kannada-media Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಜಿ.ಎನ್ ಮೋಹನ್ ಸ್ಪೆಷಲ್ : ಒಂದು ನವಿಲುಕೋಸಿನಲ್ಲಿ ಏನೆಲ್ಲಾ.
ಬೆಂಗಳೂರು, ಜು.26, 2020 : (www.justkannada.in news) ಕಿಟಕಿಯಿಂದ ಇಣುಕಿ ನೋಡಿದೆ. ಬೆಳ್ಳಂಬೆಳಗ್ಗೆ ಆ ಕೆಂಪು ಕೆನ್ನೆಯ ರೇಷ್ಮೆ ಬಣ್ಣದ ಹುಡುಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಳು. ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಜಾಗ ಹುಡುಕಿಕೊಂಡಿತ್ತು.

ಸಂಜೆ ಆಫೀಸಿನಿಂದ ಬಂದಾಗ ಆಕೆಯ ಮನೆಯೇ ಸೂತಕದಲ್ಲಿತ್ತು. ಯಾರೋ ಸತ್ತಿದ್ದಾರೆ ಎಂಬುದಕ್ಕೆ ಇನ್ಯಾವ ಸಾಕ್ಷಿಯೂ ಬೇಕಿರಲಿಲ್ಲ. ಎದುರಿಗಿದ್ದ ಮನೆಯ ಸಾವಿಗೆ ನಾನು ಸಂತಾಪ ಸೂಚಿಸದಿದ್ದರೆ ತಪ್ಪಾದೀತು ಎಂದು ಅವರ ಮನೆ ಹೊಕ್ಕೆ. ಏನಾಯ್ತು ಎಂದು ಕೇಳಿದೆ. ನೋಲ್ ಕೋಲ್ (ನವಿಲುಕೋಸು) ಸತ್ತು ಹೋಗಿದೆ ಎಂದರು.

ನನ್ನ ಹರಕು ಮುರುಕು ಹಿಂದಿ ಜ್ಞಾನಕ್ಕೆ ಅವರು ಹೇಳಿದ್ದು ದಕ್ಕುವುದಾದರೂ ಹೇಗೆ? ಒಂದಿಷ್ಟು ಹೊತ್ತು ಅವರೊಡನೆ ನಾನೂ ಮೌನ ಆಚರಿಸಿದೆ.

ಒಂದೆರಡು ದಿನ ಕಳೆದಿರಬೇಕು. ಭಾನುವಾರ ಬೆಳ್ಳಂಬೆಳಗ್ಗೆ ಇಡೀ ಮನೆಯೇ ಕಾರು ಸವಾರಿಗೆ ಸಜ್ಜಾಗಿತ್ತು. ಸಂಡೇ ಔಟಿಂಗ್ ಅಂದುಕೊಂಡೆ. ಆದರೆ ಗಂಟೆ ಕಳೆಯುವುದರೊಳಗೆ ಹೊರಗೆ ಮತ್ತೆ ಸದ್ದುಗದ್ದಲ. ಯಥಾಪ್ರಕಾರ ಕಿಟಕಿಯಲ್ಲಿ ಇಣುಕಿದೆ.

ಅದೇ ಹುಡುಗಿ. ಕೆಂಪು ಕೆನ್ನೆ, ರೇಷ್ಮೆ ಬಣ್ಣ. ಆದರೆ ಈ ಬಾರಿ ಸಂಭ್ರಮ ಮುಖದ ಎಲ್ಲಾ ಕಡೆ ಜಾಗ ಮಾಡಿಕೊಂಡಿತ್ತು.

ಗಣೇಶನ ಹಬ್ಬಕ್ಕೆ ಮನೆ ಮಂದಿಯೆಲ್ಲಾ ಹೋಗಿ, ಗಣಗಣ ಗಂಟೆ ಬಾರಿಸಿಕೊಂಡು, ಜೈಕಾರ ಹಾಕುತ್ತಾ, ಅಕ್ಕಿ ತಟ್ಟೆಯಲ್ಲಿ ಗಣೇಶ ತರುತ್ತಾರಲ್ಲಾ ಹಾಗೆ ಕಾರಿನಿಂದ ಇಳಿಸಿದ ಏನನ್ನೋ ಅಷ್ಟೇ ಭಯ ಭಕ್ತಿಯಿಂದ ತರುತ್ತಿದ್ದರು.

ಅರೆ! ನರ್ಸರಿಯಿಂದ ತಂದ ಗಿಡ.

ಇದಕ್ಯಾಕೆ ಇಷ್ಟೊಂದು ಗಲಾಟೆ?

ಒಂದೆರಡು ವಾರ ಕಳೆದಿತ್ತು. ಕಿಟಕಿಯಿಂದ ಇಣುಕಿದಾಗ ಕಂಡದ್ದು ಗಾಬರಿಯ ಮುಖಗಳು. ನರ್ಸರಿ ಗಿಡ ಕೈಕೊಟ್ಟಿತ್ತು. ಎಲೆಗಳೆಲ್ಲಾ ಪೊಗದಸ್ತಾಗಿ ಬೆಳೆದಿದ್ದರೂ ಹುಳು ತಿಂದು ಹಾಕಿತ್ತು.

ಮನೆಯವರಿಗೆ ಜ್ವರ ಬಂತೇನೋ ಎಂಬಷ್ಟು ಕಾತರದಿಂದ ಓಡಿದ ಕಾರು ಸ್ವಲ್ಪ ಹೊತ್ತಿನಲ್ಲೇ ಕ್ರಿಮಿನಾಶಕ ಹೊತ್ತು ತಂತು. ಗಿಡಗಳನ್ನು ಬದುಕಿಸುವ ಕೆಲಸ ನಡೆದಿತ್ತು.

ಒಂದಷ್ಟು ದಿನ ಕಳೆಯಿತು.

ಬೆಳ್ಳಂಬೆಳಗ್ಗೆ ಬಾಗಿಲು ಬಡಿದ ಸದ್ದು. ಕರೆಗಂಟೆ ಇದೆ ಎಂಬುದೇ ಮರೆತು ಹೋಗುವಷ್ಟು ಏಕಾಂಗಿಯಾಗಿ ಹೋಗಿದ್ದ ನನಗೆ ಆಶ್ಚರ್ಯ. ಬಾಗಿಲು ತೆರೆದಾಗ ಅದೇ ಹುಡುಗಿ ಕೈಯಲ್ಲಿ ಸ್ವೀಟ್ಸ್. ಮುಖದ ಕ್ಯಾನ್ ವಾಸ್ ನಲ್ಲಿ ಚೆಲ್ಲಾಡಿದ ಸಂಭ್ರಮದ ಬಣ್ಣ.

‘ನೋಲ್ ಕೋಲ್ ಆಗಯಾ?’ ಹುಡುಗಿ ಕುಣಿಯುತ್ತಾ ಇನ್ನಷ್ಟು ಮನೆಯತ್ತ ಜಿಗಿದಳು.

ಅರ್ಥವಾಗದೆ ಕಿಟಕಿಯಲ್ಲಿ ಇಣುಕಿದೆ. ಅಪಾರ್ಟ್ ಮೆಂಟಿನ ಎಲ್ಲರೂ ಗಿಡದ ಸುತ್ತಾ ನೆರೆದಿದ್ದರು. ನಾನೂ ಮೆಟ್ಟಿಲಿಳಿದೆ. ಇಣುಕಿ ನೋಡಿದಾಗ ಆ ಪುಟ್ಟ ಟ್ರೇಯ ಕ್ಯಾನ್ ವಾಸ್ ನಲ್ಲಿ ನವಿಲುಕೋಸು ಗಡ್ಡೆ ಮೂಡಿತ್ತು.

ಅಪಾರ್ಟ್ ಮೆಂಟಿನ ಅಷ್ಟೂ ಮನೆಗಳನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ತಾಖತ್ತು ಒಂದು ಪುಟ್ಟ ನವಿಲುಕೋಸಿನ ಗಡ್ಡೆಗಿದೆ ಎಂದು ನನಗೆ ಗೊತ್ತಾದದ್ದೇ ಆಗ.

ರಾತ್ರಿ ಮಾತನಾಡುತ್ತ ಕುಳಿತಿದ್ದಾಗ ನನಗೆ ಆತ ಹೇಳಿದ್ದು ಇಷ್ಟೆ – ನಾವು ಕಾಶ್ಮೀರದವರಿಗೆ ಊಟ ತಿಂಡಿ ಏನೇ ಇರಲಿ ಪ್ರತೀ ದಿನ ಅದರಲ್ಲಿ ನೋಲ್ ಕೋಲ್ ಇರಲೇಬೇಕು. ಪ್ರತೀ ಮನೆ, ಪ್ರತೀ ಊಟ, ಪ್ರತೀ ಊರು ಅಥವಾ ಇಡೀ ಕಾಶ್ಮೀರ ಒಂದು ನೋಲ್ ಕೋಲ್ ನ ಅಂತರಗಂಗೆಯನ್ನು ಹೊಂದಿದೆ ಎಂದ.

ಕಾಶ್ಮೀರ ಬಿಟ್ಟು ಬಹುದೂರ ಬಂದಿದ್ದೇವೆ. ನಾನು ಓದಿದ ಶಾಲೆ, ಕೈ ಮುಗಿದು ನಿಂತಿದ್ದ ಗುಡಿ, ತೊರೆಗಳ ಮೇಲಿನ ಆ ಮರದ ಸೇತುವೆ, ಮಂಜು ಎಲ್ಲಾ ನೆನಪಾಗುತ್ತದೆ.

ಈಗಷ್ಟೇ ಅಪ್ಪ ಅಮ್ಮನನ್ನು ಬಿಟ್ಟು ಬಂದಿರೋ, ಇನ್ನೂ ಪುಟ್ಟ ಹುಡುಗಿ ಥರಾನೇ ಇರೋ ನನ್ನ ಹೆಂಡತಿಗೆ ತವರು. ಇವೆಲ್ಲಾ ಈ ದೂರದ ಊರಿಗೆ ಹೇಗೆ ತರಲಿ. ಬೇಕೆಂದರೂ ಕಾಶ್ಮೀರಕ್ಕೆ ದಿಢೀರನೆ ಹೇಗೆ ಹೋಗಲಿ ಎಂದ.

ತಕ್ಷಣ ಮಿಂಚೊಂದು ತಲೆಯಲ್ಲಿ ಸುಳಿಯಿತು. ಆತ ಮನೆಯ ಮುಂದಿನ ಪುಟ್ಟ ಟ್ರೇಯೊಳಗೆ ಕಾಶ್ಮೀರವನ್ನೇ ಸೃಷ್ಟಿಸಿಕೊಳ್ಳುತ್ತಿದ್ದ.

ಆ ಹಿಮ, ಆ ಶಾಲೆ, ಆ ಸೇತುವೆ ತರಲಾಗದ ಆ ಸುಂದರಿ ಒಂದು ನವಿಲುಕೋಸು ಬೆಳೆಯುವುದರ ಮೂಲಕ ಕಾಶ್ಮೀರವೇ ಅಲ್ಲಿ ಮೊಳಕೆಯೊಡೆಯುವುದನ್ನು ಕಾಣುತ್ತಿದ್ದರು.

ಗಿಡ ಸತ್ತಾಗ ಅವರ ಪಾಲಿಗೆ ಸೂತಕ ಆವರಿಸಿದ್ದು ಏಕೆ ಎಂದು ಗೊತ್ತಾಯಿತು.

ಒಂದು ನವಿಲುಕೋಸು ಏನೆಲ್ಲಾ ಆಗಿತ್ತು.

