movement Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ
ಬೆಳಗಾವಿ, ಡಿಸೆಂಬರ್​ ,9,2024 (www.justkannada.in):   ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ  ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣಸೌಧಕ್ಕೆ ನಾಳೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ಹೋರಾಟಗಾರರಿಗೆ ಸರ್ಕಾರ ಶಾಕ್ ನೀಡಿದೆ.

2ಎ ಮೀಸಲಾತಿಗಾಗಿ‌ ಆಗ್ರಹಿಸಿ ಡಿಸೆಂಬರ್ 10 ರಂದು  ಸುವರ್ಣಸೌಧಕ್ಕೆ ಟ್ರ್ಯಾಕ್ಟರ್​ ಮೂಲಕ ಮುತ್ತಿಗೆ ಹಾಕಲು ಪಂಚಮಸಾಲಿ ಸಮುದಾಯ ಕರೆ ನೀಡಿತ್ತು. ಬಸವ ಜಯಮೃತ್ಯುಂಜಯಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ. ಡಿ.10ರಂದು ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆಗೆ ನಿರ್ಧರಿಸಿದ್ದರು.

ಆದರೆ ಇದೀಗ ಡಿಸೆಂಬರ್ 9, 10ರಂದು ಹೋರಾಟದ ವಾಹನ ಬೆಳಗಾವಿ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಹೋರಾಟಕ್ಕೆ ಬರುವ ಟ್ರ್ಯಾಕ್ಟರ್, ಕ್ರೂಸರ್ ವಾಹನಗಳಿಗೆ ನಿರ್ಬಂಧ ಹೇರಿ ಡಿಸಿ ಮೊಹಮ್ಮದ್ ರೋಷನ್​​ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಈ ಕುರಿತು ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಪಂಚಮಸಾಲಿ 2A ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರೆ ಹೋರಾಟದಲ್ಲಿ ಟ್ರ್ಯಾಕ್ಟರ್, ಕ್ರೂಸರ್ ವಾಹನ ನಿಷೇಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡಬಾರದು ಎಂದು ಕಿಡಿಕಾರಿದರು.

Key words:  government, shock, Panchamasali reservation, movement.

The post ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನಲ್ಲಿ ಬಾರುಕೋಲು ಚಳುವಳಿ: ರಾಜಕಾರಣಿಗಳಿಗೆ ಚಾಟಿ ಏಟಿನಿಂದ ಎಚ್ಚರಿಕೆ ಕೊಟ್ಟ ಕಬ್ಬು ಬೆಳೆಗಾರರು.
ಮೈಸೂರು,ನವೆಂಬರ್,7,2022(www.justkannada.in):  ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ  ಕಬ್ಬುಬೆಳೆಗಾರರ ಸಂಘದ ವತಿಯಿಂದ ರೈತಮುಖಂಡರು ಇಂದು ಮೈಸೂರಿನಲ್ಲಿ ಬಾರುಕೋಲು ಚಳುವಳಿ ನಡೆಸಿ ರಾಜ್ಯದ ಎಂ ಎಲ್ ಎ, ಎಂ ಪಿ, ಮಂತ್ರಿಗಳಿಗೆ ಚಾಟಿ ಏಟಿನಿಂದ ಎಚ್ಚರಿಕೆ ನೀಡಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ರೈತಮುಖಂಡರು ನಡೆಸುತ್ತಿರುವ ಹೋರಾಟ   8 ನೇ ದಿನಕ್ಕೆ ಮುಂದುವರೆದಿದ್ದು ಇಂದು ಬಾರ್ ಕೋಲು ಚಳುವಳಿ ನಡೆಸಿ ಅಣಕು ಪ್ರದರ್ಶನ ಮಾಡಿ ಮುಂದಿನ ಚುನಾವಣೆಯಲ್ಲಿ ನಮ್ಮ ಬಳಿ ಬಂದರೆ ಇದೇ ರೀತಿ ಚಾಟಿ ಕೊಟ್ಟು ಮನೆಗೆ ಕಳುಹಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಬಾರ್ ಕೋಲ್ ಚಳುವಳಿಯ ನೇತೃತ್ವ ವಹಿಸಿ ಮಾತನಾಡಿದ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ , ಸರ್ಕಾರ ಮಾರ್ವಾಡಿಗಳ ಬಂಡವಾಳಶಾಹಿಗಳ ರಿಮೋಟ್ ಕಂಟ್ರೋಲ್  ರೀತಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರು ಬಲಿಪಶುಗಳಾಗುತ್ತಿದ್ದಾರೆ.  ಟನ್ ಕಬ್ಬಿಗೆ 7500ರೂ ಗೂ ಹೆಚ್ಚು ಆದಾಯ ಇದೆ.  ಒಂದು ಟನ್ ಕಬ್ಬಿನಿಂದ ನೂರು ಲೀಟರ್ ಯಥನಾಲ್ ಬರುತ್ತದೆ.  ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ ಲೀಟರಿಗೆ 65 ರೂ, ಹಾಗೂ ಕಬ್ಬಿನ ಸಿಪ್ಪೆಯಿಂದ 144 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ನಂತರ ಮಡ್ಡಿಯಿಂದ ಗೊಬ್ಬರ ಉತ್ಪಾದಿಸಲಾಗುತ್ತದೆ.  ಎಲ್ಲಾ ಸೇರಿ 7500 ಆದಾಯ ಬರುತ್ತದೆ.  ವರ್ಷಕಾಲ ಕಷ್ಟಪಟ್ಟು ಬೆಳೆದ ರೈತನಿಗೆ 3000 ಮಾತ್ರ, ಯಾಕೆ ಈ ರೀತಿ ಅನ್ಯಾಯ ಎಂಬುದು ನಮ್ಮ ಪ್ರಶ್ನೆ ಎಂದು ಚಾಟಿ ಬೀಸಿದರು.

