needs Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ: ಸೂಜಿಗಳ ಅಗತ್ಯವಿದೆ- ಕೆ.ವಿ.ಪ್ರಭಾಕರ್ ಅಭಿಮತ
ಬೆಂಗಳೂರು ಮಾರ್ಚ್,4,2026 (www.justkannada.in):  ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನ‌ಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ್ದ “ಮಾಧ್ಯಮ ಹಬ್ಬ-2026” ಕಾರ್ಯಾಗಾರವನ್ನು ಉದ್ಘಾಟಿಸಿ ಕೆ.ವಿ ಪ್ರಭಾಕರ್ ಮಾತನಾಡಿದರು.

ಅರಳುವ ಹೂವಿನ ಒಳಗೆ ಮಕರಂದ ಬೆರೆತಿರುವ ಹಾಗೆ ಅರಳುವ ಪತ್ರಕರ್ತ,  ಪತ್ರಕರ್ತೆಯ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು ಎಂದರು.

ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಜನ‌ ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ‌ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಸ್ಪಷ್ಟ ಎಚ್ಚರ ಇರಬೇಕಾಗುತ್ತದೆ.  ಈ ಎಚ್ಚರ ಇದ್ದಾಗ ತಾನು ಬರೆದ ಪ್ರತೀ ವರದಿ, ತಾನು ತೋರಿಸಿದ ಪ್ರತೀ ಸುದ್ಧಿ, ಕ್ಯಾಮರಾ ಮುಂದೆ ತಾನು ಆಡಿದ ಪ್ರತೀ ಮಾತಿಗೂ  ಉತ್ತರದಾಯಿತ್ವ ಹೊಂದಿರುವ ಹೊಣೆಗಾರ ಪತ್ರಕರ್ತರು ರೂಪುಗೊಳ್ಳುತ್ತಾರೆ. ಈ ಸಾಮಾಜಿಕ ಎಚ್ಚರ ಬರುವುದು ನಮ್ಮ ನೋಟದಿಂದ. ಸಮಾಜವನ್ನು ನೋಡುವ ಕಣ್ಣುಗಳಿಂದ.  ಯಾರ ಕಣ್ಣುಗಳಿಂದ ಹಾಗೂ ಯಾವ ಕಣ್ಣುಗಳಿಂದ ನಾವು ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಮ್ಮ ನೋಟ, ನಮ್ಮ ಗ್ರಹಿಕೆ ರೂಪುಗೊಳ್ಳುತ್ತದೆ ಎಂದು ವಿವರಿಸಿದರು.

ಹುಟ್ಟಿದ ಮಗು ಮಾತಿಗೆ ಮೊದಲು ನೋಡಿ ಕಲಿಯುತ್ತದೆ.  ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ. ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು “ಇರುವುದನ್ನು ಇರುವ ಹಾಗೆ ಗಮನಿಸಬೇಕು. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ ಎಂದು ವಿವರಿಸಿದರು.

ವೇದಿಕೆ ಮೇಲಿರುವ ದಿನೇಶ್‌ ಅಮೀನ್ ಮಟ್ಟು ಅವರು ಸೇರಿದಂತೆ ವಡ್ಡರ್ಸೆ ರಘುರಾಮ್ ಶೆಟ್ಟರು, ಪಿ.ಲಂಕೇಶ್, ಖಾದ್ರಿ ಶಾಮಣ್ಣ, ವೈಎನ್ ಕೆ, ಮೊಹರೆ ಹನುಮಂತರಾಯರು, ಡಿವಿಜಿ, ಟಿಎಸ್ ಆರ್ ರೀತಿಯ ಹಲವು ಹಿರಿಯರು ಸೂಜಿಗಳಾಗಿ, ದರ್ಜಿಗಳಾಗಿ, ನೇಕಾರರಾಗಿ ಪತ್ರಿಕಾ ವೃತ್ತಿಯ ಪ್ರಜ್ಞೆಯನ್ನು ರೂಪಿಸುವುದರ ಜೊತೆಗೆ ಸಾಮಾಜಿಕ‌ ಪ್ರಜ್ಞೆಯನ್ನೂ ರೂಪಿಸಿದ್ದಾರೆ. ಸಮಾಜವನ್ನು ಬೆಸೆಯುವ ಬೆಸುಗೆಗಳಾಗಿದ್ದಾರೆ ಎಂದು ಎಲ್ಲರಿಗೂ ಧನ್ಯತೆ ಅರ್ಪಿಸಿದರು.

ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಪತ್ರಿಕೋದ್ಯಮದ‌ ಪಟ್ಟುಗಳನ್ನು ಕಲಿಯಲು ಸಾಧ್ಯವಿಲ್ಲ ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳು ಸ್ಪಷ್ಟವಾಗಿ ತಿಳಿಯಬೇಕಿದೆ. ಓದು, ಸಂಘಟನೆ ಹಾಗೂ ಸ್ವತಂತ್ರ ಚಿಂತನೆಯಿಂದ ಮಾತ್ರ ಒಳನೋಟಗಳನ್ನು ಪಡೆಯಬಹುದು.‌ ಒಳನೋಟವೇ ಇಲ್ಲದವರಿಗೆ ಪತ್ರಿಕೋದ್ಯಮ ಕೈಹಿಡಿಯದು. ಹಾಗಾಗಿ ಈ ಒಳನೋಟಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಒಳಗಣ್ಣುಗಳನ್ನು ತೆರೆದು ತಯಾರಿ ನಡೆಸಿಕೊಳ್ಳಬೇಕಿದೆ. ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಕೂಡ ಪತ್ರಕರ್ತರಾಗಿದ್ದವರು. ಇವರೆಲ್ಲಾ ಪತ್ರಕರ್ತರಾಗಿದ್ದಾಗ ಪತ್ರಿಕೋದ್ಯಮಕ್ಕೆ ಹಣದ ಬಡತನವಿತ್ತು. ಸತ್ಯಕ್ಕೆ ಬಡತನ ಇರಲಿಲ್ಲ. ಈಗ ಹಣದ ಬಡತನದಿಂದ ಹೊರಗೆ ಬಂದಿರುವ ಪತ್ರಿಕೋದ್ಯಮ ಸತ್ಯದ ಬಡತನಕ್ಕೆ ಜಾರಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸತ್ಯಕ್ಕೆ ಹಲವು‌ ಮುಖಗಳು ಇರುತ್ತವೆ. ಆ ಎಲ್ಲ‌ ಮುಖಗಳನ್ನು ನಿರ್ಭಿಡೆಯಾಗಿ ಅನಾವರಣಗೊಳಿಸಲು ಎಲ್ಲ ಜಾತಿ, ಮತ, ಧರ್ಮ, ಆಚಾರ, ವಿಚಾರಗಳನ್ನು ಹೊಂದಿರುವವರು ಮಾಧ್ಯಮ ಕ್ಷೇತ್ರದಲ್ಲಿ ಇದ್ದಷ್ಟು ಮಾಧ್ಯಮ ಕ್ಷೇತ್ರ ಸದೃಢಗೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ “ಒಗ್ಗಟ್ಟು” ದೇಶದ ಮೌಲ್ಯವಾಗಿತ್ತು. ಸ್ವಾತಂತ್ರ್ಯಾ ನಂತರ “ವಿವಿಧತೆಯಲ್ಲಿ ಏಕತೆ” ದೇಶದ ಮೌಲ್ಯವಾಗಿತ್ತು. ಭಾರತವನ್ನು ರೂಪಿಸಿದ ಈ ಎರಡೂ ಮೌಲ್ಯಗಳನ್ನೂ ಹಾಳುಗೆಡವುತ್ತಿರುವ ಈ ಹೊತ್ತಲ್ಲಿ “ಬಹುತ್ವ” ನಮ್ಮ ನೆಲದ ಮಂತ್ರವಾಗಿದೆ, ಮೌಲ್ಯವಾಗಿದೆ. ಇದು ಕಾಪಾಡುವ ಹೊಣೆಗಾರಿಕೆ ಹಾಲಿ ಮತ್ತು ಭಾವಿ ಪತ್ರಕರ್ತರ ಮೇಲಿದೆ ಎಂದರು.

ಮಾಧ್ಯಮಗಳಲ್ಲಿ ಆಯಾ ಕಟ್ಟಿನ ಹುದ್ದೆಯಲ್ಲಿರುವವರು ಒಂದೇ ವರ್ಗಕ್ಕೆ ಸೇರಿದರೆ, ಬಹುತ್ವವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಇಂದು ಮೊಬೈಲ್ ನಲ್ಲಿ ಹರಿದಾಡುವ ಲಕ್ಷಾಂತರ ಕಟೆಂಟ್ ಗಳು ಬಹುತ್ವದ ನೆಲೆಯಲ್ಲಿಯೇ ಸೃಷ್ಟಿಯಾಗಿವೆ.  ಮಾಹಿತಿ ಸಾಗರ ಪತ್ರಿಕೋದ್ಯಮಕ್ಕೆ ಬೆದರಿಕೆಯೆಂದು ಭಾವಿಸಬೇಕಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ  ಇಲ್ಲೊಂದು ಸಂಗತಿಯನ್ನು ಮಾಧ್ಯಮ ಕ್ಷೇತ್ರ ಸ್ಷಷ್ಟವಾಗಿ ಅಳವಡಿಸಿಕೊಳ್ಳಬೇಕಿದೆ. ಅದೇನೆಂದರೆ ಒಂದು ಸಮುದಾಯ, ಒಂದು ಭಾಷೆ, ಒಂದು ಜಾತಿಯ ದನಿಗಳನ್ನಷ್ಟೆ ಕೇಳುತ್ತಿದ್ದ ಕಾಲಘಟ್ಟದಲ್ಲಿ‌ ಕಟೆಂಟ್ ಸುರಿಮಳೆಯಲ್ಲಿ ನಾನಾ ಮಣ್ಣಿಗೆ ಸೇರಿದ ವಿಭಿನ್ನ ದನಿಗಳಿವೆ. ಈ‌ ಎಲ್ಲಾ ದನಿಗಳಿಂದ ಡಿಜಿಟಲ್ ಮಾಧ್ಯಮ ವರ್ಣಮಯವಾಗಿದೆ ಮತ್ತು ವಿಭಿನ್ನ ದನಿಗಳ‌ ಕಾರಣಕ್ಕೆ ಜನರನ್ನು ಹಿಡಿದಿಡುತ್ತಿದೆ ಎಂದರು.

