liquor store | Just Kannada - Daily News Updates

ನಕಲಿ ದಾಖಲೆ ಸೃಷ್ಠಿಸಿ ಮದ್ಯದಂಗಡಿ ಓಪನ್: PDO ವಿರುದ್ಧ ದೂರು
ಮೈಸೂರು,ಜುಲೈ,16,2026 (www.justkannada.in): ನಕಲಿ ದಾಖಲೆ ಸೃಷ್ಠಿಸಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವ ಆರೋಪದ ಮೇಲೆ ಪಿಡಿಒ ವಿರುದ್ದ  ಮೈಸೂರು ಜಿಲ್ಲೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊತ್ತೇಗಾಲ‌ ಪಿಡಿಓ ನಾಗೇಂದ್ರ ಸೇರಿ ಬಾರ್ ಮಾಲೀಕರ ವಿರುದ್ಧ ವಕೀಲ ವಿ.ರವಿಕುಮಾರ್ ನೇತೃತ್ವದಲ್ಲಿ ಬಸವನಾಯ್ಕ‌ ಸೇರಿ ಹಲವರು ದೂರು ಸಲ್ಲಿಕೆ ಮಾಡಿದ್ದಾರೆ.

ಅಧಿಕೃತ ಸರ್ಕಾರಿ ದಾಖಲೆಗಳನ್ನ ತಿದ್ದಿದ್ದು, ಸರ್ಕಾರಿ ಡಿಮ್ಯಾಂಡ್ ದಾಖಲೆಗಳನ್ನ ಫೋರ್ಜರಿ ಮಾಡಿದ್ದಾರೆ. ಭೂ ಪರಿವರ್ತನೆ, ನಕ್ಷೆಗಳಿಲ್ಲದೆ ಕೃಷಿ ಜಮೀನಿನ ಜಾಗಕ್ಕೆ 11 ಬಿ ದಾಖಲೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕದೇವಮ್ಮ ತಾಯಿ ದೇವಸ್ಥಾನದ ಸಮೀಪ ಬಾರ್ ತೆರೆಯಲಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರನ್ನ ಕುಡುಕರನ್ನಾಗಿ ಮಾಡುತ್ತಿದ್ದಾರೆ. ಪರಿಸರ ಸೂಕ್ಷ್ಮವಲಯವನ್ನ ಹಾಳು ಮಾಡುತ್ತಿದ್ದಾರೆ. ಮದ್ಯದಂಗಡಿ ಮುಚ್ಚಿಸಿ, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವಂತೆ ದೂರುದಾರರು ಆಗ್ರಹಿಸಿದ್ದಾರೆ.

Key words: Liquor store, opened , fake documents, Complaint, PDO, Mysore

ಮದ್ಯದ ಅಂಗಡಿಗೆ ಅವಕಾಶ ,ಮಧ್ಯಮ ವರ್ಗದವರಿಗೆ ಬರೆ: ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರಿಯ – ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ…
ಮೈಸೂರು,ಏಪ್ರಿಲ್,23,2021(www.justkannada.in): ಕೊರೋನಾ ನಿಯತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರಾಜ್ಯದಲ್ಲಿ ಕೊರೊನ ತಾಂಡವವಾಡುತ್ತಿದೆ. ಜನರ ಸಮಸ್ಯೆ ಬಗ್ಗೆ ಪರಿಹರಿಸುವ ಸರ್ಕಾರ ಕೆಲಸ ಮಾಡುತ್ತಿಲ್ಲ. ಯಾರೋ ಐಎಎಸ್ ಅಧಿಕಾರಿ ಮಾತು ಕೇಳಿ ಅಧಿಕಾರ ನಡೆಸುತ್ತಿದ್ದೀರಿ. ಮದ್ಯದ ಅಂಗಡಿಗೆ ಅವಕಾಶ ನೀಡಿ ಸಣ್ಣ ಪುಟ್ಟ ಅಂಗಡಿಗಳನ್ನ ಬಂದ್ ಮಾಡಿಸೋದು ಎಷ್ಟು ಸರಿ..! ಮದ್ಯದ ಅಂಗಡಿಗೆ ಅವಕಾಶ  ನೀಡಿ ಮಧ್ಯಮ ವರ್ಗದವರಿಗೆ ಬರೆ ಎಳೆಯುತ್ತಿದ್ದೀರಿ. ಕಳೆದ ಅವಧಿಯಲ್ಲಿ  ಖರೀದಿಸಿದ್ದ ವೆಂಟಿಲೇಟರ್ ಗಳು ಈಗ ಎಲ್ಲಿದೆ, ಹೇಗೆ ಕಾರ್ಯನಿರ್ವಹಿಸುತ್ತಿದೆ ತಿಳಿಸಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಎಲ್ಲ ಮಂತ್ರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಸಿಎಂ ಗೆ ಕೆಟ್ಟ ಹೆಸರು ಬರಬೇಕು ಎಂತಲೂ ಸುಮ್ಮನಿರಬೇಕು. ಸಚಿವ ಆರ್.ಅಶೋಕ್, ಈಶ್ವರಪ್ಪ, ಸಿಟಿ ರವಿ, ರೇಣುಕಾಚಾರ್ಯ ಮುಂತಾದವರು ಎಲ್ಲಿದ್ದಾರೆ. ಈ ಬಗ್ಗೆ ಯಾಕೆ ಏನು ಮಾತನಾಡುತ್ತಿಲ್ಲ, ಇದನ್ನೆಲ್ಲ ಪ್ರಶ್ನಿಸಿದ್ರೆ ನನಗೆ ಸಚಿವ ಆರ್. ಅಶೋಕ್ ನೋಟಿಸ್ ಕೊಡ್ತಾರಾ, ಇಂತಹ 100 ನೋಟಿಸ್ ಬಂದರೂ ನಾನು ಹೆದುರುವುದಿಲ್ಲ. ಬೆಂಗಳೂರಿ ನಲ್ಲಿ ನೀವು ನಿಮ್ಮ ತಮ್ಮ ಸೇರಿಕೊಂಡು ಏನೇನು ಕೆಲಸ ಮಾಡಿದ್ದೀರಿ ಎಂದು ಮುಂದೆ ತಿಳಿಸುತ್ತೇನೆ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಎಷ್ಟೋ ದಿನಗಳ ಬಳಿಕ ಹೆಚ್. ವಿಶ್ವನಾಥ್ ಸತ್ಯ ಹೇಳಿದ್ದಾರೆ.