ಆ ಸುಂದರಿಗೆ ಸುಂದರ ತವರು. ಕಾಶ್ಮೀರದಲ್ಲಿ ಹುಟ್ಟದ ಮಗನಿಗೆ ಕಾಶ್ಮೀರದ ಪಾಠ. ಹನುಮಂತ ಇಡೀ ಸಂಜೀವಿನಿ ಪರ್ವತವನ್ನು ಹೊತ್ತು ತಂದನೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಒಂದು ಪುಟ್ಟ ಟ್ರೇನಲ್ಲಿ ಇಡೀ ಕಾಶ್ಮೀರವನ್ನೇ ಬೆಳೆದಿದ್ದರು.

ಒಂದು ನವಿಲುಕೋಸಿನಲ್ಲಿ ಏನೆಲ್ಲಾ..

oooo

key words : kannada-media-journalist-g.n.mohan-special-book

The post ಜಿ.ಎನ್ ಮೋಹನ್ ಸ್ಪೆಷಲ್ : ಒಂದು ನವಿಲುಕೋಸಿನಲ್ಲಿ ಏನೆಲ್ಲಾ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಿ.ಎನ್.ಮೋಹನ್ ಕ್ವಾರಂಟೈ ನ್ ಮೆಲುಕು: ‘ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..’
ಬೆಂಗಳೂರು, ಜೂ.05, 2020 : (www.justkannada.in news)

‘ಇನ್ನೇನು ಹನಿಯೊಡೆದು ನೆಲಕ್ಕುರುಳಿಯೇ ಸೈ ‘ ಎನ್ನುವಂತಿದ್ದ ಆಕಾಶ ನೋಡಿ ನನ್ನ ಎದೆ ಢವಗುಟ್ಟತೊಡಗಿತು.

ಆಗಲೇ ಸೂರ್ಯ ಇನ್ನೇನು ನಾನು ಮುಳುಗಿಯೇ ಸಿದ್ಧ ಎಂದು ವರಾತ ಆರಂಭಿಸಿದ್ದ. ನನ್ನ ಕೈಲ್ಲಿದ್ದ ಕ್ಯಾಮರಾ ನನ್ನನ್ನು ಸುಮ್ಮನೆ ಕೂರಲುಬಿಟ್ಟಿರಲಿಲ್ಲ.

ಎಲ್ಲರೂ ‘ಗುಮ್ಮಟನಗರಿ’ಯಲ್ಲಿ ಗೋಳಗುಮ್ಮಟ ನೋಡಲು ಹೆಜ್ಜೆ ಹಾಕುತ್ತಿದ್ದರೆ ನಾನು ಅವರ ವಿರುದ್ಧ ದಿಕ್ಕು ಹಿಡಿದಿದ್ದೆ.

ವಿಜಾಪುರದ ಹೊರ ವಲಯದಲ್ಲಿ ನಿರ್ಮಿತಿ ಕೇಂದ್ರ ಮಳೆ ನೀರು ಸಂಗ್ರಹಣೆಯ ಬಗ್ಗೆಯೇ ಒಂದು ಪಾರ್ಕ್ ರೂಪಿಸಿತ್ತು.

ವಿಶಾಲ ಅಂಗಳದಲ್ಲಿ ಎತ್ತ ಕಣ್ಣು ಹಾಯಿಸಿದರೂ ಮಳೆ ನೀರನ್ನು ಹೇಗೆಲ್ಲಾ ಸಂಗ್ರಹಿಸಬಹುದು ಎಂದು ಹೇಳುವ ಶಿಲ್ಪಗಳು.

ಆಗ ನನಗೆ ಕಂಡದ್ದು ಒಂದು ದೊಡ್ಡ ಕೊಡಪಾನವನ್ನು ನೇರವಾಗಿ ಆಕಾಶಕ್ಕೆ ಎತ್ತಿ ಹಿಡಿದ ಆ ಮೂರು ಜನರ ಶಿಲ್ಪ! ಆಗಸದಲ್ಲಿ ಆಗಲೇ ಮಳೆ ಹೊತ್ತ ಮೋಡಗಳು ಆ ಕೊಡಪಾನದೊಳಗೇ ಜಾರಿ ಬೀಳುವಂತೆ ಚಿನ್ನಾಟವಾಡತೊಡಗಿತ್ತು.

ಅವರ ಚಿತ್ರ ತೆಗೆಯಬೇಕೆಂದರೆ ನಾನು ನೇರಾನೇರ ನೆಲದ ಮೇಲೆಯೇ ಮಲಗಬೇಕು. ನಾನು ಹಾಗೆ ಮಲಗಿ ಕ್ಯಾಮರಾ ಕ್ಲಿಕ್ಲಿಸಿದ್ದೇ ತಡ 94ದೇಶಗಳ 30 ಸಾವಿರ ಮಂದಿ ಇದು stratocumulus ಎಂದು ಕೂಗಿ ಹೇಳಿದರು.

ಕುಪ್ಪಳ್ಳಿಯಲ್ಲಿದ್ದೆ.

ಕುವೆಂಪು ಅವರು ಚಿರ ನಿದ್ರೆಯಲ್ಲಿರುವ ತಾಣವೇ ಹಾಗಿದೆ. ಎಂಥಹವರನ್ನೂ ಕೈಬೀಸಿ ಕರೆಯುತ್ತದೆ, ನಿಸರ್ಗಕ್ಕೆ ಚೌಕಟ್ಟು ಹಾಕುವಂತೆ ಕೆ ಟಿ ಶಿವಪ್ರಸಾದ್ ಬೃಹತ್ ಶಿಲೆಗಳವಿನ್ಯಾಸ ರೂಪಿಸಿದ್ದರು.

ಅವನ್ನು ಹೇಗಾದರೂ ವಿಶಿಷ್ಠವಾಗಿಸಬೇಕಲ್ಲಾ ಎಂದು ನಾನು ಆ ಕಲ್ಲಿನ ಶಿಲ್ಪವನ್ನು ನೀಲಾಕಾಶದ ಹಿನ್ನೆಲೆ ಬರುವಂತೆ ಹೊಂದಿಸಿಕೊಂಡೆ. ಕ್ಲಿಕ್… ಅದೇ 94 ದೇಶಗಳ 30 ಸಾವಿರ ಮಂದಿ ಇದನ್ನು cumulus ಎಂದು ಬಣ್ಣಿಸಿ ಹೇಳಿದರು.

ಯಾವುದೇ ಒಂದು ಪೋಟೋ ನೋಡಿದರೆ ಸಾಕು ಇದರ ಫ್ರೇಮ್ ಹೇಗಿದೆ, ಕ್ಯಾಮೆರಾ ಕೋನ ಹೇಗಿರಬೇಕಾಗಿತ್ತು, ಅಪರ್ಚರ್, ಎಕ್ಸ್ಪೋಷರ್ ಹೀಗೆ ಮಾತ್ರ ಪಾಠ ಕೇಳಿ ಗೊತ್ತಿದ್ದ ನಾನು ಇದೇನಪ್ಪಾ ಎಂದು ದಂಗಾಗಿ ಹೋಗಿದ್ದೆ.

ಆದರೆ ಅಷ್ಟೂ ದೇಶಗಳ, ಅಷ್ಟೂ ಜನರು ಮಾತನಾಡುತ್ತಿದ್ದುದು ನನ್ನ ಪೋಟೋಗಳ ಬಗ್ಗೆ ಅಲ್ಲ, ನನ್ನ ಫೋಟೋಗಳ ಸೌಂದರ್ಯದ ಬಗ್ಗೆ ಅಲ್ಲ, ಪೋಟೋದಲ್ಲಿ ಏನು ಸೆರೆ ಹಿಡಿಯಲು ಯತ್ನಿಸಿದ್ದೆ ಎನ್ನುವುದರ ಬಗ್ಗೆ ಅಲ್ಲ, ಆದರೆ ಆ ಪೋಟೋದಲ್ಲಿ ಕಾಣಿಸುತ್ತಿದ್ದ ಮೋಡಗಳ ಬಗ್ಗೆ…

ಇವರೇ ‘ಮೋಡಾಡಿಗಳು’

ಎಲ್ಲಿ ಮೋಡ ಕಂಡರೂ ಬಿಟ್ಟ ಕಣ್ಣು ಬಿಟ್ಟಂತೆ ನಿಲ್ಲುವವರು. ಮೋಡಕ್ಕೆ ಕ್ಯಾಮರಾ ಗುರಿ ಇಡುವವರು. ಯಾವ ಮೋಡ, ಎಷ್ಟು ದಪ್ಪ, ಯಾವ ಯಾವ ದೇಶದಲ್ಲಿ ಈ ಮೋಡ ಕಾಣುತ್ತದೆ ಎಂದು ಲೆಕ್ಕ ಹಾಕುವವರು. ಮೋಡದಲ್ಲಿರುವ ನೀರ ಹನಿಗಳೆಷ್ಟು ಎಂದು ಕರಾರುವಕ್ಕಾಗಿ ಹೇಳಬಲ್ಲವರು. ಪ್ರತೀದಿನ ಆಕಾಶಕ್ಕೇ ಕಣ್ಣು ನೆಟ್ಟು ಕೂರುವವರು.

ಆರ್ಥಾತ್ ಮೋಡದ ಪ್ರೇಮಿಗಳು.

ಇಂಗ್ಲೆಂಡ್ ನ ಸಾಮರ್ ಸೆಟ್ ನಲ್ಲಿರುವ ಗಾವಿನ್ ಪ್ರೆಟೋರ್ ಪಿನ್ನೆಗೆ ಒಂದು ದಿನ ಮೋಡದ ಬಗ್ಗೆ ಉಪನ್ಯಾಸ ನೀಡುವಂತೆ ಸಾಹಿತ್ಯ ಸಮ್ಮೇಳನವೊಂದರ ಸಂಘಟಕರಿಂದ ಆಹ್ವಾನ ಬಂತು.

ನಮ್ಮ ಕಾಳಿದಾಸನ ಮೇಘದೂತ, ಕವಿಗಳ ಮೋಡದ ನಂಟುವಿನಂತಹ ವಿಷಯಗಳು ಇಂಗ್ಲಿಶ್ ಸಾಹಿತ್ಯದಲ್ಲಿ ಏನೇನಿದೆಯೋ ಅದನ್ನೆಲ್ಲಾ ಹುಡುಕಿ ಗಾವಿನ್ ಮಾತನಾಡಬೇಕಿತ್ತು.

ಮೋಡದ ಬಗ್ಗೆ ಭಾಷಣಾನಾ ಅಂತ ಬಿಟ್ಟ ಕಣ್ಣು ಬಿಟ್ಟ ಗಾವಿನ್ ಭಾಷಣ ತಯಾರಿಗೆ ಕೂತರು. ಅರೆ! ಎಷ್ಟು ತಿಳಿದರೂ ಮುಗಿಯದ ವಿಷಯ ಮೋಡದಲ್ಲಿದೆ ಎಂದು ಅವರಿಗೆ ಗೊತ್ತಾಗಿ ಹೋಯಿತು.

ಸರಿ ಮೋಡಕ್ಕೆ ಇವರು ಅಂಟಿಕೊಂಡರೋ ಇಲ್ಲಾ ಮೋಡವೇ ಇವರನ್ನು ಆಂಟಿಸಿಕೊಂಡಿತೋ ಅಂತೂ ಅಂದಿನಿಂದ ಗ್ರಾವಿನ್ ಗೆ ಮೋಡದ್ದೇ ಗುಂಗು. ಹಾಗಾಗಿ Cloud spotters guide ಬರೆದರು.

