Saturday | Just Kannada - Daily News Updates
ಅ. 21ರಿಂದ ಶನಿವಾರ, ಭಾನುವಾರವೂ ತೆರೆಯಲಿವೆ ನೋಂದಣಿ ಕಚೇರಿಗಳು
ಬೆಂಗಳೂರು ಸೆಪ್ಟೆಂಬರ್ 26,2024 (www.justkannada.in): ಜನರಿಗೆ ಸುಗಮ ಆಡಳಿತ ನೀಡುವ ಭಾಗವಾಗಿ ಅಕ್ಟೋಬರ್ 21 ರ ನಂತರ ನೋಂದಣಿ ಕಚೇರಿಗಳು ಶನಿವಾರ-ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಕೃಷ್ಣಭೈರೇಗೌಡ ಅವರು, “ದುಡಿಯುವ ಮಧ್ಯಮ ವರ್ಗದ ಜನ ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟ. ಅಲ್ಲದೆ, ನೋಂದಣಿಗಾಗಿ ಹೊರ ರಾಜ್ಯದಿಂದ ಆಗಮಿಸುವವರಿಗೂ ಅನಾನುಕೂಲ ಉಂಟಾಗುತ್ತಿದೆ. ಹೀಗಾಗಿ ದುಡಿಯುವ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ” ಎಂದರು.
“ಅಕ್ಟೋಬರ್ 21ರ ನಂತರ ಪ್ರತಿ ನೋಂದಣಿ ಜಿಲ್ಲೆಗಳಲ್ಲಿ ಒಂದು ರಿಜಿಸ್ಟರ್ ಕಚೇರಿ ಶನಿವಾರ ಭಾನುವಾರ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. ರಜೆ ದಿನಗಳಲ್ಲಿ ಯಾವ ನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂದು ಅವಧಿಗೆ ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನೋಂದಣಿಗಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡಲಾಗುತ್ತದೆ” ಎಂದು  ತಿಳಿಸಿದರು.
“ಶನಿವಾರ-ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಬೇಕು ಎಂಬ ಒತ್ತಾಯ ಈ ಹಿಂದಿನಿಂದಲೂ ಇತ್ತು. ಅಲ್ಲದೆ, ಬಜೆಟ್ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಇದಕ್ಕೆ ಬೇಕಾದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಿ, ಈ ಬಗ್ಗೆ ಕ್ಯಾಬಿನೆಟ್ ನಿಂದಲೂ ಒಪ್ಪಿಗೆ ಪಡೆಯಲಾಗಿದೆ” ಎಂದರು.
ಅಕ್ರಮ ತಡೆಗೆ ಡಿಜಿಟಲ್ ಇಂಟಗ್ರೇಷನ್ ಖಾತಾ ಜಾರಿ
ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗೆಯೂ ಮಾಹಿತಿ ನೀಡಿದ ಅವರು, “ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, ”ನೋಂದಣಿ ಮಾಡಿಸುವಾಗ ಇತರೆ ಎಂಬ ಒಂದು ಕ್ಯಾಟಗರಿ ಇದೆ. ಆಶ್ರಯ ನಿವೇಶನಗಳನ್ನು ನೋಂದಾಯಿಸುವಾಗ ಮಾತ್ರ ಈ ಕ್ಯಾಟಗರಿಯನ್ನು ಬಳಸಲಾಗುತ್ತದೆ. ಇದರಲ್ಲಿ ಮಾರುಕಟ್ಟೆ ಬೆಲೆ (ಗೈಡನ್ಸ್ ವ್ಯಾಲ್ಯೂ) ಕಡಿಮೆ ಇರತ್ತೆ. ನೋಂದಣಿ ಶುಲ್ಕವೂ ಕಡಿಮೆ ಇರುತ್ತದೆ. ಹೀಗಾಗಿ ಹಲವರು ತಮ್ಮದು ಖಾಸಗಿ ಸ್ವತ್ತಾಗಿದ್ರೂ ಇತರೆ ಎಂದು ತೋರಿಸಿ ದೊಡ್ಡ ಪ್ರಮಾಣದಲ್ಲಿ ಕಟ್ಟಬೇಕಿರುವ ವೆಚ್ಚವನ್ನು ಮೋಸ ಮಾಡುತ್ತಿದ್ದಾರೆ.
