sureshkumar Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

sslc ಫಲಿತಾಂಶದ ಬಳಿಕ ಸಚಿವ ಸ್ಥಾನಕ್ಕೆ ಸುರೇಶ್ ಕುಮಾರ್ ರಾಜೀನಾಮೆ : ವಾಟಾಳ್ ನಾಗರಾಜ್ ಭವಿಷ್ಯ.
ಮೈಸೂರು, ಜೂ.28, 2020 : (www.justkannada.in news) : ಶೇಕಡ ೯೦ ರಷ್ಟು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಫೇಲ್ ಆಗ್ತಾರೆ. ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಭವಿಷ್ಯ.

ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು ಅಂತ ಹೇಳಿದ್ರೂ ರಾಜ್ಯ ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಸಚಿವ ಸುರೇಶ್ ಕುಮಾರ್ ತಮ್ಮದೆ ನಿಲುವಲ್ಲಿ ಪರೀಕ್ಷೆ ನಡೆಸ್ತಾ ಇದ್ದಾರೆ.

ಈಗಾಗಲೇ ಸಿಬಿಎಸ್ ಇ ಪರೀಕ್ಷೆಗಳನ್ನ ಕೇಂದ್ರ ಸರ್ಕಾರ ರದ್ದುಪಡಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ಪಾಸ್ ಮಾಡಿದೆ. ವಿವಿಧ ರಾಜ್ಯ ಸರ್ಕಾರಗಳು ಸಹ ಇದೇ ಮಾದರಿ ಅನುಸರಿಸಿ ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆ ರಿಸಲ್ಟ್ ನಲ್ಲಿ ೯೦ರಷ್ಟು ವಿದ್ಯಾರ್ಥಿಗಳು ಫೇಲ್ ಆಗಲಿದ್ದಾರೆ. ಆಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡುವ ಪರಿಸ್ಥಿತಿ ಏರ್ಪಡುತ್ತದೆ. ಮೈಸೂರಿನಲ್ಲಿ ಭವಿಷ್ಯ ನುಡಿದ ವಾಟಾಳ್ ನಾಗರಾಜ್.

oooo

key words : SSLC-exams-result-sureshkumar-vatal.nagaraj-mysore-protest

The post sslc ಫಲಿತಾಂಶದ ಬಳಿಕ ಸಚಿವ ಸ್ಥಾನಕ್ಕೆ ಸುರೇಶ್ ಕುಮಾರ್ ರಾಜೀನಾಮೆ : ವಾಟಾಳ್ ನಾಗರಾಜ್ ಭವಿಷ್ಯ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಎಸ್ ಎಸ್ ಎಲ್ ಸಿ / ಪಿಯುಸಿ ಪರೀಕ್ಷೆಗೆ ಸಿದ್ಧತೆ ಬಗ್ಗೆ ಸಚಿವ ಸುರೇಶ್ ಕುಮಾರ್ ನೀಡಿದ ಮಾಹಿತಿ ಹೀಗಿದೆ..
ಬೆಂಗಳೂರು, ಮೇ 18, 2020 : (www.justkannada.in news ) : ಎಸ್ಎಸ್ ಎಲ್ ಸಿ ಪರೀಕ್ಷೆ. ರಾಜ್ಯಾದ್ಯಂತ 2879 ಪರೀಕ್ಷಾ ಕೇಂದ್ರಗಳು. 43,720 ಕೊಠಡಿಗಳು ‌ಮೀಸಲು.

ಪ್ರತಿ ವಿದ್ಯಾರ್ಥಿ ಗೆ ಮಾಸ್ಕ್ ಕಡ್ಡಾಯ. ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ವತಿಯಿಂದ ಮಾಸ್ಕ್ ವಿತರಣೆಗೆ ವ್ಯವಸ್ಥೆ.

ಪ್ರಾಥಮಿಕ ಮತ್ತು ಫ್ರೌಢ‌ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ. ‌ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರದ ವ್ಯವಸ್ಥೆ. ಪರೀಕ್ಷಾ ಕೊಠಡಿಗಳ ಸಂಪೂರ್ಣ ಸ್ಯಾನಿಟೈಸೇಷನ್ ವ್ಯವಸ್ಥೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪುನರ್ ಮನನ ಕಾರ್ಯಕ್ರಮ ಮಾಡಲಾಗಿದೆ. ಇದು ಈ ತಿಂಗಳ ಅಂತ್ಯದವರೆಗೆ ಮುಂದುವರೆಯಲಿದೆ.

