SL Bhairappa Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು: ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು
ಮೈಸೂರು,ಸೆಪ್ಟಂಬರ್,25,2025 (www.justkannada.in):  ನಿನ್ನೆ ನಿಧನರಾದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಪಾರ್ಥೀವ ಶರೀರವನ್ನ ಮೈಸೂರಿಗೆ ತರಲಾಗಿದ್ದು ಕಲಾಮಂದಿರದ ಆವರಣದಲ್ಲಿ  ಬಳಿ ಸಾರ್ವಜನಿಕರಿಗೆ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿದೆ.

ಇಂದು ಸಂಜೆ 6.30ರವರೆಗೆ ಕಲಾಮಂದಿರ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿದ್ದು ನಂತರ ಜೆಎಸ್ ಎಸ್ ಶವಗಾರಕ್ಕೆ ಪಾರ್ಥಿವ ಶರೀರ ಶಿಫ್ಟ್ ಆಗಲಿದೆ. ನಾಳೆ ಬೆಳಗ್ಗೆ 8.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ‌ ನಡೆದು  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಹೆಚ್.ಸಿ ಮಹದೇವಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಎಂಎಲ್ ಸಿ ಶಿವಕುಮಾರ್ ಸೇರಿ ಹಲವು ರಾಜಕೀಯ ಗಣ್ಯರು ಎಸ್.ಎಲ್.ಭೈರಪ್ಪ ಅವರ ಅಂತಿಮ ದರ್ಶನ ಪಡೆದರು.

ಎಸ್ ಎಲ್ ಬೈರಪ್ಪ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಹೆಚ್ ವಿಶ್ವನಾಥ್ , ಕನ್ನಡನಾಡಿನ ಸಾಹಿತ್ಯ ಲೋಕದ ದಿಗ್ಗಜ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಎಲ್ಲಾ ವಯಸ್ಸಿನವರನ್ನ ಸಾರ್ಥಕತೆಯಿಂದ ಬೆರೆಯುವಂತೆ ಮಾಡಿದವರು. ಇಂತಹ ಸಾಹಿತ್ಯಗೆ ಜ್ಞಾನಪೀಠ, ರಾಜೋತ್ಸವ ಪ್ರಶಸ್ತಿ ಸಿಗಲಿಲ್ಲ. ಇದು ಸರ್ಕಾರದ ಉತ್ಪೇಕ್ಷೆಯೋ ರಾಜಕಾರಣವೋ ಗೊತ್ತಿಲ್ಲ. ಆದರೆ ಹೀಗೆ ಆಗಬಾರದಿತ್ತು. ಸಾಹಿತ್ಯ ಲೋಕಕ್ಕೆ ರಾಜಕಾರಿಗಳು ಮಾಡಿದ ಅಪಮಾನ. ನಾನು ಅವರನ್ನ ಟೀಕೆ ಮಾಡಿದ್ದೆ.  ಅವರ ಮನೆಗೆ ಹೋಗಿ ಆ ಬಗ್ಗೆ ಮಾತು ಆಡಿದ್ದೆ. ಎಸ್ಎಲ್ ಬೈರಪ್ಪ ಹೆಸರು ನಿರಂತರ ಎಂದರು.

ಎಸ್ ಎಲ್ ಭೈರಪ್ಪರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಎಸ್ ಬೈರಪ್ಪನವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕಾದಂಬರಿಗಳು, ಸಾಹಿತ್ಯ ಯುವಜನತೆಯ ಓದುವ ದಿಕ್ಕನ್ನೆ ಬದಲಾಯಿಸಿತು. ಅವರದ್ದು ಸಮಾಜದ ಬೇರನ್ನೆ ಅಲುಗಾಡಿಸಿದ ಕೃತಿಗಳು. ಸಮಾಜದ ನೈಜ ಸಂಗತಿಗಳನ್ನ ಬರೆದ್ರು. ನಿಜ ಜೀವನಕ್ಕೆ ಹತ್ತಿರವಾದ ಸಂಗತಿಗಳನ್ನೆ ಬರೆಯುತ್ತಿದ್ರು. ತೀರ ಬಡತನದಿಂದ ಬಂದವರು ಅವರು ಅದನ್ನ ಅನುಭವಿಸಿದವರಿಗೆ ಆ ನೋವು ಗೊತ್ತು. ಯುವಜನರನ್ನ ಮುನ್ನಲೆಗೆ ತರುವ ಕೆಲಸ ಮಾಡಿದ್ರು. ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳು ಸಕಲ ಸರ್ಕಾರಿ ಗೌರವದಿಂದ ಮಾಡಲು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಭೈರಪ್ಪರ ಸ್ಮಾರಕವನ್ನ ಮೈಸೂರಿನಲ್ಲಿ ನಿರ್ಮಾಣಕ್ಕೆ ತಿಳಿಸಿದ್ದಾರೆ ಎಂದರು.