ಈ ಹಿಂದೆ ನೋಂದಣಿ ಮುಖ್ಯಸ್ಥರಾಗಿದ್ದ ತ್ರಿಲೋಕ್ ಚಂದ್ರ ಅವರು ಈ ಬಗ್ಗೆ ಬೆಂಗಳೂರಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಅಧ್ಯಯನದ ವೇಳೆ ಬೆಂಗಳೂರಿನ 4 ನೋಂದಣಿ ಕಚೇರಿಯನ್ನು ಆಯ್ಕೆ ಮಾಡಿಕೊಂಡು ಈ ಕಚೇರಿಗಳಲ್ಲಿ ನಕಲಿ ಖಾತೆ ಮೂಲಕ ಎಷ್ಟು ನೋಂದಣಿಯಾಗುತ್ತಿವೆ ಹಾಗೂ ತೆರಿಗೆ ವಂಚನೆ ಪ್ರರಕಣಗಳನ್ನೂ ಗುರುತಿಸಿದ್ದಾರೆ. ಅವರ ಪ್ರಕಾರ 1-7-2018 ರಿಂದ 10-12-2019ರ ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ ರೂ. 250 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ” ಎಂದರು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
“ಇನ್ನೂ ನೋಂದಣಿ ಮಾಡುವಾಗ ಸ್ಕೆಚ್ ಕಡ್ಡಾಯ ಬೇಕು. ಆದರೆ ಕೆಲವೆಡೆ ಸ್ಕೆಚ್ ಇಲ್ಲದೆಯೂ ನೋಂದಣಿ ಮಾಡಲಾಗಿದೆ. ಜನವರಿಯಿಂದ ಈಚೆಗೆ 200 ನೋಂದಣಿ ಸ್ಕೆಚ್ ಇಲ್ಲದೆ ಮಾಡಲಾಗಿದೆ. ಸೈಟು ಅಥವಾ ಜಮೀನನನ್ನು ಟಿಡಿಆರ್ ಅಂತೇಳಿ ನೋಂದಣಿ ಮಾಡಿಸಿದ್ದಾರೆ. ಇದರಿಂದ ಅಕ್ರಮದ ಜೊತೆಗೆ ತೆರಿಗೆ ಹಣವೂ ವಂಚಿಸಲಾಗುತ್ತಿದೆ. ಇದನ್ನು ಹೇಗೆ ತಡೆಗಟ್ಟುವುದು ಎಂದು ಕಳೆದ ಎಂಟು ತಿಂಗಳಿನಿಂದ ಯೋಚಿಸಿ ಬೋಗಸ್ ಖಾತಾ ಮೂಲಕ ಆಗುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಲು, ಅಮಾಯಕರಿಗೆ ನ್ಯಾಯ ಒದಗಿಸಲು ನಿರ್ಧರಿಸಲಾಯಿತು” ಎಂದರು.
“ಯಾವುದೇ ಖಾತೆ ಇರಲಿ ಪೇಪರ್ ಖಾತೆ ಆಧಾರದಲ್ಲಿ ನೋಂದಣಿಯಾಗುವಾಗ ವೆರಿಫಿಕೇಷನ್ ಗೆ ತಿಂಗಳೇ ಬೇಕು. ಅಲ್ಲಿಯವರೆಗೆ ನೋಂದಣಿಯನ್ನು ಬಾಕಿ ಇಡಲಾಗಲ್ಲ. ಪೇಪರ್ ಅನ್ನು ಯಾರು ಬೇಕಾದರೂ ಮುದ್ರಿಸಬಹುದು. ಅದಕ್ಕೆ ನಾವೀಗ ಒಂದು ತೀರ್ಮಾನ ಮಾಡಿದ್ದೇವೆ. ಗ್ರಾಮ ಪಂಚಾಯತ್- ಮುನಿಸಿಪಾಲಿಟಿ ಬಿಬಿಎಂಪಿ ಬಿಡಿಎ ಯಾರೇ ಇರಬಹುದು, ಎಲ್ಲಾ ಖಾತೆಯನ್ನೂ ಡಿಜಿಟಲ್ ಮಾಡಬೇಕು. ಖಾತೆ ಡಿಜಿಟಲ್ ಆಗಿರಬೇಕು. ರಿಜಿಸ್ಟ್ರೇಷನ್ ಸಮಯದಲ್ಲಿ ನಮ್ಮ ಹಾಗೂ ಅವರ ಸಿಸ್ಟಂ ಲಿಂಕ್ ಮಾಡಿ, ಖಾತೆ ನಂಬರ್ ಹೆಸರು ಹಾಗೂ ವಿಳಾಸ ಹೊಂದಾಣಿಕೆ ಆದ್ರೆ ಆಟೋಮ್ಯಾಟಿಕ್ ಖಾತೆ ಮಾಡಿಕೊಡಲಾಗುವುದು” ಎಂದರು.
