line Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಯಶವಂತಪುರ-ತುಮಕೂರು ರೈಲ್ವೆ ಮಾರ್ಗ ವಿದ್ಯುದ್ದೀಕರಣ, ಸುರಕ್ಷತಾ ತಪಾಸಣೆಗೆ ಸಿದ್ಧ.
ಬೆಂಗಳೂರು, ಅಕ್ಟೋಬರ್ 22, 2021 (www.justkannada.in): ರೈಲ್ವೆ ಸುರಕ್ಷತಾ ಆಯುಕ್ತರು ಶೀಘ್ರದಲ್ಲೇ ಯಶವಂತಪುರ-ತುಮಕೂರು ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನು ತಪಾಸಣೆ ಮಾಡಲಿದ್ದಾರೆ.

ಆದರೂ ಸಹ ಈ ರೈಲು ಮಾರ್ಗದ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಬೆಂಗಳೂರಿಗರು ಇನ್ನೂ ಸ್ವಲ್ಪ ಸಮಯದವರೆಗೂ ಕಾಯಬೇಕಿದೆ. ಏಕೆಂದರೆ ಚಿಕ್ಕಬಳ್ಳಾಪುರ ಮಾರ್ಗದ ಯಲಹಂಕ-ದೇವನಹಳ್ಳಿ ವಿಭಾಗದ ರೈಲ್ವೆ ವಿದ್ಯುದ್ದೀಕರಣ ಯೋಜನೆ ಆರು ತಿಂಗಳವರೆಗೆ ವಿಳಂಬವಾಗಿದೆ.

ಕಳೆದ ಒಂದು ತಿಂಗಳಿಂದ ವಿದ್ಯುದ್ದೀಕೃತ ರೈಲ್ವೆ ಇಂಜಿನ್‌ ನ ಓಡಾಟದ ಪ್ರಯೋಗವನ್ನು ನಡೆಸಿದ ನಂತರ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಯಶವಂತಪುರ-ತುಮಕೂರು ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣವನ್ನು ರೈಲ್ವೆ ಸುರಕ್ಷತಾ ಪರಿವೀಕ್ಷಕರು (ಸಿಆರ್‌ಎಸ್) ತಪಾಸಣೆ ನಡೆಸುವುದಕ್ಕಾಗಿ ಕಾಯುತ್ತಿದೆ. “ನಾವು ಸಿಆರ್‌ ಎಸ್ ಅವರಿಗೆ ಇತ್ತೀಚೆಗೆ ಸಂಬಂಧಪಟ್ಟ ದಾಖಲೆಗಳನ್ನು ಕಳುಹಿಸಿದ್ದು, ಅವರಿಂದ ಮಾಹಿತಿಯನ್ನು ಎದುರು ನೋಡುತ್ತಿದ್ದೇವೆ. ತುಮಕೂರು ಹಾಗೂ ಹಿರೆಹಳ್ಳಿ ನಡುವಿನ ಒಂದು ಭಾಗವನ್ನು ಸಿಆರ್‌ಎಸ್ ಅವರು ಈಗಾಗಲೇ ತಪಾಸಣೆ ಮಾಡಿದ್ದು, ಕೆಲವು ಅವಲೋಕನಗಳನ್ನು ಒದಗಿಸಿದ್ದಾರೆ. ನಾವು ಆ ಅವುಗಳನ್ನು ಪಾಲಿಸಿದ್ದು, ಖಾಯಂ ಅನುಮತಿಯನ್ನು ಕೋರಿ ಉತ್ತರ ನೀಡಿದ್ದೇವೆ,” ಎಂದು ನೈಋತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ಅವರು ತಿಳಿಸಿದ್ದಾರೆ.

