Maharani College Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು: ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ತರಬೇತಿ
ಮೈಸೂರು, ಆಗಸ್ಟ್,8,2026 (www.justkannada.in):  ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ದೈಹಿಕ ಶಿಕ್ಷಣ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ  ವಿದ್ಯಾರ್ಥಿನಿಯರಿಗಾಗಿ ಮಹಿಳೆಯರ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಅವರಣದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲೀಲಾವತಿ ಎನ್.ಕೆ ಅವರು,  ಯಾವುದಾದರೂ ಒಂದು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲೇಬೇಕು .ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಂತರರಾಷ್ಟ್ರೀಯ ಕರಾಟೆ ಕ್ರೀಡಾಪಟು ಹಾಗೂ ಅಂತರರಾಷ್ಟ್ರೀಯ ತೀರ್ಪುಗಾರರು ಭಾರತಿ ಆನಂದ್  ಮತ್ತು ರಾಷ್ಟ್ರೀಯ ಕ್ರೀಡಾಪಟು ಮತ್ತು ತೀರ್ಪುಗಾರ  ಶ್ರೇಯಸ್ ಕುಮಾರ್  ಅವರು ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು.

ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ. ಅವರು ವಿದ್ಯಾರ್ಥಿಗಳಿಗೆ ಈ ತರಬೇತಿಯು ಅತ್ಯಂತ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹ ಸಂಚಾಲಕ ಡಾ. ಚೇತನ್ ಮಲಗಾವಿ, ಕಾಲೇಜಿನ ಅಧ್ಯಾಪಕರು,  ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Mysore, Maharani College, Self-defense skills, training, students

The post ಮೈಸೂರು: ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ತರಬೇತಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ಮಹಾರಾಣಿ ಕಾಲೇಜು ಹಾಸ್ಟೆಲ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ
ಮೈಸೂರು,ಮೇ,14,2026 (www.justkannada.in): ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ಹಾಸ್ಟೆಲ್‌ ಕಟ್ಟಡ ಹಾಗೂ ವಿಜ್ಞಾನ ಕಾಲೇಜು ಕಟ್ಟಡದ ಕಾಮಗಾರಿಯನ್ನ ಸಿಎಂ ಸಿದ್ದರಾಮಯ್ಯ ಪರಿಶೀಲಿಸಿದರು.

ಕರ್ನಾಟಕದ ದೂರದ ಪ್ರದೇಶಗಳ ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ  ಮಹಾರಾಣಿ ಕಾಲೇಜು ಸಂಸ್ಥೆಯನ್ನು ಅವಲಂಬಿತರಾಗಿದ್ದು,  ಪ್ರಸ್ತುತ ಮೂಲಸೌಕರ್ಯಗಳು, ವಿಶೇಷವಾಗಿ ಹಾಸ್ಟೆಲ್ ಸೌಲಭ್ಯಗಳು, ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲವಾಲ್ಲ ಮತ್ತು ಕಾಲೇಜಿನ ಪಾರಂಪರಿಕ ಕಟ್ಟಡದ ಕೆಲ ಭಾಗವು ಶಿಥಿಲವಾಗಿ 2022ರಲ್ಲೇ  ಕಟ್ಟಡದ ವಾಯುವ್ಯ ಭಾಗವು ಬಿದ್ದು ಹೋಗಿದೆ.

ಈ ಹಿನ್ನೆಲೆಯಲ್ಲಿ  ಸಿಎಂ ಸಿದ್ದರಾಮಯ್ಯ  ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಅವರ ನೇತೃತ್ವದಲ್ಲಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ: ಹೆಚ್.ಸಿ. ಮಹದೇವಪ್ಪ,ಅವರ ಸಹಕಾರ ಹಾಗೂ  ಶಾಸಕ ಕೆ. ಹರೀಶ್‌ಗೌಡ  ಅವರ ವಿಶೇಷ ಆಸಕ್ತಿಯಿಂದ ಕಾಲೇಜು ಮತ್ತು ಹಾಸ್ಟೆಲ್ ಸೌಲಭ್ಯಗಳಿಗಾಗಿ 170.00 ಕೋಟಿ. ರೂ.ಗಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ.

ಈ  ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಸಾಥ್ ನೀಡಿದರು.

ಕಾಮಗಾರಿ ವಿವರ

ಮಹಾರಾಣಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿರುವ ಹಾಲಿ ಪಾರಂಪರಿಕ ಕಟ್ಟಡ ಮತ್ತು ಗ್ರಂಥಾಲಯಗಳನ್ನು ಒಳಗೊಂಡಂತೆ ನವೀಕರಣ.

