this time | Just Kannada - Daily News Updates

ಈ ಬಾರಿ ಪರಿಸರ-ಸ್ನೇಹಿ ದೀಪಾವಳಿ ಆಚರಿಸಿ.
ಬೆಂಗಳೂರು, ಅಕ್ಟೋಬರ್ 12, 2022 (www.justkannada.in): ದೀಪಾವಳಿ ಇದೇ ತಿಂಗಳು 24 ರಿಂದ 26ರವರೆಗೆ ಆಚರಿಸಲಾಗುತ್ತದೆ. ಈ ಬಾರಿ ಹೆಚ್ಚು ಹೆಚ್ಚು ಜನರು, ಗಿಡವಾಗಿ ಬೆಳೆಯುವಂತಹ ನೆಡಬಲ್ಲ ಪರಿಸರ-ಸ್ನೇಹಿ ಪಟಾಕಿಗಳನ್ನು ಖರೀದಿಸಲು ಉತ್ಸಾಹ ತೋರುತ್ತಿದ್ದಾರೆ.

ನೆಡಬಲ್ಲಂತಹ ಪಟಾಕಿ ಅಥವಾ ಬಾಂಬ್, ಸಾಮಾನ್ಯವಾಗಿ ಲಭ್ಯವಾಗುವಂತಹ ಹಾನಿಕಾರಕ ಪಟಾಕಿಗಳಿಗಿಂತ ಬಹಳ ಭಿನ್ನವಾಗಿದೆ. ಈ ಪರಿಸರ-ಸ್ನೇಹಿ ಪಟಾಕಿಗಳನ್ನು ಮಣ್ಣಿನಲ್ಲಿ ನೆಡಬಹುದು.

ಬೆಂಗಳೂರು ಮೂಲದ ನವೋದ್ಯಮ ‘ಸೀಡ್ ಪೇಪರ್ ಇಂಡಿಯಾ’ದ ಮಾಲೀಕರಾದ ರೋಶನ್ ರೇ ಅವರು ಇಂತಹ ಅಪರೂಪದ ಪಟಾಕಿಗಳನ್ನು ತಯಾರಿಸಿದ್ದು, ಈ ಬಾರಿ ಜನರು ಅದರಲ್ಲಿಯೂ ವಿಶೇಷವಾಗಿ ಯುವಜನರು ಹೆಚ್ಚಾಗಿ ಈ ಪಟಾಕಿಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. ಈ ವಿಶೇಷ ಪಟಾಕಿಗಳು, ಮೇರಿಗೊಲ್ಡ್ (ಚೆಂಡು ಹೂ) ಬೀಜಗಳಿರುವಂತಹ ನೆಡಬಲ್ಲಂತಹ ರಾಕೆಟ್‌ ಗಳು, ಟೊಮೆಟೊ ಸಸಿಯಾಗಿ ಬೆಳೆಯುವಂತಹ ಲಕ್ಷ್ಮಿ ಪಟಾಕಿ, ಚಿಯಾ ಬೀಜಗಳಿರುವ ಚಕ್ರಗಳು, ತುಳಸಿ ಬೀಜಗಳಿರುವ ಪಟಾಕಿಗಳು, ಇತ್ಯಾದಿ ಒಳಗೊಂಡಂತೆ ವಿವಿಧ ವಿಧಗಳಲ್ಲಿ ಲಭ್ಯವಿದೆ. ಈ ಪಟಾಕಿಗಳನ್ನು ಮರುಬಳಕೆ ಮಾಡಿರುವ ಕಾಗದ ಹಾಗೂ ಸಸಿಗಳ ಬೀಜಗಳಿಂದ ತಯಾರಿಸಲ್ಪಟ್ಟಿವೆ.

“ಇಷ್ಟೊಂದು ಜನರು ಈ ಪಟಾಕಿಗಳನ್ನು ಖರೀದಿಸಲು ಆಸಕ್ತಿ ತೋರುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಆದರೆ ಈವರೆಗೆ ಅನೇಕ ಕಾಲೇಜು ವಿದ್ಯಾರ್ಥಿಗಳು ಈ ಪಟಾಕಿಗಳನ್ನು ಖರೀದಿಸುತ್ತಿದ್ದು, ಜೊತೆಗೆ ತಮ್ಮ ಸ್ನೇಹಿತರು ಹಾಗೂ ಇತರೆ ಸಂಬಂಧಿಕರಿಗೂ ಉಡುಗೊರೆಯಾಗಿ ನೀಡುತ್ತಿದ್ದಾರೆ,” ಎಂದು ರೋಶನ್ ತಿಳಿಸಿದರು.