60 -70 ವರ್ಷಗಳಿಂದ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಗಣಕಿಕರಣವಾಗುವಾಗ, ದಳ್ಳಾಳಿಗಳು ರಿಯಲ್ ಎಸ್ಟೇಟ್ ಮಾಫಿಯಾದವರು ಬೆಂಗಳೂರು ಮೈಸೂರು ನಗರದಲ್ಲಿರುವ ಹಣ ಕೊಟ್ಟ ಶ್ರೀಮಂತರೇ ಹೆಸರಿಗೆ ದಾಖಲಾತಿಗಳನ್ನು ಸೃಷ್ಟಿ ಮಾಡಿ ರಾಜ್ಯದಲ್ಲಿ ಲಕ್ಷಾಂತರ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ಮಾಡುತ್ತಿದ್ದಾರೆ, ನಿಜವಾಗಿ  ಸಾಗುವಳಿ ಮಾಡುತ್ತಿದ್ದ ರೈತರಿಗೆ ಅನ್ಯಾಯವಾಗುತ್ತಿದೆ ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ನ್ಯಾಯ ಕೊಡಬೇಕು ಎಂಬುದು ನಮ್ಮ ಹೋರಾಟದ ಗುರಿ.  ಆದರೆ ಎಂಎಲ್ಎ ,ಮಂತ್ರಿಗಳು, ಜನಸೇವೆಗಾಗಿ ಬಂದು ಜನರನ್ನ ಮರೆತಿದ್ದಾರೆ, ಅದಕ್ಕಾಗಿ ಎಚ್ಚರಿಸಲು ಬಾರ್ ಕೋಲ್ ಚಳುವಳಿ ನಡೆಸಲಾಗುತ್ತಿದೆ, ಇನ್ನು ಮುಂದೆಯೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಳ್ಳಿಗಳಿಗೆ ಬಂದಾಗ ರೈತರು ಬಾರ್ಕೋಲ್ ಮೂಲಕವೇ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ನಾಲ್ಕು ತಿಂಗಳುಗಳಿಂದ ಕಬ್ಬು ಬೆಳೆಗಾರ ರೈತರು ರಾಜ್ಯಾದ್ಯಂತ ಕಬ್ಬಿನ ದರ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದ್ದರೂ ನಿದ್ದೆ ಮಾಡುತ್ತಿರುವ ರಾಜಕಾರಣಿಗಳಿಗೆ ಈ ಹೋರಾಟದ ಮೂಲಕ ಎಚ್ಚರಿಸುತ್ತಿದ್ದೇವೆ.  ಇನ್ನು ಮುಂದೆಯೂ ಇದೇ ರೀತಿ ರೈತರ ಬಗ್ಗೆ ಲಘುವಾಗಿ ನಡೆದುಕೊಂಡರೆ ಅಂತಹ ಎಂ ಎಲ್ ಎ, ಎಂಪಿ ಗಳಿಗೆ ಈ ಚುನಾವಣೆಯಲ್ಲಿ ರೈತರ ಶಕ್ತಿ ಏನೆಂದು ತಿಳಿಸಿಕೊಡುತ್ತೇವೆ ಎಂದು  ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಹಾಡ್ಯ ರವಿ, ಅಂಬಳೆ ಮಂಜುನಾಥ್, ಲಕ್ಷ್ಮೀಪುರ ವೆಂಕಟೇಶ್, ವರಕೂಡು ಜಯರಾಮು,ಟಿ ರಾಮೇಗೌಡ, ಸೋನಹಳ್ಳಿ  ದೊರೆಸ್ವಾಮಿ, ಬಸವಣ್ಣ, ಮಂಜುನಾಥ್, ಕುರುಬೂರು ಮಂಜು, ಮಾರ್ಬಳ್ಳಿ ನೀಲಕಂಠಪ್ಪ, ಚುಂಚರಾಯನಹುಂಡಿ ತಮಯಪ್ಪ, ಮಲ್ಲಪ್ಪ, ಮಾದೇವಸ್ವಾಮಿ, ಮುದ್ದಹಳ್ಳಿ ಶಿವಣ್ಣ, ದಿನೇಶ್ ಇನ್ನು ಮುಂತಾದವರು ಇದ್ದರು.

Key words: Barukolu -movement – Mysore-farmers-kurubur shanthakumar

The post ಮೈಸೂರಿನಲ್ಲಿ ಬಾರುಕೋಲು ಚಳುವಳಿ: ರಾಜಕಾರಣಿಗಳಿಗೆ ಚಾಟಿ ಏಟಿನಿಂದ ಎಚ್ಚರಿಕೆ ಕೊಟ್ಟ ಕಬ್ಬು ಬೆಳೆಗಾರರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವಿದ್ಯುತ್ ಕಾಯ್ದೆ ಖಾಸಗೀಕರಣ ಮತ್ತು ಕಬ್ಬಿನ ಎಫ್ ಆರ್ ಪಿ ದರ ವಿರೋಧಿಸಿ ರೈತ ಮುಖಂಡರಿಂದ ರಸ್ತೆ ತಡೆ ಚಳವಳಿ.
ಮೈಸೂರು,ಆಗಸ್ಟ್,12,2022(www.justkannada.in):  ಕಬ್ಬಿನ ಎಫ್ ಆರ್ ಪಿ ದರ ವಿರೋಧಿಸಿ   ಪುನರ್ ಪರಿಶೀಲನೆಗಾಗಿ ಆಗ್ರಹಿಸಿ ಮತ್ತು ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡಿರುವುದನ್ನು  ವಿರೋಧಿಸಿ  ರೈತ ಮುಖಂಡರು ಇಂದು ಮೈಸೂರಿನ ಕೊಲಂಬಿಯಾ ಆಸ್ಪತ್ರೆ  ವೃತ್ತದಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು.

ಚಳುವಳಿ ಉದ್ದೇಶಿಸಿ ಮಾತನಾಡಿದ  ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್,  ಕಬ್ಬಿಗೆ ಬಳಸುವ ರಸಗೊಬ್ಬರ, ಪೊಟ್ಯಾಶ್   ಚೀಲಕ್ಕೆ ಹೆಚ್ಚುವರಿಯಾಗಿ 900 ರೂ   ಡಿಎಪಿ ಬೆಲೆ 350 ಏರಿಕೆಯಾಗಿದೆ.  ಕಟಾವು ಕೂಲಿ 400 ರೂಪಾಯಿ, ಬೀಜದ ಬೆಲೆ ಎಕರೆಗೆ 500 ಹೆಚ್ಚುವರಿಯಾಗಿ ಎಲ್ಲಾ  ಏರಿಕೆಯಾಗಿದೆ, ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ  ಕೇವಲ 150 ರೂ ಏರಿಕೆ ಮಾಡಿ  ಟನ್ ಗೆ  3050 ನಿಗದಿ ಮಾಡಿದೆ, ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ. ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ  ಎಂದು ಕಿಡಿಕಾರಿದರು

ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ದಿಂದ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲುತ್ತದೆ, ಹೀಗಾಗಿ ವಿದ್ಯುತ್ ಖಾಸಗೀಕರಣ ಕೈಬಿಡಬೇಕು . ಅತಿವೃಷ್ಟಿ ಮಳೆಹನಿ ಬೆಳೆನಷ್ಟ ಪರಿಹಾರವನ್ನ  ಕೂಡಲೇ ರೈತರಿಗೆ ಕೊಡಬೇಕು. ಯೂರಿಯಾ ಡಿಎಪಿ ಗೊಬ್ಬರ ಅಭಾವ ತಪ್ಪಿಸಿ ಸಮರ್ಪಕ ಪೂರೈಕೆಗೆ  ಒತ್ತಾಯಿಸಿ, ಮೊಸರು ಮಜ್ಜಿಗೆ ಅಪ್ಪಳ ಕೃಷಿ ಉಪಕರಣಗಳು ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ, ಗಳ ಮೇಲೆ ವಿಧಿಸಿರುವ ಜಿಎಸ್ ಟಿ ರದ್ದುಗೊಳಿಸಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ 9.90  ಲಕ್ಷ ಕೋಟಿ ಉದ್ದಿಮೆಗಳ ಸಾಲ  ಮನ್ನಾ ಮಾಡಿದೆ ದೇಶದ ರೈತ ಕರೋನಾ ಲಾಕ್ ಡೌನ್ ಸಮಸ್ಯೆ, ಅತಿವೃಷ್ಟಿ ಹಾನಿ  ಸಂಕಷ್ಟ ಅನುಭವಿಸುತ್ತಿದ್ದಾನೆ ಇಂತಹ ಕಷ್ಟ ಕಾಲದಲ್ಲಿ ರೈತರ  ಸಾಲ ಐದೂವರೆ ಲಕ್ಷ ಕೋಟಿ  ಮನ್ನಾ ಮಾಡಲು ಸರ್ಕಾರಕ್ಕೆ  ಯಾಕೆ  ಸಾಧ್ಯವಾಗುತ್ತಿಲ್ಲ, ಬಂಡವಾಳಶಾಹಿಗಳ ಉದ್ದಿಮೆದಾರರ  ಮರ್ಜಿಯಲ್ಲಿ ಸರ್ಕಾರ ಸಾಗುತ್ತಿದೆ ಎಂಬುದು ರುಜುವತ್ತಾಗುತ್ತದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ನಿರ್ಲಕ್ಷತನ ಖಂಡಿಸಿ ರಸ್ತೆ ತಡೆ ಚಳುವಳಿ ನಡೆಸಲಾಯಿತು. ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲೂ ನೂರಾರು ಕಡೆ ಚಳುವಳಿ ನಡೆಸಲಾಗಿದೆ.  ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ದೆಹಲಿ  ಮಾದರಿ ಹೋರಾಟ ನಡೆಸಬೇಕಾಗುತ್ತದೆ  ಎಂದು ರಾ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಢಿದರು.

ರಸ್ತೆ ತಡೆ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ  ಬರಡನಪುರ ನಾಗರಾಜ್, ವರ್ಕೋಡ್ ನಾಗೇಶ್, ಕಾಟೂರು ಮಹದೇವಸ್ವಾಮಿ, ಮಹದೇವ್, ಬಸವರಾಜು, ಮಹದೇವಸ್ವಾಮಿ, ಶ್ರೀರಾಮ್ ,ರಾಜು, ಭಾಗ್ಯಮ್ಮ, ಸಾಕಮ್ಮ ಶಿವಣ್ಣ  ಮಾಲಿಂಗನಾಯಕ್,  ಬಸವರಾಜಪ್ಪ, ಮಂಜು ಲಿಂಗಣ್ಣ  ನೂರಾರು ಜನರು ಭಾಗವಹಿಸಿದ್ದರು.

Key words: Roadblock- movement -farmer –mysore-kurubur shanthakumar

The post ವಿದ್ಯುತ್ ಕಾಯ್ದೆ ಖಾಸಗೀಕರಣ ಮತ್ತು ಕಬ್ಬಿನ ಎಫ್ ಆರ್ ಪಿ ದರ ವಿರೋಧಿಸಿ ರೈತ ಮುಖಂಡರಿಂದ ರಸ್ತೆ ತಡೆ ಚಳವಳಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಾಹಿತಿಗಳ ಪಠ್ಯ ವಾಪಾಸ್ ಚಳವಳಿಯು ಟೂಲ್ ಕಿಟ್ ನಾ ಒಂದು ಭಾಗ- ಸಂಸದ ಪ್ರತಾಪ್ ಸಿಂಹ ಕಿಡಿ.
ಮೈಸೂರು,ಜೂನ್,1,2022(www.justkannada.in):  ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತಿಗಳು ತಮ್ಮ ಪಠ್ಯ ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ಹಿನ್ನೆಲ್ಲೆ ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಸಾಹಿತಿಗಳ ಪಠ್ಯ ವಾಪಾಸ್ ಚಳವಳಿ ಟೂಲ್ ಕಿಟ್ ನಾ ಒಂದು ಭಾಗ. ಪಠ್ಯ ವಾಪಸ್ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವವರು ವಿಚಾರಹೀನರು. ತರ್ಕದಲ್ಲಿ ಇವರು ಗೆಲ್ಲಲು ಆಗಲ್ಲ. ಹೀಗಾಗಿ ಹೊಸ ತರಕಾರು ಶುರು ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಬರಗೂರು ರಾಮಚಂದ್ರಪ್ಪ ಅವರು ಕುವೆಂಪು ಅವರ 8 ಪಠ್ಯ ಇದ್ದುದ್ದನ್ನು 7 ಮಾಡಿದರು. ನಾವು ಈಗ ಕುವೆಂಪು ಅವರ 10 ಪಠ್ಯ ಸೇರಿಸಿದ್ದೇವೆ.  ಸಿದ್ದರಾಮಯ್ಯ ಆಡಳಿತ ವ್ಯಂಗ್ಯ ಮಾಡಲು 2017ರಲ್ಲಿ ಯಾರೋ ಬರೆದ ಗೀತೆಯನ್ನು ಚಕ್ರತೀರ್ಥ ವಾಟ್ಸ್ ಫ್ ಫಾರ್ವಡ್ ಮಾಡಿದ್ದಾರೆ. ಆ ಕೇಸ್ ಈಗಾಗಲೇ ಬಿ ರೀಪೋರ್ಟ್ ಆಗಿದೆ. ಕಾಂಗ್ರೆಸ್ ಈಗ ನೆಲ ಕಚ್ಚಿದೆ. ಕಾಂಗ್ರೆಸ್ ನಿಂದ ಉಪಕೃತರಾದ ಸಾಹಿತಿಗಳು ಈಗ ತಗಾದೆ ತೆಗೆದಿದ್ದಾರೆ.  ಕಮಲ ಹಂಪನಾ, ಬರಗೂರು ರಾಮಚಂದ್ರಪ್ಪ ಹಾದಿಯಾಗಿ ಯಾರು ಕಳೆದ 10 ವರ್ಷಗಳಲ್ಲಿ ನೆನಪಿಡೋ ಕೃತಿ ರಚನೆ ಮಾಡಿದ್ದಾರೆ ಹೇಳಿ.? ಎಂದು ಟೀಕಿಸಿದರು.