ಪಾರಂಪರಿಕ ಕಟ್ಟಡದ ಮುಂಭಾಗಕ್ಕೆ ಹೊಂದಿಕೆಯಾಗುವಂತೆ ಸೆಮಿನಾರ್ ಹಾಲ್ ಬ್ಲಾಕ್‌ಗಳ ನಿರ್ಮಾಣ. (4 ಸಂಖ್ಯೆ-120 ವಿದ್ಯಾರ್ಥಿಗಳ ಸಾಮರ್ಥ್ಯ)ಹಿಂಭಾಗದಲ್ಲಿ ನೂತನ ಕಟ್ಟಡದಲ್ಲಿ (ಜಿ+ 3) 20 ತರಗತಿ ಕೊಠಡಿ(60-ವಿದ್ಯಾರ್ಥಿಗಳ ಸಾಮರ್ಥ್ಯ).10 ಪ್ರಯೋಗಾಲಯಗಳು (30-ವಿದ್ಯಾರ್ಥಿಗಳ ಸಾಮರ್ಥ್ಯ)4 ವಿವಿದ್ದೋದ್ದೇಶ ಕೊಠಡಿಗಳ 100-ವಿದ್ಯಾರ್ಥಿಗಳ ಸಾಮರ್ಥ್ಯ.

ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜು ಹಾಸ್ಟೆಲ್‌ ಗಳು

ಎರಡು ಪ್ರತ್ಯೇಕ ಹಾಸ್ಟೆಲ್ ಬ್ಲಾಕ್‌ ಗಳು ಒಟ್ಟು : 1400 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ. (ವಿಜ್ಞಾನ ವಿಭಾಗಕ್ಕೆ 700 & ಕಲಾ ವಿಭಾಗಕ್ಕೆ 700).

ಹೊಸ ಹಾಸ್ಟೆಲ್ ಕಟ್ಟಡವು 5 ಅಂತಸ್ತಿನ 4 ಟವರ್‌ಗಳಲ್ಲಿ ನಿರ್ಮಾಣವಾಗುತ್ತಿದ್ದು. ಒಟ್ಟು 306 ಕೊಠಡಿಗಳನ್ನು ಹೊಂದಿರುತ್ತದೆ. ಹಾಗೂ ಪಿ.ಜಿ ಬ್ಲಾಕ್ ಹಾಸ್ಟೇಲ್ ಕಟ್ಟಡ-48 ಕೊಠಡಿಗಳು ಸೇರಿದಂತೆ ಒಟ್ಟು 354 ಕೊಠಡಿಗಳು ಲಭ್ಯವಾಗುತ್ತದೆ.

500 ಜನ ಸಾಮರ್ಥ್ಯದ ಭೋಜನಾ ಹಾಲ್‌ ಗಳು ಅಡುಗೆ ಕೋಣೆ ಸೌಲಭ್ಯದೊಂದಿಗೆ ನಿರ್ಮಾಣವಾಗುತ್ತಿದೆ. ಕಟ್ಟಡದ ವಿನ್ಯಾಸವನ್ನು ಮೈಸೂರಿನ ಪಾರಂಪರಿಕ ಶೈಲಿ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಾರೆ ಈ ಯೋಜನೆಯು ಕಾಲೇಜು ಹಾಗೂ ಮೈಸೂರಿನ ಐತಿಹಾಸಿಕ ಸಾರವನ್ನು ಸಂರಕ್ಷಿಸುವುದಲ್ಲದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ಅವಶ್ಯಕತೆಗಳನ್ನು ಪೂರೈಸುತ್ತವೆ. ಎಲ್ಲಾ ಕೊಠಡಿಗಳಿಗು ಪಿಠೋಪಕರಣಗಳ ವ್ಯವಸ್ಥೆ ಮಾಡಲಾಗುತ್ತಿದೆ.

Key words: CM Siddaramaiah, inspects ,construction work, Maharani College, Mysore

The post ಮೈಸೂರು ಮಹಾರಾಣಿ ಕಾಲೇಜು ಹಾಸ್ಟೆಲ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು: ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಅರಿವಿನ ಬಗ್ಗೆ ಭಿತ್ತಿಪತ್ರ ಪ್ರದರ್ಶನ
ಮೈಸೂರು, ಅಕ್ಟೋಬರ್, 15,2025 (www.justkannada.in):  ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಇಂಗ್ಲಿಷ್ ವಿಭಾಗದ ವತಿಯಿಂದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ರಾಣಿ ಕೆಂಪನಂಜಮ್ಮಣ್ಣಿ ಅಮ್ಮನವರ ಉದ್ಯಾನದಲ್ಲಿ ಇಂದು ಭಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ದ್ವಿತೀಯ ಬಿಎಸ್ಸಿ ಪದವಿ ತರಗತಿಯ ಸುಮಾರು 165 ವಿದ್ಯಾರ್ಥಿಗಳು ರಚಿಸಿದ ಸಮಾಜಮುಖಿ, ಮಹಿಳಾ ಅಭ್ಯುದಯ  ಕೇಂದ್ರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.

ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಭಿತ್ತಿಪತ್ರಗಳ ಜತೆಗೆ  ರಕ್ತದಾನ, ಕೃತಕ ಬುದ್ಧಿಮತ್ತೆ, ನಿಧಾನವೇ ಪ್ರಧಾನ, ಆಹಾರ ವಿಜ್ಞಾನ, ಮಕ್ಕಳ ಸುರಕ್ಷತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಭೂಮಂಡಲ ರಕ್ಷಣೆ, ಡ್ರಗ್ಸ್ ನಿಷೇಧ, ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆ, ಮಾನವ ಅಂಗಾಂಗ ದಾನ, ಹೆಣ್ಣುಮಕ್ಕಳ ಶಿಕ್ಷಣ, ಮರ ಗಿಡ ಪರಿಸರ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ವಿರೋಧ, ವಾಯು ಮಾಲಿನ್ಯ, ಕ್ಯಾನ್ಸರ್, ಕೋವಿಡ್ 19, ಅರಣ್ಯೀಕರಣ, ಇಂಡಿಯಾ ಮತ್ತು ತಾತ್ವಿಕತೆ, ತಂಬಾಕು ಸೇವನೆ ಪರಿಣಾಮ, ಮಹಿಳೆ ಮೇಲೆ ದೌರ್ಜನ್ಯ, ಜಲ ಸಂರಕ್ಷಣೆ, ಟೆರಾಕೊಟಾ ಆಭರಣ, ಸಮಾಜಮುಖಿ, ಮಹಿಳಾ ಸಂವೇದನೆ ಮತ್ತು ಮಕ್ಕಳ ಕಲ್ಯಾಣ ಇತ್ಯಾದಿ ಸಾಮಾಜಿಕ ಅರಿವಿನ ವಿಷಯಗಳ ಕುರಿತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ರಚಿಸಿದ  ಭಿತ್ತಿಪತ್ರಗಳ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ,  ದೃಶ್ಯ ಕಲಾವಿದ ಮತ್ತು ಗ್ರಾಫಿಕ್ ವಿನ್ಯಾಸಕ ಶ್ರೀದರ್ಶನ್ ಭಾಸ್ಕರ್ ಮಲ್ವಾಂಕರ್, ವಿಜ್ಞಾನ ಓದಿನ ಜತೆಗೆ ಕಲೆ ಮತ್ತು ಸಾಹಿತ್ಯ ಅಭ್ಯಾಸ ಬದುಕನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವುದರಿಂದ ಅದರ ಕಡೆ ಕೂಡ ಮನಸು ಮಾಡಿ ಎಂದು ಸಲಹೆ ನೀಡಿದರು.

ವಿಜ್ಞಾನ ಕಲಿಕೆ ಕೇವಲ ಪದವಿ ಗಳಿಸಲು ಸಹಾಯ ಮಾಡುತ್ತದೆ. ಆದರೆ ಕಲೆ ಮತ್ತು ಸಾಹಿತ್ಯ ಮನಸನ್ನು ಹೆಚ್ಚು ಸಂತೋಷಗೊಳಿಸುತ್ತದೆ. ಅಲ್ಲದೆ, ಬದುಕನ್ನು ಅರ್ಥಪೂರ್ಣವಾಗಿ ಸಾಗಿಸಲು ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ ಆಳುತ್ತಿರುವ ಇಂದಿನ ದಿನಗಳಲ್ಲಿ ಆಧುನಿಕ ತಾಂತ್ರಿಕ ಕೌಶಲ್ಯ ಕಲಿಕೆ ಉದ್ಯೋಗ ಒದಗಿಸಿ ಕೊಡುತ್ತದೆ ಎಂದು  ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ಪದವಿ ದಿನಗಳಲ್ಲಿ ಶೈಕ್ಷಣಿಕ ಓದಿನ ಜತೆಗೆ ಕಲೆ ಮತ್ತು ಕ್ರಿಯಾಶೀಲ ನಡೆಗಳ ಕಡೆಗೆ ಗಮನ ಹರಿಸಲು ಸಲಹೆ ನೀಡಿದರು.

ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಎರಡು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಆಗುತ್ತಿರುವ ಈ ಕಾಲದಲ್ಲಿ ಬದುಕಿನ ಹಾದಿ ಕಂಡುಕೊಳ್ಳಲು ಕ್ರಿಯಾಶೀಲತೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಭಿತ್ತಿಪತ್ರ ರಚನೆ ಕೇವಲ ಶೈಕ್ಷಣಿಕ ಅಗತ್ಯ ಪ್ರಕ್ರಿಯೆ ಮಾತ್ರ ಆಗದೆ, ಉದ್ಯೋಗ ಮತ್ತು ಬದುಕಿನ ಮಾರ್ಗವಾಗಿ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಮಿಸ್ಬಾ ಸ್ವಾಗತಿಸಿದರೆ, ಕೀರ್ತನ ಎನ್ ವಂದಿಸಿದರು ಹಾಗೂ ಮಮತಾ ನಿರೂಪಿಸಿದರು. ಡಾ. ಪರಶಿವಮೂರ್ತಿ ಎಚ್.ಎಸ್. ಮತ್ತು ಡಾ. ಶೋಭಲತ ಎನ್ ತೀರ್ಪುಗಾರರಾಗಿದ್ದರು.