ಭೈರಪ್ಪರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೋಮ್ಮಾಯಿ, ಸಾಹಿತ್ಯ ಲೋಕದಲ್ಲಿ ಕ್ರೀಯಾ ಶೀಲ, ಸಾಹಿತಿ ನಮ್ಮನ್ನ ಅಗಲಿದ್ದಾರೆ. ತಮ್ಮನ್ನ ತಾವೇ ಆಚೆ ಇಟ್ಟುಕೊಂಡು ತಮ್ಮನ್ನ ತಾವೇ ವಿಶ್ಲೇಷಣೆ ಮಾಡಿಕೊಳ್ತಿದ್ರು. ವೈಚಾರಿಕತೆ, ವಸ್ತುಸ್ಥಿತಿಯ ಸಾಹಿತ್ಯ ರಚನೆ ಮಾಡುವ ವ್ಯಕ್ತಿತ್ವ. ಈ ರೀತಿಯ ವೈಚಾರಿಕತೆಯ ವ್ಯಕ್ತಿತ್ವ ಬಹಳ ಅಪರೂಪ. ಎಲ್ಲವನ್ನು ಕೂಡ ಸತ್ಯದ ದೃಷ್ಠಿಯಿಂದ ನೋಡ್ತಾಯಿದ್ರು. ಎಷ್ಟೇ ಎತ್ತರ ಬೆಳೆದ್ರು ತಮ್ಮ ಬೇರನ್ನ ಭೈರಪ್ಪನವರು ಮರೆಯಲಿಲ್ಲ. ನಾನು ಮುಖ್ಯಮಂತ್ರಿಯಾದ ಪ್ರಶಸ್ತಿ ಕೇಳಿಲ್ಲ ಬೇರೆ ಏನನ್ನು ಕೇಳಿಲ್ಲ. ನನಗೆ ಅವರು ಕೇಳಿದ್ದು ನಮ್ಮ ಊರಿಗೆ ನೀರು ಕೊಡಪ್ಪ ಅಂದ್ರು. ನಾವು ಅದನ್ನ ಫಾಲೋ ಅಪ್ ಮಾಡಿದ್ವಿ. ರೈತರ ಬಗ್ಗೆ ಊರಿನ ಬಗ್ಗೆ ಕೆರೆ ಬಗ್ಗೆ ಅಪಾರ ಪ್ರೀತಿ. ಉತ್ತರಾಯಣದಲ್ಲಿ ರಾಮಾಯಣದಲ್ಲಿ ಮತ್ತೊಂದು ಆಯಾಮ. ಅದರ ಜೊತೆ ಮಹಾಭಾರತದ ಮತ್ತೊಂದು ಆಯಾಮ. ವಂಶವೃಕ್ಷ ಕಾದಂಬರಿ ದೇಶಾದ್ಯಂತ ಕ್ರಾಂತಿ ಉಂಟಾಯ್ತು ಬಳಿಕ ಅದು ಸಿನಿಮಾ ಆಯ್ತು ಎಂದರು.

ಎಸ್.ಎಲ್.ಭೈರಪ್ಪ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ  ಎಂಎಲ್‌ಸಿ ಶಿವಕುಮಾರ್, ಕನ್ನಡ ಸಾರಸ್ವತ ಲೋಕಕ್ಕೆ ಭೈರಪ್ಪನವರ ಕೊಡುಗೆ ಅಪಾರ. ಜಗತ್ತಿನ 42 ಭಾಷೆಗಳಲ್ಲಿ ಅವರ ಕಾದಂಬರಿಗಳು ಅನುವಾದವಾಗಿದೆ. ಜಗತ್ತಿನಾದ್ಯಂತ ಯಾರಾದ್ರು ಓರ್ವ ಸ್ಟಾರ್ ಕಾದಂಬರಿಕಾರ ಅಂದ್ರೆ ಭೈರಪ್ಪ. ಧರ್ಮದ ಬಗ್ಗೆ, ಸಾಹಿತ್ಯದ ಬಗ್ಗೆ ಬರಯಬೇಕಿದ್ರೆ ಅವ್ರು ಅಲ್ಲೇ ಹೋಗಿ ಅವರ ಜೊತೆಯೆ ಇದ್ದು ಬರೆಯುತ್ತಿದ್ದರು. ಯಾರದು ಏನೇ ಐಡಿಯಾಲಾಜಿಕಲಿ ಡ್ರಿಫ್ರೆನ್ಸ್ ಇದ್ರು ಎಲ್ಲರು ಅವರನ್ನ ಗೌರವಿಸುತ್ತಾರೆ. ಅವಾರ್ಡ್ ಬಂದ್ರು ಸಮಾಜಕ್ಕೆ ಕೊಟ್ರೆ ಹೊರತು ಮನೆಗೆ ತೆಗೆದುಕೊಂಡು ಹೋಗಲಿಲ್ಲ. ಭೈರಪ್ಪನವರ ಹೆಸರು ಶಾಶ್ವತವಾಗಿ ಉಳಿಸೋ ಕೆಲಸವನ್ನ ನಾವು ಮಾಡೋಣ. ತಾಯಿ ಹೆಸರಿನಲ್ಲಿ ಅವರ ಊರಿನಲ್ಲಿ ಲೈಬ್ರೇರಿ ತೆರೆದಿದ್ರು. ನನ್ನ ಶಾಂತಿಯುತ ಪ್ರಣಾಮವನ್ನ ತಿಳಿಸಲು ಬಯಸುತ್ತೇನೆ ಎಂದರು.

Key words: Mysore, Writer,  SL Bhairappa, Political Leader

The post ಮೈಸೂರು: ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನ ಪಡೆದ  ರಾಜಕೀಯ ಗಣ್ಯರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭೈರಪ್ಪ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ : ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕ್ರಮ- ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 25,2025 (www.justkannada.in)  ಪದ್ಮಭೂಷಣ ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಬೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪದ್ಮಭೂಷಣ ಹಿರಿಯ ಸಾಹಿತಿ ದಿವಂಗತ ಎಸ್.ಎಲ್.ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಬೈರಪ್ಪನವರಿಗೆ ಮೈಸೂರು ಕರ್ಮಸ್ಥಳ. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಬೈರಪ್ಪನವರು , ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು ಎಂದರು.

ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ

ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ  ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸಲು ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಮೈಸೂರಿನಲ್ಲಿ ಸ್ಮಾರಕ

ಎಸ್.ಎಲ್.ಬೈರಪ್ಪನವರ ಸ್ಮಾರಕ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹೇಳಿದರೆಂದು ಸ್ಮಾರಕ ನಿರ್ಮಿಸುವುದಿಲ್ಲ.  ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಮೈಸೂರಿನಲ್ಲಿಯೇ ತಮ್ಮ ಜೀವಿತಾವಧಿಯನ್ನು ಕಳೆದಿದ್ದು, ವಿದ್ಯಾಭ್ಯಾಸ, ಸಾಹಿತ್ಯಕೃಷಿಯಲ್ಲಿ ನಡೆಸಿದ್ದರು ಎಂದರು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಬೈರಪ್ಪನವರೊಂದಿಗೆ ಮುಖ್ಯಮಂತ್ರಿಗಳ ಒಡನಾಟದ ಬಗ್ಗೆ ಪ್ರತಿಕ್ರಿಯೆ ನೀಡಿ,  ಸಾಹಿತ್ಯ ಹಾಗೂ ಸ್ನೇಹ ಬೇರೆಯಾಗಿದ್ದು, ನಮ್ಮ ದೃಷ್ಟಿಕೋನಗಳು ಬೇರೆಯಾಗಿದ್ದರೂ, ಉತ್ತಮ ಬಾಂಧವ್ಯವಿತ್ತು ಎಂದರು. ಬೈರಪ್ಪನವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ. ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದರು. ಯಾವುದೇ ಪ್ರಶಸ್ತಿಗೂ ಹಂಬಲಿಸದ ಬೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು ಎಂದರು.

Key words: SL Bhairappa, Memorial, Mysore, CM Siddaramaiah

The post ಭೈರಪ್ಪ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ : ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕ್ರಮ- ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಾಹಿತಿ ಎಸ್‌.ಎಲ್.ಭೈರಪ್ಪ ನಿಧನ: ಮಾಜಿ ಮೇಯರ್ ಶಿವಕುಮಾರ್ ಕಂಬನಿ
ಮೈಸೂರು,ಸೆಪ್ಟಂಬರ್,25,2025 (www.justkannada.in):  ರಾಷ್ಟ್ರಪೂರಕ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಭಿನ್ನ ಮಜಲು ನೀಡಿದ್ದ ಎಸ್.ಎಲ್.ಭೈರಪ್ಪ ಅವರು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದರು. ಅಂತಹ ಮೇರು ವ್ಯಕ್ತಿಯೊಂದಿಗೆ ಒಡನಾಡುವ ಅವಕಾಶ ಸಿಕ್ಕಿದ್ದೇ ನಮ್ಮ ಪಾಲಿನ ಪುಣ್ಯ ಎಂದು ಮಾಜಿ ಮೇಯರ್ ಶಿವಕುಮಾರ್ ಸ್ಮರಿಸಿದ್ದಾರೆ.

ಭೈರಪ್ಪ ಅವರ ಕೃತಿಗಳು ರಷ್ಯನ್, ಚೀನಿ ಭಾಷೆಗಳಿಗೂ ಅನುವಾದವಾಗಿವೆ. ಮಾತ್ರವಲ್ಲ, ಲಿಪಿಯೇ ಇಲ್ಲದ ಸಂಕೇತಿ ಭಾಷೆಗೂ ಅನುವಾದ ಆಗಿರುವುದು ಅವರ ಸಾಹಿತ್ಯದ ಶಕ್ತಿಗೆ ಸಾಕ್ಷಿಯಾಗಿದೆ.

ತಮ್ಮ ಕಾದಂಬರಿಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಭೈರಪ್ಪ ಅವರು ಗುಜರಾತ್ ಮತ್ತು ದೆಹಲಿಯಲ್ಲೂ ಬೋಧಕರಾಗಿದ್ದರು. ನಿವೃತ್ತಿ ಜೀವನ ಕಳೆಯಲು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದರು. ಕುವೆಂಪುನಗರದ ಉದಯರವಿ  ರಸ್ತೆಯಲ್ಲಿ ವಾಸವಿದ್ದರು. ನಾನು ಪ್ರತಿನಿಧಿಸುವ ವಾರ್ಡ್ ಸಮೀಪದಲ್ಲೇ ಅವರ ಮನೆ ಇದ್ದ ಕಾರಣ ಅನೇಕ ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಸದಾವಕಾಶ ಸಿಕ್ಕಿತ್ತು. ಅವರಿಗಿದ್ದ ಭಾರತೀಯ ಪರಂಪರೆ, ನಾಗರಿಕ ಸಂವಿಧಾನ, ರಾಜಕೀಯ ಪ್ರಜ್ಞೆ, ಅಭಿವೃದ್ಧಿಯ ಮುನ್ನೋಟಗಳ ಸ್ಪಷ್ಟತೆಯನ್ನು ಕಂಡು ಚಕಿತನಾಗಿದ್ದೆ.

ತಲೆಮಾರುಗಳ ಸಾಕ್ಷಿ ಪ್ರಜ್ಞೆಯಂತಿದ್ದ ಭೈರಪ್ಪ ಅವರ ನಿರ್ಗಮನ ನಿರ್ವಾತ ಸೃಷ್ಟಿಸಿದೆ. ಮಾರ್ಗದರ್ಶಿ ವ್ಯಕ್ತಿತ್ವದ ಅವರ ಅಗಲಿಕೆ ತುಂಬಲಾರದ ನಷ್ಟ ನಷ್ಟವಾಗಿದೆ ಎಂದು ಶಿವಕುಮಾರ್ ಪ್ರಕಟಣೆ ಮೂಲಕ ಸಂತಾಪ ಸೂಚಿಸಿದ್ದಾರೆ.

