Professionalism Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಅನುಕರಣೆ ಬದಲು ಸ್ವಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು- ಎಸ್ ಎಲ್ ಚೆನ್ನಬಸವಣ್ಣ
ಮೈಸೂರು,ಡಿಸೆಂಬರ್,2,2025 (www.justkannada.in): ವೃತ್ತಿ ಪರತೆಯ ಬಗ್ಗೆ ಇತರರನ್ನು ಅನುಕರಣೆಯ ಮೂಲಕ ಅಳವಡಿಸಿಕೊಳ್ಳುವ ಬದಲು ಸ್ವ ಇಚ್ಛೆಯಿಂದ ನಾವು ವೃತ್ತಿಪರತೆಗೆ ಬದ್ದರಾಗಬೇಕು ಎಂದು ಪೋಲಿಸ್ ಆಕಾಡೆಮಿ ನಿರ್ದೇಶಕ ಎಸ್ ಎಲ್ ಚೆನ್ನಬಸವಣ್ಣ ನುಡಿದರು.

ನಗರದ ಲಕ್ಷ್ಮಿಪುರಂನಲ್ಲಿರುವ ಜ್ಞಾನಬುತ್ತಿ ಕೇಂದ್ರದಲ್ಲಿ ನಡೆದ 2025-26ನೇ ಸಾಲಿನ ಐಎಎಸ್/ಕೆಎಎಸ್ ಮತ್ತು  ಇತರ ಸ್ಪರ್ಧಾತ್ಮಕ ಪರೀಕ್ಷೆಗಳ  ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ,  ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ ಎಲ್ ಚೆನ್ನಬಸವಣ್ಣ,   ನಾವು ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಾಗೆ ಈ ಸ್ಪರ್ಧಾತ್ಮಕ ಉಚಿತ ತರಬೇತಿ ಶಿಬಿರವು ಅಕಾಡೆಮಿಕ್ ಕೋರ್ಸ್  ಆಗಿರುವುದಿಲ್ಲ, ಅಲ್ಲಿ ಒಂದೇ ರೀತಿಯ ವಿಷಯದ ಬಗ್ಗೆ 3  ವರ್ಷಗಳ ಕಾಲ ಓದುತ್ತೇವೆ ಆದರೆ ಈ ತರಬೇತಿಯಲ್ಲಿ ಹತ್ತಾರು ವಿಷಯಗಳ ಬಗ್ಗೆ ಒಟ್ಟಿಗೆ ನಾವು ಕಲಿಯುತ್ತೇವೆ ಎಂದರು.

ಸಿವಿಲ್ ಸರ್ವಿಸ್ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ತಮ್ಮ ವಿಷಯದ ಕೌಶಲ್ಯವನ್ನು  ಹೇಗೆ ಅರ್ಥ ಮಾಡಿಕೊಂಡು  ಪ್ರಪಂಚ ಜ್ಞಾನವನ್ನು ತಿಳಿದುಕೊಂಡಿರುತ್ತಾರೆ ಎಂಬುದನ್ನು ತಿಳಿಯಲು ಸಿವಿಲ್ ಸರ್ವಿಸ್ ನ ಮೂಲಕ ಪರೀಕ್ಷೆಯ ಮುಖಾಂತರ ಅಧಿಕಾರಿಯಾಗಿ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಎಲ್ಲರು ಸುತ್ತಮುತ್ತಲಿನ ವಿಚಾರಗಳನ್ನು ತಿಳಿದುಕೊಂಡರೇ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಕವಿತಾ ರಾಜರಾಮ್‌,  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಂದು ಹುಚ್ಚುತನದ ಭಾವನೆಯನ್ನು ಅಳವಡಿಸಿಕೊಂಡರೇ ಮಾತ್ರ ಪರೀಕ್ಷೆಗಳನ್ನು ಪಾಸ್ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಓದುವ ಮನಸ್ಥಿತಿಯು ಕಡಿಮೆಯಾಗುತ್ತಿದೆ ಅದಕ್ಕೆ ಬದಲಾಗಿ ಇಂದು AI  ಮೂಲಕ ತರಗತಿಗಳಲ್ಲಿ ಮಾನವರ ಬದಲು ಮಾನವರು ತಯಾರಿಸಿದ ಯಂತ್ರಗಳ ಮ‌ೂಲಕವೇ ಉದ್ಯೋಗಗಳು ಕಡಿತಗೊಳಿಸುತ್ತಿವೆ ಅದಕ್ಕೇ ನಾವೇ ನೇರವಾದ ಕಾರಣಕರ್ತರಾಗಿದ್ದೇವೆ. ಗಂಭೀರತೆಯನ್ನು ಅಳವಡಿಸಿಕೊಂಡರೆ ಮಾತ್ರ ಓದುವ ಕಾರ್ಯದಲ್ಲಿ ಮುಂದುವರೆಯಬೇಕು ಇಲ್ಲದಿದ್ದರೆ ಸುಖಾಸುಮ್ಮನೆ ಸಮಯ ಮತ್ತು ವಯಸ್ಸು ಕಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮೊದಲು ಓದುವ ಗುಣವನ್ನು ಹೊಂದಬೇಕಾಗುತ್ತದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ವ್ಯಾಗ್ಮಿ ಪ್ರೋ ಕೃಷ್ಣೇಗೌಡ, ಇಂದಿನ GEN-Z ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟಕರವಾದ ಸ್ಥಿತಿಯಲ್ಲಿದ್ದೇವೆ. ಸರ್ಕಾರ ಕೆಲಸ ಕೊಡುತ್ತದೆ ಎಂದು ಕಾಯುತ್ತ ಕುಳಿತಿದ್ದರೆ ಯಾವ ಸರ್ಕಾರಗಳು ಸಹ ಇಂದು ಕೆಲಸ ಕೊಡುವುದಿಲ್ಲ. ಆದ್ದರಿಂದ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳ ಜೊತೆಗೆ ಅನ್ಯ ಉದ್ಯೋಗಗಳನ್ನು ಮಾಡಬೇಕು ಆಗ ಮಾತ್ರ ನಾವು ಬದುಕಲು ಸಾಧ್ಯ. ಎಲ್ಲರೂ ಆರಾಮದಾಯಕವಾಗಿ ಇರಬೇಕು ಎಂದು ಮಾತ್ರ ಯೋಚನೆಯಲ್ಲಿದ್ದೇವೆ,  ಅದರಿಂದ ಹೊರ ಬಂದು ಉದ್ಯೋಗವನ್ನು ನಡೆಸಿ ಉದ್ಯೋಗ ನೀಡುವಂತರಾಗಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಜೈನಹಳ್ಳಿ ಸತ್ಯನಾರಾಯಣ ಗೌಡ,  ಪಶುಪತಿ ಜಯಪ್ರಕಾಶ್, ರಾಜೀವ್ ಶರ್ಮ, ಜ್ಞಾನಬುತ್ತಿಯ ಕಾರ್ಯದರ್ಶಿಗಳಾದ ಬಾಲಕೃಷ್ಣ, ಸಹ ಪ್ರಾಧ್ಯಾಪಕರಾದ ಕೃ. ಪಾ. ಗಣೇಶ್ , ಸಿ.ಕೆ ಕಿರಣ್ ಕೌಶಿಕ್ ಮತ್ತು ರೋಹನ್ ರವಿ ಕುಮಾರ್ ಉಪಸ್ಥಿತರಿದ್ದರು.

