treat Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೊಟ್ಟ ಮೊದಲ ಬಾರಿಗೆ ಈ ವಿದ್ಯಾರ್ಥಿಗಳಿಗೆ ಡಬ್ಬಲ್ ಟ್ರೀಟ್.
ಬೆಂಗಳೂರು, ನವೆಂಬರ್ 14, 2022 (www.justkannada.in): ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವಂತಹ ಶಾಲೆಗಳು ಹಾಗೂ ಅನಾಥಾಲಯಗಳ ಸುಮಾರು ೪೦೦ ಮಕ್ಕಳಿಗೆ ಈ ಬಾರಿ ಮಕ್ಕಳ ದಿನಾಚರಣೆಯ ಮುನ್ನಾ ದಿನದ ಸಂಜೆ ಬಹಳ ವಿಶೇಷವಾಗಿತ್ತು. ಈ ಮಕ್ಕಳಿಗಾಗಿ ರೋಟ್ರ್ಯಾಕ್ಟ್ ಜಿಲ್ಲಾ ಸಂಸ್ಥೆ 3190 ವತಿಯಿಂದ, ರೇಣುಕಾ ಪ್ರಸನ್ನ ಚಿತ್ರಮಂದಿರದಲ್ಲಿ ನಡೆಯುತ್ತಿರುವ ದಿವಂಗತ ಪುನೀತ್ ರಾಜ್‌ ಕುಮಾರ್ ಅವರ ಗಂಧದಗುಡಿ ಚಲನಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಮೇಲಾಗಿ, ಈ ಮಕ್ಕಳನ್ನು ಕಾಣಲು ಚಿತ್ರದ ನಿರ್ದೇಶಕ ಅಮೋಘವರ್ಷ ಆಗಮಿಸಿದುದು ಈ ಮಕ್ಕಳಿಗೆ ಮತ್ತೊಂದು ಆಶ್ಚರ್ಯದ ಸಂಗತಿಯಾಗಿತ್ತು.

“ಮಕ್ಕಳು ದೊಡ್ಡ ಪರದೆಯ ಮೇಲೆ ಮೊದಲ ಬಾರಿಗೆ ಪ್ರಾಣಿಗಳನ್ನು ನೋಡಲು ಬಹಳ ಉತ್ಸುಕರಾಗಿರುತ್ತಾರೆ. ಈ ಮಕ್ಕಳು ಪಡುವ ಆನಂದ ಹಾಗೂ ಅವರು ತಟ್ಟುವ ಚಪ್ಪಾಳೆಗಳನ್ನು ನೋಡುವುದೇ ನಮಗೊಂದು ಸಂತಸ. ಈ ಮಕ್ಕಳ ಕಣ್ಣಲ್ಲಿ ಕಂಡು ಬಂದಂತಹ ಉಲ್ಲಾಸ ನನಗೆ ಬಹಳ ಸಂತೋಷ ನೀಡಿತು,” ಎಂದು ಅಮೋಘವರ್ಷ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ಚಲನಚಿತ್ರಕ್ಕೆ ಲಭಿಸಿದ ಪ್ರತಿಕ್ರಿಯೆ ಅದ್ವಿತೀಯವಾಗಿದೆ. “ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಚಲನಚಿತ್ರವನ್ನು ಎಲ್ಲಾ ವಯೋಮಾನದವರು ನೋಡಿ ಆನಂದಿಸಿದ್ದಾರೆ. ನಮ್ಮ ರಾಜ್ಯ ಹಾಗೂ ನಮ್ಮ ದೇಶದ ಶ್ರೀಮಂತ ಸಂಪನ್ಮೂಲವನ್ನು ದೊಡ್ಡ ಪರದೆಯ ಮೇಲೆ ನೋಡುವುದೇ ಒಂದು ರೀತಿಯ ಆನಂದ ಮತ್ತು ಹೆಮ್ಮೆಯ ವಿಷಯ ಎಂದು ಚಿತ್ರವನ್ನು ವಿಕ್ಷಿಸಿದ ಅನೇಕರು ನನಗೆ ತಿಳಿಸಿದ್ದಾರೆ. ಈ ಚಿತ್ರದ ವೀಕ್ಷಕರು ಸ್ವತಃ ಅಪ್ಪುವಿನೊಂದಿಗೆ ಪ್ರಯಾಣಿಸಿದಂತೆ ಭಾಸವಾಗಿದೆ, ಅದು ಇಂತಹ ಚಿತ್ರವೊಂದನ್ನು ನಿರ್ದೇಶಿಸಿದ ನನಗೆ ಅತ್ಯಂತ ದೊಡ್ಡ ಕೊಡುಗೆ,” ಎಂದರು.