ಕಾರ್ಯಕ್ರಮದಲ್ಲಿ, ಅತಿಥಿಗಳಾಗಿ  ಡಾ.ರಾಮಚಂದ್ರ, ಎನ್.ಎಸ್.ಎಸ್. ಅಧಿಕಾರಿ ಡಾ. ಲಕ್ಷ್ಮಣ ಬಿ, ಡಾ.ನಂಜುಂಡಸ್ವಾಮಿ,  ಅಧ್ಯಾಪಕರಾದ ರಂಗನಾಥ ಎಚ್.ಎಸ್, ದಿನೇಶ ಎಚ್.ಆರ್, ಮಂಜುನಾಥ ಕೆ.ಎಂ, ಲೋಕೇಶ್ ಟಿವಿ, ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರರು, ಕಾಲೇಜು ಅಭಿವೃದ್ಧಿ ಸಮಿತಿ ನೌಕರರು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Mysore, Maharani college,  women and children, protection, Awareness

The post ಮೈಸೂರು: ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಅರಿವಿನ ಬಗ್ಗೆ ಭಿತ್ತಿಪತ್ರ ಪ್ರದರ್ಶನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವಿಷಯ ಪರಿಣಿತರಿಗೆ ವಿದೇಶದಲ್ಲಿ ವಿಪುಲ ಅವಕಾಶ -ಗೀತಾಲಕ್ಷ್ಮೀ ರಾಮಚಂದ್ರನ್
ಮೈಸೂರು ಅಕ್ಟೋಬರ್, 11,2025 (www.justkannada.in):  ಯಾವುದೇ ವಿಷಯದಲ್ಲಿ ಪರಿಣಿತ ಹೊಂದಿದವರಿಗೆ ವಿದೇಶದಲ್ಲಿ ವಿಪುಲ ಅವಕಾಶ ಲಭ್ಯ ಇವೆ ಎಂದು ದುಬೈನ ಖಾಸಗಿ ಕಾನೂನು ಸಲಹೆಗಾರ್ತಿ ಗೀತಾಲಕ್ಷ್ಮೀ ರಾಮಚಂದ್ರನ್ ಅಭಿಮತ ವ್ಯಕ್ತಪಡಿಸಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಭಾಷೆ ಬಳಕೆ ಹಾಗೂ ಸಮಕಾಲೀನ ಸಮಾಜದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯ ಒಳಿತು ಕೆಡುಕು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೀತಾಲಕ್ಷ್ಮೀ ರಾಮಚಂದ್ರನ್ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ಹೆಣ್ಣುಮಕ್ಕಳಿಗೆ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವಕಾಶಗಳ ಮಹಾಪೂರವೇ ಇದೆ.  ಆದರೆ ಅದಕ್ಕೆ ಅಗತ್ಯವಾದ ಪರಿಣಿತಿ ಅಗತ್ಯವಿದೆ. ಇದ್ದವರಿಗೆ ಅವಕಾಶ ಸಿಗಲಿದೆ. ಹಾಗಾಗಿ ಆ ಪರಿಣಿತಿ  ಪಡೆದುಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ  ಕಿವಿಮಾತು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಸಂಸ್ಥೆಗಳಿಗಿಂತ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವಕಾಶ ಹೆಚ್ಚಾಗಿವೆ. ಅದರಲ್ಲೂ ಕಾನೂನು ವಿಭಾಗದಲ್ಲಿ ಹೇರಳವಾಗಿವೆ. ಆದರಿಂದ ಕಾನೂನು ಅಧ್ಯಯನ ಮಾಡುವ ಮೂಲಕ ಅದರ ಅರಿವು ಪಡೆದುಕೊಳ್ಳಿ ಎಂದ ಅವರು, ಮಹಿಳೆಯರಿಗೆ ಕಾನೂನು ಅರಿವು ವೈಯಕ್ತಿಕ ಮತ್ತು ಸಾಮುದಾಯಿಕವಾಗಿ ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬದಲಾದ ಕಾಲಮಾನಕ್ಕೆ ತಕ್ಕಂತೆ ಅಂತರ್ಜಾಲ ತಾಣಗಳು ಕುರಿತು ಕಾನೂನು, ಕ್ಲೌಡ್ ಕಾನೂನು, ಡಾಟಾ ಸಂರಕ್ಷಣೆ ಕಾನೂನು ಮತ್ತು ಕೃತಕ ಬುದ್ಧಿಮತ್ತೆ ಕಾನೂನು ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದ ಅವರು, ಇದನ್ನು ಮಾತೃಭಾಷೆ ಜತೆಗೆ ಇತರೆ ಅಂದರೆ ಇಂಗ್ಲಿಷ್ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಜ್ಞಾನ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಜತೆ ಜತೆಗೆ ಭಾಷೆ ಬದಲಾಗುತ್ತದೆ. ಅಲ್ಲದೇ ಅವುಗಳ ಜತೆಗೆ ತೊಂದರೆಗಳು ಕೂಡ ಅಧಿಕ. ಹಾಗಾಗಿ, ತಂತ್ರಜ್ಞಾನ ಬಳಸಿ ಉನ್ನತೀಕರಿಸಿಕೊಳ್ಳುವ ಜತೆಗೆ ಅಪಾಯದ ಬಗ್ಗೆ ಅರಿತು ಎಚ್ಚರಿಕೆಯಿಂದ ಇರಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ದುರ್ದಿನಗಳು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿರುವ ಇಂದು ಹೆಣ್ಣುಮಕ್ಕಳು ಕಾನೂನು ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಸಮಾಜವನ್ನು ಎದುರಿಸುವುದು ಕಷ್ಟ ಆಗಲಿದೆ ಎಂದು ಎಚ್ಚರಿಸಿದರು.