“ಡಿಜಿಟಲ್ ಇಂಟಗ್ರೇಷನ್ ಖಾತಾವನ್ನು ಈ ತಿಂಗಳ ಆರಂಭದಲ್ಲೇ ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ. ಇಂದಿನಿಂದ 8 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದಲ್ಲಿ ಈವರೆಗೆ ಎಲ್ಲೂ ಸಮಸ್ಯೆ ಬಂದಿಲ್ಲ. ಬೆಂಗಳೂರಲ್ಲಿ ಸಮಸ್ಯೆ ಬರಬಹುದು. ಹೀಗಾಗಿ ಫೆಬ್ರವರಿಯಲ್ಲೇ ಬಿಡಿಎ, ಕೆಎಡಿಬಿ, ಕರ್ನಾಟಕ ಹೌಸಿಂಗ್ ಬೋರ್ಡ್, ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮ ಎಲ್ಲರನ್ನೂ ಕರೆಸಿ ತಮ್ಮ ಖಾತೆಗಳನ್ನು ಡಿಜಿಟಲೀಕರಣಗೊಳಿಸಿ ಎಂದು ತಿಳಿಸಲಾಗಿದೆ. ಬಿಬಿಎಂಪಿಯದ್ದೂ ಮಾಡಬೇಕು. ಅವರಿಗೂ ಸೂಚನೆ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಬಿಬಿಎಂಪಿಯದ್ದೂ ಇ-ಖಾತಾ ಮೂಲಕವೇ ರಿಜಿಸಸ್ಟ್ರೇಷನ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಒಂದು ಕಡೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಬಹಳ ಮುಖ್ಯವಾಗಿ ಅಕ್ರಮಗಳಿಗೆ ಕಡಿವಾಣ, ಅಮಾಯಕರ ಶೋಷಣೆಗೆ ಕಡಿವಾಣ, ಸರ್ಕಾರಕ್ಕೆ ಬರಬೇಕಾದ ತೆರಿಗೆ ವಂಚನೆ ತಡೆಗೆ ಈ ತೀರ್ಮಾನ ಸಹಕಾರಿಯಾಗಲಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಸವಾಲು…!
ಕುಮಾರಸ್ವಾಮಿಯವರಂತೆ ವೈಯಕ್ತಿಕ ದಾಳಿ ನಡೆಸುವುದು, ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ. ಯಾರು ಯಾರನ್ನೇ ನಿಂದಿಸಿದರೂ ಸತ್ಯ ಏನು ಎಂಬುದು ಜನರಿಗೆ ತಿಳಿದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಚ್ಡಿ ಕುಮಾರಸ್ವಾಮಿ ಅವರು ಡಿ ನೋಟಿಫಿಕೇಷನ್ ಮಾಡಲು ಮುಂದಾಗಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅದೇ ಜಮೀನನ್ನು ಸತ್ತವರ ಹೆಸರಿಗೆ ಡಿನೋಟಿಫೈ ಮಾಡಲಾಗಿತ್ತು. ಕೊನೆಗೆ ಈ ಜಮೀನು ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ನೋಂದಣಿಯಾಗಿತ್ತು.
ಈ ಪ್ರಕರಣವನ್ನು ಉಲ್ಲೇಖಿಸಿ ಸಚಿವ ಕೃಷ್ಣ ಬೈರೇಗೌಡ ಅವರು,  ಸತ್ತವರ ಹೆಸರಿಗೆ ಡಿನೋಟಿಫೈ ಮಾಡುವುದು ಅಪರಾಧ ಅಲ್ಲವೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಯವರು ಕೃಷ್ಣ ಬೈರೇಗೌಡ ಅವರನ್ನು ಹೆಬ್ಬೆಟ್ಟು ಎಂದು ಜರಿದಿದ್ದರು. ಕುಮಾರಸ್ವಾಮಿಯವರ ನಿಂದನೆಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣಭೈರೇಗೌಡ, “ರಾಜಕಾರಣದಲ್ಲಿ ವೈಯಕ್ತಿಕ ದಾಳಿ ನಡೆಸುವುದು ನಿಂದಿಸುವುದು ಕುಮಾರಸ್ವಾಮಿಯವರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ, ನಮ್ಮದು ಅಂತಹ ಸಂಸ್ಕೃತಿಯಲ್ಲ. ನಾವು ಅಂತಹ ಸಂಸ್ಕೃತಿಗೆ ಎಂದಿಗೂ ಜೋತು ಬೀಳುವುದಿಲ್ಲ. ಅಲ್ಲದೆ, ಇಂತಹ ನಿಂದನೆಗಳು ವೈಯಕ್ತಿಕ ದಾಳಿಗಳಿಗೆ ನಾವು ಬಗ್ಗುವವರೂ ಅಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದರು.
ಮುಂದುವರೆದು, “ಈಗಲೂ ನಾನು ಅದೇ ಪ್ರಶ್ನೆಯನ್ನು ಮುಂದಿಡುತ್ತೇನೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಈ ಜಮೀನಿನ ಡಿನೋಟಿಫೈ ಗೆ ಅತ್ಯುತ್ಸಾಹ ತೋರಿದ್ದು ಏಕೆ? ಇವರ ಅತ್ತೆ ಈ ಭೂಮಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡದ್ದು ಸುಳ್ಳೇ? ಅಂತಿಮವಾಗಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸಹೋದರನ ಹೆಸರಿಗೆ ಈ ಜಮೀನು ನೋಂದಣಿಯಾಗಿಲ್ಲವೇ? ಇದು ಅಧಿಕಾರದ ದುರ್ಬಳಕೆ ಅಲ್ಲವೇ? ಈ ಬಗ್ಗೆ ಕುಮಾರಸ್ವಾಮಿಯವರ ಸ್ಪಷ್ಟನೆ ನೀಡಲಿ ಸಾಕು” ಎಂದು ಸವಾಲು ಹಾಕಿದರು.
