raghu-koutilya Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮುಡಾ 5,000 ನಿವೇಶನಗಳ ಅಕ್ರಮ ಹಂಚಿಕೆ ತನಿಖೆ ಏನಾಯ್ತು..? ಸಾರ್ವಜನಿಕರಿಗೆ ಮಾಹಿತಿ ಕೊಡಿ-ಆರ್. ರಘುಕೌಟಿಲ್ಯ
ಮೈಸೂರು,ಆಗಸ್ಟ್,25,2025 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇ 50:50 ರ ಅನುಪಾತದ ನಿವೇಶನಗಳ ಹಗರಣ ರಾಜ್ಯ ಕಂಡ ಬಹುದೊಡ್ಡ ಭ್ರಷ್ಟಾಚಾರ ಹಾಗೂ ಲೂಟಿಕೋರತನದ ಹಗರಣವಾಗಿದೆ. 5,000 ನಿವೇಶನಗಳ ಅಕ್ರಮ ಹಂಚಿಕೆ ತನಿಖೆ  ಹಳ್ಳಹಿಡಿಯುತ್ತಿರುವ ಆತಂಕ ಎದುರಾಗಿದೆ. ಹೀಗಾಗಿ ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘುಕೌಟಿಲ್ಯ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ಕೌಟಿಲ್ಯ,  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇ 50:50 ರ ಅನುಪಾತದ ನಿವೇಶನಗಳ ಹಗರಣ ರಾಜ್ಯ ಕಂಡ ಬಹುದೊಡ್ಡ ಭ್ರಷ್ಟಾಚಾರ ಹಾಗೂ ಲೂಟಿಕೋರತನದ ಹಗರಣವಾಗಿದೆ. ಮೈಸೂರಿನ ನಿವೇಶನ ರಹಿತರಿಗೆ ಸಿಗಬೇಕಾದ ಅಂದಾಜು ಐದು ಸಾವಿರದಷ್ಟು ನಿವೇಶನಗಳನ್ನು, ಕಾನೂನನ್ನು ಗಾಳಿಗೆ ತೂರಿ ಈ ಹಿಂದಿನ ಇಬ್ಬರು ಮುಡಾ ಆಯುಕ್ತರುಗಳು ಹಾಗೂ ಇತರ ಅಧಿಕಾರಿಗಳು ಸೇರಿ ವ್ಯವಸ್ಥಿತ ಜಾಲ ನಿರ್ಮಿಸಿಕೊಂಡು ನಿವೇಶನಗಳನ್ನು ಲೂಟಿ ಮಾಡಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ಸಾವಿರಾರು ಕೋಟಿ ನಷ್ಟವಾಯಿತು.

