private | Just Kannada - Daily News Updates

ಖಾಸಗಿ ಫೋಟೋ-ವೀಡಿಯೊ ಪ್ರಸಾರ ಅಪರಾಧ: ಪೊಲೀಸರಿಗೆ ಡಿಜಿಪಿ ಹೊಸ ಮಾರ್ಗಸೂಚಿ
ಬೆಂಗಳೂರು, ಜೂನ್,16,2026 (www.justkannada.in):  ಡಿಜಿಟಲ್ ಯುಗದಲ್ಲಿ ವ್ಯಕ್ತಿಗಳ ಗೌಪ್ಯತೆಯ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿ ಮಹತ್ವದ ಸ್ಥಾಯಿ ಆದೇಶ ಹೊರಡಿಸಿದೆ.

ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಿ, ಇಂತಹ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಸ್ಪಷ್ಟ ಮಾರ್ಗಸೂಚಿಗಳನ್ನು ಆದೇಶದಲ್ಲಿ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಚಿತ್ರ-ವೀಡಿಯೊಗಳ ದುರ್ಬಳಕೆ, ರಿವೆಂಜ್ ಪೋರ್ನೋಗ್ರಫಿ, ಸೆಕ್ಸ್ಟೋರ್ಷನ್ ಹಾಗೂ ಬ್ಲಾಕ್‌ ಮೇಲ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಕೆಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ವಿಳಂಬವಾಗುವುದು ಅಥವಾ ನಿರಾಕರಿಸುವುದು ಕಂಡುಬಂದ ಹಿನ್ನೆಲೆಯಲ್ಲಿ, “ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ” ಎಂಬ ಕಾನೂನುಸ್ಥಿತಿಯನ್ನು ಡಿಜಿಪಿ ಕಚೇರಿ ಸ್ಪಷ್ಟಪಡಿಸಿದೆ.

ಆದೇಶದ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಫೋಟೋ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನು ಇತರರಿಗೆ ಹಂಚಲು ಅಥವಾ ಸಾರ್ವಜನಿಕವಾಗಿ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ, ಅಂತಹ ಪ್ರಸಾರ ಕಾನೂನುಬದ್ಧ ಅಪರಾಧವಾಗುತ್ತದೆ. ಈ ಕಾರಣದಿಂದ ಪೀಡಿತರು ನೀಡುವ ದೂರುಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದು ಸೂಚಿಸಲಾಗಿದೆ.

ಪ್ರಕರಣಗಳ ಸ್ವರೂಪಕ್ಕೆ ಅನುಗುಣವಾಗಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 77 (Voyeurism) ಸೇರಿದಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 66(E), 67 ಮತ್ತು 67(A) ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಆದೇಶಿಸಲಾಗಿದೆ. ಮಹಿಳೆಯರು ಸಂತ್ರಸ್ತರಾಗಿರುವ ಪ್ರಕರಣಗಳಲ್ಲಿ ವಾಯರಿಸಂ ಹಾಗೂ ಐಟಿ ಕಾಯ್ದೆಯ ಅನ್ವಯವಾಗುವ ವಿಧಿಗಳನ್ನು ಸೇರಿಸಿ ಕಡ್ಡಾಯವಾಗಿ ಎಫ್‌ ಐಆರ್ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

“ರಿವೆಂಜ್ ಪೋರ್ನ್”, “ಸೆಕ್ಸ್ಟೋ ರ್ಷನ್”, “ಬ್ಲಾಕ್‌ಮೇಲ್ ವೀಡಿಯೊ”ಗಳಂತಹ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ ಐಆರ್ ದಾಖಲಿಸಬೇಕು. ಸಂತ್ರಸ್ತರು ಹಿಂದೆ ಸ್ವಯಂಪ್ರೇರಿತವಾಗಿ ಚಿತ್ರ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ಮುಂದಿಟ್ಟು ದೂರು ಸ್ವೀಕರಿಸಲು ನಿರಾಕರಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಪರಾಧ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರೂ, ದೂರುದಾರರು ಬಂದ ಠಾಣೆಯಲ್ಲಿ ಜೀರೋ ಎಫ್‌ ಐಆರ್ ದಾಖಲಿಸಿ ನಂತರ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು. ಜೊತೆಗೆ, ಸಾಮಾಜಿಕ ಜಾಲತಾಣಗಳು ಅಥವಾ ಡಿಜಿಟಲ್ ವೇದಿಕೆಗಳಲ್ಲಿ ಹರಡಿರುವ ಅಕ್ರಮ ವಿಷಯವನ್ನು ತಕ್ಷಣ ತೆಗೆದುಹಾಕಲು ಸಂಬಂಧಿತ ಕಂಪನಿಗಳು ಮತ್ತು ವೇದಿಕೆಗಳಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಲಾಗಿದೆ.

ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಿ ಸಂರಕ್ಷಿಸುವುದು, ಸೈಬರ್ ಕ್ರೈಂ ಘಟಕಗಳ ಸಹಕಾರದೊಂದಿಗೆ ತಾಂತ್ರಿಕ ತನಿಖೆ ಮತ್ತು ಫೋರೆನ್ಸಿಕ್ ವಿಶ್ಲೇಷಣೆ ನಡೆಸುವುದು ತನಿಖಾಧಿಕಾರಿಗಳ ಜವಾಬ್ದಾರಿಯಾಗಿದೆ. ಪೀಡಿತರ ಗುರುತನ್ನು ಸಂಪೂರ್ಣ ಗೌಪ್ಯವಾಗಿರಿಸಬೇಕು. ಮಹಿಳಾ ಸಂತ್ರಸ್ತೆಯರ ದೂರುಗಳನ್ನು ಮಹಿಳಾ ಅಧಿಕಾರಿಗಳ ಮೂಲಕ ದಾಖಲಿಸುವುದಕ್ಕೂ ಆದ್ಯತೆ ನೀಡಲಾಗಿದೆ.

ಎಫ್‌ ಐಆರ್ ದಾಖಲಿಸಲು ನಿರಾಕರಿಸುವುದು, ಅನಗತ್ಯ ವಿಳಂಬ ಮಾಡುವುದು ಅಥವಾ “ಪೂರ್ವಾನುಮತಿ ನೀಡಿದ್ದರು” ಎಂಬ ತಪ್ಪು ಕಾರಣ ನೀಡಿ ಪ್ರಕರಣ ದಾಖಲಿಸದಿರುವುದು ಗಂಭೀರ ಶಿಸ್ತುಲಂಘನೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ. ಇಂತಹ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಕಚೇರಿ ಸ್ಪಷ್ಟಪಡಿಸಿದೆ.

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಆದೇಶವನ್ನು ಏಕರೂಪವಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದ್ದು, ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳ ದುರ್ಬಳಕೆಯಿಂದ ನಾಗರಿಕರ ಗೌಪ್ಯತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

Key words: Private, photo-video, distribution, crime, DGP, new guidelines

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ
ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಕೇಂದ್ರವನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಉದ್ಘಾಟಿಸಿದರು.

ಬೆಂಗಳೂರಿನ ಎಪಿಕ್‌ ಎಂಟರ್‌ ಪ್ರೈಸನ್‌ ವತಿಯಿಂದ ಝಿಯಾನ್‌ ಎಲೆಕ್ಟ್ರಿಕ್‌ ಸಂಸ್ಥೆ ಸಹಯೋಗದಲ್ಲಿ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಆದಿತ್ಯ ಟೆಕ್‌ ಪಾರ್ಕ್‌ ಆವರಣದಲ್ಲಿ ಅತ್ಯಧಿಕ ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಲಾಗಿದೆ.

ನೂತನವಾಗಿ ಆರಂಭಿಸಿರುವ ಖಾಸಗಿ ಇವಿ ಚಾರ್ಜಿಂಗ್ ಸ್ಪೇಷನ್‌ ಮೈಸೂರು ಜಿಲ್ಲೆಯ ಮೊದಲ ಇ-ಬಸ್ ಚಾರ್ಜಿಂಗ್ ಕೇಂದ್ರವಾಗಿದ್ದು, 180 ಕಿಲೋ ವ್ಯಾಟ್‌ ಸಾಮರ್ಥ್ಯದ ಎರಡು ಚಾರ್ಜಿಂಗ್‌ ಹಬ್‌ಗಳನ್ನು ಈ ಚಾರ್ಜಿಂಗ್‌ ಸ್ಟೇಷನ್‌ ಒಳಗೊಂಡಿದೆ.

ಇವಿ ಹಬ್ ಆಗಿ ಮೈಸೂರು :

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇವಿ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಕರ್ನಾಟಕದಲ್ಲಿ 5,880 ಪಬ್ಲಿಕ್ ಚಾರ್ಜಿಂಗ್ ಸ್ಪೇಷನ್‌ಗಳಿವೆ. ಈ ನಿಟ್ಟಿನಲ್ಲಿ ಮೈಸೂರು ಇವಿ ಹಬ್‌ ಆಗಿಯೂ ಬೆಳೆಯುತ್ತಿದ್ದು, ಮೈಸೂರಿನಲ್ಲಿ ಪ್ರಸ್ತುತ 57 ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ಸ್‌ ಹಾಗೂ 20 ಖಾಸಗಿ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಟಿಯರ್-2 ಇವಿ ಹಬ್ ಆಗಿ ವೇಗವಾಗಿ ಬೆಳೆಯುತ್ತಿದೆ.

ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌  ಉದ್ಘಾಟಿಸಿ ಮಾತನಾಡಿದ ಕೆ.ಎಂ. ಮುನಿಗೋಪಾಲ್‌ ರಾಜು ಅವರು, ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗಲಿದೆ. ಇದಕ್ಕಾಗಿ ಹೆಚ್ಚಿನ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೆಸ್ಕ್‌ನಲ್ಲಿ ಇವಿ ಸೆಲ್‌ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಇವಿ ವಾಹನಗಳ ಬಳಕೆಯ ಮೂಲಕ ಎಲ್ಲರೂ ಹಸಿರು ಸಂಚಾರ ಕ್ರಾಂತಿಗೆ ಕೈಜೋಡಿಸಬೇಕಿದ್ದು, ಇದರಿಂದ ಗ್ರೀನ್‌ ಎನರ್ಜಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಝಿಯೋನ್‌ ಸಂಸ್ಥೆ ಕುರಿತು :

2019ರಲ್ಲಿ ಆರಂಭವಾದ ಝಿಯೋನ್ ಎಲೆಕ್ಟ್ರಿಕ್‌ ಸಂಸ್ಥೆ ಇವಿ ಚಾರ್ಜಿಂಗ್‌ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ತಮಿಳುನಾಡಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಈ ಸಂಸ್ಥೆ, ಪ್ರಸ್ತುತ ದಕ್ಷಿಣ ಭಾರತದಲ್ಲಿ  450ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಪೇಷನ್‌ ಗಳನ್ನು ಹೊಂದಿದ್ದು, ಇದರಲ್ಲಿ ಶೇ.99 ಚಾರ್ಜಿಂಗ್‌ ಸ್ಟೇಷನ್‌ ಗಳು ಪ್ರಮುಖ ಹೆದ್ದಾರಿಗಳು ಮತ್ತು ಪ್ರವಾಸಿ ತಾಣಗಳಲ್ಲಿ ಹೊಂದಿದೆ.

