಟೇಟ್ ಬ್ರೋಕರ್ ನಾರಾಯಣಸ್ವಾಮಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ್ದು ಇದೀಗ ಇಬ್ಬರು ವಂಚಕರನ್ನ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪದವೀಧರ ಯುವಕರನ್ನೆ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದರಂತೆ. ಹಣ ಕೊಟ್ಟು 9 ತಿಂಗಳ ಬಳಿಕ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತರಹುಣಸೆ ಗ್ರಾಮದ ಮುನಿರಾಜು ಎಂಬುವವರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.
ದೂರುದಾರ ಮುನಿರಾಜು ಮತ್ತು ನಾರಾಯಣಸ್ವಾಮಿ ಮೊದಲಿಂದಲೂ ಸ್ನೇಹಿತರು. ಸ್ನೇಹಿತರಾಗಿದ್ದ ಹಿನ್ನೆಲೆ ತನ್ನ ಮಗಳಿಗೆ 30 ಲಕ್ಷ ರೂ. ಹಣ ಕೊಟ್ಟು ಸರ್ಕಾರಿ ಉದ್ಯೋಗ ಕೊಡಿಸಿರುವುದಾಗಿ ನಾರಾಯಣಸ್ವಾಮಿ ನಂಬಿಸಿದ್ದಾನೆ. ಅದೇ ರೀತಿ ಮುನಿರಾಜು ಮಗ ಮತ್ತು ಮಗಳಿಗೂ ಕೆಲಸ‌ ಕೊಡಿಸುತ್ತೇನೆಂದು ಲಕ್ಷ ಲಕ್ಷ ಹಣ ಪಡೆದಿದ್ದ. ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಅದೇ ಗ್ರಾಮದ ವಿದ್ಯಾರ್ಥಿಗಳು  ಸಹ ಹಣ  ನೀಡಿದ್ದಾರೆ.
ನಾರಾಯಣಸ್ವಾಮಿ ಪ್ರತಿಯೊಬ್ಬರ ಬಳಿ 20 ರಿಂದ 30 ಲಕ್ಷ ರೂ. ನಂತೆ ಒಟ್ಟು 1 ಕೋಟಿ 52 ಲಕ್ಷ ಹಣ ಪಡೆದಿದ್ದ. ಇನ್ನು ಪ್ರಕಾಶ್ ಕೆಲಸ ಸಿಗುವ ವಿಚಾರಕ್ಕೆ ಸಂಬಂಧಿಸಿ ತಾನೆ ಎಲ್ಲಾ ನೊಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿದ್ದಾನೆ. ಪ್ರಕಾಶ್ ತಂದೆ BWSSBಯಲ್ಲಿ ನಿವೃತ್ತರಾಗಿದ್ದಾರೆ. ಹೀಗಾಗಿ ಅಲ್ಲೆ ಗುತ್ತಿಗೆದಾರನಾಗಿದ್ದು ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ. ಸದ್ಯ ಪ್ರಕರಣ ಸಂಬಂಧ ಆರೋಪಿಗಳಾದ ನಾರಾಯಣಸ್ವಾಮಿ ಮತ್ತು ಪ್ರಕಾಶ್ ಬಂಧಿಸಲಾಗಿದೆ.
Key words: Seven students- same- village -cheated – government jobs.
ಮೂಲ ಸೌಕರ್ಯ ಕೊರತೆ ಹಿನ್ನೆಲೆ: ಮುಂದಿನ ಚುನಾವಣೆ ಬಹಿಷ್ಕರಿಸಲು ಗ್ರಾಮದ ಜನತೆ ನಿರ್ಧಾರ.
ಮೈಸೂರು,ಮೇ,30,2022(www.justkannada.in): ತಮ್ಮ ಗ್ರಾಮದಲ್ಲಿ ಉಂಟಾಗಿರುವ  ಮೂಲ ಸೌಕರ್ಯಗಳ ಕೊರತೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಮುಂದಿನ ಚುನಾವಣೆ ಬಹಿಷ್ಕರಿಸಲು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಬೆಂಕಿಪುರ ಗ್ರಾಮದ ಜನರು  ನಿರ್ಧರಿಸಿದ್ದಾರೆ.
