Rebel MLAs Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಅತೃಪ್ತ ಶಾಸಕರು ಮಂಗಳವಾರ ಬೆಂಗಳೂರಿಗೆ…..
ಬೆಂಗಳೂರು,ಜು,27,2019(www.justkannada.in):   ಹಿಂದಿನ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಪತನವಾಗಲು ಕಾರಣವಾದ ಅತೃಪ್ತ ಶಾಸಕರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್ ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತು ಪಡಿಸಲಿದ್ದು, ಇದರ ಬೆನ್ನಲೇ ಅತೃಪ್ತರು ಮುಂಬೈನಿಂದ‌ ಬೆಂಗಳೂರಿಗೆ ಅಗಮಿಸಲಿದ್ದಾರೆ. ಅತೃಪ್ತ ಶಾಸಕರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಮಂಗಳವಾರ ಬೆಂಗಳೂರಿಗೆ ಆಗಮಿಸುವ ಅತೃಪ್ತ ಶಾಸಕರು ಬುಧವಾರ ಸುದ್ದಿಗೋಷ್ಠಿ ನಡೆಸಿ ತಾವು ರಾಜೀನಾಮೆ ನೀಡಲು ಕಾರಣವೇನು. ಮತ್ತು ತಮ್ಮ ಮುಂದಿನ ನಡೆ ಇನ್ನಿತರ ವಿಚಾರಗಳನ್ನ ಬಹಿರಂಗಪಡಿಸಲಿದ್ದಾರೆ ಎನ್ನಲಾಗಿದೆ.

Key words: rebel MLAs -Bangalore -Tuesday.

The post ಅತೃಪ್ತ ಶಾಸಕರು ಮಂಗಳವಾರ ಬೆಂಗಳೂರಿಗೆ….. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಚಿವ ಸ್ಥಾನ ಸಿಗದಿದ್ರೆ ಸಂತೃಪ್ತರು ಬಿಡ್ತಾರೇನ್ರಿ..?..ಯಡಿಯೂರಪ್ಪರನ್ನು ಹರಿದು ನುಂಗ್ತಾರೆ- ‘ಕೈ’ ನಾಯಕ ಡಿಕೆ ಶಿವಕುಮಾರ್ ವ್ಯಂಗ್ಯ…
ಬೆಂಗಳೂರು,ಜು,25,2019(www.justkannada.in):  ಸಚಿವ ಸ್ಥಾನ ಸಿಗದಿದ್ದರೇ ನಮ್ಮ ಸಂತೃಪ್ತ ಶಾಸಕರು ಸುಮ್ಮನೇ ಬಿಡ್ತಾರೇನ್ರಿ.   ಬಿಎಸ್ ಯಡಿಯೂರಪ್ಪರನ್ನ ಹರಿದು ನುಂಗ್ತಾರೆ ನೋಡಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯ ರಾಜಕೀಯದ ವಿಚಾರವಾಗಿ ಗುರುವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜತೆಗೆ ಮಾತನಾಡಿದ ಡಿಕೆ ಶಿವಕುಮಾರ್, ‘ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದರೆ ಯಡಿಯೂರಪ್ಪನವರ ಕಥೆ ಗೋವಿಂದಾ’ ಗೋವಿಂದಾ…! ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

’30-40 ವರ್ಷಗಳ ಕಾಲ ಸಾಕಿ ಸಲಹಿಸಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ ನಮ್ಮನ್ನು ಕಾರ್ಯಕರ್ತರನ್ನೇ ಸಂತೃಪ್ತರು ಬಿಡಲಿಲ್ಲ. ಇನ್ನು ಬಿಜೆಪಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ಬಿಡ್ತಾರಾ? ಯಡಿಯೂರಪ್ಪನವರನ್ನು ಹರಿದು ನುಂಗ್ತಾರೆ. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕಾರ ಮಾಡಬೇಕಾದರೆ ಒಟ್ಟಾಗಿ ಸ್ವೀಕರಿಸಿದ್ರೆ ಬದುಕಿದ್ರಿ ಇಲ್ಲದಿದ್ದರೇ ಬಿಎಸ್ ವೈ ಕಥೆ ಗೋವಿಂದಾ ಗೋವಿಂದಾ..

