lokesh-piya – Just Kannada

ಮಾಜಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ ಸಚಿವ ಸತೀಶ್ ಜಾರಕಿಹೊಳಿ
ಮೈಸೂರು,ಅಕ್ಟೋಬರ್,8,2024 (www.justkannada.in):  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ದಿಢೀರ್ ಮೈಸೂರು ಪ್ರವಾಸ ಕೈಗೊಂಡಿದ್ದು ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದರು.

ನಗರದ ಸುಣ್ಣದಕೇರಿ ಬಡಾವಣೆಯಲ್ಲಿರುವ ಆಪ್ತ ಲೋಕೇಶ್ ಪಿಯಾ ಅವರ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದು, ಬಡಾವಣೆ ನಿವಾಸಿಗಳು ಅದ್ದೂರಿ ಸ್ವಾಗತ ಕೋರಿದರು.  ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಲೋಕೇಶ್ ಪಿಯಾ ಮತ್ತು ಬೆಂಬಲಿಗರು ಸ್ವಾಗತಿಸಿದರು.

ಸಚಿವ ಸತೀಶ್ ಜಾರಕಿಹೊಳಿಗೆ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದು,  ನಂತರ ಸತೀಶ್ ಜಾರಕಿಹೊಳಿ ದೋಸೆ,ಅಕ್ಕಿ ರೊಟ್ಟಿ, ಜಟ್ನಿಪುಡಿ ಉತ್ತರ ಕರ್ನಾಟಕದ ಶೈಲಿಯ ಉಪಾಹಾರ ಸೇವಿಸಿದರು.

ಈ ವೇಳೆ ಅಲ್ಲಿದ್ದ ಬೆಂಬಲಿಗರು ಸಾರ್ವಜನಿಕರು ಸತೀಶ್ ಜಾರಕಿಹೊಳಿ ಅವರನ್ನ ನೋಡಲು ಮುಗಿಬಿದ್ದ ಘಟನೆ ನಡೆಯಿತು. ಮೈಸೂರು ಭಾಗದ ಸಚಿವರು, ಶಾಸಕರ‌ ಭೇಟಿಗೂ  ಸತೀಶ್ ಜಾರಕಿಹೊಳಿ ತಯಾರಿ ನಡೆಸಿದ್ದು ಸಚಿವ ಡಾ.ಎಚ್.ಸಿ.ಮಹದೇವಪ್ಪ ನಿವಾಸಕ್ಕೆ ತೆರಳಲಿದ್ದಾರೆ.

Key words: mysore,  Minister,  Satish Jarakiholi,  Visit, Lokesh Piya, residence

ಸಚಿವ ಡಾ.ಅಶ್ವಥ್ ನಾರಾಯಣ್ ದುಂಡಾವರ್ತನೆ ಖಂಡಿಸಿ ಮೈಸೂರಲ್ಲಿ ಪಾಲಿಕೆ ಸದಸ್ಯ ಲೊಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ.
ಮೈಸೂರು,ಜನವರಿ,5,2022(www.justkannada.in):  ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಂಸದ ಡಿ.ಕೆ.ಸುರೇಶ್ ಅವರ ಜತೆ  ಸಚಿವ ಡಾ.ಅಶ್ವಥ್ ನಾರಾಯಣ್ ಗೂಂಡಾ ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಪಾಲಿಕೆ ಸದಸ್ಯ ವಿ.ಲೊಕೇಶ್ ಪಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಬುಧವಾರ ಪ್ಲೆಕಾರ್ಡ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ  ಕಾಂಗ್ರೆಸ್ ಕಾರ್ಯಕರ್ತರು  ಬಿಜೆಪಿ ಸಚಿವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಲೊಕೇಶ್ ಪಿಯಾ, ನಾಡಿನ ಆರುವರೆ ಕೋಟಿ ಕನ್ನಡಿಗರ ನಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇದಿಕೆಯಲ್ಲಿರುವಾಗಲೇ, ಅವರ ಮಾತನ್ನು ಧಿಕ್ಕರಿಸಿ ಸಚಿವ ಡಾ.ಅಶ್ವಥ್ ನಾರಾಯಣ್ ಅವರು ದುರ್ವತನೆ ತೋರಿಸಿದ್ದು ಅಕ್ಷಮ್ಯ. ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ವೇಳೆ ರಾಜಕೀಯ ಸಲ್ಲದು. ಯಾವುದೇ ಪಕ್ಷ ಅಧಿಕಾರದಲ್ಲಿರಲಿ. ಅದು ಜನತೆಯ, ಸಾರ್ವಜನಿಕರ ಸೇವೆಗೆ ಮಾತ್ರ ಇರುವಂತದ್ದೇ ಹೊರತು ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅಲ್ಲ. ಈ ಸತ್ಯದ ಅರಿವಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಆದಿಯಾಗಿ ವೇದಿಕೆಯಲ್ಲಿದ್ದ ಗಣ್ಯರು, ಸಚಿವ ಅಶ್ವಥ್ ನಾರಾಯಣ್ ಅವರನ್ನು ಶಾಂತರನ್ನಾಗಿಸಲು ಯತ್ನಿಸಿದ್ದು.