ರಾಜ್ಯದಲ್ಲಿ ಎಂಟು ಲಕ್ಷದ ನಲವತ್ತೆಂಟು‌ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಜೂನ್ ೨೫ ರಿಂದ ಜುಲೈ ೪ ರವರೆಗೆ ನಡೆಸಲು ನಿರ್ಧಾರ. ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಜೂನ್ ೧೮ ರಂದು ನಡೆಸಲಾಗುವುದು.

key words : karnataka-sslc-puc-exams-sureshkumar-minister

The post ಎಸ್ ಎಸ್ ಎಲ್ ಸಿ / ಪಿಯುಸಿ ಪರೀಕ್ಷೆಗೆ ಸಿದ್ಧತೆ ಬಗ್ಗೆ ಸಚಿವ ಸುರೇಶ್ ಕುಮಾರ್ ನೀಡಿದ ಮಾಹಿತಿ ಹೀಗಿದೆ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಟರಾದ ದರ್ಶನ್, ಸುದೀಪ್, ಸಲ್ಮಾನ್ ಖಾನ್ ಇವರಿಗೆ ಸಮರಲ್ಲ, ಇವರೇ ನಿಜವಾದ ಹೀರೋ ಎಂದ ಸಚಿವ ಸುರೇಶ್ ಕಮಾರ್ ಹೊಗಳಿದ್ದು ಯಾರನ್ನು ಗೊತ್ತ..?
ಮಂಗಳೂರು, ಫೆ.15, 2020 : (www.justkannada.in news ) ಕಿತ್ತಳೆ ಹಣ್ಣು ವ್ಯಾಪಾರಿ, ಅಕ್ಷರಸಂತ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರ ನ್ಯೂ ಪಡ್ಪು ಸರಕಾರಿ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶನಿವಾರ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು…

ಅಕ್ಷರಸಂತ ಎಲೆಮರೆಯ ಕಾಯಿಯಾಗೇ ಉಳೀತಾ ಇದ್ರೂ, ಪತ್ರಕರ್ತ ಗುರುವಪ್ಪ ಪರಿಚಯಿಸದೇ ಇದ್ದಲ್ಲಿ ಹಾಗೇ ಉಳೀತಾ ಇದ್ರೂ. ನಟ ದರ್ಶನ್, ಸುದೀಪ್, ಸಲ್ಮಾನ್ ಖಾನ್ ಹಾಜಬ್ಬರಿಗೆ ಸಮಾನರಲ್ಲ, ಇವರೇ ನಿಜವಾದ ಹೀರೋ.

ಆರು ತಿಂಗಳ ಅವಧಿಯಲ್ಲಿ ಇಂತಹ ಕಾರ್ಯಕ್ರಮ ಪ್ರಥಮವಾದುದು. ಶಾಲೆಯ ರಾಯಭಾರಿಗಳಾದ ೧೦ ನೇ ತರಗತಿ ವಿದ್ಯಾರ್ಥಿಗಳು, ಉತ್ತಮ ಫಲಿತಾಂಶ ದಾಖಲಿಸಿದಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಬರುತ್ತಾರೆ. ಆದ್ದರಿಂದ ಹಾಜಬ್ಬ ಕನಸ್ಸನ್ನು ನನಸು ಮಾಡಿ ಮಕ್ಕಳೇ.

ಇಡೀ ಸಮಾಜ ಹಾಜಬ್ಬ ಎದುರು ತಲೆತಗ್ಗಿಸಬೇಕಿದೆ. ನನ್ನದು ನನಗೆ, ನಿನ್ನದು ನಿನಗೇ ಎಂಬಂತೆ ಸಮಾಜ ನಡೆಯುತ್ತಿದೆ, ಆದರೆ, ನಿನ್ನದು ನಿನಗೇ, ನನ್ನದೂ ನಿನಗೇ ಅನ್ನುವ ಹಾಜಬ್ಬ ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆ.

ಹಾಜಬ್ಬ ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಪಬ್ಲಿಕ್ ಸ್ಕೂಲ್, ಪಿಯುಸಿ, ಕಾಂಪೌಂಡ್, ಶಿಥಿಲ ಕಟ್ಟಡ ದುರಸ್ತಿಗೆ ಪ್ರಮಾಣಿಕ ಪ್ರಯತ್ನ ನಡೆಸುವೆ.

key words ; school-hajabba-sureshkumar-education-minister-mangalore

The post ನಟರಾದ ದರ್ಶನ್, ಸುದೀಪ್, ಸಲ್ಮಾನ್ ಖಾನ್ ಇವರಿಗೆ ಸಮರಲ್ಲ, ಇವರೇ ನಿಜವಾದ ಹೀರೋ ಎಂದ ಸಚಿವ ಸುರೇಶ್ ಕಮಾರ್ ಹೊಗಳಿದ್ದು ಯಾರನ್ನು ಗೊತ್ತ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಉಗರಲ್ಲೋಗೋದಕ್ಕೆ ಕೊಡ್ಲಿ ತಗಂಡ್ರ ಮಾನ್ಯ ಸಚಿವ ಸುರೇಶ್ ಕುಮಾರ್ ಅವರು…!
ಮೈಸೂರು, ಜ.11, 2019 : (www.justkannada.in news) : ವಿದ್ಯಾರ್ಥಿಯೊಬ್ಬ ‘ ಪಕ್ಕೆಲುಬು’ ಪದ ಉಚ್ಛಾರಣೆ ಸಂಬಂಧ ಶಿಕ್ಷಕರೊಬ್ಬರು ವಿಡಿಯೋ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಚಿವ ಸುರೇಶ್ ಕುಮಾರ್ ಅವರ ಕ್ರಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ಆರಂಭವಾಗಿದೆ.

ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಕರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದು, ಅಮಾನತು ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಯ ಉಚ್ಛಾರಣೆ ಬಗೆಗಿನ ವಿಡಿಯೋ ಮಾಡಿ ಜಾಲತಾಣಕ್ಕೆ ಹಾಕಿದ್ದು ತಪ್ಪೇ ಇರಬಹುದು. ಆದರೆ ಅದಕ್ಕೆ ಅಮಾನತ್ತು ಮಾಡುವ ಅವಶ್ಯಕತೆ ಇತ್ತೆ..? ಎಂದು ನೆಟ್ಟಿಗರು ಸಚಿವರನ್ನು ಪ್ರಶ್ನಿಸುತ್ತಿದ್ದಾರೆ. ಕೆಲವರು ಸಚಿವರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಸಚಿವರು ಓವರಾಗಿಯೇ ರಿಯಾಕ್ಟ್ ಮಾಡಿದ್ರು ಎಂದು ಟೀಕಿಸಿದ್ದಾರೆ.

ಈ ಸಂಬಂಧ Nagesh Kalenahalli ಅವರ ಮುಖಪುಟದಲ್ಲಿನ ಬರಹ ಹೆಚ್ಚು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಅವರ ಮುಖಪುಟದಲ್ಲಿನ ಪೂರ್ಣ ಮಾಹಿತಿ ಹೀಗಿದೆ….

‘ ನಾನು ಶಾಲೆ ಕಲಿವಾಗ ಹೇಳಿದ ಕೆಲಸ (ಹೋಮ್ ವರ್ಕ್) ಮಾಡದಿದ್ದರೆ ಅಥವಾ ಮಗ್ಗಿ ತಪ್ಪಾಗಿ ಹೇಳಿದರೆ, ಲೆಕ್ಕ ತಪ್ಪಾದರೆ ‘ನೀನು ಎಮ್ಮೆ ಕಾಯೋಕೆ ಹೋಗು’, ಹಿಂಗೇ ಆದ್ರೆ ಹೊಲ ಉತ್ಕೊಂಡು ಇರ್ಬೇಕು ಅಷ್ಟೇ., ಎಂದೆಲ್ಲಾ ಗದರುತ್ತಿದ್ದರು. ಈಗಲೂ ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂಥವೇ ಮಾತುಗಳು ಕಾಮನ್. ಇದು ಒಂದು ವೃತ್ತಿ ಸೂಚಕ ಬೈಗುಳ.

ಅಂಗಿ ಕೊಳೆಯಾಗಿದ್ದರೆ, ಮೂಗು ಸೀಟಿಕೊಂಡ ಗೆರೆ ಕೆನ್ನೆಯವರೆಗೆ ರೈಟ್ ಆಕಾರದಲ್ಲಿ ಮಾರ್ಕ್ ಆಗಿದ್ದರೆ ‘ವಡ್ಡ’ ಎಂದು ಗದರುತ್ತಿದ್ದರು. ಈಗಲೂ ಇಂಥದೇ ಪರಿಸ್ಥಿತಿ ಇದ್ದೀತು. ಇದು ಜಾತಿ ಸೂಚಕ defamatory ಬೈಗುಳು.

ತೀರಾ ಸೆನ್ಸಿಟೀವ್ ಹುಡುಗನೊಬ್ಬ ಮಾಸ್ತರ ನಿಂದನೆಗೆ ಅತ್ತನೆಂದರೆ, ಅದ್ಯಾಕೋ ಒಳ್ಳೇ ಹುಡುಗೀರು/ಹೆಂಗಸರು ಅತ್ತಂಗೆ ಅಳ್ತೀಯ ಮಾತು ಮಾತಿಗೂ ಅಂತಾ ಸ್ವಾಟೆ ತಿವಿಯೋರು ಮಾಸ್ತರು. ಇದು ಲಿಂಗ ಬೇಧ ಮಾಡುವ ಬೈಗುಳ. Gender sensitivity ಇಲ್ಲದವರು ಬೈಯ್ಯುವ ಬೈಗುಳ. ಈಗಲೂ ನಮ್ಮ ಶಾಲೆಗಳಲ್ಲಿ ಇದು ತಪ್ಪಿಲ್ಲ ಅಂದುಕೊಂಡೀದ್ದೇನೆ.