ಹೆಚ್. ವಿಶ್ವನಾಥ್ ಅವರದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯದ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್ . ವಿಶ್ವನಾಥ್ ಹೇಳ್ತಿದ್ದಾರೆ. ಈ ಮೂಲಕ ಎಷ್ಟೋ ದಿನಗಳ ಬಳಿಕ ವಿಶ್ವನಾಥ್ ಸತ್ಯ ಹೇಳಿದ್ದಾರೆ  ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು. ಹಾಗೆಯೇ ಒಂದೆಡೆ ದೇಶವೇ ಕೊರೊನದಲ್ಲಿ ನಲುಗುತ್ತಿದರೆ ಇತ್ತ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ವರ್ಚುಲ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಈ ವೇಳೆ ಇದೆಲ್ಲ ಬೇಕಿತ್ತ? ಜನರ ರಕ್ಷಣೆಗಿಂತ ಚುನಾವಣೆ ಮುಖ್ಯವಾಯ್ತಾ ? ಎಂದು ಹರಿಹಾಯ್ದರು.

ಸಣ್ಣ ಸಣ್ಣ ವಿಚಾರಕ್ಕೆಲ್ಲಾ ಡಂಗೂರ ಬಾರಿಸುತ್ತಿದ್ದ ಆರ್.ಎಸ್.ಎಸ್ ನವರು ಎಲ್ಲಿದ್ದಾರೆ.?

ಇದೇ ವೇಳೆ ಆರ್ ಎಸ್ ಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್,  ಸಣ್ಣ ಸಣ್ಣ ವಿಚಾರಕ್ಕೆಲ್ಲ ಡಂಗೂರ ಬಾರಿಸುತ್ತಿದ್ದ ಆರ್.ಎಸ್.ಎಸ್ ನವರು ಎಲ್ಲಿದ್ದಾರೆ.? ಬಹುಶ ಪಕ್ಷದಿಂದಲೇ ಸೂಚನೆ ಸಿಕ್ಕಿರ ಬೇಕು ಅದಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಕೊರೊನ ಸಂಕಷ್ಟದಲ್ಲಿ ಜನ ಇಷ್ಟೆಲ್ಲ ಕಷ್ಟ ಪಡುತ್ತಿದ್ದಾರೆ. ಆದರೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿ.ಎಲ್ ಸಂತೋಷ್, ಸಿಟಿ ರವಿ ಮುಂತಾದವರೆಲ್ಲ ಸುಮ್ಮನಾಗಿಬಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪಕ್ಷದವರೆ ನೋಟಿಸ್ ಕೊಟ್ಟಿರಬೇಕು ಅದಕ್ಕೆ ಎಲ್ಲರೂ ಸುಮ್ಮನಿದ್ದಾರೆ ಅನ್ಸತ್ತೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ನಡೆಸಲು ಬರದಿದ್ದರೆ ಬಿಟ್ಟು ಹಾಳಾಗಿ ಹೋಗಿ…