ಒಂದು ದಿನ ತನ್ನಂತೆ ಮೋಡದ ಹುಚ್ಚರು ಇನ್ನೂ ಸಾಕಷ್ಟಿರಬಹುದಲ್ಲಾ ಎನ್ನುವ ಯೋಚನೆ ಬಂದದ್ದೇ ತಡ Cloud Lovers, Unite! ಎನ್ನುತ್ತಾ ಕ್ಲೌಡ್ ಆಪ್ರಿಶಿಯೇಷನ್ ಸೊಸೈಟಿ ರೂಪಿಸಿಯೇಬಿಟ್ಟರು. (cloudappreciationsociety.org).

‘ಓ ಮೋಡಣ್ಣಾ, ಓ ಮೋಡಣ್ಣಾ ನಾನೂ ಬರುವೆನು ಕೈ ನೀಡಣ್ಣಾ..’ ಎನ್ನುತ್ತಾ ಒಬ್ಬರ ಹಿಂದೆ ಒಬ್ಬರು ಅಮೇರಿಕಾದಿಂದ ಜಪಾನ್ ವರೆಗೆ ಫಿಜಿ, ಭೂತಾನ್, ಕೆನ್ಯ, ವಿಯಟ್ನಾಂ ಹೀಗೆ 94ದೇಶಗಳಿಂದ ಮೋಡದ ಹುಚ್ಚರು ಮೋಡದ ಈ ತಾಣವನ್ನು ಸೇರಿಯೇಬಿಟ್ಟರು.

ವಿಜಾಪುರ ಹಾಗೂ ಕುಪ್ಪಳ್ಳಿಯ ನನ್ನ ಪೋಟೋ ಈ ತಾಣ ತಲುಪಿದ್ದೇ ತಡ ಕೊಡಪಾನದ ಮೇಲೆ ತೂಗಾಡುತ್ತಿದ್ದ ಮಳೆ ಹೊತ್ತ ಆ ಭಾರೀ ಕಪ್ಪು ಮೋಡಗಳು ಅವರ ಕಣ್ಣು ಸೆಳೆಯಿತು.

ಕುಪ್ಪಳ್ಳಿಯ ನೆತ್ತಿಯಲ್ಲಿ ಮಟ ಮಟ ಮಧ್ಯಾಹ್ನ ತೂಗುತ್ತಿದ್ದ ಹಿಂಜಿದ ಹರಳೆಯ ಆ ಬಿಳಿ ಮೋಡ ಸಹಾ ಈ ಕೂಟದ ಚರ್ಚೆಗೆ ವಸ್ತುವಾಯಿತು.

ಕೊನೆಗೆ ಈ ಮೋಡ stratocumulus, cumulus ಮೋಡಗಳು ಎಂದು ಗುರುತಿಸಿ ಹೇಳಿದ್ದೇ ನಾನು ಗೂಗಲ್ ನ ಮೊರೆ ಹೊಕ್ಕೆ, ಮೋಡದ ಪುಸ್ತಕಗಳನ್ನು ಕೊಂಡೆ.

ಆಗಲೇ ನನಗೆ ಗೊತ್ತಾಗುತ್ತಾ ಹೋದದ್ದು ಮೋಡದ ಗಾತ್ರ, ಅದು ಇರುವ ಎತ್ತರದ ಮೇಲೆ ಮೋಡಗಳನ್ನು ವರ್ಗೀಕರಿಸುತ್ತಾ ಹೋಗುತ್ತಾರೆ.

ಯಾವುದೇ ಮೋಡವಾದರೂ ಅದು ವಿಶ್ವ ಸಂಸ್ಥೆಯ ವಿಶ್ವ ಪವನಶಾಸ್ತ್ರ ವಿಭಾಗದ ಮನ್ನಣೆ ಪಡೆದಿರಬೆಕು. ಈ ಮೋಡಗಳಿಗೆಲ್ಲಾ ಲ್ಯಾಟಿನ್ ಹೆಸರು ನೀಡಿದ್ದಾರೆ.

ಹೀಗೆ ಮೋಡಕ್ಕೂ ಹೆಸರು ಕೊಡಲು ಚಾಲನೆ ನೀಡಿದ್ದು ಇಂಗ್ಲೆಂಡ್ ನಲ್ಲಿದ್ದ ಒಬ್ಬ ಔಷಧ ಶಾಸ್ತ್ರಜ್ಞ. 19ನೆಯ ಶತಮಾನದಲ್ಲಿ ಮೋಡಗಳ ನಾಮಕರಣ ಆರಂಭವಾಯಿತು ಅಂತ.

ನೋಡಲು ಒಂದು ಅರಳೆ ಮೂಟೆಯಂತೆ ಕಾಣುವ ಮೋಡ 80ಆನೆಯಷ್ಟು ತೂಕವಿರುತ್ತದೆ. ಗುಡುಗು ಮಿಂಚು ಹೊತ್ತು ತರುವ ಮೋಡಗಳಂತೂ ಎವರೆಸ್ಟ್ ಶಿಖರಕ್ಕಿಂತ ಎರಡು ಪಟ್ಟು ಎತ್ತರ ಇರುತ್ತದೆ.

‘ಆಕಾಶ ನೋಡೋಕೆ ನೂಕುನುಗ್ಗಲೇ…’ ಎನ್ನುವ ಮಾತನ್ನಂತೂ ಕ್ಲೌಡ್ ಅಪ್ರಿಶಿಯೇಷನ್ ಸೊಸೈಟಿ ಸುಳ್ಳು ಮಾಡಿ ಹಾಕಿದೆ. ಜಗತ್ತಿನಾದ್ಯಂತ ಇಂದು ಸಾವಿರಾರು ಜನ ಬಿಟ್ಟ ಕಣ್ಣು ಬಿಟ್ಟುಕೊಂತ ಆ ಆಕಾಶ ನೋಡುತ್ತಿದ್ದಾರೆ.

ಕ್ಯಾಮರಾ ಹೊತ್ತು ತಿರುಗುತ್ತಾ, ಸಿಕ್ಕ ಸಿಕ್ಕ ಮೋಡಗಳನ್ನು ಸೆರೆಹಿಡಿಯುವ, ಇಂತಹ ಮೋಡಗಳೇ ಬೇಕು ಎಂದು ಕಾದು ಕೂತು ಕಾಡಲ್ಲಿ ಹುಲಿ ಚಿತ್ರ ತೆಗೆಯುವಂತೆ ದಿನಗಟ್ಟಲೆ ತಪಸ್ಸು ಮಾಡಿ ಅವರೂಪದ ಪೋಟೋ ಕ್ಲಿಕ್ಕಿಸುವ ಛಾಯಾಗ್ರಾಹಕರು ಇಲ್ಲಿದ್ದಾರೆ.

ಮೋಡ ಎನ್ನುವುದೇ ಒಂದು ಆರ್ಟ್ ಗ್ಯಾಲರಿ. ದಿನಕ್ಕೊಂದು ಕಲಾಕೃತಿ ಆಗಸದಲ್ಲಿ ಮೂಡುತ್ತಾ ಹೋಗುತ್ತದೆ. ಆ ಬಣ್ಣದ ಮಿಶ್ರಣ, ಅಷ್ಟಗಲದ ಕ್ಯಾನ್ವಾಸ್ ಇನ್ನೆಲ್ಲಿ ನೋಡಲು ಸಾಧ್ಯ ಹೇಳಿ ಎನ್ನುವ ಕಲಾವಿದರು ಇಲ್ಲಿದ್ದಾರೆ.

ಮೋಡವನ್ನು ಶಾಸ್ತ್ರೋಕ್ತವಾಗಿ ವಿವರಿಸುವ ಖಗೋಳಶಾಸ್ತ್ರಜ್ಞರಿದ್ದಾರೆ. ಮೋಡಗಳ ಇತಿಹಾಸದ ಬೆನ್ನತ್ತಿರುವ ಇತಿಹಾಸಕಾರರಿದ್ದಾರೆ.

ಮೋಡಗಳಿಗೆ ಮಾರು ಹೋಗಿ ಅದರ ಬಗ್ಗೆ ರಾಗಗಳನ್ನು ಸೃಷ್ಟಿಸಿರುವ ಸಂಗೀತಗಾರರಿದ್ದಾರೆ. ಪ್ರತೀ ದಿನ ‘ಮೋಡ ಕವಿದ ವಾತಾವರಣ’ ಎಂದು ನುಡಿಯಬೇಕಾದ ಟಿವಿ ಹವಾಮಾನ ಸುದ್ದಿ ವಾಚಕರಿದ್ದಾರೆ. ಮೋಡದ ಬಗ್ಗೆ ಕವಿತೆಗಳನ್ನು ಬರೆದವರ ಸಂಖ್ಯೆಯಂತೂ ಇನ್ನಿಲ್ಲದಷ್ಟು…

ಮೋಡ ಎಂಬ ಹುಚ್ಚು ಜಗತ್ತಿನಾದ್ಯಂತ ಹರಡಿದೆ. 96 ವರ್ಷದ ಅಜ್ಜನಿಂದ ಹಿಡಿದು, ಬೊಗಳುವ ಕೆಲಸವನ್ನೂ ಮರೆತು ಸದಾ ಆಕಾಶ ನೋಡುತ್ತಾ ಕೂರುವ ದಿಬ್ಬ ಎನ್ನುವ ನಾಯಿಯವರೆಗೆ, ಅರ್ಥಶಾಸ್ತ್ರಜ್ಞ ಹುದ್ದೆಗೆ ರಾಜಿನಾಮೆ ಬಿಸಾಕಿ ಮೋಡದ ಪೇಂಟಿಂಗ್ ಮಾಡುತ್ತಾ ಇರುವ ಜೋರ್ಜ್ ಫಿನ್ ವರೆಗೆ ಈ ಹುಚ್ಚು ತಗುಲಿಹೋಗಿದೆ.

ಮಕ್ಕಳಿಗೆ ಬಾಲ್ಯದಿಂದಲೇ ಮೋಡದ ಹುಚ್ಚು ಹತ್ತಿಸಲು ಶಾಲೆಯಲ್ಲಿ ಮೋಡದ ಪಾಠ ಮಾಡುವ ಪ್ರಯತ್ನ ಕ್ಲಿಕ್ ಆಗಿದೆ. ಊಟದ ಸಮಯದಲ್ಲಿ ಮೋಡದ ಕ್ಲಾಸ್, ಕ್ರಾಫ್ಟ್ ಸಮಯದಲ್ಲಿ ಮೋಡದ ಪೇಪರ್ ಕಟಿಂಗ್, ಶಾಲೆಯ ಮೂಲೆಯಲ್ಲಿ ಮೋಡದ ಕಾರ್ನರ್, ಮೋಡದ ಬಗ್ಗೆ ಕ್ವಿಜ್..

ಹೀಗೆ ಎಲ್ಲೆಲ್ಲೂ ಮೋಡ, ಮೋಡ. ಅದಿರಲಿ ಮೋಡದ ಡಿಸೈನ್ ಹೊತ್ತ ಪ್ಯಾಂಟ್, ಟಿ ಶರ್ಟ್ ಗಳು ಸಹಾ ಮಾರುಕಟ್ಟೆಗೆ ಬಂದಿದೆ.

ಮೋಡಕ್ಕೂ ಒಂದು ಮರ್ಯಾದೆ ತಂದು ಕೊಡಬೇಕು ಎನ್ನುವುದು ಈ ಮೋಡಣ್ಣದಿರ ಹೋರಾಟ.