ಎಲ್ಲಾ ವಾದದಲ್ಲೂ ಸೋತ ಮೇಲೆ ಈಗ ವಾಟ್ಸ್ ಆಫ್ ಫಾರ್ವಡ್ ಮೇಸೇಜ್ ಹಿಡಿದು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಸಾಹಿತಿಗಳ ಪಠ್ಯ ವಾಪಾಸ್ ಚಳವಳಿ ಟೂಲ್ ಕೀಟ್ ನಾ ಒಂದು ಭಾಗ. ದೇವನೂರು ಮಹದೇವ್ ಸೇರಿದಂತೆ ಹಲವರ ಪಠ್ಯವನ್ನು 10 – 12 ವರ್ಷದಿಂದ ಮಕ್ಕಳು ಓದಿದ್ದಾರೆ. ಈಗ ಕೆಲವರ ಪಠ್ಯ ಕೈ ಬಿಟ್ಟಿದ್ದೇವೆ. ತಮ್ಮ ಪಠ್ಯ ಕೈ ಬಿಟ್ಟಿದ್ದರು ಕೂಡ ಕೆಲ ಸಾಹಿತಿಗಳು ಪಠ್ಯ ವಾಪಾಸ್ ಪಡೆದಿದ್ದೇವೆ ಎಂದು ಪತ್ರ ಬರೆದಿದ್ದಾರೆ.  ಇದರಲ್ಲಿ ಅರ್ಥವಿದೆಯಾ.? ಎಂದು ಪ್ರಶ್ನಿಸಿದರು.

ಸಾಹಿತಿ ಹಂಪಾ ನಾಗರಾಜ ಅಕಾಡೆಮಿಗೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಪತ್ನಿ ಇನ್ನೂ ಹುದ್ದೆಯಲ್ಲೇ ಇದ್ದಾರೆ.  ಅದರ ಅರ್ಥ ಮನೆಯಲ್ಲೆ ಸಮ್ಮತಿ ಇಲ್ಲ ಅಂತಾ ಎಂದು ಪ್ರತಾಪ್ ಸಿಂಹ ಹರಿಹಾಯ್ದರು.

Key words: Text Vapas –Movement- Tool kit -MP Pratap simha

The post ಸಾಹಿತಿಗಳ ಪಠ್ಯ ವಾಪಾಸ್ ಚಳವಳಿಯು ಟೂಲ್ ಕಿಟ್ ನಾ ಒಂದು ಭಾಗ- ಸಂಸದ ಪ್ರತಾಪ್ ಸಿಂಹ ಕಿಡಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟಾಚಾರಕ್ಕೆ ಕಡಿವಾಣ, ಪ್ಯಾಕೇಜ್ ಪದ್ದತಿ ರದ್ದು ಮತ್ತು ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಪತ್ರ ಚಳುವಳಿಗೆ ಮುಂದಾದ ಗುತ್ತಿಗೆದಾರರು.
ಮೈಸೂರು,ಫೆಬ್ರವರಿ,10,2022(www.justkannada.in): ಭ್ರಷ್ಟಾಚಾರಕ್ಕೆ ಕಡಿವಾಣ, ಪ್ಯಾಕೇಜ್ ಪದ್ದತಿ ರದ್ದು ಮತ್ತು ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಪತ್ರ ಚಳುವಳಿ ನಡೆಸಲು  ರಾಜ್ಯದ ಗುತ್ತಿಗೆದಾರರು ಮುಂದಾಗಿದ್ದು, ರಾಜ್ಯದಾದ್ಯಂತ ಇರುವ 50 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ರವಾನೆ ಮಾಡಿದ್ದಾರೆ.

ಈ ಪತ್ರ ಚಳವಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಮಾರ್ಚ್ 3 ಅಥವಾ 4 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ  ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ. ಕೆಂಪಣ್ಣ,  ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಕಳೆದ 2017ರಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಯಾವುದೇ ಗುತ್ತಿಗೆ ಕಾಮಗಾರಿಯಲ್ಲೂ 40% ಕಮೀಷನ್ ನೀಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರಿಗೆ 4 ಬಾರಿ ಪತ್ರ ಬರೆದರೂ ಯಾವುದೇ ಉತ್ತರ ಸಿಗಲಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದೆವು‌. ನರೇಂದ್ರ ಮೋದಿ ಅವರಿದಲೂ ಸೂಕ್ತ ಉತ್ತರ ಬಂದಿಲ್ಲ. ಮೊದಲು 5% ಕಮೀಷನ್ ನೀಡಲಾಗುತ್ತಿತ್ತು. ಆದರೆ 2017ರಿಂದ 40% ಕಮೀಷನ್ ಗೆ ಬಂದು‌ ನಿಂತಿದೆ. ನಮ್ಮ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರಿದ್ದೇವೆ. ಈ ಪೈಕಿ 17 ಸಾವಿರ ಕ್ಲಾಸ್ ಒನ್ ಕಂಟ್ರಾಕ್ಟರ್ ಗಳಿದ್ದಾರೆ. ಇದರಲ್ಲಿ 296 ಮಂದಿ ಹೊರ ರಾಜ್ಯದವರಿದ್ದಾರೆ.

ಬೇರೆ ಯಾವ ರಾಜ್ಯದಲ್ಲೂ ಹೊರ ರಾಜ್ಯದ ಗುತ್ತಿಗೆದಾರರಿಗೆ ಅವಕಾಶವಿಲ್ಲ‌. ನಮ್ಮ ರಾಜ್ಯದಲ್ಲಿ ಮಾತ್ರ ಹೊರ ರಾಜ್ಯದ ಗುತ್ತಿಗೆದಾರರಿಗೆ ಅವಕಾಶ ನೀಡಲಾಗಿದೆ. ಹೊರಗಿನವರು ಬೋಗಸ್ ಬಿಲ್ ಕೊಡ್ತಾರೆ. ಕಾಮಗಾರಿ ಪಡೆಯುವ ಸಲುವಾಗಿಯೇ ಜನಪ್ರತಿನಿಧಿಗಳಿಗೆ ಇಂತಿಷ್ಟು ಹಣ ಕೊಡಬೇಕು. ಇಲ್ಲದಿದ್ದರೇ ಕಾಮಗಾರಿಯನ್ನೇ ಕೊಡುವುದಿಲ್ಲ. ಅವರಿಗೆ ಇಷ್ಟ ಬಂದವರಿಗೆ ಟೆಂಡರ್ ಕೊಡುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಅಗತ್ಯ ಬಿದ್ದರೇ ಆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.