ಈ ಸಂದರ್ಭದಲ್ಲಿ ಸೆಸ್ಕ್‌ ನ ತಾಂತ್ರಿಕ ವಿಭಾಗದ ನಿರ್ದೇಶಕ ಡಿ.ಜೆ. ದಿವಾಕರ್‌, ಸೆಸ್ಕ್‌ನ ಐಟಿ ಮತ್ತು ಎಂಐಎಸ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮಸ್ವಾಮಿ ಸೆಸ್ಕ್‌ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ಝಿಯಾನ್‌ ಚಾರ್ಜಿಂಗ್‌ ಸ್ಟೇಷನ್‌ನ ಮುಖ್ಯಸ್ಥ ಅಖಿಲ್‌ ಕೃಷ್ಣನ್, ಬೆಂಗಳೂರಿನ ಎಪಿಕ್‌ ಎಂಟರ್‌ಪ್ರೈಸಸ್‌ನ ಚಿರಾಗ್‌ ಹಾಗೂ ವಿಶಾಲ್‌, ಇತರರಿದ್ದರು.

Key words: Mysore, inaugurates, highest capacity, private, EV charging station

ಒಂದೇ ನಂಬರ್​​ ನ ಎರಡು ಖಾಸಗಿ ಬಸ್​: ಜಪ್ತಿ ಮಾಡಿದ ಆರ್ ​​ಟಿಒ ಅಧಿಕಾರಿಗಳು.
ಕೋಲಾರ, ಆಗಸ್ಟ್​​ 23,2023(www.justkannada.in):  ಒಂದೇ ರಿಜಿಸ್ಟ್ರೇಷನ್​ ನಂಬರ್ ​​ನ ಎರಡು ಖಾಸಗಿ ಬಸ್ ​ಗಳನ್ನು ಆರ್​​ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ಗೆ ಸೇರಿದ ರಸ್ತೆ ಸಾರಿಗೆ ಸಂಸ್ಥೆಯ (ಆರ್.ಟಿ.ಓ) ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಬಸ್ ಗಳು ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್​ಗೆ ಸೇರಿದ್ದಾಗಿದ್ದು, ಒಂದೇ ರಿಜಿಸ್ಟ್ರೇಷನ್​ ನಂಬರ್ ಅನ್ನು ಎರಡು ಬಸ್ ​ಗಳಿಗೆ ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ.

ಇದೀಗ ಬಸ್ ಗಳನ್ನ ಆರ್ ಟಿ ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Key words: Two -private- buses – same number- seized-RTO –officials

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ..
ಬೆಳಗಾವಿ,ಆಗಸ್ಟ್,22,2022(www.justkannada.in):  ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯಲ್ಲಿನ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ಕುರಿತು  ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ಆದೇಶ ಹೊರಡಿಸಿದ್ದಾರೆ.  ನಗರದ ಗಾಲ್ಫ್ ಮೈದಾನದ ಪಕ್ಕದಲ್ಲೇ ಇರುವ ಹಿಂಡಲಗಾ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಖಾಸಗಿ ಬಸ್ ಚಾಲಕರೊಬ್ಬರ ಮೊಬೈಲ್‌ನಲ್ಲಿ ಚಿರತೆ ಚಲನವಲನ ಸೆರೆಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.  ಖಾಸಗಿ ಶಾಲೆಯ ಕೂಗಳತೆ ದೂರದಲ್ಲೇ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಪ್ರತ್ಯಕ್ಷ ಹಿನ್ನೆಲೆ ವಿದ್ಯಾರ್ಥಿಗಳು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.

ವೈರಲ್ ಆದ ವಿಡಿಯೋವನ್ನು ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ.

Key words: Leopard-sighting – Belagavi camp- area- leave-22 government – private -schools

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ- ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ.
ಬೆಂಗಳೂರು,ಸೆಪ್ಟಂಬರ್,29,2021(www.justkannada.in): ಖಾಸಗಿ ಇಂಜಿನಿಯರಿಂಗ್  ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ. ಕೊರೊನಾ ಹಿನ್ನೆಲೆ ಶುಲ್ಕ ಹೆಚ್ಚಳ ಮಾಡಲ್ಲ  ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಖಾಸಗಿ ಇಂಜಿನಿಯರಿಂಗ್  ಕಾಲೇಜುಗಳಲ್ಲಿ 20,000ಕ್ಕಿಂತ ಹೆಚ್ಚು ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ಇತರೆ ಶುಲ್ಕಗಳ ಮಿತಿ 20 ಸಾವಿರ ರೂಪಾಯಿಗೆ ನಿಗದಿ ಮಾಡಲಾಗಿದೆ. ಹೆಚ್ಚುವರಿ ಶುಲ್ಕ ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕು ಅಂತ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪಗೆ ಡಾ.ಅಶ್ವತ್ಥ್ ನಾರಾಯಣ ಜವಾಬ್ದಾರಿ ನೀಡಿದ್ದಾರೆ.