Key words: Mysore, Jnanabutti, professionalism, SL Chennabasavanna

The post ಅನುಕರಣೆ ಬದಲು ಸ್ವಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು- ಎಸ್ ಎಲ್ ಚೆನ್ನಬಸವಣ್ಣ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಈ ಸನ್ಮಾನ ಸಿದ್ದರಾಮಯ್ಯರಿಗೆ ಅರ್ಪಣೆ- ಕೆ.ವಿ.ಪ್ರಭಾಕರ್
ಬೆಂಗಳೂರು ಆಗಸ್ಟ್, 19,2025 (www.justkannada.in):  ಪತ್ರಕರ್ತನಾಗಿ ಸಮಾಜವನ್ನು ಬಿಡಿ-ಬಿಡಿಯಾಗಿ ನೋಡುತ್ತಿದ್ದ ನಾನು ಸಮಾಜವಾದದ ಆಲದ ಮರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಇಡಿ ಇಡಿಯಾಗಿ ಗ್ರಹಿಸುವುದನ್ನು ಕಲಿತೆ. ಹೀಗಾಗಿ ಇಲ್ಲಿ ನನಗೆ ಸಲ್ಲುವ ಎಲ್ಲಾ ಸನ್ಮಾನ, ಗೌರವಗಳನ್ನು ನಾನು ಆಲದ ಮರಕ್ಕೇ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಕೆ.ವಿ.ಪ್ರಭಾಕರ್ ನುಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಪ್ರಭಾಭಿನಂದನಂ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಕೆ.ವಿ ಪ್ರಭಾಕರ್ ಮಾತನಾಡಿದರು.

ಹಿಂದುಳಿದ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಬದುಕಿನ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ನನ್ನ ಪಾಲಿಗೆ ಒದಗಿ ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾ, ಬಂದದ್ದೆಲ್ಲವನ್ನೂ ಬಂದ ಹಾಗೆಯೇ ಸ್ವೀಕರಿಸುತ್ತಾ ಮುಂದೆ ಸಾಗಿ ಈಗ ನಿಮ್ಮ ಮುಂದೆ ಧನ್ಯತೆಯಿಂದ ನಿಂತಿದ್ದೇನೆ. ನಾನು ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ ವೃತ್ತಿಪರತೆ ಮತ್ತು ಕರ್ತವ್ಯ ಪ್ರಜ್ಞೆ ಇಲ್ಲಿಯವರೆಗೂ ನನ್ನನ್ನು ಬೆರಳಿಡಿದು ನಡೆಸಿದೆ ಎಂದು ಭಾವಿಸುತ್ತೇನೆ ಎಂದರು.