ಪತ್ರಿಕೆಗಳಲ್ಲಿ ಮೊದಲೆಲ್ಲ ಪ್ರೂಫ್ ರೀಡರ್ ಇರುತ್ತಿದ್ದರು. ಕ್ರಮೇಣ  ಆ ಪರಂಪರೆ  ಇಲ್ಲವಾಯಿತು. ವಿಷಯ ತಪ್ಪಿಲ್ಲದ ಹಾಗೆ  ಅಚ್ಚಿಗೆ ಹೋಗಲು ಪ್ರೂಪ್ ರೀಡರ್ ಹೇಗೆ ಮುಖ್ಯವಾಗುತ್ತಿದ್ದರೋ ಪ್ರಸ್ತುತ ಎಲ್ಲ ಬಗೆಯ ಮಾಧ್ಯಮಗಳಿಗೂ ಬೇಕಿರುವುದು ಫ್ಯಾಕ್ಟ್ ಚೆಕರ್ಸ್. ಸುಳ್ಳುಗಳ‌ ನಡುವೆ ಸತ್ಯವನ್ನು, ನೈಜ‌ ಸುದ್ದಿಯನ್ನು ಹೆಕ್ಕಿ, ಜನರ ಮುಂದೆ ಪರಿಣಾಮಕಾರಿಯಾಗಿ ಇಡಬಲ್ಲವರು ಮಾತ್ರ ಪರಿಣಾಮಕಾರಿ ಪತ್ರಕರ್ತರಾಗಿ ಮಂಚೂಣಿಗೆ ಬರಲು ಸಾಧ್ಯವಿದೆ. ಸಾವಿರ ಸುಳ್ಳಿನ ಕಟೆಂಟ್ ಗಳ ನಡುವೆ ಸತ್ಯ ಹೇಳುವ ಕಟೆಂಟ್ ಗಳಿಗೆ ಆರಂಭದಲ್ಲಿ ಹಿನ್ನಡೆಯಾದರೂ ಅದು ಗೆಲ್ಲುತ್ತದೆ. ಆ ಭರವಸೆಯಲ್ಲಿ ಪತ್ರಕರ್ತರು ಸತ್ಯವನ್ನು ಹುಡುಕಬೇಕಿದೆ. ಈ ಸತ್ಯವನ್ನು ಹುಡುಕುವ ಕಣ್ಣುಗಳನ್ನು, ನೋಟವನ್ನು, ಗ್ರಹಿಕೆಯನ್ನು ಕೊಡುವ ಮೂಲಕ “ಸಾಮಾಜಿಕ ಪ್ರಜ್ಞೆ-ನೈತಿಕ ಪ್ರಜ್ಞೆ ಬೆರೆತ ಪತ್ರಕರ್ತರು ರೂಪುಗೊಳ್ಳಲು ಈ ಕಾರ್ಯಾಗಾರ ನೆರವಾಗಲಿ ಎಂದು ಕೆ.ವಿ ಪ್ರಭಾಕರ್ ಆಶಿಸಿದರು.

ಹಿರಿಯ ಸಮಾಜವಾದಿ ಚಿಂತಕರೂ, ಪತ್ರಕರ್ತರೂ ಆದ ದಿನೇಶ್ ಅಮೀನ್ ಮಟ್ಟು ಅವರು ಮಾತನಾಡಿ, ” ಬರೆಯುವುದಕ್ಕಿಂತ ಹೆಚ್ಚಾಗಿ ಓದಬೇಕು.  ಪತ್ರಕರ್ತರಾಗುವವರಿಗೆ ಓದಿನ‌ ಹಸಿವು ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ವೃತ್ತಿ ಸಾಮಾಜಿಕ ಪಾಪ. ಪಾತಕ, ಮೂಢನಂಬಿಕೆಗಳನ್ನು ವಿಜೃಂಭಿಸುವವರು ಒಳ್ಳೆ ಪತ್ರಕರ್ತ ಇರಲಿ, ಒಬ್ಬ ಜವಾಬ್ದಾರಿಯುತ ನಾಗರಿಕ ಕೂಡ ಆಗಿರಲು ಸಾಧ್ಯವಿಲ್ಲ. ಅಜ್ಞಾನ, ಅಸೂಕ್ಷ್ಮ ಆಗಿರುವವರು ಪತ್ರಕರ್ತ ಎನ್ನಿಸಲು ಸಾಧ್ಯವೇ ಇಲ್ಲ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ‌ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಕುಲಪತಿ ಪ್ರೊ.ರಮೇಶ್ ಬಿ, ಕುಲಸಚಿವ ನೀವೀನ್ ಜೋಸೆಫ್, ವಾರ್ತಾ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Key words: Today, society, needs, needles, K.V. Prabhakar

The post ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ: ಸೂಜಿಗಳ ಅಗತ್ಯವಿದೆ- ಕೆ.ವಿ.ಪ್ರಭಾಕರ್ ಅಭಿಮತ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಶಿಸಿಹೋಗುವ ಹಂತದಲ್ಲಿ ಕನ್ನಡ ಶಾಲೆಗಳು: ಕನ್ನಡದ ಭವಿಷ್ಯ ರಕ್ಷಿಸಬೇಕಾಗಿದೆ: ಪುರುಷೋತ್ತಮ ಬಿಳಿಮಲೆ
ಬೆಂಗಳೂರು,ಫೆಬ್ರವರಿ,22,2025 (www.justkannada.in):  ಕನ್ನಡದ ಭವಿಷ್ಯ ಕರಾಳವಾಗಿದೆ. ಕನ್ನಡ ಶಾಲೆಗಳು ನಶಿಸಿಹೋಗುವ ಹಂತದಲ್ಲಿವೆ. ಈಗಾಗಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕನ್ನಡವೇ ಕ್ರಮೇಣ ಮರೆಯಾಗುವ ಸಾಧ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ಕ್ರಿಯಾ ಮಾಧ್ಯಮ ಹಮ್ಮಿಕೊಂಡಿದ್ದ ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನವನ್ನು ಉದ್ದೇಶಿಸಿ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಅಸ್ಮಿತೆಯ ಮುಂದೆ ಹಲವು ಸವಾಲುಗಳಿವೆ. ಅದರಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ತುರ್ತು ಮುಖ್ಯವಾದದ್ದು. ಇದಲ್ಲದೆ ಕನ್ನಡ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಹೋದಲ್ಲಿ ಭಾಷೆ ಸಂಸ್ಕೃತಿ ನಶಿಸಿಹೋಗುತ್ತದೆ ಎಂದರು.