ಸುಮಾರು 5000 ಜನಸಂಖ್ಯೆಯಿರುವ ಬೆಂಕಿಪುರ ಗ್ರಾಮದಲ್ಲಿ  ಜನರು  ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದು, ಈ ಬಗ್ಗೆ  ಹಲವಾರು ಬಾರಿ ಶಾಸಕರು, ಸಂಸದರು, ತಾಲ್ಲೂಕು ಹಾಗೂ ಜಿಲ್ಲಾಡಳಿತಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್ ವ್ಯವಸ್ಥೆ ಇಲ್ಲದೇ ಶಾಲಾ ಮಕ್ಕಳು ಕಷ್ಟಪಡುತ್ತಿದ್ದು, ಸುಮಾರು 150 ಶಾಲಾ ಮಕ್ಕಳು ಪ್ರತಿನಿತ್ಯ 2 ಕಿ.ಮೀ ನಡೆದುಕೊಂಡೇ ಅಥವಾ ಇತರೆ ವಾಹನಗಳನ್ನು ಆಶ್ರಯಿಸಿಕೊಂಡು ಶಾಲೆಗೆ ಹೋಗುತ್ತಿದ್ದಾರೆ.
ಇನ್ನು ಉದ್ಯೋಗಸ್ಥ ಯುವಕ, ಯುವತಿಯರು  ಸಹ ದೂರದ ಮೈಸೂರಿಗೆ ಹೋಗಿ ಬರಲು ಬಹಳ ಕಷ್ಟಪಡುತ್ತಿದ್ದಾರೆ. ಹೆಣ್ಣುಮಕ್ಕಳು 10 ನೇ ತರಗತಿ ತೇರ್ಗಡೆಯಾದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲದೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ . ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಸ್ಮಶಾನಕ್ಕಾಗಿ ಜಾಗ ಗುರುತಿಸಿಲ್ಲ.
ಈ ಜೊತೆಗೆ ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಿದ್ದು, ಜನಪ್ರತಿನಿಧಿಗಳು ಮಾತ್ರ ಚುನಾವಣೆ ಬಂದಾಗಲಷ್ಟೇ ಇತ್ತ  ಬರುತ್ತಾರೆ. ನಂತರ ಗ್ರಾಮದ ಸಮಸ್ಯೆಗಳ ಬಗ್ಗೆ ಗಮನವನ್ನೇ ಹರಿಸುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Key words: Infrastructure -decision –mysore- village -people – boycott – next election.
ಸೆ.25 ರಂದು ಹದಿನಾರು ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ.
ಮೈಸೂರು ಸೆಪ್ಟಂಬರ್,22,2021(www.justkannada.in):  ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಸೆಪ್ಟಂಬರ್.25 ರ ಶನಿವಾರ ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ವತಿಯಿಂದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಲ್.ರಘುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಅಲ್ಲಮ ಪೌಂಡೇಷನ್ ಅಧ್ಯಕ್ಷರಾದ ಚಿನ್ನಸ್ವಾಮಿ ವಡ್ಡಗೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗ್ರಾಮಾಂತರ ಪ್ರದೇಶದ ದೈನಂದಿನ ಜೀವನ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ . ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾನೂನು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ .
ವಿದ್ಯಾರ್ಥಿಗಳಿಗೆ , ಕೃಷಿಕರಿಗೆ , ಕೂಲಿ ಕಾರ್ಮಿಕರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಮೂಲಕ ಗ್ರಾಮೀಣ ಜೀವನ ಮಟ್ಟವನ್ನು ಸುಧಾರಿಸಲು ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ಈ ಶಿಬಿರ ಏರ್ಪಡಿಸಿದೆ ಎಂದು ಫೌಂಡೇಷನ್ ಸಂಚಾಲಕ ಎಸ್.ಪಿ.ಮಧು ತಿಳಿಸಿದ್ದಾರೆ .
ಗ್ರಾಮಸ್ಥರು , ಕಾನೂನು ನೆರವು ಬೇಕಾದ ಅಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
Key words: Legal –awarness-Program -hadinaru -Village –mysore-September 25th.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ: ಉಚ್ಚಗಣಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ.