ನಾನು ಕನ್ನಡ ಪ್ರಭ ಬಿಟ್ಟು 2013 ರಲ್ಲಿ ಮುಖ್ಯಮಂತ್ರಿಗಳ ನೆರಳಿಗೆ ಬಂದೆ. ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನೆಲ್ಲಾ ಇಲ್ಲಿ ಪ್ರಯೋಗಿಸತ್ತಾ ಹೋದೆ. ಆದರೆ, ಪತ್ರಿಕಾ ಕಚೇರಿಯಲ್ಲಿ ಇದ್ದ ಸಮಯದ ಮಿತಿ ಇಲ್ಲದೆ ಇಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯದ ಪತ್ರಕರ್ತ ಸಮುದಾಯ ನನ್ನ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿಗಳ ಮಾಧ್ಯಮ‌ ಸಂಯೋಜಕ ಆಗಿದ್ದ ಸಂದರ್ಭದಲ್ಲಿ, ಮಾಧ್ಯಮ‌ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕೆಲಸ ಕಲಿಯಲು ಕೊಟ್ಟ ಅವಕಾಶ, ನೀಡಿದ ಪ್ರೋತ್ಸಾಹ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಈ ಆತ್ಮವಿಶ್ವಾಸ ಒಂದು ಸಂಗತಿಯನ್ನು ಹಲವು ಕೋನಗಳಿಂದ ಅರ್ಥ ಮಾಡಿಕೊಳ್ಳುವುದನ್ನು ಕಲಿಸಿತು. ಬಿಡುವಿಲ್ಲದ ಪ್ರಯಾಣ, ನಿದ್ದೆ ಇಲ್ಲದ ರಾತ್ರಿಗಳು, ಮನೆ-ಮಕ್ಕಳಿಗೆ ಸಮಯ ಕೊಡಲು ಸಾಧ್ಯವಿಲ್ಲದಾದಾಗ, ರಾಜಕಾರಣ/ಒಳ ರಾಜಕಾರಣ  ಕೆಲವೊಮ್ಮೆ ನನ್ನ ಆತ್ಮವಿಶ್ವಾಸವನ್ನು ಅಲ್ಲಾಡಿಸಿ ಪತ್ರಿಕೆ ಕೆಲಸ ಬಿಟ್ಟು ತಪ್ಪು ಮಾಡಿದ್ನಾ ಅಂತಲೂ ಅನ್ನಿಸಿದ್ದಿದೆ. ಇಂಥಾ ಘಳಿಗೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೇ ದಿನಕ್ಕೆ 16-18 ಗಂಟೆ ಕೆಲಸ ಮಾಡುವಾಗ ಅದರ ಮುಂದೆ ನನ್ನದೇನು ಎಂದುಕೊಂಡು ಮತ್ತೆ ಚಾರ್ಜ್ ಆಗುತ್ತಿದ್ದೆ ಎನ್ನುವುದನ್ನು ನೆನಪು ಮಾಡಿಕೊಂಡೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಬಳಿಕ ಶಿವಾನಂದ ತಗಡೂರು ಅವರು ಪತ್ರಕರ್ತ ಸಮುದಾಯದ ರಾಶಿ ರಾಶಿ ಸಮಸ್ಯೆಗಳನ್ನು ಪ್ರತೀ ದಿನ ನನ್ನ ಬಳಿಗೆ ತರುತ್ತಿದ್ದರು. ಸರ್ಕಾರದಿಂದ, ಇಲಾಖೆಯಿಂದ ಆಗಬೇಕಾದ ಮತ್ತು ಬಾಕಿ ಇರುವ ಕೆಲಸಗಳ ಬಗ್ಗೆ ಕ್ರಿಯಾಶೀಲ ಒತ್ತಡ ಹೇರುತ್ತಿದ್ದರು. ಅದನ್ನೆಲ್ಲಾ ನಾನು ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮತ್ತು ಕಾರ್ಯದರ್ಶಿಗಳಾದ  ಕಾವೇರಿ ಮೇಡಂ ಅವರ ಮುಂದಿಡುತ್ತಿದ್ದೆ. ಇವರಿಬ್ಬರೂ ಅತ್ಯಂತ ಸಹೃದಯತೆಯಿಂದ ಸಹಕಾರ ನೀಡಿದರು. ಆಡಳಿತಾತ್ಮಕ ಮತ್ತು ತಾಂತ್ರಿಕ ಅಡೆತಡೆಗಳನ್ನು ನನ್ನೊಂದಿಗೆ ಚರ್ಚಿಸಿ ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ಒಂದು ತಂಡವಾಗಿ ಕೆಲಸ ಮಾಡಿದೆವು. ಇದರ ಒಟ್ಟು ಪರಿಣಾಮದಲ್ಲಿ ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್, ಆರೋಗ್ಯ ಸಂಜೀವಿನಿ, ಮಾಸಾಶನದ ಹೆಚ್ಚಳ ಸೇರಿ ಹಲವು ಅನುಕೂಲಗಳು ಪತ್ರಕರ್ತ ಸಮುದಾಯದ ಅಂಗೈ ತಲುಪುವಂತಾಯಿತು. ಹೀಗಾಗಿ ಇವತ್ತಿನ ಈ ಸನ್ಮಾನ ಮತ್ತು ಗೌರವದಲ್ಲಿ ಅವರದ್ದೂ ದೊಡ್ಡ ಪಾಲು ಇದೆ ಧನ್ಯತೆ ಅರ್ಪಿಸಿದರು.