ಕಾಲು ಊನ ಆಗಿದ್ದವನೋ/ಅವಳನ್ನೋ ಕುರಿತು ಮಾಸ್ತರು ಆ ಕುಂಟನ್ನ ಕರಿ ಆ ಕುಂಟಿನ ಬರೇಳು ಎಂದು ಹೇಳುತ್ತಿದ್ದರು. ಇದು physically challenged/specially abled ಮಕ್ಕಳಿಗೆ ತೋರುವ ತಾರತಮ್ಯ. ಅದು ಈಗಲೂ ಮುಂದುವರಿದಿರಲೇ ಬೇಕು.

ಕಪ್ಪು ಚರ್ಮದ ಹುಡುಗನನ್ನು ಕರಿಯ ಅಂತಲೂ ಕಪ್ಪು ಚರ್ಮದ ಹುಡುಗಿಯನ್ನು ಕರ್ಕಿ ಎಂದೂ ಕರೆಯುವ ಮಾಸ್ತರುಗಳಿದ್ದರು. ಈಗಲೂ ಇರುತ್ತಾರೆ.

ಮಾನ್ಯ ಸಚಿವರೇ, ಇಲ್ಲಿ ವಿಷಯ ಇಷ್ಟೇ,

‘ಪಕ್ಕೆಲುಬು’ ಎಂಬ ಪದವನ್ನು ಉಚ್ಛಾರ ಮಾಡಲಾಗದ ಪುಟ್ಟ ಹುಡುಗನೊಬ್ಬನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ ಮಾಸ್ತರನ್ನು ಅಮಾನತು ಮಾಡಿದ್ದೀರಿ. ನೀವು ಮಾಡಿರುವ ಕೆಲಸ ಸರಿಯೇ ತಪ್ಪೇ ಅಥವಾ over react ಮಾಡಿದ್ದೀರಾ !? ಆ ಪ್ರಶ್ನೆಗಳೆಲ್ಲಾ ಆಮೇಲೆ ಮಾತನಾಡೋಣ.

ಯೂ ಟೂಬ್ ನಲ್ಲಿ ಇಂಥ ಸಾವಿರಾರು ಮಕ್ಕಳ ವಿಡಿಯೋಗಳಿವೆ. ರಾಷ್ಟ್ರಗೀತೆ ಹಾಡಲು ಪ್ರಯತ್ನಿಸಿ ತೊದಲುವ ಮಕ್ಕಳು ಮತ್ತು ಅದನ್ನು ವಿಡಿಯೋ ಮಾಡಿ ಯೂ ಟೂಬ್ ಗೆ ಅಪ್ಲೋಡ್ ಮಾಡಿದವರನ್ನು ದೇಶ ದ್ರೋಹಿ ಎನ್ನುವಿರೇ !?

ಶಾಲೆಯ ಸಮಯದಲ್ಲಿ ಮೊಬೈಲ್ ಬಳಸಬಾರದೆಂಬ ಅಪವಾದ ಬೇರೆ ಆ ಶಿಕ್ಷಕನ ಮೇಲೆ ಹೊರಿಸಿದ್ದೀರಿ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಒಬ್ಬ ಸರ್ಕಾರಿ ನೌಕರ ಕೆಲಸದ ಮೇಲಿರುವಾಗ ಇಂತಿಷ್ಟು ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ಆತನ/ಅವಳ ಬಳಿ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವೂ ಇದೆ. ಮುಖ್ಯಮಂತ್ರಿಗಳಿಗೆ ಹೇಳಿ ಒಮ್ಮೆ ಎಲ್ಲಾ ಸರ್ಕಾರಿ ನೌಕರರನ್ನು ಕೆಲಸದ ಮೇಲಿರುವಾಗ ರೈಡ್ ಮಾಡಿಸಿ. ಪ್ರಾಯಶಃ ಎಲ್ಲರೂ ಸಸ್ಪೆಂಡ್ ಆಗಬಹುದು.

ನನ್ನ ಈ ಪತ್ರದ ಸಾರಾಂಶವಿಷ್ಟೇ. ‘ಪಕ್ಕೆಲುಬು’ ಪದ ಉಚ್ಚಾರಣೆಯ ವಿಡಿಯೋ ಮಾಡಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಅದೊಂದು ಯಡವಟ್ಟು. ತಮಾಷೆ. ಮನುಷ್ಯ ಸಹಜ ಚೇಷ್ಟೆ. ಅಷ್ಟೇ.

