mysore- minister Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ತನ್ವೀರ್ ಸೇಠ್ ಗೆ ಮಂತ್ರಿ ಸ್ಥಾನ ಕೈತಪ್ಪಿದ್ದರಲ್ಲಿ ನಮ್ಮ ತಂದೆ ಪಾತ್ರವಿಲ್ಲ- ಸಚಿವ ಯತೀಂದ್ರ ಸಿದ್ದರಾಮಯ್ಯ
ಮೈಸೂರು,ಆಗಸ್ಟ್,6,2026 (www.justkannada.in):  ಶಾಸಕ ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಲು ನಮ್ಮ ಜಿಲ್ಲೆಯ ಮಾಜಿ ಸಿಎಂ ಕಾರಣ ಎಂದು ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಾಕ್ಷಿಯಿಲ್ಲ, ಆಧಾರವಿಲ್ಲ ಸುಮ್ಮನೆ ಹೇಳ್ಳುತ್ತಾರೆ. ತಂದೆಯವರು ಯಾರಿಗೂ ಕೂಡ ರೆಕ್ಮೆಂಡ್ ಮಾಡಿಲ್ಲ. ಶಾಸಕ ತನ್ವೀರ್‌ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಲ್ಲಿ ತಂದೆ ಪಾತ್ರವಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿಮಠಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಿಎಂ ಬರ ಅಧ್ಯಯನ ಮಾಡುವಂತೆ ತಿಳಿಸಿದ್ದಾರೆ. ಇಂದು ಮತ್ತು‌ ನಾಳೆ ಜಿಲ್ಲೆಯ ವಿವಿದೆಢೆ ಭೇಟಿ‌ ನೀಡುವೆ. ಎಲ್ಲೆಲ್ಲಿ ಮಳೆ‌ ಕೊರತೆ ಆಗಿದೆ. ಆಯಾ ತಾಲ್ಲೂಕುಗಳಿಗೆ ನಾನು ಭೇಟಿ‌ ನೀಡುವೆ. ಮೊದಲು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಮಾಡಿದರು. ಈಗ ಬಹುತೇಕ ನಾನೇ ಎಂದು ಫಿಕ್ಸ್ ಮಾಡಿದ್ದಾರೆ. ಮೊದಲಿಗೆ ಜ್ಞಾನಪ್ರಕಾಶ ಸ್ವಾಮೀಜಿ ಭೇಟಿ ಮಾಡಿದ್ದೇನೆ. ನಂತರ ಸುತ್ತೂರು ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆಯುವೆ ಎಂದರು.

ಅವರಿಗೆ ಸಮಾಧಾನಪಡಿಸುವಷ್ಟು ನಾನು ದೊಡ್ಡವನಲ್ಲ

ಸಚಿವ ಸಂಪುಟದ ಬಗ್ಗೆ ಅಸಮಾಧಾನ ವಿಚಾರ ಕುರಿತು ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಯಾರ್ಯಾರು ಅಸಮಾಧಾನ ಇದ್ದಾರೆ. ಅವರನ್ನ ಸಮಾಧಾನ ಮಾಡುವ ಕೆಲಸ ಮುಗಿದಿದೆ. ಶಾಸಕರಾದ ತನ್ವೀರ್‌ಸೇಠ್, ಮಹದೇವಪ್ಪ ಇಬ್ಬರು ಅನುಭವಿ ರಾಜಕಾರಣಿಗಳಾಗಿದ್ದಾರೆ. ಅವರಿಗೆ ಸಮಾಧಾನಪಡಿಸುವಷ್ಟು ನಾನು ದೊಡ್ಡವನಲ್ಲ ಎಂದರು.