ರೊಟ್ರ್ಯಾಕ್ಟ್ ಜಿಲ್ಲಾ ೩೧೯೦ ಸಂಸ್ಥೆಯ ಸ್ವಯಂಸೇವಕರು, ಹಿಹೆಚ್‌ಪಿಎಸ್, ನಾಗರಾವಿ ಶಾಲೆ, ಫಾರೂಕಿಯ ಬಾಲಕಿಯರ ಪ್ರೌಢಶಾಲೆ, ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಮಂಗಲಿ ಸೇವಾಶ್ರಮ, ಸ್ವಾವಲಂಬನ್ ಅಂಗವಿಕಲರ ಸೇವಾ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಅನಾಥ ಶಿಶು ಸೇವಾಶ್ರಮದಂತಹ ವಿವಿಧ ಎನ್‌ ಜಿಒಗಳು ನಡೆಸುತ್ತಿರುವ ಶಾಲೆಗಳು ಹಾಗೂ ಅನಾಥಾಲಯಗಳ ಮಕ್ಕಳಿಗಾಗಿ ಏರ್ಪಡಿಸಿತು.

ಈ ಎಲ್ಲಾ ಮಕ್ಕಳನ್ನು ಒಂದೇ ಬಾರಿಗೆ ಒಂದೇ ಪರದೆಯಡಿ ಈ ಚಿತ್ರವನ್ನು ತೋರಿಸಿಲು ಯೋಜಿಸಲಾಯಿತು. ಇದಕ್ಕಾಗಿ ರೂ.೨೫,೫೦೦ ವೆಚ್ಚವಾಗಿದೆ. ಜೊತೆಗೆ ಮಕ್ಕಳಿಗೆ ಚಲನಚಿತ್ರದ ವೀಕ್ಷಿಸುವ ಸಮಯದಲ್ಲಿ ಲಘು ಉಪಾಹರವನ್ನೂ ಸಹ ನೀಡಲಾಯಿತು.

ರೊಟ್ರ್ಯಾಕ್ಟ್ ನ ತರುಣ್ ಯು. ಅವರು ಈ ಸಂಬಂಧ ಮಾತನಾಡಿ, “ನಮ್ಮ ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಹಾಗೂ ಅವರಿಗೆ ಈ ವಯಸ್ಸಿನಲ್ಲಿಯೇ ನಮ್ಮ ರಾಜ್ಯದ ಕಾಡು, ಮೇಡು, ಪ್ರಾಣಿ ಪಕ್ಷಿಗಳ ಕುರಿತು ತಿಳಿದುಕೊಳ್ಳಲು ಚಲನಚಿತ್ರ ವೀಕ್ಷಣೆ ಅತ್ಯಂತ ಸೂಕ್ತವಾದ ವಿಧಾನ ಎಂದನಿಸಿತು. ಇಷ್ಟೊಂದು ಮಕ್ಕಳು ಒಟ್ಟಿಗೆ ಒಮ್ಮೆಗೆ ಚಿತ್ರವನ್ನು ವೀಕ್ಷಿಸುವುದನ್ನು ನೋಡುವ ಹಾಗೂ ಅವರು ಆನಂದಿಸುವ ಅನುಭವವೇ ನಮಗೆ ಒಂದು ವಿಶೇಷ ಎಂದರು.