Key words: SL Bhairappa, passed away, Former mayor, Shivakumar, Condolences

The post ಸಾಹಿತಿ ಎಸ್‌.ಎಲ್.ಭೈರಪ್ಪ ನಿಧನ: ಮಾಜಿ ಮೇಯರ್ ಶಿವಕುಮಾರ್ ಕಂಬನಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಹಿತಿ ಎಸ್‌ಎಲ್ ಭೈರಪ್ಪ ಅಂತ್ಯಕ್ರಿಯೆಗೆ ನಿರ್ಧಾರ
ಬೆಂಗಳೂರು, ಸೆಪ್ಟಂಬರ್, 24,2025 (www.justkannada.in):  ಹೃದಯಾಘಾತದಿಂದ ಇಂದು ನಿಧನರಾದ ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಪದ್ಮಭೂಷಣ ಪುರಸ್ಕೃತರು, ಹಿರಿಯ ಸಾಹಿತಿ ಡಾ.ಎಸ್‌ಎಲ್ ಭೈರಪ್ಪ ಅವರು ಇಂದು ನಿಧನರಾದ ವಿಷಯವನ್ನು ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ಪ್ರಕಟಿಸಿದೆ.  ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಎಸ್ ಎಲ್ ಭೈರಪ್ಪ ಅವರ ಪಾರ್ಥೀವ ಶರೀರವನ್ನ ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮತ್ತು ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಶುಕ್ರವಾರ  ಅಂತ್ಯಕ್ರಿಯೆ ನೆರವೇರಲಿದೆ.

Key words: Writter, SL Bhairappa, funeral, government honors

The post ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಹಿತಿ ಎಸ್‌ಎಲ್ ಭೈರಪ್ಪ ಅಂತ್ಯಕ್ರಿಯೆಗೆ ನಿರ್ಧಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ
ಬೆಂಗಳೂರು,ಸೆಪ್ಟಂಬರ್,24,2025 (www.justkannada.in): ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ(94) ನಿಧನರಾಗಿದ್ದಾರೆ.

ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಸಾಹಿತಿ, ಪದ್ಮಭೂಷಣ ಎಸ್.ಎಲ್ ಭೈರಪ್ಪ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ. ಎಸ್ ಎಲ್ ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಪರ್ವ ಗೃಹಭಂಗ, ವಂಶವೃಕ್ಷ, ನೆಲೆ, ತಪ್ಪಲಿಯು ನೀನಾದೆ ಮಗನೆ ಕಾದಂಬರಿಗಳನ್ನ ಎಸ್ ಎಲ್ ಭೈರಪ್ಪ ರಚಿಸಿದ್ದಾರೆ. 1975ರಲ್ಲಿ ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

Key words: SL Bhairappa, passes away

The post ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಋಣ ಸಂದಾಯದ ಕಾರಣಕ್ಕೆ ರಾಜ್ಯಪಾಲರ ಕ್ರಮ ಸಮರ್ಥನೆ: ಎಸ್.ಎಲ್ ಭೈರಪ್ಪ ವಿರುದ್ದ ರಮೇಶ್ ಬಾಬು ಕಿಡಿ
ಬೆಂಗಳೂರು,ಆಗಸ್ಟ್,26,2024 (www.justkannada.in): ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಇದೆ . ಸಾಹಿತಿ ಎಸ್. ಎಲ್. ಬೈರಪ್ಪ ಅವರು ತಮ್ಮ ಎಂದಿನ ಚಾಳಿಯಂತೆ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಆಗಿದೆ. ಕೇಂದ್ರ ಸರ್ಕಾರದಿಂದ ಅವರು ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿರುತ್ತದೆ. ಋಣ ಸಂದಾಯದ ಕಾರಣಕ್ಕಾಗಿ ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಕೆಪಿಸಿಸ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಿಡಿಕಾರಿದ್ದಾರೆ.

ಈ ಸಂಬಂಧ ಪ್ರಕಟಣೆ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ರಮೇಶ್ ಬಾಬು,  ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ನಂ. 1224/2023 ಪ್ರಕರಣದಲ್ಲಿ ಇತ್ತೀಚಿಗೆ ಆದೇಶವನ್ನು ನೀಡಿ ರಾಜ್ಯಪಾಲರ ಸಂವಿಧಾನ ಬಾಹಿರ ಕಾರ್ಯಗಳಿಗೆ ತನ್ನ ಅಸಮ್ಮತಿಯನ್ನು ವ್ಯಕ್ತ ಪಡಿಸಿರುತ್ತದೆ. ಇದೇ ಪ್ರಕರಣದಲ್ಲಿ ರಾಜ್ಯಪಾಲರು ವಿಧೇಯಕಗಳನ್ನು ತಡೆಹಿಡಿಯುವುದು ಸರಿಯಾದ ಕ್ರಮ ಅಲ್ಲವೆಂದು ಹೇಳಿರುತ್ತದೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ತೆಲಂಗಾಣ, ಛತ್ತಿಸ್ ಗಡ್ ಮತ್ತು ತಮಿಳುನಾಡು ಪ್ರಕರಣಗಳಲ್ಲಿ ರಾಜ್ಯಪಾಲರುಗಳ ನಡೆಯನ್ನು ಸರಿ ಅಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಮಧ್ಯಪ್ರದೇಶದ ಹೈ ಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯಪಾಲರು ಸಂವಿಧಾನದ ನಿಯಮಗಳಿಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬೇಕೇ ಹೊರತು ತಮ್ಮ ವೈಯಕ್ತಿಕ ಅನಿಸಿಕೆಗಳಿಗೆ ಅನುಗುಣವಾಗಿ ಆದೇಶಗಳನ್ನು ನೀಡುವುದು ಅಥವಾ ವರ್ತಿಸುವುದು ತಪ್ಪೆಂದು ಬಹಳ ಸ್ಪಷ್ಟವಾಗಿ ಹೇಳಿದೆ. ಸ್ವಯಂ ಘೋಷಿತ ವಿಶ್ವ ವಿಖ್ಯಾತ ಸಾಹಿತಿ ಅರೆ ಸಂವಿಧಾನ ತಜ್ಞ ಎಸ್. ಎಲ್. ಬೈರಪ್ಪ ಅವರಿಗೆ ನ್ಯಾಯಪೀಠಗಳ ತೀರ್ಪುಗಳನ್ನು ಓದಲು ಬಹುಶಃ ಸಮಯದ ಕೊರತೆ ಇರಬಹುದು? ಭೈರಪ್ಪನವರು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ರಾಜ್ಯಪಾಲರ ಹುದ್ದೆಯ ಆಮಿಷವನ್ನೂ ಪಡೆದಿರಬಹುದು ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