ವಿಭಾಗದ ಪ್ರಾಧ್ಯಾಪಕ ಡಾ.ಪರಶಿವಮೂರ್ತಿ ಎಚ್.ಎಸ್ ಅವರನ್ನು ಸನ್ಮಾನಿಸಲಾಯಿತು. ಸಹಪ್ರಾಧ್ಯಾಪಕಿ ಡಾ.ಶೋಭಲತ ಎನ್ ಸ್ವಾಗತಿಸಿದರೆ, ಅಧ್ಯಾಪಕ ರಂಗನಾಥ ಎಚ್.ಎಸ್. ವಂದಿಸಿದರು. ಅಧ್ಯಾಪಕ ದಿನೇಶ್ ಎಚ್.ಆರ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು ನಿರೂಪಿಸಿದರು. ಡಾ. ಆನಂದ್ ಎಚ್. ಸಿ, ಅಧ್ಯಾಪಕರು, ಅಧ್ಯಾಪಕೇತರರು,  ಬಿಸಿಎ ಮತ್ತು ಬಿಎಸ್ಸಿ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Mysore, Maharani college, Geethalakshmi Ramachandran

The post ವಿಷಯ ಪರಿಣಿತರಿಗೆ ವಿದೇಶದಲ್ಲಿ ವಿಪುಲ ಅವಕಾಶ -ಗೀತಾಲಕ್ಷ್ಮೀ ರಾಮಚಂದ್ರನ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ: ಸಸಿಗಳನ್ನ ನೆಟ್ಟು ನೀರೆರೆದ ವಿದ್ಯಾರ್ಥಿನಿಯರು
ಮೈಸೂರು, ಅಕ್ಟೋಬರ್ 8,2025 (www.justkannada.in): ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರು ವಿವಿಧ ಪ್ರಭೇದದ ಸುಮಾರು 200 ಸಸಿಗಳನ್ನು ಕಾಲೇಜು ಉದ್ಯಾನವನದಲ್ಲಿ ನೆಟ್ಟು ನೀರೆರೆದರು.

ಕಾಲೇಜಿನ ಅಧ್ಯಾಪಕರು ಮತ್ತು  ಅಧ್ಯಾಪಕೇತರ ಸಿಬ್ಬಂದಿ ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಸಸಿಗಳನ್ನು ಕೊಡುಗೆಯಾಗಿ ನೀಡಿದ್ದು, ಆ ಗಿಡಗಳನ್ನ ವಿದ್ಯಾರ್ಥಿನಿಯರು ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ. ನಟರಾಜ್ ಕೆ ಗಿಡಗಳನ್ನು ಉಳಿಸಿ ಬೆಳೆಸಲು ಸಲಹೆ ನೀಡಿದರು.

ಗಿಡ ಮರಗಳು ನಮಗೆ ಜೀವ ಜೀವನ ಎರಡನ್ನು ನೀಡುತ್ತವೆ. ಹಾಗಾಗಿ ಜೀವ ನೀಡುವ ಜೀವಗಳನ್ನು ಸ್ವಾಭಾವಿಕವಾಗಿ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಅದನ್ನು ಮರೆತ ಕಾರಣ ಒಂದು ಕಾರ್ಯಕ್ರಮ ಮಾಡಿ  ಗಿಡಗಳನ್ನು ನಾವು ನೆಡುವ ಸ್ಥಿತಿಗೆ ತಲುಪಿದ್ದೇವೆ. ಇದು ಅನಿವಾರ್ಯ. ಆದರೂ ಗಿಡ ನೆಟ್ಟು, ಉಳಿಸಿ ಬೆಳೆಸುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್, ರಾಷ್ಟ್ರೀಯ ಸೇವಾ ಯೋಜನೆ ಮೂಲಕ ನಾವು ಕಾಡು ಉಳಿಸಿ ಬೆಳೆಸುವುದರ ಜತೆಗೆ ಗ್ರಾಮೀಣ ಭಾಗದಲ್ಲಿ ಜನರ ಸೇವೆ ಮತ್ತು ಸವಲತ್ತು ಕುರಿತು ಅರಿವು ಮೂಡಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಪಥದತ್ತ ಹೋಗಲು ಸಹಕಾರಿ ಆಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಅಧಿಕಾರಿಗಳಾದ ಡಾ.ಲಕ್ಷ್ಮಣ ಬಿ, ಪ್ರೊ.ಶುಭಾ ಬಿ.ಎಸ್,  ಅಧ್ಯಾಪಕ ಸಂಘದ ಕಾರ್ಯದರ್ಶಿ ರಮೇಶ ಕೆ.ಎಲ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಅಧ್ಯಾಪಕರಾದ ಸುಧಾ, ಲೀಲಾವತಿ, ಪ್ರಮೀಳಾ ಎಚ್. ಸಿ., ಬೃಂದಾ ಎನ್. ಮಧುಮತಿ,  ಸುರೇಶ್, ಅಧ್ಯಾಪಕೇತರರು,   ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಪ್ರತಿನಿಧಿಗಳಾದ ರಮ್ಯಾ ಡಿ, ಶಿವಾಲಿ, ಸುಚಿತ್ರಾ, ಸ್ನೇಹ, ಸೌಂದರ್ಯ, ರಂಜಿತ ಆರ್ ಸೇರಿದಂತೆ ಸುಮಾರು 200 ಸ್ವಯಂ ಸೇವಕರು ಪಾಲ್ಗೊಂಡರು.