ಮೊನ್ನೆ ನಡೆದ ಇ-ಹರಾಜಿನಲ್ಲಿ ಕೇವಲ 200 ನಿವೇಶನಗಳಿಗೆ 100 ಕೋಟಿಗೂ ಹೆಚ್ಚು ಹರಾಜಿನಲ್ಲಿ ಮಾರಾಟವಾಗಿದೆ. ಕೇವಲ 20X30 ನಿವೇಶನವೊಂದು ಎರಡು ಕೋಟಿಯವರೆಗೆ, 50X80 ನಿವೇಶನ 9 ಕೋಟಿಯವರೆಗೆ ಇ-ಹರಾಜಿನಲ್ಲಿ ಘೋಷಿಸಿಕೊಂಡಿದ್ದಾರೆ ಎಂಬ ಮಾಹಿತಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದೆ. ಆಶ್ಚರ್ಯಕರ ರೀತಿಯಲ್ಲಿ ಇ-ಹರಾಜಿನಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಖರೀದಿಯಾಗಿರುವುದನ್ನು ಗಮನಿಸಿದರೆ, ಇ-ಹರಾಜಿನ ಪ್ರಕ್ರಿಯೆಯ ಹಿಂದೆ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮವನ್ನು ಬೂಸ್ಟ್ ಮಾಡಿಸುವ ಪ್ರಯತ್ನವೂ ಯಾಕಿರಬಾರದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಮುಡಾ ಹಗರಣದ ನಂತರ ಮೈಸೂರಿನ ರಿಯಲ್ ಎಸ್ಟೇಟ್ ಬೇಡಿಕೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚುರುಕುಗೊಳ್ಳಲಿ ಎಂಬ ತಂತ್ರವೂ ಇರಬಹುದಾದ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಈಗಾಗಲೇ ಜಾರಿ ನಿರ್ದೇಶನಾಲಯ (ED) ಶೇ 50:50 ಅನುಪಾತದ ನಿವೇಶನಗಳನ್ನು ನೋಂದಣಿ ಮಾಡದಂತೆ ಉಪ ನೋಂದಣಿ ಅಧಿಕಾರಗಳಿಗೆ ಸೂಚನೆ ನೀಡಿದೆ. ಆದರೆ ನಗರಾಭಿವೃದ್ಧಿ ಪ್ರಾಧಿಕಾರ ಈ ಸಂಬಂಧವಾಗಿ ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ. ನ್ಯಾಯಮೂರ್ತಿ ದೇಸಾಯಿ ಆಯೋಗ ಯಾವ ವರದಿ ಕೊಟ್ಟಿದೆ ಎನ್ನುವುದು ಇವರೆವಿಗೂ ಬಹಿರಂಗವಾಗಿಲ್ಲ. ಲೋಕಾಯುಕ್ತದ ತನಿಖೆ ಹಾಗೂ ಜನಪ್ರತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆಯಾದರೂ ಮುಖ್ಯಮಂತ್ರಿಗಳ ಕುಟುಂಬದ 14 ನಿವೇಶನಗಳತ್ತಲೇ ಈವರೆವಿಗೂ ವಿಷಯ ಕೇಂದ್ರೀಕೃತವಾಗಿದೆಯೇ ಹೊರತು, ಲೂಟಿಯಾದ ಉಳಿದ ನಿವೇಶನಗಳನ್ನು ರಕ್ಷಿಸುವಲ್ಲಿ ಸರ್ಕಾರ ಮುಂದಾದಂತೆ ಕಾಣುತ್ತಿಲ್ಲ. ಈ 5,000 ನಿವೇಶನಗಳ ಲೂಟಿಕೋರತನದ ತನಿಖೆ ಹಳ್ಳಹಿಡಿಯುತ್ತಿದೆ ಎಂಬ ಆತಂಕ ಮೈಸೂರಿನ ನಿವೇಶನರಹಿತರನ್ನು ಕಾಡುತ್ತಿದೆ ಎಂದು ರಘು ಕೌಟಿಲ್ಯ ಕಳವಳ ವ್ಯಕ್ತಪಡಿಸಿದರು.

ಸದರಿ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು, ಅಧಿಸೂಚನೆ ಹೊರಡಿಸಿ, ಆ ಮಂಜೂರಾತಿಯನ್ನು ರದ್ದು ಮಾಡಬೇಕಾಗಿತ್ತು.ಆದರೆ ಈವರೆವಿಗೂ ಅಂತಹ ಯಾವುದೇ ಹೆಜ್ಜೆ ಇಟ್ಟಂತೆ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಈ ಕೂಡಲೇ ನಗರಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಅಸ್ತಿತ್ವಕ್ಕೆ ಬಂದಿರುವ ನಗರ ಅಭಿವೃದ್ಧಿ ಪ್ರಾಧಿಕಾರ ಈ ನಿವೇಶನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಈ ನಿವೇಶನಗಳು ರದ್ದು ಪಡಿಸುವ ಹಂತದಲ್ಲಿದೆಯೇ? ತನಿಖೆ ಹಂತದಲ್ಲಿದೆಯೇ? ಅಥವಾ ಈ ನಿವೇಶನಗಳು ಮಾರಾಟಕ್ಕೆ ಬಂದರೆ ಸಾರ್ವಜನಿಕರು ಮೋಸ ಹೋಗದಂತೆ ಯಾವ ಕ್ರಮ ಅನುಸರಿಸಬೇಕೆಂಬ ಸೂಚನೆಗಳನ್ನು ಇಲಾಖೆಯಿಂದ ನೀಡುತ್ತಿಲ್ಲ. ನೂತನವಾಗಿ ಅಸ್ತಿತ್ವ ಪಡೆದುಕೊಂಡಿರುವ ಅಭಿವೃದ್ಧಿ ಪ್ರಾಧಿಕಾರ ಏಕೆ ಮೌನ ವಹಿಸಿದೆ? ಎಂದು ರಘುಕೌಟಿಲ್ಯ ಪ್ರಶ್ನಿಸಿದರು.