ಬೈರಪ್ಪನವರ ಸಾಹಿತ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕರು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು. ಆರ್. ಅನಂತಮೂರ್ತಿ ಅವರು ಇವರ ಆವರಣ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ನೀಡಿ, ಬೈರಪ್ಪನವರ ಸಾಹಿತ್ಯ ಅಪಾಯಕಾರಿ ಮತ್ತು ಇವರ ಸಾಹಿತ್ಯ ಸಮಾಜಕ್ಕೆ ಮತ್ತು ಸಮುದಾಯಗಳಿಗೆ ಪೂರಕವಲ್ಲ ಎಂದು ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಬೈರಪ್ಪನವರು ತಮ್ಮ ಸಾಹಿತ್ಯ ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬಿಜೆಪಿಮಯಗೊಳಿಸಿದ್ದಾರೆ. ಮೊದಲಿನಿಂದಲೂ ಮೂಲಭೂತವಾದಗಳಿಗೆ ತಮ್ಮ ಸಾಹಿತ್ಯವನ್ನು ಸಮರ್ಪಣೆಗೊಳಿಸಿಕೊಂಡಿರುವ ಬೈರಪ್ಪನವರು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಬಾರದು ಎಂದು ಹೇಳಿರುವುದು ಅವರ ಮನಸ್ಥಿಗೆಗೆ ಅನುಗುಣವಾಗಿ ಇರುತ್ತದೆ. ಬೈರಪ್ಪನವರು ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಬದಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಳಿದರೆ  ಹೆಚ್ಚು ಚಪ್ಪಾಳೆ ಗಿಟ್ಟಿಸಬಹಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ದೇಶದಲ್ಲಿ ಬೊಮ್ಮಾಯಿ ಪ್ರಕರಣವನ್ನು ಒಳಗೊಂಡಂತೆ ಇತ್ತೀಚಿನ ತಮಿಳುನಾಡು ರಾಜ್ಯಪಾಲರ ಪ್ರಕರಣದವರೆಗೆ ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳನ್ನು ನೀಡಿರುತ್ತದೆ ಮತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಬೇಕು ಮತ್ತು ಸಂವಿಧಾನದ ಅಡಿಯಲ್ಲಿ ದತ್ತವಾದ ಅಧಿಕಾರಗಳನ್ನು ಮಾತ್ರ ಚಲಾಯಿಸಬೇಕು ಎಂದು ಹೇಳಿರುತ್ತದೆ. ರಾಜ್ಯಪಾಲರು ಚುನಾಯಿತ ಸರ್ಕಾರಗಳ ಮೇಲೆ ಸವಾರಿ ಮಾಡಲು ಹೊರಟರೆ ಅದು ಜನಾಭಿಪ್ರಾಯಕ್ಕೆ ಮತ್ತು ಜನತಂತ್ರಕ್ಕೆ ಅಪಚಾರವಾಗುತ್ತದೆ. ರಾಜ್ಯಪಾಲರು ಕೇಂದ್ರ ಸರ್ಕಾರಗಳ ಸೂಚನೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶವಿಲ್ಲವೆಂದು ಸಂವಿಧಾನ ಮತ್ತು ನ್ಯಾಯಾಲಯಗಳು ಬಹಳ ಸ್ಪಷ್ಟವಾಗಿ ತಿಳಿಸಿರುತ್ತವೆ. ಆದರೆ ವಿಶ್ವ ವಿಖ್ಯಾತ ಸಾಹಿತಿಗಳಿಗೆ  ಜಾಣಕುರುಡುತನ ಮತ್ತು ಕಿವುಡುತನ ಒಮ್ಮೊಮ್ಮೆ ಆವರಿಸಿಕೊಳ್ಳುತ್ತದೆ.

ಎಸ್. ಎಲ್.ಬೈರಪ್ಪನವರು ಇಂತಹ ವಿಷಯಕ್ಕೆ ಮೂಗು ತೂರಿಸಿ ಮಾತನಾಡುವ ಬದಲು ಭಾರತೀಯ ಜನತಾ ಪಕ್ಷದಲ್ಲಿ ಯಾವುದಾದರೂ ಹುದ್ದೆಯನ್ನು ಬೇಡಿ ಪಡೆದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡಿದರೆ ಅದು ಸರಿಯಾದ ಕ್ರಮವಾಗುತ್ತದೆ. ಕೇವಲ ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಗುರಿಯಾಗಿ ಬೆತ್ತಲಾಗುವುದು ಬೇಡ. ಬಹುಶಃ ಇಂತಹ ಹೇಳಿಕೆಗಳ ಮೂಲಕ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿಶ್ವವಿದ್ಯಾಲಾಯಗಳಿಂದ ಮತ್ತೊಂದು ಗೌರವ ಡಾಕ್ಟರೇಟ್ ಪಧವಿಯ ನಿರೀಕ್ಷೆಯನ್ನು ಇಟ್ಟುಕೊಂಡಿರಬಹುದು. ಬೈರಪ್ಪನವರ ಈ ಹೇಳಿಕೆಗೆ ಬಿಜೆಪಿ ಆಡಳಿತದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದರೂ ಆಶ್ಚರ್ಯವಿಲ್ಲ ಎಂದು ರಮೇಶ್ ಬಾಬು ಲೇವಡಿ ಮಾಡಿದ್ದಾರೆ.