ಮೋಡದ ಬಗ್ಗೆ ವಿಶ್ವಸಂಸ್ಥೆಗೆ ತಾತ್ಸಾರ ಎಂದು ಮೋಡ ಪ್ರೇಮಿಗಳು ಗುಡುಗಿದ್ದಾರೆ. ಮೋಡದ ಅಧ್ಯಯನ, ದಾಖಲೀಕರಣವನ್ನು ವಿಶ್ವ ಪವನಶಾಸ್ತ್ರ ಸಂಸ್ಥೆ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಮೋಡಣ್ಣರು ಮೋಡದ ಅಟ್ಲಾಸ್ ರೂಪಿಸಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಇವರೆಲ್ಲಾ ಸೇರಿ ಹೊಸ ಮೋಡವನ್ನೂ ಪತ್ತೆ ಹಚ್ಚಿದ್ದಾರೆ.

ಈ ಮೋಡಣ್ಣಂದಿರ ಲೆಕ್ಕದಲ್ಲಿ ನಮ್ಮ ರವೀಂದ್ರನಾಥ ಟ್ಯಾಗೂರರೂ ಸೇರಿ ಹೋಗಿದ್ದಾರೆ.

‘ನನ್ನ ಬದುಕಿನಲ್ಲಿ ಮೋಡಗಳು ತೇಲಿ ಬರುತ್ತಿವೆ. ಅವು ಬರುತ್ತಿರುವುದು ಮಳೆ ಸುರಿಸಲೋ ಇಲ್ಲಾ ಮಿಂಚು ಗುಡುಗು ಉಂಟು ಮಾಡಲು ಅಲ್ಲ. ಬದಲಿಗೆ ಅಸ್ತಮಿಸುತ್ತಿರುವ ನನ್ನ ಬಾನಂಗಳಕ್ಕೆ ಬಣ್ಣ ನೀಡಲು ಬರುತ್ತಿದೆ’ ಅಂದದ್ದೇ ತಡ ಟ್ಯಾಗೂರ್ ಮೋಡಣ್ಣರ ಲಿಸ್ಟ್ ನಲ್ಲಿ ದಾಖಲಾಗಿ ಹೋಗಿದ್ದಾರೆ.

ಮಡಿಕೇರಿಯ ರಾಜಾ ಸೀಟ್ ನಲ್ಲಿ ಅಡ್ಡಾಡಬೇಕಾಗಿ ಬಂತು.

ಕಾಲ ಕೆಳಗೆ ಮೋಡಗಳು ಹಾರಿ ಹೋಗುತ್ತಿದ್ದವು. ‘ಹಿಂಜಿದ ಅರಳೆಯು ಗಾಳಿಗೆ ಹಾರಿ ಮೋಡಗಳಾಗಿಹವೆ..?’ಎಂದು ಹಾಡಿಕೊಂಡೆ.

ಹಾಗೆ ಮೋಡದ ಬಗ್ಗೆ ಹಾಡಿಕೊಂಡದ್ದು ಕ್ಲೌಡ್ ಅಪ್ರಿಶಿಯೇಷನ್ ಸೊಸೈಟಿಗೆ ಈ ವೇಳೆಗೆ ಕೇಳಿಸಿರಲೇಬೇಕು.. ಖಂಡಿತಾ.

ooooo

key words : kannada-media-journalist-g.n.mohan-story

The post ಜಿ.ಎನ್.ಮೋಹನ್ ಕ್ವಾರಂಟೈ ನ್ ಮೆಲುಕು: ‘ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕರೋನಾ ಸಂಕಷ್ಟದಲ್ಲಿ BREAKING NEWS ಆಯ್ತು ‘ ಪಬ್ಲಿಕ್ ಟಿವಿ’ ಸಂಪಾದಕರ ಈ ನಡೆ…!
ಬೆಂಗಳೂರು, ಮೇ 30, 2020 : (www.justkannada.in news) : ಕರೋನ ಕಾರಣ ಕಳೆದ ಕೆಲ ದಿನಗಳಿಂದ ಮಾಧ್ಯಮ ಕ್ಷೇತ್ರ ಸೇರಿದಂತೆ ಈಗ ಖಾಸಗಿ ವಲಯದಲ್ಲಿ ಎಲ್ಲೆಡೆ ವೇತನ ಕಡಿತ, ಉದ್ಯೋಗ ಕಡಿತದ್ದೆ ಸದ್ದು.

ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಕೆಲ ದಿನಗಳಿಂದ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಸಂಬಳ ತಡವಾಗುತ್ತಿದೆ ಎಂಬುದೇ ‘ ಬ್ರೇಕಿಂಗ್ ನ್ಯೂಸ್ ‘ . ಆದರೆ ಇದಕ್ಕೆ ಭಿನ್ನವಾಗಿ ನಿಂತಿದೆ ‘ ಪಬ್ಲಿಕ್ ಟಿವಿ’ ಕಾರಣ, ಸಿಬ್ಬಂದಿಗೆ ಸಂಬಳದ ಜೊತೆ ಈ ಬಾರಿ ಬೋನಸ್ ಕೊಟ್ಟಿರುವುದು.

ಒಂದು ಪತ್ರಿಕಾ ಸಂಸ್ಥೆ ಯಲ್ಲಿ ( ಅಥವಾ ಯಾವುದೇ ಸಂಸ್ಥೆ) ಆರ್ಥಿಕ ಶಿಸ್ತು ಇದ್ದರೆ, ಆ ಸಂಸ್ಥೆಯ ಮಾಲೀಕನಿಗೆ ತನ್ನ ಸಂಸ್ಥೆಯ ನೌಕರರು ಬರೀ ನೌಕರರು ಎನ್ನಿಸಿಕೊಳ್ಳದೆ ಕುಟುಂಬಸ್ಥರು ಎನ್ನಿಸಿ ಕೊಂಡಾಗ ಮಾತ್ರ ಇಂಥಹದು ಸಾಧ್ಯ ಎಂದು ಪಬ್ಲಿಕ್ ಟಿವಿಯ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದೆ.

ಕೋವಿಡ್ ಕಾರಣದಿಂದ ಎಲ್ಲಾ ಸಂಸ್ಥೆಗಳಲ್ಲೂ ಕಳೆದ ಎರಡು ತಿಂಗಳಿಂದ ಆದಾಯ ದೊಡ್ಡ ಮಟ್ಟದಲ್ಲಿ ಕುಸಿದಿದೆ. ನಿರೀಕ್ಷಿತ ಆದಾಯ ಬರುವುದಕ್ಕೆ ಇನ್ನೂ ಕೆಲ ತಿಂಗಳು ಬೇಕಾಗಿದೆ‌‌‌. ಇದೇ ನೆಪ ಮಾಡಿಕೊಂಡು ಸಂಬಳ ಕಟ್ ಮಾಡುವುದು, ಸಂಬಳ ನೀಡದೆ ಇರುವುದು, ನೌಕರರ ಕೆಲಸದಿಂದ ತೆಗೆಯೋದು ಸಂಸ್ಥೆಯ ಮಾಲೀಕನಿಗೆ ಬಹು ಸುಲಭದ ಕೆಲಸ!. ಆದರೆ, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.‌ ರಂಗನಾಥ್, ತಮ್ಮ ಸಹೋದ್ಯೋಗಿಗಳು ನಿರೀಕ್ಷೆಯೂ ಮಾಡಿರದ ವೇಳೆಯಲ್ಲಿ ಬೋನಸ್ ಕೊಡುವ ಮೂಲಕ ಸಿಬ್ಬಂದಿ ವರ್ಗದಲ್ಲಿ ಆಶ್ಚರ್ಯದ ಜತೆಗೆ ಸಂತಸ ಮೂಡಿಸಿದ್ದಾರೆ.

ಎಚ್.ಆರ್.‌ರಂಗನಾಥ್ ಬರೀ ಪಬ್ಲಿಕ್ ಟಿವಿಯ ಮುಖ್ಯಸ್ಥರಾದರೂ ಮೂಲತಃ ಅವರು ಪತ್ರಕರ್ತರು ! ಹಾಗಾಗಿ ಪತ್ರಕರ್ತರ ಕಷ್ಟ ಹೇಗಿರುತ್ತದೆ ಎಂಬುದನ್ನು ಸ್ವತಃ ಅನುಭವಿಸಿದವರು. ಹೀಗಾಗಿಯೇ ಕೊರೋನಾ ಸಮಯದಲ್ಲೂ ಹಗಲಿರುಳು ಕೆಲಸ ಮಾಡಿದ ಸಹೋದ್ಯೋಗಿಗಳಿಗೆ ಬೋನಸ್ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿ ಶುರುವಾದ ವರ್ಷದಿಂದ ಪ್ರತಿ ವರ್ಷವೂ ಸಹೋದ್ಯೋಗಿಗಳ ಸಂಬಳ ಅವರ ಕಾರ್ಯ ಕ್ಷಮತೆ ಮೇಲೆ ಹೆಚ್ಚಿಸಲಾಗಿದೆ. ಒತ್ತಡದ ಕೆಲಸವಿದ್ದಾಗಾಲೂ ಬೋನಸ್ ನೀಡಿದ ಉದಾಹರಣೆ ಇದೆ. ಆದರೆ, ಈಗ ಆದಾಯವೇ ಇಲ್ಲದ ವೇಳೆಯೂ ಹೆಚ್ಚಿನ ಒತ್ತಡದಲ್ಲಿ ಸಹೋದ್ಯೋಗಿಗಳು ಕೆಲಸ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ನಿರೀಕ್ಷಿತ ಆದಾಯದ ಕೊರತೆ ನಡುವೆಯೂ ಬೋನಸ್ ನೀಡುವ ಮೂಲಕ ಭಿನ್ನ ಎನಿಸಿಕೊಂಡಿದ್ದಾರೆ ಕ್ಯಾಪ್ಟನ್ ರಂಗಣ್ಣ.

key words : kannada-media-public.tv-Bangalore-journalist-h.r.ranganath-bonus-for-journalists

The post ಕರೋನಾ ಸಂಕಷ್ಟದಲ್ಲಿ  BREAKING NEWS   ಆಯ್ತು ‘ ಪಬ್ಲಿಕ್ ಟಿವಿ’  ಸಂಪಾದಕರ ಈ ನಡೆ…! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು : ಏನೆಲ್ಲಾ ಕಥೆ ಇದೆ ಈ ಜೆರ್ಸಿ ನಂಬರ್ ಗಳಲ್ಲಿ
ಬೆಂಗಳೂರು, ಮೇ 19, 2020 :

7 ಈಗ 18 ಕ್ಕೆ ದಾರಿ ಮಾಡಿಕೊಟ್ಟಿದೆ

7 ಸಾಧಿಸಿದ ದಿಗ್ವಿಜಯ ಇನ್ನಿಲ್ಲದ್ದು

18 ಸಹಾ ಇನ್ನು ಮುಂದೆ ಅಂತಹದೇ ದಿಗ್ವಿಜಯ ಸಾಧಿಸುತ್ತದೆ ಅನ್ನುವುದು ಎಲ್ಲರ ನಿರೀಕ್ಷೆ

ಇದು ಸುಳ್ಳಾಗುವುದಿಲ್ಲ ಎನ್ನುವುದನ್ನು 18 ಈಗಾಗಲೇ ಸಾಬೀತು ಪಡಿಸಿದೆ.