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ.15ರಿಂದ 20ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ನೀಡಿದ್ದವು. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದೇನೆ. ಖಾಸಗಿ ಕಾಲೇಜುಗಳು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿವೆ. ಸ್ಕಿಲ್ ಟ್ರೈನಿಂಗ್ ಫೀಸ್ ತೆಗೆದುಕೊಳ್ಳುವುದು ಕಡ್ಡಾಯ ಅಲ್ಲ. ವಿಟಿಯು ಭೇಟಿ ನೀಡಿ ಒಪ್ಪಿಗೆ ಕೊಟ್ಟ ಬಳಿಕ ಶುಲ್ಕ ಪಡೆಯಬೇಕು. ವಿಟಿಯು ಒಪ್ಪಿಗೆ ಇಲ್ಲದೆ ಸ್ಕಿಲ್‌ ಫೀ ಸಂಗ್ರಹಿಸುವಂತಿಲ್ಲ  ಎಂದು ತಿಳಿಸಿದ್ದಾರೆ.

Key words: no –fee- increase – private –engineering- colleges-Minister -Ashwath Narayan

ENGLISH SUMMARY…

No hike in private engineering college fee: Minister Ashwathnarayana clarifies

Bengaluru, September 29, 2021 (www.justkannada.in): Higher Education Minister Dr. C.N. Ashwathnarayana has clarified that the fees of private engineering colleges will not be hiked this year, keeping in mind the after-effects of Corona.

Speaking to the press persons today, he informed that the annual fee of private engineering colleges is restricted to Rs.20,000, and no college can collect more than that. “The Vice-Chancellor of Visveshwaraiah Technological University (VTU) Prof. Karisiddappa has been asked to monitor that no private engineering colleges will collect an additional fee,” he said.

The private engineering colleges had requested the State Government seeking permission to hike the fee by 15-20%. “I have informed that it will be discussed in the coming days, and the private colleges have agreed to it. It is not compulsory to collect a skill training fee. They should collect the fee only after VTU officials visit and permit. They cannot collect the skill fee without the permission of VTU,” he added.

Keywords: VTU/ Minister Dr. C.N. Ashwathnarayana/ Private Engineering College/ no fee hike/

ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರು ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಬನ್ನಿ- ಸಚಿವ ಸುರೇಶ್ ಕುಮಾರ್ ಮನವಿ.
ಬೆಂಗಳೂರು,ಮೇ,26,2021(www.justkannada.in): ಕಳೆದ ಹದಿನೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯ ಹಸ್ತವನ್ನು ಚಾಚಬೇಕೆಂದು ಸಚಿವ ಸುರೇಶ್‌ಕುಮಾರ್ ಮನವಿ ಮಾಡಿದ್ದಾರೆ.

