sweet Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ನಾಯಕತ್ವ ಪಲ್ಲಟ: ಮೈಸೂರಿನಲ್ಲಿ ಸಿಹಿ-ಕಹಿ ಭಾವನೆ
ಮೈಸೂರು, ಮೇ,29, 2026 (www.justkannada.in): ತವರು ಮಗ ಸಿದ್ದರಾಮಯ್ಯ ನಿರ್ಗಮನಕ್ಕೆ ಬೇಸರ, ಅಳಿಯ ಡಿ.ಕೆ.ಶಿವಕುಮಾರ್‌ ಗೆ ಮುಖ್ಯಮಂತ್ರಿ ಪಟ್ಟಕ್ಕೆ ಸಂಭ್ರಮ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಮೈಸೂರು ಜಿಲ್ಲೆಯಲ್ಲಿ ಸಿಹಿ-ಕಹಿ ಭಾವನೆಗಳನ್ನು ಮೂಡಿಸಿದೆ. ಒಂದೆಡೆ ಜಿಲ್ಲೆಯ ಹೆಮ್ಮೆಯ ನಾಯಕ ಹಾಗೂ ತವರು ಮಗನಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವುದಕ್ಕೆ ಬೇಸರ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಮೈಸೂರಿನ ಅಳಿಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರಲಿದ್ದಾರೆ ಎಂಬ ನಿರೀಕ್ಷೆ ಸಂಭ್ರಮಕ್ಕೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಿಸಿರುವ ಹಿನ್ನೆಲೆಯಲ್ಲಿ, ಅವರ ಹುಟ್ಟೂರು ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ನಿರಾಸೆಯ ವಾತಾವರಣ ಕಂಡುಬಂದಿತು. ಗ್ರಾಮಸ್ಥರು ತಮ್ಮ ಊರಿನ ಮಗ ಮುಖ್ಯಮಂತ್ರಿ ಸ್ಥಾನ ತೊರೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದು, ಹಲವರು ಈ ಬೆಳವಣಿಗೆಯನ್ನು ಮೌನವಾಗಿ ನೋಡುವಂತಾಗಿದೆ.

ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಐದು ವರ್ಷಗಳ ಕಾಲ ಹಾಗೂ 2023ರ ಮೇ ತಿಂಗಳಿನಿಂದ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ್ದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ನಂತರ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೈಸೂರು ಜಿಲ್ಲೆಯ ನಾಯಕರಾಗಿ ಗುರುತಿಸಿಕೊಂಡಿದ್ದರು.

2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ಬಂದಿತ್ತು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಈ ಕುರಿತು ಯಾವುದೇ ಅಧಿಕೃತ ಒಪ್ಪಂದವಿಲ್ಲ ಎಂದು ಸಿದ್ದರಾಮಯ್ಯ ನಿರಂತರವಾಗಿ ಹೇಳುತ್ತಲೇ ಬಂದಿದ್ದರು. ಇದೀಗ ಹೈಕಮಾಂಡ್ ನಾಯಕರ ಭೇಟಿಯ ಬಳಿಕ ಅವರು ರಾಜೀನಾಮೆ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರ ನಿರ್ಗಮನ ಮೈಸೂರು ಜಿಲ್ಲೆಯಲ್ಲಿ ಬೇಸರ ಮೂಡಿಸಿದ್ದರೂ, ಇದೇ ವೇಳೆ ಜಿಲ್ಲೆಯ ಅಳಿಯ ಎಂದೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಸಾಧ್ಯತೆ ಸ್ಥಳೀಯರಲ್ಲಿ ಸಂತಸ ತಂದಿದೆ. ಮೈಸೂರಿನ ಉದ್ಯಮಿ ಆರ್. ತಿಮ್ಮಯ್ಯ (ಪಾಪಣ್ಣ) ಅವರ ಪುತ್ರಿಯನ್ನು ವಿವಾಹವಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲೆಯ ಜನತೆ ತಮ್ಮ ಅಳಿಯ ಎಂದು ಕರೆಯುತ್ತಾರೆ. ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಮಾವನ ಮನೆಗೆ ಭೇಟಿ ನೀಡುತ್ತಿದ್ದ ಅವರು, ಸ್ಥಳೀಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಕಾರಣ ಜನರಲ್ಲಿ ವಿಶೇಷ ಅಭಿಮಾನ ಗಳಿಸಿದ್ದರು.