ಮುಂದಿನ ತಿಂಗಳೊಳಗೆ ಸಿಆರ್‌ಎಸ್ ಅವರಿಂದ ಸಂಪೂರ್ಣ ೬೯.೪೭ ಕಿ.ಮೀ. ಉದ್ದದ ರೈಲ್ವೆ ಮಾರ್ಗದ ತಪಾಸಣೆ ಪೂರ್ಣಗೊಳ್ಳುತ್ತದೆ ಎಂದು ನೈಋತ್ಯ ರೈಲ್ವೆ ನಿರೀಕ್ಷಿಸಿದೆ. ಸುರಕ್ಷತಾ ಪರಿವೀಕ್ಷಕರಿಂದ ಹಸಿರು ನಿಶಾನೆ ಬಂದರೆ ಹೆಚ್ಚಿನ ಸಂಖ್ಯೆಯ ರೈಲುಗಳು, ವಿಶೇಷವಾಗಿ ಮೆಮು ರೈಲುಗಳ ಓಡಾಟ ಆರಂಭವಾಗಲಿದೆ. ಅದರಿಂದ ಬೆಂಗಳೂರು ಹಾಗೂ ತುಮಕೂರಿನ ನಡುವೆ ಹೆಚ್ಚಿನ ಜನರು ಓಡಾಡಲು ನೆರವಾಗುತ್ತದೆ.

ಹೈಟೆನ್ಷನ್ ಲೈನ್‌ ಗಳು

ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಳ್ಳಬೇಕಿದ್ದ ಯಲಹಂಕ-ದೇವನಹಳ್ಳಿ ವಿಭಾಗದ ನಡುವಿನ ವಿದ್ಯುದ್ದೀಕರಣ ಕಾಮಗಾರಿಗಳು ಆರು ತಿಂಗಳು ವಿಳಂಬವಾಗುವ ಸಂಭವವಿದೆ. “ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಟಿಸಿಎಲ್) ವಿದ್ಯುತ್ ಮಾರ್ಗಗಳು ಈ ಮಾರ್ಗದಲ್ಲಿ ಅಡ್ಡ ಹಾದು ಹೋಗಿರುವುದು ಈ ವಿಳಂಬಕ್ಕೆ ಕಾರಣವಾಗಿದೆ. ವಿದ್ಯುದ್ದೀಕರಣದ ಮೂಲಭೂತಸೌಕರ್ಯ ಲಭ್ಯವಿದ್ದರೂ ಸಹ ಕೆಪಿಟಿಸಿಎಲ್‌ ನ ಹೈಟೆನ್ಷೆನ್ ವಿದ್ಯುತ್ ಮಾರ್ಗ ವರ್ಗಾಯಿಸದ ಹೊರತು ಮುಂದುವರೆಸಲಾಗುವುದಿಲ್ಲ,” ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು.

“ನೈಋತ್ಯ ರೈಲ್ವೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ಅನ್ನು ಸಂಪರ್ಕಿಸಿದ್ದು, ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇತ್ತೀಚೆಗೆ ಆ ಹೈಟೆನ್ಷೆನ್ ಟವರ್‌ಗಳನ್ನು ಸ್ಥಳಾಂತರಿಸಲು ಸೂಕ್ತ ಸ್ಥಳಕ್ಕಾಗಿ ಸಮೀಕ್ಷೆಯನ್ನು ನಡೆಸಲಾಯಿತು. ಇದರಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಹಾಗೂ ವಿವಿಧ ಇಲಾಖೆಗಳಿಂದ ಸಹಕಾರ ಪಡೆಯಬೇಕಾಗಿರುವಂತಹ ಕೆಲಸಗಳು ಇರುವುದರಿಂದ ಸ್ವಲ್ಪ ಸಮಯ ಬೇಕಾಗುತ್ತದೆ,” ಎಂದು ವಿವರಿಸಿದರು.