ಹೀಗೆ ನನಗೆ ನೆರಳಾದವರು, ಜೊತೆ ನಿಂತವರ ಪಾಲಿನ ಗೌರವಗಳನ್ನು ಅರ್ಪಿಸಿದ ಬಳಿಕವೂ ಇವತ್ತಿನ ಈ ಸನ್ಮಾನದ ಭಾರ ನನ್ನ ಮೇಲೆ ಸದಾ ಇರುತ್ತದೆ. ಇದು ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪತ್ರಕರ್ತರು ತಮ್ಮ ವೃತ್ತಿಪರ ಅಗತ್ಯಗಳಿಗಾಗಿ ಪ್ರತಿಭಟನೆ ಮಾಡುವ ಅಗತ್ಯವೇ ಬಾರದಂತೆ ನಾನು ಕೆಲಸ ಮಾಡಬೇಕು ಎಂದು ಮಾಧ್ಯಮ ಸಲಹೆಗಾರ ಆದ ದಿನವೇ ನಿರ್ಧರಿಸಿದ್ದೆ. ಪತ್ರಕರ್ತ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಾ ಈ ಭಾರವನ್ನು ನಾನು ಇಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ಇಲ್ಲಿಯವರೆಗೂ ನಾನು ನಡೆದು ಬಂದಿದ್ದೇನೆ. ನನ್ನ ಮುಂದಿನ ನಡೆಯಲ್ಲೂ ನೀವೆಲ್ಲಾ ನನ್ನ ಜೊತೆಗಿರುತ್ತೀರಿ ಎಂದು ನಂಬಿದ್ದೇನೆ. ಈ ಭರವಸೆಯೊಂದಿಗೆ ನನ್ನ ಧನ್ಯತೆಯ ಮಾತುಗಳನ್ನು ಮುಗಿಸುತ್ತೇನೆ. ವಿಧಾನಸೌಧದ ನನ್ನ ಕಚೇರಿ ಕೊಠಡಿ ಸಂಖ್ಯೆ 204 ಪತ್ರಕರ್ತರಿಗಾಗಿ ಸದಾ ತೆರೆದಿರುತ್ತದೆ ಎಂದು ವಿವರಿಸಿದರು.

ತಾಳ್ಮೆ ಕಲಿತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ

ಪತ್ರಿಕಾ ವೃತ್ತಿಯೇ ನನ್ನ ಪ್ರಪಂಚ. ಪತ್ರಕರ್ತರೇ ನನ್ನ ಒಡನಾಡಿಗಳು. ತಾಳ್ಮೆ, ಸಹನೆಯ ಪಾಸ್ ವರ್ಡ್ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನು ಇವರಿಂದ ಸಹನೆಯನ್ನು ಕಲಿತೆ ಎಂದರು.

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ಮೋಹನ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರೂ ಸನ್ಮಾನಿತರಾದರು. KUWJ ರಾಜ್ಯ ಮತ್ತು ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: Professionalism, loyalty, duty, guide, Siddaramaiah, K.V. Prabhakar

The post ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಈ ಸನ್ಮಾನ ಸಿದ್ದರಾಮಯ್ಯರಿಗೆ ಅರ್ಪಣೆ- ಕೆ.ವಿ.ಪ್ರಭಾಕರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವೃತ್ತಿಪರತೆ, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತೆಯರ ಪಾತ್ರ ದೊಡ್ಡದು: ಸಿಎಂಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌
ಬೆಂಗಳೂರು ಮಾರ್ಚ್,28, 2025 (www.justkannada.in): ಪತ್ರಿಕಾ ವೃತ್ತಿ ಮಹಿಳೆಯರಿಗಲ್ಲ ಎನ್ನುವ ಮಾತು ಈಗ ಸಂಪೂರ್ಣ ಸುಳ್ಳಾಗಿದ್ದು, ಪತ್ರಿಕಾ ವೃತ್ತಿಯ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪತ್ರಕರ್ತೆಯರ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಸಾಧಕಿಯರನ್ನು ಅಭಿನಂದಿಸಿ ಕೆ.ವಿ.ಪ್ರಭಾಕರ್‌ ಮಾತನಾಡಿದರು.