ಕಾಮಗಾರಿಯನ್ನು ಗುತ್ತಿಗೆ ನೀಡುವಾಗ ನಿಯಮಗಳನ್ನು ಪಾಲಿಸುತ್ತಿಲ್ಲ. ಹಿರಿತನವನ್ನು ಪರಿಗಣಿಸುತ್ತಿಲ್ಲ. ಇದರ ವಿರುದ್ಧ ಕಳೆದ ಮೂರ್ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಡಿ ಕೆಂಪಣ್ಣ  ಹೇಳಿದರು.

Key words: mysore- Contractors – letter- movement.

The post ಭ್ರಷ್ಟಾಚಾರಕ್ಕೆ ಕಡಿವಾಣ, ಪ್ಯಾಕೇಜ್ ಪದ್ದತಿ ರದ್ದು ಮತ್ತು ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಪತ್ರ ಚಳುವಳಿಗೆ ಮುಂದಾದ ಗುತ್ತಿಗೆದಾರರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಮ್ಮ ಓಟು ನಮ್ಮ ಸ್ವಾಭಿಮಾನದ ಹಕ್ಕು, ಎಂದಿಗೂ ಆದು ಮಾರಿಕೊಳ್ಳುವ ಸರಕಲ್ಲ-ಕೆ.ಎಂ ಜಯರಾಮಯ್ಯ.
ಶಿಡ್ಲಘಟ್ಟ,ಡಿಸೆಂಬರ್,30,2021(www.justkannada.in): ನಮ್ಮ ಓಟು ನಮ್ಮ ಸ್ವಾಭಿಮಾನದ ಹಕ್ಕು, ಎಂದಿಗೂ ಆದು ಮಾರಿಕೊಳ್ಳುವ ಸರಕಲ್ಲ. ನಮ್ಮ ಮತವನ್ನ ನಾವು ಮಾರಿಕೊಳ್ಳುವುದು ಬೇಡ ಎಂದು ಮತದಾರರ ಸ್ವಾಭಿಮಾನ  ಆಂದೋಲನದ ಸಂಚಾಲಕ ಕೆ.ಎಂ ಜಯರಾಮಯ್ಯ ನುಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಿಂದ ಮತದಾರರ ಸ್ವಾಭಿಮಾನ ಆಂದೋಲನ ಆರಂಭವಾಗಿದ್ದು ಇದರಡಿಯಲ್ಲಿ ಇಂದು ಭಕ್ತರಹಳ್ಳಿ ಬಿಎಂವಿ ಶಾಲೆಯ ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮತದಾರರ ಜಾಗೃತಿ ಸಮಾವೇಶ ನಡೆಯಿತು.  ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಎಂ ಜಯರಾಮಯ್ಯ. 14 ಡಿಸೆಂಬರ್ 2019 ರಂದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರಾಷ್ಟ್ರೀಯ ವಕೀಲರ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ಭಾಷಣ ಕೇಳಲು ಹೋಗಿದ್ದ ನಾನು, ಅವರ ಭಾಷಣ ಮುಗಿದ ನಂತರ ಚುನಾವಣೆಗಳಲ್ಲಿ ಮತದಾರರು ಅಭ್ಯರ್ಥಿಗಳ ವಿವಿಧ ಆಮಿಷಗಳಿಗೆ ಒಳಗಾಗದಂತೆ ತಿಳಿಹೇಳಲು ರಾಜ್ಯಾದ್ಯಂತ ಆಂದೋಲನ ತಮ್ಮ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರೆ ಒಳಿತು” ಎಂದು ಹೇಳಿದಾಗ ನ್ಯಾಯ ಮೂರ್ತಿಗಳು – ನನಗೆ ವಯಸ್ಸಾಗಿದೆ. ನೀವ್ಯಾರಾದರೂ ಇಂತಹ ಕೆಲಸ ಮಾಡಲು ಪ್ರಾರಂಭಿಸಿರಿ” ಎಂದು ಹೇಳಿ ಸಭಾಂಗಣದಿಂದ ಹೊರಬರುತ್ತಾ – ನಿಮ್ಮ ಆಂದೋಲನ ಬರೀ ಒಂದೇ Point ಗೆ (ಅಂಶಕ್ಕೆ) ಅಂದರೆ ಮತದಾರರು ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ತಿಳಿಹೇಳುವುದಕ್ಕೆ ಮಾತ್ರ ಸೀಮಿತವಾಗದೆ, ಧನಿಕರಾಗಿಲ್ಲದಿದ್ದರೂ ಒಳ್ಳೆಯ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಚುನಾವಣಾ ಅಭ್ಯರ್ಥಿಗಳನ್ನು ಮಾಡಿರಿ, ಇಲ್ಲದಿದ್ದರೆ ಬೇರೆ ಪಕ್ಷದವರು ನೀವು ಹೇಳುತ್ತಿರುವಂತಹವರನ್ನೇ: ಚುನಾವಣಾ ಅಭ್ಯರ್ಥಿಗಳನ್ನಾಗಿಸುವೆವು ಎಂದು ನಿಮ್ಮ ಆಂದೋಲನವನ್ನೇ ಹೈಜಾಕ್ ಮಾಡುವರು” ಎಂದು ಮುಂತಾಗಿ ಹೇಳಿದರು ಎಂದು ಸ್ಮರಿಸಿದರು.