ತಂದೆಯವರು ಯಾರಿಗೂ ಕೂಡ ರೆಕ್ಮೆಂಡ್ ಮಾಡಿಲ್ಲ. ತನ್ವೀರ್‌ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಿದ್ದರಲ್ಲಿ ತಂದೆ ಪಾತ್ರವಿಲ್ಲ.  ಸಾಕ್ಷಿಯಿಲ್ಲ, ಆಧಾರವಿಲ್ಲ ಸುಮ್ಮನೆ ಹೇಳುತ್ತಾರೆ. ಇಬ್ಬರಿಗೆ ಮುಸ್ಲಿಂ ಕೋಟಾದಲ್ಲಿ ನೀಡಬೇಕಿತ್ತು. ಅದನ್ನ ಹೈಕಮಾಂಡ್ ಭರ್ತಿ ಮಾಡಿದೆ. ಸಿದ್ದರಾಮಯ್ಯ ಅವರು ಎಷ್ಟು ಮಂದಿಗೆ ರೆಕ್ಮೆಂಡ್ ಮಾಡಿದ್ದಾರೋ ಗೊತ್ತಿಲ್ಲ. ಕೆಲವರ ಹೆಸರನ್ನ ತಂದೆವರು ಹೇಳಿದ್ದರು. ಅವರ ಲಿಸ್ಟ್ ನಾನು‌ ನೋಡಿರಲಿಲ್ಲ. ಈ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ತಂದೆಯವರು ಮಹದೇವಪ್ಪ ಪರ‌ ಕೇಳಿದ್ದು ಸತ್ಯ ಎಂದರು.

ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ

ರಾಜ್ಯವು ಹಿಂದೂ ರಾಷ್ಟ್ರವಾಗಬಾರದು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ. ಶೋಷಣೆ ಆದರೆ ನಾವು ಶೋಷಿತರಾಗಿರುತ್ತೇವೆ. ಅವರೆಲ್ಲರೂ ಶೋಷಣೆ ಮಾಡುವುದನ್ನೇ ಮುಂದುವರಿಸುತ್ತಾರೆ. ಆ ಕಾರಣಕ್ಕೆ ಹಿಂದೂರಾಷ್ಟ್ರಕ್ಕೆ ವಿರೋಧವಿದೆ. ಇಷ್ಟು ವರ್ಷಗಳ ಕಾಲ ದೇಶ ಸೆಕ್ಯುಲರ್ ದೇಶವಾಗಿದೆ. ಈಗಲೂ‌ ಭಾರತ ಧರ್ಮಾಧಾರಿತ ರಾಷ್ಟ್ರ ಆಗಿಲ್ಲ. ಧರ್ಮ ನಿರಪೇಕ್ಷಿತ ರಾಷ್ಟ್ರ ಎಂಬುದು ನಮ್ಮ‌ ಹೇಳಿಕೆ ಎಂದರು.

ಅಣೆಕಟ್ಟೆ ತುಂಬಿರುವ ಕಾರಣ ನಾಲೆಗಳಿಗೆ ನೀರು ಬಿಡಬೇಕು ಎಂದ ಸಚಿವ ಯತೀಂದ್ರ ಸಿದ್ದರಾಮಯ್ಯ ಕಂಬಳ ವಿಚಾರದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಸಿಎಂ‌ ನಡೆಯಬೇಕು ಎಂದರೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಜಾತಿ ಆಧಾರಿತ ಪ್ರಾತಿನಿಧ್ಯ ನೀಡಿ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ಪ್ರತಿಕ್ರಿಯಿಸಿದ  ಡಾ.ಯತೀಂದ್ರ  ಸಿದ್ದರಾಮಯ್ಯ, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವು ಅಡೆತಡೆ ಆಗುತ್ತವೆ. ಕೇವಲ ಸಚಿವ ಸ್ಥಾನವಲ್ಲ, ಮಂಡಲದ ಅಧಿಕಾರ ಇರುತ್ತದೆ ಎಂದರು.

ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರು: ಅವರನ್ನೇ ಕೇಳಬೇಕು

ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರು ವಿಚಾರ, ತಂದೆಯವರು ಆವತ್ತು ಹುಟ್ಟುಹಬ್ಬ ಇತ್ತು. ಅವರಿಗೆ ಹೋಗಬಾರದು ಎಂಬುದಿಲ್ಲ. ಶುಭಹಾರೈಸಲು ಹಲವರು ಬಂದಿದ್ದರು. ಆ ಕಾರಣಕ್ಕೆ ಅವರು ಹೋಗಲು ಆಗಲಿಲ್ಲ. ತಂದೆಯವರಿಗೆ ಯಾವುದೇ ಅಸಮಾಧಾನ ಇಲ್ಲ. ತಂದೆಯವರು ಯಾಕೆ ಹೋಗಿಲ್ಲ ಅಂತ ಅವರನ್ನೇ ಕೇಳಬೇಕು ಎಂದರು.