ಕರೆದು ಬುದ್ದಿ ಹೇಳಿ. ಆ ಮಾಸ್ತರನ್ನೇ ನೆಪವಾಗಿ ಇಟ್ಟುಕೊಂಡು ಇಡೀ ರಾಜ್ಯದ ಮಾಸ್ತರುಗಳಿಗೆ ಹೊಸ ಶತಮಾನದ do’s don’t’s ಕುರಿತಾಗಿ ಸೆನ್ಸಿಟೈಜ಼ೇಷನ್ ಕಾರ್ಯಕ್ರಮ ರೂಪಿಸಿ. ‘ವಡ್ಡ’ ಅನ್ನಬಾರದು, ‘ಕರಿಯ’ ಕರ್ಕಿ’ ಅನ್ನಬಾರದು, ‘ಕುಂಟ’ಕುಂಟಿ’ ಅನ್ನಬಾರದು. ಓದದೇ ಇದ್ರೆ ಎಮ್ಮೆ ಕಾಯ್ಬೇಕಾಗುತ್ತೆ ಅನ್ನಬಾರದು ಎಂದೆಲ್ಲಾ ಹೇಳಿಕೊಡಿ.

ಕಡೆಯದಾಗಿ ಒಂದು ಮಾತು:

ಕೆಲವು ವರ್ಷಗಳ ಹಿಂದೆ ಗುಲ್ಬರ್ಗಾದ ಕೆ. ಗೋವಿಂದಾಚಾರ್ಯ ಭಾರತೀಯ ಸ್ವಾಭಿಮಾನಿ ಆಂದೋಲನ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೈದ್ಯರಾಗಿ, ಇಂಜಿನಿಯರ್ ಗಳಾಗಿ, ವಿಜ್ಞಾನಿಗಳಾಗಿ, ಆರ್ಥಿಕ ತಜ್ಞರಾಗಿ, ಉದ್ದಿಮೆದಾರರಾಗಿ, ಪೌರಸೇವ ಅಧಿಕಾರಿಗಳಾಗಿ ಎಂದೆಲ್ಲಾ ಉತ್ತೇಜಕ ನುಡಿಗಳನ್ನಾಡುತ್ತಿದ್ದರು. ಅವರ ಭಾಷಣ ಮುಗಿದ ಮೇಲೆ ಒಬ್ಬ ವಿದ್ಯಾರ್ಥಿ ಎದ್ದು ನಿಂತು ಕಲಾಂ ಸಾಹೇಬರೇ ನೀವೇಕೆ ನಮಗೆ ರೈತರಾಗಿ ಎಂದು ಹೇಳಲಿಲ್ಲ ಎಂದು ಪ್ರಶ್ನಿಸಿದ.

ಆ ಪ್ರಶ್ನೆಗೆ ಕಲಾಂ ಸಾಹೇಬರು ಸುದೀರ್ಘ ಉತ್ತರ ಕೊಡಲು ಪ್ರಯತ್ನಿಸಿದರಾದರೂ ಕಲಾಂ ಕುಸಿದು ಬಿದ್ದಂತಾಗಿದ್ದರು. ಆ ಹುಡುಗ ಕಲಾಂ ಅವರ ಸಂವಾದವನ್ನು ಠುಸ್ ಮಾಡಿದ್ದಲ್ಲದೆ ಸಮಾಜದಲ್ಲಿ ಕೃಷಿಯ ಬಗೆಗಿನ ದಿವ್ಯ ನಿರ್ಲಕ್ಷ್ಯ ಮತ್ತು ತಾತ್ಸಾರದ ಬಗ್ಗೆ ಬೆಳಕು ಚೆಲ್ಲಿದ್ದ. ( ನೆಲದ ಸತ್ಯ ಪುಸ್ತಕದಲ್ಲಿ ವಿನಾಶದತ್ತ ರೈತ ಸಮುದಾಯ ಲೇಖನದಿಂದ. ಪುಟ ೨೭, ಈ ಪುಸ್ತಕ ನಿಮ್ಮ ಕಲೆಕ್ಷನ್ ನಲ್ಲಿದೆ.)

ಮಾನ್ಯ ಸಚಿವರೇ, ಕಲಾಂ ರಿಗೆ ಪ್ರಶ್ನೆ ಕೇಳುವಂಥ ಹುಡುಗರನ್ನೂ ಸರ್ಕಾರಿ ಶಾಲೆಯ ಮಾಸ್ತರುಗಳೇ ರೂಪಿಸಿದ್ದು.