“ಡಿ.ಕೆ.ಶಿವಕುಮಾರ್ ನಮ್ಮ ಊರಿನ ಅಳಿಯ. ಮೈಸೂರಿನ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಪಾಪಣ್ಣ ಅವರ ಅಳಿಯ ಮುಖ್ಯಮಂತ್ರಿ ಆಗುತ್ತಿರುವುದು ಖುಷಿಯ ಸಂಗತಿ” ಎಂದು ಸ್ಥಳೀಯ ನಿವಾಸಿ ಎಡ್ವಿನ್ ಸಂತಸ ವ್ಯಕ್ತಪಡಿಸಿದರು.

ಸಿದ್ದರಾಮನಹುಂಡಿಯಲ್ಲಿ ಬೇಸರದ ಛಾಯೆ

ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ ಸುದ್ದಿ ಹೊರಬಿದ್ದ ಬಳಿಕ ಸಿದ್ದರಾಮನಹುಂಡಿ ಗ್ರಾಮದಲ್ಲಿ ಬೇಸರದ ವಾತಾವರಣ ನಿರ್ಮಾಣವಾಯಿತು. ಅನೇಕರು ಮನೆಗಳಲ್ಲೇ ಕುಳಿತು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದರು.

“ನಮ್ಮೂರಿನ ಮಗ ಮುಖ್ಯಮಂತ್ರಿ ಸ್ಥಾನ ತೊರೆಯುತ್ತಿರುವುದು ಬೇಸರದ ಸಂಗತಿ. ಅವರು ಉತ್ತಮ ಆಡಳಿತ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜೀನಾಮೆ ಯಾಕೆ ಬೇಕಾಯಿತು ಎಂಬ ಪ್ರಶ್ನೆ ಕಾಡುತ್ತಿದೆ” ಎಂದು ಗ್ರಾಮದ ಮುಖಂಡ ಚಿಕ್ಕರಂಗೇಗೌಡ ಅಭಿಪ್ರಾಯಪಟ್ಟರು.

ಒಟ್ಟಾರೆ, ತವರು ಮಗನ ನಿರ್ಗಮನದ ನೋವು ಮತ್ತು ಅಳಿಯನಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ನಿರೀಕ್ಷೆಯ ಸಂತಸ—ಈ ಎರಡೂ ಭಾವನೆಗಳು ಮೈಸೂರು ಜಿಲ್ಲೆಯಲ್ಲಿ ಒಂದೇ ವೇಳೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ENGLISH SUMMARY…

Mixed Emotions in Mysuru Over Leadership Change

Mysuru district is witnessing mixed emotions following the leadership change in the Karnataka Congress government. While people are disappointed that hometown leader Siddaramaiah is stepping down as Chief Minister, there is also excitement over the possibility of Mysuru’s son-in-law D.K. Shivakumar taking over the top post.

A sense of sadness prevailed in Siddaramaiah’s native village, Siddaramanahundi, where residents praised his leadership and expressed disappointment over his exit. At the same time, many in Mysuru are celebrating the rise of D.K. Shivakumar, who is considered the district’s “son-in-law” through his family ties to the city.

The leadership transition has thus created a unique blend of pride, joy, and disappointment across Mysuru.

Key words: Leadership, change, Sweet, bitter, feelings, Mysore, Siddaramaiah, DK Shivakumar

The post ನಾಯಕತ್ವ ಪಲ್ಲಟ: ಮೈಸೂರಿನಲ್ಲಿ ಸಿಹಿ-ಕಹಿ ಭಾವನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದಸರಾ, ದೀಪಾವಳಿಯಲ್ಲಿ ನಂದಿನಿ ಬ್ರಾಂಡ್‌ ನಿಂದ ದಾಖಲೆಯ ಸಿಹಿ ಮಾರಾಟ
ಮೈಸೂರು,ಅಕ್ಟೋಬರ್,21,2025 (www.justkannada.in): ದಸರಾ, ದೀಪಾವಳಿ ಅವಧಿಯಲ್ಲಿ ರಾಜ್ಯದ ಹೆಮ್ಮೆಯ “ನಂದಿನಿ” ಬ್ರಾಂಡ್‌ನಿಂದ ದಾಖಲೆಯ ಸಿಹಿ ಮಾರಾಟವಾಗಿದೆ.