ಅಷ್ಟೂ 15 ಮಂದಿ ಶಾಸಕರಲ್ಲಿ ಕುಮಟಳ್ಳಿ ಒಬ್ಬ ಮಾತ್ರ ಸಚಿವ ಸ್ಥಾನ ಬಿಡಬಹುದು. ಮಿಕ್ಕ ಎಲ್ಲರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿತಾರೆ. ಒಂದು ವೇಳೆ ಅವರಿಗೆ ಸಿಗದಿದ್ದರೆ ಯಡಿಯೂರಪ್ಪನವರ ಪ್ಯಾಂಟು, ಶರ್ಟು ಹರಿದುಹಾಕ್ತಾರೆ. ಒಬ್ಬ ಜೇಬು ಕಿತ್ತುಕೊಂಡರೆ, ಮತ್ತೊಬ್ಬ ಪ್ಯಾಂಟು, ಇನ್ನೊಬ್ಬ ಶರ್ಟು ಕಿತ್ತುಕೊಳ್ತಾರೆ. ಅಷ್ಟೇಅಲ್ಲ ಯಡಿಯೂರಪ್ಪನವರ ಸುತ್ತಮುತ್ತ ಇರುವ ಮುತ್ತು ರತ್ನಗಳನ್ನೆಲ್ಲಾ ಕಿತ್ತು ಹಾಕ್ತಾರೆ.’

‘ಯಡಿಯೂರಪ್ಪನವರಿಗೆ ಇನ್ನು ಅವರಿಗೆ ಗೊತ್ತಿಲ್ಲ. ಅಲ್ಲಿರುವವರ ಪೈಕಿ ಒಬ್ಬನಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವಸ್ಥಾನ ಬೇಕು, ಒಬ್ಬನಿಗೆ ಪವರ್ ಬೇಕು, ಒಬ್ಬನಿಗೆ ಡಿಡಬ್ಲ್ಯೂಡಿ, ಇನ್ನೊಬ್ಬನಿಗೆ ಜಲಸಂಪನ್ಮೂಲ ಬೇಕು ಎಂದು ಈಗಾಗಲೇ ಸಚಿವ ಸ್ಥಾನ ಹಂಚಿಕೊಂಡು ಕೂತಿದ್ದಾರೆ. ನನ್ನ ಹತ್ತಿರ ಅವರು ಮಾತನಾಡಿದ್ದು, ನನ್ನ ಬಳಿ ಯಾರಿಗೆ ಯಾವ ಖಾತೆ ಬೇಕು ಎಂಬ ಪಟ್ಟಿ ಇದೆ. ನಾನು ಅದನ್ನು ಮುಂದಿನ ಅಧಿವೇಶನದಲ್ಲಿ ಹೇಳ್ತೀನಿ.’

‘ಅವರನ್ನು ಬಿಜೆಪಿ ಹೈಕಮಾಂಡ್ ಕಂಟ್ರೋಲ್ ಮಾಡುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ನಮ್ಮ ಸ್ನೇಹಿತರ ಪರಿಸ್ಥಿತಿ ಏನಾಗುತ್ತೆ ಅಂತಾ ಗೊತ್ತು. ಅಷ್ಟು ಮಾತ್ರ ಹೇಳ್ತೀನಿ. ಯಡಿಯೂರಪ್ಪನವರು ತಮ್ಮ ಜತೆ ಇವರನ್ನು ಪ್ರಮಾಣವಚನ ಮಾಡಿಕೊಂಡರೆ ಅವರು ಬಚಾವಾಗ್ತಾರೆ. ಇಲ್ಲಂದ್ರೆ ಯಡಿಯೂರಪ್ಪ ಗೋವಿಂದಾ.. ಗೋವಿಂದ.’

ರಾಜೀನಾಮೆ ಅಂಗೀಕಾರ ಸ್ಪೀಕರ್ ಅವರ ಪರಮಾಧಿಕಾರಕ್ಕೆ ಬಿಟ್ಟದ್ದು:

‘ಬಿಜೆಪಿ ಹೈಕಮಾಂಡ್ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡುತ್ತೋ ಬಿಡುತ್ತೋ ಗೊತ್ತಿಲ್ಲ. ಇದರಿಂದ ನನಗೆ ಪ್ಲಸ್ ಬೇಡ ಮೈನಸ್ಸೂ ಬೇಡ. ಯಾವುದೇ ಸರ್ಕಾರ ರಚನೆಯಾಗಬೇಕಾದರೆ 224 ಶಾಸಕರ ಪೈಕಿ 113 ಬಹುಮತ ಇರಬೇಕು. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸ್ತಾರಾ ಬಿಡ್ತಾರ ಅದು ನನಗೆ ಗೊತ್ತಿಲ್ಲ. ಅದು ಅವರ ಪರಮಾಧಿಕಾರ. ಸುಪ್ರೀಂ ಕೋರ್ಟೇ ಅವರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೀಗಿರುವಾಗ ಅದರ ಬಗ್ಗೆ ಮಾತನಾಡಲು ನಾನ್ಯಾರು? ನಾನು ಕಲಿತ ವಿದ್ಯೆ, ಓದಿದ ಪುಸ್ತಕದ ಆಧಾರದ ಮೇಲೆ ನಾನು ಹೇಳಿದ್ದೇನೆ.’