ಮೈಸೂರು,ಸೆಪ್ಟಂಬರ್,15,2021(www.justkannada.in):  ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ  ಗಲಾಟೆ ನಡೆದಿದ್ದು, ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬಾತ ಬಿಜೆಪಿ ಕಾರ್ಯಕರ್ತ ಉದಯರವಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.  ಮಹದೇವಮ್ಮ ದೇಗುಲದ ನಿರ್ವಹಣೆಗೆ‌ ಕಮಿಟಿ ರಚಿಸುವ ವಿಚಾರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ದ್ವೇಷ ಉಂಟಾಗಿ ಈ ಗಲಾಟೆ ನಡೆದಿದೆ.
ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಭೇಟಿ ನೀಡಿ ನಿರ್ಗಮಿಸಿದ ಬಳಿಕ‌ ಈ ಹೊಡೆದಾಟ ನಡೆದಿದ್ದು,  ವಿಚಾರ ತಿಳಿದ ಕೂಡಲೇ ಗ್ರಾಮಕ್ಕೆ ತೆರಳಿದ ಹುಲ್ಲಹಳ್ಳಿ ಠಾಣಾ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು.
ಇನ್ನು ರೊಚ್ಚಿಗೆದ್ದ  ಬಿಜೆಪಿ ಕಾರ್ಯಕರ್ತರು ಹಾಗೂ ಉದಯರವಿ ಸಹೋದರು ಮಚ್ಚು ಲಾಂಗು ಹಿಡಿದು ಕಾಂಗ್ರೆಸ್ ಕಾರ್ಯಕರ್ತ ರವಿಗಾಗಿ  ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ತಲೆದೋರಿದೆ.
Key words:  fight –between- Congress – BJP –workers-nanjanagudu-ucchgani -village
ನಂಜನಗೂಡು ಸಮೀಪದ ಹುಚ್ಚುಗಣಿ ಗ್ರಾಮದ ಈ ದೇವಾಲಯಕ್ಕೆ 3 ಸಾವಿರ ವರ್ಷಗಳ ಇತಿಹಾಸ: ಇದರ EXCLUSIVE ಮಾಹಿತಿ ಇಲ್ಲಿದೆ.
ಮೈಸೂರು,ಸೆಪ್ಟಂಬರ್,15,2021(www.justkannada.in): ಹುಚ್ಚಗಣಿ ಗ್ರಾಮವು ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು, ಹುಲ್ಲಹಳ್ಳಿ ಹೋಬಳಿ, ಹರದನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿದೆ. ಮೈಸೂರಿನಿಂದ 30 ಕಿಲೋಮೀಟರ್, ನಂಜನಗೂಡಿನಿಂದ 28 ಕಿಲೋಮೀಟರ್ ದೂರದಲ್ಲಿದ್ದು, ಹೊಮ್ಮರಗಳ್ಳಿ ಮತ್ತು ನಂಜನಗೂಡಿಗೆ ಹೋಗುವ ರಸ್ತೆಯಲ್ಲಿದೆ. ಗ್ರಾಮದ ಪೂರ್ವದಲ್ಲಿ ಕಪಿಲಾ ನದಿ, ಪಶ್ಚಿಮ ದಿಕ್ಕಿಗೆ ಭೃಗುನದಿ ಹರಿಯುತ್ತಿದೆ.
ಸುಮಾರು 3000 ವರ್ಷಗಳ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಅವಶೇಷಗಳು ಹಾಗೂ 9-10 ನೇ ಶತಮಾನದ ಗಂಗರ, 11-12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲುಗಳು ಶೋಧನೆಯಾಗಿವೆ. ಗ್ರಾಮದ ದಕ್ಷಿಣಕ್ಕೆ ಚೋಳರ ಕಾಲದ್ದೇಂದು ಹೇಳುವ ಆದಿಶಕ್ತಿ ಮಹಾದೇವಮ್ಮ ಗುಡಿ ಇದೆ.