ನಗರ ಸಾರಿಗೆ ಕಾರ್ಯಕರ್ತ ಸಂಜೀವ್ ದ್ಯಾಮಣ್ಣನವರ್ ಅವರು ಈ ಕುರಿತು ಮಾತನಾಡಿ ರೈಲ್ವೆ ಇಲಾಖೆಯು ಸಾಂಕ್ರಾಮಿಕದ ಅವಧಿಯಲ್ಲಿ ಸ್ಥಗಿತಗೊಳಿಸಿದ್ದಂತಹ ಎಲ್ಲಾ ಪ್ರಯಾಣಿಕ ರೈಲುಗಳನ್ನು ಪುನರಾರಂಭಿಸಬೇಕು. “ಕೇವಲ ಮೂಲಭೂತಸೌಕರ್ಯ ಹಾಗೂ ಅದರ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ರೈಲ್ವೆ ಇಲಾಖೆಯು ಸಾಧ್ಯವಾದಷ್ಟು ಬೇಗ ರೈಲುಗಳ ಕಾರ್ಯಾಚರಣೆಯನ್ನು ಮೊದಲಿನಂತೆ ಮಾಡಬೇಕು ಹಾಗೂ ತಮ್ಮ ಗಮನವನ್ನು ಗೂಡ್ಸ್ ರೈಲುಗಳಿಂದ ಪ್ರಯಾಣಿಕ ರೈಲುಗಳ ಕಡೆ ಹೊರಳಿಸಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದ ಕಾರಣದಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಿದ ನಾಲ್ಕು ತಿಂಗಳಲ್ಲಿ ಕೇವಲ ೨,೦೯೮ ಜನರು ಮಾತ್ರ ಅದರ ಉಪಯೋಗ ಪಡೆದುಕೊಂಡಿದ್ದರು.

“ಸಾಕಷ್ಟು ಜನರು ಅದರ ಉಪಯೋಗ ಪಡೆಯದಿರಲು ರೈಲುಗಳ ಓಡಾಟದ ಸಮಯ ಹಾಗೂ ಸಾಂಕ್ರಾಮಿಕವೇ ಕಾರಣಗಳು. ಯಾವುದೇ ಒಂದು ರೈಲು ಓಡಾಟ ಆರಂಭಿಸಿದ ನಂತರ ಜನರಿಗೆ ಆ ಬಗ್ಗೆ ಮಾಹಿತಿ ಲಭಿಸಿ, ಹೆಚ್ಚಿನ ಜನರು ಅದರ ಸೇವೆಯನ್ನು ಉಪಯೋಗಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ, ಅಲ್ಲಿಯವರೆಗೂ ರೈಲ್ವೆ ಇಲಾಖೆಯವರು ಕಾಯಬೇಕು. ಇಲಾಖೆಗೆ ಸ್ವಲ್ಪ ನಷ್ಟವಾದರೂ ಬಡವರಿಗೆ ಸಾರಿಗೆ ಸೌಕರ್ಯವನ್ನು ಒದಗಿಸಲು ಇರುವ ಸೌಕರ್ಯಗಳ ಗರಿಷ್ಠ ಬಳಕೆ ಅಗತ್ಯ. ಇಂತಹ ಕಾರ್ಯಾಚರಣೆಗಳಿಂದ ಲಾಭಗಳೂ ಲಭಿಸುತ್ತವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Electrification – Yashwantpur-Tumkur –railway- line-  Ready – safety inspection.

The post ಯಶವಂತಪುರ-ತುಮಕೂರು ರೈಲ್ವೆ ಮಾರ್ಗ ವಿದ್ಯುದ್ದೀಕರಣ, ಸುರಕ್ಷತಾ ತಪಾಸಣೆಗೆ ಸಿದ್ಧ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರು 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬೆಂಗಳೂರು,ಜನವರಿ,01,2021(www.justknnada.in) :  ಬೆಂಗಳೂರು ಮೆಟ್ರೋ ಫೇಸ್ 2ಎ, 2ಬಿಗೆ 14,788 ಕೋಟಿ ರೂ. ನೀಡಲಿದ್ದು, 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

2023ರ ಡಿಸೆಂಬರ್ ನೊಳಗೆ ಬ್ರಾಡ್ ಗೇಜ್ ಅನ್ನು ಶೇ.100ರಷ್ಟು ವಿದ್ಯುದೀಕರಣ ಮಾಡಲಿದ್ದೇವೆ. ನಗರದ  ಸಾರಿಗೆಗೆ 20 ಸಾವಿರ ಬಸ್ ಗಳು. ಪಿಪಿಪಿ ಮೂಲಕ ರೈಲ್ವೆ ನಿಲ್ದಾಣಗಳಿಗೆ ತೆರಳಲು ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಸ್ವಯಂ ಚಾಲಿತ ರೈಲ್ವೆಗೆ ಕೇಂದ್ರದ ಆದ್ಯತೆ. ಬ್ರಾಡ್ ಗೇಜ್ ನಲ್ಲಿ ವಿದ್ಯುತ್ ಚಾಲಿತ ಯೋಜನೆ ಪೂರ್ಣಗೊಂಡಿದೆ. 46 ಸಾವಿರ ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