ಆದರೆ ಕೊಳಕು ಮನಸ್ಸಿನ ಸಚಿವ ಡಾ.ಅಶ್ವಥ್ ನಾರಾಯಣ್, ವಿನಾಕರಣ ವೇದಿಕೆಯಲ್ಲಿ ರಾಜಕೀಯ ಬೆರಸಿದರು. ಆ ಮೂಲಕ ಸಭಾ ಮರ್ಯಾಧೆಯನ್ನೇ ಹಾಳುಗೆಡವಿದರು. ಇಷ್ಟೆಲ್ಲಾ ಅವಾಂತರ ಮಾಡಿದ ಸಚಿವರ ದುರ್ನಡತೆಯನ್ನು ಸಂಸದರಾದ ಡಿ.ಕೆ.ಸುರೇಶ್ ಅವರು  ವೇದಿಕೆಯಲ್ಲಿ ಪ್ರಶ್ನಿಸಿದ್ದು ಸಮಂಜಸವಾಗಿಯೇ ಇದೆ.

ತಾವೊಬ್ಬ ಸಚಿವರು ಎಂಬುದನ್ನು ಮರೆತು  ಡಾ.ಅಶ್ವಥ್ ನಾರಾಯಣ್ ಅವರ ವರ್ತನೆ ಖಂಡನೀಯ. ವೇದಿಕೆಯಲ್ಲೇ ಗಂಡಸ್ತನದ ಪ್ರಸ್ತಾಪ ಮಾಡುವ ಮೂಲಕ ವೇದಿಕೆಯಲ್ಲಿದ್ದ ಗಣ್ಯರು ಮುಜುಗರ ಪಡುವಂತೆ ಮಾಡಿದರು. ಈ ಕೂಡಲೇ ಡಾ.ಅಶ್ವಥ್ ನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಎಂದು ಕಾರ್ಪೊರೇಟರ್ ಲೋಕೇಶ್ ಪಿಯಾ ಆಗ್ರಹಿಸಿದರು.