ಈ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ತರುವುದು ಸರಿಯಲ್ಲ

ಮಹಿಳಾ‌ ಕೋಟದಲ್ಲಿ ಸಚಿವ ಸ್ಥಾನ ತಪ್ಪಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಗಾಯತ್ರಿ ಅವರೇ ಹೇಳಿದ್ದಾರೆ, ನಮಗೆ ಯಾರು ತಪ್ಪಿಸಿದ್ದಾರೋ ಗೊತ್ತಿಲ್ಲ ಎಂದು. ಹೀಗಾಗಿ ಈ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ತರುವುದು ಸರಿಯಲ್ಲ. ಪ್ರಮಾಣವಚನಕ್ಕೆ ತೀರ್ಮಾನ ಮಾಡಿದ್ದು ಹೈಕಮಾಂಡ್. ಪಕ್ಷದ ಹಿತ ಎಲ್ಲರಿಗೂ ಮುಖ್ಯ. ಪಕ್ಷ ಇದ್ದರೆ ಮಾತ್ರ ಎಲ್ಲರೂ. ಈ‌ ಕಾರಣಕ್ಕೆ ರಾಜೀನಾಮೆ ಮಾತನ್ನ ಬಿಡಿ. ಪಕ್ಷ ಎಲ್ಲರಿಗೂ ಎಲ್ಲಾ ಅವಕಾಶ ನೀಡುತ್ತದೆ. ಅಲ್ಪ ಅವಧಿಗೆ ದುಡುಕು‌ ನಿರ್ಧಾರ ಬೇಡ ಎಂದರು.

Key words: Mysore- Minister, Yathindra Siddaramaiah, Tanveer Sait,  ministerial post

The post ತನ್ವೀರ್ ಸೇಠ್ ಗೆ ಮಂತ್ರಿ ಸ್ಥಾನ ಕೈತಪ್ಪಿದ್ದರಲ್ಲಿ ನಮ್ಮ ತಂದೆ ಪಾತ್ರವಿಲ್ಲ- ಸಚಿವ ಯತೀಂದ್ರ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಂಸತ್ ‘ಕೈ’ ಅಭ್ಯರ್ಥಿ: ಸಚಿವರ ಭಿನ್ನರಾಗ..
ಮೈಸೂರು,ಫೆಬ್ರವರಿ,6,2024(www.justkannada.in):  ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು ಎಲ್ಲಾ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಈಗಿನಿಂದಲೇ ಶುರುವಾಗಿದೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿ ಸಚಿವರ ಸ್ಪರ್ಧೆ  ಬಗ್ಗೆಯೂ ತೀವ್ರ ಚರ್ಚೆ ನಡೆಯುತ್ತಿದ್ದು ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಿನ್ನ ಹೇಳಿಕೆಗಳನ್ನ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್,  ಲೋಕಸಭೆಯಲ್ಲಿ ಸಚಿವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಸಚಿವರು ಸ್ಪರ್ಧೆ ಮಾಡಿದರೆ ತಪ್ಪೇನು ? ಎಂದು ಪ್ರಶ್ನಿಸಿದ್ದಾರೆ.  ಕೆಲವು ಆಂತರಿಕ ಚರ್ಚೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್ ನಿರ್ಧಾರ. ಅವರ ತೀರ್ಮಾನಕ್ಕೆ ಎಲ್ಲರೂ ಬದ್ದ. ಅವರು ಹೇಳಿದರೆ ಸ್ಪರ್ಧೆ ಮಾಡಲೇ ಬೇಕು. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತೇವೆ- ಸಚಿವ ಮಧು ಬಂಗಾರಪ್ಪ.

ಇತ್ತ ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಯಾರು ಗೆಲ್ಲುತ್ತಾರೋ ಅವರನ್ನು ನಿಲ್ಲಿಸುತ್ತೇವೆ. ಮಿನಿಸ್ಟರ್ ಆದ್ರೆ ಏನು..? ಕಾರ್ಯಕರ್ತ ಆದ್ರೆ ಏನು..?   ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತೇವೆ ಎಂದಿದ್ದಾರೆ.

ಹಾಗೆಯೇ ಸಚಿವರ ಸ್ಫರ್ಧೆ ಬಗ್ಗೆ ಸಿಎಂ ಡಿಸಿಎಂ ನೋಡಿಕೊಳ್ಳುತ್ತಾರೆ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ..? ಯಾರನ್ನೂ ನಿಲ್ಲಿ ಅನ್ನೋತ್ತದೆಯೋ ಅವರು ನಿಲ್ಲುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಧ್ರುವೀಕರಣ ಇಲ್ಲ ಎಂದು ತಿಳಿಸಿದ್ದಾರೆ.