“ಪಕ್ಕೆಲುಬು” ಉಚ್ಚಾರದ ವಿಡಿಯೋ ಮಾಡಿದ ಶಿಕ್ಷಕನನ್ನು ಅಮಾನತು ಮಾಡುವ ಮುಖೇನ ಉಗರಲ್ಲಿ ಹೋಗೋದಕ್ಕೆ ಕೊಡ್ಲಿ ತಕಂಡ್ರು ಎನ್ನುವಂತಾಗಿದೆ.

key words : education.minister-sureshkumar-teacher-video-suspended-karnataka-bellary

The post ಉಗರಲ್ಲೋಗೋದಕ್ಕೆ ಕೊಡ್ಲಿ ತಗಂಡ್ರ ಮಾನ್ಯ ಸಚಿವ ಸುರೇಶ್ ಕುಮಾರ್ ಅವರು…! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ.
ಬೆಂಗಳೂರು, ಅ.31, 2019 : (www.justkannada.in news ) : ಶಾಲಾ ಪಠ್ಯದಿಂದ ‘ ಮೈಸೂರು ಹುಲಿ ‘ ಬಿರುದಾಂಕಿತ ಟಿಪ್ಪು ಸುಲ್ತಾನ್ ರ ಪಠ್ಯ ಕೈಬಿಡುವ ಸಂಬಂಧ ತಕ್ಷಣಕ್ಕೆ ರಾಜ್ಯ ಸರಕಾರ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು…..

ಟಿಪ್ಪು ಸುಲ್ತಾನ್ ರ ಕುರಿತಾದ ವಿಷಯಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ದೂರು ಬಂದಿವೆ ಅದನ್ನ ಆಧರಿಸಿ ಪರಿಶೀಲಿಸುವಂತೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ( Director of State Education Research and Training ಮತ್ತು Karnataka Textbooks Society -KTBS ) ಸೂಚಿಸಿದ್ದೇವೆ. ನವೆಂಬರ್ ೭ ರಂದು ಈ ಸಮಿತಿ ಸದಸ್ಯರು ಸಭೆ ಸೇರಲಿದ್ದಾರೆ. ಅವರು ಪರಿಶೀಲಿಸಿದ ಬಳಿಕ ಸರಕಾರದ ಗಮನಕ್ಕೆ ತರುತ್ತಾರೆ. ಆ ನಂತರ ಅದರ ಬಗ್ಗೆ ಕ್ರಮತೆಗೆದುಕೊಳ್ತೇವೆ.

ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ದೂರು ಕೊಟ್ಟಿದ್ದಾರೆ. ಶಾಸಕರು ಕೊಟ್ಟ ಮನವಿ ಪರಿಗಣಿಸಲೇ ಬೇಕಲ್ಲ. ಹೀಗಾಗಿ ಪಠ್ಯ ತೆಗೆಯುವ ಬಗ್ಗೆ ಚಿಂತನೆ ನಡೆದಿದೆ ಅಷ್ಟೆ. ವಿಧಾನಸೌಧದಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ.

key words : tipu.sultan-book-karnataka-bjp-sureshkumar-KTBS-DSERT

ENGLISH SUMMARY

According to experts, however, unless the Director of State Education Research and Training and Karnataka Textbooks Society (KTBS) decides on the curriculum nothing can be changed in the textbooks.

A couple of days ago, Minister for Primary and Secondary Education S Suresh Kumar had written to KTBS and said that within three days a committee should look into the letter written by

madikere mla apachu ranjan and give the department a report on the same.

The post ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ ಹೈ-ಡ್ರಾಮ ‘ ನಡುವೆಯೇ ನಾಳೆಯಿಂದಲೇ ಶಿಕ್ಷಕರ ವರ್ಗಾವಣೆ ಘೋಷಿಸಿದ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಸೆ.03, 2019 : ಸಾಕಷ್ಟು ವಿವಾದಗಳಿಗೆ, ಗೊಂದಲಗಳಿಗೆ ಗುರಿಯಾಗಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮತ್ತೆ ನಾಳೆಯಿಂದಲೇ ಪುನಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಚಿವ ಸುರೇಶ್​ ಕುಮಾರ್​ ಸೂಚನೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್​ ಕುಮಾರ್​ ಹೇಳಿದಿಷ್ಟು….

ತಾತ್ಕಾಲಿಕವಾಗಿ ನಿಲ್ಲಿಸಿದ್ದ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಗೆ ನಾಳೆಯಿಂದ ಪ್ರಾರಂಭ. 2019-20ನೇ ಸಾಲಿನ ವರ್ಗಾವಣೆ ವೇಳೆಗೆ ಶಿಕ್ಷಕ ಸ್ನೇಹಿ ವರ್ಗಾವಣೆ ವ್ಯವಸ್ಥೆ. ಕಡ್ಡಾಯ ವರ್ಗಾವಣೆ ಕಾಯ್ದೆಗೆ ಸೂಕ್ತ ತಿದ್ದುಪಡಿ. ಕಡ್ಡಾಯ ಮತ್ತು ಪರಸ್ಪರ ವರ್ಗಾವಣೆಗೆ ನಾಳೆಯಿಂದ ಕೌನ್ಸೆಲಿಂಗ್ ಆರಂಭ. ಸೆಪ್ಟೆಂಬರ್ ಅಂತ್ಯಕ್ಕೆ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣ.

ಕಡ್ಡಾಯ ವರ್ಗಾವಣೆಗೆ ಕೋರ್ಟ್​ ತಡೆ ನೀಡಿಲ್ಲ. 2007ರ ನಿಯಮದಂತೆ ಕಡ್ಡಾಯ ವರ್ಗಾವಣೆ.