ಎದುರಿಗೆ ಎಂತ ದೇಶವಾದರೂ ಇರಲಿ ಅವರನ್ನು ಕಟ್ಟಿ ಹಾಕಿ, ಅವರನ್ನು ಮಣಿಸಿ ಜಯದ ನಗು ಚೆಲ್ಲಿದೆ

7 ಎನ್ನುವುದು ಶಾಂತ ಸಮುದ್ರವಾದರೆ, 18 ಅಬ್ಬರ- ಆರ್ಭಟದ ಸಮುದ್ರ

ಏನಿದು, ಏನಿದೇನಿದು??

ಎನ್ನುತ್ತೀರಾ

ಇದು ಸಂಖ್ಯಾಶಾಸ್ತ್ರದ ಕಾಲ. ಹಾಗಾಗಿ ನಾನೂ ಅಂಕಿ ಸಂಖ್ಯೆಯ ಬೆನ್ನಟ್ಟಿ ಹೋಗಿದ್ದೇನೆ ಎಂದು ಷರಾ ಬರೆದಿರಾ..?

ಒಂದು ನಿಮಿಷ ತಾಳಿ

ಒಂದು ಪುಟ್ಟ ಕ್ಲೂ ಕೊಡುತ್ತೇನೆ

7 ಎನ್ನುವುದನ್ನು ಮಹೇಂದ್ರ ಸಿಂಗ್ ಧೋನಿ, 18 ಎನ್ನುವುದನ್ನು ವಿರಾಟ್ ಕೊಹ್ಲಿ ಎಂದು ಓದಿಕೊಳ್ಳಿ

ಆಹಾ! ಎಲ್ಲಾ ಅರ್ಥವಾಯಿತು ಅಂದಿರಾ..?

ಆಗಿರಬಹುದು, ಆದರೆ ಅರ್ಥ ಆಗದಿರುವ ಸಂಗತಿ ಇನ್ನೂ ಇದೆ.

ಮಹೇಂದ್ರ ಸಿಂಗ್ ಧೋನಿಗೆ ನಾನೇಕೆ 7 ಎಂದೂ, ವಿರಾಟ್ ಕೊಹ್ಲಿಯನ್ನು 18 ಎಂದೇ ಗುರುತಿಸಿದ್ದು ಏಕೆ?

ನೀವು ಸದಾ ಕ್ರಿಕೆಟ್ ಅನ್ನೇ ಉಸಿರಾಡಿದ್ದರೆ, ಅದೇ ನಿಮ್ಮ ದೇವರಾಗಿದ್ದರೆ, ಖಂಡಿತಾ ಉತ್ತರ ನಿಮಗೆ ನೀರು ಕುಡಿದಷ್ಟೇ ಸುಲಭ.

7 ಧೋನಿಯ ಜೆರ್ಸಿ ಸಂಖ್ಯೆಯಾದರೆ, 18 ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ

ಜೆರ್ಸಿ ಅಂದರೆ ಮತ್ತೆ ಇದೇನೋ ಅಂತ ಹುಬ್ಬೇರಿಸುತ್ತಾ ಕೂರುವುದು ಬೇಡ. ಸಿಂಪಲ್ಲಾಗಿ ಹೇಳಬೇಕೆಂದರೆ ಮೈದಾನದಲ್ಲಿ ಆಟಗಾರರು ಧರಿಸುವ ಮೇಲಂಗಿ ಅಷ್ಟೇ

ಇದ್ಯಾವಾಗ ನೀವು ಈ ಸಂಖ್ಯಾ ಶಾಸ್ತ್ರಕ್ಕೆ ಜೋತು ಬಿದ್ದದ್ದು ಎನ್ನುತ್ತೀರಾ..?

ಇದೆ ಅದಕ್ಕೆ ಕಾರಣ ಖಂಡಿತಾ ಇದೆ.

ಆ ಒಂದು ದಿನ ನಾನು ಕಣ್ಣುಜ್ಜಿ ಎದ್ದು ಕುಳಿತಾಗ ಜಗತ್ತು ಎಂದಿನಂತೆ ಇರಲಿಲ್ಲ

ಆ ‘ದಯಾಮಯ’ನು ಜಗತ್ತಿನಿಂದ ಎಲ್ಲಾ ಸಂಖ್ಯೆಗಳನ್ನು ಅಳಿಸಿಹಾಕಿ ಕೇವಲ 10 ಎನ್ನುವ ಸಂಖ್ಯೆಯನ್ನೇ ಉಳಿಸಿಹೋಗಿದ್ದಾನೆನೋ ಎನ್ನುವಂತೆ ಕಾಣುತ್ತಿತ್ತು.

ಪತ್ರಿಕೆ ಪುಟ ತೆರೆದರೆ 10, ಟಿ ವಿ ಆನ್ ಮಾಡಿದರೆ 10, ಹೊರಗೆ ಕಾಲಿಟ್ಟರೆ ಗೋಡೆಗಳ ಮೇಲೆ 10, ನಾಲ್ಕು ಜನರ ಜೊತೆ ಮಾತನಾಡಿದರೆ 10, ಕಣ್ಣೀರಿಡುತ್ತಿರುವವರ ಬಳಿ ಕಾರಣ ಕೇಳಿದರೆ ಉತ್ತರ 10, ಕೈನಲ್ಲಿ ಫಲಕ ಹಿಡಿದಿದ್ದರೆ ಅದರಲ್ಲಿ ಬರೆದ ಸಂಖ್ಯೆ 10, ನೂರೆಂಟು ಜನ ಹಿಡಿದ ಬ್ಯಾನರ್ ನಲ್ಲಿ ಅದೇ ಸಂಖ್ಯೆ- 10..

ಹೀಗೆ ಜಗತ್ತು ಅಂದು 10ಮಯವಾಗಿ ಹೋಗಿತ್ತು

ಆಗಲೇ ನನಗೆ ಇನ್ನಿಲ್ಲದ ಕುತೂಹಲ ಮೂಡಿದ್ದು ಏನಪ್ಪಾ ಇದು 10 ಅಂತ

ಇಡೀ ಜಗತ್ತು ಈ ದಿನ ಈ ಸಂಖ್ಯೆಯ ಬೆನ್ನು ಬಿದ್ದಿದೆಯಲ್ಲ ಅಂತ ಹುಡುಕ ಹೊರಟವನಿಗೆ ಉತ್ತರ ಸಿಗಲು ತುಂಬಾ ತಡವೇನೂ ಆಗಲಿಲ್ಲ

ಅಂದು ಡಿಯಾಗೋ ಮರಡೋನ ಫುಟ್ ಬಾಲ್ ಗೆ ವಿದಾಯ ಹೇಳಿದ್ದ.

ಜಗತ್ತು ಶಾಕ್ ಗೆ ಒಳಗಾಗಿತ್ತು

ದೇವರ ಮಹಾನ್ ಸೃಷ್ಟಿ ಎನಿಸಿಹೋಗಿದ್ದ, ಮಿಂಚಿನ ಕಾಲ್ಚಳಕದ, ಗಾಳಿಯೂ ಇವನೂ ಅವಳಿ ಜವಳಿ ಇರಬೇಕು ಎಂದು ಜಗತ್ತು ಅಂದುಕೊಳ್ಳುವಷ್ಟು ವೇಗವಾಗಿ ಚಲಿಸುತ್ತಿದ್ದ ಮರಡೋನ ಇನ್ನು ನಾನು ಫುಟ್ ಬಾಲ್ ಆಡುವುದಿಲ್ಲ ಎಂದು ವಿದಾಯ ಹೇಳಿದ ದಿನ. ಆತನ ಜೆರ್ಸಿ ಆರ್ಥಾತ್ ಕ್ರೀಡಾಂಗಣದಲ್ಲಿ ಆತನ ಅಂಗಿಯ ಸಂಖ್ಯೆ 10

ಹಾಗಾಗಿ ಎಲ್ಲೆಲ್ಲೂ ಆ 10 ನಂಬರ್ ಟಿ ಶರ್ಟ್ ತೊಟ್ಟು, ಆ 10 ನಂಬರ್ ಫಲಕ ಹಿಡಿದವರ ಜಾತ್ರೆ.

ಇಂತಹದೇ ಇನ್ನೊಂದು ದಿನ ಬಂತು. ದೇಶದ ಮೂಲೆ ಮೂಲೆಯಲ್ಲಿ ಜಗತ್ತಿನ ಎಲ್ಲೆಡೆ ಮತ್ತೆ 10 ಆರ್ಭಟಿಸಿದ ದಿನ.

ಜಗತ್ತಿನ ಕ್ರಿಕೆಟ್ ದೇವರು ಆಟಕ್ಕೆ ವಿದಾಯ ಹೇಳಿದ ದಿನ

ಸುಂದರ ಆಟದ, ಅದಕ್ಕಿಂತಲೂ ಆಕರ್ಷಕ ವ್ಯಕ್ತಿತ್ವದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು

ಅವರ ಜೆರ್ಸಿ ಸಂಖ್ಯೆಯೂ 10

ಅಲ್ಲಿಂದ ಆರಂಭವಾಯಿತು ನೋಡಿ ನನ್ನ ಸಂಖ್ಯಾಶಾಸ್ತ್ರ.

ಎಲ್ಲರೂ ಕ್ರಿಕೆಟ್ ಆಟದ ವರದಿ ಓದುತ್ತಿದ್ದರೆ ನಾನು ಅವರ ಜೆರ್ಸಿ ಸಂಖ್ಯೆ ಗುರುತು ಹಾಕಿಕೊಳ್ಳುತ್ತಿದ್ದೆ. ಟಿವಿಯಲ್ಲಿ ಒಲಂಪಿಕ್ಸ್ ಪಂದ್ಯಾವಳಿಗಳಲ್ಲಿ ನನ್ನ ಕಣ್ಣು ಹೋಗುತ್ತಿದ್ದದ್ದು ಆಟದ ವೈಖರಿಗಿಂತ ಟಿ ಶರ್ಟ್ ಹೊತ್ತಿದ್ದ ಸಂಖ್ಯೆಯತ್ತ…

ಎಲ್ಲರಿಗೂ ಆಟವಾದರೆ, ನನಗೆ ಮಾತ್ರ ಅದು ಪಾಠ

ಜೆರ್ಸಿ, ಯೂನಿಫಾರ್ಮ್, ಸ್ವೆಟರ್, ಶರ್ಟ್ ಅಂತೆಲ್ಲ ಮೊದಲು ಹಲವಾರು ರೀತಿ ಕರೆಯಲಾಗುತ್ತಿತ್ತು. ಅದಕ್ಕೂ ಒಂದೇ ಹೆಸರು ಚಾಲ್ತಿಗೆ ಬಂದರೆ ಒಳ್ಳೆಯದಲ್ಲವಾ ಅಂತ ಯೋಚಿಸಿ ಜಗತ್ತಿನ ಎಲ್ಲಾ ಕ್ರೀಡೆಗಳೂ ಈಗ ಬಹುತೇಕ ಅಲಿಖಿತವಾಗಿ ಒಪ್ಪಿಕೊಂಡಿರುವುದು ಜೆರ್ಸಿ ಎನ್ನುವ ಹೆಸರನ್ನು.

ತಂಡವಾಗಿ ಆಡುವ ಆಟಗಳಲ್ಲಿ ನಂಬರ್ ಎನ್ನುವುದು ಈಗ ತೀರಾ ತೀರಾ ಪ್ರಮುಖವಾಗಿ ಹೋಗಿದೆ. ಅದಕ್ಕೆ ಇಂತಹದ್ದು ಅನ್ನುವುದೊಂದೇ ಅಲ್ಲ ಹಲವಾರು ಕಾರಣಗಳು. ಟಿ ವಿ ಯಲ್ಲಿ ನೋಡುವಾಗ ಗುರುತು ಹಿಡಿಯಲು ಈ ನಂಬರ್ ಎಷ್ಟು ಸುಲಭ ಉಪಾಯ ನೋಡಿ.

