player Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

BCCI ನಿರ್ದೇಶನ ಹಿನ್ನೆಲೆ: ಬಾಂಗ್ಲಾ ಆಟಗಾರನನ್ನು ಕೈಬಿಟ್ಟ KKR
ಮುಂಬೈ,ಜನವರಿ,3,2026 (www.justkannada.in): ಐಪಿಎಲ್ 2026 ರ ಮುಂಬರುವ ಆವೃತ್ತಿಗಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ (KKR)ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಕೆಕೆಆರ್ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮನ್ ರವರನ್ನು ಕೈಬಿಟ್ಟಿದೆ. ಎರಡು ವಾರದಲ್ಲಿ ಬಾಂಗ್ಲಾದೇಶದಲ್ಲಿ ನಾಲ್ಕು ಹಿಂದೂಗಳ ಹತ್ಯೆಯಾದ ಬಳಿಕ ಹಾಗೂ ಬಾಂಗ್ಲಾದಲ್ಲಿ ಭಾರತ ವಿರೋಧಿ ಭಾವನೆ ತೀವ್ರ ಮತ್ತು ಅಲ್ಲಿನ ಅಲ್ಫಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಡಿಸೆಂಬರ್ 2025 ರಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ಅವರನ್ನು 9.20 ಕೋಟಿ ರೂ.ಗಳಿಗೆ ಸಹಿ ಮಾಡಿಕೊಂಡಿತ್ತು.

Key words: BCCI, KKR, drops, Bangladesh, player

The post BCCI ನಿರ್ದೇಶನ ಹಿನ್ನೆಲೆ: ಬಾಂಗ್ಲಾ ಆಟಗಾರನನ್ನು ಕೈಬಿಟ್ಟ KKR appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚೊಚ್ಚಲ ಖೋ ಖೋ ವಿಶ್ವಕಪ್‌ ಗೆದ್ದ ತಂಡದಲ್ಲಿ ಮೈಸೂರಿನ ಪ್ರತಿಭೆ: ಮನೆಯಲ್ಲಿ ಮನೆ ಮಾಡಿದ ಸಂಭ್ರಮ
ಮೈಸೂರು,ಜನವರಿ,20,2025 (www.justkannada.in):  ಚೊಚ್ಚಲ ಖೋ ಖೋ ವಿಶ್ವಕಪ್‌ ನಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ತಂಡದಲ್ಲಿ ಭಾಗಿಯಾಗಿದ್ದ ಮೈಸೂರು ಜಿಲ್ಲೆಯ ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಪ್ರತಿಭೆ ಚೈತ್ರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.

ಕುರುಬೂರು ಗ್ರಾಮ ಆಟಗಾರ್ತಿ ಚೈತ್ರ ಭಾರತದ ಸಾಧನೆಯಲ್ಲಿ ಮಹೋನ್ನತ ಸೇವೆ ಸಲ್ಲಿಸಿದ್ದು ಚೈತ್ರಾ ಮನೆಯಲ್ಲಿ ಪೋಷಕರು  ಮಗಳ ಟ್ರೋಪಿಗಳನ್ನು ಒಂದೆಡೆ ಇಟ್ಟು, ಪ್ರದರ್ಶನ ಮಾಡಿ ಸಂಭ್ರಮಿಸಿದ್ದಾರೆ.

ಮಗಳ ಸಾಧನೆ ಕಂಡು ಗದ್ಗತಿರಾದ ಚೈತ್ರ ತಂದೆ ಬಸವಣ್ಣ, ತಾಯಿ ನಾಗರತ್ನ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮಗಳಿಗೆ ಶಿಕ್ಷಕ ಮಂಜುನಾಥ್ ಎರಡನೇ ತಂದೆಯಂತೆ. ನಾವು ಜನ್ಮ ಕೊಟ್ಟ ತಂದೆ, ಅವರು ನಮ್ಮ ಹುಡುಗಿಗೆ ಒಳ್ಳೆಯ ದಾರಿ ತೋರಿಸಿದ್ದಾರೆ. ಮಗಳ ಸಾಧನೆ ನೋಡಿ ತುಂಬಾ ಖುಷಿ ಆಗುತ್ತಿದೆ. ನನ್ನ ಮಗಳು ಟೂರ್ನಿಗೆ ಹೋಗುವಾಗಲೇ ನಾನು ವಿಶ್ವಕಪ್ ಗೆದ್ದೇ ಬರುತ್ತೇನೆ ಎಂದಿದ್ದಳು.  ಅದರಂತೆ ಗೆದ್ದು ಬಂದಿದ್ದಾಳೆ ಎಂದು ತಂದೆ ಬಸವರಾಜು ಹರ್ಷ ವ್ಯಕ್ತಪಡಿಸಿದ್ದಾರೆ.