ಸ್ಥಳೀಯರ ಸಹಕಾರದೊಂದಿಗೆ ಒಡೆದು ಹಾಕಿರುವ ಆದಿಶಕ್ತಿ ಮಹದೇವಮ್ಮನ ದೇವಾಲಯವನ್ನು ಪ್ರವೇಶಿಸಿ ನೋಡಿದಾಗ ತಾತ್ಕಾಲಿಕವಾಗಿ ನಿರ್ಮಿಸಿರುವ ಗರ್ಭಗುಡಿಯ ಮುಂಭಾಗದಲ್ಲಿ ಆದಿಶಕ್ತಿ ಮಹದೇವಮ್ಮನ ಮೂರ್ತಿಶಿಲ್ಪ, ಬೈರವೇಶ್ವರ ಮೂರ್ತಿಶಿಲ್ಪಗಳು ಇದ್ದು ಲೋಹದ ಮುಖವಾಡಗಳನ್ನು ಧರಿಸಿದ್ದಾರೆ. ಈ ಶಿಲ್ಪಗಳು ಚೋಳರ ಕಾಲದಲ್ಲಿ ಪ್ರತಿಷ್ಠಾಪನೆ ಗೊಂಡಿವೆ ಎಂದು ಸ್ಥಳಿಯರಾದ ಶ್ರೀನರಸಿಂಹೇಗೌಡರು ಅಭಿಪ್ರಾಯಪಟ್ಟರು. ಲೋಹದ ಮುಖವಾಡ ಹಾಕಿರುವುದರಿಂದ ಶಿಲ್ಪಶೈಲಿಯನ್ನು ನೋಡಲು ಸಾಧ್ಯವಾಗಲಿಲ್ಲ. ಶಾಸನ ಆಧಾರಿತವಾಗಿ ಗ್ರಾಮದಲ್ಲಿ ಯಾವುದೇ ಶಾಸನಗಳು ದೊರಕಿಲ್ಲ, ಆದರೆ ನಂಜನಗೂಡು ತಾಲ್ಲೂಕಿನ ಭಾಗಗಳು 11 ಮತ್ತು 12 ನೇ ಶತಮಾನದಲ್ಲಿ ಜೋಳರ ಆಳ್ಳಿಕೆಗೆ ಒಳಪಟ್ಟಿತ್ತು ಎಂದು ಎಪಿಗ್ರಾಪಿಯ ಕರ್ನಾಟಿಕ ಸಂಪುಟ-3 ರಲ್ಲಿನ ಶಾಸನಗಳು ಉಲ್ಲೇಖಿಸಿವೆ. ಹೆಚ್ಚಿನ ಆಧ್ಯಯನದ ಅಗತ್ಯತೆ ಇದೆ. ಇದೇ ದೇವಾಲಯದ ಗರ್ಭಗುಡಿಯಲ್ಲಿ ಎತ್ತರವಾದ ಆದಿಶಕ್ತಿ ಮಹದೇವಮ್ಮನ ಮೂರ್ತಿಶಿಲ್ಪ, ಪಕ್ಕದಲ್ಲಿ ಬೈರವೇಶ್ವರ ಮೂರ್ತಿಶಿಲ್ಪಗಳು ಕಂಡುಬರುತ್ತವೆ. ಈ ಶಿಲ್ಪಗಳನ್ನು ದಾನಿಗಳು ಮಾಡಿಸಿದ್ದಾರೆಂದು ಗ್ರಾಮದ ಯಜಮಾನರು ಅಭಿಪ್ರಾಯಪಟ್ಟರು.
ಆದಿಶಕ್ತಿ ಮಹದೇವಮ್ಮನ ದೇವಾಲಯ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುವ ಪೂರ್ವದಲ್ಲಿ ವೀರಗಲ್ಲುಗಳು ಸೇರಿದಂತೆ ಚಿಕ್ಕ ಗುಡಿಯಿತ್ತು. ಕೆಳಭಾಗದಲ್ಲಿ ಆದಿಶಕ್ತಿ ಮಹಾದೇವಮ್ಮ, ಭೈರವೇಶ್ವರ ಮೂರ್ತಿಶಿಲ್ಪಗಳು ಇದ್ದವೆಂದು,ದೇವಾಲಯ ವಿಶಾಲವಾಗಿ ನಿರ್ಮಿಸಿದಾಗಲೂ ಮೂರು ವೀರಗಲ್ಲುಗಳನ್ನು ಅಲ್ಲೇ ಉಳಿಸಿ ದೇವಾಲಯವನ್ನು ನಿರ್ಮಿಸಿದೇವೆಂದು ಸ್ಥಳೀಯರಾದ ನರಸಿಂಹೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಒಡೆದು ಹಾಕಿದ ದೇವಾಲಯದ ಗರ್ಭಗುಡಿಯಲ್ಲಿದ್ದ ಎತ್ತರವಾದ ವೀರಗಲ್ಲು, ವೀರಮಾಸ್ತಿಕಲ್ಲುಗಳನ್ನು ಹೊರಭಾಗದಲ್ಲಿ ಹಾಕಿದ್ದಾರೆ. ಈ ದೇವಾಲಯದ ಆವರಣದಲ್ಲಿ ಬಿದ್ದಿರುವ ಬೃಹತ್ ಗಾತ್ರದ ವೀರಗಲ್ಲುಗಳು, ವೀರಮಾಸ್ತಿಕಲ್ಲುಗಳು, ದೇವಾಲಯ, ಈ ಗ್ರಾಮದ ಗತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಂಶಗಳಾಗಿವೆ.
ಈ ದೇವಾಲಯದ ಆವರಣದಲ್ಲಿ 4 ವೀರಗಲ್ಲು, ಮಾಸ್ತಿಕಲ್ಲುಗಳಿವೆ, ಪಕ್ಕದಲ್ಲಿಯೇ ಬಾಳೆ ತೋಟದಲ್ಲಿ ಒಂದು ವೀರಗಲ್ಲು ಇದೆ. ಒಟ್ಟು 5 ವೀರಗಲ್ಲುಗಳು ದೇವಾಲಯದ ಆವರಣದಲ್ಲಿವೆ. ಗಂಗರ ಕಾಲದ, ಹೊಯ್ಸಳರ ಕಾಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವೀರಗಲ್ಲುಗಳು ಇಲ್ಲಿ ಕಂಡುಬರುತ್ತವೆ.
ಮೂರು ಹಂತಗಳಲ್ಲಿ ಇದೆ. ಮೊದಲನೇ ಹಂತದಲ್ಲಿ ವೀರರಿಬ್ಬರು ಕತ್ತಿ, ಗುರಾಣಿ ಹಿಡಿದು ಹೋರಾಡುತ್ತಿದ್ದಾರೆ, ಹಿಂಭಾಗದಲ್ಲಿ ಸ್ತ್ರೀ ನಿಂತಿದ್ದಾಳೆ. ಎರಡನೆ ಹಂತದಲ್ಲಿ ವೀರನನ್ನು ದೇವಕನ್ಯೆಯರು ಚಾಮರ ಬೀಸುತ್ತ ಕರೆದೊಯ್ಯುತ್ತಿರುವ ದೃಶ್ಯವಿದೆ. ಮೂರನೇ ಹಂತದಲ್ಲಿ ವೀರ ಧ್ಯಾನಮಗ್ನನಾಗಿ ಕುಳಿತಿದ್ದಾನೆ. ಕೃಷ್ಣ ಕೊಳಲನ್ನು ನುಡಿಸುತ್ತಿರುವ ಶಿಲ್ಪವಿದೆ. ಕೃಷ್ಣನ ಪಕ್ಕದಲ್ಲಿ ವ್ಯಕ್ತಿ, ಹಸುವಿನ ಶಿಲ್ಪವಿದೆ. ಶಿಲ್ಪ ವಿಶೇಷವಾಗಿದ್ದು ಹೆಣ್ಣಿನ ರಕ್ಷಣೆಗಾಗಿ ವೀರ ಹೋರಾಡಿ ಮರಣ ಹೊಂದಿದ ದೃಶ್ಯ ಹಾಗೂ ಈ ಶಿಲ್ಪ ಶೈಲಿ ಹೊಯ್ಸಳರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಶಿಲ್ಪವಾಗಿದೆ ಹಾಗೂ ವೈಷ್ಣವಧರ್ಮದ ಮೇಲೆ ಬೆಳಕು ಚೆಲ್ಲುವ ಪ್ರಮುಖವಾದ ಶಿಲ್ಪವಾಗಿದೆ. ಮೂರನೇ ವೀರಗಲ್ಲು ಗಂಗರ ಕಾಲದ ಶೈಲಿಯನ್ನು ಹೋಲುತ್ತದೆ. ಮೂರು ಹಂತಗಳ ಶಿಲ್ಪವಾಗಿದೆ. ಎತ್ತರ 7.9 ಅಡಿ, ಅಗಲ 4.5 ಅಡಿ, ದಪ್ಪ 5 ಇಂಚು ಇದೆ. ಮೊದಲನೇ ಹಂತದಲ್ಲಿ  ವೀರರಿಬ್ಬರು ಕತ್ತಿ, ಗುರಾಣಿ  ಹಿಡಿದು ಹೋರಾಡುತ್ತಿರುವ ದೃಶ್ಯವಿದೆ. ಎರಡನೇ ಹಂತದಲ್ಲಿ ದೇವಕನ್ಯೆಯರು