ಹಣ, ಮದ್ಯ ಮೊದಲಾದ ಆಮಿಷಗಳಿಗೆ ಒಳಗಾಗಿ ಚುನಾವಣಾ ಅಭ್ಯರ್ಥಿಗಳಿಗೆ ಓಟ್ ಮಾಡುವುದು ನೀತಿಯಿಲ್ಲದೆ ರಾಜಕಾರಣ ಅಲ್ಲವೇ ? ರಾಜಕಾರಣ ಇಂತಹ ಕೆಟ್ಟ ಸ್ಥಿತಿಗೆ ತಲುಪಿರುವುದನ್ನು ನಾವೆಲ್ಲರೂ ನೋಡಿಕೊಂಡು ಇರುವುದು ಹೇಗೆ !? ಈಗ ನಮಗೆ ಉಳಿದಿರುವುದು ಒಂದೇ ದಾರಿ, ಅದು ನಮ್ಮ ಜನರ ಹತ್ತಿರ ಹೋಗಿ ತಮ್ಮ ಓಟನ್ನು ಮಾರಿಕೊಳ್ಳುವುದು ಬೇಡ, ಪ್ರತಿಯೊಂದು ಓಟು ಅಮೂಲ್ಯವಾದುದು ಎಂದು ತಿಳಿಹೇಳುವ ಆಂದೋಲನ ಪ್ರಾರಂಭಿಸುವುದು ಒಳ್ಳೆಯದು

ಈ ಆಂದೋಲನದಲ್ಲಿ ಡಾ| ಕೆ.ಎಂ. ಜಯರಾಮಯ್ಯ ಆದ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಹ ಪ್ರಾಧ್ಯಾಪಕನಾಗಿ ನಿವೃತ್ತಿ ಹೊಂದಿದ್ದು, ಬೆಂಗಳೂರಿನ ಜನಪರ ಹೋರಾಟಗಾರರು ಹಾಗೂ ಕೇಂದ್ರ ಸಚಿವರಾಗಿದ್ದ ದಿ| ಜಾರ್ಜ್ ಫರ್ನಾಂಡಿಸ್ ಅವರ ಅನುಯಾಯಿಯಾದ ಎಲ್.ಕಾಳಪ್ಪ, ಮೈಸೂರಿನ ಬದುಕು ಟ್ರಸ್ಟ್‌ನ ನಿರ್ದೇಶಕ ಈ. ಧನಂಜಯ, ಹುಬ್ಬಳ್ಳಿಯ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ವಿಕಾಸ್‌ ಸೂಪ್ಪಿನ್, ತುಮಕೂರಿನ ರೈತ ಮುಖಂಡ  ಎನ್.ಜಿ. ರಾಮಚಂದ್ರ, ಧಾರವಾಡದ ಪ್ರಗತಿಪರ ಹೋರಾಟಗಾರರಾದ ವೆಂಕನಗೌಡ ಪಾಟೀಲ್‌, ಆದ ನಾವುಗಳು ಸಂಚಾಲಕರುಗಳಾಗಿ ಸ್ವಾಭಿಮಾನದ ಈ ಆಂದೋಲನವನ್ನು ಕೋಲಾರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು, ಭಕ್ತರಹಳ್ಳಿ ಗ್ರಾಮದಿಂದ ಪ್ರಾರಂಭಿಸುತ್ತಿದ್ದೇವೆ.

ನಂತರ ರಾಜ್ಯದ ಆಯ್ದ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ಈ ಆಂದೋಲನವು ಮುಂದುವರೆಯಲಿದೆ, ಚುನಾವಣಾ ಅಭ್ಯರ್ಥಿಗಳ ಆಮಿಷಗಳಿಗೆ ಕೈಚಾಚುವ ಬದಲು ಇಂತಹವರು ತಪ್ಪು ಮಾಡಿದಾಗ ಪ್ರಶ್ನಿಸಬೇಕು. ಗೌತಮ ಬುದ್ಧ ಹೇಳಿರುವಂತೆ ನಿಮ್ಮ ರೂವಾರಿಗಳು ನೀವು, ಪ್ರಶ್ನಿಸದೇ ಏನನ್ನೂ ಒಪ್ಪಬೇಡಿ. ಎಗ್ಗಿಲ್ಲದ ಆಪೇಕ್ಷೆ, ಕೋರಿಕೆಗಳು ಸಮಸಮಾಜಕ್ಕೆ ವಿಘ್ನಗಳು” ಎಂದು ಹೇಳಿರುವುದನ್ನು ಪಾಲಿಸೋಣ ಎಂದು ಕರೆ ನೀಡಿದರು.

Key words: Our vote-our right – KM Jayaramaiah- Voter -self-esteem- movement

The post ನಮ್ಮ ಓಟು ನಮ್ಮ ಸ್ವಾಭಿಮಾನದ ಹಕ್ಕು, ಎಂದಿಗೂ ಆದು ಮಾರಿಕೊಳ್ಳುವ ಸರಕಲ್ಲ-ಕೆ.ಎಂ ಜಯರಾಮಯ್ಯ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ: ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ.
ಮೈಸೂರು,ಆಗಸ್ಟ್,10,2021(www.justkannada.in): ಕಬ್ಬಿಗೆ ವೈಜ್ಞಾನಿಕ ದರ ನಿಗಧಿ ಮಾಡಬೇಕು, ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದು‌ ಒತ್ತಾಯಿಸಿ ಮೈಸೂರಿನಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮೈಸೂರಿನ ಊಟಿ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೆ ಎಸ್ ಎಸ್ ಕಾಲೇಜು ಬಳಿ ರಸ್ತೆ ಮಧ್ಯೆ ಕುಳಿತು‌ ರೈತರು ಧರಣಿ ನಡೆಸಿದರು.

ರೈತರ ಪ್ರತಿಭಟನೆಯ ಪರಿಣಾಮ ಮೈಸೂರು ನಂಜನಗೂಡು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ನಡೆಯಿತು. ಇದರಿಂದಾಗಿ ಜೆ ಎಸ್ ಎಸ್ ಕಾಲೇಜು ಬಳಿ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿತು. ಇದೇ ವೇಳೆ ಆಗಮಿಸಿದ ಎರಡು ಆಂಬ್ಯುಲೆನ್ಸ್ ಗಳು ತೆರಳಲು ಪ್ರತಿಭಟನಾಕಾರರು ಅವಕಾಶ ಮಾಡಿಕೊಟ್ಟರು.

ಈ ನಡುವೆ ಪ್ರತಿಭಟನೆ ಕೈ ಬಿಡುವಂತೆ ಪೊಲೀಸರು ರೈತರನ್ನ ಮನವೊಲಿಸಿದರು. ಪ್ರತಿಭಟನೆಯಿಂದಾಗಿ ಮೈಸೂರು ನಂಜನಗೂಡು ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.

Key words:  Protest – farmers – Mysore-Road block -movement

The post ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ: ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಅಂಚೆ ಪತ್ರ ಚಳುವಳಿ”
ಮೈಸೂರು,ಫೆಬ್ರವರಿ,19,2021(www.justkannada.in)  : ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಮಡಿವಾಳರ ಪರಿಶಿಷ್ಟ ಜಾತಿ ಹೋರಾಟ ಸಮಿತಿಯಿಂದ ಅಂಚೆ ಪತ್ರ ಚಳುವಳಿ ನಡೆಸಲಾಯಿತು.

ಅಶೋಕರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಜಮಾವಣೆಗೊಂಡ ಸಮಿತಿ ಸದಸ್ಯರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಅಂಚೆ ಪೆಟ್ಟಿಗೆಗೆ ಅಂಚೆ ಪತ್ರಗಳನ್ನು ಹಾಕುವ ಮೂಲಕ ಒತ್ತಾಯಿಸಿದರು.

ಪ್ರೊ.ಡಾ.ಅನ್ನಪೂರ್ಣಮ್ಮನವರ ವರದಿ ಜಾರಿ ಮಾಡಬೇಕು. ಮಡಿವಾಳ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.

ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಮಾಚಿದೇವರ ಜನ್ಮ ಸ್ಥಳ ದೇವರ ಹಿಪ್ಪರಗಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ಸಮಾಜದ ಮುಖಂಡರ ಹೇಳಿದರು.

ಅಂಚೆ ಪತ್ರ ಚಳುವಳಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

key words : Madiwala-Community-Scheduled Caste-add-Postal-movement

The post “ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಅಂಚೆ ಪತ್ರ ಚಳುವಳಿ” appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಫೆ.18ರಂದು ರಾಜ್ಯಾದ್ಯಂತ 3 ಗಂಟೆ ರೈಲು ತಡೆ ಚಳವಳಿ” : ರೈತ ಮುಖಂಡ ಕುರುಬೂರು ಶಾಂತಕುಮಾರ್
ಮೈಸೂರು,ಫೆಬ್ರವರಿ,16,2021(www.justkannada.in)  : ದೆಹಲಿ ರೈತರ ಹೋರಾಟ ಕರೆ ಬೆಂಬಲಿಸಿ ಫೆ.18ರಂದು ರಾಜ್ಯಾದ್ಯಂತ 3 ಗಂಟೆ ರೈಲು ತಡೆ ಚಳವಳಿ ನಡೆಸುವುದಾಗಿ ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ರೈತ ಚಳುವಳಿ ಬಗ್ಗೆ ಕೇಂದ್ರ ಸರ್ಕಾರ ರೈತ ಚಳುವಳಿಯ ಹತ್ತಿಕ್ಕುವ ಪ್ರಯತ್ನಕೆ ಹೆಚ್ಚು ಒತ್ತು ನೀಡುತ್ತಿದೆ. ನಾಟಕೀಯವಾಗಿ ವರ್ತಿಸುತ್ತಿದೆ. ಇದನ್ನು ಖಂಡಿಸಿ ದೇಶಾದ್ಯಂತ 18ರಂದು 12ಗಂಟೆಯಿಂದ ಮೂರು ಗಂಟೆ ತನಕ ರೈಲು ತಡೆ ಚಳವಳಿ ನಡೆಸಲು ಕರೆ ನೀಡಿರುವುದನ್ನು ಬೆಂಬಲಿಸಿ ಕರ್ನಾಟಕದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಚಳವಳಿ ನಡೆಸಲಾಗುವುದು ಎಂದರು.

ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ

ಕೇಂದ್ರ ಸರ್ಕಾರ  ಎಮ್ಮೆ ಚರ್ಮದ ಸರ್ಕಾರ ಮಳೆ ಚಳಿ ಗಾಳಿ ಬಿಸಿಲು ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ. ಪ್ರಧಾನಿ ಮೋದಿಯವರು ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ರಂಜನ್ ಗೂಗಯ್  ಹೇಳಿರುವುದು ಬಡಜನರಿಗೆ ದುಡಿಯುವ ವರ್ಗಕ್ಕೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟಕರವಾಗಿದೆ. ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಬಂಡವಾಳಶಾಹಿಗಳ ಶ್ರೀಮಂತರ ವಶಕ್ಕೆ ಸಿಲುಕುತ್ತಿದೆ. ಈ ಹೇಳಿಕೆಯ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ ಎಂದು ಹೇಳಿದರು.

ವ್ಯಾಪಾರಕ್ಕೆ ಕಾನೂನು ಮೂಲಕ ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ

ರೈತ ಉತ್ಪನ್ನಗಳಿಗೆ ಕನಿಷ್ಠ ಶಾಸನಬದ್ಧ ಬೆಲೆ ಖಾತ್ರಿಗೊಳಿಸಿದ ಸರ್ಕಾರ. ಕೃಷಿ ಉತ್ಪನ್ನ ಖರೀದಿಸಲು ಯಾವುದೇ ನಿಯಂತ್ರಣವಿಲ್ಲದ, ರಹದಾರಿ ಇಲ್ಲದವರು, ಎಷ್ಟು ಬೇಕಾದರೂ ಎಲ್ಲಿ ಬೇಕಾದರೂ ಖರೀದಿಸಬಹುದು ಎನ್ನುವ ವ್ಯಾಪಾರಕ್ಕೆ ಕಾನೂನು ಮೂಲಕ ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ. ಯಾವುದೇ ಅನುಮತಿ ಇಲ್ಲದವರು ವ್ಯಾಪಾರ ಮಾಡುವಾಗ ರೈತರಿಗೆ ವಂಚನೆ ಮಾಡಿದಾಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯಕ್ಕೆ ಹೋಗುವುದನ್ನು ಕಿತ್ತು ಹಾಕಲಾಗಿದೆ. ಇದೆಲ್ಲಾ ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ರಾಜ್ಯಸರ್ಕಾರವೇ ನಿಗದಿ ಮಾಡುವಂತಾಗಬೇಕು

ರಾಜ್ಯ ಸರ್ಕಾರ ಮಂಡಿಸುವ ಮುಂದಿನ ಬಜೆಟ್ ನಲ್ಲಿ ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ರೈತರ ಹೊಲದಲ್ಲಿನ ದರ ಎಂದು ರಾಜ್ಯಸರ್ಕಾರವೇ ನಿಗದಿ ಮಾಡುವಂತಾಗಬೇಕು. ಕಬ್ಬಿಗೆ ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಹಣ್ಣು-ತರಕಾರಿ ಎಲ್ಲ ಬೆಳೆಗಳಿಗೆ ಶಾಸನಬದ್ಧ ಖಾತ್ರಿ ಕನಿಷ್ಠ ಬೆಂಬಲ ಬೆಲೆ ನಿಗದಿಮಾಡುವ ಮಾನದಂಡ ಜಾರಿಗೆ ಬರಬೇಕು ಕೇರಳ ರಾಜ್ಯದ ಮಾದರಿಯಲ್ಲಿ ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ

ರಾಜ್ಯದಲ್ಲಿ, ಆರು ತಿಂಗಳಿಗೊಮ್ಮೆ ಸಕ್ಕರೆ ಸಚಿವರು, ಸಕ್ಕರೆ ಅಭಿವೃದ್ಧಿ ಆಯುಕ್ತರು ಬದಲಾಗುತ್ತಿರುವುದು ಕಬ್ಬು ಬೆಳೆಗಾರರ ಸಮಸ್ಯೆಗಳು ಏರಿಕೆಯಾಗಲು ಹಾಗೂ ಪರಿಹಾರ ಸಿಗಲು ಕಷ್ಟವಾಗುತ್ತಿದೆ. ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ ಬರಬೇಕಾಗಿದೆ. ಇದನ್ನು ಕೊಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಇತರರು ಉಪಸ್ಥಿತರಿದ್ದರು.