Key words:  Registration offices, open, Saturday, Sunday
ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು : ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು,ಫೆಬ್ರವರಿ,16,2021(www.justkannada.in) : ಕಂದಾಯ ಇಲಾಖೆ ಮಾತೃ ಇಲಾಖೆ. ಜನರ ಬಳಿಗೆ ಈ ಇಲಾಖೆ ಕೊಂಡೊಯ್ಯುತ್ತೇವೆ. ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು. ವಿಸಿಂಟಿಂಗ್ ಅಧಿಕಾರಿಗಳಾಗಿ ಹೋಗಬಾರದು.  ಜನರ ಸಮಸ್ಯೆಗಳನ್ನ ಅರಿತು ಪರಿಹರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.ವಿಕಾಸಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಿಸಿಗಳ ಜೊತೆ ಸಭೆ ನಡೆಸಿದ್ದೇವೆ. ಜನರಿಂದ ಡಿಸಿಗಳು ಅಹವಾಲು ಸ್ವೀಕರಿಸಬೇಕು. ನಂತರ ಅಲ್ಲೇ ಅವರ ಸಮಸ್ಯೆ ಬಗೆಹರಿಸಬೇಕು. ಅಧಿಕಾರಿಗಳನ್ನ ಹಳ್ಳಿಗೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಗಮನಹರಿಸಿದೆ ಎಂದರು.
ಹಳ್ಳಿಗರಿಗೆ ಕಚೇರಿ ಅಲೆಯುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ೨೦ ರಂದು ೨೨೭ ಕಡೆ ಅಧಿಕಾರಿಗಳು ಹೋಗುತ್ತಾರೆ. ಪ್ರತಿ ತಾಲೂಕಿಗೆ ತಹಸೀಲ್ದಾರ್,ಎಸಿ ಭೇಟಿ ನೀಡುತ್ತಾರೆ. ಬೆಳಗ್ಗೆ ೧೦ ರಿಂದಲೇ ಅವರ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ಹೇಳಿದರು.
ಅಂಗವಿಕಲರನ್ನ ಗುರುತಿಸಬೇಕು. ಕಣ್ಣಿಲ್ಲದವರನ್ನು ಭೇಟಿ ಮಾಡಬೇಕು. ಅವರ ಸಮಸ್ಯೆಗಳನ್ನ ಪರಿಹರಿಸಬೇಕು. ಸರ್ಕಾರಿ ಭೂಮಿ ಗುರುತಿಸಿ ಅಲ್ಲಿ ಗಿಡನೆಡಬೇಕು. ಯಾವ ಗ್ರಾಮಕ್ಕೆ‌ ಹೋಗುತ್ತಾರೆ ಅಲ್ಲಿ ಶಾಲೆ,ಹಾಸ್ಟೆಲ್ ಗಳಲ್ಲೇ ಪುರುಷ ಡಿಸಿ,ಎಸಿಗಳು ಉಳಿದುಕೊಳ್ಳಬೇಕು. ಈ ಮೂಲಕ ಅಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಾನು ವಾಸ್ತವ್ಯ ಮಾಡುತ್ತೇನೆ. ಚಕ್ಕಡಿಯಲ್ಲಿ ಹೋಗಿ ದೇವರ ದರ್ಶನ ಮಾಡುತ್ತೇನೆ. ದಲಿತ ಕೇರಿಯ ಸಮಸ್ಯೆಗಳನ್ನ ಆಲಿಸುತ್ತೇನೆ. ನಂತರ ಹಳ್ಳಿಯ ಎಲ್ಲಾ ಮನೆಗಳಿಗೆ ಭೇಟಿ ನೀಡುತ್ತೇನೆ ಎಂದರು.
ಅದೇ ಹಳ್ಳಿಯಲ್ಲಿ ಆರೋಗ್ಯ ಶಿಬಿರ ನಡೆಯುತ್ತೆ. ಅಲ್ಲಿನ ಸ್ಥಳೀಯ ಶಾಸಕರ ಜೊತೆ ಚರ್ಚಿಸುತ್ತೇನೆ. ಸಮಸ್ಯೆಗಳನ್ನ ಸರಿಪಡಿಸುತ್ತೇನೆ. ರಾತ್ರಿ ಸ್ಥಳೀಯ ಕಲಾವಿದರ ಜೊತೆ ಕೂರುತ್ತೇನೆ. ರಾತ್ರಿ ಒಬಿಸಿ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದು ವಿವರಿಸಿದ್ದಾರೆ.