11 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

ಮುಂದಿನ ವರ್ಷದಿಂದಲೇ 11 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ. 1,100 ಕೇರಳದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 65 ಸಾವಿರ ಕೋಟಿ ರೂ., 3.3 ಲಕ್ಷ ಕೋಟಿ ರೂ. ಭಾರತ್ ಮಾಲಾ ಯೋಜನೆಯಡಿ ನೀಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 675 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ. 3,500 ಕಿಲೋ ಮೀಟರ್ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಿಗೆ 1 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ನೀಡಲಾಗಿದೆ ಎಂದು ತಿಳಿಸಿದರು.

ENGLISH SUMMARY….

Aim to stretch Namma Metro to 1,016 kms: FM Nirmala Sitharaman

Bengaluru, Jan. 02, 2021 (www.justkannada.in): Finance Minister Nirmala Sitharaman today announced that the Govt. of India aims to stretch Bengaluru Metro rail to 1,016 kms, and announced a sum of Rs. 14,788 crore under Bengaluru Metro Phase 2A, 2B.

• 100% electrification of broad gauge within Dec.2023; 20,000 buses for city transport; transportation facilities to reach railway station on PPP model

• Priority for auto-driven train engines; 46,000 kms of rail track already electrified

• Construction of 11,000 kms of National Highway to begin from next year. Rs.65,000 crore to Kerala for construction of 1,100 kms of National Highway; Rs.3.3 lakh crore under Bharath Mala Program has been given

• A sum of Rs.1 lakh crore is provided for completion of 675 kms of National Highway in West Bengal and 3,5000 kms in Tamil Nadu.

Keywords: Finance Minister/ Nirmala Sitharaman/ Govt. of India/ Budget 2021-22/ Namma Metro

key words : Bangalore’s-1,016-kilo meter-metro-line-target-Finance-Minister-Nirmala Sitharaman

The post ಬೆಂಗಳೂರು 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ  : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಆಫ್ ಲೈನ್ ಪರೀಕ್ಷೆ ಬೇಡ, ಆನ್ ಲೈನ್ ಪರೀಕ್ಷೆ ಬೇಕು” : ವಿದ್ಯಾರ್ಥಿಗಳೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟನೆ
ಮೈಸೂರು,ಜನವರಿ,15,2021(www.justkannada.in) : ಆಫ್ ಲೈನ್ ಪರೀಕ್ಷೆ ಬೇಡ, ಆನ್ ಲೈನ್ ಪರೀಕ್ಷೆ ಬೇಕು ಎನ್ನುವುದು ರಾಜ್ಯದ ವಿದ್ಯಾರ್ಥಿಗಳ ಬೇಡಿಕೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗೆ ಮಾನ್ಯತೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.ನಗರದ ಆರ್ ಗೇಟ್ ಬಳಿ ವಾಟಾಳ್ ನಾಗರಾಜ್ ವಿದ್ಯಾರ್ಥಿಗಳೊಂದಿಗೆ ಜಮಾವಣೆಗೊಂಡು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.ಆನ್ ಲೈನ್ ಪರೀಕ್ಷೆ ಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆಯಾಗಿದ್ದು, ಸರಕಾರ ಇವರ ಬೇಡಿಕೆಗೆ ಮಾನ್ಯತೆ ನೀಡಬೇಕು. ವಿದ್ಯಾರ್ಥಿಗಳ ಜೊತೆ ನಾನು ಯಾವಾಗಲೂ ಇರ್ತೀನಿ. ನೀವು ಒಂದು ಒಕ್ಕೂಟ ಮಾಡಿ ನನಗೆ ತಿಳಿಸಿ ನಾನು ಬರುತ್ತೇನೆ. ನಿಮ್ಮ ಜೊತೆ ನಾನಿದ್ದೀನಿ, ಧೈರ್ಯವಾಗಿ ಇರಿ. ರಾಜ್ಯಾದ್ಯಂತ ಆನ್ ಲೈನ್ ಬಗ್ಗೆ ಹೋರಾಟ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

key words : No off-line-test-Online-test-required-students-Vatal Nagaraj-protests