2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಒಟ್ಟು 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ರೂ.33.48 ಕೋಟಿ ವಹಿವಾಟು ದಾಖಲಿಸಲಾಗಿತ್ತು. ಈ ಬಾರಿ 2025ರ ಹಬ್ಬದ ಅವಧಿಗೆ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಯಿತು.

ಸದರಿ ಗುರಿಯನ್ನು ಮೀರಿ ಈ ವರ್ಷ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು “ಒಟ್ಟಾಗಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ ರೂ. 46.00 ಕೋಟಿಗಳ ದಾಖಲೆಯ ವಹಿವಾಟು ಸಾಧಿಸುವ ಮೂಲಕ ಒಂದು ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ.38 ರಷ್ಟು ವಹಿವಾಟು ಪ್ರಗತಿಯಾಗಿದ್ದು “ಇದು ಕೆ.ಎಂ.ಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ.

ಈ ಸಾಧನೆ ನಂದಿನಿ ಬ್ರಾಂಡ್‌ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Key words: Nandini Brand, Record, Sweet ,Sales

The post ದಸರಾ, ದೀಪಾವಳಿಯಲ್ಲಿ ನಂದಿನಿ ಬ್ರಾಂಡ್‌ ನಿಂದ ದಾಖಲೆಯ ಸಿಹಿ ಮಾರಾಟ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಮೈಸೂರು ನಗರಕ್ಕೆ ಚಿತ್ರನಗರಿ ಸ್ಥಳಾಂತರ: ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ”
ಮೈಸೂರು,ಮಾರ್ಚ್,18,2021(www.justkannada.in) : ಮೈಸೂರು ನಗರಕ್ಕೆ ಚಿತ್ರನಗರಿ ಸ್ಥಳಾಂತರಿಸುವುದನ್ನು ಸ್ವಾಗತಿಸಿ ಜಗನ್ಮೋಹನ ಅರಮನೆ ಮುಂಭಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾವಚಿತ್ರ ಹಿಡಿದು ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ಹಾಗೂ ಪಾತಿ ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.ಈ ಸಂದರ್ಭ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ  ಮಾತನಾಡಿ, ಮುಖ್ಯಮಂತ್ರಿಗಳಿಗೆ ಪ್ರವಾಸೋದ್ಯಮದ ಪರವಾಗಿ, ಕಲಾವಿದರ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. ಚಿತ್ರನಗರಿ ಈಗಾಗಲೇ ಪ್ರಾರಂಭವಾಗಬೇಕಿತ್ತು. ಕೆಲವು ರಾಜಕಾರಣದ ಷಡ್ಯಂತ್ರದಿಂದ ಬದಲಾದ ಸರ್ಕಾರಗಳು, ಬದಲಾದ ಪರಿಸ್ಥಿತಿಯಿಂದ ವಿಳಂಬವಾಗಿದೆ ಎಂದರು.

ಮೈಸೂರು ಮಹಾರಾಜರ ಕೊಡುಗೆಯಾಗಿದ್ದು, ನಮ್ಮ ಮೈಸೂರಿನಲ್ಲಿ ಚಿತ್ರನಗರಿಯಾದರೆ ವೇಗವಾಗಿ ಮೈಸೂರು ಸಹ ಬೆಳೆಯುತ್ತದೆ. ಹೀಗಾಗಿ, ಚಿತ್ರ ನಗರಿಯ ಗುದ್ದಲಿ ಪೂಜೆ ಕಾಮಗಾರಿ ಬೇಗ ಆಗಬೇಕೆಂದು ಸರ್ಕಾರದಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಮುಡಾ ಸದಸ್ಯ ನವೀನ್ ಕುಮಾರ್, ಬಿಜೆಪಿ ಮುಖಂಡ ಪರಮೇಶ್ ಗೌಡ, ಟಿ.ಎಸ್.ಅರುಣ್ ಇನ್ನಿತರರು ಹಾಜರಿದ್ದರು.,