Key words: Governor, action, justified, SL Bhairappa, congress, Ramesh Babu

The post ಋಣ ಸಂದಾಯದ ಕಾರಣಕ್ಕೆ ರಾಜ್ಯಪಾಲರ ಕ್ರಮ ಸಮರ್ಥನೆ: ಎಸ್.ಎಲ್ ಭೈರಪ್ಪ ವಿರುದ್ದ ರಮೇಶ್ ಬಾಬು ಕಿಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಿನಿಮಾ ಆಗುತ್ತಿದೆ ಎಸ್.ಎಲ್.ಭೈರಪ್ಪರ ‘ಪರ್ವ’ ಕಾದಂಬರಿ: ವಿವೇಕ್ ಅಗ್ನಿಹೋತ್ರಿದ ಸಿನಿಮಾ ಟೈಟಲ್ ಲಾಂಚ್
ಬೆಂಗಳೂರು, ಅಕ್ಟೋಬರ್ 22, 2023 (www.justkannada.in): ಖ್ಯಾತ ಲೇಖಕ ಎಸ್​.ಎಲ್​. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ  ‘ದಿ ಕಾಶ್ಮೀರ್​ ಫೈಲ್ಸ್​’, ‘ದಿ ವ್ಯಾಕ್ಸಿನ್​ ವಾರ್​’ ಖ್ಯಾತಿಯ ವಿವೇಕ್​ ಅಗ್ನಿಹೋತ್ರಿ ಸಿನಿಮಾ ಮಾಡುತ್ತಿದ್ದಾರೆ.

ಈ ಸಿನಿಮಾ ಮೂರು ಭಾಗಗಳಲ್ಲಿ ​ಗಳಲ್ಲಿ ಬರುತ್ತದೆ ಎಂದು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ‘ಪರ್ವ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಅಂದಹಾಗೆ ಸ್ವತಃ ಎಸ್​.ಎಲ್​. ಭೈರಪ್ಪ ಅವರೇ ಟೈಟಲ್​ ಲಾಂಚ್​ ಮಾಡಿದ್ದಾರೆ.

ಅಂದಹಾಗೆ ಪ್ರಕಾಶ್​ ಬೆಳವಾಡಿ ಅವರು ‘ಪರ್ವ’ ಕೃತಿಯನ್ನು ಆಧರಿಸಿದ ಇಂಗ್ಲಿಷ್​ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಇದು 8 ಗಂಟೆ ಅವಧಿಯ ದೀರ್ಘ ನಾಟಕ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಈ ನಾಟಕ ಪ್ರದರ್ಶನವಾಗಿದೆ.

ಸಿನಿಮಾ ಕುರಿತು ಮಾತನಾಡಿರುವ ವಿವೇಕ್​ ಅಗ್ನಿಹೋತ್ರಿ, ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಬರುತ್ತದೆ ಎಂದಿದ್ದಾರೆ.

The post ಸಿನಿಮಾ ಆಗುತ್ತಿದೆ ಎಸ್.ಎಲ್.ಭೈರಪ್ಪರ ‘ಪರ್ವ’ ಕಾದಂಬರಿ: ವಿವೇಕ್ ಅಗ್ನಿಹೋತ್ರಿದ ಸಿನಿಮಾ ಟೈಟಲ್ ಲಾಂಚ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು: ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು- ಸಾಹಿತಿ ಎಸ್.ಎಲ್ ಭೈರಪ್ಪ.
ಮೈಸೂರು,ಜೂನ್,2,2022(www.justkannada.in): ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್ ಭೈರಪ್ಪ ತಮ್ಮ ನಿಲುವು ತಿಳಿಸಿದ್ದು, ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಸಾಹಿತಿ ಎಸ್.ಎಲ್ ಭೈರಪ್ಪ,  ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು. ಆಗಲೂ ಅವರಿಗೆ ಬೇಕಾದವರನ್ನ ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಅವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನ ಒಪ್ಪಿಕೊಂಡು ಅಳವಡಿಸಿಕೊಂಡರು ಎಂದು ಮಾಹಿತಿ ಬಿಚ್ಚಿಟ್ಟರು.

ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ನಾನು ಸಲಹೆ ಕೊಟ್ಟಿದ್ದೆ.

ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು ? ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು. ನಾನು ಲೇಖಕ, ಕಾರ್ಯಕರ್ತ ಅಲ್ಲ.  ವಾಜಪೇಯಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು.  ಆಗ ಸಾಹಿತಿಗಳು ದೇಶದ ತುಂಬೆಲ್ಲ “ಪ್ರಶಸ್ತಿ ವಾಪ್ಸಿ” ಚಳವಳಿ ಶುರು ಮಾಡಿದರು.  ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ನಾನು ಸಲಹೆ ಕೊಟ್ಟಿದ್ದೆ.  15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಎಂದು ಸಾಹಿತಿ ಎಸ್‌.ಎಲ್.ಭೈರಪ್ಪ ಹೇಳಿದರು.

ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ.

ಪ್ರಜಾಪ್ರಭುತ್ವಕ್ಕಾಗಿ ಎಲೆಕ್ಷನ್ ನಡೆಯಬೇಕು.  ಆದರೆ ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲಾ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು.  ನಾಟಕ ಇರೋದು ಚಳವಳಿ ಮಾಡೋಕೆ.  ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ.  ಅಡ್ಡಂಡ ಕಾರ್ಯಪ್ಪ ತೆಗೆದು ಹಾಕಲು ಚಳವಳಿ ಮಾಡಿದವರಿಗೆ ಅದು ಸಾಧ್ಯ ಆಗಲಿಲ್ಲ.

ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟು, ಮುಸ್ಲಿಂಗಳು ಅವರದ್ದೇ ಐಡಿಯಾಲಜಿ ಮಾಡುತ್ತಾರೆ.  ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸಬೇಕು ಅಂತ ಪ್ರತಾಪ್ ಸಿಂಹ ಹೇಳಿದರು.  “ಟಿಪ್ಪುವಿನ ನಿಜ ಸ್ವರೂಪ” ಪುಸ್ತಕವನ್ನು ಯಾರೂ ಓದುವುದಿಲ್ಲ. ಟಿಪ್ಪು ಹೆಸರು ಬದಲು ಅಬ್ದುಲ್ ಕಲಾಂ ಹೆಸರು ಇಟ್ಟರೆ ತಪ್ಪೇನು…? ಎಂದು ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ  ಪ್ರಶ್ನಿಸಿದರು.