Key words: Mysore-protests – Lokesh Piya

ನೀವೇನು ಟಾಟಾ ಬಿರ್ಲಾ ಸಂಬಂಧಿಕರ..? ಮಾಜಿ ಶಾಸಕಗೆ ಕಾಂಗ್ರೆಸ್ ಕಾರ್ಪೋರೇಟರ್ ತಿರುಗೇಟು.
ಮೈಸೂರು, ಫೆ.19, 2021 : ಎಸ್.ಟಿ ಮೀಸಲಾತಿಯಿಂದ ನಾನು ಗೆದ್ದಿದ್ದು. ನಮ್ಮ ವಾರ್ಡಿನ ಎಲ್ಲಾ ಜನ ನನ್ನನ್ನ ಗೆಲ್ಸಿದ್ದು. ಮಾಜಿ ಶಾಸಕ ಎಂ.ಕೆ ಸೋಮಶೇಖರ್‌ ಅವರು ಹೇಳಿದಂತೆ, ಅವರಿಂದ ನಾನು ಚುನಾವಣೆ ಗೆದ್ದಿಲ್ಲ ಎಂದು ಕಾರ್ಪೋರೇಟರ್ ಲೋಕೇಶ್ ವಿ.ಪಿಯಾ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಮಾಜಿ ಶಾಸಕ ಸೋಮಶೇಖರ್ ಹಾಗೂ ಕಾರ್ಪೋರೇಟರ್ ಲೊಕೇಶ್ ವಿ.ಪಿಯಾ ನಡುವಿನ ಶೀತಲ ಸಮರ ಮುಂದುವರೆದಿದ್ದು, ಎಂ.ಕೆ.ಸೋಮಶೇಖರ್, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಎಲ್ಲೋ ಇದ್ದ ಲೋಕೇಶ್ ಪಿಯಾರನ್ನು ನಾನೇ ಕರೆತಂದು ಟಿಕೆಟ್ ಕೊಟ್ಟು ಕಾರ್ಪೋರೇಟರ್ ಮಾಡಿದ್ದು ಎಂದಿದ್ದರು.

ಮಾಜಿ ಶಾಸಕ ಸೋಮಶೇಖರ್ ಅವರ ಈ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ತೀಕ್ಷ್ಣವಾಗಿ ಲೋಕೇಶ್ ಪಿಯಾ ಪ್ರತಿಕ್ರಿಯಿಸಿದ್ದು, ವಿವರ ಹೀಗಿದೆ.

ಸೋಮಶೇಖರ್ ಶಾಸಕರಾಗಿದ್ದಾಗಲೇ ವಾರ್ಡಿನಲ್ಲಿ ಕಾರ್ಪೋರೇಟರ್ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಿರಲಿಲ್ಲ. ಇನ್ನು ಅವರು ಸೋತು ಮಾಜಿಯಾದಾಗ ಹೇಗೆ ತಾನೆ ನನ್ನನ್ನು ಗೆಲ್ಲಿಸಲು ಸಾಧ್ಯ,,? ನೀವು ನಮ್ಮನ್ನ ಬಳಸಿಕೊಂಡ್ರಿ, ನಿಮಗಾಗಿ ನಾವು ಕೆಲಸ ಮಾಡಿದ್ದೀವಿ. ಬಳಿಕ ನೀವು ನನ್ನನ್ನ ಕಡೆಗಣಿಸಿ, ಅನ್ಯಾಯವೆಸಗಿದ್ರಿ.

ನಮ್ಮ ಜನಾಂಗಕ್ಕೆ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮಹಾದೇಶ್ವರ ದೇವಸ್ಥಾನಕ್ಕೆ ಒಂದು ಕೋಟಿ ರೂ. ಅನುದಾನ ಕೊಟ್ಟಿರುವೆ ಎಂದು ಎಂ.ಕೆ.ಸೋಮಶೇಖರ್ ಹೇಳಿದ್ದಾರೆ. ಈ ಅನುದಾನ ಬಂದಿದ್ದು ಸರ್ಕಾರದಿಂದಲೇ ಹೊರತು ನಿಮ್ಮ ಮನೆಯಿಂದ ಕೊಟ್ಟಿದಲ್ಲ. ಈ ಅನುದಾನದಲ್ಲಿ ಎಷ್ಟು ಕಮಿಷನ್ ತಗೋಂಡ್ರಿ ಹೇಳಿ. ನಿಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳಿ. ನೀವು ಏನೇನ್ ಮಾಡಿದ್ದೀರಾ ಅನ್ನೋದು ನನಗೆ ಪೂರ್ಣ ಗೊತ್ತು.

ಎಲ್ಲೂ ಇದ್ದವರನ್ನ ಕರೆದುಕೊಂಡು ಬಂದು ಪಾಲಿಕೆ ಸದಸ್ಯ ಮಾಡಿದೆ ಎಂದಿದ್ದೀರಾ, ನೀವು ರಾಜಕೀಯಕ್ಕೆ ಬರುವ ಮೊದಲು ಹೇಗಿದ್ರಿ, ಈಗ ಹೇಗಿದ್ದೀರಾ ಅನ್ನೋದು ಗೊತ್ತು. ಎಲ್ಲೆಲ್ಲಿ ಆಸ್ತಿಗಳನ್ನು ಮಾಡಿದ್ದೀರಾ ಅನ್ನೋದು ತಿಳಿದಿದೆ.