key words : city-Mysore-Picture City-Displacement-public-Share-sweet

The post “ಮೈಸೂರು ನಗರಕ್ಕೆ ಚಿತ್ರನಗರಿ ಸ್ಥಳಾಂತರ:  ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ” appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ವರಿಷ್ಠರಿಂದ ಶೀಘ್ರವೇ ಸಿಹಿ ಸುದ್ಧಿ”: ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಜನವರಿ,10,2021(www.justkannada.in) : ರಾಷ್ಟ್ರನಾಯಕರ ಜೊತೆಗಿನ ಸಭೆ ಸಂತೋಷವನ್ನುಂಟು ಮಾಡಿದೆ. ವರಿಷ್ಠರು ಶೀಘ್ರವೇ ಸಿಹಿ ಸುದ್ಧಿ ನೀಡಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಾಷ್ಟ್ರನಾಯಕರ ಜೊತೆಗಿನ ಸಭೆಯು ಸಂತೋಷ, ಸಮಾಧಾನ, ತೃಪ್ತಿಕರವಾದ ಚರ್ಚೆಯಾಗಿದೆ. ಉಪಚುನಾವಣೆ ಸೇರಿದಂತೆ ಗ್ರಾಪಂ ಚುನಾವಣೆ ಸಂಬಂಧ ಚರ್ಚಿಸಲಾಯಿತು.

ಶೀಘ್ರವೇ ಅಮಿತ್ ಶಾ ಬೆಂಗಳೂರಿಗೆ ಬರಲಿದ್ದಾರೆ. ನಮ್ಮ ಬೇಡಿಕೆಗಳಿಗೆ ಕೇಂದ್ರ ನಾಯಕರು ಸ್ಪಂದಿಸುತ್ತಾರೆ. ಆದಷ್ಟು ಬೇಗ ಶುಭ ಸುದ್ದಿ ಕೊಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

key words : nobles-Soon-Sweet-news-CM B.S.Yeddyurappa

The post “ವರಿಷ್ಠರಿಂದ ಶೀಘ್ರವೇ ಸಿಹಿ ಸುದ್ಧಿ”: ಸಿಎಂ ಬಿ.ಎಸ್.ಯಡಿಯೂರಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ಸಿಹಿ ಸುದ್ದಿ : ಪರೀಕ್ಷೆಯಿಲ್ಲದೆ ಪಾಸ್
ಮೈಸೂರು,ಡಿಸೆಂಬರ್,03,2020(www.justkannada.in) : ಯುಜಿಸಿ ಗೈಡ್ ಲೈನ್ ಪ್ರಕಾರ ಯುಜಿ, ಪಿಜಿ ಪರೀಕ್ಷೆ ಮುಗಿಸಿದ್ದೇವೆ. 1ನೇ ಮತ್ತು 3ನೇ ಸೆಮಿಸ್ಟರ್ ನಲ್ಲಿ ಪಾಸ್ ಆದರೆ, ಬಾಕಿ ವಿಷಯಗಳು ಪಾಸ್ ಎಂದು  ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ  ಡಾ.ಮಹದೇವನ್ ತಿಳಿಸಿದ್ದಾರೆ.

ಕಳೆದ ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕದ ಆಧಾರದ ಮೇಲೆ ಪಾಸ್

ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಸಿಹಿ ಸುದ್ದಿ ನೀಡಿದೆ. 2 ಮತ್ತು 4ನೇ ಸೆಮಿಸ್ಟರ್ ಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಮೈಸೂರು ವಿವಿ ನಿರ್ಧರಿಸಿದ್ದು, ಬಾಕಿಯಿದ್ದ ವಿಷಯಗಳ ಪರೀಕ್ಷೆ ಬರೆಯದೇ ಮುಂದಿನ ಸೆಮಿಸ್ಟರ್ಗೆ ಜಿಗಿದು  ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದಿದ್ದಾರೆ.  ಕೋವಿಡ್ ಹಿನ್ನಲೆ ಮೈಸೂರು ವಿವಿ ಈ ನಿರ್ಧಾರ ಕೈಗೊಂಡಿದೆ.ಈ ಮೂಲಕ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿಂತ ರಾಜ್ಯದ ಮೊದಲ ವಿವಿ ಮೈಸೂರು ವಿವಿಯಾಗಿದೆ. ಕಳೆದ ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕದ ಆಧಾರದ ಮೇಲೆ ಪಾಸ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ತಜ್ಞರ ಸಲಹೆ ಸೂಚನೆಗಳಂತೆ ನಿರ್ಧಾರ