ಈ ಪೈಕಿ ಅನೇಕ ಮಕ್ಕಳು ತಮ್ಮ ಜೀವನದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಬಂದ ಅನುಭವವಾಗಿದೆ. “ನಾನು ಇದೇ ಮೊದಲ ಬಾರಿಗೆ ಚಲನಚಿತ್ರ ಮಂದಿರವನ್ನು ನೋಡುತ್ತಿದ್ದೇನೆ. ಈ ಚಿತ್ರವನ್ನು ನೋಡಲು ಕಾತುರನಾಗಿದ್ದೆ. ನನಗೆ ಇದೊಂದು ಅತ್ಯಂತ ಸಂತೋಷ ನೀಡಿದ ವಿಷಯವಾಗಿದೆ. ನನ್ನ ಜೊತೆಗೆ ಇತರೆ ಶಾಲೆಗಳ ಮಕ್ಕಳಿಗೂ ಸಹ ಇದೊಂದು ವಿಶೇಷ ಅನುಭವವಾಯಿತು. ಅವರೊಂದಿಗೆ ಕುಳಿತು ಸಿನಿಮಾ ನೋಡಿದ್ದೇ ನನಗೆ ಎಂದಿಗೂ ಮರೆಯದ ವಿಷಯವಾಗಿದೆ. ಚಲನಚಿತ್ರ ಮುಗಿದ ನಂತರ ನಾವು ಈ ಚಿತ್ರದ ನಿರ್ದೇಶಕರಾದ ಅಮೋಘವರ್ಷ ಅವರನ್ನು ಕಾಣುವ ಅವಕಾಶವೂ ದೊರೆಯಿತು. ನಮಗೆಲ್ಲಾ ತುಂಬಾ ಸಂತೋಷವಾಗಿದೆ,” ಎಂದು ಓರ್ವ ವಿದ್ಯಾರ್ಥಿ ತನ್ನ ಅನಿಸಿಕೆಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ.

ಸರ್ಕಾರಿ ಶಾಲಾ ಮಕ್ಕಳಿಗೆ ರಸಪ್ರಶ್ನೆ..

ವೈಟ್‌ ಫೀಲ್ಡ್ ಹಾಗೂ ಸುತ್ತಮುತ್ತಲಿನಲ್ಲಿರುವ ಸುಮಾರು 12 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶನಿವಾರದಂದು ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವ ರಸಪ್ರಶ್ನೆ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ಐಟಿ ಕಾರಿಡಾರ್ (ಐಡಬ್ಲ್ಯುಸಿಬಿಐಟಿಸಿ) ಹಾಗೂ ರೋಟರಿ ಕ್ಲಬ್ ಆಫ್ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸತ್ಯಪೂರ್ಣ ಎಂಬ ಶಿಕ್ಷಕರೊಬ್ಬರು ಈ ರಸಪ್ರಶ್ನೆಯನ್ನು ರೂಪಿಸಿದರು. ಈ ಎರಡೂ ಸಂಸ್ಥೆಗಳು ದತ್ತು ತೆಗೆದುಕೊಂಡಿರುವಂತಹ ಈ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳಿಗೆ ರಸಪ್ರಶ್ನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಅತ್ಯಂತ ಸಂತಸದ ವಿಷಯವಾಗಿತ್ತು. ಈ ರಸಪ್ರಶ್ನೆ ಕಾರ್ಯಕ್ರಮವನ್ನು ರಾಮಗೊಂಡನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು. ಪ್ರತಿ ತಂಡದಲ್ಲಿ ನಾಲ್ಕು ಹಾಗೂ ಐದನೇ ತರಗತಿಗಳಲ್ಲಿ ಕಲಿಯುತ್ತಿರುವ ತಲಾ ಇಬ್ಬರಂತೆ, ಒಟ್ಟು ನಾಲ್ವರು ವಿದ್ಯಾರ್ಥಿಗಳಿದ್ದರು.