ಶಿಕ್ಷಕರ‌ ಹಾಗೂ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರೊಂದಿಗೆ ಶಿಕ್ಷಕರ ಹಾಗೂ ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರೊಂದಿಗೆ ಇಂದು ಸಭೆ‌ ನಡೆಸಿದ ಸಚಿವ ಸುರೇಶ್ ಕುಮಾರ್, ಸರ್ಕಾರ‌‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ. ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ ನಮ್ಮದೇ ಖಾಸಗಿ ಅನುದಾನರಹಿತ ಶಿಕ್ಷಕ‌ ಸಮುದಾಯದ ನೆರವಿಗೆ ಬರಬೇಕಾದ್ದು ನಮ್ಮ‌ ಜವಾಬ್ದಾರಿಯೆಂದು ತಿಳಿಯಬೇಕೆಂದರು. ಶಿಕ್ಷಕ ಪದವೀಧರ‌ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳು ತಮ್ಮೆಲ್ಲರಿಂದ ನಿರೀಕ್ಷಿಸುವ ವೇತನ ಮೊತ್ತವನ್ನು ನೀಡಲು ಮುಂದೆ ಬಂದಿದ್ದು, ಇದನ್ನು ಎಲ್ಲರೂ ಮಾದರಿಯಾಗಿ ಕಾಣಬೇಕಿದೆ ಎಂದರು. ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ಬಳಸಲು ಸಹ ಆಲೋಚಿಸಲಾಗುತ್ತಿದ್ದು, ಸಂಪನ್ಮೂಲ‌ ಕ್ರೂಢೀಕರಣಕ್ಕೆ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಒಂದು ವೇಳೆ ಮುಂದಿನ‌ ದಿನಗಳಲ್ಲಿ ಸರ್ಕಾರಿ‌ ನೌಕರರ ವೇತನ ಕಟಾವಣೆ ಮಾಡುತ್ತೇವೆಂದು ಸರ್ಕಾರ‌ ನಿರ್ಧರಿಸಿದಲ್ಲಿ, ಈಗ ನೀಡಲು ಶಿಕ್ಷಕರು ನೀಡಲು ಇಚ್ಛಿಸುವ ಮೊತ್ತವನ್ನು ವಿನಾಯ್ತಿ ನೀಡಲು ಆರ್ಥಿಕ ಇಲಾಖೆಯನ್ನು ಕೋರಲಾಗುವುದು ಎಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘಟನೆಯ ಮಂಜುನಾಥ್ ಅವರು ನಿಶ್ಚಿತವಾಗಿಯೂ ಸಂಘಟನೆಯು ಈ ರೀತಿಯ ಮಾನವೀಯ ಸಹಕಾರವನ್ನು ತೋರಲು ಉತ್ಸುಕವಾಗಿದ್ದು, ಸರ್ಕಾರದ‌ ನಿಲುವನ್ನು ಬೆಂಬಲಿಸುತ್ತೇವೆ ಎಂದರು. ಪದವಿಪೂರ್ವ ಉಪನ್ಯಾಸಕರ‌ ಸಂಘಟನೆಯ ಅಧ್ಯಕ್ಷ ನಿಂಗೇಗೌಡ ಅವರು ಮಾತನಾಡಿ ತಮ್ಮ ಸಂಘಟನೆಯು ಹಿಂದೆಯೇ ಈ ರೀತಿಯ ಸಹಕಾರ‌ ನೀಡಲು ಮನವಿ ಸಲ್ಲಿಸಿದ್ದು ಖಂಡಿತವಾಗಿಯೂ ಸರ್ಕಾರದ‌ ನಿಲುವಿಗೆ ಬದ್ಧವಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯೂ ಸಹ ಇದರ ಬಗ್ಗೆ ಕ್ರಿಯಾಶೀಲವಾಗಿ ಸ್ಪಂದಿಸಲು ಇಚ್ಛಿಸಿದ್ದು, ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ತಮ್ಮ ಲಿಖಿತ ಒಪ್ಪಿಗೆ ನೀಡುತ್ತೇವೆಂದು ಸಂಘಟನೆಯ ಅಧ್ಯಕ್ಷ ಶಂಭುಗೌಡನ ಪಾಟೀಲ್, ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ‌ನುಗ್ಲಿ ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಡಾ.ವೈ.ಎ.ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಷಿ, ಸಂಕನೂರ, ಹಣಮಂತ ನಿರಾಣಿ, ಅ.ದೇವೇಗೌಡ ಹಾಗೂ ಚಿದಾನಂದ ಗೌಡ ಉಪಸ್ಥಿತರಿದ್ದರು.

Key words: Government – school- teachers –private- teachers -Minister -Suresh Kumar

ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ -ಗೃಹ ಸಚಿವ ಬಸವರಾಜ ಬೊಮ್ಮಾಯಿ…
ಬೆಂಗಳೂರು,ಮೇ,20,2021(www.justkannada.in):   ಖಾಸಗಿ ಸಂಘಸಂಸ್ಥೆಗಳ ಸಹಭಾಗಿತ್ವ ಇದ್ದಾಗ ಮಾತ್ರ ಕೋವಿಡ್ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಲು  ಸಾಧ್ಯ. ಹೀಗಾಗಿ ಕೋವಿಡ್ ವಿರುದ್ಧ ಹೋರಾಟಕ್ಕೆ  ಮುಂದಾಗುವ ಖಾಸಗಿ ಸಂಘ-ಸಂಸ್ಥೆಗಳಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿನ ರಾಜೀವ್ ಗಾಂಧಿ ಮಹಾವಿದ್ಯಾಲಯದಲ್ಲಿ ಆರಂಭವಾಗಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಪಕ್ಷಾತೀತವಾಗಿ ಕೋವಿಡ್ ವಿರುದ್ಧ ಹೋರಾಟ ಆರಂಭವಾಗಿದೆ.  ಖಾಸಗಿ ಸಂಘ ಸಂಸ್ಥೆಗಳು ಕೋವಿಡ್ ನಿಯಂತ್ರಣಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತಿವೆ. ಇದು ನಿಜಕ್ಕೂ ಶ್ಲಾಘನೀಯವಾದದ್ದು.  ಎಲ್ಲ ಪಕ್ಷಗಳ ಶಾಸಕರು ಪಕ್ಷಬೇಧ ಮರೆತು ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದಾರೆ.  ಇದಕ್ಕೆ ಹೆಬ್ಬಾಳದ ರಾಜೀವ್ ಗಾಂಧಿ ದಂತ ಮಹಾವಿದ್ಯಾಲಯ ಕೋವಿಡ್ ಕೇರ್ ಕೇಂದ್ರವಾಗಿರುವುದೇ  ನಿದರ್ಶನ. ಈ  ಸೆಂಟರ್ ಸ್ಥಾಪನೆಗೆ ಬಿಬಿಎಂಪಿ ಎಲ್ಲ ರೀತಿಯ ಸಹಕಾರ ನೀಡಿದೆ ಎಂದು ಹೇಳಿದರು.