ಹಾಗಾಗಿಯೇ ಯಾವಾಗ ಕ್ರಿಕೆಟ್, ಫುಟಬಾಲ್, ಕಬಡ್ಡಿ ಹೀಗೆ ತಂಡದ ಆಟಗಳು ಟಿ ವಿ ಯುಗಕ್ಕೆ ಕಾಲಿಟ್ಟವೋ ಅದಕ್ಕೆ ತಕ್ಕಂತೆಯೇ ಹೊಸ ಹೊಸ ಬದಲಾವಣೆಯೂ ಆಗಿದೆ. ಅದರಲ್ಲಿ ಈ ನಂಬರ್ ನಮೂದಿಸುವ ಕ್ರಮವೂ ಒಂದು. ಟೆಲಿವಿಷನ್ ಒಂದೇ ಕಾರಣ ಎಂದುಕೊಂಡುಬಿಡಬೇಡಿ ಒಂದು ತಂಡದಲ್ಲಿ ಆಟಗಾರರು, ಕೋಚ್ ಗಳು, ಸ್ಕೋರ್ ಬರೆದುಕೊಳ್ಳುವವರು, ಅಧಿಕಾರಿಗಳು ಹೀಗೆ ಹಲವು ವರ್ಗದ ಗುರುತು ಹಿಡಿಯಲೂ ಸಹಾ ಇದು ಒಳ್ಳೆಯದೇ.

ಅಷ್ಟೇನಾ ಅನ್ನುತ್ತೀರಾ, ಅಷ್ಟೇ ಅಲ್ಲ.. ಈ ಸಂಖ್ಯಾ ಶಾಸ್ತ್ರದ ಹಿಂದಿನ ಕಥೆ.

ಸಂಖ್ಯೆ ಕೊಡಬೇಕು ಅಂತೇನೋ ಆಯಿತು. ಆದರೆ ಈ ಸಂಖ್ಯೆಯನ್ನು ಎಲ್ಲಿ ಬರೆಯುವುದು.. ಜೆರ್ಸಿಯ ಹಿಂಬದಿಯಲ್ಲೋ, ಮುಂಬದಿಯಲ್ಲೋ, ತೋಳಿನ ಮೇಲೋ, ಅಥವಾ ಆಟಗಾರರ ಶಾರ್ಟ್ಸ್ ಮೇಲೋ, ಅಥವಾ ಅವರು ಬಳಸುವ ಹೆಡ್ ಗೇರ್ ಗಳ ಮೇಲೋ .. ಹೀಗೆ ಸಮಸ್ಯೆ ಸಣ್ಣದೇನಲ್ಲಾ.

ಅಷ್ಟೇ ಅಲ್ಲ.. ಸಂಖ್ಯೆ ಮಾತ್ರ ಬರೆಯಬೇಕೋ ಅಥವಾ ಅದರ ಜೊತೆಗೆ ಹೆಸರೂ ಬರೆಯಬೇಕೋ . ಕೊನೆಗೆ ಒಂದು ಕಾಮನ್ ಆದ ಸೂತ್ರವಂತೂ ಇದೆ ಜೆರ್ಸಿಯ ಹಿಂಬಾಗದಲ್ಲಿ ಸಂಖ್ಯೆ ಅದರ ಕೆಳಗೆ ಹೆಸರಲ್ಲ, ಸರ್ ನೇಮ್ ಬರೆಯಬೇಕು ಅಂತ

ಒಮ್ಮೆ ನಿಮ್ಮ ಫೇವರೈಟ್ ಆಟಗಾರರ ಜೆರ್ಸಿಯನ್ನ ಮನಸಿನಲ್ಲೇ ಒಂದು ಸುತ್ತು ಹಾಕಿ ಬನ್ನಿ

ಕರೆಕ್ಟ್ ಅಲ್ಲವಾ..

ಒಂದು ನಿಮಿಷ.. ನಿಮ್ಮ ಫೇವರೈಟ್ ಆಟಗಾರರ ಜೆರ್ಸಿ ನಂಬರ್ ಗೊತ್ತಾಯ್ತು ಅಂತ ಖುಷಿ ಪಡೋಕೆ ಮುಂಚೆ ನಾನು ಇನ್ನೂ ಒಂದು ಕ್ವಿಜ್ ಕೇಳ್ತೀನಿ ಆ ನಂಬರ್ ರೇ ಯಾಕೆ ಅವರಿಗೆ ಕೊಟ್ಟಿದ್ದಾರೆ. ಹೇಳಿ ನೋಡೋಣ.

ಅದನ್ನ ಊಹೆ ಮಾಡ್ತಾ ಇರಿ ಅಷ್ಟೊತ್ತಿಗೆ ನಾನು ಈ ನಂಬರ್ ಕಥೆ ಹೇಗೆ ಶುರು ಆಯ್ತಪ್ಪಾ ಅನಂತ ಒಂದು ಝಲಕ್ ಕೊಟ್ಟುಬಿಡ್ತೀನಿ

ಫುಟ್ ಬಾಲ್ ನ ಚರಿತ್ರೆ ಹಾಗೂ ಅಂಕಿಸಂಖ್ಯೆ ಗಾಗಿಯೇ ಇರುವ ಅಂತಾರಾಷ್ಟ್ರೀಯ ಮಂಡಳಿ ಪ್ರಕಾರ ಫುಟ್ ಬಾಲ್ ನಲ್ಲಿ ಈ ಜೆರ್ಸಿ ನಂಬರ್ ಆರಂಭಿಸುವ ಪರಿಪಾಠ ಶುರು ಆದದ್ದು 1911 ರಲ್ಲಿ. ಸಿಡ್ನಿಯಲ್ಲಿ ಜರುಗಿದ ಆಸ್ಟ್ರೇಲಿಯನ್ ರೂಲ್ಸ್ ಫುಟ್ ಬಾಲ್ ನಲ್ಲಿ. ಆದರೆ ಇದೇ ಸರಿ ಅಂತೇನೂ ಇಲ್ಲ. ಯಾಕೆಂದರೆ 1903 ರಲ್ಲಿ ಸಿಕ್ಕಿರುವ ಫುಟ್ ಬಾಲ್ ಫೋಟೋಗಳಲ್ಲೂ ನಂಬರ್ ಇದೆ. ಕ್ರಿಕೆಟ್ ನಲ್ಲಿ 1995-96 ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಿದ ವರ್ಲ್ಡ್ ಕಪ್ ಸೀರಿಸ್ ನಲ್ಲಿ ನಂಬರ್ ಕೊಡುವ ಪದ್ಧತಿ ಆರಂಭ ಆಯ್ತು. ವರ್ಲ್ಡ್ ಕಪ್ ನಲ್ಲಿ ಇದು ಜಾರಿಗೆ ಬಂದಿದ್ದು 1999 ರಲ್ಲಿ.

ಅದೇ ರೀತಿ ಯಾವುದೇ ಟೀಮ್ ಆಟಗಳಿರಲಿ ಆ ಎಲ್ಲಕ್ಕೂ ಒಂದೊಂದು ಕಾಲದಲ್ಲಿ ಈ ಜೆರ್ಸಿ ಸಂಖ್ಯೆ ಮೆಲ್ಲನೆ ಹೆಜ್ಜೆ ಹಾಕಿ ಒಳಗಡೆ ಬಂದಿದೆ. ಈ ಸಂಖ್ಯೆ ಒಂದೊಂದು ಆಟಕ್ಕೆ ಒಂದೊಂದು ಥರ, ಒಂದೊಂದು ದೇಶಕ್ಕೆ ಒಂದು ಥರ, ಒಂದೇ ಆಟದಲ್ಲಿ ವಿವಿಧ ಪ್ರಾಕಾರಕ್ಕೆ ವಿವಿಧ ಹೀಗೆ..

ಈ ನಂಬರ್ ಕೊಡೋದು ಹೇಗಪ್ಪಾ ಅಂತ ತಲೆ ಕೆಡಿಸಿಕೊಂಡಿದ್ದ ಕಥೆಗಳೂ ಇದೆ. ಆಗ ಫುಟ್ ಬಾಲ್ ತಂಡಗಳು ಮೊದಲು ಇದಕ್ಕೆ ಪರಿಹಾರ ಹುಡುಕಿಕೊಂಡು ಬಿಟ್ಟವು. ಅವರ ಪ್ರಕಾರ ಗೋಲ್ ಕೀಪರ್ ಗೆ 1 ನೇ ನಂಬರ್ ಮೀಸಲು ಉಳಿದ ನಂಬರ್ ಗಳಲ್ಲಿ ಮೊದಲು ಡಿಫೆಂಡರ್ ಗಳಿಗೆ, ನಂತರ ಮಿಡ್ ಪ್ಲೇಯರ್ ಗಳಿಗೆ, ಆಮೇಲೆ ಫಾರ್ವರ್ಡ್ ಗಳಿಗೆ.

ಆಮೇಲೆ ಅದೂ ಬದಲಾಗಿದೆ. ಫುಟ್ ಬಾಲ್ ಇರಲಿ, ಕ್ರಿಕೆಟ್ ಇರಲಿ ಇವತ್ತು ನೀವು 00 ಯಿಂದ 99 ರವರೆಗೂ ಇರೋ ಜೆರ್ಸಿನ ನೋಡಬಹುದು ಅಂದಹಾಗೆ 99 ಯಾರ ಜೆರ್ಸಿ ನಂಬರ್ ಹೇಳಿ, ನಮ್ಮ ಕ್ರಿಕೆಟ್ ಟೀಮ್ ನಲ್ಲಿ. ‘ದಾದಾ’ದು. ಸೌರವ್ ಗಂಗೂಲಿ 99 ನಂಬರ್ ಜೊತೆಗೆ ಆಡಿದ್ದು.

ಈ 10 ನಂಬರ್ ಇದೆಯಲ್ಲ ಅದಕ್ಕೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ..

ಯಾಕೆ ಅಂದ್ರೆ ಫುಟ್ ಬಾಲ್ ನಲ್ಲಿ ಪೀಲೆ, ಮರಡೋನ ಈ ನಂಬರ್ ಜೊತೆ ಆಟ ಆಡಿದ್ರು. ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್

ಹಾಗಾಗಿ ಈ 10 ಸಂಖ್ಯೆ ಸಹಾ ದೇವರ ಸ್ಥಾನ ಪಡೆದುಕೊಂಡು ಬಿಡ್ತು.

ಎಲ್ಲರಿಗೂ ದೇವರು ಸಿಗಲ್ವಲ್ಲ ಹಾಗಾಗಿ ಈ 10 ಯಾರು ಬೇಕಾದ್ರೂ ತಗೊಳ್ಳಬಹುದಾ ಅನ್ನೋ ಚರ್ಚೆ ಶುರುವಾಗೋಯ್ತು. 10 ಹಾಕಿದೋರೆಲ್ಲಾ ದೇವರು ಆಗೋದಿಕ್ಕೆ ಸಾಧ್ಯ ಇಲ್ವಲ್ಲಾ.. ಅಥವಾ ಯಾರು ಬೇಕಾದರೂ ದೇವರ ವೇಷದಲ್ಲಿ ಬರೋದಿಕ್ಕೆ ಆಗೋದಿಲ್ವಲ್ಲ..