ಬೆಂಗಳೂರಿನಲ್ಲಿನಲ್ಲಿ ಅಪಾರ್ಟ್ ಮೆಂಟ್ ನಿಂದ 5 ಲಕ್ಷ ರೂ. ಬಾಡಿಗೆ, ಹೋರ್ಡಿಂಗ್ ಬೋರ್ಡ್ ನಿಂದ 20 ಲಕ್ಷ ರೂ. ನಕಲಿ ಗ್ಯಾಸ್ ಮೂಲಕ ಲಕ್ಷಾಂತರ ರೂ. ಕೌಸ್ತುಭ ಫೈನಾನ್ಸ್ ಮೂಲಕ ನೂರಾರು ಕೋಟಿ ರೂ. ವ್ಯವಹಾರ, ಸಿಎ ನಿವೇಶಗಳು, ಕಲ್ಯಾಣಮಂಟಪಗಳ ಒಡೆತನ ಹೊಂದಿರುವುದು ಈ ಎಲ್ಲಾವು ತಿಳಿದಿದೆ. ಈ ಬಗ್ಗೆ ಸದ್ಯದಲ್ಲೇ ಸಾಕ್ಷಿ ಸಮೇತ ಲೋಕಾಯುಕ್ತರಿಗೆ ದೂರು ನೀಡುವೆ. ಮಾಧ್ಯಮದ ಮುಂದೆಯೂ ಈ ಎಲ್ಲಾ ವಿವರ ಬಹಿರಂಗಪಡಿಸುವೆ. ಇಷ್ಟೆಲ್ಲಾ ಆಸ್ತಿ ಹೊಂದಿರಲು ನೀವೇನು ಟಾಟಾ ಬಿರ್ಲಾ ಸಂಬಂಧಿಕರಲ್ಲ. ಕಾರ್ಯಕರ್ತರ ಶ್ರಮದಿಂದ ಅಧಿಕಾರ ಹೊಂದಿ ಹಣ ಸಂಪಾದನೆ ಮಾಡಿದ್ದೀರಾ. ಮಾತನಾಡುವ ಮೂದಲು ನಾಲಿಗಿ ಬಿಗಿ ಹಿಡಿದು ಮಾತನಾಡಿ. ನಿಮ್ಮ ದಬ್ಬಾಳಿಕೆ, ದೌರ್ಜನ್ಯ ಸಹಿಸಿಕೊಂಡು ಕಾಂಗ್ರೆಸ್ ನ ಅನೇಕ ಕಾರ್ಯಕರ್ತರು ಮೌನವಾಗಿದ್ದಾರೆ. ಅದು ಅವರ ದೌರ್ಬಲ್ಯವಲ್ಲ. ಪಕ್ಷದ ಮೇಲಿನ ಗೌರವದಿಂದ, ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಸುಮ್ಮನಿದ್ದಾರೆ. ಆದರೆ ಇದು ಮಿತಿಮೀರಿದರೆ ಅವರೆಲ್ಲಾ ನಿಮ್ಮ ವಿರುದ್ಧ ಬೀದಿಗಿಳಿಯುತ್ತಾರೆ. ಎಚ್ಚರ.

ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ, ಮುಡಾ ಮೆಂಬರ್ ಯಾವುದು ಸಿಗದಂತೆ ಮಾಡಿದ್ದು ಮಾಜಿ ಶಾಸಕರಾದ ಸೋಮಶೇಖರ್. ಇಷ್ಟೆಲ್ಲಾ ಅನ್ಯಾಯ ಮಾಡಿದ್ರು, ಬೇಸರವಾದರು ಸಹ ಮಾಜಿ ಸಿಎಂ, ಅಹಿಂದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಮುಖ ನೋಡ್ಕೊಂಡು ನೋವನ್ನು ಸಹಿಸಿಕೊಂಡಿದ್ದೇನೆ ಎಂದಿದ್ದಾರೆ.

key words : mysore-city-corporation-lokesh-piya-mcc

ಕಾಂಗ್ರೆಸ್ ಮಾಜಿ ಶಾಸಕ ವಿರುದ್ಧ ಸ್ವಜನ ಪಕ್ಷಪಾತ ಆರೋಪ : ಮೈಸೂರು ಕಾರ್ಪೊರೇಟರ್ ಗರಂ..!
ಮೈಸೂರು, ಫೆ.18, 2021 : (www.justkannada.in news ) ಕಾಂಗ್ರೆಸ್ ಮಾಜಿ ಶಾಸಕರ ವಿರುದ್ಧ ಮೈಸೂರು ನಗರ ಪಾಲಿಕೆ ಸದಸ್ಯ, ಸ್ವಜನ ಪಕ್ಷಪಾತದ ಆರೋಪ ಮಾಡಿ, ನಾಯಕ ಸಮುದಾಯಕ್ಕೆ ಸೇರಿರುವ ಕಾರಣ ರಾಜಕೀಯವಾಗಿ ಧಮನಿಸಲು ಮುಂದಾಗಿದ್ದಾರೆ ಎಂದು ದೂಷಿಸಲಾಗಿದೆ.

ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ವಿರುದ್ಧ ಪಾಲಿಕೆ ಕಾಂಗ್ರೆಸ್ ಸದಸ್ಯ ಲೋಕೇಶ್ ವಿ.ಪಿಯಾ ಆರೋಪ ಮಾಡಿರುವುದು. ಅವರ ಪತ್ರಿಕಾ ಹೇಳಿಕೆಯ ವಿವರ ಹೀಗಿದೆ..

ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಬೆಳೆಸದೆ, ಅವರ ಧಮನಕ್ಕೆ ಮಾಜಿ ಶಾಸಕ ಸೋಮಶೇಖರ್ ಮುಂದಾಗಿದ್ದಾರೆ. ಅವರ ಈ ವರ್ತನೆ ಇದೇ ರೀತಿ ಮುಂದುವರಿದಲ್ಲಿ ಪಕ್ಷದಲ್ಲಿನ ನಿಷ್ಠಾವಂತರು ನೆಲೆ ಕಳೆದುಕೊಳ್ಳುವ ಅಪಾಯವಿದೆ.

ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದ ಮೈಸೂರು ನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯರ ಪೈಕಿ ನಾನೇ ಏಕೈಕ ಸದಸ್ಯ. ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವಿವಿಧ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪಕ್ಷ ನಿಷ್ಠೆ ಪ್ರದರ್ಶಿಸಿರುವೆ. ಇದನ್ನು ಮನಗಂಡು ಮಾಜಿ ಮುಖ್ಯಮಂತ್ರಿ , ಅಹಿಂದ ನಾಯಕರಾದ ಸಿದ್ದರಾಮಯ್ಯ ಅವರು ನನಗೆ ನಗರ ಪಾಲಿಕೆಯ ಟಿಕೆಟ್ ನೀಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಅವರ ಆರ್ಶೀವಾದದ ಫಲವಾಗಿ ನಾನು ನನ್ನ ಮೊದಲ ಯತ್ನದಲ್ಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಬಳಿಕ ವಾರ್ಡಿನ ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂಧಿಸುವ ಮೂಲಕ ಜನ ಮನ್ನಣೆಗಳಿಸಿರುವೆ.

ಆದರೆ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಾಯಕ ಜನಾಂಗದ ನನ್ನ ಅಭಿವೃದ್ಧಿಗೆ ಅಡ್ಡಗಾಲಾಗಿದ್ದಾರೆ. ರಾಜಕೀಯವಾಗಿ ತುಳಿಯಲು ಪಟ್ಟು ಹಿಡಿದಿದ್ದಾರೆ. ಹಿಂಬಾಲಕ ಪಟಲಾಂಗಳಿಗಾಗಿ ನನ್ನಂತ ಅನೇಕ ನಿಷ್ಠಾವಂತರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ.