Key words: Mysore, Maharani College, National Service Scheme Day

The post ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ: ಸಸಿಗಳನ್ನ ನೆಟ್ಟು ನೀರೆರೆದ ವಿದ್ಯಾರ್ಥಿನಿಯರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಹಿಳೆಗೆ ಅರ್ಹ ಗೌರವ ಸಿಕ್ಕಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ- ಸಹ ಪ್ರಾಧ್ಯಾಪಕಿ ಎಂ.ಸಿ.ಸುಧಾ
ಮೈಸೂರು ,ಆಗಸ್ಟ್,15,2025 (www.justkannada.in):  ಮಹಿಳೆಗೆ ಸಿಗಬೇಕಾದ ಗೌರವ ಸಿಕ್ಕಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ಸಹ ಪ್ರಾಧ್ಯಾಪಕಿ ಎಂ.ಸಿ.ಸುಧಾ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯದ  ಸರಸ್ವತಿ ಪುರo ನಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಧ್ವಜಾರೋಹಣ ನೆರವೇರಿಸಿದರು.

ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ 79 ನೆಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಅವರು, ಇಂದಿನ ಸಮಾಜ ಮಹಿಳೆಯರನ್ನು ಕಾಣುತ್ತಿರುವ ಬಗೆಯನ್ನು ಬದಲಿಸಿಕೊಳ್ಳುವಂತೆ ಸಲಹೆ ನೀಡಿದರು.

ಮಹಿಳೆಯರನ್ನು ಗೌರವಿಸುವ ಸಮಾಜ ನಮ್ಮದಾಗಬೇಕು. ಮಹಿಳೆಯರು ಮುಖ್ಯ ವಾಹಿನಿಯಲ್ಲಿ ಹೆಚ್ಚು ಅವಕಾಶ ಪಡೆದುಕೊಳ್ಳಬೇಕು. ಅಲ್ಲದೆ, ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಅವರು, ಸ್ವಾತಂತ್ರ್ಯ ದೇಶ ಎಂದರೆ ಅನ್ಯರ ಕಪಿ ಮುಷ್ಟಿಯಿಂದ ಹೊರ ಬರುವುದಷ್ಟೇ ಅಲ್ಲ, ಬದಲಿಗೆ ಕಾನೂನು ಪಾಲನೆ ಮಾಡುವುದು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಡುವುದು, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬದುಕಿನಿಂದ ಪ್ರೇರೇಪಣೆ ಪಡೆದು ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳುವುದು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ಜಗತ್ತು ಆಧುನಿಕತೆ ಕಡೆಗೆ ವಾಲುತ್ತಿದೆ. ಆದರೆ, ಹಿಂದಿನ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ನಡೆಸಿದ ತ್ಯಾಗ ಮತ್ತು ಬಲಿದಾನಗಳನ್ನು ಮನಗಂಡು ಅವರ ಮೌಲ್ಯಗಳನ್ನು ಪಾಲಿಸಬೇಕು ಎಂದರು. ಸಸ್ಯಶಾಸ್ತ್ರ ಸಹ ಪ್ರಾಧ್ಯಾಪಕಿ ಕಿರಣ್ಮಯಿ ಪಿ ನಾಗವಂದ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಎನ್.ಎಸ್.ಎಸ್.ಅಧಿಕಾರಿ ಡಾ. ಲಕ್ಷ್ಮಣ ಬಿ, ದೈಹಿಕ ಶಿಕ್ಷಣ ಅಧ್ಯಾಪಕಿ ಡಾ.ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ನಿಲಯ ಪಾಲಕಿ ಪದ್ಮ ಸಿ, ಶೈಕ್ಷಣಿಕ ಡೀನ್ ಡಾ. ಶ್ರೀಪಾದ್,  ಎಚ್.ಆರ್,  ಡಾ. ಹನುಮಂತಪ್ಪ ಮಕರಿ,  ಡಾ.ರಮೇಶ್ ಕೆ. ಎಲ್. ಡಾ. ಅಭಿನಂದಿನಿ, ಡಾ.ಲೀಲಾವತಿ,  ಸುಧಾ, ಡಾ. ಲಕ್ಷ್ಮಣ ಬಿ, ಸಿದ್ದರಾಜು, ನಿಲಯ ಗೋವಿಂದರಾಜು, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು, ಎನ್.ಎಸ್.ಎಸ್, ಎನ್. ಸಿ .ಸಿ,ಕ್ರೀಡೆ, ರೇಂಜರ್ಸ್, ರೆಡ್ ಕ್ರಾಸ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Key words: Independence day, Mysore, Maharani college

The post ಮಹಿಳೆಗೆ ಅರ್ಹ ಗೌರವ ಸಿಕ್ಕಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ- ಸಹ ಪ್ರಾಧ್ಯಾಪಕಿ ಎಂ.ಸಿ.ಸುಧಾ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