ಐಡಬ್ಲ್ಯುಸಿಬಿಐಟಿಸಿಯ ಹಿಂದಿನ ಅಧ್ಯಕ್ಷರಾದ ಅನು ನಂಬಿಯಾರ್ ಹಾಗೂ ಕಾರ್ಯದರ್ಶಿ ಶಾಂತ ದಿವಾಕರನ್ ಅವರು ಕಾರ್ಯಕ್ರಮದಲ್ಲಿ ಕ್ವಿಜ್ ಮಾಸ್ಟರ್‌ ಗಳಾಗಿದ್ದರು. ಅಂಬೇಡ್ಕರ್‌ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಗೆದ್ದರು. ವಿಜಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರನ್ನರ್ ಅಪ್ ಆದರು.  ವಿಜೇತರಿಗೆ ಟ್ರೋಫಿಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೋಟೇರಿಯನ್ ಸುಮೇಧಾ ಅವರು ಇಂತಹ ಕಾರ್ಯಕ್ರಮಗಳನ್ನು ಪ್ರಾದೇಶಿಕ ಮಟ್ಟದಲ್ಲಿಯೂ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು. ಐಡಬ್ಲ್ಯುಸಿಬಿಐಟಿಸಿಯ ಅಧ್ಯಕ್ಷರಾದ ಶಾಂತಿ ಸುಬ್ರಮಣಿಯನ್ ಅವರು ಸರ್ಕಾರಿ ಶಾಲೆಗಳ ಮಕ್ಕಳೊಂದಿಗೆ ವಿಶೇಷ ದಿನಗಳನ್ನು ಆಚರಿಸಿವುದನ್ನು ಸಂಸ್ಥೆ ಅಭ್ಯಾಸ ಮಾಡಿಕೊಂಡಿರುವುದಾಗಿ ತಿಳಿಸಿದರು. ಈ ವರ್ಷ ೧೨ ಶಾಲೆಗಳೊಂದಿಗೆ ಸೇರಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವುದಾಗಿಯೂ ತಿಳಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: double -treat –first- time- students.

The post ಮೊಟ್ಟ ಮೊದಲ ಬಾರಿಗೆ ಈ ವಿದ್ಯಾರ್ಥಿಗಳಿಗೆ ಡಬ್ಬಲ್ ಟ್ರೀಟ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

3ನೇ ಅಲೆ, ಹೊಸ ವೈರಸ್ ಸಂಬಂಧ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳಲ್ಲಿ ಸಿದ್ಧತೆ- ಸಚಿವ ಡಾ.ಕೆ.ಸುಧಾಕರ್.
ಬೆಂಗಳೂರು,ಡಿಸೆಂಬರ್,3,2021(www.justkannada.in): 18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಸೇರಿದಂತೆ ಕೋವಿಡ್ ಸಂಭವನೀಯ ಮೂರನೇ ಅಲೆಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ಆರೋಗ್ಯಸೌಧದಲ್ಲಿ ವೀಡಿಯೋ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿದ್ದು, ಸಂಭವನೀಯ ಮೂರನೇ ಅಲೆ ಅಥವಾ ಹೊಸ ಓಮಿಕ್ರಾನ್ ವೈರಾಣು ಸಂಬಂಧಿತ ಚಿಕಿತ್ಸೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಎಚ್‍ ಒಡಿ, ಪ್ರೊಫೆಸರ್, ಹಿರಿಯ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ಸಮಯೋಚಿತವಾಗಿ ವರ್ತಿಸಬೇಕು. ಗೃಹ ವೈದ್ಯರು, ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಒಂದನೇ ಮತ್ತು ಎರಡನೇ ಅಲೆಯಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನರ್ಸಿಂಗ್, ಪ್ಯಾರಾ ಮೆಡಿಕಲ್ ನಲ್ಲಿ ಸುಮಾರು 18 ಸಾವಿರ ಮಂದಿ ಇದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಮಕ್ಕಳ ಐಸಿಯು ಸಿದ್ಧ