ಸಚಿವರ ಸ್ಪರ್ಧೆ ಬಗ್ಗೆ ದಿನೇಶ್ ಗುಂಡೂರಾವ್ ಒಳ್ಳೆಯ ಬೆಳವಣಿಗೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೇ ಇತ್ತ ಸಚಿವ ಮಧು ಬಂಗಾರಪ್ಪ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುತ್ತೇವೆ ಎನ್ನುವ ಮೂಲಕ ಭಿನ್ನ ಹೇಳಿಕೆ ನೀಡಿದ್ದಾರೆ.

Key words: mysore-Minister-Dinesh Gundurao-Madhu Bangarappa

The post ಸಂಸತ್ ‘ಕೈ’ ಅಭ್ಯರ್ಥಿ: ಸಚಿವರ ಭಿನ್ನರಾಗ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವ ಸಿದ್ದತೆ ಬಗ್ಗೆ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್
ಮೈಸೂರು,ಜುಲೈ,5,2021(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕಳೆದ ಬಾರಿಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ಮಾದರಿಯಲ್ಲಿ ಈ ಬಾರಿಯೂ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆ ನಡೆಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿಲ್ಲ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಎಸ್ ಎಸ್ ಎಲ್ ಸಿ ನಂತರ ಪಿಯುಸಿಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಪರೀಕ್ಷೆ ನಡೆಸುವ ಸಂಬಂಧ ಈ ವಾರವೇ ಎಲ್ಲಾ ಜಿಲ್ಲೆಗಳ ಡಿಡಿಪಿಐ ಮತ್ತು ಬಿಇಒ ಗಳ ಸಭೆ ನಡೆಸಲಾಗುವುದು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ, ಅನುಮಾನಗಳನ್ನು ಹೋಗಲಾಡಿಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಈಗಾಗಲೇ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿದೆ. ಈ ಮೂಲಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ರಾಜ್ಯದಲ್ಲಿ 8 ಲಕ್ಷ 76 ಸಾವಿರದ 581 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ. ಇಷ್ಟೊಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಳೆದ ಬಾರಿಯಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿ ಕೇವಲ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಸಿದ್ದತೆಯ ಬಗ್ಗೆ ಮಾತ್ರ ಸುರೇಶ್ ಕುಮಾರ್ ಸಮರ್ಪಕ ಉತ್ತರ ನೀಡಿದರು.

ಎಚ್ ವಿಶ್ವನಾಥ್ ನೀಡಿರುವ ಹೇಳಿಕೆ ಬಗ್ಗೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡು ಯಾವುದೇ ಪ್ರತಿಕ್ರಿಯೆ ನೀಡದೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಥಳದಿಂದ ನಿರ್ಗಮಿಸಿದರು.

Key words: mysore-Minister -Suresh Kumar- preparation – SSLC-examination

The post  ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವ ಸಿದ್ದತೆ ಬಗ್ಗೆ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಿಸಿದ ಸಚಿವ ಎಸ್ ಟಿ ಸೋಮಶೇಖರ್….
ಮೈಸೂರು,ಜೂ,8,2020(www.justkannada.in):  ನಂಜನಗೂಡಿನಲ್ಲಿ ಏರ್ಪಡಿಸಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡುವ ಕಾರ್ಯಕ್ರಮಕ್ಕೆ ಚೆಕ್ ವಿತರಣೆ ಮಾಡುವ ಮೂಲಕ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಚಾಲನೆ ನೀಡಿದರು.