ಸಂಘದ ಪ್ರಶಸ್ತಿಗೆ ಸಬೀಹಾ ಬಾನು, ಪೂರ್ಣಿಮಾ ರವಿ, ಪದ್ಮಾ ಕೋಲಾರ ಅವರನ್ನು ಆಯ್ಕೆ ಮಾಡಿರುವುದು ಬಹಳ ಖುಷಿಯಾಯಿತು. ಪತ್ರಕರ್ತೆಯರ ಸಂಘ ಬಹಳ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಆದವರನ್ನು ಆಯ್ಕೆ ಮಾಡಿದೆ.  ನ್ಯೂಸ್‌ ಆಂಕರ್‌ ಗಳು ಎಂದರೆ ತೆಳ್ಳಗೆ ಬೆಳ್ಳಗೆ ಇರಬೇಕು. 20 ರಿಂದ 25 ವರ್ಷದೊಳಗಿನ ಅವಿವಾಹಿತ ಹೆಣ್ಣು ಮಕ್ಕಳೇ ಇರಬೇಕು ಎನ್ನುವ ನಂಬಿಕೆ ಇದೆ. ಪುರುಷ ಆಂಕರ್‌ ಗಳಿಗೆ ಇಲ್ಲದ ವಯಸ್ಸಿನ ಮಿತಿ ಮಹಿಳಾ ಆಂಕರ್‌ ಗಳಿಗೆ ಮಾತ್ರ ಇರುವುದು ಸರಿಯಲ್ಲ. ಈ ಅಸಹಜ ನಂಬಿಕೆಯನ್ನು ಸುಳ್ಳಾಗಿಸಿ ಅರ್ಹತೆ ಮೆರೆದವರು ನಮ್ಮ ಸಬೀಹಾ ಬಾನು, ನ್ಯೂಸ್‌ ಆಂಕರಿಂಗ್‌ ನ ಘನತೆಯನ್ನು ಹೆಚ್ಚಿಸಿದವರು.

ಹಾಗೆಯೇ ಮಲೆನಾಡಿನ ಹುಡುಗಿ ಪೂರ್ಣಿಮಾ ರವಿ. ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಿಕಾ ಛಾಯಾಗ್ರಾಹಕಿಯಾಗಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತೆ ಹೋಮೈ ವರವಲ್ಲಾ ಅವರ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ನುಡಿದರು.

ನಾವು ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಬೀದಿಯನ್ನು ಗುಡಿಸಿ, ನಮ್ಮ ಕಸವನ್ನು ತೆಗೆಯುವ ಪೌರ ಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ಪರವಾಗಿ ಹೋರಾಟ ನಡೆಸುತ್ತಿರುವ ಪದ್ಮಾ ಕೋಲಾರ ಅವರ ಆಯ್ಕೆ ಪತ್ರಕರ್ತೆಯರ ಸಂಘದ ಸಮಾಜಮುಖಿ ದೃಷ್ಠಿಕೋನಕ್ಕೆ ಸಾಕ್ಷಿಯಾಗಿದೆ.  ಪತ್ರಕರ್ತೆಯರ ಸಂಘದ ಈ ವೇದಿಕೆಯಲ್ಲಿ ನಾನು ಪ್ರಮುಖವಾಗಿ ಮೂವರು ಪತ್ರಕರ್ತೆಯರನ್ನು ಸ್ಮರಿಸಿಕೊಳ್ಳಲು ಇಚ್ಚಿಸುತ್ತೇನೆ. ಹೋಮೈ ವರವಲ್ಲಾ, ಪ್ರಭಾ ದತ್‌, ಕಮಲಾ ಮಂಕೇಕರ್‌.ಭಾರತೀಯ ಪತ್ರಿಕಾ ಕ್ಷೇತ್ರದಲ್ಲಿ ಈ ಮೂವರೂ ಕೂಡ ಯಾವತ್ತೂ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ದಾಖಲಿಸಿರುವುದು ಮಾತ್ರವಲ್ಲ, ಇವರು ಇವತ್ತಿನ  ತಮ್ಮ ಮೊಮ್ಮಕ್ಕಳ ವಯಸ್ಸಿನ ಯುವ ಪತ್ರಕರ್ತೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕೆ.ವಿ ಪ್ರಭಾಕರ್  ಶ್ಲಾಘಿಸಿದರು.

ಭಾರತದ ಪ್ರಥಮ ಮಹಿಳಾ ಪತ್ರಿಕಾ ಛಾಯಾಗ್ರಾಹಕಿ ಹೋಮೈ ವಾರಾವಲ್ಲಾ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಇವರು ಪತ್ರಿಕಾ ವೃತ್ತಿಗೆ ಪ್ರವೇಶ ಪಡೆದಿದ್ದರು. ಬಾಂಬೆ ಕ್ರೋನಿಕಲ್‌ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು. 1940 ರಿಂದ 1970 ರ ವರೆಗೆ 30 ವರ್ಷಗಳ ಕಾಲ ಇವರು ದಾಖಲಿಸಿರುವ ಹೆಜ್ಜೆ ಗುರುತುಗಳು  ಕಪ್ಪು, ಬಿಳುಪು ಕಾಲದಿಂದ ಛಾಯಾಚಿತ್ರ ಜಗತ್ತು ಬೆಳೆದು ಬಂದ ಇತಿಹಾಸಕ್ಕೂ ಸಾಕ್ಷಿಯಾಗಿದ್ದಾರೆ.