ಯಾವ ಶಾಸಕರು ಏನು ಹೇಳಿದ್ದಾರೆ, ಶಿವರಾಂ ಹೆಬ್ಬಾರ್ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇಲ್ಲಿ ಅತೃಪ್ತರು ಯಾರೂ ಇಲ್ಲ ಎಲ್ಲರು ಸಂತೃಪ್ತರು. ನಾನು ಏನು ಹೇಳಬೇಕೋ ಎಲ್ಲವನ್ನೂ ಸದನದಲ್ಲಿ ಹೇಳಿದ್ದಾನೆ. ಈಗ ನಾನೇನು ಮಾತನಾಡಲು ಹೋಗಲ್ಲ. ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇದ್ದಾರೆ. ಹೀಗಾಗಿ ನಾನು ಈ ಬಗ್ಗೆ ಕಾಮೆಂಟ್ ಮಾಡುವುದಿಲ್ಲ.’

ಯಾವುದೇ ಸ್ಥಾನಮಾನ ಬೇಡ!

ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಬೇಡ. ನನಗೆ ಅದರ ಅವಶ್ಯಕತೆನೂ ಇಲ್ಲ. ಈಗಿರುವ ಸ್ಥಾನಮಾನವನ್ನು ನನ್ನ ಕ್ಷೇತ್ರದ ಜನತೆ ಕೊಟ್ಟಿದ್ದಾರೆ. ನನಗೆ ಅಷ್ಟೇ ಸಾಕು. ನಮ್ಮ ಪಕ್ಷ ಮಂತ್ರಿ ಸ್ಥಾನ ನೀಡಿತ್ತು. ಅದು ಈಗ ಇಲ್ಲ. ನಾನು ಸಮಾಧಾನವಾಗಿಯೇ ಇದ್ದೀನಿ. ಇಲ್ಲಿ ನೋಡಿ ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಹೇಗೆ ಜನ ಬಂದು ನಿಂತಿದ್ದಾರೆ. ನಮಗೆ ಇದೇ ಸಾಕು. ಇನ್ನು ಸ್ಪೀಕರ್, ಕೋರ್ಟ್ ವಿಚಾರವಾಗಿ ಹೊರತಾಗಿ ನೀವು ಬೇರೆ ಯಾವುದೇ ವಿಚಾರವಾಗಿ ಪ್ರಶ್ನೆ ಕೇಳಿ. ಸಂವಿಧಾನಿಕ ಸಂಸ್ಥೆಗಳ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ.’

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ:

ಮೈತ್ರಿ ಮಾಡಿದ್ದು ರಾಹುಲ್ ಗಾಂಧಿ ಅವರು. ನಮ್ಮ ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಹಾಗೆ ನಾನು ಕೆಲಸ ಮಾಡುತ್ತೇನೆ. ಮೈತ್ರಿ ಮಾಡಿಕೊಂಡು 14 ತಿಂಗಳು ನಾವು ಜೆಡಿಎಸ್ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇಷ್ಟು ದಿನಗಳ ಕಾಲ ಜತೆಗೆ ಹೋರಾಟ ಮಾಡಿ ಇವತ್ತು ಸರ್ಕಾರ ಬಿತ್ತು ಎಂಬ ಕಾರಣಕ್ಕೆ ಅವರೊಂದಿಗೆ ರಂಪ ಮಾಡಿಕೊಳ್ಳಲು ನಾನು ಸಿದ್ಧವಿಲ್ಲ. ಹಾಗೇನಾದ್ರ ನಾವು ಮಾಡಿದರೆ ಜನ ನಮಗೆ ಉಗಿತಾರೆ. ದೇವೇಗೌಡರು ಹಾಗೂ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಏನಾದ್ರೂ ತೀರ್ಮಾನ ಮಾಡಲಿ. ಅವರು ಏನು ಹೇಳ್ತಾರೋ ಅದನ್ನು ನಾವು ಕೇಳ್ತೀವಿ. ಬೇರೆಯವರು ಏನು ಹೇಳ್ತಾರೋ ಗೊತ್ತಿಲ್ಲ. ಡಿಕೆ ಶಿವಕುಮಾರ್ ಆಗಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಡಿಕೆಶಿ ಹೇಳಿದರು.