ಪ್ರತಾಪ್ ಗಢ್‌ ದ ಸ್ಟೋರಿ ಬಿಚ್ಚಿಟ್ಟು ಶಿವಾಜಿ ಕಾಲದ ಘಟನೆಯನ್ನು ವಿವರಿಸಿದ ಸಾಹಿತಿ ಎಸ್ ಎಲ್ ಭೈರಪ್ಪ, ಬಿಜಾಪುರ ಸುಲ್ತಾನರ ಸೇನಾಧಿಪತಿ ಅಫಜಲ್ ಖಾನ್ ಹಾಗೂ ಶಿವಾಜಿ ನಡುವಿನ ಘಟನೆ ಸ್ಮರಿಸಿದರು.  ಸಂಧಾನದ ನೆಪದಲ್ಲಿ ಶಿವಾಜಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ವೇಳೆ ಬುದ್ದಿವಂತಿಕೆ ಪ್ರದರ್ಶಿಸಿದ ಶಿವಾಜಿ.ವ್ಯಾಘ್ರನ ಖಡ್ಗದಿಂದ ಅಫಜಲ್ ಖಾನ್ ಹತ್ಯೆ ಮಾಡಿದ್ದ.

ಅಲ್ಲಿನ ಗೈಡ್‌ ನನಗೆ ಈ ಮಾಹಿತಿ ಕೊಡಲಿಲ್ಲ. ನಾನು ಐದು ರೂಪಾಯಿ ಕೊಟ್ಟೆ ಆಮೇಲೆ ಅದನ್ನು ತೋರಿಸಿದ. ಆ ಜಾಗದಲ್ಲಿ ದೊಡ್ಡ ಬೋರ್ಡ್ ಇತ್ತು ಆದರೆ ಕೆಲ ಮುಸಲ್ಮಾನರ ಅಣತಿಯಂತೆ ತೆಗೆಸಲಾಯಿತು. ಅಲ್ಲಿ ದರ್ಗಾ ಕಟ್ಟಿಸಲು ಮನವಿ ಮಾಡಿದರು. ಅವರ ಮನವಿಯಂತೆ ಅಲ್ಲಿ ದರ್ಗಾ ಕಟ್ಟಲಾಗಿದೆ. ನಮ್ಮಲ್ಲಿ ಚುನಾವಣೆಗಾಗಿ ಏನು ಬೇಕಾದರು ಮಾಡುವ ಸ್ಥಿತಿ ತಲುಪಿದ್ದೇವೆ ಎಂಧು ಅಸಮಾಧಾನ ಹೊರ ಹಾಕಿದರು.

ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು.

ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮೇಲೆ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಎಲ್ ಭೈರಪ್ಪ,  ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸಚಿವ ನಾಗೇಶ್ ಮನೆ ಸುಟ್ಟು ಹಾಕಲು ಹೋಗಿದ್ದರು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ.? ಎಂದು ಕಿಡಿಕಾರಿದರು.

ಸಾಹಿತಿಗಳ ವಿರುದ್ಧ ಪರೋಕ್ಷ ಅಸಮಾಧಾನ.

ಮೂರನೇ ಮೈಸೂರು ಯುದ್ದದಲ್ಲಿ ಟಿಪ್ಪು ಸೋತ ಘಟನೆ ವಿವರಿಸಿದ ಎಸ್.ಎಲ್ ಭೈರಪ್ಪ, ಬ್ರಿಟಿಷರು ನಷ್ಟವನ್ನು ಕಟ್ಟಿಕೊಡುವಂತೆ ಟಿಪ್ಪುಗೆ ಹೇಳಿದ್ದರು. ಹಣ ಇಲ್ಲದ ಕಾರಣಕ್ಕಾಗಿ ಮಕ್ಕಳನ್ನು ಒತ್ತೆಯಿಟ್ಟ. ಟಿಪ್ಪು ಅಫ್ಘಾನಿಸ್ಥಾನದ ಸುಲ್ತಾನನಿಗೆ ಪತ್ರ ಬರೆದಿದ್ದನು. ಭಾರತವನ್ನು ಇಸ್ಲಾಂ ದೇಶ ಮಾಡೋಣ ಅಂತಾ ಪತ್ರ ಬರೆದಿದ್ದನು. ಆದರೆ ಯಾರು ಏಕೆ ಇದನ್ನು ಹೇಳುವುದಿಲ್ಲ. ನಮ್ಮ ರಾಷ್ಟ್ರ ಏಕೆ ಈ ರೀತಿ ಆಗುತ್ತಿದೆ ನನಗೆ ಅರ್ಥವಾಗುತ್ತಿಲ್ಲ. ನೆಹರು ಔರಂಗಜೇಬ್ ಬಗ್ಗೆ ಬರೆಯುತ್ತಾರೆ. ಆತ ಐಡಿಯಲ್ ಮನುಷ್ಯ ಅಂತಾ. ಆತನಿಗೆ ಅತಿರೇಕವಿತ್ತು ಅಂತಾ ಬರೆಯುತ್ತಾರೆ. ಆದರೆ ಏನು ಅತಿರೇಕ ಅಂತಾ ಹೇಳುವುದಿಲ್ಲ. ಆತ ಒಡೆದ ದೇವಸ್ಥಾನದ ಬಗ್ಗೆ ಮಾತನಾಡಿದರೆ ಕೋಮುವಾದಿ ಅನ್ನುತ್ತಾರೆ. ಪಠ್ಯದಲ್ಲಿ ಸತ್ಯವನ್ನು ಹೇಳಲು ಆಗುತ್ತಿಲ್ಲ. ಬದಲಾವಣೆ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ. ಸರ್ಕಾರದ ಮೇಲೆ ಒತ್ತಡ ಇದ್ದೇ ಇರುತ್ತಾರೆ ಎಂದು ಸಾಹಿತಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

Key words: Text book-revision – writer-SL Bhairappa-mysore

ENGLISH SUMMARY…

Textbooks were revised even during Indira Gandhi’s time: I was removed from the committee as I demanded to reveal the truth – S.L. Byrappa

Mysuru, June 2, 2022 (www.justkannada.in): Renowned litterateur S.L. Byrappa, in his reaction to the ongoing textbook curriculum revision row has expressed his view that textbooks should have only the truth and not anyone’s ideologies.