ಓದುವ ಹಿಗ್ಗು ಉತ್ಸವದ ಅಂಗವಾಗಿ ಹೊರತಂದ   ‘ಓದುವ ಖುಷಿ ‘ ಕೃತಿಯನ್ನು ಬಿಡುಗಡೆ ಮಾಡಿದ ಸಾಹಿತಿ, ಪತ್ರಕರ್ತ ಜಿ.ಎನ್ ಮೋಹನ್ ಅವರು, ಪುಸ್ತಕ ಎನ್ನುವುದು ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ. ಇದು ಸಮಾಜವನ್ನು ಜಡವಾಗಿ ಇರಲು ಬಿಡದ ಬದಲಾವಣೆಯ ವೇಗವರ್ಧಕ. ಪುಸ್ತಕ ಪ್ರೀತಿಯನ್ನು ಎಲ್ಲೆಡೆ ಬಲಪಡಿಸುವ, ಹಂಚುವ ಕೆಲಸವಾಗಬೇಕು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಲ್ಗುಡಿ ಅವರು ಮಾತನಾಡಿ, ಓದುವ ಸಂಸ್ಕೃತಿ ನಶಿಸಿ ಹೋಗುವ ಹಂತದಲ್ಲಿದೆ. ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗಿದ್ದಾರೆ. ಓದಿನತ್ತ ಮತ್ತೆ ಅವರನ್ನು ಸೆಳೆಯುವುದು ಸವಾಲಿನ ಕೆಲಸ ಎಂದರು.

ಕ್ರಿಯಾ ಮಾಧ್ಯಮದ ಎನ್ ಕೆ ವಸಂತರಾಜ್, ಕೆ ಎಸ್ ವಿಮಲಾ, ಕೃತಿಯ ಅನುವಾದಕರಾದ ತಡಗಳಲೆ ಸುರೇಂದ್ರ ರಾವ್ ಉಪಸ್ಥಿತರಿದ್ದರು.

ಎಚ್ ಜಿ ಜಯಲಕ್ಷ್ಮಿ ಹಾಗೂ ದೇವಿಕಾ ರಾಮು ಅವರು ನಿರಂಜನರ ಕೃತಿಗಳ ಆಯ್ದ ಭಾಗವನ್ನು ವಾಚಿಸಿದರು.

Key words: future, Kannada, needs, protected, Purushottam Bilimale

The post ನಶಿಸಿಹೋಗುವ ಹಂತದಲ್ಲಿ ಕನ್ನಡ ಶಾಲೆಗಳು: ಕನ್ನಡದ ಭವಿಷ್ಯ ರಕ್ಷಿಸಬೇಕಾಗಿದೆ: ಪುರುಷೋತ್ತಮ ಬಿಳಿಮಲೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದೆಹಲಿ ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ -ಎಎಪಿ ಸೇರ್ಪಡೆ ಬಳಿಕ ಭಾಸ್ಕರ್ ರಾವ್ ಹೇಳಿಕೆ.
ನವದೆಹಲಿ,ಏಪ್ರಿಲ್,4,2022(www.justkannada.in): ಕರ್ನಾಟಕದಲ್ಲಿ ಮೂರು ಪಕ್ಷಗಳಿಂದ ಜನ ಬೇಸತ್ತಿದ್ದಾರೆ. ದೆಹಲಿ, ಪಂಜಾಬ್ ರೀತಿ  ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ತಿಳಿಸಿದರು.

ನವದೆಹಲಿಯಲ್ಲಿ  ಇಂದು ಆಮ್ ಆದ್ಮಿ ಪಕ್ಷ (ಎಎಪಿ) ಸೇರ್ಪಡೆಯಾದ ಬಳಿಕ ಮಾತನಾಡಿದ ಭಾಸ್ಕರ್ ರಾವ್, ಎಎಪಿ ಮಾದರಿ ಆಡಳಿತ ಎಲ್ಲೆಡೆ ಇರಬೇಕು ಎಂಬ ಅಭಿಲಾಷೆಯೊಂದಿಗೆ‌ ನಾನು ನೌಕರಿಗೆ ರಾಜೀನಾಮೆ ನೀಡಿ ಪಕ್ಷ‌ ಸೇರಿದ್ದೇನೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರೀತಿಯ ಸಂಪನ್ಮೂಲಗಳಿವೆ ಆದರೆ ಸ್ವಚ್ಚ ನಾಯಕತ್ವದ ಕೊರತೆ ಹೆಚ್ಚಾಗಿದೆ . ರಾಜ್ಯದ ಮೂರೂ ಪಕ್ಷಗಳು ಅಂದರ್ ಬಾಹರ್ ಆಡುತ್ತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮೂರು ಪಕ್ಷಗಳ ಬಗ್ಗೆ ಜನ ಬೇಸತ್ತಿದ್ದಾರೆ. ಕರ್ನಾಟಕದಲ್ಲಿ ಬದಲಾವಣೆ ಆಗಬೇಕಿದೆ ಎಂದರು.

‘ಕೇಜ್ರಿವಾಲ್ ಅವರ ಕಾರ್ಯವೈಖರಿ, ವಿಕೇಂದ್ರೀಕರಣ ನೀತಿ, ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ‌ ತಂದಿದ್ದನ್ನು ನೋಡಿದರೆ, ದೇಶದೆಲ್ಲೆಡೆ ಆ ವ್ಯವಸ್ಥೆ ಇರಬೇಕು ಎಂಬುದು ನಮ್ಮ ಆಶಯ ಎಂದು ಭಾಸ್ಕರ್ ರಾವ್ ತಿಳಿಸಿದರು.