ಹಾಗೆಯೇ ಕಮಲಾ ಮಂಕೇಕರ್‌. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿ 1949 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಗಾರ್ತಿ ಆಗಿದ್ದ ಕಮಲಾ ಮಂಕೇಕರ್, ಪತ್ರಿಕಾ ಸಂಸ್ಥೆಗಳಲ್ಲಿ ಮಹಿಳಾ ಶೌಚಾಲಯಕ್ಕಾಗಿ ಮೊದಲ ಬಾರಿಗೆ ಧ್ವನಿ ಎತ್ತಿದ್ದವರು. ಕೊನೆಗೆ ಮ್ಯಾನೇಜ್ ಮೆಂಟ್ ಬಳಸುತ್ತಿದ್ದ ಶೌಚಾಲಯದ ಕೀ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ರಾಷ್ಟ್ರದ ಮೊದಲ ಸಂಸತ್ ನಲ್ಲಿದ್ದ 22 ಮಹಿಳಾ ಎಂ.ಪಿ ಗಳಲ್ಲಿ ಹತ್ತು ಮಂದಿಯ ಸಂದರ್ಶನ ನಡೆಸಿದ  ಯಶಸ್ಸು ಇವರ ಪಾಲಿಗಿದೆ ಎಂದು ಕೆ.ವಿ ಪ್ರಭಾಕರ್ ಹೇಳಿದರು.

ಮೂರನೆಯವರು ಪ್ರಭಾ ದತ್‌. ಬರ್ಕಾ ದತ್‌ ಅವರ ತಾಯಿ. 1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ವರದಿಗಾರಿಕೆಗೆ ತೆರಳಿದ್ದ ಪ್ರಭಾದತ್ ಅವರನ್ನು ಈ ಸಂದರ್ಭದಲ್ಲಿ ನಾವು ವಿಶೇಷವಾಗಿ ಸ್ಮರಿಸಲೇಬೇಕು. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿಗಾರ್ತಿ ಆಗಿದ್ದ ಪ್ರಭಾ ದತ್‌ ಅವರಿಗೆ ಯುದ್ಧದ ವರದಿ ಮಾಡುವ ಉತ್ಸಾಹವಿತ್ತು. ಆದರೆ ಪತ್ರಿಕೆ  ಅವಕಾಶ ಕೊಟ್ಟಿರಲಿಲ್ಲ. ಆದರೂ ಕೆಲಸಕ್ಕೆ ರಜೆ ಹಾಕಿ ರಣರಂಗಕ್ಕೆ ತೆರಳಿ ಸರಣಿ ವರದಿಗಳನ್ನು ಕಚೇರಿಗೆ ಕಳುಹಿಸಿದ್ದರು. ಅವು ಉತ್ತಮ ಗುಣಮಟ್ಟದ್ದಾಗಿದ್ದರಿಂದ ಪ್ರಕಟ ಕೂಡ ಆದವು. ಕೊನೆಗೆ ಇದೇ ಪತ್ರಿಕೆ ಪ್ರಭಾ ದತ್‌ ಅವರು ಮಿಲಿಟರಿ ಟ್ಯಾಂಕರ್ ಮುಂದೆ ನಿಂತಿದ್ದ ಫೋಟೋವನ್ನೂ ಪ್ರಕಟಿಸಿ ಪತ್ರಕರ್ತೆಯರ ಇತಿಹಾಸಕ್ಕೆ ದಾಖಲೆ ಉಳಿಸಿದೆ.  ಪುರುಷ ಪ್ರಾಭಲ್ಯವೇ ತುಂಬಿದ್ದ ಪತ್ರಿಕೋದ್ಯಮದಲ್ಲಿ ಈ ಮೂವರೂ ಒಟ್ಟು ಪತ್ರಿಕೋದ್ಯಮದ ಮಾದರಿಗಳಾಗಿ ಉಳಿದಿದ್ದಾರೆ. ಇವರ ಮೊಮ್ಮಕ್ಕಳ ವಯಸ್ಸಿನ ಇವತ್ತಿನ ಯುವ ಪತ್ರಕರ್ತೆಯರು ಈಗ ತಮ್ಮ ಅಜ್ಜಿಯರ ಕತೆಗಳನ್ನು ಹೆಚ್ಚೆಚ್ಚು ದಾಖಲಿಸುವ ಕೆಲಸ ಮಾಡುವ ಮೂಲಕ ಪತ್ರಕರ್ತೆಯರ ಚರಿತ್ರೆಯನ್ನು ಬರೆಯುವ ಕೆಲಸ ಮಾಡಬೇಕಿದೆ ಎಂದು ಕೆ.ವಿ ಪ್ರಭಾಕರ್ ಸಲಹೆ ನೀಡಿದರು.

