Street dog | Just Kannada - Daily News Updates

ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನಕ್ಕೆ ಚಾಲನೆ
ಮೈಸೂರು,ಡಿಸೆಂಬರ್,16,2025 (www.justkannada.in): ಮೈಸೂರು ನಗರ ಪಾಲಿಕೆಯು ಪ್ರಾಣಿಗಳ ಕಲ್ಯಾಣದತ್ತ ತನ್ನ ನಿರಂತರ ಬದ್ಧತೆಯ ಭಾಗವಾಗಿ ಇಂದು ಮೈಸೂರು ನಗರದ ಟೌನ್ ಹಾಲ್‌ನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಪೂರ್ಣದಾ, ನಿವೃತ್ತ ಉಪ ನಿರ್ದೇಶಕರಾದ ಡಾ. ತಿರುಮಲೇಶ್, ನಿವೃತ್ತ ಪಶುವೈದ್ಯರಾದ ಡಾ. ಸುರೇಶ್, ಹಾಗೂ ಪೀಪಲ್ ಫಾರ್ ಅನಿಮಲ್ಸ್ (PFA) ಸಂಸ್ಥೆಯ ಶ್ರೀಮತಿ ಸವಿತಾ ನಾಗಭೂಷಣ್ ಅವರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಮೈಸೂರು ಮಹಾ ನಗರ ಪಾಲಿಕೆಯ ಆಯುಕ್ತ  ಶೇಖ್ ತನ್ವೀರ್ ಆಸಿಫ್ ಹಾಗೂ ಪಾಲಿಕೆ   ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಎನ್.ಪಿ. ಅವರು ಅಧ್ಯಕ್ಷತೆ ವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಸಕ್ರಿಯ ದತ್ತು ಸ್ವೀಕಾರ (Active Adoption) ಮತ್ತು ನಿಷ್ಕ್ರಿಯ ದತ್ತು ಸ್ವೀಕಾರ (Passive Adoption) ಎರಡೂ ಮಹತ್ವವುಳ್ಳವು ಎಂದು ತಿಳಿಸಿದರು. ಸಕ್ರಿಯ ದತ್ತು ಸ್ವೀಕಾರದ ಮೂಲಕ ನಾಗರಿಕರು ಬೀದಿ ನಾಯಿಮರಿಗಳಿಗೆ ಶಾಶ್ವತ ಮನೆ ಒದಗಿಸಬಹುದಾದರೆ, ನಿಷ್ಕ್ರಿಯ ದತ್ತು ಸ್ವೀಕಾರದಲ್ಲಿ ಬೀದಿ ಪ್ರಾಣಿಗಳ ಆರೈಕೆ, ಆಹಾರ ಪೂರೈಕೆ, ಲಸಿಕೀಕರಣ, ವಂಧ್ಯಕರಣ ಹಾಗೂ ಮಾನವೀಯ ಸಹಬಾಳ್ವೆ ಸೇರಿವೆ ಎಂದು ವಿವರಿಸಿದರು. ನಗರದಲ್ಲಿ ಮಾನವೀಯ ಹಾಗೂ ದೀರ್ಘಕಾಲಿಕ ಬೀದಿ ಪ್ರಾಣಿ ನಿರ್ವಹಣೆಗೆ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಅನೇಕ ಪ್ರಾಣಿ ಪ್ರೇಮಿಗಳು, ಸ್ವಯಂಸೇವಕರು ಹಾಗೂ ವಿವಿಧ ಪ್ರಾಣಿ ಕಲ್ಯಾಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ, ದತ್ತು ಸ್ವೀಕಾರ ಹಾಗೂ ಪ್ರಾಣಿ ಕಲ್ಯಾಣ ಚಟುವಟಿಕೆಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಮೈಸೂರು ನಗರ ಪಾಲಿಕೆಯು ಪಶುಸಂಗೋಪನಾ ಇಲಾಖೆ ಮತ್ತು ಪೀಪಲ್ ಫಾರ್ ಅನಿಮಲ್ಸ್ (PFA) ಸಂಸ್ಥೆಯ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಇಂತಹ ದತ್ತು ಸ್ವೀಕಾರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಿದೆ.