ಕೇವಲ ಬೆಂಗಳೂರು ಅಷ್ಟೇ ಅಲ್ಲ. ರಾಜ್ಯಾದ್ಯಂತ ಖಾಸಗಿ ಸಹಭಾಗಿತ್ವದಲ್ಲಿ ಕೊರೊನಾ ನಿಯಂತ್ರಣಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರ ಪ್ರಶಂಸೆ-  ನಮಗೆ ಪ್ರೋತ್ಸಾಹ

ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ಪೊಲೀಸರ ಕರ್ತವ್ಯವನ್ನು ಹೈಕೋರ್ಟ್ ಮುಕ್ತಕಂಠದಿಂದ ಪ್ರಶಂಸೆ ಮಾಡಿದೆ. ಮಳೆ, ಗಾಳಿ, ಬಿಸಿಲು ಎನ್ನದೆ ದಿನದ 24×7  ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಅವರು ಜನರ ಪ್ರೀತಿ ವಿಶ್ವಾಸವನ್ನು ಗಳಿಸುತ್ತಾರೆ.  ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಾರೆ.  ಹೈಕೋರ್ಟ್ ನ ಈ ಪ್ರಶಂಸೆ ನಮಗೆ ಪ್ರೋತ್ಸಾಹ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಸಂದರ್ಭದಲ್ಲಿ ವಸತಿ ಸಚಿವ ವಿ ಸೋಮಣ್ಣ,  ಹೆಬ್ಬಾಳ ಶಾಸಕ ಬೈರತಿ ಸುರೇಶ್ ಉಪಸ್ಥಿತರಿದ್ದರು.

Key words: Partnership -private –association- organizations – covid- control-Home Minister- Basavaraja Bommai.

ಖಾಸಗಿ, ಅನುದಾನರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ- ಸಿಎಂಗೆ ಸಚಿವ ಸುರೇಶ್ ಕುಮಾರ್ ಮನವಿ…
ಬೆಂಗಳೂರು,ಮೇ,20,2021(www.justkannada.in): ನಮ್ಮ ವಿದ್ಯಾರ್ಥಿಗಳ ಹಿತ ಕಾಯುತ್ತಿರುವ ಖಾಸಗಿ ಅನುದಾನರಹಿತ  ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಸಿಎಂ ಬಿಎಸ್ ವೈಗೆ ಮನವಿ ಮಾಡಿರುವ ಸಚಿವ ಸುರೇಶ್ ಕುಮಾರ್, ಕೋವಿಡ್ ಕಾರಣದಿಂದ‌ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ  ಶಿಕ್ಷಣ‌ ಕ್ಷೇತ್ರವೂ ಪ್ರಧಾನವಾದ‌ ಕ್ಷೇತ್ರವಾಗಿದೆ. ಸರ್ಕಾರ‌ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನರಹಿತ ಶಿಕ್ಷಣ‌ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು‌ ನಡೆಯದ ಕಾರಣ, ಪೋಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ‌ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹುವಿಧದ ಸಾಮಾಜಿಕ‌‌ ಸಮಸ್ಯೆಗಳಿಗೆ ಕಾರಣವಾಯಿತು.

ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ‌ ಸಾವಿರಾರು ವಿದ್ಯಾಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಈ ಖಾಸಗಿ ಅನುದಾನರಹಿತ‌‌ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ (ಅಂದಾಜು ಎರಡು‌ ಲಕ್ಷ) ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ-ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನ ಕಾಯುತ್ತಿದ್ದಾರೆ.

ಆದರೆ, ಖಾಸಗಿ ಶಾಲೆಗಳಲ್ಲಿ‌, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ‌, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯವಾಗಿದ್ದಾರೆ. ಪೋಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ‌ ಕೂಲಿ‌ ಕೆಲಸ ಮಾಡಿದ್ದಾರೆ, ಹಣ್ಣು ತರಕಾರಿ ಮಾರಿದ್ದಾರೆ. ಇದನ್ನು ನಾವು ಹಲವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಅವರ ನೆರವಿಗೆ ಧಾವಿಸುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಶಿಕ್ಷಕರ ಸಂಕಷ್ಟದ ಪರಿಸ್ಥಿತಿಯನ್ನು ಸಚಿವ ಸುರೇಶ್ ಕುಮಾರ್ ವಿವರಿಸಿದ್ದಾರೆ.

ಶಿಕ್ಷಣದಂತಹ ಪವಿತ್ರ ವೃತ್ತಿಯನ್ನು ಕೈಗೆತ್ತಿಕೊಂಡ‌‌ ಇಂತಹ ಶಿಕ್ಷಕ‌ ಸಮುದಾಯಕ್ಕೆ‌ ನಾಗರಿಕ ಸಮಾಜದ ಪ್ರತಿಕ್ರಿಯೆ ತನ್ನದೇ‌ ಆದ ದೂರಗಾಮಿ‌, ನಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲುದು. ಮುನ್ನೆಲೆಗೆ ಬಾರದ ಹಾಗೂ ತಮ್ಮ‌‌ ಆಯ್ಕೆಯ ಬೌದ್ಧಿಕ ಕ್ಷೇತ್ರ ಕಲ್ಪಿಸುವ ಸಾಮಾಜಿಕ ಸಂಕೋಚದ ಕಾರಣ, ಈ ವರ್ಗ ಗದ್ದಲದ ಹೋರಾಟಕ್ಕೂ ಮುಂದಾಗಿಲ್ಲ.  ಆದರೆ, ಈ ಸಮುದಾಯ ತೀವ್ರ ಆರ್ಥಿಕ-ಭೌತಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಸತ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ತಾವು ಈ ವರ್ಗದ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಾದ ತುರ್ತು ಅವಶ್ಯಕತೆ ಇರುತ್ತದೆ. ಈ ವರ್ಗಕ್ಕೆ ನೀಡುವ ಸಹಕಾರವು ನಮ್ಮ ಮಕ್ಕಳ ಭವಿಷ್ಯ ಕಾಯುವಂತಹ ನಿರ್ಣಯವಾಗುತ್ತದೆ.