ಏನು ಮಾಡೋದು 10 ಅನ್ನೋದು ಸಂಖ್ಯೆ ಮಾತ್ರ ಅಲ್ಲ ಅದು ಉನ್ಮಾದ, ಪ್ರೀತಿ, ಹುಚ್ಚಿನ ಪರಮ ಅವತಾರ ಹಾಗಾಗಿ ಕ್ರೀಡಾ ರಂಗ ಒಂದು ಯೋಚನೆ ಮಾಡ್ತು ಕೆಲವು ನಂಬರ್ ಗಳನ್ನ ಶಾಶ್ವತವಾಗಿ ದೇವರ ಸ್ಥಾನಕ್ಕೆ ಏರಿಸಿ ಸುಮ್ಮನಾಗಿಬಿಡೋದು ಅಂತ. ಅಂದ್ರೆ ಅದನ್ನ ಇನ್ನು ಮುಂದೆ ಯಾರೂ ಬಳಸೋ ಹಾಗಿಲ್ಲ. ಅವರ ಜೊತೆ ಅವರು ಬಳಸುತ್ತಿದ್ದ ನಂಬರ್ ಗೂ ನಿವೃತ್ತಿ ಕೊಟ್ಟು ಬಿಡೋದು ಅಂತ.

ಇನ್ನೂ ಕೆಲವು ಯೋಚನೆ ಬಂತು ಒಬ್ಬ ಆಟಗಾರ ತಾನು ಬಳಸುತ್ತಿದ್ದ ಜೆರ್ಸಿ ಸಂಖ್ಯೆಯನ್ನ ತಾನು ನಿವೃತ್ತಿ ಹೊಂದುವಾಗ ಅವನಿಗೆ ಬೇಕಾದವರಿಗೆ ಕೊಡಬಹುದು ಅಂತ. ಇನ್ನೂ ಒಂದಷ್ಟು ಕ್ರಮ ಬಂತು ಅಪ್ಪ, ಮಗ ಇಬ್ಬರೂ ಅದೇ ಕ್ರೀಡೆಯಲ್ಲಿದ್ದರೆ ಅಪ್ಪನ ನಂತರ ಮಗ ಬೇಕಾದ್ರೆ ಅದನ್ನ ಬಳಸಬಹುದು ಅಂತ.

ಅಮಿತಾಬ್ ಬಚ್ಚನ್ ದೊಡ್ಡ ಹೆಸರು ಮಾಡಿಬಿಟ್ಟರು, ಸಹಜವಾಗೇ ಅಭಿಷೇಕ್ ಮೇಲೂ ಜನ ಅದೇ ನಿರೀಕ್ಷೆ ಮಾಡ್ತಾರೆ. ಆತ ಸೂಪರ್ ಡೂಪರ್ ಪರ್ಫಾರ್ಮೆನ್ಸ್ ಕೊಡಬೇಕು ಅಂತ

ಅಷ್ಟು ಸುಲಭಾನಾ.. ದೊಡ್ಡವರ ಷೂ ಮಕ್ಕಳಿಗೂ ಆಗಿಬರೋದು?. ಹಾಗಾಗಿ ಬೇಕಾದಷ್ಟು ಮಕ್ಕಳು ಅಪ್ಪನ ಆ ಸಂಖ್ಯೆಯ ಭಾರವೇ ನಮಗೆ ಬೇಡ ಅಂತ ಅದನ್ನು ತಗೊಳ್ಳದೆ ದೂರ ಉಳಿದ ಪ್ರಸಂಗ ಸಹಾ ಉಂಟು. ಇನ್ನು ಕೆಲವರು ದಿಢೀರ್ ಜನಪ್ರಿಯ ಆಗಿಬಿಡ್ತೀವಿ ಅನ್ನೋ ಆಸೆಗೆ ತಗೊಂಡು ಸುಸ್ತು ಹೊಡೆದದ್ದೂ ಉಂಟು.

ಒಂದು ನೆನಪಿರಲಿ ಸುಮ್ನೆ ಜೆರ್ಸಿ ಹೊಲಿಸಿಕೊಂಡು ಮೈದಾನಕ್ಕೆ ಇಳಿದುಬಿಡೋದಿಕ್ಕೆ ಆಗೋದಿಲ್ಲ.ಆಟಗಾರರ ಯೂನಿಫಾರ್ಮ್ ಹೇಗಿರಬೇಕು ಅನ್ನೋದಕ್ಕೆ 92 ಪುಟದ ಸ್ಟೈಲ್ ಗೈಡ್ ಇದೆ.

ಇರ್ಲಿಬಿಡಿ, ಈಗ ನಮ್ಮ ಟೀಮ್ ಕಡೆ ಬರೋಣ..

‘ಮಿಸ್ಟರ್ ಕೂಲ್’ ಯಾಕೆ 7 ನೇ ನಂಬರ್ ಆನ್ ಆಯ್ಕೆ ಮಾಡಿಕೊಂಡರು?. ಉತ್ತರ ಸಿಂಪಲ್ ಅವರ ಬರ್ತ್ ಡೇ ಜುಲೈ 7 . ಯುವರಾಜ್ ಸಿಂಗ್ ಡಿಟ್ಟೋ . ಅವರ ಬರ್ತ್ ಡೇ 12 ರಂದು. ಜೆರ್ಸಿ ನಂಬರ್ ಸಹಾ 12. ಗೌತಮ್ ಗಂಭೀರ್ ಉತ್ತರಾನೂ ಡಿಟ್ಟೋ ಆದ್ರೆ ಸ್ವಲ್ಪ ಟ್ವಿಸ್ಟ್. ಗೌತಿ ಹುಟ್ಟಿದ ಹಬ್ಬ 14 ಹಾಗಾಗಿ ಎರಡೂ ಸಂಖ್ಯೆ ಕೂಡಿಸಿ ಜೆರ್ಸಿ ನಂಬರ್ 5. ರಾಹುಲ್ ದ್ರಾವಿಡ್ ಉತ್ತರ ಮಾತ್ರ ಬೆಸ್ಟ್. ಜಗತ್ತಿನ ಹೆಂಗಳೆಯರೆಲ್ಲಾ ಫಿದಾ ಆಗಬೇಕು. ಯಾಕೆಂದರೆ ಅವರ ಜೆರ್ಸಿ ನಂಬರ್ ಆಯ್ಕೆ ಮಾಡಿದ್ದು ತಮ್ಮ ಬರ್ತ್ ಡೇಟ್ ಗಾಗಿ ಅಲ್ಲ ತನ್ನ ಹೆಂಡತಿಯ ಬರ್ತ್ ಡೇಟ್ ಮೇಲೆ -19

ಹಾಗಾದ್ರೆ ‘ಮಿಸ್ಟರ್ ಅಬ್ಬರ’ ವಿರಾಟ್ ಕೊಹ್ಲಿ 18 ಯಾಕೆ ಆಯ್ಕೆ ಮಾಡಿಕೊಂಡಿದ್ದು. ಇದಕ್ಕೆ ಸಿಂಪಲ್ಲಾಗಿ ಏನೇನೋ ಉತ್ತರ ಇದೆ. ಆದರೆ ಹಾರ್ಟ್ ಟಚಿಂಗ್ ಏನು ಗೊತ್ತಾ 18 ನೇ ತಾರೀಕು ಅವರ ತಂದೆ ಇಲ್ಲವಾದರು. ಆಗ ವಿರಾಟ್ ವಯಸ್ಸು 18. ಆ ನೆನಪು ಕಾಡಿಯೇ ಅವರ ಜೆರ್ಸಿ ನಂಬರ್ 18.

ವೀರೇಂದ್ರ ಸೆಹ್ವಾಗ್ ನಂಬರ್ ಮಾತ್ರ ವಿಚಿತ್ರ 00. ಮೊದಲು ಇವರ ಜೆರ್ಸಿ ನಂಬರ್ 88 ಇತ್ತು. ಆದರೆ ಜ್ಯೋತಿಷಿ ಹೇಳಿದ್ರು. ಬಿಲ್ಕುಲ್ ಲಕ್ ಇಲ್ಲ ಅಂತ ಕೊನೆಗೆ 00 ಗೆ ಸೆಟ್ಲ್ ಆದರು. ಸುರೇಶ್ ರೈನಾ ದು ಇನ್ನೊಂದು ಥರಾ ಮಜಾ ಕಥೆ. ಅವರಿಗೆ 13 ನಂಬರ್ ಬಂತು. ಪಾಪ ಆ ಸಂಖ್ಯೆ ಕಡೆ ಯಾರೂ ಮುಖ ತಿರುವು ನೋಡೋಲ್ಲ. ಹಾಗಾಗಿ ರೈನಾ ಫೀಲ್ಡ್ ಗೆ ಇಳಿದಾಗ ಒಂದರ ಮೇಲೆ ಟೇಪ್ ಅಂಟಿಸ್ಕೊಂಡು ಅದನ್ನ 3 ಅನ್ನೋ ಹಾಗೆ ಕಾಣೋ ಥರಾ ಮಾಡಿಕೊಳ್ತಾರೆ.

ಜಹೀರ್ ಖಾನ್ ಗೆ 7 ಬೇಕಿತ್ತು. ಅದು ಅವರ ಲಕಿ ನಂಬರ್ ಅಂತೆ. ಆದರೆ ಕ್ಯಾಪ್ಟನ್ ನಂಬರ್ಸಹಾ 7. ನನಗೆ ಬೇಕು ಕೊಡು ಅಂತ ಕೇಳೋಕೆ ಆಗುತ್ತಾ. ಒಂದು ಐಡಿಯಾ ಮಾಡಿದ್ರು 34 ತಗೊಂಡ್ರು ಎರಡೂ ಸಂಖ್ಯೆ ಸೇರಿದ್ರೆ 7 ಆಲ್ವಾ. ರವೀಂದ್ರ ಜಡೇಜಾ ಹುಟ್ಟಿದ್ದು 6-12-1988. ಈ ಎಲ್ಲಾ ಸಂಖ್ಯೆ ಸೇರಿಸಿದರೆ 44. ಹಾಗಾಗಿ ಈ ಎರಡೂ ಸಂಖ್ಯೆ ಸೇರಿಸಿ 8 ಮಾಡಿಕೊಂಡ್ರು.

ಹೀಗೆ ನನ್ನ ಸಂಖ್ಯಾ ಶಾಸ್ತ್ರ ಮುಂದುವರೆದಿದೆ.

ನೀವು ಹೇಳಿದ್ರಲ್ಲಿ ಇದು ಕರೆಕ್ಟು, ಅದಲ್ಲ ಅಂತ ನೀವು ಹೇಳೋ ಹಾಗೇ ಇಲ್ಲ. ಯಾಕಂದ್ರೆ ನಾನು ಫುಟ್ ಬಾಲೂ ಆಡಲ್ಲ, ಕ್ರಿಕೆಟ್ ಸಹಾ ಆಡಲ್ಲ. ಬರೀ ಜೆರ್ಸಿ ನೋಡ್ತೀನಿ, ನಂಬರ್ ಬರ್ಕೊಳ್ತೀನಿ, ಗೂಗಲ್ ಮಾಡ್ತೀನಿ, ಸಿಕ್ಕ ಕಥೆ ನಿಮ್ಮ ಮುಂದೆ ಬಿಚ್ಚಿಡ್ತೀನಿ..

key words : kannada-media-journalistg.n.mohan-story

The post ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು : ಏನೆಲ್ಲಾ ಕಥೆ ಇದೆ ಈ ಜೆರ್ಸಿ ನಂಬರ್ ಗಳಲ್ಲಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಒಂದು ಮೊಟ್ಟೆಯ ಕಥೆ..
ಬೆಂಗಳೂರು, ಮೇ 16, 2020 :

‘ಮಹಾತ್ಮ ಗಾಂಧಿ’ ಅಂದೆ..