ಶಾಸಕ ಹರ್ಷವರ್ಧನ್ ಮಾತನಾಡಿ, ಕೊರೋನಾ ಈಗ ನಿಯಂತ್ರಣಕ್ಕೆ ಬಂದಿರಬಹುದು. ಆದರೆ, ಇದಕ್ಕೆ ಔಷಧಿ ಬರುವವರೆಗೆ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ. ಮಾಸ್ಕ್ ಧರಿಸಿಯೇ ಓಡಾಡೋಣ, ಸ್ಯಾನಿಟೈಸರ್ ಬಳಸೋಣ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ನಂಜನಗೂಡಿನಲ್ಲಿನ ಕೊರೋನಾ ಸೋಂಕು ಪತ್ತೆಯಾದ ದಿನದಿಂದ ಇಲ್ಲಿನ ಜನತೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಎಲ್ಲ ಕಡೆ ಲಾಕ್ ಡೌನ್ ಸಡಿಲಗೊಳಿಸಿದ್ದರೂ ನಂಜನಗೂಡಿನಲ್ಲಿ ಕಠಿಣ ನಿಲುವನ್ನು ಸಡಿಲಗೊಳಿಸಿರಲಿಲ್ಲ. ಆದರೂ ತಾಲೂಕಿನ ಜನತೆ ಸಹಾಕಾರ ನೀಡಿದ್ದನ್ನು ಮರೆಯಲಾಗದು. ಇನ್ನು ಮುಂದೂ ಸಹ ಸವಾಲುಗಳು ಇರಲಿದ್ದು, ದಯಮಾಡಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಬರುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹಳಷ್ಟಿದೆ. ಅವರ ಸೇವೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆಯೊಂದರಿಂದಲೇ 3 ಸಾವಿರ ರೂಪಾಯಿ ಗೌರವಧನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಹಿಂದೆ ಸಹಕಾರ ಸಚಿವರಾದ ಸೋಮಶೇಖರ್ ಅವರ ಶ್ರಮ ಇದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಬಿಸ್ವಾಸ್ ಇತರ ಪ್ರಮುಖರು ಇದ್ದರು.

Key words: mysore-Minister -ST Somashekhar –distributed- relief -Asha worker

The post ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಿಸಿದ ಸಚಿವ ಎಸ್ ಟಿ ಸೋಮಶೇಖರ್…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾ ಮಹಾಮಾರಿ ಎದುರಿಸಲು ಪ್ರಧಾನಿ ಮೋದಿ ಇಡೀ ದೇಶಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ -ಸಚಿವ ಎಸ್.ಟಿ ಸೋಮಶೇಖರ್ ಬಣ್ಣನೆ…
ಮೈಸೂರು,ಜೂ,5,2020(www.justkannada.in):  ಪ್ರಧಾನಮಂತ್ರಿಗಳು 6 ವರ್ಷ ಮಾಡಿದ ಸಾಧನೆ, ಕೋವಿಡ್ 19 ಸಂದರ್ಭದಲ್ಲಿ ಮಹಾಮಾರಿಯನ್ನು ಎದುರಿಸಲು ಇಡೀ ದೇಶಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಇದಕ್ಕೋಸ್ಕರ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯಕ್ಕಾಗಿಯೇ 40 ಸಾವಿರ ಕೋಟಿ ರೂಪಾಯಿಯನ್ನು ಆರ್ಡಿಪಿಆರ್ ಮೂಲಕ ಕೊಡಲಾಗಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

“ಜನರೇ ಪ್ರೇರಕ ನಾನು ಪ್ರಧಾನ ಸೇವಕ” ಎಂಬ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ ಪ್ರತಿಯನ್ನು ಕೃಷ್ಣರಾಜ ಕ್ಷೇತ್ರದ ಮೂಲಕ ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಯಾವುದೇ ಒಂದು ಕೇಂದ್ರ ಸರ್ಕಾರದ ಯೋಜನೆ ಇದ್ದರೂ ಅದನ್ನು ಮೊದಲು ಕಾರ್ಯಾರಂಭ ಮಾಡುವುದು ಶಾಸಕರಾದ ರಾಮದಾಸ್ ಅವರು. ಅದೇ ರೀತಿ ನಾಳೆ ಶಾಸಕರಾದ ನಾಗೇಂದ್ರ ಅವರೂ ಸಹ ಚಾಲನೆ ನೀಡಲಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಶಾಸಕರಾದ ಎಸ್.ಎ.ರಾಮದಾಸ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋಡಿ ಅವರ ನೇತೃತ್ವದ ಕೇಂದ್ರ ಸರ್ಕಾರ ಇಂದು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದು ಪ್ರತಿಯೊಬ್ಬ ನಾಗರಿಕರಿಗೂ ಮುಟ್ಟಬೇಕು. ಆ ಕೆಲಸವನ್ನು ನಮ್ಮ ಪಕ್ಷದ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಹೇಳಿದರು.