ಸರ್ಕಾರದ ಅನುಮತಿಯಂತೆ ವಿವಿ ತಜ್ಞರ ಸಲಹೆ ಸೂಚನೆಗಳಂತೆ ಪ್ರಥಮ ಮತ್ತು ಮೂರನೇ ಸೆಮಿಸ್ಟರ್ ನಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ 2 ಮತ್ತು 4ನೇ ಸೆಮಿಸ್ಟರ್ ಪಾಸ್ ಮಾಡಲಾಗಿದೆ. ಅಂಕಪಟ್ಟಿಯನ್ನು ನೀಡಲಾಗಿದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ  ಡಾ.ಮಹದೇವನ್ ಮಾಹಿತಿ ನೀಡಿದ್ದಾರೆ.

ಈ ಅಂಕಪಟ್ಟಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಪರೀಕ್ಷೆ ಬರೆದು ಪಾಸ್ ಆದ ರೀತಿಯಲ್ಲೇ ಅಂಕಪಟ್ಟಿ ಇರಲಿದೆ. ಕಾರಣ ಸ್ಕಾಲರ್ಶಿಪ್ ಪಡೆಯಲು ನವೆಂಬರ್ 20 ಕೊನೆ ದಿನವಾಗಿತ್ತು. ಈ ಹಿನ್ನಲೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದಿನಾಂಕ ಮುಗಿಯುವ ಅವಧಿಯೊಳಗೆ ಅಂಕಪಟ್ಟಿ ವಿತರಿಸಿದೆ. ಕೊರೊನಾದಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿರಲಿಲ್ಲ. ಅಂತವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದರು.

ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 113 ಅರ್ಜಿಗಳು ಬಂದಿವೆ. ಈ ಟೈಮ್ ಟೇಬಲ್ ರೆಡಿಯಾಗಿದೆ. ಎಕ್ಸಾಮ್ ಮುಗಿದ ಮುರ್ನಾಲ್ಕು ದಿನಗಳಲ್ಲಿ ಮೌಲ್ಯಮಾಪನ ಮುಗಿಸಿ ರಿಸಲ್ಟ್ ನೀಡುವ ಮೂಲಕ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ  ಡಾ.ಮಹದೇವನ್ ತಿಳಿಸಿದ್ದಾರೆ.

English summary….

Good news for Mysore University Degree and PG students: Pass without exams

Mysuru, Dec. 3, 2020 (www.justkannada.in): “We have successfully conducted the UG, PG exams as per UGC guidelines. If the students have passed in1st and 3rd semesters, they will be promoted,” informed Dr. Mahadevan, Registrar, Mysore University.

The University authorities have decided to promote the students of the 2nd and 4th semesters without conducting the exams. Accordingly, the students can now go to the next semester without writing the exams of the remaining subjects. The University has taken this decision due to the COVID pandemic.

Keywords: Mysore University/ students pass without exams

key words : graduate-postgraduate-students-Sweet-news-Mysore Vivi-Pass- without-exam