Key words: Mysore, Street dog, adoption, campaign

ಬೀದಿನಾಯಿಗಳ ಹಾವಳಿ: ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುಪ್ರೀಂ ಕೋರ್ಟ್ ನೋಟಿಸ್
ನವದೆಹಲಿ,ಅಕ್ಟೋಬರ್,27,2025 (www.justkannada.in):  ದೇಶಾದ್ಯಂತ ಬೀದಿನಾಯಿಗಳ ಹಾವಳಿ ಹೆಚ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್,  ಎಲ್ಲಾ ರಾಜ್ಯಗಳಿಂದಲೂ ಬೀದಿ ನಾಯಿಗಳ ದಾಳಿ ಬಗ್ಗೆ ವರದಿಗಳು, ದೂರುಗಳು ಬರುತ್ತಿವೆ. ಬೀದಿನಾಯಿಗಳ ಕಡಿವಾಣಕ್ಕೆ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ? ವರದಿಗಳನ್ನ ನೀಡಬೇಕು ಎಂದು ಎಲ್ಲಾ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬೀದಿನಾಯಿಗಳ ಹಾವಳಿ ತಡೆಗಟ್ಟಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಈ ಬಗ್ಗೆ ಮಾಹಿತಿ ನೀಡಿ ಮುಂದಿನ ವಿಚಾರಣೆಯಲ್ಲಿ ಹಾಜರಾಗುವಂತೆ  ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

Key words: Street dog, ​​ Supreme Court,  notice, state governments

ಮೈಸೂರಿನಲ್ಲಿ ಬೀದಿನಾಯಿಗಳ ದಾಳಿಯಿಂದಾಗಿ ಏಳು ವರ್ಷದ ಬಾಲಕನಿಗೆ ಗಾಯ.
ಮೈಸೂರು,ಮಾರ್ಚ್,29,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಮಧ್ಯೆ 7 ವರ್ಷ ಬಾಲಕನ ಮೇಲೆ  5ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ  ನಿನ್ನೆ ನಡೆದಿದೆ.

ಮೈಸೂರಿನ ಬನ್ನಿಮಂಟಪದ ಬಳಿಯ  ಆಬಿಟ್ ಕನ್ವೆನ್ಷನ್ ಹಾಲ್ ಬಳಿ ಈ ಘಟನೆ ನಡೆದಿದೆ. ಮಹಮದ್ ಇಜಾನ್ ಅಲಿ(7), ಬೀದಿ ನಾಯಿಗಳ ದಾಳಿಗೊಳಗಾಗಿ ಗಾಯಗೊಂಡ ಬಾಲಕ. ನಿನ್ನೆ ಬಾಲಕನ ಮೇಲೆ ಅಟ್ಯಾಕ್ ಮಾಡಿದ್ದು ಈ ವೇಳೆ ಸ್ಥಳೀಯರು  ಬಾಲಕನನ್ನ ರಕ್ಷಣೆ ಮಾಡಿದ್ದಾರೆ.

ಈ ಕುರಿತು ಜಸ್ಟ್ ಕನ್ನಡ ಡಾಟ್ ಇನ್  ಜತೆ  ಬಾಲಕನ ಕುಟುಂಬಸ್ಥರೊಬ್ಬರು ಮಾತನಾಡಿ ಮಾಹಿತಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ 10.30ರ ವೇಳೆಗೆ  ಮಹಮದ್ ಇಜಾನ್ ಅಲಿ ಮೇಲೆ 15 ರಿಂದ 20 ಬೀದಿನಾಯಿಗಳು ಅಟ್ಯಾಕ್ ಮಾಡಿದ್ದು ತಕ್ಷಣ  ಆತನನ್ನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಸಂಜೆ ವೇಳೆಗೆ ಮನೆಗೆ ಆತನನ್ನ ಕರೆತಂದಿದ್ದೇವೆ  ಸದ್ಯ ಮನೆಯಲ್ಲೇ ಚಿಕಿತ್ಸೆ ಮುಂದುವರೆದಿದ್ದು ಮಹಮದ್ ಇಜಾನ್ ಅಲಿಗೆ  ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಹೀಗಾಗಿ ಅಪಾಯದಿಂದ ಪಾರಾಗಿದ್ದಾನೆ ಎಂದಿದ್ದಾರೆ.