Key words: Bangalore- bs Yeddyurappa –rebel mlas- DK Shivakumar

The post ಸಚಿವ ಸ್ಥಾನ ಸಿಗದಿದ್ರೆ ಸಂತೃಪ್ತರು ಬಿಡ್ತಾರೇನ್ರಿ..?..ಯಡಿಯೂರಪ್ಪರನ್ನು ಹರಿದು ನುಂಗ್ತಾರೆ- ‘ಕೈ’ ನಾಯಕ ಡಿಕೆ ಶಿವಕುಮಾರ್ ವ್ಯಂಗ್ಯ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..? ಅತೃಪ್ತ ಶಾಸಕರ ವಿರುದ್ದ ಕಿಡಿ: ರಾಜ್ಯಾಪಾಲರ ನಡೆಯನ್ನೂ ಪ್ರಶ್ನಿಸಿದ ಶಾಸಕ ಎ. ಟಿ ರಾಮಸ್ವಾಮಿ…
ಬೆಂಗಳೂರು,ಜು,22,2019(www.justkannada.in): ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ 15 ಮಂದಿ ಅತೃಪ್ತ ಶಾಸಕರು ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀನಾಮೆ  ಕೊಟ್ಟಿದ್ದೇವೆ ಎಂದಿದ್ದಾರೆ. ಆಗಾದರೇ ಸ್ವಾಭಿಮಾನವಿದ್ದಿದ್ದರೇ ಅವರು ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು ಎಂದು ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಪ್ರಶ್ನಿಸಿದರು.

ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾಪದ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ಎಟಿ ರಾಮಸ್ವಾಮಿ,  ಈಗ ಎಲ್ಲಾ ಕಡೆ ಪ್ರಜಾಪ್ರಭುತ್ವ ಮೌಲ್ಯಗಳು ಇಲ್ಲ.  ವಿರೋಧ  ನೈತಿಕ ಮೌಲ್ಯ ಸಿದ್ದಾಂತದ ಮೇಲೆ ನಿರ್ಣಯ ಆಗಲ್ಲ.  ವಿಧಾನಸೌಧದ ನ್ಯಾಯ, ಧರ್ಮ,ಸಿದ್ಧಾಂತ ಕುಸಿಯುತ್ತಿವೆ. ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದಿಲ್ಲ ಇಂದು ಮೂರು ಪಕ್ಷಗಳು ರೆಸಾರ್ಟ್ ಗೆ ನಿಂತು ಬಿಟ್ಟಿವೆ ಸರ್ಕಾರದ ಅಳಿವು, ಉಳಿವು ಸಂಖ್ಯಾಬಲದ ಮೇಲಿದೆ ಎಂದು ತಿಳಿಸಿದರು.

ಹಾಗೆಯೇ ರಾಜ್ಯದಲ್ಲಿ ಭೀಕರ ಬರಗಾಲವಿದೆ. 156 ತಾಲ್ಲೂಕುಗಳಲ್ಲಿ ಭೀಕರ ಬರವಿದೆ.  ಅಂತರ್ಜಲ ಕುಸಿದಿದೆ,ನೀರಿಗೆ ಹಾಹಾಕಾರವಿದೆ. ಇಂತ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು. ಆದರೆ ನಮ್ಮ ಅಧಿಕಾರ ದಾಹಕ್ಕೆ ಪ್ರಯತ್ನ ನಡೆದಿದೆ. ಸರ್ಕಾರದ ಅಂಕುಡೊಂಕು ತಿದ್ದಬೇಕು. ಪ್ರತಿಪಕ್ಷ ಆ ಕೆಲಸ ಮಾಡುತ್ತಿಲ್ಲವೆಂಬ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ 15 ಮಂದಿ ಅತೃಪ್ತ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಎ.ಟಿ ರಾಮಸ್ವಾಮಿ, ನಮ್ಮ 15 ಶಾಸಕರು ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿದ್ದಾರೆ. ನಾವು ಮುಂದೆ ಸ್ಪರ್ಧಿಸುವುದಿಲ್ಲ ಅಂತಾರೆ. ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ.  ಸ್ವಾಭಿಮಾನವಿದ್ದರೇ ಯಾಕೆ ರಾಜ್ಯ ಬಿಟ್ಟು ಹೋಗಬೇಕು . ರಾಜ್ಯದ ಮಾನ ಮರ್ಯಾದೆಯನ್ನ ರಾಷ್ಟ್ರಪಟ್ಟದಲ್ಲಿ ಹರಾಜು ಹಾಕಿದ್ದಾರೆ. ನಿಮಗೆ ಇಲ್ಲಿ ರಕ್ಷಣೆ ಕೊಡುತ್ತಿರಲಿಲ್ಲವೇ.  ಸೇವೆ ಮಾಡುವ ಉದ್ದೇಶವಿದ್ದರೇ ಅಲ್ಲಿಗೆ ಏಕೆ ಹೋಗಬೇಕಿತ್ತು. ಇಲ್ಲಿ ಅಷ್ಟು ಅರಾಜಕತೆ ಸೃಷ್ಠಿಯಾಗುತ್ತದೆಯಾ..? ಎಂದು ಪ್ರಶ್ನಿಸಿದರು.

ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು?.

ಇದೇ ವೇಳೆ  ರಾಜ್ಯಪಾಲರ ನಡೆ ಪ್ರಶ್ನಿಸಿದ ಶಾಸಕ ಎ.ಟಿ ರಾಮಸ್ವಾಮಿ, ರಾಜ್ಯಪಾಲರು ಎರಡು ಬಾರಿ ನೋಟೀಸ್ ನೀಡಿದ್ದಾರೆ.  ನೊಟೀಸ್ ಕೊಟ್ಟಿದ್ದು ಒತ್ತಡದ ತಂತ್ರವೇ? ನಾವು ರಾಜಕಾರಣಿಗಳು, ತಂತ್ರಗಾರಿಕೆ ಮಾಡಬಹುದು. ಆದರೆ ಕಾರ್ಯಾಂಗದ ಮುಖ್ಯಸ್ಥರು ತಂತ್ರಗಾರಿಕೆ ಮಾಡಬಹುದೇ. ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್ ಗೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

ನಮ್ಮನ್ನ ನೋಡಿ ದೇವರೂ ಹೆದರಿ ಹೋಗಿದ್ದಾನೆ.

ದೇವರು ಯಡಿಯೂರಪ್ಪಗೆ ಬಲಗಡೆ ಹೂ ಕೊಟ್ಟಿದೆಯಂತೆ. ಸಿಎಂ ಆಗ್ತೀರಿ ಅಂತ ಹೂ ನೀಡಿದೆಯಂತೆ. ಸಿಎಂಗೂ ದೇವರು ಬಲಗಡೆ ಹೂ ಕೊಟ್ಟಿದ್ದಾನಂತೆ. ಹಾಗಾದ್ರೆ ಇಬ್ಬರೂ ಸಿಎಂ ಆಗೋಕೆ ಸಾಧ್ಯವೇ. ನಮ್ಮನ್ನ ನೋಡಿ ದೇವರೂ ಹೆದರಿ ಹೋಗಿದ್ದಾನೆ  ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ  ವ್ಯಂಗ್ಯವಾಡಿದರು.

ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟ ಕುರಿತು ಪ್ರಶ್ನಿಸಿದ ಶಾಸಕ ರಾಮಸ್ವಾಮಿ,  ಶಾಸಕರಿಗೆ ಜೀರೋ ಟ್ರಾಪಿಕ್ ನೀಡಲಾಗಿದೆ. ಪ್ರೋಟೋ ಕಾಲ್ ನಲ್ಲಿ ಜೀರೋ ಟ್ರಾಫಿಕ್ ಇದೆಯೇ. ಅತೃಪ್ತರಿಗೆ ಅದೇಗೆ ಜೀರೋ ಟ್ರಾಫಿಕ್ ಕೊಟ್ರಿ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ಕೊಟ್ಟಿದ್ದು ಏಕೆ? ಗರ್ಭಿಣಿಗೆ ಜೀರೋ ಟ್ರಾಫಿಕ್ ಮಾಡಿಕೊಡ್ತೀರ. ಯಾರೂ ಕೈಕಾಲು ಮುರಿದುಕೊಂಡವರಿಗೆ ನೀವು ಮಾಡಿಕೊಡ್ತೀರ. ಕಾನೂನು, ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ. ಯಾವ ಘನ ಉದ್ದೇಶಕ್ಕಾಗಿ ಜೀರೋ ಟ್ರಾಫಿಕ್ ಕೊಟ್ಟಿದ್ದೀರ. ಇದೊಂದು ಸಣ್ಣ ವಿಷಯವೇ ಅಲ್ಲ. ಗಂಭೀರವಾದ, ಘನವಾದ ವಿಷಯ ಗೌರ್ನರ್ ಕಚೇರಿಯಿಂದ ಸೂಚನೆಯಿಂದ ಮಾಡಿದ್ರಾ? ಎಂದು  ಅಸಮಾಧಾನ ವ್ಯಕ್ತಪಡಿಸಿದರು.