The post “ಆಫ್ ಲೈನ್ ಪರೀಕ್ಷೆ ಬೇಡ, ಆನ್ ಲೈನ್ ಪರೀಕ್ಷೆ ಬೇಕು” : ವಿದ್ಯಾರ್ಥಿಗಳೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾವು ಎರಡು, ಮೂರನೇ ಪಂಕ್ತಿಯಲ್ಲಿದ್ದೇವೆ : ಶಾಸಕ ಎಸ್.ಎ.ರಾಮದಾಸ್ ಹೀಗೆ ಹೇಳಿದ್ದೇಕೆ..?
ಮೈಸೂರು,ನವೆಂಬರ್,07,2020(www.justkannada.in) : ಸರಕಾರ ರಚನೆ ಮಾಡುವಾಗ ಹೊರಗಡೆಯಿಂದ ಕರೆದುಕೊಂಡು ಬಂದವರನ್ನು ಊಟಕ್ಕೆ ಮೊದಲ ಪಂಕ್ತಿಯಲ್ಲಿ ಕೂರಿಸಿದ್ದೇವೆ. ನಾವು ಎರಡು, ಮೂರನೇ ಪಂಕ್ತಿಯಲ್ಲಿದ್ದು, ರಾಜ್ಯ ಚೆನ್ನಾಗಿರಲಿ ಎಂದು ಬಯಸುವವರು ನಾವು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಊಟ ಸಿಗದಿದ್ದರೂ ಪರವಾಗಿಲ್ಲ ರಾಜ್ಯ ಚನ್ನಾಗಿರಲಿ

ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಸಂಪುಟ ರಚನೆಯಲ್ಲಿ ಮಂತ್ರಿ ಸ್ಥಾನ ದೊರೆಯುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಸರಕಾರ ರಚನೆ ಮಾಡುವ ಸಂದರ್ಭ ಕೆಲವರನ್ನು ಹೊರಗಡೆಯಿಂದ ಕರೆದುಕೊಂಡು ಬಂದಿದ್ದೇವೆ. ಸಹಜವಾಗಿ ಊಟ ಹಾಕುವಾಗ ಮೊದಲು ಅವರಿಗೆ ಆದ್ಯತೆ ನೀಡಲಾಗಿದೆ. ನಾವು ಎರಡನೇ, ಮೂರನೇ ಪಂಕ್ತಿಯಲ್ಲಿದ್ದು, ನಮಗೆ ಊಟ ಸಿಗದಿದ್ದರೂ ಪರವಾಗಿಲ್ಲ ರಾಜ್ಯ ಚೆನ್ನಾಗಿರಲಿ ಎಂದು ಬಯಸುವವರು ನಾವು ಎಂದರು.

ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ನೀಡುತ್ತಿದ್ದೇನೆ

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಸೇರಿದ್ದು, ಜಿಲ್ಲಾ ಮಂತ್ರಿಯಾಗಿ ಯಾರೇ ಬಂದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ನೀಡುತ್ತಿದ್ದೇನೆ. ನಾನು ಜೀವನದಲ್ಲಿ ಯಾವುದೇ ಆಸೆ,ಆಕಾಂಕ್ಷೆಯಿಟ್ಟುಕೊಂಡವನಲ್ಲ. ಸುಖ, ದುಃಖವನ್ನು ಸಮಾನವಾಗಿ ನೋಡುತ್ತೇನೆ ಎಂದು ಹೇಳಿದರು.

ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಮುಂದಾಗಿದ್ದೇನೆ

ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಮುಂದಾಗಿದ್ದೇನೆ. ಉದ್ಯೋಗ ಕಲ್ಪಿಸುವುದು ಸೇರಿದಂತೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಮಾಡುತ್ತಿದ್ದೇನೆ. ಕೊರೊನಾ ಪತ್ತೆಯಾದ ದಿನದಿಂದ ನಿರಂತರವಾಗಿ ಜಾಗೃತಿ ಮೂಡಿಸಿದ ಪರಿಣಾಮ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬರುತ್ತಿದೆ ಎಂದು ತಿಳಿಸಿದರು.

key words : We’re-second-third-line-Abou-Volume-Structure-

Statement-MLA S.A.Ramadas

The post ನಾವು ಎರಡು, ಮೂರನೇ ಪಂಕ್ತಿಯಲ್ಲಿದ್ದೇವೆ : ಶಾಸಕ ಎಸ್.ಎ.ರಾಮದಾಸ್ ಹೀಗೆ ಹೇಳಿದ್ದೇಕೆ..?  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹಳೆಗನ್ನಡ ಕವಿಗಳಾ ಸಾಲಿಗೆ ಕುಮಾರಸ್ವಾಮಿ ಹೆಸರು ಸೇರಿಸಿದ ಸಚಿವ ವಿ.ಸೋಮಣ್ಣ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮಡಿಕೇರಿ,ನವೆಂಬರ್,01,2020: ರಾಜ್ಯೋತ್ಸವದ ಸಂದೇಶ ಓದುವಾಗ ‘ಹಳೆಗನ್ನಡ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ’ ಎನ್ನುವ ಬದಲು ‘ಕುಮಾರಸ್ವಾಮಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವದ ಸಂದೇಶ ಓದುವ ಸಂದರ್ಭ ಈ ರೀತಿಯಾಗಿ ಎಡವಟ್ಟು ಮಾಡಿಕೊಂಡಿದ್ದಾರೆ.

‘ಹಳೆಗನ್ನಡ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ’ ಎನ್ನುವ ಬದಲು ‘ಕುಮಾರಸ್ವಾಮಿ’ ಎಂದಿದ್ದಾರೆ.

ಅದೇ ರೀತಿ ಕನ್ನಡ ಭಾಷೆಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ ಎಂದು ಹೇಳುವ ಬದಲಿಗೆ 2 ವರ್ಷಗಳ ಇತಿಹಾಸವಿದೆ ಎಂದು ಓದಿರುವ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಂದ ಟೀಕೆಗಳು ವ್ಯಕ್ತವಾಗಿದೆ.

key words : line-old-poets-Minister V.Somanna-added-Kumaraswamy-social-media-video-viral

The post ಹಳೆಗನ್ನಡ ಕವಿಗಳಾ ಸಾಲಿಗೆ ಕುಮಾರಸ್ವಾಮಿ ಹೆಸರು ಸೇರಿಸಿದ ಸಚಿವ ವಿ.ಸೋಮಣ್ಣ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಳೆಗೆ ಹಂಪಿ ಐತಿಹಾಸಿಕ ಸಾಲು ಮಂಟಪ ಕುಸಿತ..
ಹೊಸಪೇಟೆ,ಸೆಪ್ಟೆಂಬರ್,29,2020(www.justkannada.in) : ಮೂರು ದಿನಗಳಿಂದ ಸತತ ಸುರಿದ ಮಳೆಗೆ ಹಂಪಿಯ ವಿಜಯ ವಿಠ್ಠಲ ದೇಗುಲದ ಪಕ್ಕದ ಐತಿಹಾಸಿಕ ಸಾಲು ಮಂಟಪ ಕುಸಿದು ಬಿದ್ದಿದೆ.

ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ತುಂತುರು ಮಳೆ ಸುರಿದಿತ್ತು. ಹೀಗಾಗಿ, ಮಂಟಪ ಕುಸಿದಿದೆ. ತಿಂಗಳಲ್ಲೇ ಮಳೆಗೆ ಹಂಪಿಯಲ್ಲಿ ಎರಡ್ಮೂರು ಮಂಟಪಗಳು ಬಿದ್ದಿವೆ. ಈ ಹಿಂದೆ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥ ಬೀದಿಯಲ್ಲಿ ಮಂಟಪದ ಚಾವಣಿ ಕುಸಿದು ಬಿದ್ದಿತ್ತು. ಈ ಮಂಟಪ ಜೀರ್ಣೋದ್ದಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಬಸವಣ್ಣ ಮಂಟಪದ ಬಳಿಯ ಮಂಟಪವೊಂದು ಉರುಳಿ ಬಿದ್ದಿತ್ತು. ಹಂಪಿಯಲ್ಲಿ ಮಳೆಗೆ ಮಂಟಪಗಳು ಉರುಳಿ ಬೀಳುತ್ತಿದ್ದು, ಭಾರತೀಯ ಪುರಾತತ್ವ ಇಲಾಖೆ ಮಂಟಪಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದಲೂ ವರುಣ ಅಬ್ಬರಿಸುತ್ತಿದ್ದು ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಮನೆಗಳನ್ನು ಬೆಳೆಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುವಂತ್ತಾಗಿದೆ.