ಪ್ರತಿ ತಿಂಗಳು ಈ ವಾಸ್ತವ್ಯ ನಡೆಯಲಿದೆ
ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ. ಈಗಾಗಲೇ ೨೨೭ ಹಳ್ಳಿಗಳಿಗೂ‌ ಮಾಹಿತಿ ನೀಡಿದ್ದೇವೆ. ಅಧಿಕಾರಿಗಳ ಗ್ರಾಮವಾಸ್ತವ್ಯದ ಬಗ್ಗೆ ತಿಳಿಸಿದ್ದೇವೆ. ಪ್ರತಿ ತಿಂಗಳು ಈ ವಾಸ್ತವ್ಯ ನಡೆಯಲಿದೆ. ಯಾವ ಹಳ್ಳಿಗೆ ಹೋಗುತ್ತಾರೆ. ಆ ಗ್ರಾಮದವರು ಮಾತ್ರ ಭಾಗಿ. ಬೇರೆ ಹಳ್ಳಿಯವರು ಭಾಗವಹಿಸುವಂತಿಲ್ಲ. ಖಾತೆ,ಪಹಣಿ,ಪಿಂಚಣಿ,ಅಂಗವಿಕಲರ ಸಮಸ್ಯೆ ಪರಿಹರಿಸಬೇಕು. ಸ್ಥಳದಲ್ಲೇ ಡಿಸಿಗಳು ಆದೇಶ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಮಹಿಳಾ ಡಿಸಿಗಳು ಗ್ರಾಮವಾಸ್ತವ್ಯಕ್ಕೆ ಒಪ್ಪಿದ್ದಾರೆ.  ಪ್ರವಾಹ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸುತ್ತಾರೆ. ಕೆಲವು ಕಡೆ ಕಾಲು ದಾರಿಗಳಿಲ್ಲ. ಅಂತಹ ಕಡೆ ಕಾಲು ದಾರಿಗಳನ್ನ ಮಾಡಬೇಕು. ಡಿಸಿಗಳು ಅಲ್ಲಿ ತೆರಳಿ ಸಮಸ್ಯೆ ಬಗೆಹರಿಸಬೇಕು. ಜನಪ್ರತಿನಿಧಿಗಳು ಕೂಡ ೧ ಗಂಟೆ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ರೆಡಿಯೋ ಈಗ ಔಟ್ ಡೇಟೆಡ್ ಆಗಿದೆ. ಟಿವಿ ಎಲ್ಲರ ಮನೆಯಲ್ಲೂ ಇರುತ್ತೆ
ಉಮೇಶ್ ಕತ್ತಿ ಬಿಪಿಎಲ್ ಕಾರ್ಡ್ ರದ್ಧು ವಿಚಾರವಾಗಿ ಪ್ರತಿಕ್ರಿಯಿಸಿ, ರೆಡಿಯೋ ಈಗ ಔಟ್ ಡೇಟೆಡ್ ಆಗಿದೆ. ಟಿವಿ ಎಲ್ಲರ ಮನೆಯಲ್ಲೂ ಇರುತ್ತೆ. ಇದನ್ನ ಮಾನದಂಡವಾಗಿ ಇಟ್ಟುಕೊಳ್ಳುವುದು ಸರಿಯಲ್ಲ. ಇವತ್ತು ೫ ಸಾವಿರಕ್ಕೂ ಟಿವಿ ಸಿಗುತ್ತೆ. ಮೊಬೈಲ್,ಟಿವಿ ಅವಶ್ಯಕತೆ ಇರುವಂತದ್ದು. ಇದನ್ನ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ನಮ್ಮ ಸಚಿವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ. ಅವರಿಗೂ ಅಂತಹ ಅಭಿಪ್ರಾಯವಿಲ್ಲ. ಪರೋಕ್ಷವಾಗಿ ಕತ್ತಿಗೆ ತಿರುಗೇಟು ನೀಡಿದರು.
ಉತ್ತರಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಚಾಮರಾಜನಗರ, ಕರಾವಳಿ ಭಾಗದಲ್ಲಿ ವಾಸ್ತವ್ಯ ಮಾಡುತ್ತೇನೆ. ಪ್ರತಿವರ್ಷ ೪ ಲಕ್ಷ ಜನ ಪೆನ್ಶನ್ ಸೇರ್ಪಡೆಯಾಗುತ್ತಾರೆ. 43 ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರ. ಸಿಎಂ ಅವರು ಇದರ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರ ತೀರ್ಮಾನಕ್ಕೆ ನನ್ನ ಸಹಮತವಿದೆ. ಅನಿವಾರ್ಯವಲ್ಲ,ಮುಕ್ತವಾಗಿಯೇ ಒಪ್ಪಿಕೊಂಡಿದ್ದೇನೆ. ೭.೫ ಸಾವಿರ ಕೋಟಿ ಇದಕ್ಕೆ ಖರ್ಚು ಬರಲಿದೆ. ಕೇಂದ್ರದ ಅನುದಾನ ೧೦%ರಾಜ್ಯದ ೯೦% ಅನುದಾನವಿದೆ ಎಂದು ತಿಳಿಸಿದ್ದರು.