MYSORE MAHARANI COLLEGE: ಅವಶೇಷಗಳಡಿ ಸದ್ದಾಂ ಸಿಲುಕಿರುವ ಶಂಕೆ..?
ಮೈಸೂರು, ಜ.೨೮, ೨೦೨೫:  ಮಹಾರಾಣಿ ಮಹಿಳಾ ಕಾಲೇಜುನಲ್ಲಿ ಕಟ್ಟಡ ಕುಸಿತ. ಕಟ್ಟಡ ಕೆಡವುವಾಗ ಏಕಾಏಕಿ ಕುಸಿದ ಕಟ್ಟಡ. 14 ಜನ ಕಟ್ಟಡ ಕೆಲಸ  ಮಾಡ್ತಿದ್ದ ಕಾರ್ಮಿಕರು. ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ಇಂದು 4 ಗಂಟೆ ವೇಳೆಯಲ್ಲಿ ನೆಡೆದ ಘಟನೆ.

ಏಕಾಏಕಿ ನೆಲ ಕಚ್ಚಿತ ಕಟ್ಟಡ. 13 ಕಾರ್ಮಿಕರು ಪ್ರಾಣಾಪಾಯದಿಂದ ಪಾರು. ಕಟ್ಟಡ ಕುಸಿತದಲ್ಲಿ ಸಿಲುಕಿರುವ ಓರ್ವ ಕಾರ್ಮಿಕ. ಕಾರ್ಮಿಕರನನ್ನು ಹುಡುಕುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಹಾಗು ಪೊಲೀಸರು. ಸ್ಥಳಕ್ಕೆ ಆಗಮಿಸಿರುವ ಶಾಸಕ ಕೆ .ಹರೀಶ್ ಗೌಡ ಮತ್ತು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ.

ಅಗ್ನಿಶಾಮಕ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ, ಸದ್ದಾಂ ಗೌಸಿಯನಗರದ ಕಾರ್ಮಿಕ. ಕಟ್ಟಡದೊಳಗೆ ಸಿಲುಕಿರುವ ಕಾರ್ಮಿಕ. ಕಿಟಕಿಗಳನ್ನ ತೆಗದು ಹಾಕುವ ವೇಳೆ ಘಟನೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ.

key words: MYSORE, MAHARANI COLLEGE, SADDAM, FEARED TRAPPED, UNDER THE DEBRIS?

The post MYSORE MAHARANI COLLEGE: ಅವಶೇಷಗಳಡಿ ಸದ್ದಾಂ ಸಿಲುಕಿರುವ ಶಂಕೆ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ
ಮೈಸೂರು,ಜನವರಿ,28,2025 (www.justkannada.in): ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕಾಮಗಾರಿ ವೇಳೆ ಕಟ್ಟಡ ಕುಸಿದಿರುವ ಘಟನೆ ಇಂದು ನಡೆದಿದೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಘಟನೆ ನಡೆದಿದ್ದು ಅವಶೇಷಗಳಡಿ ಓರ್ವ ಕಾರ್ಮಿಕ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು.

ಈ ವೇಳೆ ಕಿಟಕಿ ತೆಗೆಯುವಾಗ ಕಟ್ಟಡ ಕುಸಿದಿದ್ದು ಸದ್ದಾಂ ಎಂಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಮಿಕನ ರಕ್ಷಣೆಗೆ ಮುಂದಾಗಿದ್ದಾರೆ.

Key words: Building, collapses, Maharani College, Mysore

The post ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ
ಮೈಸೂರು,ನವೆಂಬರ್,25,2024 (www.justkannada.in): ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ  ಇಂದು ಪುಸ್ತಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಮತ್ತು ಇತರ ಅಧ್ಯಾಪಕರು ವಿದ್ಯಾರ್ಥಿಗಳ ಮುಂದೆ ಕೆಲವು ಪುಸ್ತಕಗಳನ್ನು ಓದಿದರು.

ಹಾಗೆಯೇ ಪುಸ್ತಕಗಳನ್ನು ಓದಿ ಜ್ಞಾನವನ್ನು ಪಡೆದುಕೊಳ್ಳಬೇಕು ಇದು ಭವಿಷ್ಯದ ಉದ್ದೇಶಕ್ಕೆ ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಜಯಪ್ರಕಾಶ್ ಎಚ್ ಎಲ್, IQAC Coordinator ಡಾ. ನಂದಕುಮಾರ್ ವಿ, ಮತ್ತು ಇತರ ವಿಭಾಗದ ಅಧ್ಯಾಪಕರಾದ ಡಾ. ಪರಶುರಾಮ್ ಮೂರ್ತಿ, ಡಾ. ಥೋಯಾಜಾಕ್ಸಾ, ಡಾ. ರಾಮಚಂದ್ರ, ಡಾ. ರಮೇಶ್‌ಬಾಬು, ಡಾ. ರಮೇಶ್, ಡಾ. ಮಾದೇಸ್ವಾಮಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Book exhibition, Maharani College, Mysore