Key words: session- Sparks- against  rebel MLAs-A T Ramaswamy.

The post ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..? ಅತೃಪ್ತ ಶಾಸಕರ ವಿರುದ್ದ ಕಿಡಿ: ರಾಜ್ಯಾಪಾಲರ ನಡೆಯನ್ನೂ ಪ್ರಶ್ನಿಸಿದ ಶಾಸಕ ಎ. ಟಿ ರಾಮಸ್ವಾಮಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ: ರೆಬೆಲ್ ಶಾಸಕರಿಗೆ ಲಾಸ್ಟ್ ಚಾನ್ಸ್ ಕೊಟ್ಟ ಸಚಿವ ಡಿ.ಕೆ ಶಿವಕುಮಾರ್…
ಬೆಂಗಳೂರು,ಜು,17,2019(www.justkannada.in): ಬೇರೆಯವರನ್ನ ನಂಬಿ ಹೋಗಬೇಡಿ ಅವರು ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆಯಾದ್ರೆ ನೀವು ಮತ್ತೆ ಸಚಿವರಾಗಲು ಆಗಲ್ಲ. ಹೀಗಾಗಿ ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ ಎಂದು ಅತೃಪ್ತ ಶಾಸಕರಿಗೆ ಸಚಿವ ಡಿ.ಕೆ ಶಿವಕುಮಾರ್  ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಕುರಿತು ಇಂದು ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್, ಸುಪ್ರೀಂಕೋರ್ಟ್ ತೀರ್ಪನ್ನ ಸ್ವಾಗತಿಸುತ್ತೇನೆ. ಇಂದಿನ ತೀರ್ಪು ಸ್ಪೀಕರ್ ಅಧಿಕಾರವನ್ನ ಎತ್ತಿಹಿಡಿದಿದೆ.  ಹಾಗೆಯೇ ಸದನಕ್ಕೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ಒತ್ತಡ ಹೇರುವಂತೆ ಹೇಳಿದೆ. ಶಾಸಕರು ಅಧಿವೇಶನಕ್ಕೆ ಬರಬಹುದು ಅಥವಾ ಬರದೆ ಇರಬಹುದು.  ಆದ್ರೆ ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲಾ ಎಂದರು.

ಎಲ್ಲಾ ಶಾಸಕರು ನನ್ನ ಪಾಲಿಗೆ ರೆಬಲ್ ಶಾಸಕರಲ್ಲ ಸ್ನೇಹಿತರು.  ಹೀಗಾಗಿ ಮತ್ತೊಮ್ಮೆ ಎಲ್ಲಾ ಅತೃಪ್ತ ಶಾಸಕರಿಗೆ ಮನವಿ ಮಾಡುತ್ತೇನೆ. ಬೇರೆಯವರನ್ನ ನಂಬಿ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ನೀವು ಅನರ್ಹತೆಯಾದರೇ ಮತ್ತೆ ಸಚಿವರಾಗಲು ಆಗಲ್ಲ ಅಲ್ವಾ. ಹೀಗಾಗಿ ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ ನಿನ್ನ ಕುಟುಂಬ ಮತ್ತು ನಿಮ್ಮನ್ನ ಗೆಲ್ಲಿಸಿದ ಮತದಾರರ ಮುಖ ನೋಡಿ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