ಉತ್ತರ ಪ್ರದೇಶದ ಹಾಥರಸ್‌ ಅತ್ಯಾಚಾರ ಪ್ರಕರಣವನ್ನು ಬೆನ್ನತ್ತಿದ್ದ ಇಂಡಿಯಾ ಟುಡೇಯ ತನುಶ್ರೀ ಪಾಂಡೆ, ಪೆಗಾಸಿಸ್‌ ತನಿಖಾ ವರದಿ ಪ್ರಕಟಿಸಿದ ರೋಹಿಣಿ ಸಿಂಗ್‌, ಕೋವಿಡ್ ಸಂದರ್ಭದ ದುಡಿಯುವ ವರ್ಗದ ಸಂಕಷ್ಟಗಳನ್ನು ಇಡೀ ದೇಶ ಸುತ್ತಿ ದಾಖಲಿಸಿದ ಬರ್ಖಾ ದತ್‌ ಮತ್ತು ರಾಣಾ ಅಯೂಬ್‌, ಸ್ವಾತಿ ಚತುರ್ವೇದಿ  ಥರದ ಹಲವು ಮಂದಿ ಪತ್ರಿಕಾ ವೃತ್ತಿಯ ಘನತೆ ಹೆಚ್ಚಿಸುತ್ತಲೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿತ್ತಾ ತಮ್ಮ ಹಿಂದಿನವರ ಚರಿತ್ರೆಯನ್ನು ಮುಂದುವರೆಸಿದ್ದಾರೆ.

ಇವತ್ತು ತಂತ್ರಜ್ಞಾನದ ಕಾರಣಕ್ಕೆ ಮಾಧ್ಯಮ ಕ್ಷೇತ್ರ ಕೂಡ ವಿಪರಿತ ಬೆಳೆದಿದೆ. ಪುರುಷರಂತೆ ಮಹಿಳೆಯರಿಗೂ ಹೆಚ್ಚೆಚ್ಚು ಅವಕಾಶಗಳು ಒದಗುತ್ತಿವೆ. ಮಾಧ್ಯಮಗಳ ನಿರ್ಣಾಯಕ ಹುದ್ದೆಗಳಲ್ಲಿ ಮಹಿಳೆಯರೇ ಇಲ್ಲ ಎನ್ನುವ ಪರಿಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ. “ಓ ವುಮೇನಿಯಾ” ಸಂಸ್ಥೆ ನೀಡಿರುವ ವರದಿಯ ಪ್ರಕಾರ ನಮ್ಮ ಮಾಧ್ಯಮಗಳಲ್ಲಿ ಶೇ13 ರಷ್ಟು ಪ್ರಮುಖ ಹುದ್ದೆಗಳಲ್ಲಿ ಈಗ ಪತ್ರಕರ್ತೆಯರು ಇದ್ದಾರೆ.

ಇನ್ನು ಪರ್ಯಾಯ ಮಾಧ್ಯಮಗಳಲ್ಲಿ, ಯು ಟ್ಯೂಬ್‌ ಚಾನಲ್‌ ಗಳಲ್ಲಿ ಪತ್ರಕರ್ತೆಯರು ನಿರಂತರ  ಹವಾ ಎಬ್ಬಿಸುತ್ತಿದ್ದಾರೆ. ನಮ್ಮವರೇ ಆದ ವಿಜಲಕ್ಷ್ಮಿ ಶಿಬರೂರು, ಮಂಜುಳಾ ಮಾಸ್ತಿಕಟ್ಟೆ, ರಾಷ್ಟ್ರೀಯ ಮಟ್ಟದಲ್ಲಿ ಧನ್ಯಾ ರಾಜೇಂದ್ರನ್‌, ಸಾಕ್ಷಿ ಜೋಶಿ, ಕುಂಕುಮ್‌ ಬಿಲ್ವಾಲ್‌ ಮುಂತಾದವರು ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನು. ತೂಕವನ್ನು ಹೆಚ್ಚಿಸುತ್ತಿದ್ದಾರೆ.

ಇವರೆಲ್ಲರ ಸಾಧನೆಗಳನ್ನು ಸ್ಮರಿಸುತ್ತಾ ಪತ್ರಕರ್ತೆಯರ ಸಂಘದ ಮುಂದೆ ನಾನು ಒಂದು ಬೇಡಿಕೆ ಇಡುತ್ತಿದ್ದೇನೆ.  ಭಾರತೀಯ ಪತ್ರಿಕೋದ್ಯಮದ ಮೊದಲ ಛಾಯಾಗ್ರಾಹಕಿ ಹೋಮೈ ವರವಲ್ಲಾ ಮತ್ತು ಮೊದಲ ಯುದ್ಧ ವರದಿಗಾರ್ತಿ ಪ್ರಭಾ ದತ್‌ ಅವರ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತೆಯರನ್ನು ಗುರುತಿಸಿ ಪ್ರತೀ ವರ್ಷವೂ ಪ್ರಶಸ್ತಿ ನೀಡಬೇಕು. ಈ ಎರಡೂ ಪ್ರಶಸ್ತಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ನಾನು ಮುಖ್ಯಮಂತ್ರಿಗಳಿಂದ ಕೊಡಿಸಲು ಸಿದ್ದನಿದ್ದೇನೆ. ಇದು ಈ ವರ್ಷದಿಂದಲೇ ಆರಂಭಿಸಿದರೂ ನಾನು ಸಿದ್ದನಿದ್ದೇನೆ ಎಂದು ಘೋಷಿಸಿದರು.