ಸಾಂಪ್ರದಾಯಿತ ಪಟಾಕಿಗಳಂತಲ್ಲದೆ, ಈ ಪಟಾಕಿಗಳನ್ನು ಆನ್‌ ಲೈನ್ ಮೂಲಕವೂ ಖರೀದಿಸಬಹುದು ಅಥವಾ ಕೋರಿಯರ್ ಮೂಲಕವೂ ಸಹ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು. “ಈ ಪಟಾಕಿಗಳಲ್ಲಿ ಯಾವುದೇ ರೀತಿಯ ಹಾನಿಕಾರ ರಾಸಾಯನಿಕ ಪದಾರ್ಥಗಳು ಅಥವಾ ಗನ್‌ ಪೌಡರ್ ಇಲ್ಲ. ಹಾಗಾಗಿ ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಮೇಲಾಗಿ ಈ ಪಟಾಕಿಗಳನ್ನು ಮಾರಾಟ ಮಾಡಲು ಪರವಾನಗಿಯೂ ಬೇಕಿಲ್ಲ,” ಎಂದು ರೋಶನ್ ರೇ ವಿವರಿಸಿದರು.

ಈ ಪರಿಸರ-ಸ್ನೇಹಿ ಪಟಾಕಿಗಳಿಂದ ಗಾಯಗಳಾಗುವ ಗಂಡಾಂತರವೂ ಇಲ್ಲ. “ನನಗೆ ದೀಪಾವಳಿ ಆಚರಣೆಯ ಚಿತ್ರಣವನ್ನೇ ಬದಲಾಯಿಸುವ ಆಸೆ ಇದೆ. ಏಕೆಂದರೆ ದೀಪಾವಳಿ ಎಂದರೆ ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಶಬ್ದ ಹಾಗೂ ಸ್ಫೋಟಗಳೆಂದೇ ಜನರು ಭಾವಿಸುತ್ತಾರೆ. ನಾವು #dontburstgrow,” ಎಂಬ ಹ್ಯಾಶ್‌ ಟ್ಯಾಗ್ ಒಂದನ್ನೂ ಸಹ ಆರಂಭಿಸಿದ್ದೇವೆ,” ಎಂದರು.

“ದೇಶದ ಒಟ್ಟು ಪಟಾಕಿ ಉತ್ಪಾದನೆಯ ಪೈಕಿ ಶೇ.೯೦ರಷ್ಟು ಪಟಾಕಿಗಳನ್ನು ಉತ್ಪಾದಿಸುವ ಶಿವಕಾಶಿಗೆ ನಾನು ಒಮ್ಮೆ ಭೇಟಿ ನೀಡಿದೆ. ಅಲ್ಲಿ ಪಟಾಕಿ ತಯಾರಕರೊಂದಿಗೆ ಇಂತಹ ಪರಿಸರ-ಸ್ನೇಹಿ ಪಟಾಕಿಗಳ ತಯಾರಿಕೆಯ ಕುರಿತು ಚರ್ಚಿಸಿದೆ. ಆದರೆ ಬಹುತೇಕ ಅಲ್ಲಿ ಯಾರಿಗೂ ಇದರಲ್ಲಿ ಆಸಕ್ತಿ ಕಂಡು ಬರಲಿಲ್ಲ. ಏಕೆಂದರೆ ಸಾಂಪ್ರದಾಯಿಕ ಪಟಾಕಿಗಳ ತಯಾರಿಕೆಯ ಹೋಲಿಕೆಯಲ್ಲಿ ಇಂತಹ ಪರಿಸರ-ಸ್ನೇಹಿ ಪಟಾಕಿಗಳಿಂದ ಅವರಿಗೆ ಬರುವ ಲಾಭ ಬಹಳ ಕಡಿಮೆ,” ಎಂದು ವಿವರಿಸಿದರು.