key words : Third-Saturday-Officers-villages-Must-Revenue-Minister-R. Ashok
ಮೈಸೂರಿನ ಐಶ್(AIISH)ನ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ಓಪನ್…
ಮೈಸೂರು,ಡಿಸೆಂಬರ್,11,2020(www.justkannada.in):  ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ತೆರೆದಿರುತ್ತದೆ.
ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ALLSH) ಭಾನುವಾರ ಮತ್ತು ಕೇಂದ್ರ ಸರ್ಕಾರ ರಜೆ ದಿನಗಳನ್ನ ಹೊರತುಪಡಿಸಿ ಎಲ್ಲಾ ದಿನವೂ ಕಾರ್ಯ ನಿರ್ವಹಿಸುತ್ತದೆ.  ಐಶ್ ನ ಚಿಕತ್ಸಾ ಸೇವಾ ವಿಭಾಗದಲ್ಲಿ  ಶನಿವಾರ ರಜೆ ಇರುತ್ತಿತ್ತು. ಆದರೆ ಇದೀಗ  ಶನಿವಾರವೂ ಚಿಕತ್ಸಾ ಸೇವಾ ವಿಭಾಗ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ತೆರದಿರಲಿದೆ.
ಹೀಗಾಗಿ ಚಿಕಿತ್ಸಾ ಸೇವಾ ವಿಭಾಗದಲ್ಲಿ ಇನ್ಮುಂದೆ ವಾಕ್ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳಿಗೆ  ಶನಿವಾರವೂ ಚಿಕಿತ್ಸೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0821-2502175/ 2502113
English summary….
AIISH treatment wing in Mysuru will be open on Saturday’s too
Mysuru, Dec.11,2020 (www.justkannada.in): The treatment wing of All India Institute of Speech and Hearing (AIISH) in Mysuru will function on Saturday’s henceforth.
Hereafter AIISH will be open on all the days except on Sundays and Central Government holidays. The treatment wing of AIISH used to be closed on Saturdays till now. But it will function from 9.00 am to 4.30 pm on Saturdays from now onwards, according to a press release.
Keywords: AIISH/ Mysuru/ Saturday/ working days
Key words: AIISH -Medical Services Division -Mysore – also- open – Saturday.
ಶನಿವಾರದ ರಜೆ ಆದೇಶ ಶಿಕ್ಷಕರಿಗೆ ಅನ್ವಯಿಸಲ್ಲ: ಡಿಡಿಪಿಐ ಪಾಂಡುರಂಗ ಸ್ಪಷ್ಟನೆ…
ಮೈಸೂರು, ಜುಲೈ 10,2020(www.justkannada.in): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಹೆಚ್ಚಳ ಹಿನ್ನೆಲೆ,  ಸರ್ಕಾರಿ ನೌಕರರಿಗೆ ಶನಿವಾರ ರಜೆ ನೀಡಿರುವ ಆದೇಶ ಶಿಕ್ಷಕರಿಗೆ ಅನ್ವಯಿಸಲ್ಲ ಎಂದು ಡಿಡಿಪಿಐ ಪಾಂಡುರಂಗ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರದಿಂದ ಎಸ್ಎಸ್ ಎಲ್ಸಿ ಪರೀಕ್ಷೆ ಮೌಲ್ಯಮಾಪನ ಆರಂಭವಾಗಲಿದೆ. ಹೀಗಾಗಿ ಎಸ್ಎಸ್ಎಲ್ಸಿ ಮೌಲ್ಯಮಾಪನಕ್ಕೆ ಶಿಕ್ಷಕರು ಕಡ್ಡಾಯವಾಗಿ ಬರಬೇಕು. ಆರು ದಿನಗಳ ಕಾಲ ಎಸ್ಎಸ್ಎಲ್ಸಿ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಪ್ರಾರಂಭವಾದ ಬಳಿಕ ಮುಗಿಯುವವರೆಗೂ ಯಾವ ಶಿಕ್ಷಕರಿಗೂ ರಜೆ ಇಲ್ಲ ಎಂದು ಡಿಡಿಪಿಐ ಪಾಂಡುರಂಗ ತಿಳಿಸಿದ್ದಾರೆ.