ಪರ-ವಿರುದ್ಧದ ಹೈ-ಡ್ರಾಮ :

ಸಚಿವ ಸುರೇಶ್ ಕುಮಾರ್, ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಂಗ್ ಪ್ರಕ್ರಿಯೆ ನಾಳೆಯಿಂದಲೇ ಮರು ಪ್ರಾರಂಭಿಸಲಾಗುತ್ತದೆ ಎಂದು ಘೋಷಿಸುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲ ಶಿಕ್ಷಕರು ಕಣ್ಣೀರುಗರೆಯುತ್ತಾ, ನಮಗೆ ಅನ್ಯಾಯವಾಗಿದೆ. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಸರಕಾರಿ ನೌಕರರ ಹಾಗೂ ಶಿಕ್ಷಕ ಸಂಘದ ಕೆಲ ಪ್ರಭಾವಿಗಳ ಒತ್ತಡಕ್ಕೆ ಸಚಿವರು ಮಣಿಯಬಾರದು ಎಂದು ಗೋಳಾಡಿದರು.

ಇದೇ ವೇಳೆ ಸ್ಥಳದಲ್ಲಿದ್ದ ಮತ್ತೆ ಕೆಲ ಶಿಕ್ಷಕರು ವರ್ಗಾವಣೆ ಸ್ಥಗಿತಗೊಳಿಸಿದರೆ ನಾವೂ ವಿಷ ಕುಡಿಯಬೇಕಾಗುತ್ತದೆ ಎಂದು ಸಚಿವರ ಬಳಿ ಅಲವತ್ತುಕೊಂಡ ಘಟನೆ ನಡೆದಿದೆ.

key words : teacher-transfer-high-drama-bangalore-sureshkumar

The post ‘ ಹೈ-ಡ್ರಾಮ ‘ ನಡುವೆಯೇ ನಾಳೆಯಿಂದಲೇ ಶಿಕ್ಷಕರ ವರ್ಗಾವಣೆ ಘೋಷಿಸಿದ ಸಚಿವ ಸುರೇಶ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

BREAKING NEWS : ಶಿಕ್ಷಕರ ಕೌನ್ಸೆಲಿಂಗ್ ವರ್ಗಾವಣೆಗೆ ತಡೆ : ಆ ಮೂಲಕ ಗೊಂದಲ ನಿವಾರಣೆಗೆ ಮುಂದಾದ ಶಿಕ್ಷಣ ಸಚಿವ ಸುರೇಶ್ ಕುಮಾರ್.
ಬೆಂಗಳೂರು, ಆ.28, 2019 : ( www.justkannada.in news ) ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ವರ್ಗಾವಣೆಯಲ್ಲಿರುವ ಗೊಂದಲ ನಿವಾರಣೆಗಾಗಿ ವರ್ಗಾವಣೆ ಪ್ರಕ್ರಿಯೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ತಡೆ ಹಿಡಿಯಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

ಈ ಸಂಬಂಧ ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಆದೇಶ ( ಪ್ರಾ.ಪ್ರೌ.ಸ 18/2019 ) ಹೊರಡಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಪರಿಣಾಮ ನಾಳೆಯಿಂದ ನಡೆಯ ಬೇಕಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಸ್ಥಗಿತಗೊಂಡಿದೆ.

ಏನಿದು ಗೊಂದಲ :

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಸರಕಾರ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ಮುಂದಾಯಿತು. ಇದರಲ್ಲಿ 10 ವರ್ಷ ಸೇವೆ ಪೂರೈಸಿರುವ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡುವುದು ಸೇರಿತ್ತು. ಆದರೆ ಕೆಲ ಪಟ್ಟಭದ್ರರ ಕಾರಣದಿಂದ, ಕಡ್ಡಾಯ ವರ್ಗಾವಣೆ ಮಾರ್ಗಸೂಚಿಗೆ ನಿಯಮ ಬಾಹಿರವಾಗಿ ಬದಲಾವಣೆ ತರಲಾಯಿತು. ಇದರಿಂದ ಕಡ್ಡಾಯ ವರ್ಗಾವಣೆಯಲ್ಲಿ ‘ವಿನಾಯಿತಿ’ ಸವಲತ್ತು ಪಡೆಯುವವರು ಹೆಚ್ಚಾದರು.

