mysore-maharani college Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ- ಡಾ. ತೇಜಸ್ವಿನಿ ಸಲಹೆ
ಮೈಸೂರು, ಫೆಬ್ರವರಿ, 17, 2026 (www.justkannada.in): ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ ಎಂದು ಡಾ. ತೇಜಸ್ವಿನಿ ಕಿವಿಮಾತು ಹೇಳಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿ ಕ್ಷೇಮಪಾಲನೆ  ಸಮಿತಿ, ಲೈಂಗಿಕ ಕಿರುಕುಳ ತಡೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತ ಆಶ್ರಯದಲ್ಲಿ ಪಿಸಿಒಡಿ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತೇಜಸ್ವಿನಿ, ಪಿಸಿಒಡಿ  ಸಮಸ್ಯೆಯ ಕಾರಣಗಳು, ಲಕ್ಷಣಗಳು, ಪರಿಣಾಮಗಳು ಹಾಗೂ ಚಿಕಿತ್ಸೆ ಕುರಿತು ಉಪನ್ಯಾಸದಲ್ಲಿ ವಿವರವಾಗಿ ತಿಳಿಸಿದರು.  ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆ ನೀಡಿದರು.

ಡಾ. ಆಯೀಷಾ ಅಮ್ ರೀತ್ ಮಾತನಾಡಿ, ಯುವತಿಯರಲ್ಲಿ ಹಾರ್ಮೋನ್ ಅಸಮತೋಲನ, ಅಸಮಯದ ಮಾಸಿಕ ಚಕ್ರ, ತೂಕ ಹೆಚ್ಚಳ, ಮೊಡವೆ, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.  ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಯೋಗಾಭ್ಯಾಸ ಹಾಗೂ ಮಾನಸಿಕ ಒತ್ತಡ ನಿಯಂತ್ರಣದ ಅಗತ್ಯತೆಯನ್ನು ಒತ್ತಿಹೇಳಿದರು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯಲು ತಿಳಿಸಿದರು.

ವಿದ್ಯಾರ್ಥಿನಿಯರು ಮತ್ತು ಮಹಿಳಾ ಅಧ್ಯಾಪಕರು ಹಾಗು ಅಧ್ಯಪಕೇತರರ ಜತೆ ಸಂವಹನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿಯ ಸಂಯೋಜಕ ಡಾ. ಪ್ರೀತಿ ಎನ್. ತಲ್ಲೂರು ಅವರು ಅತಿಥಿಗಳನ್ನು ಹಾಗೂ ವಿದ್ಯಾರ್ಥಿನಿಯರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಎಂ. ಅವರು ವಹಿಸಿದ್ದರು. IQAC ಸಂಯೋಜಕ  ಡಾ. ನಂದಕುಮಾರ್ ವಿ. ಅಧ್ಯಪಕರಾದ ರಾಜೇಶ್ವರಿ, ಬೃಂದಾ ಎನ್, ಸುಧಾ ಎಂ.ಸಿ., ಲೀಲಾವತಿ ಎನ್.ಕೆ., ಮಮತಾ ಎಂ., ಡಾ. ಲಕ್ಷ್ಮಿ ಎಂ ಪಲ್ಲೋಟಿ ಹಾಗೂ  ಸಿದ್ದುರಾಜು ಸಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Be careful, PCOD, Mysore maharani college

