karnataka-election.2023-bjp- Age criteria - limited - Yeddyurappa. Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ವಯಸ್ಸಿನ ಮಾನದಂಡ ಯಡಿಯೂರಪ್ಪಗೆ ಸೀಮೀತ…!
ಬೆಂಗಳೂರು,ಏಪ್ರಿಲ್,12,2023(www.justkannada.in): ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿತು ಎಂಬ ಗಾದೆ ಮಾತಿದೆ. ಬಿಜೆಪಿಯಲ್ಲಿ ನಡೆದಿರುವ ಟಿಕೆಟ್ ಹಂಚಿಕೆಯಲ್ಲಿ ನಡೆದ ವಿದ್ಯಮಾನಗಳು ಇದನ್ನು ಪುಷ್ಠೀಕರಿಸುವಂತಿದೆ. ಈ ಬಾರಿ ವಿಧಾನಸಭೆಗೆ ಹುರಿಯಾಳುಗಳನ್ನು ಕಣಕ್ಕಿಳಿಸುವಾಗ ವಯಸ್ಸೂ ಸಹ ಮಾನದಂಡವಾಗುತ್ತದೆ ಎಂದು ಘೋಷಿಸಿತ್ತು. ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಜನತೆ ಇದನ್ನು ಬಲವಾಗಿ ನಂಬಿದ್ದರು. ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಎಂದು ಅವರ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ಅದೇ ತುತ್ತೂರಿ ಊದುತ್ತಿದ್ದರು.

ಆದರೆ ನಿನ್ನೆ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿ ಅವಲೋಕಿಸಿದಾಗ, ವಯಸ್ಸಿನ ಮಾನದಂಡ ರಾಜಾಹುಲಿ ಯಡಿಯೂರಪ್ಪನವರನ್ನು ಪದಚ್ಯುತಿಗಾಗಿ ಮಾಡಿದ ತಂತ್ರ ಎಂದು.

ಎಪ್ಪತ್ತು ದಾಟಿದವರಿಗೆ ಸ್ಪರ್ದಿಸಲು ಅವಕಾಶವಿಲ್ಲ, ಹೊಸ ಮುಖಗಳಿಗೆ ಮಣೆ, ಎಂಬೆಲ್ಲಾ ಘೋಷ ವಾಕ್ಯಗಳನ್ನು ಪುಂಖಾನುಪುಂಖ ಸಾರಿದ ಕಮಲ ಕಲಿಗಳು, ತಮ್ಮ ಘೋಷಣೆಗೆ ಎಳ್ಳುನೀರು ಬಿಟ್ಟು, ಹಳೆ ಗಂಡನ ಪಾದವೇ ಗತಿ ಎಂಬ ನಾಣ್ನುಡಿಗೆ ಶರಣಾದಂತಿದೆ.

ಎಪ್ಪತೈದರ ಜಿ ಹೆಚ್ ತಿಪ್ಪಾರೆಡ್ಡಿಗೆ ಚಿತ್ರದುರ್ಗದಲ್ಲಿ ಟಿಕೆಟ್ ನೀಡಲಾಗಿದೆ. ಗೋವಿಂದ ಕಾರಜೋಳ, ಕೆ ಜಿ ಬೋಪಯ್ಯ, ವಿ ಸೋಮಣ್ಣರವರಿಗೆ ಬಾಜಪ ಸ್ಪರ್ದಿಸಲು ಅನುಮತಿ ನೀಡಿದೆ. ಈ ಕ್ಷೇತ್ರಗಳಲ್ಲಿ ಕಮಲ ಪಾಳೆಯಕ್ಕೆ ಹೊಸಬರು ಲಭ್ಯರಿಲ್ಲವೇ ಅಥವಾ ಬೇರೆಯವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಹಿನ್ನಡೆಯೇ? ಅದನ್ನು ಪಕ್ಷವೇ ಹೇಳಬೇಕು.

ಎಪ್ಪತ್ತೈದು ದಾಟಿತು ಎಂಬ ಏಕೈಕ ಕಾರಣ ಮುಂದಿಟ್ಟು, ಕಮಲವನ್ನು ದಕ್ಷಿಣ ಭಾರತದಲ್ಲಿ ಅರಳಿಸಿದ ಮೇರು ನಾಯಕ ಯಡಿಯೂರಪ್ಪನವರನ್ನು ಹೀನಾಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಿಜೆಪಿ, ಈಗ ಎಪ್ಪತ್ತು ದಾಟಿದವರಿಗೆ ಟಿಕೆಟ್ ನೀಡಿದೆ. ಹಂಸ ಕ್ಷೀರ ನ್ಯಾಯದಂತೆ, ಎಪ್ಪತ್ತು ದಾಟಿದ ಜಗದೀಶ್ ಶೆಟ್ಟರ್ ಹಾಗೂ ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಿಸಿದೆ. ಈ ಇಬ್ಬರೂ ನಾಯಕರಿಗೆ ರಾಜ್ಯಪಾಲರ ಹುದ್ದೆ ಲಭಿಸುವುದೂ ಅಥವಾ ಯಡಿಯೂರಪ್ಪ ನವರಂತೆ ಮೂಲೆಗೆ ಸರಿಸುವರೂ ನೋಡಬೇಕು.

ಉಮೇಶ್ ಕತ್ತಿಯವರ ಕುಟುಂಬಕ್ಕೆ ಎರಡು ಟಿಕೆಟ್ ನೀಡಿದೆ. ಅದೇ ಸೌಭಾಗ್ಯ  ಕೆಎಸ್ ಈಶ್ವರಪ್ಪ ಹಾಗೂ ವಿ.ಸೋಮಣ್ಣನವರ ಕುಟುಂಬಕ್ಕಿಲ್ಲ.

ಇನ್ನು ಸಿದ್ದರಾಮಯ್ಯ ಸ್ಪರ್ದಿಸಿರುವ ವರುಣಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪರ್ದಿಸುತ್ತಿರುವ ಕನಕಪುರ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆಯಾ ಎಂಬ ಗುಮಾನಿ ಇದೆ. ವರಣಾ ದಲ್ಲಿ ವಿ ಸೋಮಣ್ಣ ಚಾಮರಾಜನಗರದ ಜೊತೆಗೆ ಎರಡೆರಡು ಕಡೆ ಕಣಕ್ಕಿಳಿದಿದ್ದಾರೆ. ಅಂತೆಯೇ ಆರ್ ಅಶೋಕ, ತಮ್ಮ ಪದ್ಮನಾಭ ನಗರ ಕ್ಷೇತದ ಜೊತೆಗೆ ಕನಕಪುರದಲ್ಲೂ ಸೆಣಸಲಿದ್ದಾರೆ.  ಮೇ 13 ರಂದು ನಿಜ ಏನೆಂದು ತಿಳಿಯುತ್ತದೆ.

M.SIDDARAJU, SENIOR JOURNALIST

ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

Key words: karnataka-election.2023-bjp- Age criteria – limited – Yeddyurappa.

The post ವಯಸ್ಸಿನ ಮಾನದಂಡ ಯಡಿಯೂರಪ್ಪಗೆ ಸೀಮೀತ…! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.