ಕಾವ್ಯ ಸಿಂಗ್ ಎಂಬ ಹೆಸರಿನ ವಿದ್ಯಾರ್ಥಿನಿಯೊಬ್ಬರು ಈ ಬಾರಿ ದೀಪಾವಳಿಗೆ ಈ ಪರಿಸರ-ಸ್ನೇಹಿ ಪಟಾಕಿಗಳನ್ನು ಖರೀದಿಸಿದ್ದು, “ನಾನು ಚಿಕ್ಕಂದಿನಿಂದಲೂ ಎಂದಿಗೂ ಪಟಾಕಿಗಳನ್ನೇ ಸುಟ್ಟಿಲ್ಲ. ಆದರೆ ಈ ಬಾರಿ ದೀಪಾವಳಿ ಹಬ್ಬ ನನ್ನ ಪಾಲಿಗೆ ವಿಶೇಷವಾಗಿರಲಿದೆ. ಜೊತೆಗೆ ನಮ್ಮ ಕುಟುಂಬದ ಸದಸ್ಯರಿಗೂ ಸಹ ಇದೊಂದು ರೀತಿಯಲ್ಲಿ ಯೋಜನೆಯಾಗಲಿದೆ. ಏಕೆಂದರೆ ಹಬ್ಬ ಮುಗಿದ ನಂತರವೂ ಸಹ ಸಸಿಗಳನ್ನು ನೋಡಿಕೊಳ್ಳಬೇಕಾಗುತ್ತದೆ,” ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Celebrate – eco-friendly -Diwali -this time.

ಕೋವಿಡ್ ನಿಯಮ ಅನುಸರಿಸಿ ಬೆಳಗಾವಿಯಲ್ಲೇ ಈ ಬಾರಿ ಅಧಿವೇಶನ- ಸಚಿವ ಆರ್.ಅಶೋಕ್.
ಬೆಂಗಳೂರು,ಡಿಸೆಂಬರ್,1,2021(www.justkannada.in): ಬೆಳಗಾವಿ  ಸುವರ್ಣಸೌಧದಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ  ನಡೆಸಲು ಶಾಸಕರ ಅಪಸ್ವರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಕೋವಿಡ್ ನಿಯಮ ಅನುಸರಿಸಿ ಬೆಳಗಾವಿಯಲ್ಲೇ ಈ ಬಾರಿ ಅಧಿವೇಶನ ನಡೆಸುತ್ತೇವೆ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಈಗಾಗಲೇ ಎರಡು ವರ್ಷಗಳಿಂದ‌ ಬೆಳಗಾವಿ ಅಧಿವೇಶನವನ್ನು ಮುಂದೂಡುತ್ತಾ  ಬಂದಿದ್ದೇವೆ. ಈಗ ಇದ್ದಕ್ಕಿದ್ದಂತೆ ಅಧಿವೇಶನ ರದ್ದು ಮಾಡಿದ್ರೆ ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ ಜನರು ಕೂಡ ಭಯಭೀತರಾಗ್ತಾರೆ ಆದರಿಂದ ಇದು ಒಳ್ಳೆಯ ಸಂದೇಶ ಅಲ್ಲ. ಅಧಿವೇಶನ ಅಲ್ಲಿ ನಡೆಸಲೇಬೇಕಾಗಿದೆ. ಅದಕ್ಕಾಗಿ ಈ ಬಾರಿ ಅಲ್ಲಿ ಅಧಿವೇಶನ ನಡೆಸುತ್ತೇವೆ ಕೊವೀಡ್ ಸೂತ್ರ ತೆಗೆದುಕೊಂಡು ಅಧಿವೇಶನ ಸುಸೂತ್ರವಾಗಿ ನಡೆಸುತ್ತೇವೆ. ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಅಧಿವೇಶನ ನಡೆಯುತ್ತದೆ ಎಂದರು.

ರಾಜ್ಯಕ್ಕೆ ಒಮಿಕ್ರಾನ್ ಆತಂಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್ ಅಶೋಕ್, ಇದುವರೆಗೂ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ. ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ನಾವು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡೋಕೆ ಚಿಂತನೆ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ. ಆದರೆ ನಾವು ಮಾನಿಟರಿ ಮಾಡ್ತಿದ್ದೇವೆ. ಪ್ರತಿ ಜಿಲ್ಲೆಗಳ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ. ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ಎಚ್ಚರಿಕೆ ನೀಡಿದ್ದೇವೆ. ಆದರೆ ಸದ್ಯಕ್ಕಂತೂ ಎಲ್ಲಿಯೂ ಈ ರೀತಿಯ ಹೊಸತಳಿ ಪತ್ತೆಯಾಗಿಲ್ಲ.