Key words: Karnataka-needs – change- Bhaskar Rao- joining -AAP

The post ದೆಹಲಿ ಪಂಜಾಬ್ ರೀತಿ  ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ -ಎಎಪಿ ಸೇರ್ಪಡೆ ಬಳಿಕ ಭಾಸ್ಕರ್ ರಾವ್ ಹೇಳಿಕೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹಳ್ಳಿ‌ಮಕ್ಕಳಿಗೆ ವಿಜ್ಞಾನದ ಅರಿವು ಅಗತ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.
ಮೈಸೂರು,ಸೆಪ್ಟಂಬರ್,9,2021(www.justkannada.in):  ಮೈಸೂರು ವಿವಿಯ ವಿಜ್ಞಾನ ಶಿಕ್ಷಣ ಕೇಂದ್ರ ಮೂಲಕ ಹಳ್ಳಿ‌ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮೈಸೂರು ವಿವಿ‌ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ (CSES) ಸಹಯೋಗದೊಂದಿಗೆ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ“ಕೇಂದ್ರದ ಜಾಲತಾಣ ಉದ್ಘಾಟನಾ ಸಮಾರಂಭ”ವನ್ನು ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್ ನೆರವೇರಿಸಿದರು.

ಇದು ವಿಜ್ಞಾನ ಶಿಕ್ಷಣ ಕೇಂದ್ರ ಜೌಟ್ ರೀಚ್ ಪ್ರೋಗ್ರಾಮ್. 2006 ಇದರ ಸ್ಥಾಪನೆ ಆಯಿತು. ಇದರ ಮೂಲಕ ನಮ್ಮ ವಿವಿ ಸ್ನಾತಕೋತ್ತರ ಅಧ್ಯಾಪಕರು ಶಾಲೆಗಳಿಗೆ ಹೋಗಿ ವಿಜ್ಞಾನ ಅರಿವು ಮೂಡಿಸುತ್ತಿದ್ದಾರೆ. ಮೈವಿವಿಯ ನಾಲ್ಕು ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

2017 ರಲ್ಲಿ ಮೊಬೈಲ್ ಸೈನ್ಸ್ ಲ್ಯಾಬ್ ಬಂತು. ವಿಜ್ಞಾನಕ್ಕೆ ಬೇಕಾದ ಪ್ರಯೋಗ, ಸಂಶೋಧನೆಯನ್ನು ಈ ಮೊಬೈಲ್ ಬಸ್ ಮಕ್ಕಳಿಗೆ ತೋರಿಸುತ್ತದೆ. ಪ್ರತಿ ಶನಿವಾರ ಹಳ್ಳಿ ಶಾಲೆಗಳಿಗೆ ಈ ವ್ಯಾನ್ ಬಸ್ ಹೋಗುತ್ತದೆ. ಹಿರಿಯ ವಿಜ್ಞಾನಿಗಳು, ಬಾಲ ವಿಜ್ಞಾನ ಹಿರಿಯರು ಇದರಲ್ಲಿ ಇರುತ್ತಾರೆ.‌ ವಿಜ್ಞಾನ ಓದಲು ಮಕ್ಕಳಿಗೆ ಆಸಕ್ತಿ ಬರುವಂತೆ ಮಾಡುವುದು ಇದರ ಉದ್ದೇಶ. ಸದ್ಯ ಮೈಸೂರು ವಿವಿ 10 ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು ಅಲ್ಲೂ ಮೊಬೈಲ್ ಸಂಚಾರಿ ಬಸ್ ಹೋಗಲಿದೆ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ವಿಜ್ಞಾನ ಕಲಿಕೆ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ  ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿಎಸ್‌ಎಸ್) ಗಣಿತ ಹಾಗೂ ವಿಜ್ಞಾನ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಸಂಚಾರಿ ಪ್ರಯೋಗಾಲಯದ ಮೂಲಕ ಮೈಸೂರು ಶಾಲೆಗಳ ವ್ಯಾಪ್ತಿಯಲ್ಲಿ ವಿಜ್ಞಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.

ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಿತ ಹಾಗೂ ಪ್ರಾಣಿ ಶಾಸ್ತ್ರಗಳಲ್ಲಿ ಬೆಳಕಿನ ಮಹತ್ವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ನೀಡಲಾಗುತ್ತಿತ್ತು. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿತು. ಅದಕ್ಕೆ ಈಗ ಆನ್‌ ಲೈನ್ ಸ್ವರೂಪವನ್ನು ನೀಡಲಾಗಿದ್ದು, ಪ್ರಶ್ನೋತ್ತರಗಳ ರೂಪದಲ್ಲಿ ಮಾಹಿತಿ ಇರಲಿದೆ. ಈ ವೆಬ್ಸೈಟ್ ನಲ್ಲಿ ಈ ಯೋಜನೆ‌ ಸಮಗ್ರ ವಿವರ ಮತ್ತು ವಿಡಿಯೋ ಇರಲಿದೆ ಎಂದರು.