ಕೊರೊನಾದಿಂದ ಎಸ್ಎಸ್ಎಲ್ಸಿ ಪರೀಕ್ಷೆ ತಡವಾಗಿ ನಡೆದಿದೆ. ಕೊರೊನಾ ಆಂತಕದಲ್ಲೂ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಆದ್ದರಿಂದ ತ್ವರಿತವಾಗಿ ಮೌಲ್ಯಮಾಪನ ಮಾಡಿ ಫಲಿತಾಂಶ ಬೇಗ ನೀಡಬೇಕಿದೆ. ಹೀಗಾಗಿ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಶನಿವಾರ ರಜೆ ಇರುವುದಿಲ್ಲ. ಇನ್ನೂ ಶಾಲೆ ಪ್ರಾರಂಭವಾದ ಬಳಿಕ ಶನಿವಾರದ ರಜೆ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಡಿಡಿಪಿಐ ಪಾಂಡುರಂಗ ಸ್ಪಷ್ಟನೆ ನೀಡಿದರು.
Key words: Saturday – Sunday -leave -orders – not apply – teachers.
ನಾಳಿನ(ಶನಿವಾರ) ಭವಿಷ್ಯ ಇಂದೇ: ಗಾಳಿ ಆಂಜನೇಯನ ಕೃಪೆಯಿಂದ ನಿಖರವಾದ ದಿನ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ…
ಬೆಂಗಳೂರು,ಮಾ,20,2020(www.justkannada.in): ಗಾಳಿ ಆಂಜನೇಯನ ಕೃಪೆಯಿಂದ ನಾಳಿನ(ಶನಿವಾರ) ನಿಖರವಾದ ದಿನ ಭವಿಷ್ಯ ಹೇಗಿದೆ ಎಂದು ಇಂದೇ  ತಿಳಿದುಕೊಳ್ಳೋಣ ಬನ್ನಿ…
ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ವಾಹನ ಪ್ರಾಪ್ತಿ, ಸಹೋದರನಿಂದ ನಷ್ಟ, ಮಿತ್ರರಿಂದ ಆಕಸ್ಮಿಕ ತೊಂದರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ವೃಷಭ: ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ಕಿರಿಕಿರಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಕಟಕ: ಶುಭ ಕಾರ್ಯಗಳಿಗೆ ಮನಸ್ಸು, ಕೆಲಸ ಕಾರ್ಯಗಳಿಗೆ ಸುಸಮಯ, ಸ್ನೇಹಿತರಿಂದ ಅಗೌರವ, ಸಂಗಾತಿಯಿಂದ ಅವಮಾನ, ದುಶ್ಚಟಗಳಿಗೆ ಮನಸ್ಸು,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಸಿಂಹ: ಸೇವಕರಿಂದ ತೊಂದರೆ, ಕಾರ್ಮಿಕರಿಂದ ನಷ್ಟ, ಋಣ ರೋಗ ಬಾಧೆ, ವಿಪರೀತ ಖರ್ಚು, ಮಾನಸಿಕ ಕಿರಿಕಿರಿ, ಕಾರ್ಯಗಳಲ್ಲಿ ಅಡೆತಡೆ, ದೀರ್ಘಕಾಲ ಮಲಗುವ ಯೋಚನೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಕನ್ಯಾ: ಹೆಣ್ಣು ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಲಾಭ, ಗೃಹ-ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಯಾದಿಗಳ ಕಲಹ, ನೆರೆಹೊರೆಯವರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ ಸಾಧ್ಯತೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ತುಲಾ: ಉದ್ಯೋಗ ಪ್ರಾಪ್ತಿ, ಅನಗತ್ಯ ಮಾತುಗಳು, ಆತ್ಮ ಗೌರವಕ್ಕೆ ಚ್ಯುತಿ, ತಾಯಿ ಕಡೆಯಿಂದ ಅನುಕೂಲ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪ್ರಾಪ್ತಿ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಧನಸ್ಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಚಾರಗಳಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಕಸ್ಮಿಕ ಅಪಘಾತ, ಕುಟುಂಬದಲ್ಲಿ ಸಂಕಷ್ಟ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮನೆಗೆ ಬಂಧುಗಳು ಆಗಮನ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರನ್ನು ದೂರ ಮಾಡುವ ಆಲೋಚನೆ, ಅದೃಷ್ಟವನ್ನು ದೂರ ಮಾಡುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಕುಂಭ: ಗರ್ಭದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ಮಕ್ಕಳಿಂದ ಸ್ಥಿರಾಸ್ತಿ ನಷ್ಟ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಮೀನ: ಮಿತ್ರರಿಂದ ಉಲ್ಲಾಸ ಮನೋರಂಜನೆ, ಗೌರವ ಸನ್ಮಾನ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ಪ್ರಯಾಣದಿಂದ ತೊಂದರೆ, ವಾಹನ ಖರೀದಿಗೆ ಚಿಂತನೆ, ತಂದೆಯಿಂದ ನಷ್ಟ..ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512
ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512
Key words: dina bavishya-saturday-rashi phala
ನೂತನ ಸಚಿವರಿಗೆ ಕಿವಿಮಾತು: ಶನಿವಾರದೊಳಗೆ ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ ಸಿಎಂ ಬಿಎಸ್ ಯಡಿಯೂರಪ್ಪ….