Addressing a press meet in Mysuru today, S.L. Byarappa informed that textbooks were revised even during the time of former Prime Minister Indira Gandhi. “I was kept out of the revision committee as I demanded that the textbooks should contain the truth. Then also they had prepared the curriculum by having the members in the committee as they wished. Almost all the Congress state governments agreed and adopted it,” he explained.

“Textbooks have only the truth, not anyone’s ideologies. I am a writer, not an activist. Textbook curriculum revision was proposed even during Vajpayee’s time. But the litterateurs across the country started an ‘Award Return’ movement. I had suggested they return the cash prize amount also along with the award. Within 15 days they became silent,” he revealed.

Dissatisfaction against litterateurs

Explaining an incident of Tipu Sultan’s failure during the third Mysuru war, S.L. Byarappa informed that the British had asked Tipu to fulfill the loss. But, as Tipu didn’t have money, he pledged his children. “Tipu had written a letter to the Afghanistan sultan, “let us convert India into an Islam country. Why such things are not told in the textbooks? I wonder why our nation is becoming like this? In his book, Nehru describes Aurangzeb as a person with ideologies. He also mentioned that Aurangzeb had an abnormality but doesn’t describe what kind of abnormality. If we speak about the temples destroyed by Aurangzeb, they will label us as communal. It is not possible in our country to mention the truth in textbooks. If anyone attempts to change it, they will create havoc,” he said.

Keywords: Litterateur S.L. Byrappa/ text book revision/ Indira Gandhi

The post ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು: ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು- ಸಾಹಿತಿ ಎಸ್.ಎಲ್ ಭೈರಪ್ಪ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಾಹಿತಿ ಎಸ್.ಎಲ್ ಭೈರಪ್ಪ.
ಮೈಸೂರು,ನವೆಂಬರ್,23,2021(www.justkannada.in):  ಕೇಂದ್ರದ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಾಹಿತಿ ಎಸ್.ಎಲ್ ಭೈರಪ್ಪ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಾಹಿತಿ ಎಸ್ ಎಲ್ ಭೈರಪ್ಪ, ಕೇಂದ್ರದ ಪ್ರಸಾದ ಯೋಜನೆಯಿಂದ ಚಾಮುಂಡಿ ಬೆಟ್ಟಕ್ಕೆ ತೊಂದರೆ ಇದೆ. ಚಾಮುಂಡಿ ಬೆಟ್ಟ ಕಾಂಕ್ರಿಟ್ ಕಾಡು ಮಾಡುವ ಯೋಜನೆಯನ್ನ ಅನುಸ್ಠಾನಗೊಳಿಸಬಾರದು. ಚಾಮುಂಡಿ ಬೆಟ್ಟಕ್ಕೆ ಹೋಗುವ ವಾಹನಗಳಿಗೆ ನಿರ್ಬಂಧಿಸಬೇಕು. ಪರಿಸರ ಸ್ನೇಹಿತ ವಿದ್ಯುತ್ ಚಾಲಿತ ವಾಹನ ಬಸ್ ಚಾಲನೆ ಬಳಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ ಚಾಮುಂಡಿ ಬೆಟ್ಟದಲ್ಲಿ 4 ಸಾವಿರ ಜನ ವಾಸವಿದ್ದಾರೆ. ಅವರನ್ನ ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು. ಅರ್ಚಕರು, ಸಿಬ್ಬಂದಿಗಳು  ಇರಲು ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನಿ ಮೋದಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಮನವಿ ಮಾಡಿದ್ದಾರೆ.

Key words: SL Bhairappa – letter – PM Modi – save – Chamundi hill.

The post ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಾಹಿತಿ ಎಸ್.ಎಲ್ ಭೈರಪ್ಪ.    appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಫೆ.21 ರಂದು ‘ಪರ್ವ ವಿರಾಟ್ ದರ್ಶನ’ ಒಂದು ವಿಚಾರ ಸಂಕಿರಣ….
ಮೈಸೂರು,ಫೆ,13,2021(www.justkannada.in):  ಫೆಬ್ರವರಿ 21 ರಂದು ಸಾಹಿತಿ ಎಸ್.ಎಲ್ ಭೈರಪ್ಪನವರ ಪರ್ವ ವಿರಾಟ್ ದರ್ಶನ ಒಂದು ವಿಚಾರ ಸಂಕಿರಣವನ್ನ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕರ್ನಾಟಕ ಕಲಾಮಂದಿರದಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ಪ್ರವೇಶ ಉಚಿತವಿರಲಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ  ಡಾ.ಜಿ.ಎಲ್ ಶೇಖರ್ ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ. ಇನ್ನು ಮಾರ್ಚ್ 12 ರಿಂದ  ನಾಟಕ ಪ್ರದರ್ಶನ ಆರಂಭಗೊಳ್ಳಲಿದೆ.

Key words:  seminar – ‘Parva Virat Darshan’- on Feb 21-SL bhairappa

The post ಫೆ.21 ರಂದು ‘ಪರ್ವ ವಿರಾಟ್ ದರ್ಶನ’ ಒಂದು ವಿಚಾರ ಸಂಕಿರಣ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.