The post ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಲ ಸಂಪನ್ಮೂಲ ಬಳಕೆ, ತಂತ್ರಜ್ಞಾನ ಸಂಶೋಧನೆ ಕುರಿತು ವಿಚಾರ ಸಂಕಿರಣ: ವಿಜ್ಞಾನಿಗಳು ಸೇರಿ ಹಲವರು ಭಾಗಿ
ಮೈಸೂರು, ನವೆಂಬರ್,19,2024 (www.juskannada.in): ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ  ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಎಂಬ ವಿಷಯದ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾನಿಲಯದ ಬಹದ್ದೂರ್ ವ್ಯವಹಾರ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ತೈವಾನ್ ದೇಶದ, ರಾಷ್ಟ್ರೀಯ ತೈವಾನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಪ್ರೊಫೆಸರ್ ವೀಸಾಂಗ್ ಹಂಗ್ ಅವರು ನೀರು ಶುದ್ಧೀಕರಣದಲ್ಲಿ ತಂತ್ರಜ್ಞಾನದ ಕುರಿತು ಮಾತನಾಡಿದರು.

ನವೀನ ಮತ್ತು ಉನ್ನತೀಕರಿಸಿದ ಗ್ರಾಫಿಕ್ ತಂತ್ರಜ್ಞಾನದಿಂದ ನೀರನ್ನು ಶುದ್ಧೀಕರಣ ಮಾಡುವ ವಿಧಾನದಿಂದ ಆಗುವ ಪ್ರಯೋಜನಗಳ ಕುರಿತು ಮಾತನಾಡಿದ ಅವರು, ಸದರಿ ತಂತ್ರಜ್ಞಾನ ಆಧುನಿಕ ಹಾಗೂ ಮುಂದುವರಿದ ತಂತ್ರಜ್ಞಾನವಾಗಿದ್ದು ಇದರಿಂದ ಯಾವುದೇ ವ್ಯತಿರಿಕ್ತವಾದ ಪರಿಣಾಮಗಳು ಮಾನವ ಮತ್ತು ಪರಿಸರದ ಮೇಲೆ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೊಂದು ಸರಳ ತಂತ್ರಜ್ಞಾನ. ಇದರಿಂದ ಯಾವುದೇ ಅಡ್ಡ ಪರಿಣಾಮವಾಗಲಿ, ಹೆಚ್ಚು ಹೊರೆಯಾಗಲಿ ಆಗುವುದಿಲ್ಲ. ಹಾಗಾಗಿ ಇದು ಮುಂದುವರಿಯುತ್ತಿರುವ ಭಾರತದಂತಹ ರಾಷ್ಟ್ರಗಳಿಗೆ ಪರಿಣಾಮಕಾರಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ವಾಗಿದೆ ಎಂದರು.

ಉತ್ತಮ ಗ್ರಾಫಿಕ್ ನಿಂದ ನೀರನ್ನು ಶುದ್ಧೀಕರಣ ಮಾಡುವುದರಿಂದ ನೀರು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಮತ್ತು ಬಳಕೆಗೆ ಯೋಗ್ಯವಾಗಿರುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಇದನ್ನ ಅನುಸರಿಸಿದರೆ ತಗುಲುವ ಖರ್ಚು ಕೂಡ ಕಡಿಮೆ ಪ್ರಮಾಣದಲ್ಲಿ ಇರುತ್ತದೆ, ಎಂದು ಪ್ರತಿಪಾದಿಸಿದ ಅವರು, ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಸುವಂತೆ ಸಲಹೆ ನೀಡಿದರು. ” ಮುಂದುವರಿಯುತ್ತಿರುವ ಭಾರತದಂತಹ ಹಲವು ರಾಷ್ಟ್ರಗಳಲ್ಲಿ  ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಸಬೇಕು. ಇದರಿಂದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಕಾಣಬಹುದು. ಅದು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು‌.

ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಕೆ.ಹರೀಶ್ ಗೌಡ, ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಮಾತನಾಡಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನೆ ಗುಣ ವೃದ್ಧಿ ಮಾಡಿಕೊಳ್ಳಲು ಸಲಹೆ ನೀಡಿದರು‌.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರೊ. ರಾಮಕೃಷ್ಣ ರಾವ್ ಅವರು, ಇತ್ತೀಚಿನ ಸಂಶೋಧನಾ ಬೆಳವಣಿಗೆಗಳ ಬಗ್ಗೆ ಬೆಳಕು ಚಲ್ಲಿದರು.  ವಿವಿಧ ರಾಜ್ಯ, ದೇಶಗಳಿಂದ ಸುಮಾರು 400ಕ್ಕೂ ಹೆಚ್ಚು ಸಂಶೋದಕರು, ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿದ್ದರು.

ಎಂ.ಎಲ್.ಸಿ ಕೆ.ವಿವೇಕಾನಂದ , ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ.ವಿ.ನಂದಕುಮಾರ್, ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕ ಡಾ.ರವಿಶಂಕರ್ ಡಿ.ಕೆ, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಕಾಲೇಜಿನ ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: mysore, maharani college, Water Resource, seminar

The post ಜಲ ಸಂಪನ್ಮೂಲ ಬಳಕೆ, ತಂತ್ರಜ್ಞಾನ ಸಂಶೋಧನೆ ಕುರಿತು ವಿಚಾರ ಸಂಕಿರಣ: ವಿಜ್ಞಾನಿಗಳು ಸೇರಿ ಹಲವರು ಭಾಗಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.