ಆದ ಕಾರಣ, ದಯವಿಟ್ಟು, ಕೋವಿಡ್ ಕಾರಣ‌ದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ತಾವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ‌ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ‌ ತುಂಬಬೇಕು ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

Key words: Announce -special package -private –unaided- school –teacher-minister-Suresh Kumar

ಖಾಸಗಿ ಸಂಸ್ಥೆಗಳಿಂದ ಕನ್ನಡ ನಿರ್ಲಕ್ಷ್ಯ- ಟಿ.ಎಸ್ ನಾಗಾಭರಣ ಆಕ್ರೋಶ…
ಬೆಂಗಳೂರು,ಏಪ್ರಿಲ್,26,2021(www.justkannada.in):  ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಪ್ರಾಧಿಕಾರದ ಫೇಸ್ಬುಕ್, ಟ್ವಿಟರ್ ಅಧಿಕೃತ ಖಾತೆಗೆ ಟ್ಯಾಗ್ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಹೇಳಿದರು.

ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಗ್ರಾಹಕ ಸೇವೆಯಲ್ಲಿ ಕನ್ನಡ ಟ್ವಿಟರ್ ಫೇಸ್ಬುಕ್ ಹ್ಯಾಷ್ ಟ್ಯಾಗ್ ಅಭಿಯಾನದ ಸಮಾರೋಪ ಕುರಿತು ಜಾಲತಾಣ ಸಭೆಯಲ್ಲಿ ಮಾತನಾಡಿದ  ಟಿ.ಎಸ್ ನಾಗಾಭರಣ, ಕರ್ನಾಟಕದಲ್ಲಿರುವ ನೂರಾರು ಖಾಸಗಿ ಸಂಸ್ಥೆಗಳು, ಕೆಲವು ಸರ್ಕಾರಿ ಕಚೇರಿಗಳು ಕನ್ನಡವನ್ನು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳು ದಾಖಲಾಗುತ್ತಿವೆ ಈ ಹಿನ್ನೆಲೆಯಲ್ಲಿ ವಿನೂತನವಾಗಿ ಫೇಸ್ಬುಕ್ ಟ್ವಿಟರ್ ಹ್ಯಾಷ್ ಟ್ಯಾಗ್ ಅಭಿಮಾನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಕರ್ನಾಟಕದಲ್ಲಿರುವ ಯಾವುದೇ ಖಾಸಗಿ ಸಂಸ್ಥೆಗಳು ರಾಜ್ಯ  ಭಾಷಾನೀತಿಯನ್ನು ಅನುಸರಿಸುವುದು ಅವರ ಕರ್ತವ್ಯವಾಗಿದೆ ಇಲ್ಲಿನ ನೆಲ ಜಲ ಬಳಸಿಕೊಂಡು ಖಾಸಗಿ ಸಂಸ್ಥೆಗಳು ಭಾಷಾನೀತಿಯನ್ನು ಉಲ್ಲಂಘಿಸುತ್ತಿರುವುದು ಸರಿಯಾದ ಕ್ರಮವಲ್ಲ.  ಖಾಸಗಿ ಸಂಸ್ಥೆಗಳಿಗೆ ಭೂಮಿಯನ್ನು ನೀಡುವಾಗ ರಾಜ್ಯ ಭಾಷಾ ನೀತಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿರುತ್ತದೆ. ಭೂಮಿಯನ್ನು ಪಡೆಯುವಾಗ ಎಲ್ಲಾ ನಿಯಮಗಳಿಗೂ ಒಪ್ಪಿ,  ನಂತರದ ದಿನಗಳಲ್ಲಿ ಕಡೆಗಣಿಸುವುದನ್ನು ಪ್ರಾಧಿಕಾರ ಖಂಡಿಸುವುದಾಗಿ ನಾಗಾಭರಣ ಅವರು ಹೇಳಿದರು.

ಡಿಟಿಎಚ್ ಸೇವೆ ನೀಡುವ ಸನ್ ಡೈರೆಕ್ಟ್, ಟಾಟಾ ಸ್ಕೈ, ರಿಲಯನ್ಸ್ ಸೇರಿದಂತೆ ಹಲವು ಸಂಸ್ಥೆಗಳು. ಇಂಡಿಗೋ ಏರ್ಲೈನ್ಸ್, ಔಷಧಿ ತಯಾರಿಕಾ ಸಂಸ್ಥೆಗಳು, ಅಂಚೆ ಕಚೇರಿ, ಎಲ್ಐಸಿ ಸಂಸ್ಥೆಗಳು. ಅನಿಲ ಸಂಸ್ಥೆಗಳಾದ ಇಂಡಿಯನ್, ಹೆಚ್ ಪಿ, ಭಾರತ್ ಗ್ಯಾಸ್ ಸಂಸ್ಥೆಗಳು.