ENGLISH SUMMARY…

Rail roko protest for 3 hours on Feb. 18: Kurubur Shanthakumar

Mysuru, Feb. 16, 2021 (www.justkannada.in): Karnataka State Sugarcane Growers’ Association and State Farmer Federations President Kuruburu Shanthakumar today informed that a protest would be held on February 18 supporting the farmers protest in New Delhi, by stopping trains for three hours in the State.

The Union Government is trying to suppress the farmers’ protest against its new farm laws. The government is behaving dramatically. Hence we have decided to protest by halting trains from noon on February 18 for three hours, supporting the farmers.

“Even former Supreme Court Justice Ranjan Gogoi has also said that it has become difficult for the poor to get justice in courts. Democracy is going towards a dangerous situation, it is going into the hands of capitalists. Every one of us has to think about this seriously,” he said.

Keywords: Kurubur Shanthakumar/ Rail roko in state on February 18/ rail roko for 3 hours/ farmers protest

key words : 18th-February-Statewide 3 o’clock-Railway-barriers-Movement- Farmer-leader-Kuruburu Shanthakumar

The post “ಫೆ.18ರಂದು ರಾಜ್ಯಾದ್ಯಂತ 3 ಗಂಟೆ ರೈಲು ತಡೆ ಚಳವಳಿ” : ರೈತ ಮುಖಂಡ ಕುರುಬೂರು ಶಾಂತಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ದೆಹಲಿ ರೈತರ ಹೋರಾಟ ಬೆಂಬಲಿಸಿ, ಫೆ.6ರಂದು ರಸ್ತೆ ಬಂದ್ ಚಳುವಳಿ” : ರೈತ ಮುಖಂಡ ಕುರುಬೂರು ಶಾಂತಕುಮಾರ್
ಮೈಸೂರು,ಫೆಬ್ರವರಿ,03,2021(www.justkannada.in) : ದೆಹಲಿ ರೈತರ ಹೋರಾಟ ಬೆಂಬಲಿಸಿ ಫೆಬ್ರವರಿ 6 ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ರಸ್ತೆ ಬಂದ್ ಚಳುವಳಿ ನಡೆಸಲು ನಿರ್ಧರಿಸಲಾಗಿದೆ. ಈ ಹೋರಾಟ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ದೆಹಲಿ ರೈತರ ಹೋರಾಟದ ಕರೆಗೆ ಬೆಂಬಲಿಸಿ ಫೆ.6ರಂದು ರಾಜ್ಯಾದ್ಯಂತ ರಸ್ತೆತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಪೊಲೀಸ್ ಬಲದ ಮೂಲಕ ಸಾಕಷ್ಟು ಕಿರುಕುಳ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಶಾಂತಿಯುತ ಹೋರಾಟಕ್ಕೆ ರಾಷ್ಟ್ರ ಮಟ್ಟದ ಕಿಸಾನ್ ಸಂಯುಕ್ತ ಮೋರ್ಚಾ ಕರೆ

ಕೇಂದ್ರ ಸರ್ಕಾರ ಚಳವಳಿ ನಿರತ ರೈತರ ಜೊತೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ. ಚಳುವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿ, ರಸ್ತೆಗಳಿಗೆ ಮುಳ್ಳುತಂತಿ ಬೇಲಿ ಹಾಕಿದೆ. ಇದು ಸರ್ಕಾರದ ಇಬ್ಬಗೆಯ ನೀತಿ ತೋರಿಸುತ್ತಿದೆ. ಇದರ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ರಾಷ್ಟ್ರ ಮಟ್ಟದ ಕಿಸಾನ್ ಸಂಯುಕ್ತ ಮೋರ್ಚಾ ನೀಡಿರುವ ಕರೆ ಮೇರೆಗೆ ರಾಜ್ಯದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯಹೋರಾಟವು ರಸ್ತೆ ಬಂದ್ ಚಳುವಳಿ ನಡೆಸಲು ತೀರ್ಮಾನಿಸಿದೆ ಎಂದಿದ್ದಾರೆ.

ರೈತರು, ಮಾಧ್ಯಮದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಖಂಡನೀಯ

ಪ್ರತಿಭಟನಾ ನಿರತ ರೈತರ ಮೇಲೆ ಹಾಗೂ ಈ ಹೋರಾಟದ ಬಗ್ಗೆ ವರದಿ ಮಾಡುತ್ತಿದ್ದ ವರದಿಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಖಂಡನೀಯ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿಯು ಸಹ ಇಂತಹ ಅತಿರೇಕದ ಕಾರ್ಯ ನಡೆದಿಲ್. ಇದು ಜನತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾಯ್ದೆಗಳನ್ನು ವಾಪಸ್ ಪಡಯಬೇಕು ಕೃಷಿ ಉತ್ಪನ್ನಗಳಿಗೆ ಶಾಸನ ಬದ್ದ ಖಾತರಿ ಬೆಂಬಲ ಬೆಲೆ ನಿಗದಿ ಮಾಡುವ ವ್ಯವಸ್ಥೆ  ಜಾರಿಯಾಗಬೇಕು ಎಂಬುದು ನಮ್ಮ ರೈತ ಸಂಘಟನೆಗಳು ಒತ್ತಾಯ ಎಂದು ತಿಳಿಸಿದ್ದಾರೆ.

key words : Delhi-farmers-Fight-Support-Feb.6-Road Bandh-Movement-Farmer-leader-Kuruburu Shanthakumar

The post “ದೆಹಲಿ ರೈತರ ಹೋರಾಟ ಬೆಂಬಲಿಸಿ, ಫೆ.6ರಂದು ರಸ್ತೆ ಬಂದ್ ಚಳುವಳಿ” : ರೈತ ಮುಖಂಡ ಕುರುಬೂರು ಶಾಂತಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.