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದು ಹುಚ್ಚರ ದರ್ಬಾರ್ ಆಗಿದೆ. ಗೈಡ್‌ಲೈನ್ಸ್ ಬಗ್ಗೆ ಸಾಕಷ್ಟು ಗೊಂದಲ ಇದೆ. ಪೊಲೀಸರು ಗನ್ ಪಾಯಿಂಟ್‌ನಲ್ಲಿ ಅಂಗಡಿ ಮುಚ್ಚಿಸಿದರು. ಸರ್ಕಾರ ನಡೆಸಲು ಬರದಿದ್ದರೆ ಬಿಟ್ಟು ಹಾಳಾಗಿ ಹೋಗಿ  ಇದ್ದಕ್ಕಿದ್ದಂತೆ ಬಂದ್ ಮಾಡಿಸಿದರೆ ಜನರಿಗೆ ಸಮಸ್ಯೆಯುಂಟಾಗಲಿದೆ. ಸರ್ಕಾರಕ್ಕೆ ಬೇಸಿಕ್ ಕಾಮನ್ ಸೆನ್ಸ್ ಗುರಿ ಇಲ್ಲ ತಲೆ ಕೆಟ್ಟೋಗಿದೆಯಾ ನಿಮಗೆ ? ನಿಮಗೆ ಬದ್ದತೆ ಇಲ್ಲ ಇದು ತುಘಲಕ್ ದರ್ಬಾರ್ ಎಂದು ಕಿಡಿಕಾರಿದರು.

ಮೊದಲು ವೆಂಟಿಲೇಟ್ ಆಕ್ಸಿಜನ್ ಲೆಕ್ಕ ಕೊಡಿ…

ಬೆಳಗ್ಗೆ ಮಧ್ಯಾಹ್ನ ಸಂಜೆ ಒಂದು ಆದೇಶದಿಂದ ಜನರನ್ನು ಸಾಯಿಸುತ್ತಿದ್ದೀರಾ. ಮದ್ಯದ ಅಂಗಡಿಗೆ ಅವಕಾಶ  ನೀಡಿ ಮಧ್ಯಮ ವರ್ಗದವರಿಗೆ ಬರೆ ಎಳೆಯುತ್ತಿದ್ದೀರಿ. ಮದ್ಯದ ಅಂಗಡಿಗೆ ಕೊರೊನಾ ಹೋಗಲ್ವಾ ? ಮರ್ಡರ್ ಮಾಡುವ ಸರ್ಕಾರ ಇದು ಅಂತಿದ್ದಾರೆ ಜನರು. ಬೆಡ್ ಇಲ್ಲ ವೆಂಟಿಲೇಟರ್ ಇಲ್ಲ ನಿಮ್ಮ ಬಳಿ. ಕಳೆದ ಬಾರಿ ಖರೀದಿ ಮಾಡಿದ ವಸ್ತುಗಳು ಎಲ್ಲಿ ?. ಇದರ ಲೆಕ್ಕ ಕೊಡಿ ಮೊದಲು ವೆಂಟಿಲೇಟ್ ಆಕ್ಸಿಜನ್ ಲೆಕ್ಕ ಕೊಡಿ ಎಂದು ಲಕ್ಷ್ಮಣ್ ಗುಡುಗಿದರು.

ಆಕ್ಸಿಜನ್ ತುಂಬುವುದು ದೊಡ್ಡ ಕೆಲಸ ಅಲ್ಲ ಎಷ್ಟು ಪ್ರಮಾಣದ ಆಕ್ಸಿಜನ್ ಬೇಕಾದರು ಮಾಡಬಹುದು. ಭಿಕ್ಷೆ ಬೇಡಿ ಕದಿಯಿರಿ ಜನರಿಗೆ ಆಕ್ಸಿಜನ್ ಕೊಡಿ ಅಂತಾ ನ್ಯಾಯಾಲಯ ಹೇಳಿದೆ. ಸರ್ಕಾರದ ವಿಫಲತೆ ಬಗ್ಗೆ ಎಲ್ಲಾ‌ ಕಡೆ ಛೀಮಾರಿ ಹಾಕಲಾಗುತ್ತಿದೆ. ತಮ್ಮ ಪಕ್ಷದ ವಿಶ್ವನಾಥ್ ಅವರೇ ಸರ್ಕಾರವನ್ನು ಜಾಡಿಸಿದ್ದಾರೆ. ಇನ್ನಾದರೂ ಸರ್ಕಾರ ಜನರ ನೋವಿಗೆ ಸ್ಪಂದಿಸಲಿ

ಪಿಎಂ ಕೇರ್ ಫಂಡ್ ಮಾಹಿತಿ ಕೊಡಿ ಅದು ಏನಾಯ್ತು ? ಪಶ್ಚಿಮ ಬಂಗಾಳ ಚುನಾವಣೆಗೆ ಬಳಕೆಯಾಗುತ್ತಿದೆಯಾ ? ಸಿಎಂ ಕೇರ್ ಫಂಡ್ ಏನಾಯ್ತು ಅದನ್ನಾದರೂ ಲೆಕ್ಕ ಕೊಡಿ ?ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಹರಿಹಾಯ್ದರು