ಈ ಬಹುದೊಡ್ಡ ಹಗರಣದ ಹಿನ್ನೆಲೆಯ ಬೆಳವಣಿಗೆಯನ್ನು ನೋಡುತ್ತಿದ್ದರೆ, ತನಿಖೆಯನ್ನು ಗಮನಿಸುತ್ತಿದ್ದರೆ, ಈ ಲೂಟಿಕೋರತನವನ್ನು ಮುಚ್ಚಿಬಿಡುವ ಹಾಗೂ ಸಂಬಂಧಿತ ಅಪರಾಧಿಗಳನ್ನು ರಕ್ಷಿಸುವ ಹುನ್ನಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂತಹ ಬಹುದೊಡ್ಡ ಹಗರಣವನ್ನು ನಡೆಸಿದ ಯಾವ ಅಧಿಕಾರಿಗೂ ಸರ್ಕಾರ ಶಿಕ್ಷಿಸಲಿಲ್ಲ. ಏಕೆಂದರೆ ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ಈ ಹಗರಣದಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಹೋಗಲಿ ಎಂದರೆ ಈ ನಿವೇಶನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಹೆಜ್ಜೆ ಇಡುತ್ತಿಲ್ಲ ಎಂದು ರಘು ಕೌಟಿಲ್ಯ ಕಿಡಿಕಾರಿದರು.

ಈ ಕೂಡಲೇ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರ ಈ ಶೇ 50:50 ಅನುಪಾತದ ಅಕ್ರಮ ವಿತರಣೆಯ ನಿವೇಶನಗಳ ಗತಿ ಏನಾಗಿದೆ, ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಈ ನಿವೇಶನಗಳನ್ನು ಪಡೆದಿರುವ ನಿವೇಶನದಾರರು ಯಾರು, ಅವರ ಹಿನ್ನೆಲೆ ಏನು ಎಂಬ ಬಗ್ಗೆ ಸರ್ಕಾರ ವಿಸ್ತ್ರತ ತನಿಖೆ ನಡೆಸಬೇಕು. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಇದೇ ರೀತಿಯಾದಂತಹ ನಡುವಳಿಕೆ ಮುಂದುವರಿಸಿದರೆ ಉಚ್ಚ ನ್ಯಾಯಾಲಯದಲ್ಲಿ ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದು ಅನಿವಾರ್ಯವಾದೀತು ಎಂದು ರಘುಕೌಟಿಲ್ಯ ಎಚ್ಚರಿಕೆ ನೀಡಿದ್ದಾರೆ.