ಡಾ.ಎಂ.ಎಸ್.ಚಂದ್ರಶೇಖರ್, ಪ್ರೊ.ಕೆ.ಎ.ರವೀಶ, ಪ್ರೊ.ಕೆ.ಎಸ್.ಮಲ್ಲೇಶ್, ಪ್ರೊ.ಜಿ.ಆರ್.ಜನಾರ್ದನ್, ಪ್ರೊ.ಭಾಗ್ಯಲಕ್ಷ್ಮೀ, ಹರಿಪ್ರಸಾದ್, ಪ್ರೊ.ಆರ್.ರಂಗರಾಜನ್, ಡಾ.ಆಶಾ ಅಯ್ಯಂಗಾರ್, ಪ್ರೊ.ಬಿ.ಜೆ.ಜಗದೀಶ ಸದಸ್ಯರಾಗಿದ್ದರು.  ಪ್ರೊ.ಮಾಲಿನಿ, ಎಚ್.ಶ್ರೀನಿವಾಸ್, ಎಸ್.ರವಿಕುಮಾರ್, ಕೆ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ENGLISH SUMMARY…

Rural students require more awareness on science: UoM VC

Mysuru, September 9, 2021 (www.justkannada.in): Vice-Chancellor of the University of Mysore Prof. G. Hemanth Kumar has informed that the University will make efforts to create more awareness among the rural students about science subjects through the University Science Education Center.

He inaugurated the Union Internet program, held at the Vignana Bhavana, in Manasagangotri today, organized by the University of Mysore, in association with the CSES. He informed that it is an outreach program of the Science Education Centre and it was established in the year 2006. “The Post Graduation Department professors of our University will go to the schools and create awareness on science. This program is being held in four districts,” he explained.

“The Mobile Science Lab was established in the year 2017. Efforts are made to demonstrate various laboratory experiments to the students through the mobile science lab. The mobile lab visits schools in villages on every Saturday, accompanied by senior scientists and teachers. The purpose of this program is to create interest among the students to learn science. Presently 10 government schools have been adopted. The mobile science lab visits these schools also,” he added.

Dr.M.S. Chandrashekar, Prof. K.A.Raveesh, Prof. K.S. Mallesh, Prof. G.R. Janardhan, Prof. Bhagyalakshmi, Hariprasad, Prof. R. Rangarajan, Dr. Asha Iyengar, Prof. B.J. Jagadish, Prof. Malini, H.Srinivas, S. Ravikumar, K. Somashekar and others were present.

Keywords: University of Mysore/science/ rural students/ awareness/ Mobile science lab

Key words: village -needs – knowledge –science- Mysore university- VC-Prof.G.Hemanth Kumar

The post ಹಳ್ಳಿ‌ಮಕ್ಕಳಿಗೆ ವಿಜ್ಞಾನದ ಅರಿವು ಅಗತ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ಮಾರ್ಟ್ ಸಿಟಿಗೆ ಬೇಕು ‘ಮುಕ್ತ ಶಾಲೆ’ – ಶಿಕ್ಷಣ ತಜ್ಞ ಆಂಡರ್ಸನ್ ಪ್ರತಿಪಾದನೆ…
ಬೆಂಗಳೂರು,ನವೆಂಬರ್,21,2020(www.justkannada.in):  ನಾವು ನಿರ್ಮಿಸುವ ಭವಿಷ್ಯದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿಗಳಲ್ಲಿ ಡೆನ್ಮಾರ್ಕ್ ಮಾದರಿಯ ಮುಕ್ತ ಶಾಲೆಗಳು (ಓಪನ್ ಸ್ಕೂಲ್) ಕಾರ್ಯರೂಪಕ್ಕೆ ಬಂದರೆ ಮುಂದಿನ ತಲೆಮಾರಿನಲ್ಲಿ ಸ್ಪರ್ಧಾತ್ಮಕ ಹಾಗೂ ಚಲನಶೀಲ ನಾಯಕತ್ವವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ತಜ್ಞ ಹಾಗೂ ಚಮನ್ ಭಾರತೀಯ ಸ್ಕೂಲ್ ನ ಮುಖ್ಯಸ್ಥ ಅಲನ್ ಕೆ. ಆಂಡರ್ಸನ್ ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನ ಮೇಳದಲ್ಲಿ ಸ್ಮಾರ್ಟ್ ಸಿಟಿ ಮತ್ತು ನಗರ ಸುಸ್ಥಿರತೆ ಕುರಿತ ವರ್ಚುವಲ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸ್ಮಾರ್ಟ್ ಸಿಟಿಗಳಲ್ಲಿ ಸುಖಕರವಾದ ಜೀವನ, ಉತ್ತಮ ಪರಿಸರ, ಸುಸ್ಥಿರ ಬದುಕಿನ ಬಗ್ಗೆ ಯೋಚನೆ ಮಾಡುವ ನಾವು ನಮ್ಮ ಮುಂದಿನ ತಲೆಮಾರಿನ ಶಿಕ್ಷಣದ ಬಗ್ಗೆಯೂ ಚಿಂತಿಸಬೇಕಾಗಿದೆ.  ಓಪನ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಹೊರಗಿನ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಮಕ್ಕಳು ಹೊರಗಿನ ವಾತಾವರಣಕ್ಕೆ ಹೆಚ್ಚು ತೆರೆದುಕೊಳ್ಳುತ್ತಾ ಹೋಗುತ್ತಾರೆ ಎಂದು ಆಂಡರ್ಸನ್ ವಿವರಿಸಿದರು.

ತಂತ್ರಜ್ಞಾನದ ಭದ್ರತೆ ಮತ್ತು ಸ್ಥಳೀಯ ಸಮುದಾಯದ ಸಹಕಾರದಿಂದ ಇಂತಹುದೊಂದು ಪರಿಕಲ್ಪನೆಯನ್ನು ಸಾಧ್ಯವಾಗಿಸಬಹುದು. ಮಾನವೀಯ ಸ್ಪರ್ಶವನ್ನು ಹೊಂದಿರುವ ಶಿಕ್ಷಣ ಯಾವತ್ತೂ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲಿದೆ ಎಂದರು.

