stomach Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು.
ರಾಯಚೂರು, ನವೆಂಬರ್ 28, 2022 (www.justkannada.in): ರಾಯಚೂರಿನ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಒಟ್ಟು 187 ನಾಣ್ಯಗಳನ್ನು ಹೊರಗೆ ತೆಗೆದ ಸುದ್ದಿ ವರದಿಯಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದಂತಹ ವೈದ್ಯರ ಪ್ರಕಾರ, ರಾಯಚೂರಿನ ಲಿಂಗಸಗೂರಿನ 58 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಯಾವುದೋ ಒಂದು ರೀತಿಯ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಹಲವು ನಾಣ್ಯಗಳನ್ನು ನುಂಗಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಹಾಗೂ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಡಾ. ಈಶ್ವರ್ ಕಲಬುರಗಿ, ಡಾ. ಪ್ರಕಾಶ್ ಕಟ್ಟೀಮನಿ, ಅರವಳಿಕತೆ ತಜ್ಞರಾದ ಡಾ. ಅರ್ಚನಾ ಹಾಗೂ ಡಾ. ರೂಪಲ್ ಹುಲಕುಂದೆ ಅವರಿದ್ದರು.

ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಹೊರಗೆ ತೆಗೆದ ನಾಣ್ಯಗಳ ಪೈಕಿ 5 ರೂ. ಗಳ ೫೬ ನಾಣ್ಯಗಳು ಹಾಗೂ ರೂ.1 ರ ೮೦ ನಾಣ್ಯಗಳಿದ್ದವು. ಇವೆಲ್ಲಾ ಸೇರಿ ಬರೋಬ್ಬರಿ ಒಂದೂವರೆ ಕೆಜಿ ತೂಕವಿತ್ತಂತೆ.

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಲಾಯಿತು. ಕ್ಷ-ಕಿರಣ ಹಾಗೂ ಎಂಡೋಸ್ಕೋಪಿಕ್ ಚಿತ್ರಗಳ ಮೂಲಕ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಪತ್ತೆಯಾಗಿದೆ. “ಆತನನ್ನು ರಕ್ಷಿಸಲು ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿತ್ತು. ಆತನನ್ನು ಆಸ್ಪತ್ರೆಗೆ ಕರೆತಂದಾಗ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ನಾಣ್ಯಗಳನ್ನು ಹೊರಕ್ಕೆ ತೆಗೆಯಲಾಗಿದೆ,” ಎಂದು ಮಾಧ್ಯಮಕ್ಕೆ ಡಾ. ಈಶ್ವರ್ ಕಲಬುರಗಿ ಅವರು ಮಾಹಿತಿ ನೀಡಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  doctor -successfully -removed -187 coins – man’s- stomach

The post ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೃತಕ ಹೊಟ್ಟೆ ನೋವು ಇದ್ದರೆ ವೈದ್ಯರಿಗೆ ಔಷಧಿ ಕೊಡಲು ಸಾಧ್ಯನಾ? ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು,ಡಿಸೆಂಬರ್,21,2020(www.justkannada.in) : ನಿಜವಾದ ಹೊಟ್ಟೆ ನೋವು ಇದ್ದರೆ ಔಷಧಿ ಕೊಡಬಹುದು ಆದರೆ, ಕೃತಕ ಹೊಟ್ಟೆ ನೋವು ಇದ್ದರೆ ವೈದ್ಯರಿಗೆ ಔಷಧಿ ಕೊಡಲು ಸಾಧ್ಯನಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ಕಿಡಿಕಾರಿದ್ದಾರೆ.

ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ಕಿಡಿಕಾರಿದ ಅವರು ದೇವೇಗೌಡರ ಸೋಲಿಗೆ ಏನು ಹಾಗೂ ಯಾರು ಕಾರಣ ಎಂಬುವುದು ಚೆನ್ನಾಗಿ ಗೊತ್ತು ಎಂದು ತಿರುಗೇಟು ನೀಡಿದರು.

ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಜೆಡಿಎಸ್ ಬಿಜೆಪಿ ಜೊತೆಗೆ ವಿಲೀನ ಆದ್ರೆ ಪಕ್ಷ ಬಿಡುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾ ಏನು ಮಾಡಿದ್ದಿರಿ, ಚುನಾವಣೆ ಯಾವ ರೀತಿಯಲ್ಲಿ ನಡೆಸಿದ್ದೀರಿ ಎಂದು ಗೊತ್ತಿದೆ. ನಮ್ಮ ಕುಟುಂಬಕ್ಕೆ ಸೋಲು ಹೊಸತೇನು ಅಲ್ಲ ಎಂದು ಉತ್ತರಿಸಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್ ಬಿಜೆಪಿ ಜೊತೆಗೆ ಒಳಒಪ್ಪಂದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಳಒಪ್ಪಂದ ಮಾಡಿದ್ದು ಸತ್ಯ, ಆದರೆ, ಎಸ್.ಆರ್ ಶ್ರೀನಿವಾಸ್ ಅವರು  ಒಳಒಪ್ಪಂದ ಮಾಡಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಲಲು ಹಾಗೂ ಬಿಜೆಪಿ ಅಭ್ಯರ್ಥಿ ಗೆಲ್ಲಲು ಶ್ರೀನಿವಾಸ್ ಕಾರಣ ಎಂದು ಕಿಡಿಕಾರಿದರು.

ಶ್ರೀನಿವಾಸ್ ಅವರನ್ನು ಸಚಿವರನ್ನಾಗಿ ಮಾಡಿದ್ದೆ, ಅವರಿಗೆ ಸಣ್ಣ ಇಲಾಖೆ ಕೊಟ್ಟಿದ್ದೆ, ಆದ್ರೆ ಅವರು ಹಣಕಾಸುನಂತಹ ದೊಡ್ಡ ಇಲಾಖೆಯ ನಿರೀಕ್ಷೆಯಲ್ಲಿದ್ದರು. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ನಿಮ್ಮ ಸಂಬಂಧ ಯಾರ ಜೊತೆ ಇದೆ ಎಂದು ಗೊತ್ತು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : artificial-stomach-pain-Can-doctor-give-medicine?-Former CM-H.D.Kumaraswamy

The post ಕೃತಕ ಹೊಟ್ಟೆ ನೋವು ಇದ್ದರೆ ವೈದ್ಯರಿಗೆ ಔಷಧಿ ಕೊಡಲು ಸಾಧ್ಯನಾ? ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.