The post ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ಸಿಹಿ ಸುದ್ದಿ : ಪರೀಕ್ಷೆಯಿಲ್ಲದೆ ಪಾಸ್  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಗೆಯ ಬುಗ್ಗೆ, ನವಿರು ಪ್ರೇಮಕಥೆಯ ಕನ್ನಡ ವ್ಯಾಕರಣ ಸವರ್ಣದೀರ್ಘ ಸಂಧಿ….’
ಬೆಂಗಳೂರು,ಅ,18,2019(www.justkannada.in):  ಕನ್ನಡ ಮಣ್ಣಿನ ಘಮಲನ್ನು ಪಸರಿಸುತ್ತಾ ಇಂದಿನ ದಿನಮಾನಕ್ಕೆ ಸರಿ ಹೊಂದುವಂತಹ ಕಥೆಯನ್ನು ಹಾಸ್ಯ ರೂಪದಲ್ಲಿ ಹೇಳುತ್ತಾ ಬಂದಿರುವ ಹೊಸಬರ ಚಿತ್ರ ಸವರ್ಣದೀರ್ಘ ಸಂಧಿ ಸಿನಿ ಪ್ರೇಕ್ಷಕರ ಮನ ಗೆದ್ದಿದೆ.

ಸವರ್ಣದೀರ್ಘ ಸಂಧಿ ಚಿತ್ರದಲ್ಲಿ ಗಮನ ಸೆಳೆಯುವುದು ಪಾತ್ರಗಳ ಹೆಸರುಗಳು. ಕನ್ನಡ ಕವಿಯ ಹೆಸರನ್ನು ಇಟ್ಟುಕೊಂಡ ನಾಯಕ ಮುದ್ದಣ್ಣ (ವೀರೇಂದ್ರ ಶೆಟ್ಟಿ) ರೌಡಿ ಗ್ಯಾಂಗ್ ಕಟ್ಟಿಕೊಂಡಿರುತ್ತಾನೆ. ಸಮಾಜಕ್ಕೆ ಉಪಕಾರ ಮಾಡಲು ರೌಡಿಸಂ ಮಾಡುವುದು ಈ ತಂಡದ ವಿಶೇಷ.

ತಮ್ಮ ಕಾಯಕವನ್ನು ಪಾಸಿಟಿವ್ ರೌಡಿಸಂ ಎಂದು ಕರೆದುಕೊಳ್ಳುತ್ತಾರೆ.  ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ರಕ್ಷಿಸಲು ಇವರ ಗ್ಯಾಂಗ್ ನಲ್ಲಿ ಒಬ್ಬ ಲಾಯರ್ ಇರುತ್ತಾನೆ. ಫ್ಲಾಶ್ ಬ್ಯಾಕ್ ಒಂದರಲ್ಲಿ ಹಳ್ಳಿಯಲ್ಲಿ ಅನಾಥನಾಗಿ ಜೀತದಾಳು ಕೆಲಸ ಮಾಡುತ್ತಾ ಬೆಳೆಯುವ ನಾಯಕ ತಿಮ್ಮ (ಬಾಲ್ಯದ ಹೆಸರು) ಕೆಲಸ ಮಾಡುವ ಹುಡುಗನ ಜೊತೆ ಕನ್ನಡ ಮೇಷ್ಟ್ರ ಬಳಿ ವ್ಯಾಕರಣ ಪಾಠ ಕಲಿಯುವ ದೃಶ್ಯಗಳು ಮೂಡಿಬರುತ್ತವೆ.

ಮೇಷ್ಟ್ರ ಮಗಳು ಮನೋರಮೆಯ ಜೊತೆ ಸ್ನೇಹವೂ ಆಗುತ್ತದೆ. ಆದರೆ ಆಕಸ್ಮಿಕ ಘಟನೆಯಿಂದ ಮೇಷ್ಟ್ರ ಸಖ್ಯದಿಂದ ದೂರವಾಗಿ ನಗರ ಸೇರುತ್ತಾನೆ. ಅಲ್ಲಿ ಪೈಲ್ವಾನ್ ಮನೆ ಸೇರುತ್ತಾನೆ. ಇವನೇ ಮುಂದೆ ಮುದ್ದಣ್ಣ ಎಂದು ಪ್ರಖ್ಯಾತಿ ಪಡೆಯುತ್ತಾನೆ.  ಪೈಲ್ವಾನ್ ನಿಧನದ ನಂತರ ರೌಡಿಗಳ ಗ್ಯಾಂಗನ್ನು ಮುನ್ನಡೆಸುತ್ತಾನೆ.