ಕಡ್ಡಾಯ ವರ್ಗಾವಣೆ ವಿನಾಯಿತಿಗಳು:

1) ಶಿಕ್ಷಕರ ಸಂಘದ ಪದಾಧಿಕಾರಿಗಳು 6 ಮಂದಿ 2) ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು 3 ಮಂದಿ

3) ವಿಧವಾ ಮಹಿಳಾ ಶಿಕ್ಷಕಿಯರು #,5% , 4) ಅವಿವಾಹಿತ ಮಹಿಳಾ ಶಿಕ್ಷಕಿಯರು # 10% , 5) 40% ಗಿಂತ ಹೆಚ್ಚು ಅಂಗವೈಕಲ್ಯತೆ # 10% , 6) ವೈದ್ಯಕೀಯ ಕಾರಣ ಸುಮಾರು #5%, 7) ಪತಿ ಪತ್ನಿ ಪ್ರಕರಣ ಸುಮಾರು 50%, 8) ನಿವೃತ್ತಿಗೆ 2 ವರ್ಷ ಇರುವವರು 5% . ಇದರಿಂದ ಅಂದಾಜು ಶೇ 85 ರಷ್ಟು A ವಲಯ ಶಿಕ್ಷಕರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸಿಎಂಗೂ ಮನವಿ :

ಉಳಿದ 15% ಶಿಕ್ಷಕರು ಏನು ಮಾಡಿದ್ದಾರೆ ಅವರಿಗೆ ಮಾತ್ರವೇ ಕಡ್ಡಾಯ ವರ್ಗಾವಣೆ ಶಿಕ್ಷೆಯೇ ಎಂಬುದು ಉಳಿದವರ ಅಳಲು. ಹಾಗಾದರೆ ವರ್ಗಾವಣೆ ಬಯಸಿ ಅರ್ಜಿ ಹಾಕಿರುವ 70000 ಶಿಕ್ಷಕರ ಪಾಡೇನು .?, ನಗರಕ್ಕೆ ಬರುವ ಗ್ರಾಮೀಣ ಶಿಕ್ಷಕರ ಕನಸು ಗಗನ ಕುಸುಮವೇ ಸರಿ. ದಯಮಾಡಿ ಅನ್ಯಾಯಕ್ಕೆ ಒಳಗಾಗುತ್ತಿರುವ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ಮನವಿ ಮಾಡಲಾಗಿತ್ತು.

ಕಡ್ಡಾಯ ವರ್ಗಾವಣೆ ಅನ್ನೋದು ಎಲ್ಲರಿಗೂ ಆಗಲಿ. ಯಾರು A ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿರುತ್ತಾರೋ ಅವರು ಸಿನಿಯಾರಿಟಿ ಪ್ರಕಾರ ಸಿ ಮತ್ತು ಬಿ ವಲಯಕ್ಕೆ ವರ್ಗಾವಾಗಬೇಕು. 2017 ರಲ್ಲಿ ಇದೇ ನಿಯಮದ ಮೇಲೆ ವರ್ಗಾವಣೆ ನಡೆಸಿದ್ದು. ಆದರೆ, ಶಿಕ್ಷಣ ಕ್ಷೇತ್ರದ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಡ್ಡಾಯ ವರ್ಗಾವಣೆಯಲ್ಲಿ ವಿನಾಯತಿ ಸೇರ್ಪಡೆಗೊಳಿಸಲಾಯಿತು. ಪ್ರಮುಖವಾಗಿ ಕಪಲ್ ಕೇಸ್ ( ಪತಿ-ಪತ್ನಿ) ಪ್ರಕರಣ. ಪರಿಣಾಮ ನಾನ್ ಕಪಲ್ ಮಾತ್ರ ಸಿ ವಲಯಕ್ಕೆ ಹೋಗಬೇಕೆ.? ಇದು ಸಹಜ ನ್ಯಾಯಕ್ಕೆ ವಿರುದ್ಧವಾದದ್ದು ಎಂದು ಅನ್ಯಾಯಕ್ಕೊಳಗಾದ ಶಿಕ್ಷಕರು ಅಳಲು ತೋಡಿಕೊಂಡಿದ್ದರು.

ನಾನ್ ಕಪಲ್ ಗಳು ಎರಡು ಸಂಬಳ ತಗೋತಾ ಇಲ್ಲ. ಜತೆಗೆ ನಾವೇನು ಟಾಟಾ ಬಿರ್ಲಾ ನ ಮದುವೆ ಆಗಿಲ್ಲ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕೆಲ ಶಿಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಾರತಮ್ಯದ ಬಗ್ಗೆ ಜೋರಾಗೆ ಧ್ವನಿ ಎತ್ತಿದ್ದರು.

key words : teachers-counseling-transfer-stopped-minister-sureshkumar-issues-order

The post BREAKING NEWS : ಶಿಕ್ಷಕರ ಕೌನ್ಸೆಲಿಂಗ್ ವರ್ಗಾವಣೆಗೆ ತಡೆ : ಆ ಮೂಲಕ ಗೊಂದಲ ನಿವಾರಣೆಗೆ ಮುಂದಾದ ಶಿಕ್ಷಣ ಸಚಿವ ಸುರೇಶ್ ಕುಮಾರ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.