ವೀರನನ್ನು ಸ್ವರ್ಗಕ್ಕೆ  ಕರೆದೊಯ್ಯುತ್ತಿರುವ, ಮೂರನೇ ಹಂತದಲ್ಲಿ ದೇವಕನ್ಯೆರ ಮಧ್ಯೆ ವೀರ ಧ್ಯಾನಮಗ್ನನಾಗಿ ಕುಳಿತಿದ್ದಾನೆ. ಈ ಶಿಲ್ಪವನ್ನು ನೋಡಿದಾಗ ಈ ವೀರರಿಬ್ಬರ ಮಧ್ಯೆ ಯಾವ ಕಾರಣಕ್ಕಾಗಿ ಹೋರಾಟ ನಡೆಯಿತು ಎನ್ನುವ ಅಂಶವನ್ನು ತಿಳಿಸುವುದು ಕಷ್ಟಸಾಧ್ಯ. ಬಿಳಿ ಗ್ರಾನೈಟ್ ಕಲ್ಲಿನಲ್ಲಿ ಇದೆ.ನಾಲ್ಕನೇ ವೀರಗಲ್ಲು ಲೇಟ್ ಶಿವಣ್ಣ, ಲೇಟ್ ಮದ್ದೂರು ಬಸಪ್ಪ ಇವರ ಬಾಳೆ ತೋಟದಲ್ಲಿ ಶಿಲ್ಪವಿದೆ.ಈ ವೀರಗಲ್ಲು 5.1 ಅಡಿ ಎತ್ತರ, 3.4 ಅಡಿ ಅಗಲ, ನಾಲ್ಕು ಇಂಚು ದಪ್ಪ ಇದೆ. ಮೂರು ಹಂತದ ವೀರಗಲ್ಲು ಆಗಿದೆ. ವೀರರಿಬ್ಬರು ಕತ್ತಿ, ಗುರಾಣಿಗಳನ್ನು ಹಿಡಿದು ಹೋರಾಡುತ್ತಿದ್ದಾರೆ. ವೀರನಿಗೆ ಹೊಟ್ಟೆ ಮತ್ತು ಎದೆಯ ಭಾಗಕ್ಕೆ 2, ಕುತ್ತಿಗೆ ಭಾಗಕ್ಕೆ 2 ಬಾಣಗಳು ಚುಚ್ಚಿವೆ. ವೀರನ ಹಿಂಭಾಗದಲ್ಲಿ ಎರಡು ತುರುಗಳು ಗಾಬರಿಗೊಂಡು ತಲೆಯೆತ್ತಿ ನಿಂತಿವೆ. ಎರಡನೇ ಹಂತದಲ್ಲಿ ದೇವಕನ್ಯೆಯರು ಚಾಮರವನ್ನು ಬೀಸುತ್ತಾ ವೀರನನ್ನು ಕರೆದೊಯ್ಯುತ್ತಿರುವ ದೃಶ್ಯ. ಮೂರನೇ ಹಂತದಲ್ಲಿ ದೇವಕನ್ಯೆಯರು ಚಾಮರಾಜ ಬೀಸುತ್ತಿದ್ದಾರೆ,  ವೀರ ಧ್ಯಾನಮಗ್ನನಾಗಿ ಕುಳಿತಿರುವ ದೃಶ್ಯ ಇದೆ. ವಿಶೇಷವಾದ ಶಿಲ್ಪ ಇದಾಗಿದ್ದು ಗಂಗರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ತುರುಗೋಳ್ ವೀರಗಲ್ಲು ಇದಾಗಿದೆ. ಅಂದರೆ ದನಗಳನ್ನು ಕದಿಯಲು ಬಂದ ಎದುರಾಳಿಗಳನ್ನು ವೀರ ತಡೆಯಲು ಹೋಗಿ ವೀರಮರಣವನ್ನು ಹೊಂದಿದ ಸಂದರ್ಭದಲ್ಲಿ ಜ್ಞಾಪಕಾರ್ಥಕವಾಗಿ ವೀರಗಲ್ಲನ್ನು ನಿರ್ಮಿಸಿದ್ದಾರೆ.