ಹಳ್ಳಿಯ ಮಗಳು ಇಂತಹ ಸಾಧನೆ ಮಾಡಿರೋದು ನಮಗೆ ಹೆಮ್ಮೆ. ನನ್ನ ತಂದೆ ನನ್ನನ್ನ 9 ನೇ ತರಗತಿ ವರೆಗೆ ಓದಿಸಿದ್ದರು. ನನ್ನ ಮಗಳು ಓದುವಾಗ ಅವಳ ಇಷ್ಟದಂತೆ ನಾವು ಸಪೋರ್ಟ್ ಮಾಡಿದ್ದೇವೆ. ನನ್ನ ಮಗಳು ಓದುವುದು, ಆಟ ಎರಡರಲ್ಲೂ ಮುಂದು. ಹಳ್ಳಿಯಲ್ಲಿ ಜನ ಸಾಕಷ್ಟು ಮಾತನಾಡಿದರು. ಆದರೆ ಅದನ್ನ ನಾವು ತಲೆಗೆ ಹಾಕಿಕೊಳ್ಳಲಿಲ್ಲ. ಈಗ ಮಗಳ ಸಾಧನೆ ನೋಡಿದಾಗ ಜನರ ಮಾತನ್ನ ನಾನು ಆಶಿರ್ವಾದ ಅಂತ ತಿಳಿದುಕೊಂಡೆ. ಮುಂದೆ ನಮ್ಮ ಮಗಳು ಏನು ಸಾಧನೆ ಮಾಡಬೇಕು ಅಂದುಕೊಂಡಿದ್ದಾಳೆ ಅದಕ್ಕೆ ಮುಕ್ತ ಅವಕಾಶ ಕೊಡುತ್ತೇವೆ. ಮಗಳಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದ ತಾಯಿ ನಾಗರತ್ನ ಸಂತಸಪಟ್ಟಿದ್ದಾರೆ.

ಆಟಗಾರ್ತಿ ಚೈತ್ರಾ ಸಾಧನೆ ಕೊಂಡಾಡಿದ ತರಬೇತುದಾರ ಮಂಜುನಾಥ್

ಚೈತ್ರಾ 4 ನೇ ತರಗತಿಯಲ್ಲಿ ಇದ್ದಾಗಿನಿಂದ ಖೋಖೋ ಹೇಳಿಕೊಟ್ಟಿದ್ದ ಶಿಕ್ಷಕ ಹಾಗೂ ತರಬೇತುದಾರ  ಮಂಜುನಾಥ್ ಇದೀಗ ಆಟಗಾರ್ತಿ ಚೈತ್ರಾ ಸಾಧನೆ ಕೊಂಡಾಡಿದ್ದಾರೆ. ಚೈತ್ರಾ ಸಾಧನೆ ಇತರ ಮಕ್ಕಳಿಗೂ ಸ್ಪೂರ್ತಿ ಆಗಬೇಕು. ಆ ಮಗು ಕೂಡ ಇದೇ ಗ್ರಾಮದ ಖೋಖೋ ಆಟಗಾರ್ತಿ ವೀಣಾ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದರು. ಫೈನಲ್ ಪಂದ್ಯ ನೋಡಿ ಬಹಳ ಖುಷಿ ಆಗಿದೆ. ಕಣ್ಣು ತುಂಬಿ ಬಂತು. ಹೂವಿನಿಂದಿಗೆ ನಾರು ಸ್ವರ್ಗ ಸೇರಿತು ಎಂಬಂತೆ ನನ್ನ ಬದುಕು ಆಗಿದೆ‌. ಗಣಿತ ಶಿಕ್ಷಕನಾಗಿ ಬಂದವನು ಮಕ್ಕಳ ಸಾಮರ್ಥ್ಯ ನೋಡಿ ಖೋಖೋ ಕಲಿಸಿದೆ‌. ಇಂದು ಇದೇ ಶಾಲೆಯಲ್ಲಿ ಖಾಯಂ ಶಿಕ್ಷಕನೂ ಆದೆ‌. ಚೈತ್ರಾ ಯಾವಾಗಲೂ ಕುರುಬೂರು ಶಾಲಾ ಕ್ರೀಡಾಂಗಣದಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದಳು. ವಿಶ್ವಕಪ್ ಆಯ್ಕೆ ನಂತರ ದಿನಕ್ಕೆ ಮೂರು ಬಾರಿ ಅಭ್ಯಾಸ ಮಾಡುತ್ತಿದ್ದಳು. ಪಂದ್ಯಕ್ಕಾಗಿ ಸಾಕಷ್ಟು ಅಭ್ಯಾಸ ಮಾಡಿದ್ದಳು. ಆ ಮಗುವಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ  ತರಬೇತುದಾರ ಮಂಜುನಾಥ್ ಚೈತ್ರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Key words: Mysore, Player, Kho Kho World Cup, India team,