ಸಚಿವ ಸಂಪುಟ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ. ಸಂಸ್ಥೆಗಳು ಮುಂದಿಟ್ಟ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗಿದೆ. ಗೃಹ ವೈದ್ಯರ ಕೋವಿಡ್ ರಿಸ್ಕ್ ಭತ್ಯೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರೂ. ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ಪ್ರತಿ ತಿಂಗಳು ವೇತನ ಖಾತೆಗೆ ಜಮೆಯಾಗಲು ತಾಂತ್ರಿಕ ಸಮಸ್ಯೆಗಳಿದ್ದವು. ಎಚ್‍ಆರ್ ಎಂಎಸ್ ನಲ್ಲಿ ನೋಂದಣಿಗೆ ಸಂಸ್ಥೆಗಳು 20 ದಿನಗಳ ಕಾಲ ತೆಗೆದುಕೊಂಡಿವೆ. ಡಿಸೆಂಬರ್ ನಿಂದ ವೇತನ ನೇರವಾಗಿ ಖಾತೆಗೆ ಜಮೆಯಾಗಲಿದೆ ಎಂದು ವಿವರಿಸಿದರು.

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ ಓಮಿಕ್ರಾನ್ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಿಡಬೇಕಾದ ಹಾಸಿಗೆ ಹಾಗೂ ಐಸಿಯು ಬಗ್ಗೆ ನಿರ್ಧರಿಸಲಾಗುವುದು ಎಂದರು.

ಆಫ್ರಿಕಾದಿಂದ ಬಂದ 57 ಪ್ರಯಾಣಿಕರು ಪತ್ತೆ ಆಗದಿರುವ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆ ಹೀಗೆ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ ಉತ್ತಮ ಕೆಲಸ ಮಾಡಿತ್ತು. ಈ ಬಾರಿಯೂ ಪೊಲೀಸ್ ಇಲಾಖೆ ದಕ್ಷತೆ ತೋರಲಿದೆ. ಆದರೆ ಈ ರೀತಿ ತಪ್ಪಿಸಿಕೊಳ್ಳುವ ಪ್ರಯಾಣಿಕರು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

Key words: Preparing- Medical Colleges – third wave – treat –minister- Dr K.Sudhakar

ENGLISH SUMMARY…

Preparing Medical Colleges for possible third wave and to treat the new variant: Dr K Sudhakar, Health & Family Welfare, Medical Education Minister

Training 18,000 nurses, says Minister

Bengaluru, Friday December 3: Including a month training for 18,000 nurses, ramping up pediatric ICUs, Medical colleges across the state have been instructed to make necessary preparations in order to be ready for possible third Covid wave in Karnataka said, Dr K Sudhakar, Minister of Health and Medical Education.

After chairing a video conference meeting with the directors of the medical colleges, on possible third wave and the new Omicron virus related treatment, Health Minister told reporters that there are 21 medical colleges offering health services at the district level. Everyone, including the HOD, Professors and Senior Doctors of Medical Colleges have been advised to stand up to the demand and provide effective treatment. They can also avail the help of resident doctors, and final year medical students, Minister said.

During the first and second wave, state faced a shortage of nurses to treat those who were in the ICUs. Now that problem has been solved. There are about 18,000 people in final year nursing and paramedics. Officials have been asked to provide one month training for them, in collaboration with Rajiv Gandhi University of Health sciences and other institutions, said Dr K Sudhakar.

Paediatric ICUs are ready

As was decided in the Cabinet, officials are instructed to prepare of ICUs for children. We have got the information on all necessary equipment and other systems which are required. able. Issues raised by institutions are also addressed and solutions provided for the issues flagged by them. Resident doctor’s Covid risk allowance to the tune of Rs 55 crore is pending and Finance Dept has released the amount. from the Department of Finance. Total amount required is nearly Rs 73 crore and it will be credited to the concerned account within a couple of days. We were facing some technical glitches to credit salaries to their account. Institutions have taken twenty days to be registered in HRMS. From December onwards, salaries will be directly credited to their bank accounts, Minister informed the reporters.