ಇನ್ನು ದಕ್ಷಿಣ ಆಫ್ರಿಕಾ ಪ್ರಜೆಯ ರೋಗ ಲಕ್ಷಣ ವಿಭಿನ್ನ. ಒಂದು ವೇಳೆ  ಈ ರೋಗ ಒಮಿಕ್ರಾನ್ ರೀತಿ ಖಚಿತ ಆದರೆ ಬಿಗಿ ಕ್ರಮ ಗ್ಯಾರಂಟಿ. ಆದರೆ ಇದುವರೆಗೂ ಇದೇ ತಳಿ ಎಂದು ಖಚಿತ ಆಗಿಲ್ಲ. ಆದರೆ ಮುಂದೆ ಖಚಿತ ಆದರೆ ಬಿಗಿ ಕ್ರಮ ಮಾಡುತ್ತೇವೆ. ರಾಜ್ಯದ ಜನರ ಪ್ರಾಣ ರಕ್ಷಣೆ ಮಾಡೋದು ಸರ್ಕಾರದ ಜವಾಬ್ದಾರಿ. ಆ ದೃಷ್ಟಿಯಿಂದ ಎಲ್ಲಾ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷರಾಗಿ ನಮಗೆ ಆ ಜವಾಬ್ದಾರಿ ಇದೆ. ಒಂದು ವೇಳೆ ಆ ತಳಿ ಪತ್ತೆಯಾದ್ರೆ ಬಿಗಿ ಕ್ರಮ ಮಾಡೇ ಮಾಡುತ್ತೇವೆ ಎಂದು ಸಚಿವ ಅಶೋಕ್ ತಿಳಿಸಿದರು.

Key words: This time- session – covid rule- belgum-Minister- R. Ashok.

ENGLISH SUMMARY…

Winter session to be held at Belagavi bypassing COVID rules – Minister R. Ashok

Bengaluru, December 1, 2021 (www.justkannada.in): Revenue Minister R. Ashok has clarified that the winter session of the cabinet will be held at the Suvarna Soudha in Belagavi this year.

Speaking to the press persons today, he said, “We have been postponing the winter session at Belagavi for the last two years due to the pandemic. If it is cancelled this year also all of a sudden, it will send a wrong message to the people of that part of the state. They will become scared, which is not correct. Hence, it has become inevitable for us to conduct the winter session there. We are making all preparations to conduct the winter session at Belagavi by following all the COVID precautionary measures.”

Keywords: Revenue Minister R. Ashok/ winter session/ cabinet/ Belagavi

ಕೇರಳ ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ : ಡಿಸಿಎಂ ಸಿ.ಎನ್.‌ಅಶ್ವತ್ಥನಾರಾಯಣ
ಬೆಂಗಳೂರು,ಫೆಬ್ರವರಿ,28,2021(www.justkannada.in) : ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಭಾರತೀಯ ರಾಜಕಾರಣದಲ್ಲಿ ಅಪ್ರಸ್ತುತವಾಗಿವೆ. ಆ ರಾಜ್ಯದ ಜನರು ಈ ಬಾರಿ  ಬದಲಾವಣೆ ಬಯಸುತ್ತಿದ್ದಾರೆಂದು ಕೇರಳ ರಾಜ್ಯದ ಬಿಜೆಪಿ ಸಹ ಪ್ರಭಾರಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳದಲ್ಲಿ ಇವೆರಡೂ ರಾಜಕೀಯ ಒಕ್ಕೂಟಗಳು ಸಂಪೂರ್ಣ ವಿಫಲವಾಗಿವೆ. ಕೇವಲ ವೋಟ್‌ಬ್ಯಾಂಕ್‌ ಪಾಲಿಟಿಕ್ಸ್‌ ಮಾಡಿಕೊಂಡು ಕಳೆದ ಎಪ್ಪತ್ತು ವರ್ಷಗಳಿಂದ ಆ ರಾಜ್ಯವನ್ನು ಕತ್ತಲೆಯಲ್ಲೇ ಇಟ್ಟಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿದೆ ಎಂದರು.

ಈಗಿನ ಎಲ್‌ಡಿಎಫ್‌ ಸರಕಾರವಂತೂ ರಾಜಕೀಯ ಕಿರುಕುಳ ನೀಡುವುದು, ರಾಜಕೀಯ ಕೊಲೆಗಳು ಹಾಗೂ ಸೇಡಿನ ರಾಜಕೀಯದಲ್ಲಿ ನಿರತವಾಗಿದೆ. ಈ ಎರಡೂ ರಾಜಕೀಯ ಒಕ್ಕೂಟಗಳು ಎಲ್ಲ ಜನರಿಗೂ ಸಲ್ಲುವ ಪಕ್ಷಗಳಲ್ಲ. ಕೇವಲ ಜಾತಿ-ಜಾತಿಗಳ ನಡುವೆ ವೈಷಮ್ಯ ಭಿತ್ತಿ ಆ ಮೂಲಕ ರಾಜಕೀಯ ಲಾಭ ಪಡೆಯುತ್ತಿವೆ ಎಂದು ಟೀಕಿಸಿದರು.