key words : Hampi-historic-line-collapsed-rain

The post ಮಳೆಗೆ ಹಂಪಿ ಐತಿಹಾಸಿಕ ಸಾಲು ಮಂಟಪ ಕುಸಿತ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಈ ಸಾಲಿನಿಂದ ಕ್ರೀಡಾವೇತನ ಹೆಚ್ಚಳಗೊಳಿಸಿದ ಮೈಸೂರು ವಿವಿ
ಮೈಸೂರು, ಸೆಪ್ಟೆಂಬರ್, 04,2020(www.justkannada.in) ; ಮೈಸೂರು ವಿವಿಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸುವುದಕ್ಕೆ ಅನುಮೋದನೆ ದೊರೆಯಿತು.

ಶುಕ್ರವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಡಾ.ಇ.ಸಿ.ನಿಂಗರಾಜ್ ಗೌಡ, 2020-2021ನೇ ಸಾಲಿನಿಂದ ವಿಶ್ವವಿದ್ಯಾನಿಲಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಸಲಹೆ ನೀಡಿದರು.

ಈ ಸಂಬಂಧ ಸಭೆಯಲ್ಲಿ ಚರ್ಚಿಸಿ ವಿಶ್ವವಿದ್ಯಾನಿಲಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 2020-21ನೇ ಸಾಲಿನಿಂದ 5ಸಾವಿರ ರೂ,ಗಳಿಗೆ ಹೆಚ್ಚಿಸಲು ಸಭೆಯು ಒಪ್ಪಿ ಅನಿಮೋದನೆ ನೀಡಿತು.

ಮಾನಸ -2021 ವಸ್ತು ಪ್ರದರ್ಶನ

ಶತಮಾನೋತ್ಸವದ ಸಂದರ್ಭದಲ್ಲಿರುವ ಮೈಸೂರು ವಿವಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ವ್ಯವಸ್ಥೆಯ ಪಟ್ಟಿಯಲ್ಲಿ 27ನೇ ಸ್ಥಾನ ಪಡೆದಿದೆ. ಜತೆಗೆ ನೂರನೇ ಘಟಿಕೋತ್ಸವದ ನೆನಪಿಗಾಗಿ ವಿವಿಯ ಸಂಶೋಧನೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಪರಿಚಯಿಸುವ ಸಲುವಾಗಿ ಮಾನಸ -2021 ವಸ್ತುಪ್ರದರ್ಶನ  ಏರ್ಪಡಿಸಲು ಸಿಂಡಿಕೇಟ್ ಸಭೆ ಅನುಮೋದನೆ ನಿಡಿದೆ.

ಏಳು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದ್ದು, ಮೈಸೂರು ವಿವಿಯ ಸಮಗ್ರ ಅಭಿವೃದ್ಧಿ ಹಾಗೂ ಸಾಧನೆಗಳ ಚಿತ್ರಣ ಈ ಪ್ರದರ್ಶನದಲ್ಲಿ ಕಂಡು ಬರಲಿದೆ ಎಂದು ಸಿಂಡಿಕೇಟ್ ಸದಸ್ಯ ಡಾ.ಇ.ಸಿ.ನಿಂಗರಾಜ್ ಗೌಡ ತಿಳಿಸಿದರು.

key words  ; Mysore VV-increase-sports-pay-from-this-line

The post ಈ ಸಾಲಿನಿಂದ ಕ್ರೀಡಾವೇತನ ಹೆಚ್ಚಳಗೊಳಿಸಿದ ಮೈಸೂರು ವಿವಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.