The post ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ- ಡಾ. ತೇಜಸ್ವಿನಿ ಸಲಹೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್: ಸಂಶೋಧನಾ ಸಮುದಾಯಕ್ಕೆ ಪರಿಣಾಮಕಾರಿ- ಡಾ. ನಂದೀಶ
ಮೈಸೂರು,ನವೆಂಬರ್,17,2025 (www.justkannada.in): ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್ ಪ್ರಯೋಜನಗಳು ಸಂಶೋಧನಾ ಸಮುದಾಯಕ್ಕೆ ಪರಿಣಾಮಕಾರಿಯಾಗಿದೆ ಎಂದು ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆಯ (AIISH) ಸಹಾಯಕ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿ ಡಾ. ನಂದೀಶ ತಿಳಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ), ಮೈಸೂರಿನಲ್ಲಿ ಆಯೋಜಿಸಿದ್ದ  “ಒನ್ ನೇಶನ್ ಒನ್ ಸಬ್‌ಸ್ಕ್ರಿಪ್ಷನ್ (ONOS)” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್’ (ONOS) ಕುರಿತು ಪ್ರಾಯೋಗಿಕ ದೃಷ್ಟಿಕೋನದೊಂದಿಗೆ ವಿವರವಾದ ಮಾಹಿತಿ ನೀಡಿದರು. ದೇಶವ್ಯಾಪಿ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ONOS ಯೋಜನೆ ನೀಡುವ ಸೌಲಭ್ಯಗಳು, ಸಂಪನ್ಮೂಲಗಳ ಏಕೀಕರಣ, ಪ್ರಕಟಣಾ ಪ್ರವೇಶ ಹಕ್ಕುಗಳ ಸುಗಮತೆ, ಯೋಜನೆಯ ಅಗತ್ಯ, ಉದ್ದೇಶಗಳು ಮತ್ತು ದೇಶದ ಸಂಶೋಧನಾ ಸಮುದಾಯಕ್ಕೆ ಇದು ತರಬಲ್ಲ ಪರಿಣಾಮಕಾರಿ ಪ್ರಯೋಜನಗಳು ಸೇರಿದಂತೆ ಹಲವು ಅಂಶಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರೆಹಮಾನ ಎಂ, ಮಾಹಿತಿ ಸಂಪನ್ಮೂಲಗಳ ಹಂಚಿಕೆ ಹಾಗೂ ದೇಶದಾದ್ಯಂತ ಜ್ಞಾನ ಲಭ್ಯತೆ ಸುಗಮವಾಗಿಸುವಲ್ಲಿ ONOS ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ  ಡಾ. ನಂದಕುಮಾರ್ ವಿ. ಕಾಲೇಜಿನ ಗ್ರಂಥಪಾಲಕ ಜೈಪ್ರಕಾಶ್, ಎಚ್. ಎಲ್. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Key words: One Nation, One Subscription,Mysore maharani college

The post ‘ಒನ್ ನೇಷನ್ ಒನ್ ಸಬ್‌ ಸ್ಕ್ರಿಪ್ಷನ್: ಸಂಶೋಧನಾ ಸಮುದಾಯಕ್ಕೆ ಪರಿಣಾಮಕಾರಿ- ಡಾ. ನಂದೀಶ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾಳೆ ಮೈಸೂರು ಮಹಾರಾಣಿ ಕಾಲೇಜಿಗೆ ADB ಬ್ಯಾಂಕ್ ಸದಸ್ಯರ ತಂಡ ಭೇಟಿ
ಮೈಸೂರು,ಜೂನ್,11,2025 (www.justkannada.in): ನಾಳೆ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜುಗಳಿಗೆ ADB ಬ್ಯಾಂಕ್ ಸದಸ್ಯರ ತಂಡ ಭೇಟಿ ನೀಡಲಿದ್ದು ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್(ADB) ನಡುವೆ ಆಗಿರುವ ಒಡಂಬಡಿಕೆಯ ಭಾಗವಾಗಿ ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ ಪ್ರಾರಂಭವಾದ ಈ ಯೋಜನೆಯ ಪೂರ್ವಭಾವಿ ತಯಾರಿ ಎಲ್ಲವೂ ಪೂರ್ಣಗೊಂಡಿದ್ದು ಇದೀಗ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕದ  440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು,  107 ಪಾಲಿಟೆಕ್ನಿಕ್ ಕಾಲೇಜುಗಳು ಹಾಗೂ 16 ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳ ಉನ್ನತೀಕರಣ, ವಿದ್ಯಾರ್ಥಿನಿಯರಲ್ಲಿ  ಉದ್ಯೋಗ ಕೌಶಲ್ಯಗಳ ಅಭಿವೃದ್ಧಿಗಾಗಿ 2500 ಕೋಟಿ  ರೂಪಾಯಿಗಳನ್ನು ADB ಬ್ಯಾಂಕ್  ಸಾಲವಾಗಿ ಕರ್ನಾಟಕ ಸರ್ಕಾರಕ್ಕೆ ಒದಗಿಸುತ್ತಿದೆ.