ನಮ್ಮ ಭಾರತೀಯ ಸಂಸ್ಕೃತಿ, ಆಚಾರ ವಿಚಾರಕ್ಕೆ ವಿರುದ್ಧವಾಗಿರುವ ಎಲ್‌ಡಿಎಫ್‌ನಿಂದ ಕೇರಳಕ್ಕೆ ತುಂಬಾ ಹಾನಿಯಾಗಿದೆ. ಕಮ್ಯುನಿಸ್ಟ್‌ ಪಕ್ಷಗಳು ನಮ್ಮ ದೇಶದಲ್ಲಿ ಅಪ್ರಸ್ತುತವಾಗಿವೆ. ಎಲ್ಲ ಕಡೆ ಅಧಿಕಾರ ಕಳೆದುಕೊಂಡು ಈ ಕೇರಳದಲ್ಲೂ ನಿರ್ನಾಮದ ಹಂತದಲ್ಲಿದೆ. ಅದೇ ರೀತಿ ಕಾಂಗ್ರೆಸ್‌ ಪಕ್ಷವೂ ದೇಶಾದ್ಯಂತ ಹೇಳ ಹೆಸರಿಲ್ಲದೆ ಹೋಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

key words : Kerala-state-People-This time-Change-Looking-DCM C.N. Ashwaththanarayana

ಬಿಬಿಎಂಪಿಯ ಅಧಿಕಾರ ಈ ಬಾರಿ ಬಿಜೆಪಿಗೆ- ಸಚಿವ ವಿ.ಸೋಮಣ್ಣ ವಿಶ್ವಾಸ…
ಬೆಂಗಳೂರು,ಸೆ,6,2019(www.justkannada.in):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಈ ಬಾರಿ ಅಧಿಕಾರ‌ ಹಿಡಿಯಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ  ವಸತಿ ಸಚಿವ ವಿ.ಸೋಮಣ್ಣ ಬಿಬಿಎಂಪಿಯಲ್ಲಿ ಬಿಜೆಪಿ ಈ ಬಾರಿ ಅಧಿಕಾರ‌ ಹಿಡಿಯಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಪಾಲಿಕೆಯಲ್ಲಿ ನಮಗೆ ಅಧಿಕಾರ ಬಂದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ ಎಂಬುದು ಎಲ್ಲ ಸದಸ್ಯರ ಅಭಿಪ್ರಾಯ ವಾಗಿದೆ. ಹೀಗಾಗಿ ಬಿಜೆಪಿ ಈ ಬಾರಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.

ಮೈಸೂರು ದಸರಾ ಯಶಸ್ವಿಯಾಗಿ ನಡೆಸಲು ಎಲ್ಲ ಸಿದ್ದತೆ ಮಾಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದು ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಸಚಿವ ಸೋಮಣ್ಣರನ್ನ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್…

ಬೆಂಗಳೂರಿನಲ್ಲಿ ವಸತಿ ಸಚಿವ ಸೋಮಣ್ಣ ಅವರನ್ನ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿಯಾಗಿ ಚರ್ಚಿಸಿದರು. ಬಳಿಕ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಸೋಮಣ್ಣ ಪಕ್ಷದ ಹಿರಿಯರು. ಅವರ ಜತೆ ಸಂಘಟನೆ ಕುರಿತು ಚರ್ಚಿಸಲಾಗಿದೆ. ಸ್ಥಳೀಯ ನಾಯಕರ ಜತೆಗೂ ಮಾತುಕತೆ ‌ನಡೆಸಲಾಗಿದೆ. ಇಂದು ಬಿಜೆಪಿ ಕೋರ್ ಕಮಿಟಿ ಸಭೆ ಇದ್ದು ಪಕ್ಷದ ಚಟುವಟಿಕೆ ‌ಕುರಿತು ಚರ್ಚಿಸಲಾಗುವುದು. ಸೋಮಣ್ಣ ಅವರ ಮಾರ್ಗ ದರ್ಶನ ಪಡೆದು ಸಲಹೆ ಸೂಚನೆಗಳನ್ನು ಕೇಳಿದ್ದೇನೆ ಎಂದರು.

Key words: power -BBMP -BJP -this time-Minister- V. Somanna -Confidence.