The post ಚೊಚ್ಚಲ ಖೋ ಖೋ ವಿಶ್ವಕಪ್‌ ಗೆದ್ದ ತಂಡದಲ್ಲಿ ಮೈಸೂರಿನ ಪ್ರತಿಭೆ: ಮನೆಯಲ್ಲಿ ಮನೆ ಮಾಡಿದ ಸಂಭ್ರಮ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

89 ವರ್ಷದ ವೃದ್ಧ ಕೊಳಲು‌‌‌ ವಾದಕ ಸಿ.ಎಸ್. ನಾಗರಾಜ್ ಅವರನ್ನು ಗುಣಪಡಿಸಿದ ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ
ಮೈಸೂರು,ಸೆಪ್ಟೆಂಬರ್,23,2020(www.justkannada.in) : ಯಾವುದೇ ವಯಸ್ಸಿನ ಕೋವಿಡ್ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಹಲವಾರು ಪ್ರಕರಣಗಳಲ್ಲಿ ಸಾಬೀತು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ 89 ವರ್ಷದ ವೃದ್ಧ ಕೊಳಲು‌‌‌ ವಾದಕ ಸಿ.ಎಸ್.ನಾಗರಾಜ್  ಅವರನ್ನು ಗುಣಪಡಿಸಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.ಹುಣಸೂರು ತಾಲ್ಲೂಕು ಚಿಲ್ಕುಂದ ಗ್ರಾಮದವರಾದ 89 ವಯಸ್ಸಿನ ಕೊಳಲು ವಾದಕ ಸಿ.ಎಸ್.ನಾಗರಾಜು ಅವರು ಸೆಪ್ಟೆಂಬರ್ ಮೊದಲ ವಾರ ಜ್ವರಕ್ಕೆ ತುತ್ತಾಗಿದ್ದರು, ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಜ್ವರ ತೀವ್ರಗೊಂಡು ಮಾತನಾಡದ ಸ್ಥಿತಿಗೆ ಬಂದಾಗ ಹುಣಸೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟಿವ್ ಬಂದ ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.

ಅದರಂತೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ಅವರನ್ನು ದಾಖಲಿಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 10 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಇವರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಯಿತು. ವೈದ್ಯರು, ನರ್ಸ್ ಗಳು,  ಸಿಬ್ಬಂದಿ ಎಲ್ಲರೂ ಇವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದಾರೆ.

89 ವರ್ಷದ‌ ವ್ಯಕ್ತಿಯನ್ನು ಗುಣಪಡಿಸಿದ್ದು ಹೆಮ್ಮೆ

ಐ.ಸಿ.ಯು. ಮಟ್ಟಕ್ಕೆ ಹೋಗುವ ರೋಗಿಯನ್ನು ಗುಣಪಡಿಸುವುದು ಕಷ್ಟಕರವಾದ ಸ್ಥಿತಿ. ಅಂತಹದರಲ್ಲಿ ಇವರು 10 ದಿನಗಳ ಕಾಲ ಐ.ಸಿ.ಯು.ನಲ್ಲಿ ಇದ್ದರು. ಆ ಸ್ಥಿತಿಯಲ್ಲಿ ರೋಗಿಯನ್ನು ಗುಣಪಡಿಸಿ ಐ.ಸಿ.ಯು.ನಿಂದ‌ ಹೊರತರುವುದು ಅತ್ಯಂತ ಸವಾಲಿನ ಕೆಲಸ. ಈ ಸವಾಲನ್ನು ಸ್ವೀಕರಿಸಿ 89 ವರ್ಷದ‌ ವ್ಯಕ್ತಿಯನ್ನು ಗುಣಪಡಿಸಿದ್ದು ಹೆಮ್ಮೆಯಾಗಿದೆ. ನಮ್ಮ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆ ಎಂದು ಕೋವಿಡ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ತಿಳಿಸಿದ್ದಾರೆ.