As per the advice of the Covid Technical Committee, a special ICU and ward will be provided for the Omicron infected. Those who are infected with Delta will be treated in a separate ward. Number of beds and ICUs to be reserved will be decided soon, he said.

Priority has been given to trace those 57 passengers from Africa. In the past, our police department has done a good job of tracking down those who have escaped. And our Police demonstrate their efficiency and will track them all. But I urge the passengers to act responsibly and with social concern, Dr K.Sudhakar said.

The post 3ನೇ ಅಲೆ, ಹೊಸ ವೈರಸ್ ಸಂಬಂಧ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳಲ್ಲಿ ಸಿದ್ಧತೆ- ಸಚಿವ ಡಾ.ಕೆ.ಸುಧಾಕರ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಾನವೀಯ ನೆಲೆ ಗಟ್ಟಿನ ಮೇಲೆ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ವೈದ್ಯರಿಗೆ ಸಚಿವೆ ಶಶಿಕಲಾ ಜೊಲ್ಲೆ ಸಲಹೆ..
ವಿಜಯಪುರ,ಏಪ್ರಿಲ್,23,2021(www.justkannada.in): ಕೊರೋನಾ ಮಹಾಮಾರಿಯ ಎರಡನೇ ಅಲೆಯಂತಹ  ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದು, ಜನತೆಗಾಗಿ ಅಮೂಲ್ಯ ಸೇವೆ ಕಲ್ಪಿಸುವಂತೆ ಮಹಿಳಾ‌ ಮತ್ತು ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ವೈದ್ಯರಿಗೆ ಸಲಹೆ ನೀಡಿದ್ದಾರೆ.

ವಿಜಯಪುರದ ನೂತನ ಪ್ರವಾಸಿ ಮಂದಿರದಲ್ಲಿಂದು ಸರ್ಕಾರಿ ಹಾಗೂ ಖಾಸಗಿ ವೈದ್ಯರೊಂದಿಗೆ ಸಭೆ ನಡೆಸಿ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ, ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಅವಶ್ಯಕತೆಗೆ ತಕ್ಕಂತೆ ಸೇವೆ ಕಲ್ಪಿಸಬೇಕು ಎಂದು ಹೇಳಿದರು.

ಇದೇ ವೇಳೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳನ್ನು ನಿವಾರಿಸಬೇಕು. ಆಕ್ಸಿಜನ್, ಬೆಡ್‍ಗಳ ಕೊರತೆಯಾಗದಂತೆ ನಿಗಾವಹಿಸಬೇಕು. ತುರ್ತು ಚಿಕಿತ್ಸೆಗೆ ತಕ್ಷಣ ಸ್ಪಂದಿಸುವಂತೆ ಸಲಹೆ ನೀಡಿದರು.

ಅದೇ ರೀತಿ ನಗರದ ಗಾಂಧೀಚೌಕ್ ಬಳಿ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ -19 ಲಸಿಕೆ ನೀಡುವ ಕಾರ್ಕ್ರಮಕ್ಕೆ ಚಾಲನೆ‌ ನೀಡಿದ ಸಚಿವೆ ಶಶಿಕಲಾ ಜೊಲ್ಲೆ, ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ, ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಬೇಡಿ ಎಂದು ಕರೆ‌ ನೀಡಿದರು.

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ದೇಶೀಯ ಲಸಿಕೆಗಳಾಗಿರೋದ್ರಿಂದ ಎಲ್ಲರೂ ಅಭಿಮಾನ ಪಡುವಂತಹ ವಿಷಯವಾಗಿದ್ದು, ಯಾವುದೇ ವದಂತಿಗಳ ಕಡೆಗೆ ಗಮನ ಹರಿಸದೇ ನಿಮ್ಮ ಸುರಕ್ಷತೆಗಾಗಿ ಲಸಿಕೆ‌ ಪಡೆಯಿರಿ ಅಂತ ಸಲಹೆ ನೀಡಿದರು.