ನೋವೋ ನಾರ್ಡಿಸ್ಕ್ ಸಂಸ್ಥೆಯ ಕಾರ್ಪೋರೇಟ್ ಉಪಾಧ್ಯಕ್ಷೆ ಲೀನೇ ಹೈಲಿಂಗ್ ಅಕ್ಸೆಲ್-ಸನ್ ಮಾತನಾಡಿ, ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಭಾರತಲ್ಲಿ ಮಧುಮೇಹಿ ರೋಗಿಗಳ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಗಲಿದೆ, ಆ ಬಗ್ಗೆ ನಮ್ಮ ಸ್ಥಳೀಯ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದರು.

ಸ್ಮಾರ್ಟ್ ಸಿಟಿಗಳನ್ನು ನಿರ್ಮಾಣ ಮಾಡುವ ಹೊತ್ತಿನಲ್ಲಿ ಆರೋಗ್ಯ ವಲಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಈಗ ಕಾಣಿಸಿಕೊಂಡಿರುವ ಕೋವಿಡ್ ಸಾಂಕ್ರಾಮಿಕವು ವರವಾಗಿ ಪರಿಣಮಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಇದರಿಂದ ಸಾಧ್ಯವಾಗಿದೆ ಎಂದು ಲೀನೆ ತಿಳಿಸಿದರು.

ಕರ್ನಾಟಕದ ಕೆ.ಯು.ಐ.ಡಿ.ಎಫ್.ಸಿಯ ಆಡಳಿತ ನಿರ್ದೇಶಕಿ ಚಾರುಲತಾ ಅವರು ಮಾತನಾಡಿ, ಸ್ಮಾರ್ಟ್ ಸಿಟಿಯ ನಿರ್ಮಾಣದಲ್ಲಿ ಎಲ್ಲ ಸಂಸ್ಥೆಗಳು, ಎಲ್ಲ ಹಕ್ಕುದಾರರ ನಡುವೆ ಉತ್ತಮ ಸಮನ್ವಯ ಇದ್ದರಷ್ಟೇ ನಮ್ಮ ಮಹತ್ವಾಕಾಂಕ್ಷಿ ಯೋಜನೆಗಳು ಸಾಕಾರಗೊಳ್ಳಲು ಸಾಧ್ಯ ಎಂದರು.

ಸ್ಮಾರ್ಟ್ ಸಿಟಿ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರವಿ ಸುಂದರ್ ರಾಜನ್, ಅಖಿಲೇಶ್ ಮಿಶ್ರಾ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

Key words: Smart City- needs – open school-Education –expert-alen K. Anderson

The post ಸ್ಮಾರ್ಟ್ ಸಿಟಿಗೆ ಬೇಕು ‘ಮುಕ್ತ ಶಾಲೆ’ – ಶಿಕ್ಷಣ ತಜ್ಞ ಆಂಡರ್ಸನ್ ಪ್ರತಿಪಾದನೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹೋಮಿಯೋಪತಿಯಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ- ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯ…
ಬೆಂಗಳೂರು, ನವೆಂಬರ್ 20,2020(www.justkannada.in): ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಹೆಚ್ಚು ಸಂಶೋಧನೆ, ಅಧ್ಯಯನಗಳನ್ನು ನಡೆಸಿ ಅದನ್ನು ದಾಖಲಾಗಿಸಬೇಕು. ಈ ಮೂಲಕ ಈ ವೈದ್ಯ ಪದ್ಧತಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೆಎಚ್ ಬಿ ಕಾಲೋನಿಯಲ್ಲಿ ಕರ್ನಾಟಕ ಹೋಮಿಯೋಪತಿ ಮಂಡಳಿಯ ನೂತನ ಆಡಳಿತ ಕಚೇರಿ ‘ಹೋಮಿಯೋ ಭವನ’ವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಕೋವಿಡ್ ಸಮಯದಲ್ಲಿ ಬಹಳ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಗಳಿಗೆ ಹೋಗಿ ಔಷಧಿ ಪಡೆದಿದ್ದಾರೆ. ಈ ರೀತಿ ಜನರು ಹೋಮಿಯೋಪತಿ ಕಡೆ ಆಸಕ್ತಿ ತೋರಿದ್ದಾರೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಅಲೋಪತಿ ಮಾತ್ರವಲ್ಲದೆ, ಯುನಾನಿ, ಆಯುರ್ವೇದ, ಹೋಮಿಯೋಪತಿಗೂ ಬೇಡಿಕೆ ಹೆಚ್ಚಿದೆ. ಇಂತಹ ಸಮಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುತ್ತಿರುವವರು ಹೆಚ್ಚು ಸಂಶೋಧನೆಗಳನ್ನು ನಡೆಸಿ, ಅದನ್ನು ಜನರಿಗೆ ತಿಳಿಸಬೇಕು” ಎಂದರು.

ಹೋಮಿಯೋಪತಿಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ರೋಗ ನಿರೋಧಕ ಶಕ್ತಿ ವೃದ್ಧಿಸಲು ಈ ಪದ್ಧತಿ ಪೂರಕವಾಗಿದೆ. ಆದರೆ ಈ ಪದ್ಧತಿ ಬಹಳ ಸರಳ, ಸಲೀಸಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಜನರಲ್ಲಿ ನಂಬಿಕೆ ಕಡಿಮೆಯಾಗಿದೆ ಎಂದೂ ಹೇಳಲಾಗುತ್ತಿದೆ. ರಾಜ್ಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುವ 15 ಸಾವಿರ ವೈದ್ಯರಿದ್ದಾರೆ. ಎಲ್ಲರೂ ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಿ” ಎಂದು  ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ತೆಲಂಗಾಣದಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸೆಗೆ ಹಣ ಪಡೆಯಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಕಳೆದ 9 ತಿಂಗಳಿಂದ ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಸರ್ಕಾರದ ಶಿಫಾರಸು ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದವರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ಉಚಿತ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಸಚಿವ ಸುಧಾಕರ್ ವಿವರಿಸಿದರು.