ಶಾಸಕರಾದ ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಎನ್. ಶ್ರೀವತ್ಸ, ಮುಖಂಡರಾದ ಪಿ.ರಾಜೀವ್‌ ಇತರರು ಇದ್ದರು. ಮನೆ ಮನೆಗೆ ವಿತರಿಸಿದ ಸಚಿವರು

“ಜನರೇ ಪ್ರೇರಕ ನಾನು ಪ್ರಧಾನ ಸೇವಕ” ಎಂಬ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ ಪ್ರತಿಯನ್ನು ಕೃಷ್ಣರಾಜ ಕ್ಷೇತ್ರದ ನಾಗರಿಕರ ಮನೆಗೆ ವಿತರಿಸುವ ಮೂಲಕ ಸಚಿವ ಸೋಮಶೇಖರ್ ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು.

Key words: mysore- minister –st somashekar-PM Modi

The post ಕೊರೋನಾ ಮಹಾಮಾರಿ ಎದುರಿಸಲು ಪ್ರಧಾನಿ ಮೋದಿ ಇಡೀ ದೇಶಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ -ಸಚಿವ ಎಸ್.ಟಿ ಸೋಮಶೇಖರ್ ಬಣ್ಣನೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…?
ಮೈಸೂರು,ಮೇ,29,2020(www.justkannada.in):  ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಹ ಸಭೆ ನಡೆದಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಈಗ ಏನಿದ್ದರೂ ಕೊರೊನಾ ವಿರುದ್ದದ ಹೋರಾಟ. ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸಿಎಂಗೆ ಬಿಟ್ಟ ವಿಚಾರ. ಪರಿಷತ್ ಚುನಾವಣೆ ಇನ್ನು ಘೋಷಣೆಯಾಗಿಲ್ಲ. ಇನ್ನು ಆಪರೇಷನ್ ಹಸ್ತ ವಿಚಾರ. ಈಗ ಆಪರೇಷನ್ ಕೊರೊನಾ ಮಾಡಬೇಕಿದೆ. ಎಲ್ಲಾ ಪಕ್ಷದವರು ಕೊರೊನಾ ವಿರುದ್ದದ ಹೋರಾಟದತ್ತ ಗಮನಹರಿಸಬೇಕು. ತಮ್ಮ ಸಮಯವನ್ನು ಅದಕ್ಕೇ ಮೀಸಲಿಡಬೇಕು ಎಂದು  ಕರೆ ನೀಡಿದರು.

ಮಕ್ಕಳ ಆನ್‌ಲೈನ್ ಕ್ಲಾಸ್‌ಗೆ ತಿಲಾಂಜಲಿ ಇಟ್ಟ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್….

ಮಕ್ಕಳ ಆನ್‌ಲೈನ್ ಕ್ಲಾಸ್‌ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಈ ಬಗ್ಗೆ ಮಾನಸಿಕ ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ನಿಮ್ಹಾನ್ಸ್ ವೈದ್ಯರಿಂದ ಸಂಪೂರ್ಣ ವರದಿ 6 ವರ್ಷದ ಮಕ್ಕಳವರೆಗೆ ಆನ್‌ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಅವರ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಶೈಕ್ಷಣಿಕ ವರ್ಷದ ಆರಂಭ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇಕಡಾ 90ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದರಿಲ್ಲ. ಹೀಗಾಗಿ ಕೇಂದ್ರದ ಮಾರ್ಗದರ್ಶಿ ಬಂದ ನಂತರ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಫ್ಲೈ ಓವರ್‌ಗೆ ಸಾವರ್ಕರ್ ಹೆಸರು: ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಫ್ಲೈ ಓವರ್‌ಗೆ ಸಾವರ್ಕರ್ ಹೆಸರು ವಿಚಾರ ಸಂಬಂಧ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆಗೆ ವಿರೋಧಕ್ಕೆ ಮಣಿದಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿವಾಗಿ ಮುಂದೂಡಿದ್ದೇವೆ. ಬೆಳಗ್ಗೆ  10 ಗಂಟೆಗೆ ಪ್ರತಿಭಟನೆ ಮಾಡಿ 11 ಗಂಟೆಗೆ ಅರೆಸ್ಟ್ ಆಗಿ  12 ಗಂಟೆಗೆ ಬಿಡುಗಡೆಯಾಗಿ ಬಂದವರಿಗೆ ಸಾವರ್ಕರ್ ಪ್ರತಿಭಟನೆ ಬಗ್ಗೆ ಏನು ಗೊತ್ತು ? ಎಂದು ಸಚಿವ ಸುರೇಶ್ ಕುಮಾರ್ ಫ್ಲೈ ಓವರ್‌ಗೆ ಸಾವರ್ಕರ್ ಹೆಸರು ನಾಮಕರಣ ಮಾಡಲು ವಿರೋಧಿಸುವವರಿಗೆ ಚಾಟಿ ಬೀಸಿದರು.