ಒಟ್ಟಾರೆ  ಹುಚ್ಚಗಣಿ ಗ್ರಾಮ ಶಿಲಾಯುಗದ ಕಾಲಮಾನದಿಂದ ಹಿಡಿದು ಇಲ್ಲಿಯವರೆಗೆ ಜನವಸತಿಯ ಸ್ಥಳವಾಗಿತ್ತು. ಗಂಗರ, ಹೊಯ್ಸಳರ ಇತರ ರಾಜಮನೆಗಳ ಆಳ್ವಿಕೆಗೆ ಒಳಪಟ್ಟ ಗ್ರಾಮವಾಗಿತ್ತು. ಈ ಗ್ರಾಮದಲ್ಲಿ ದೊರಕಿರುವ ಶಿಲ್ಪ ಆಧಾರಿತವಾಗಿ ವೈಷ್ಣವ ಧರ್ಮದ ಮೇಲೆ ಬೆಳಕು ಚೆಲ್ಲುವ ಅಪರೂಪದ ವೀರ ಮಾಸ್ತಿಗಲ್ಲುಗಳು ಅನಾಥವಾಗಿ ಬಿದ್ದಿವೆ, ಸಂರಕ್ಷಿಸುವ ಕಾರ್ಯ ಸಂಬಂಧ ಪಟ್ಟ ಇಲಾಖೆ,ಗ್ರಾಮಸ್ಥರು ಮಾಡಿ ಮಂದಿನ ಪೀಳಿಗೆಗೆ ಗತ ಇತಿಹಾಸವನ್ನು ಸಾರಿ ಹೇಳುವ ಕಾರ್ಯವನ್ನು ಮಾಡ ಬೇಕಿದೆ.
ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಜೆ.ಸಿ.ಬಿಯಂತಹ ಬೃಹತ್ ಗ್ರಾತ್ರದ ಯಂತ್ರಗಳನ್ನು ಬಳಸಿ ರಸ್ತೆ, ಕಟ್ಟಡ ಕಾಮಗಾರಿ, ಇತರೆ ಸರ್ಕಾರಿ ಆದೇಶದನ್ವಯ ಕಾರ್ಯಗಳನ್ನು ಮಾಡುವಾಗ ಯಂತ್ರ ಚಾಲಕರಿಗೆ, ಮೆಲ್ವೀಚಾರಕರಿಗೆ ಗತ ಇತಿಹಾಸವನ್ನು ಸಾರುವ, ನಮ್ಮ ಗತ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ,ದೇವಾನುದೇವತೆಗಳ, ನಮ್ಮ ಸಮಾಜದ ಹಿತಕ್ಕಾಗಿ, ರಕ್ಷಣೆಗಾಗಿ ಹೋರಾಡಿದವರ, ಯುದ್ದದಲ್ಲಿ ನಮ್ಮನ್ನು ರಕ್ಷಿಸಲು ಹೋಗಿ ಹೋರಾಡಿ ಪ್ರಾಣತೆತ್ತವರ ನೆನಪಿಗಾಗಿ ನಿರ್ಮಿಸಿದ  ವೀರಗಲ್ಲು, ಮಾಸ್ತಿಗಲ್ಲುಗಳ ಮಹತ್ವದ ಬಗ್ಗೆ  ಆರಿವು ಮೂಡಿಸುವ ಕಾರ್ಯ  ಸಂಬಂಧ ಪಟ್ಟ ಇಲಾಖೆ, ಸ್ಥಳೀಯರು, ಸಂಘಸಂಸ್ಥೆಗಳು, ಪ್ರಜ್ಞಾವಂತರು ತುರ್ತಾಗಿ ಮಾಡ ಬೇಕಿದೆ.
ಕೃಪೆ
ಡಾ.ಎಸ್.ಜಿ.ರಾಮದಾಸರೆಡ್ಡಿ
ಮುಖ್ಯಸ್ಥರು, ಇತಿಹಾಸ ಸಹ ಪ್ರಾಧ್ಯಾಪಕರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಕುವೆಂಪುನಗರ, ಮೈಸೂರು.23.
ಮೊ. 9845309081
Key words: najnanagudu-hucchugani-village- mahadevamma temple  -exclusive- information