ಬೆಂಗಳೂರು,ಫೆ,6,2020(www.justkannada.in):  ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ಮಂದಿ ಸಚಿವರಿಗೆ ಶನಿವಾರದೊಳಗೆ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, 10 ಮಂದಿ ಸಚಿವರಿಗೆ ಶನಿವಾರದೊಳಗೆ ಖಾತೆ ಹಂಚಿಕೆ ಮಾಡಲಾಗುತ್ತದೆ. ಈ ಸಂಬಂಧ ಸಾಧ್ಯವಾದರೇ ಮತ್ತೊಮ್ಮೆ ದೆಹಲಿಗೆ ಹೋಗಿ ಬರುತ್ತೇನೆ ಎಂದರು.
ಶಾಸಕ ಉಮೇಶ ಕತ್ತಿಗೆ ಸಚಿವ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಉಮೇಶ್ ಕತ್ತಿ ಜತೆ ನಿನ್ನೆ ನಾನು ಮಾತನಾಡಿದ್ದೇನೆ. ಕತ್ತಿ ಸಚಿವರಾಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ನೂತನ ಸಚಿವರಿಗೆ ಸಿಎಂ ಬಿಎಸ್ ವೈ ಕಿವಿಮಾತು…
ಸಚಿವರಾಗಿ ಇಂದು ತಮ್ಮ ಸಂಪುಟಕ್ಕೆ ಸೇರ್ಪಡೆಯಾದ 10 ಮಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ. ನಿಮ್ಮ ಸಹಕಾರದಿಂದ ನಮ್ಮ ಸರ್ಕಾರ ರಚನೆಯಾಗಿದೆ. ಕೊಟ್ಟ ಮಾತಿನಂತೆ ನಿಮ್ಮನ್ನ ಸಚಿವರನ್ನಾಗಿ ಮಾಡಿದ್ದೇನೆ. ನಿಮಗಾಗಿ ಹಲವರ ವಿರೋಧ ಕಟ್ಟಿಕೊಂಡಿದ್ದೇನೆ.  ಯಾವಕಾರಣಕ್ಕೂ ಮಂತ್ರಿ ಸ್ಥಾನದಲ್ಲಿ ಕೂತು ಯಾಮಾರಬೇಡಿ. ವಿರೋಧಿಗಳ ಬಾಯಿಗೆ ಆಹಾರವಾಗಬೇಡಿ. ಕಿವಿಮಾತು ಹೇಳಿದ್ದಾರೆ.
Key words: CM BS Yeddyurappa – Saturday- new ministers
ರಸ್ತೆ ಅಪಘಾತದಲ್ಲಿ ಹಿಂದಿ ಚಿತ್ರ ನಟಿ ನಟಿ ಶಬಾನಾ ಆಜ್ಮಿ (Shabana Azmi) ಗಂಭೀರ ಗಾಯ..
ಮುಂಬೈ, ಜ.18, 2020 : ( www.justkannada.in news ) ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ನಟಿ ಶಬಾನಾ ಅಜ್ಮಿ ಗಾಯಗೊಂಡಿದ್ದಾರೆ.
ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ಖಲಾಪುರ ಬಳಿ ಇಂದು ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ. ನಟಿ ಶಬಾನಾ ಪ್ರಯಾಣಿಸುತ್ತಿದ್ದ ಕಾರು , ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ರಾಯಗಡ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಸ್ಕರ್ ತಿಳಿಸಿದ್ದಾರೆ.
ಘಟನೆ ಬಳಿಕ ಸುದ್ಧಿ ತಿಳಿದ ಕೂಡಲೇ ನಟಿ ಶಬಾನಾ ಅವರನ್ನು ನವೀ ಮುಂಬಯಿಯ ಎಂಜಿಎಂ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪತಿ ಮತ್ತು ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಕೂಡ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ . ಘಟನೆಯಲ್ಲಿ ಅಖ್ತರ್ ಕೂಡ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ ಇನ್ನೊಬ್ಬ ಅಪರಿಚಿತ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಸ್ಥಳದ ತನಿಖೆಗಾಗಿ ಹೆದ್ದಾರಿ ಪೊಲೀಸ್ ಗಸ್ತು ತಂಡಗಳು ಧಾವಿಸಿವೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
KEY WORDS : Actor Shabana Azmi- injured – accident- Saturday -Mumbai-Pune Expressway
ENGLISH SUMMARY :
Actor Shabana Azmi was injured in an accident on Saturday afternoon on the Mumbai-Pune Expressway in Maharashtra’s Raigad district, an official said. when the car in which she was traveling rammed into a truck, She was rushed to MGM hospital in Navi Mumbai and was undergoing treatment,