ENGLISH SUMMARY…

Minister Shashikala Jolle advices doctors to treat patients with humanity

Vijayapura, Apr. 23, 2021 (www.justkannada.in): Women and Welfare Minister Shashikala Jolle expressed her view that the entire country is sweeping under the second wave of the COVID-19 Pandemic and requested the medical fraternity to treat patients with a human heart and save the people.

She conducted a meeting with the government and private doctors today at the new Travellers Bungalow in Vijayapura to know the requirements and understand the COVID pandemic condition in the district. On the occasion, she requested the doctors to treat COVID patients as per their requirements.

“I request all the medical fraternity to respond properly to the woes of the people and take precautions to ensure that there will be no shortage of oxygen.” She also appealed to the doctors to give immediate attention to emergency cases.

Minister Shashikala Jolle also launched the COVID-19 vaccination program to the teaching and non-teaching staff organized by the Education Department, near the Gandhi Chowk in Vijayapura. She urged all the eligible citizens not to listen to rumors and take vaccination without fail.

“Covishield and Covaxin vaccinations are produced in India and it is indeed a matter of pride for all of us. Hence, please don’t listen to any kind of rumors and take the vaccination and stay safe,” she added.

Keywords: COVID-19 Pandemic/ vaccination/ Minister Shashikala Jolle/ Vijayapura

Key words: Minister- Shashikala Jolle- advises- doctors – treat -patients – humanitarian

The post ಮಾನವೀಯ ನೆಲೆ ಗಟ್ಟಿನ ಮೇಲೆ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ವೈದ್ಯರಿಗೆ ಸಚಿವೆ ಶಶಿಕಲಾ ಜೊಲ್ಲೆ ಸಲಹೆ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ-ಸಿಎಂಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ…
ಬೆಂಗಳೂರು,ಜು,7,2020(www.justkannada.in): ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

ಕರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಬಿಎಸ್ ವೈಗೆ ಒತ್ತಾಯಿಸಿದ್ದಾರೆ.

ಪ್ರಸ್ತುತ ಕೋವಿಡ್- 19 ಗೆ ಒಳಪಡಿಸುತ್ತಿರುವ ಪರೀಕ್ಷಾ ಸಾಮರ್ಥ್ಯ ವಿರುದ್ಧವೂ ಅಸಮಾಧಾನ ಹೊರ ಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಒಟ್ಟು 59 ಪರೀಕ್ಷಾ ಕೇಂದ್ರಗಳಿವೆ. ಅವುಗಳ ಪರೀಕ್ಷಾ ಸಾಮರ್ಥ್ಯ 31116. ಆದರೆ ಈಗ ಪ್ರತಿ ದಿನ ನಡೆಯುತ್ತಿರುವುದು ಕೇವಲ 13910 ಮಾತ್ರ. ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಸಿಎಂ ಬಿಎಸ್ ವೈ ಗೆ ಪ್ರಶ್ನೆ ಹಾಕಿದ್ದಾರೆ.

ಹಾಗೆಯೇ ಪರೀಕ್ಷಾ ಸಾಮರ್ಥ್ಯ ಹೆಚ್ಚಾದರೆ ಸೋಂಕಿತರು ಸಂಖ್ಯೆಯೂ ಜಾಸ್ತಿಯಾಗುತ್ತದೆ. ಆಗ ಅದೇ ಪ್ರಮಾಣದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ಜನರ ಸಾವಿಗೆ ಕಾರಣವಾದ ಸರ್ಕಾರವನ್ನು ಕೊಲೆಗಡುಕ ಸರ್ಕಾರ ಎಂದು ಕರೆದರೆ ತಪ್ಪೇ..? ಎಂದು ಸಿದ್ಧರಾಮಯ್ಯ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

Key words:  stringent -action –against- private hospitals -refuse – treat-former CM-Siddaramaiah

The post ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ-ಸಿಎಂಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.