Key words: disqualification-  DK Sivakumar-last chance – Rebel MLAs

The post ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ: ರೆಬೆಲ್ ಶಾಸಕರಿಗೆ ಲಾಸ್ಟ್ ಚಾನ್ಸ್ ಕೊಟ್ಟ ಸಚಿವ ಡಿ.ಕೆ ಶಿವಕುಮಾರ್… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಿಜೆಪಿಯನ್ನು ನಂಬಿ ಹೋದರೆ, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗಾದ ಸ್ಥಿತಿಯೇ ನಿಮಗೂ ಆಗುತ್ತದೆ: ಅತೃಪ್ತ ಶಾಸಕರಿಗೆ ಆರ್ ವಿ ದೇವರಾಜ್ ಎಚ್ಚರಿಕೆ
ಬೆಂಗಳೂರು: ಜುಲೈ-9;(www.justkannada.in) ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಕಾಂಗ್ರೆಸ್​ ಮಾಜಿ ಶಾಸಕ ಆರ್​.ವಿ.ದೇವರಾಜ್, ಕಾಂಗ್ರೆಸ್​ ಬಿಟ್ಟು ಬಿಜೆಪಿಯನ್ನು ನಂಬಿ ಹೋದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರನ್ನು ಬಿಜೆಪಿ ಡಸ್ಟ್​ಬಿನ್​ಗೆ ಎಸೆದಿದೆ. ಅದೇ ರೀತಿ ನಿಮ್ಮನ್ನು ಕೂಡ ಕಡೆಗಣಣಿಸಿ ಡಸ್ಟ್​ಬಿನ್​ ಗೆ ಹಾಕುತ್ತಾರೆ ಎಂದು ಹೇಳಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ, ಆರ್.ವಿ ದೇವರಾಜ್, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಿಮಗೆ ಎಲ್ಲವನ್ನು ಕೊಟ್ಟಿದೆ. ರಾಮಲಿಂಗಾರೆಡ್ಡಿ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಬಾರದು. ಲಕ್ಷಾಂತರ ಕಾರ್ಯಕರ್ತರು ನಿಮ್ಮನ್ನು ನಂಬಿ ಗೆಲ್ಲಿಸಿದ್ದಾರೆ. ಬೆಂಗಳೂರಿಗೆ ರಾಮಲಿಂಗಾರೆಡ್ಡಿ ಅವರು ಸಿಎಂ ಇದ್ದಂತೆ. ಸೋನಿಯಾಗಾಂಧಿ ನಿಮ್ಮೊಡನೆ ಮಾತಾಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ಕೂಡಲೇ ಪಕ್ಷಕ್ಕೆ ವಾಪಸ್ ಬನ್ನಿ ಎಂದು ಮನವಿ ಮಾಡಿದರು.

ಬಿಜೆಪಿ ನಿಮ್ಮನ್ನು ಮಂತ್ರಿ ಮಾಡುವುದಾಗಿ, ಒಳ್ಳೆ ಸ್ಥಾನ ನೀಡುವುದಾಗಿ ಆಮಿಷ ನೀಡಿ ಕರೆಯುತ್ತದೆ. ಪಕ್ಷಕ್ಕೆ ಬಂದ ಬಳಿಕ ಹತ್ತಿರಕ್ಕೂ ಸೇರಿಸಲ್ಲ. ಇದಕ್ಕೆ ಉದಾಹರಣೆ ಮಾಜಿ ಸಿಎಂ ಎಸ್ ಎಂ ಕೃಷ್ಣ. ಬಿಜೆಪಿಯನ್ನು ನಂಬಿ ಅವರು ಎಲ್ಲವನ್ನೂ ನೀಡಿದ್ದ ಆಂಗ್ರೆಸ್ ಪಕ್ಷ ಬಿಟ್ಟು ಹೋದರು. ಬಿಜೆಪಿಗೆ ಹೋಗಿ ಎಸ್.ಎಂ ಕೃಷ್ಣರ ಸ್ಥಿತಿ ಈಗ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಅವರಿಗೆ ಬಂದ ಪರಿಸ್ಥಿತಿ ನಾಳೆ ನಿಮಗೂ ಬರುತ್ತದೆ. ಹಾಗಾಗಿ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯನ್ನು ನಂಬಿ ಹೋದರೆ, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗಾದ ಸ್ಥಿತಿಯೇ ನಿಮಗೂ ಆಗುತ್ತದೆ: ಅತೃಪ್ತ ಶಾಸಕರಿಗೆ ಆರ್ ವಿ ದೇವರಾಜ್ ಎಚ್ಚರಿಕೆ

R V Devaraj,Congress-JDS,Rebel MLAs

The post ಬಿಜೆಪಿಯನ್ನು ನಂಬಿ ಹೋದರೆ, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗಾದ ಸ್ಥಿತಿಯೇ ನಿಮಗೂ ಆಗುತ್ತದೆ: ಅತೃಪ್ತ ಶಾಸಕರಿಗೆ ಆರ್ ವಿ ದೇವರಾಜ್ ಎಚ್ಚರಿಕೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗು
ಬೆಂಗಳೂರು:ಜುಲೈ-7:(www.justkannada.in) ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಬಿಜೆಪಿಯವರು ನಮಗೆ ಏನೂ ಗೊತ್ತಿಲ್ಲ ಎಂದು ಹೆಳುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ ಎಂದು ಟ್ರಬಲ್ ಶೂಟರ್, ಸಚಿವ ಡಿ.ಕೆಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಶಾಸಕರ ಅಸಮಾಧಾನ, ರಾಜೀನಾಮೆಗಳಿಗೆಲ್ಲ ಔಷಧ, ಪರಿಹಾರ ಕಂಡು ಹಿಡಿಯುತ್ತಿದ್ದೇವೆ. ಹಾಗಾಗಿ ಪರಿಹಾರದ ಬಗ್ಗೆ ಯಾರಾದ್ರೂ ಹೇಳ್ತಾರಾ? ಇದರ ಬಗ್ಗೆ ನಾವು ಏನನ್ನೂ ಮಾತನಾಡುವುದಿಲ್ಲ ಎಂದರು.