ಪತ್ರಕರ್ತೆಯರ ಸಂಘಕ್ಕೆ ಕಾರ್ಯ ನಿರ್ವಹಿಸಲು ಕಚೇರಿಯ ಅಗತ್ಯವಿದ್ದು ಇದಕ್ಕೆ ಸೂಕ್ತ ಕ್ರಮ ವಹಿಸಲು ಪ್ರಯತ್ನಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲೇ ದತ್ತಿ ಪ್ರಶಸ್ತಿ

ಕರ್ನಾಟಕ ಪತ್ರಕರ್ತೆಯರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲೇ ಮಹಿಳಾ ಪತ್ರಿಕಾ ಛಾಯಾಗ್ರಾಹಕರಿಗೆ ಮತ್ತು ಯುದ್ಧ ವರದಿಗಾರ್ತಿಗೆ ಪ್ರತೀ ವರ್ಷ ದತ್ತಿ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಅವರು ಘೋಷಿಸಿದರು.

ರಾಜ್ಯ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ರಾಜ್ಯ ಕಾರ್ಯನಿರತ  ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Key words: female journalists, Role, protecting, professionalism, democracy, K.V. Prabhakar

The post ವೃತ್ತಿಪರತೆ, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತೆಯರ ಪಾತ್ರ ದೊಡ್ಡದು: ಸಿಎಂಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರತೆಯೇ ಜರೂರು: ಸಚಿವ ಅಶ್ವತ್ ನಾರಾಯಣ್
ಬೆಂಗಳೂರು,ಜನವರಿ,14,2022(www.justkannada.in):  ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತಂದರೆ ಉಳಿದ ಕ್ಷೇತ್ರಗಳು ತಮ್ಮಿಂದ ತಾವೇ ಸರಿ ಹೋಗುತ್ತವಲ್ಲದೆ, ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರವು ಸಂಪೂರ್ಣ ವೃತ್ತಿಪರವಾಗಬೇಕಾಗಿದ್ದು, ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೆಂಗಳೂರು ಉತ್ತರ ವಲಯವು ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತ ಸಂವಾದ ಮತ್ತು ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ನಾಲ್ಕು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳೇ ಉಪಗ್ರಹವನ್ನು ತಯಾರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ನವೋದ್ಯಮ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಗುರಿ ಇದೆ. ಇಸ್ರೇಲ್ ಹೇಗೆ `ನವೋದ್ಯಮಗಳ ರಾಷ್ಟ್ರ’ವಾಗಿದೆಯೋ ಹಾಗೆ ನಾವು ಕೂಡ ಸಾಧನೆ ಮಾಡಬೇಕು ಎಂದು ಅವರು ಉತ್ತೇಜಿಸಿದರು.

ದೇಶದಲ್ಲಿ ಮೂರೂವರೆ ದಶಕಗಳ ನಂತರ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ ಕ್ರಮಗಳೇನೇ ಇರಲಿ, ಗುಣಮಟ್ಟದ ಬೋಧನೆ ಮುಖ್ಯವಾಗಿದೆ. ಇದರ ಜತೆಗೆ ಗಣಿತದ ಬೋಧನೆ ಕೂಡ ಅತ್ಯುತ್ತಮವಾಗಿ ಇರಬೇಕು. ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವೇ ಮಾದರಿಯಾಗಿರಬೇಕು. ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ಪಡೆದುಕೊಂಡವರೇ ಇವತ್ತು ಇಡೀ ಅಮೆರಿಕದ ಬೆನ್ನೆಲುಬಾಗಿದ್ದಾರೆ ಎಂದು ಅವರು ಹೇಳಿದರು.

ಮುಂದುವರಿದ ದೇಶಗಳಲ್ಲಿ ಅಂಕಗಳಿಗೆ ಯಾವ ಬೆಲೆಯೂ ಇಲ್ಲ. ಅಲ್ಲಿ ಒಂದು ಮಗು ಶಾಲೆಗೆ ಬಂದ ಕೂಡಲೇ ಅದನ್ನು ದೇಶದ ಆಸ್ತಿ ಎಂದು ಪರಿಗಣಿಸುತ್ತಾರೆ. ನಮ್ಮಲ್ಲೂ ಇಂತಹ ಪ್ರಜ್ಞೆ ಬರಬೇಕಾಗಿದೆ. ದೇಶವನ್ನು ಕಟ್ಟುವುದೆಂದರೆ ಶೇ.95ರಷ್ಟು ಗಮನ ನಮ್ಮ ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ಕಡೆಗೆ ಇರಬೇಕು. ಎನ್ಇಪಿ ಇದನ್ನೆಲ್ಲ ಸಾಕಾರಗೊಳಿಸಲಿದೆ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪ್ರೌಢ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾರಾಯಣ,  ಬಿಇಒಗಳಾದ ಉಮಾದೇವಿ, ಜಯಪ್ರಕಾಶ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Key words: Professionalism –education- Minister -Ashwath Narayan

The post ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರತೆಯೇ ಜರೂರು: ಸಚಿವ ಅಶ್ವತ್ ನಾರಾಯಣ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.