ಸಾಮಾನ್ಯ ಜನರಿಗೆ ಆರೋಗ್ಯ ಭಾಗ್ಯ ನೀಡಬೇಕು ಎಂಬ ಗುರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಂದಿದ್ದಾರೆ. ಈ ಹೊಸ ಭವನ ಅದಕ್ಕೆ ಪೂರಕವಾಗಿದೆ. ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಅವರು ತಮ್ಮ ಹಣ ಹಾಗೂ ದೇಣಿಗೆ ಬಳಸಿ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

Key words: More research- needs – homeopathy-Health and Medical Education Minister- Dr K Sudhakar

The post ಹೋಮಿಯೋಪತಿಯಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ- ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದಸರಾ ಚಲನಚಿತ್ರೋತ್ಸವಕ್ಕೆ ಹೆಚ್ಚಿನ ಆದ್ಯತೆ ಅಗತ್ಯ – ಸಚಿವ ವಿ. ಸೋಮಣ್ಣ ಹೇಳಿಕೆ…
ಮೈಸೂರು, ಸೆ.20,2019(www.justkannada.in): ದಸರಾ ಚಲನಚಿತ್ರೋತ್ಸವಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಅಭಿಪ್ರಾಯಪಟ್ಟರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ  ಸಚಿವ ವಿ.ಸೋಮಣ್ಣ ಮಾತನಾಡಿದರು.

ಸಿನಿಮಾ ಜಗತ್ತು ವಿದ್ಯಾವಂತರೂ ಸೇರಿದಂತೆ ಓದು ಬರಹ ಬಾರದವರಿಗೆ ಪರಿಣಾಮಕಾರಿಯಾಗಿ ತಲುಪುವ ಒಂದು ಪ್ರಭಾವಿ ಮಾಧ್ಯಮ.  ಸಮಾಜವನ್ನು ಅಭ್ಯುದಯದೆಡೆಗೆ ಕೊಂಡೊಯ್ಯುವ ಆಲೋಚನೆಗಳಿಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ನಾಡಿನ ಮೂಲೆ ಮೂಲೆಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಸಮರ್ಥವಾಗಿ ತೆರೆಯ ಮೇಲೆ ಬಿಂಬಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ವ್ಯವಸ್ಥೆಯನ್ನು ಬದಲಾಯಿಸಬಲ್ಲ ಶಕ್ತಿ ಈ  ಸಿನಿಮಾ ರಂಗಕ್ಕಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ಸುಧಾರಿಸುವ ಸಂದೇಶ ಸಾರುವ ಗುಣಮಟ್ಟದ ಚಿತ್ರಗಳ ನಿರ್ಮಾಣ ಸಂಖ್ಯೆ ಹೆಚ್ಚಲಿ ಎಂದು ಆಶಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಪ್ರಾಸ್ತವಿಕವಾಗಿ ಮಾತನಾಡಿ, ಚಲನಚಿತ್ರವೊಂದು ಉತ್ತಮ ಸಿನಿಮಾ ಎನಿಸಿಕೊಳ್ಳಲು ಅದರ ಕಥೆ ಪ್ರಮುಖ ಪಾತ್ರ ವಹಿಸುತ್ತದೆ. ಸಿನಿಮಾವೊಂದರ ಕಥೆ ಚೆನ್ನಾಗಿದ್ದರೆ, ಅದರ ಗುಣಮಟ್ಟ ಸಹಜವಾಗಿ ಹೆಚ್ಚುತ್ತದೆ. ಈ ದಿಸೆಯಲ್ಲಿ ಉತ್ತಮ ಚಿತ್ರಕಥೆಗಳನ್ನು ಆಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾಗಳು ತಯಾರಾಗುವಂತಾಗಲಿ ಎಂಬ ಉದ್ದೇಶದಿಂದ ದಸರಾ ಸಂದರ್ಭದಲ್ಲಿ  ಇದೇ ಮೊದಲ ಬಾರಿಗೆ ಈ ಚಿತ್ರಕಥಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ದಸರಾ ಚಲನಚಿತ್ರೋತ್ಸವವನ್ನು ಕೇವಲ ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದರು.

ಶಾಸಕ ಕೆ.ಟಿ. ಶ್ರೀಕಂಠೇಗೌಡ, ಮೇಯರ್ ಪುಷ್ಪಲತ ಜಗನ್ನಾಥ್, ಉಪ ಮೇಯರ್ ಷಫಿ ಅಹ್ಮದ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಚಲನಚಿತ್ರೋತ್ಸವ ಉಪಸಮಿತಿ ಅಧ್ಯಕ್ಷ ಜಯಪ್ರಕಾಶ್, ದಸರಾ ಉಪವಿಶೇಷಾಧಿಕಾರಿ ಬಿ.ಎನ್. ಗಿರೀಶ್, ಕಾರ್ಯಾಧ್ಯಕ್ಷ ಬಿ.ಜಿ. ಗೋವಿಂದರಾಜು, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಮೊದಲಾದವರು ವೇದಿಕೆಯಲ್ಲಿದ್ದರು.

Key words: Dasara -Film Festival- needs -more priority-Minister -V. Somanna

The post ದಸರಾ ಚಲನಚಿತ್ರೋತ್ಸವಕ್ಕೆ ಹೆಚ್ಚಿನ ಆದ್ಯತೆ ಅಗತ್ಯ – ಸಚಿವ ವಿ. ಸೋಮಣ್ಣ ಹೇಳಿಕೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.