ಎಲ್ಲರೂ ಸಭೆಗಳನ್ನು, ಚರ್ಚೆಗಳನ್ನು ಮಾಡುತ್ತಿದ್ದಾರೆ ನೋಡೋಣ. ಹೆಚ್ ಡಿ ಕುಮಾರಸ್ವಾಮಿ 5 ವರ್ಷ ಸಿಎಂ ಎಂದು ಹೇಳಿದ್ದೇವೆ. ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯತ್ನಗಳು ನಡೆದಿದೆ. ಪಕ್ಷ ಮುಂದಿನದ್ದನ್ನು ನಿರ್ಧಾರ ಮಾಡಲಿದೆ. ನಾವು ಕೂಡ ನಮ್ಮ ಸ್ಥಾನ ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗು

Coalition government,Rebel MLA’s, Resign,D K Shivakumar

The post ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಗುಡುಗು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ಪೀಕರ್ ಕಚೇರಿಯಲ್ಲಿ ಅತೃಪ್ತ ಶಾಸಕರು:: ಬಿಜೆಪಿ ಸೇರ್ಪಡೆ ಬಗ್ಗೆ ಶಾಸಕ ರಾಮಲಿಂಗರೆಡ್ಡಿ ಏನಂದ್ರು…?
ಬೆಂಗಳೂರು,ಜು,6,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ನಡೆ ಬಗ್ಗೆ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಶಾಸಕ ರಾಮಲಿಂಗ ರೆಡ್ಡಿ ಇದೀಗ 8 ಶಾಸಕರ ರಾಜೀನಾಮೆ ಬಳಿಕ ತಾವೂ ರಾಜೀನಾಮೆ ನೀಡುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕರಾದ ರಾಮಲಿಂಗರೆಡ್ಡಿ, ಭೈರತಿ ಬಸವರಾಜ್, ಮುನಿರತ್ನ, ಎಸ್.ಟಿ ಸೋಮಶೇಖರ್ ಸೇರಿ 12 ಮಂದಿ ಅತೃಪ್ತ ಶಾಸಕರು ಈಗಾಗಲೇ ಸ್ಪೀಕರ್ ಕಚೇರಿಗೆ ಆಗಮಿಸಿ ಸ್ಪೀಕರ್ ಗಾಗಿ ಕಾಯುತ್ತಿದ್ದಾರೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಕಚೇರಿಯಿಂದ ತೆರಳಿದ್ದು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇನ್ನು ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ರಾಮಲಿಂಗರೆಡ್ಡಿ, ಅತೃಪ್ತರ ಗುಂಪಿನಲ್ಲಿ ನಾನೂ ಇದ್ದೇನೆ. ಕಾಂಗ್ರೆಸ್ ಪಕ್ಷದ ಬಗ್ಗೆ ಬೇಸರವಿಲ್ಲ. ಕಾಂಗ್ರೆಸ್ ಮುಖಂಡರ ಮೇಲೆ ಯಾವುದೇ ಅಸಮಾಧಾನವಿಲ್ಲ. ಸಿದ್ದರಾಮಯ್ಯ ನನ್ನ ಜತೆ ಮಾತನಾಡಿಲ್ಲ ಎಂದು ಹೇಳಿದರು.

ಹಾಗೆಯೇ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗರೆಡ್ಡಿ, ಬೇರೆ ಪಕ್ಷ ಸೇರ್ಪಡೆ ಬಗ್ಗೆ ತಕ್ಷಣ ನಾನು ಯೋಚಿಸಿಲ್ಲ. ಬಿಜೆಪಿ ಸೇರ್ಪಡೆ ಬಗ್ಗೆ ಮುಂದೆ ನೋಡೋಣ ಎಂದಿದ್ದಾರೆ.

Key words: Rebel MLAs –speaker-office- resignation.

The post ಸ್ಪೀಕರ್ ಕಚೇರಿಯಲ್ಲಿ ಅತೃಪ್ತ ಶಾಸಕರು:: ಬಿಜೆಪಿ ಸೇರ್ಪಡೆ ಬಗ್ಗೆ ಶಾಸಕ ರಾಮಲಿಂಗರೆಡ್ಡಿ ಏನಂದ್ರು…? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.