ತಂದೆಗೆ ಮಗನಿಂದ ಧೈರ್ಯ

ಸಿ.ಎಸ್. ನಾಗರಾಜ್ ಪಾರ್ಕಿನ್ಸನ್ ಕಾಯಿಲೆ‌ ಇತ್ತು. ಜೊತೆಗೆ ತೀವ್ರ ಜ್ವರದಿಂದ ಬಳಲಿದ್ದರು. ಇಂತಹ ಪರಿಸ್ಥಿತಿಯಲ್ಲೂ ನಮ್ಮ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ಕೋವಿಡ್ ರೋಗಿ ಜೊತೆ ಕೇರ್ ಟೇಕರ್ ಆಗಿ ಇರಲು ಬಹುತೇಕರು ಒಪ್ಪುವುದಿಲ್ಲ. ಅಂತಹದರಲ್ಲಿ ಸಿ.ಎಸ್.ನಾಗರಾಜ್ ಅವರ ಮಗ 53 ವರ್ಷದ ವೆಂಕಟೇಶ್ ಮೂರ್ತಿ ಅವರು ರೋಗಿಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು ತಂದೆಗೆ ಧೈರ್ಯ ತುಂಬಿದ್ದಾರೆ.

ಧೈರ್ಯಗೆಡದೆ ವೈದ್ಯರ ಮಾರ್ಗದರ್ಶನ, ಚಿಕಿತ್ಸೆ ಪಡೆದುಕೊಂಡರೆ ಗುಣಮುಖ

ಗುಣವಾಗಿ ಸೆಪ್ಟೆಂಬರ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಎಲ್ಲರೂ ಸಂಭ್ರಮಿಸಿದ್ದಾರೆ. ನಮ್ಮ ಕುಟುಂಬದವರಿಗೆಲ್ಲಾ ಸಂತೋಷವಾಗಿದೆ ಎಂದು ಅವರ ಮಗ ವೆಂಕಟೇಶ್ ಮೂರ್ತಿ ಸಂತೋಷವ್ಯಕ್ತಪಡಿಸಿದ್ದಾರೆ.  ಕೋವಿಡ್ ಬಂದ ಕೂಡಲೇ ಧೈರ್ಯಗೆಡದೆ ವೈದ್ಯರ ಮಾರ್ಗದರ್ಶನ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಗುಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

key words : 89 year-old-flute-player-cured-Nagaraj-

Mysore-District-Kovid-Hospital

The post 89 ವರ್ಷದ ವೃದ್ಧ ಕೊಳಲು‌‌‌ ವಾದಕ ಸಿ.ಎಸ್. ನಾಗರಾಜ್  ಅವರನ್ನು ಗುಣಪಡಿಸಿದ ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತಂದೆಯ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವು…
ಧಾರವಾಡ, ಮೇ,7,2019(www.justkannada.in):  ತಂದೆ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾದ ಪರಿಣಾಮ ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲ್ಲೂಕಿನ  ಮಾದನಭಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಜಾತಾ ಕೆರಳ್ಳಿ(16) ಮೃತಪಟ್ಟ ಹಾಕಿ ಆಟಗಾರ್ತಿ. ಸುಜಾತ 17 ವರ್ಷದೊಳಗಿನ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ಎನ್ನಲಾಗುತ್ತಿದೆ. ಈಕೆ ಮೈಸೂರಿನಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದು, ರಜೆ ಹಿನ್ನೆಲೆ ಸ್ವಗ್ರಾಮಕ್ಕೆ ತೆರಳಿದ್ದಳು.

ಈ ನಡುವೆ ಇಂದು ತಂದೆ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಇಬ್ಬರಿಗೂ ಡಿಕ್ಕಿಯಾಗಿದೆ. ಈ ಸಮಯದಲ್ಲಿ ಸುಜಾತ ಕೆರಳ್ಳಿ ಸ್ಥಳದಲ್ಲೇ ಸಾವನ್ನಪ್ಪಿದ್ದು ತಂದೆ ಮಲ್ಲಿಕಾರ್ಜುನ ಕೆರಳ್ಳಿ ಅವರಿಗೆ ಗಂಭೀರ ಗಾಯಗಳಾಗಿದೆ. ಮಲ್ಲಿಕಾರ್ಜುನ ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: car -collided – Hockey- player-died -on the spot….

The post ತಂದೆಯ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.