ರಾಜಕೀಯವಾಗಿ ಬೆಳೆಯಲು ನನಗೆ ಹಲವಾರು ಅವಕಾಶಗಳಿದ್ದರು ಎಂ.ಕೆ.ಸೋಮಶೇಖರ್, ಕುತಂತ್ರದಿಂದ ಅದು ಈಡೇರಲಿಲ್ಲ. ಪಕ್ಷದ ನಿಷ್ಠಾವಂತರಿಗೆ ಸಿಗಬೇಕಾದ ಅವಕಾಶಗಳು, ಕುಟುಂಬದವರ ಪಾಲಾಗಿದೆ. ಶಾಸಕರಾಗಿದ್ದ ವೇಳೆ ಇವರು ಕೆ.ಎಸ್.ಐಸಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದರು. ಈ ಹುದ್ದೆಯನ್ನು ಕಾರ್ಯಕರ್ತರಿಗೆ ಬಿಟ್ಟುಕೊಡಬಹುದಾಗಿತ್ತು. ಆದರೆ ಅಷ್ಟು ದೊಡ್ಡತನ ಪ್ರದರ್ಶಿಸದೆ, ಅಧಿಕಾರದ ದುರಾಸೆಯಿಂದ ಕಾರ್ಯಕರ್ತರನ್ನು ಬೆಳೆಯಲು ಬಿಡದೆ ತಾವೇ ಎಲ್ಲಾ ಸವಲತ್ತುಗಳನ್ನು ಅನುಭವಿಸಿದರು.

ಎಂ.ಕೆ.ಸೋಮಶೇಖರ್ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದ ಎಂ.ಸಿ.ಚಿಕ್ಕಣ್ಣ ಅವರನ್ನು ಒಲೈಸುವ ಸಲುವಾಗಿ ಕಳೆದ ಬಾರಿ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದರು. ಕಡೆಗೆ ಕುತಂತ್ರದಿಂದ ಚಿಕ್ಕಣ್ಣ ಅವರನ್ನು ಸೋಲಿಸುವ ಮೂಲಕ ರಾಜಕೀಯವಾಗಿ ಅವರನ್ನು ಮುಗಿಸಿದರು.

ಇದೀಗ, ನಾಯಕ ಜನಾಂಗದವರಿಗೆ ಯಾವುದೇ ರಾಜಕೀಯ ಅವಕಾಶಗಳು ಲಭಿಸಬಾರದು. ಅವರು ಮುಂದೆ ಬರಬಾರದು ಎಂಬುದು ಸೋಮಶೇಖರ್ ದುರುದ್ದೇಶ. ಈ ಕಾರಣಕ್ಕಾಗಿಯೇ ನನಗೆ ಲಭಿಸಬೇಕಾಗಿದ್ದ ಹಲವಾರು ಅವಕಾಶಗಳಿಗೆ, ನಾನು ನಾಯಕ ಜನಾಂಗದವನು ಎಂಬ ಏಕೈಕ ಕಾರಣದಿಂದ ಅಡ್ಡಗಾಲು ಹಾಕಿದ್ದಾರೆ. ಮುಡಾ ಸದಸ್ಯರಾಗಿ ನೇಮಿಸುವ ಅವಕಾಶವಿದ್ದರು, ಸೋಮಶೇಖರ್ ಅಲ್ಲೂ ಅಡ್ಡಗಾಲು ಹಾಕಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ಅವರ ವರ್ತನೆ ಬದಲಾಗದಿದ್ದಲ್ಲಿ ಪಕ್ಷದ ವರಿಷ್ಠರಿಗೆ ದೂರು ನೀಡುವುದು ಅನಿವಾರ್ಯ ಎಂದು ಕಾರ್ಪೋರೇಟರ್ ಲೋಕೇಶ್ ವಿ.ಪಿಯಾ ತಿಳಿಸಿದ್ದಾರೆ.

key words : mysore-city-corporater-mcc-mla–congress-somashekar-lokesh-piya