ಇಲ್ಲಿ ನಾಯಕ ಅವಿದ್ಯಾವಂತನಾದರೂ ಕನ್ನಡ ವ್ಯಾಕರಣದಲ್ಲಿ ಉದ್ಧಾಮ ಪಂಡಿತ. ಕನ್ನಡ ಸಂಧಿ, ಪದ್ಯಗಳು ಅವನ ಬಾಯಲ್ಲಿ ಆಗಾಗ ಕೇಳಿ ಬರುತ್ತವೆ. ನಾಯಕನ ಊರಿಗೆ ಹೊಸದಾಗಿ ಬರುವ ಪೊಲೀಸ್ ಕಪಾಲೀಶ್ವರನ್ ಮುದ್ದಣ್ಣ ಗ್ಯಾಂಗ್‍ನ  ನಾಯಕ ಮುದ್ದಣ್ಣನನ್ನು ಹೇಗಾದರೂ ಮಾಡಿ ಜೈಲಿಗಟ್ಟಬೇಕು ಎಂದು ಶಪಥ ಮಾಡುತ್ತಾನೆ. ಇವರಿಬ್ಬರ ನಡುವಿನ ತಾಕಲಾಟವೇ ಚಿತ್ರದ ಹೂರಣ.

ಪರೋಪಕಾರಿ ರೌಡಿಸಂ, ಕನ್ನಡ ವ್ಯಾಕರಣ ಪಾಠಗಳ ನಡುವೆ ಪ್ರೀತಿಯ ಎಳೆಯೂ ಇದೆ. ನಾಯಕನ ಸಾಮಾಜಿಕ ಕೆಲಸವನ್ನು ನೋಡಿ ಗಾಯಕಿಯಾದ ನಾಯಕಿ ಅಮೃತವರ್ಷಿಣಿಗೆ (ಕೃಷ್ಣ) ಪ್ರೇಮಾಂಕುರವಾಗುತ್ತದೆ. ನಾಯಕನ ಕನ್ನಡ ಪ್ರೇಮವನ್ನು ಕಂಡು ಇನ್ನೂ ಹತ್ತಿರವಾಗುತ್ತಾಳೆ. ಆದರೆ ವೈರಿಗಳ ಕುತಂತ್ರದಿಂದ ನಾಯಕಿ ನಾಯಕನಿಂದ ದೂರವಾಗಬೇಕಾಗುತ್ತದೆ. ಇಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತದೆ.

ನಾಯಕನ ವೈರಿಗಳಾರು, ನಾಯಕಿ ಏಕೆ ದೂರವಾಗುತ್ತಾಳೆ, ಮುದ್ದಣ್ಣನಿಗೆ ಆಕೆ ಸಿಗುತ್ತಾಳೆಯೇ, ನಾಯಕ ತನ್ನ ವೈರಿಗಳನ್ನು ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಕುತೂಹಲಕಾರಿ ಅಂಶಗಳಿಗೆ ಚಿತ್ರ ನೋಡಿಯೇ ಉತ್ತರ ಕಂಡುಕೊಳ್ಳಬೇಕು.

ಸನ್ನಿವೇಶಕ್ಕೆ ತಕ್ಕಂತೆ ನಾಯಕನ ಬಾಯಲ್ಲಿ ನುಡಿಯುವ ಸಂಧಿ, ಪದ್ಯಗಳು, ಪೊಲೀಸರನ್ನು ಗೇಲಿ ಮಾಡಲು ಅವುಗಳನ್ನು ಬಳಸಿಕೊಳ್ಳುವ ಪರಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ (ಸಂಭಾಷಣೆ ವೀರೇಂದ್ರ ಶೆಟ್ಟಿ).

ಸಂಭಾಷಣೆಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ. ಅಲ್ಲದೆ ಕನ್ನಡ ವ್ಯಾಕರಣದ ಸವರ್ಣದೀರ್ಘ ಸಂಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಮೊದಲ ಚಿತ್ರದಲ್ಲಿಯೇ ನಾಯಕಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ವ್ಯಾಕರಣ ಪಾಠ ಮಾಡುವ ಮೇಷ್ಟ್ರ ಪಾತ್ರವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಉಳಿದಂತೆ ಬರುವ ಪೊಲೀಸರು, ರೌಡಿಗಳು, ಇತರ ಪಾತ್ರಗಳೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪದ್ಮಜಾರಾವ್? ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಿತ್ರದ ಗಟ್ಟಿಯಾದ ಕಥಾನಕವನ್ನು ಇನ್ನೊಂದಷ್ಟು ಸೊಗಸಾಗಿ ತೋರಿಸಬಹುದಿತ್ತು. ಆದರೂ ನಿರೂಪಣೆಯಿಂದ ಸಿನಿರಸಿಕರನ್ನು ಸೆಳೆಯುತ್ತದೆ. ಮನೋಮೂರ್ತಿಯವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ “ಕೊರಳಾದೆ ನಾ ಕೃಷ್ಣ ನಿನ್ನ ಕೈಯಲ್ಲಿ..” ಸೇರಿದಂತೆ ಇತರ ಗೀತೆಗಳು ಕೇಳಲು ಇಂಪಾಗಿವೆ.

ಚಿತ್ರದ ಮೊದಲಾರ್ಧದಲ್ಲಿ ಕಂಡು ಬರುವ ಮಲೆನಾಡ ಸೌಂದರ್ಯವನ್ನು ಕ್ಯಾಮರಾ ಆಕರ್ಷಕವಾಗಿ ಸೆರೆ ಹಿಡಿದಿದೆ (ಛಾಯಾಗ್ರಹಣ ಲೋಕನಾಥ್).

ವೀರೇಂದ್ರ ಶೆಟ್ಟಿ ಸವರ್ಣದೀರ್ಘ ಸಂಧಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.

ನಿರ್ಮಾಣದ ನೊಗವನ್ನೂ ಹೊತ್ತಿರುವ ವೀರೇಂದ್ರ ಅವರು ನಾಯಕನಾಗಿಯೂ ಗಮನ ಸೆಳೆದಿದ್ದಾರೆ. ಆದರೆ ಕೆಲವು ಸನ್ನಿವೇಶಗಳಿಗೆ ಜೀವ ತುಂಬಬಹುದಿತ್ತು ಎನಿಸದೆ ಇರದು. ಸಂಕೇತ್ ಶಿವಪ್ಪ ಸಂಕಲನ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ.

“ಅದು ಸುವರ್ಣದೀರ್ಘ ಅಲ್ಲ ಸವರ್ಣದೀರ್ಘ ಸಂಧಿ” ಎಂದು ಚಿತ್ರದಲ್ಲಿ ಆಗಾಗ ಕೇಳಿ ಬರುವ ಸಾಲುಗಳು ಕನ್ನಡ ಪದಗಳನ್ನು ತಪ್ಪಾಗಿ ಉಚ್ಚರಿಸುವ ಮಂದಿಗೆ ತಿವಿದಂತಿದೆ.

ಮೊದಲ ಪ್ರಯತ್ನದಲ್ಲೇ ವೀರೇಂದ್ರ ಶೆಟ್ಟಿ ಯಶಸ್ವಿಯಾಗಿದ್ದಾರೆ. ನಕ್ಕು ಹಗುರಾಗಬೇಕು ಎನ್ನುವ ಮನಸುಗಳಿಗೆ ಚಿತ್ರ ಯಥೇಚ್ಛ ಸರಕನ್ನು ಒದಗಿಸುತ್ತದೆ. ಒಟ್ಟಿನಲ್ಲಿ ನಿರ್ಮಾಪಕರಾದ ವೀರೇಂದ್ರ ಶೆಟ್ಟಿ, ಮನೋ ಮೂರ್ತಿ, ಲುಷಿಂಗ್ಟನ್ ಮತ್ತು ಹೇಮಂತ್ ಕುಮಾರ್ ಹಾಕಿದ ದುಡ್ಡಿಗೆ ಮೋಸವೇನು ಆಗಲ್ಲ.

Key words: sweet – Kannada- love- grammar-savarnadirga sandhi

The post ನಗೆಯ ಬುಗ್ಗೆ, ನವಿರು ಪ್ರೇಮಕಥೆಯ ಕನ್ನಡ ವ್ಯಾಕರಣ ಸವರ್ಣದೀರ್ಘ ಸಂಧಿ….’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.