ಸಿಎಂ ಬಿ ಎಸ್ ಯಡಿಯೂರಪ್ಪಗೆ ಕೊರೊನಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಕೇವಲ 5 ದಿನದಲ್ಲಿ ಸಿಎಂ ವಾಪಸ್ಸು ಬಂದಿದ್ದಾರೆ. ಅವರಿಗೆ ಕೊರೊನಾ ಬಂದಿತ್ತಾ ಇಲ್ವಾ ? ನನಗೂ ಕೊರೊನಾ ಬಂದಿತ್ತು 15 ದಿನ ಚಿಕಿತ್ಸೆಯಲ್ಲಿದ್ದೆ. ಯಡಿಯೂರಪ್ಪ ಎಲ್ಲಾ ಕಡೆ ಓಡಾಡಿ ಅಂಟಿಸಿದ್ದಾರೆ. ಶಾಸಕ ಎಸ್ ಎ ರಾಮದಾಸ್ ಸಹಾ ಇದೇ ರೀತಿ ಮಾಡಿದ್ದಾರೆ. ಬಿಜೆಪಿಯವರದ್ದು ಸ್ಯಾಡಿಸ್ಟ್ ಮನೋಭಾವನಾ ? ನಮಗೆ ಬಂದಿದೆ ಎಲ್ಲರಿಗೂ ಬರಲಿ ಅನ್ನೋ ಮನೋಭಾವನಾ ? ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಸುಧಾಕರ್ ಅವರಿಗೆ ಮಾಧ್ಯಮ ಪ್ರಚಾರದ ಹುಚ್ಚು

ಸಚಿವ ಸುಧಾಕರ್ ಅವರಿಗೆ ಮಾಧ್ಯಮ ಪ್ರಚಾರದ ಹುಚ್ಚು. ರೆಮಿಡಿಸಿವಿರ್ ಕೊರೊನಾಗೆ ಪರಿಣಾಮಕಾರಿಯಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ರೆಮಿಡಿಸಿಯರ್ ಬೆಸ್ಟ್ ಇಂಜೆಕ್ಷನ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್  ಉತ್ತಮ ಅಂತಾ ಹೇಳಿದೆ. ಸುಧಾಕರ್ ಸೆರಾಯಿಡ್ ಇದಕ್ಕಿಂತ ಉತ್ತಮ ಅಂತಾ ಹೇಳುತ್ತಾರೆ. ಸುಧಾಕರ್ ಅವರಿಗೆ ಸೆರಾಯಿಡ್ ಕಂಪನಿಯವರು ದುಡ್ಡು ಕೊಟ್ಟಿದ್ದಾರಾ ? ಎಂದು ಎಂ.ಲಕ್ಷ್ಮಣ್ ಟೀಕಿಸಿದರು.

ಮೈಸೂರು ಡಿಸಿಯನ್ನು ಮುಂದಿನ ಸಿಎಂ ಮಾಡುವುದು ಒಳ್ಳೆಯದು

ಮೈಸೂರು ಡಿಸಿಯನ್ನು ಮುಂದಿನ ಸಿಎಂ ಮಾಡುವುದು ಒಳ್ಳೆಯದು. ಅವರು ಏನು ಹೇಳುತ್ತಾರೆ ಅದನ್ನು‌ ಮಂತ್ರಿಗಳು ಮಾಡುತ್ತಿದ್ದಾರೆ. ಸುಧಾಕರ್ ಸಹ ಡಿಸಿ ಮಾತನ್ನು ಕೇಳುತ್ತಾರೆ ಎಂದು ಎಂ. ಲಕ್ಷ್ಮಣ್ ತಿಳಿಸಿದರು.

ಪ್ರಧಾನಿ ಭಾಷಣ ವಿಚಾರ ನಾವು ಪ್ಯಾಕೇಜ್ ನಿರೀಕ್ಷೆಯಲ್ಲಿದ್ದೆವು. ಆದರೆ ಮನೆಯಲ್ಲಿರಿ ಮಾಸ್ಕ್ ಹಾಕ್ಕೊಳ್ಳಿ ಅಂತಾ ಹೇಳಿ ಹೋದರು. ಬೆಂಗಳೂರು ಸಾವಿನೂರಾಗಿದೆ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಸಾವಿನ ಕುರಿತು ಸರ್ಕಾರ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ ಎಂದು ಎಂ. ಲಕ್ಷ್ಮಣ್ ಕಿಡಿಕಾರಿದರು.

Key words: liquor store,- middle class- state government completely –inactive- KPCC spokesperson- M. Laxman