ಬಿಗ್ ಬಜಾರ್, ಮಾಲ್ ಗಳು, ಅಮೆಜಾನ್,  ಫ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳು. ಹಾಗೂ ಸರ್ಕಾರಿ ಸಂಸ್ಥೆಗಳಾದ ಬಿಬಿಎಂಪಿ ಸಹಾಯವಾಣಿಯನ್ನು ಕನ್ನಡದಲ್ಲಿ ನೀಡಬೇಕು ಹಾಗೂ ಕೊರೋನ ಕುರಿತ ಎಲ್ಲಾ ಮಾಹಿತಿಗಳನ್ನು ಆರೋಗ್ಯ ಇಲಾಖೆಯು ಕನ್ನಡದಲ್ಲಿ ನೀಡುವಂತೆ ಆಯಾ ಸಂಸ್ಥೆಯ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಒತ್ತಾಯಿಸಲಾಯಿತು.

ಹೀಗೆ ಹ್ಯಾಷ್ ಟ್ಯಾಗ್ ಅಭಿಯಾನದ ಮೂಲಕ ಒಮ್ಮೆಗೆ  ಹಲವಾರು ಸಂಸ್ಥೆಗಳ ವಿರುದ್ಧ ನೂರಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ  ಆಯಾ ಸಂಸ್ಥೆಯ ಗಮನಕ್ಕೆ ತರಲಾಗಿದೆ. ಇಂತಹ ಒಂದು ಅಭೂತಪೂರ್ವ ಕಾರ್ಯದಲ್ಲಿ ಪಾಲ್ಗೊಂಡ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಅಧ್ಯಕ್ಷರು ಹೇಳಿದರು.

ಪ್ರಾಧಿಕಾರವು ಹಮ್ಮಿಕೊಂಡಿದ್ದ ವಿನೂತನ ಹ್ಯಾಷ್ ಟ್ಯಾಗ್ ಅಭಿಯಾನದಲ್ಲಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ, ನಾಮನಿರ್ದೇಶಿತ ಸದಸ್ಯರುಗಳು, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು, ಮಹಾನಗರಪಾಲಿಕೆಯ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು, ವಿಧಾನಸಭಾ ಕ್ಷೇತ್ರದ ಜಾಗೃತಿ ಸಮಿತಿ ಸದಸ್ಯರುಗಳು, ಕನ್ನಡ ಕಾಯಕ ಪಡೆಯ ಸದಸ್ಯರುಗಳು ಹಾಗೂ ಗ್ರಾಹಕರ ವೇದಿಕೆಯ ಸದಸ್ಯರುಗಳು, ಕನ್ನಡ ಪರಿಚಾರಕರು ಕನ್ನಡ ಪರ ಹೋರಾಟಗಾರರು, ಕನ್ನಡ ಮನಸ್ಸುಗಳು ಪಾಲ್ಗೊಂಡಿದ್ದರು.

Key words: Kannada -neglect –private- institutions-TS Nagabarana -Outrage.

“ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭ, ಖಾಸಗಿ ಬಸ್ ಮಾಲೀಕರಿಂದ ಪ್ರತಿಭಟನೆ”
ಮೈಸೂರು,ಏಪ್ರಿಲ್,18,2021(www.justkannada.in) : ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭ ಹಿನ್ನೆಲೆ ಮೈಸೂರಲ್ಲಿ ಖಾಸಗಿ ಬಸ್ ಮಾಲೀಕರಿಂದ ಪ್ರತಿಭಟನೆ ನಡೆಸಲಾಯಿತು.ಸರ್ಕಾರ ನಮ್ಮನ್ನ ಟಿಸ್ಸು ಪೇಪರ್ ರೀತಿ ಬಳಸಿಕೊಳ್ಳುತ್ತಿದೆ. ಅವಶ್ಯಕತೆ ಬಿದ್ದಾಗ ಮಾತ್ರ ನಾವು ಸರ್ಕಾರಬೇಕು. ಅವಶ್ಯಕತೆ ಮುಗಿದ ಬಳಿಕ ನಮ್ಮನ್ನ ಬೀದಿಪಾಲು ಮಾಡುತ್ತೆ ಎಂದು ಸರ್ಕಾರದ ವಿರುದ್ಧ ಖಾಸಗಿ ಬಸ್ ಚಾಲಕ ನಿರ್ವಾಹಕರು ಆಕ್ರೋಶವ್ಯಕ್ತಪಡಿಸಿದರು.

ಒಂದು ತಿಂಗಳ ಕಾಲ ಪರ್ಮಿಟ್ ಕೊಟ್ಟ ಸರ್ಕಾರ ಈಗ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಗಟ್ಟಿದೆ. ನಾವು ಎಲ್ಲಿಗೆ ಹೋಗಬೇಕು ನಮಗೂ ಸಂಸಾರ ಮಕ್ಕಳು ಇವೆ ಎಂದು ಬೇಸರವ್ಯಕ್ತಪಡಿಸಿದರು.

ನಾವು ಸಂಕಷ್ಟದಲ್ಲಿದೀವಿ,ಈಗ ನಮ್ಮ ಟೂರಿಸ್ಟ್ ಲೈನ್ ಗಳು ಸಹ ಕ್ಲೋಸ್ ಆಗಿವೆ. ಸದ್ಯ ಟೂರಿಸ್ಟ್ ಬಾಡಿಗೆಯೂ ಇಲ್ಲಾ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸಂಚಾರವೂ ಇಲ್ಲ ಎಂದು ಖಾಸಗಿ ಬಸ್ ಚಾಲಕ ನಿರ್ವಾಹಕರ ಅಳಲು ತೋಡಿಕೊಂಡರು.

key words : KSRTC Bus-Traffic-Launches-Protest-private-bus-owners