ಅಲ್ಲದೇ ಈ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಪಾಲಿಕೆ ವತಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ಬೇಸಿಗೆ ರಜೆ ಶುರವಾಗಿದ್ದು ಹೀಗಾಗಿ ಮಕ್ಕಳ ಹಿತದೃಷ್ಠಿಯಿಂದ  ಬೀದಿನಾಯಿಗಳ ಹಾವಳಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Key words: mysore-street dog- attacks-boy

ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ.
ಮೈಸೂರು,ಡಿಸೆಂಬರ್,13,2021(www.justkannada.in): ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

ಹೆಚ್ ಡಿ ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್‌ ನ ಮಹಮದ್ ಅಬಾನ್ 7 ಗಾಯಗೊಂಡ ಬಾಲಕ. ಮಹಮದ್ ಅಬಾನ್ ಮನೆಯ ಹೊರಗೆ ಆಟವಾಡುವಾಗ ನಾಯಿಗಳು ದಾಳಿ ಮಾಡಿವೆ.  ಘಟನೆಯಲ್ಲಿ ಅಬಾನ್ ಮಂಡಿ‌ ತೊಡೆ ಕೈಗೆ ಗಾಯಗಳಾಗಿದ್ದು, ಬಾಲಕನಿಗೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಿನೇ ದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು‌ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: Street-dog- attacked – boy- child

ಬಿಬಿಎಂಪಿ ಮೇಯರ್ ಗೂ ತಟ್ಟಿದ ಬೀದಿ ನಾಯಿಗಳ ಭೀತಿ……!
ಬೆಂಗಳೂರು: ಜೂ-28:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ, ರಸ್ತೆಯ ಇಕ್ಕೆಲಗಳಲ್ಲೂ ಬೀದಿನಾಯಿಗಳದ್ದೇ ಕಾರುಬಾರು. ಬೀದಿನಾಯಿಗಳು ಎಲ್ಲಿ ದಾಳಿ ಮಾಡುತ್ತವೋ ಎಂಬ ಭಯದಲ್ಲೇ ರಸ್ತೆಗಳಲ್ಲಿ ಸಾರ್ವಜನಿಕರು, ಮಕ್ಕಳಿಂದ ಮುದುಕರವರೆಗೂ ಜೀವ ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ಹಲವು ಮಕ್ಕಳನ್ನು ಬಲಿತೆಗೆದುಕೊಂದಿರುವ ಬೀದಿನಾಯಿಗಳ ದಂಡು, ಇನ್ನಷ್ಟು ಬಲಿಗಾಗಿ ಬಾಯ್ತೆರೆದು ದಾಳಿಗೆ ಸಜ್ಜಾಗುತ್ತಿವೆ. ಇಷ್ಟಾಗ್ಯೂ ಬಿಬಿಎಂಪಿಯಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಈಬಗ್ಗೆ ಗಮನಹರಿಸದಿರುವುದು ವಿಪರ್ಯಾಸ. ಈ ನಡುವೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೂ ಬಿದಿನಾಯಿಗಳ ಗುಂಪು ದಾಳಿಗೆ ಮುಂದಾದ ಘಟನೆ ನಡೆದಿದೆ.

ಬೆಂಗಳೂರಿನ ಆಸ್ಟಿನ್‌ಟೌನ್‌ ಬಾಲಕರ ಶಾಲೆಗೆ ಭೇಟಿ ನೀಡಿದ್ದ ಮೇಯರ್‌ ಗಂಗಾಂಬಿಕೆ ಅವರಿಗೆ ಗುಂಪು ಗೂಡಿದ್ದ ಬೀದಿ ನಾಯಿಗಳು ಸ್ವಾಗತಿಸಿವೆ. ಅಷ್ಟೇ ಅಲ್ಲ, 15-20 ನಾಯಿಗಳಿದ್ದ ಗುಂಪಿನಲ್ಲಿದ್ದ ಒಂದು ನಾಯಿ ಮೇಯರ್‌ ಮೇಲೆಯೇ ದಾಳಿ ನಡೆಸಲು ಮುಂದಾಯಿತು. ಒಂದು ಕ್ಷಣ ಗಾಬರಿಗೊಂಡ ಮೇಯರ್‌, ಶಾಲೆಯ ಸುತ್ತ ಸ್ವಚ್ಚತೆ ಕಾಪಾಡುವಂತೆ ಸೂಚಿಸಿದರು. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನಾಯಿಗಳನ್ನು ಓಡಿಸಿದ್ದಾರೆ.

ನಾಯಿಗಳನ್ನು ಹಿಡಿದು, ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸಲಾಯಿತು. ಇದೇ ಸಂದರ್ಭದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದ ಅವರು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೇಯರ್ ಗೂ ತಟ್ಟಿದ ಬೀದಿ ನಾಯಿಗಳ ಭೀತಿ: ದಾಳಿಗೆ ಮುಂದಾದ ನಾಯಿ ನೋಡಿ ಬೆಚ್ಚಿದ ಗಂಗಾಂಬಿಕೆ

Bangalore,BBMP,Street dog,Mayor Gangambike