Key words: investigation illegal allocation, Muda, sites , Raghu koutilya

The post ಮುಡಾ 5,000 ನಿವೇಶನಗಳ ಅಕ್ರಮ ಹಂಚಿಕೆ ತನಿಖೆ ಏನಾಯ್ತು..? ಸಾರ್ವಜನಿಕರಿಗೆ ಮಾಹಿತಿ ಕೊಡಿ-ಆರ್. ರಘುಕೌಟಿಲ್ಯ  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶ್ರಮಿಕ ಜೀವಿ ಕ್ಷೌರಿಕ ವೃತ್ತಿಶೀಲರ ಕುರಿತು ಮಧು ಬಂಗಾರಪ್ಪ ಹಗುರ ಮಾತು-ರಘು ಕೌಟಿಲ್ಯ ಕಿಡಿ.
ಮೈಸೂರು,ಮೇ,28,2024 (www.justkannada.in): ನನಗೆ ಹೇರ್ ಕಟ್ ಮಾಡೋರು ಫ್ರಿ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಫ್ರಿ ಇದ್ದರೇ ಬಂದು ಕಟಿಂಗ್ ಮಾಡಲಿ ಎಂದು ಹೇಳಿಕೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ದ ಬಿಜೆಪಿ ಮುಖಂಡ ರಘು ಕೌಟಿಲ್ಯ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಘು ಕೌಟಿಲ್ಯ, ‘ಶಿಕ್ಷಣ’ ಪರಿಶುಭ್ರತೆಗೆ ಕಪ್ಪು ಚುಕ್ಕೆ ಸಂಕೇತಿಸುವ ವಿಕೃತಿ ಅಳವಡಿಸಿಕೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ‘ಮುಖಕ್ಕೆ ಕನ್ನಡಿ ಹಿಡಿದು ತಿಳಿಹೇಳಿದ’ ನಮ್ಮ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರವರ ಸಲಹೆಯನ್ನು ಸಕರಾತ್ಮಕವಾಗಿ ಸ್ವೀಕರಿಸುವ ಬದಲು ವಿಚಲಿತಗೊಂಡಂತೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರು.

ಹೇರ್ ಕಟ್ ಮಾಡೋರು ಬಿಜಿ ಇದ್ದಾರೆ” ಎಂದು ಹೇಳುವ ಮೂಲಕ ಸಂಕಷ್ಟಿತ ಶ್ರಮಿಕ ಜೀವಿಗಳಾದ ‘ ಕ್ಷೌರಿಕ ವೃತ್ತಿಶೀಲ’ರ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ರಘು ಕೌಟಿಲ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪನವರು ಕೇಶಾಲಂಕಾರ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ ‘ಹೆಂಡದ ಮಾರಯ್ಯ’ ವೃತ್ತಿ ತ್ಯಜಿಸಿ ‘ಶರಣ ಶ್ರೇಷ್ಠ’ನಾಗಲು ಪ್ರಭಾವಬೀರಿದ ಅಣ್ಣ ಬಸವಣ್ಣನವರ ಬಲಗೈಯಂತಿದ್ದ ಮಹಾಶರಣ ಹಡಪದ ಅಪ್ಪಣ್ಣನ ಸಮಾಜವೂ ಸೇರಿದಂತೆ ಇತರ ವೃತ್ತಿನಿರತ ಕಾಯಕ ಸಮುದಾಯಗಳನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳಸಿಕೊಳ್ಳಲಿ ಎಂದು ರಘು ಕೌಟಿಲ್ಯ ವಾಗ್ದಾಳಿ ನಡೆಸಿದರು.

Key words: Madhu Bangarappa , BJP, Raghu koutilya

The post ಶ್ರಮಿಕ ಜೀವಿ ಕ್ಷೌರಿಕ ವೃತ್ತಿಶೀಲರ ಕುರಿತು ಮಧು ಬಂಗಾರಪ್ಪ ಹಗುರ ಮಾತು-ರಘು ಕೌಟಿಲ್ಯ ಕಿಡಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ, ವಾರ್‌ ರೂಂ‌ಗೆ ಕರೆ ಮಾಡುವವರ ಸಂಖ್ಯೆಯೂ ಮೂರಂಕಿಯಿಂದ ಎರಡಂಕಿಗೆ ಇಳಿಕೆ : ಆರ್. ರಘು ಕೌಟಿಲ್ಯ
ಮೈಸೂರು, ಜೂ.19, 2021 : (www.justkannada.in news ) : ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದ್ದು , ಹಾಸಿಗೆಗೆ ಇದ್ದ ಬೇಡಿಕೆ ಕಡಿಮೆಯಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಉಳಿದಿದೆ ಎಂದು ವಾರ್ ರೂಂ ಮೇಲುಸ್ತುವಾರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ಕೊರೊನಾ ವಾರ್ ರೂಂ ಗೆ ಭೇಟಿ ನೀಡಿದ್ದ ರಘು ಕೌಟಿಲ್ಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು ಅದು ಹೀಗಿದೆ…