ಈ ಹಿನ್ನೆಲೆಯಲ್ಲಿ ADB ಬ್ಯಾಂಕ್ ನ  9 ಸದಸ್ಯರ ತಂಡವು  ಜೂನ್ 12(ನಾಳೆ) ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜುಗಳಿಗೆ ಭೇಟಿ ನೀಡುತ್ತಿದೆ. ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಚರ್ಚೆ,  ಕಾಲೇಜಿನ ಪ್ರಾಧ್ಯಾಪಕರು,  ವಿದ್ಯಾರ್ಥಿನಿಯರು,  ಹಳೆ ವಿದ್ಯಾರ್ಥಿನಿಯರು ಹಾಗೂ ಪೋಷಕರ ಜೊತೆಗೆ ಚರ್ಚೆ ಮತ್ತು ಸಂವಾದವನ್ನು  ನಡೆಸಲಿದೆ.

ಉನ್ನತ ಶಿಕ್ಷಣ ಸಚಿವ  ಡಾ. ಎಂ ಸಿ ಸುಧಾಕರ್, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ. ಜಗದೀಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಮತ್ತು ನಿರ್ದೇಶಕರಾದ ಪ್ರೊ. ಶೋಭಾ ಅವರು  ADB ತಂಡದ ಜೊತೆಗೆ ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

Key words:  team, ADB Bank, members, visits, Mysore Maharani College

The post ನಾಳೆ ಮೈಸೂರು ಮಹಾರಾಣಿ ಕಾಲೇಜಿಗೆ ADB ಬ್ಯಾಂಕ್ ಸದಸ್ಯರ ತಂಡ ಭೇಟಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸರ್ಕಾರಿ ಕಾಲೇಜಿನ ಬಡಮಕ್ಕಳು ಉದ್ಯೋಗ ಮೇಳ ಸದುಪಯೋಗಪಡಿಸಿಕೊಳ್ಳಿ- ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಕರೆ.
ಮೈಸೂರು,ಫೆಬ್ರವರಿ,8,2023(www.justkannada.in): ಸರ್ಕಾರಿ ಕಾಲೇಜಿನ ಬಡಮಕ್ಕಳು ಜೀವನ ರೂಪಿಸಿಕೊಳ್ಳಲು ಈ ಉದ್ಯೋಗ ಮೇಳ ಅನುಕೂಲ ಮಾಡಿಕೊಟ್ಟಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಕರೆ ನೀಡಿದರು.

ಸಮರ್ಥನಂ ಅಂಗವಿಕರ ಸಂಸ್ಥೆ ಮತ್ತು  ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಉದ್ಯೋಗ ಮೇಳವನ್ನ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಉದ್ಘಾಟಿಸಿ ಮಾತನಾಡಿದರು.

ಜೀವನ ರೂಪಿಸಿಕೊಳ್ಳಲು  ಉದ್ಯೋಗ ಮೇಳ ಸಹಕಾರಿ. ಇಂತಹ ಉದ್ಯೋಗಮೇಳಗಳನ್ನ ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಳ್ಳಿ. ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಿ ಎಂದು ಲಕ್ಷ್ಮಣ್ ಕುಲಗೋಡ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್,  ಆರ್ಥಿಕ ಭದ್ರತೆಗೆ ಉದ್ಯೋಗ ಮುಖ್ಯ. ಕೆಲಸ ಗಳಿಸಲು ಕೌಶಲ್ಯ ಬೆಳೆಸಿಕೊಳ್ಳಿ. ಉದ್ಯೋಗ ಲಭ್ಯವಿದೆ. ವಿದ್ಯಾರ್ಹತೆ ಜತೆಗೆ ಕೌಶಲ್ಯ ಇದ್ದರೆ ಕೆಲಸ ದೊರೆಯಲಿವೆ ಎಂದು ಸಲಹೆ ನೀಡಿದರು.

Key words: mysore-maharani college- job fair- Joint Director -Laxman Kulgoda

The post ಸರ್ಕಾರಿ ಕಾಲೇಜಿನ ಬಡಮಕ್ಕಳು ಉದ್ಯೋಗ ಮೇಳ ಸದುಪಯೋಗಪಡಿಸಿಕೊಳ್ಳಿ- ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಕರೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.