Key words: mysore- minister- suresh kumar-BJP-MLAs- meeting

The post ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಎರಡೂ ರಾಜ್ಯಗಳ ಗೆಲುವಿನ ಶ್ರೇಯಸ್ಸು ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಸಲ್ಲುತ್ತೆ: ಅನರ್ಹ ಶಾಸಕರಿಗೆ ಟಿಕೆಟ್ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದು ಹೀಗೆ…
ಮೈಸೂರು,ಅ,24,2019(www.justkannada.in): ಮಹಾರಾಷ್ಟ್ರ ಹರಿಯಾಣ  ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು ಎರಡು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಸತಿ ಸಚಿವ ವಿ.ಸೋಮಣ್ಣ, ಈ ಎರಡೂ ರಾಜ್ಯದ ಗೆಲುವಿನ ಶ್ರೇಯಸ್ಸು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಗೆ ಸಲ್ಲಬೇಕು ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ,  ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಮೇಲೆ ಈ ದೇಶಕ್ಕೆ ಒಂದೇ ದೇಶ ಒಂದೇ ಕಾನೂನು ಎಂಬ ಭಾವನೆಗೆ ಜನ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎನ್ನುವುದಕ್ಕೆ ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ದಿಕ್ಸೂಚಿ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಹಾಗೂ ಎರಡು ರಾಜ್ಯದ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಉಪ ಚುನಾವಣೆಯಲ್ಲಿ ಕೂಡ ಬಿಜೆಪಿ  ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿಗೆ ಜಾಮೀನು ಸಿಕ್ಕಿದ್ದಕ್ಕೆ ಸಂತಸ…

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ  ಜಾಮೀನು ಸಿಕ್ಕರುವುದು ಸಂತೋಷ, ಅದನ್ನ ಸ್ವಾಗತಿಸುತ್ತೇನೆ. ಕಾನೂನು ಎಲ್ಲರಿಗೂ ದೊಡ್ಡದು ಎಂದು ಅವರೇ ಹೇಳಿದ್ದಾರೆ.  ಅವರಿಗೆ ಒಳ್ಳೆಯದಾಗಲಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಅನರ್ಹ ಶಾಸಕರಿಗೆ ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ….

ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲಿ ವಿರೋಧವಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ ಅವರವರ ಭಾವನೆಗಳನ್ನ ಅವರು ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ಅಭಿವೃಧ್ಧಿಯನ್ನ ಮಂತ್ರವಾಗಿರಿಸಿಕೊಂಡಿರುವ ರಾಷ್ಟ್ರೀಯ ಪಕ್ಷ ಅಂದ ಮೇಲೆ ಇವೆಲ್ಲಾ ಇರುತ್ತದೆ. ಇದನ್ನ ನಿಭಾಯಿಸುವ ನೈಪುಣ್ಯತೆ ಸಿಎಂ ಬಿಎಸ್ ವೈ ಹಾಗೂ ರಾಷ್ಟ್ರನಾಯಕರಿಗಿದೆ ಎಂದರು.

ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿದ್ದೇನೆ.  ಇಂದು ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿ ಚಾಮುಂಡಿ ಬೆಟ್ಟ, ನಂಜನಗೂಡು ಸೇರಿದಂತೆ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡುತ್ತೇನೆ. ನಾಳೆ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ.  ಮಳೆ ನಿಲ್ಲುವವರೆಗೂ ಯಾವುದೇ ಶಾಶ್ವತ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

Key words: mysore- minister- V.Somanna- pm modi- amith sha- credit- two state- election

The post ಎರಡೂ ರಾಜ್ಯಗಳ ಗೆಲುವಿನ ಶ್ರೇಯಸ್ಸು ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಸಲ್ಲುತ್ತೆ: ಅನರ್ಹ ಶಾಸಕರಿಗೆ ಟಿಕೆಟ್ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದು ಹೀಗೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.