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕರ್ನಾಟಕ ಮನ್ನೆಡೆದಿದ್ದು ಪರಿಣಾಮ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಅದೇ ರೀತಿ ಮೈಸೂರಿನಲ್ಲೂ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಉಸ್ತುವಾರಿ ಸಚಿವ ಸೋಮಶೇಖರ ಅವರ ಮಾರ್ಗದರ್ಶನದಲ್ಲಿ ಸೋಂಕು ತಡೆಗಟ್ಟುವಲ್ಲಿ ಯಶಸ್ಸಿನ ಹಾದಿಯಲ್ಲಿ ಜಿಲ್ಲಾಡಳಿತ ಹೆಜ್ಜೆಯನ್ನಿಡುತ್ತಿದೆ.

ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ ಉಳಿಯುತ್ತಿರುವುದು ಸಂತಸದ ಸಂಗತಿ. ಜತೆಗೆ ವಾರ್‌ ರೂಂ‌ಗೆ ಕರೆ ಮಾಡುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಿತ್ಯವೂ ಸರಾಸರಿ 500ಕ್ಕೂ ಹೆಚ್ಚು ಕರೆ ಸ್ವೀಕರಿಸುತ್ತಿದ್ದ ವಾರ್ ರೂಂ ಸಿಬ್ಬಂದಿ. ವಾರದಿಂದ ಈಚೆಗೆ ರಿಸೀವ್ ಮಾಡುತ್ತಿರೋದು ಕೇಬಲ್ 80ರಿಂದ 100 ಕರೆ ಮಾತ್ರ ಎಂದು ರಘು ಹೇಳಿದ್ದಾರೆ.

ಬೆಡ್, ಆಕ್ಸಿಜನ್, ವೆಂಟಿಲೇಟರ್ ಬೇಡಿಕೆ ಕಡಿಮೆಯಾಗಿದ್ದು ಬಹುತೇಕ ಕೇಳುವವರೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿರಲ್ಲೂ ಆತಂಕ ದೂರವಾಗಿದೆ. ಇದುವರೆಗೆ ವಾರ್ ರೂಂ‌ನಿಂದ ಖಾಸಗಿ ಆಸ್ಪತ್ರೆಗಳಲ್ಲಿನ 3977 ಸೇರಿದಂತೆ ಒಟ್ಟು 17,191 ಸೋಂಕಿತರಿಗೆ ಆಸ್ಪತ್ರೆಗಳ ದಾಖಲಾತಿಗೆ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ರಘು ತಿಳಿಸಿದ್ದಾರೆ. ಸದ್ಯ, ಬೆಡ್ ಗಳಿಗೆ ಬೇಡಿಕೆ ಕಡಿಮೆಯಾಗಿರುವ ಕಾರಣ ಒತ್ತಡದ ನಡುವೆ ಕೆಲಸ ನಿರ್ವಹಿಸಿದ ಆರೋಗ್ಯ ಇಲಾಖೆ, ಎನ್‌ಸಿಸಿ, ಸ್ವಯಂ ಸೇವಕರು ನಿರಾಳರಾಗಿದ್ದಾರೆ.

ವಾರ್ ರೂಂ ಮೇಲುಸ್ತುವಾರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ಹೇಳಿಕೆ.

key words : mysore-covid-war-room-raghu-koutilya-bed-block-no-demand

The post ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ, ವಾರ್‌ ರೂಂ‌ಗೆ ಕರೆ ಮಾಡುವವರ ಸಂಖ್ಯೆಯೂ ಮೂರಂಕಿಯಿಂದ ಎರಡಂಕಿಗೆ ಇಳಿಕೆ : ಆರ್. ರಘು ಕೌಟಿಲ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.