‘ಆಮೇಲೆ?’ ಅಂದರು

‘ಜವಾಹರಲಾಲ್ ನೆಹರೂ’ ಅಂದೆ

ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು..

‘ಆಮೇಲೆ..??’ ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು.

ಲೆಕ್ಕ ಹಾಗೇ ಮುಂದುವರಿಯಿತು.

ಎಲ್ ಕೆ ಅಡ್ವಾಣಿ, ಟಿ ಎನ್ ಶೇಷನ್, ಓಂ ಪುರಿ, ಶ್ಯಾಮ್ ಬೆನಗಲ್, ರಜನೀಕಾಂತ್, ಅನುಪಮ್ ಖೇರ್, ಕಟ್ಟಪ್ಪ… ವೀರೇಂದ್ರ ಸೆಹ್ವಾಗ್, ಲಾಲ್ ಬಹದ್ದೂರ್ ಶಾಸ್ತ್ರಿ, ಕರುಣಾನಿಧಿ..

ಎದುರಿಗಿದ್ದವರ ಹತ್ತೂ ಬೆರಳು ಮಡಚಿ ಹೋಗಿ ಆಗಲೇ ಸಾಕಷ್ಟು ಸಮಯವಾಗಿತ್ತು.

ಎದುರಿಗಿದ್ದವರು ಗಹಗಹಿಸಿ ನಗಲು ಶುರು ಮಾಡಿದರು

ಅವರಿಗೆ ನನ್ನ ‘ಕ್ವಿಜ್’ ನ ಉತ್ತರ ಗೊತ್ತಾಗಿ ಹೋಗಿತ್ತು.

‘ಸರಿಯಪ್ಪ ನಿನ್ನ ಹೆಸರೇ ಬಿಟ್ಟುಬಿಟ್ಟೆಯಲ್ಲ..’ ಎಂದು ನಕ್ಕರು.

ನಾನು ಗಂಭೀರವಾಗಿ ‘ನೋಡು ಗುರೂ, ಮೋಹನದಾಸ ಕರಮಚಂದ ಗಾಂಧಿ ಅವರಿಂದ ಹಿಡಿದು ಈ ಜಿ ಎನ್ ಮೋಹನ್ ಅವರವರೆಗೆ ನಮ್ಮ ಸಂತತಿ ಜೋರಾಗಿಯೇ ಇದೆ’ ಎಂದೆ.

ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ, ಹಲವು.. ಹಲವು ಮೊಟ್ಟೆಯ ಕಥೆ.

‘ಒಂದಾನೊಂದು ಕಾಲದಾಗ ಏಸೊಂದ ಮುದ ಇತ್ತಾ…’ ಅನ್ನುವಂತೆ ನಾನು ‘ನನಗೆ ಚೆಗೆವಾರನಷ್ಟೇ ದಟ್ಟ ಕೂದಲಿತ್ತು ಗೊತ್ತಾ’ ಎಂದರೆ ಎದುರಿಗಿದ್ದವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.

ನಾನೋ ಮಂಗಳೂರಿಗಿಷ್ಟು, ಗುಲ್ಬರ್ಗಕ್ಕಿಷ್ಟು, ಹೈದರಾಬಾದ್ ಗಿಷ್ಟು ಎಂದು ಮೂರು ಮಕ್ಕಳಿಗೆ ಆಸ್ತಿ ಮೂರು ಪಾಲು ಮಾಡಿಕೊಟ್ಟ ಹಿರಿಯನಂತೆ ನನ್ನ ಕೂದಲನ್ನು ಪಾಲು ಮಾಡಿಕೊಟ್ಟುಬಿಟ್ಟಿದ್ದೆ. ಮೂರೂ ಸ್ಥಳದಲ್ಲಿನ ಗಡಸು ನೀರು ನನ್ನ ಸೊಂಪು ಕೂದಲನ್ನು ನನ್ನ ಕಣ್ಣ ಮುಂದೆಯೇ ಬಚ್ಚಲ ಪಾಲಾಗಿಸಿತ್ತು.

ಆದರೆ ನನಗೇನೂ ಎದೆ ದಸಕ್ ಅನ್ನಲಿಲ್ಲ. ಯಾಕೆಂದರೆ ನನ್ನ ತಲೆ ನನಗೆ ಕಂಡರೆ ತಾನೇ. ಅದು ಎದುರಿಗಿದ್ದವರ ಸಮಸ್ಯೆ ಎಂದು ಕೈ ಚೆಲ್ಲಿ ನಿರಾಳನಾಗಿಬಿಟ್ಟಿದ್ದೆ.

ಹೀಗಿರುವಾಗಲೇ ನನಗೆ ಟಿ ಎಸ್ ಸತ್ಯನ್, ಖ್ಯಾತ ಛಾಯಾಗ್ರಾಹಕ ಸತ್ಯನ್ ಸಿಕ್ಕಿ ಹಾಕಿಕೊಂಡುಬಿಟ್ಟಿದ್ದು.

ಅಂತರ್ಜಾಲ ತಾಣ ‘ಚುರುಮುರಿ’ ಮೇಲೆ ಕೈಯಾಡಿಸುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ‘ಯುರೇಕಾ!’ ಎಂದು ಕೂಗಿಬಿಡಬೇಕು ಎನಿಸಿತು. ಯಾಕೆಂದರೆ ಆ ಟಿ ಎಸ್ ಸತ್ಯನ್ ಬಾಲ್ಡಿ ಜಗತ್ತಿನ ಮೇಲೆ ಚಂದನೆಯ ಸ್ಪಾಟ್ ಲೈಟ್ ಚೆಲ್ಲಿದ್ದರು.

ಮಾರ್ಕ್ಸ್ ಗೊತ್ತಲ್ವಾ.. ಅದೇ ಕಾರ್ಲ್ ಮಾರ್ಕ್ಸ್. ಆತ ‘ಜಗತ್ತಿನ ಕಾರ್ಮಿಕರೇ ಒಂದಾಗಿ ನೀವು ಕಳೆದುಕೊಳ್ಳುವುದೇನಿಲ್ಲ, ಸಂಕೋಲೆಗಳನ್ನು ಹೊರತು…’ ಅಂತ ಕರೆ ಕೊಟ್ಟಿದ್ದ.

ಅದೇ ರೀತಿ ದೆಹಲಿಯಲ್ಲೂ ಒಂದು ಮಹತ್ವದ, ಸುವರ್ಣಾಕ್ಷರದಲ್ಲಿ ಕೆತ್ತಿ ಇಡಬೇಕಾದ ಘೋಷಣೆಯೊಂದು ಹೊರಹೊಮ್ಮಿತು. ‘ಜಗತ್ತಿನ ಬಾಲ್ಡಿಗಳೇ ಒಂದಾಗಿ, ನೀವು ಕಳೆದುಕೊಳ್ಳುವುದೇನಿಲ್ಲ, ಕೂದಲೊಂದನ್ನು ಬಿಟ್ಟು..’

ಹಾಂ.. ಹೀಗೂ ಉಂಟೇ! ಅಂತ ನನ್ನ ಕೇಳಿದರೆ ನಾನು ತಾನೇ ಏನು ಹೇಳಲು ಸಾಧ್ಯ. ‘ಹೀಗೂ ಉಂಟು..’ ಎಂದು ಸಂಭ್ರಮಪಡುವುದನ್ನು ಬಿಟ್ಟು..

ಒಂದು ದಿನ ದೆಹಲಿಯ ವಕೀಲರೊಬ್ಬರು ನೋಡುತ್ತಾರೆ. ತಮ್ಮ ಮನೆಯಲ್ಲಿ ಕುಳಿತಿದ್ದ ಅಷ್ಟೂ ಜನರನ್ನು.. ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಹೇಗೆ ಜ್ಞಾನೋದಯವಾಗಿಹೋಯ್ತೋ ಆ ರೀತಿ ಆ ವಕೀಲರಿಗೂ ಆ ಕ್ಷಣದಲ್ಲಿ ಜ್ಞಾನೋದಯವಾಗಿ ಹೋಯ್ತು

ಯಾಕೆಂದರೆ ಅವರ ಮನೆಯಲ್ಲಿ ಆಗ ಕುಳಿತಿದ್ದ 20 ಜನರಲ್ಲಿ 15 ಮಂದಿ ಬಾಲ್ಡಿಗಳೇ..

ಆಗಲೇ ಅವರಿಗೆ ಅನಿಸಿಹೋಯಿತು. ಬಾಲ್ಡಿಗಳನ್ನು ಕಾಪಾಡಬೇಕು ಎಂದು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಅರಿವಾಗುತ್ತದೆ’ ಎನ್ನುವಂತೆ ಬಾಲ್ಡಿಗಳಿಗಷ್ಟೇ ಬಾಲ್ಡಿಗಳ ದುಃಖ ಗೊತ್ತಾಗಲು ಸಾಧ್ಯ ಎಂದು ತೀರ್ಮಾನಿಸಿದವರೇ ಸಂಘ ಸ್ಥಾಪಿಸಿಯೇಬಿಟ್ಟರು.

ಅದೂ ಅಂತಿಂತ ಸಂಘವಲ್ಲ- ಅದರ ಹೆಸರು ‘ಬಾಲ್ಡೀಸ್ ಇಂಟರ್ನ್ಯಾಷನಲ್’. ಅದರ ಕಾರ್ಯಾಚರಣೆಯ ಸ್ಥಳವೂ ಅಂತಿಂತಹದ್ದಲ್ಲ ಫೈವ್ ಸ್ಟಾರ್ ಹೋಟೆಲ್

ಪ್ರತೀ ತಿಂಗಳ ಮೊದಲ ಹಾಗೂ ಕೊನೆಯ ಗುರುವಾರ ಬಾಲ್ಡಿಗಳ ಸಭೆ. ಕಷ್ಟ ಸುಖ ಮಾತಾಡಿಕೊಂಡು ಸಿಕ್ಕಿದ್ದೆಲ್ಲಾ ಹೀರುತ್ತಾ ತಾವು ಬಾಲ್ಡಿಗಳಾಗಲು ತಮ್ಮ ಹೆಂಡತಿಯರು ಕಾರಣವೋ, ಹೆಲ್ಮೆಟ್ ಗಳು ಕಾರಣವೋ, ದೆಹಲಿಯ ಈ ದರಿದ್ರ ಹವಾಮಾನ ಕಾರಣವೋ ಅಥವಾ ಜೀನ್ಸ್ ಗಳೇ ಈ ನಡುವೆ ಎಕ್ಕುಟ್ಟಿಹೋಗಿದೆಯೋ ಎಂದು ಚರ್ಚಿಸುತ್ತಾ ಕೂತು ಎದ್ದು ಹೋಗುತ್ತಿದ್ದರು.

19 ಜನ ಬಾಲ್ಡಿಗಳ ಘನ ಸದಸ್ಯತ್ವದಲ್ಲಿ ಸಂಘ ಆರಂಭವಾಗಿ ಹೋಯ್ತು. ಆದರೆ ಈ ಸಂಘ ಬದುಕುಳಿಯುತ್ತೆ ಎನ್ನುವ ನಂಬಿಕೆ ಆ ಸದಸ್ಯರಿಗೇ ಇರಲಿಲ್ಲ.

ತಮ್ಮ ಕಣ್ಣ ಮುಂದೆಯೇ ತಮ್ಮ ಕೂದಲುಗಳು ಉದುರಿಹೋದಂತೆ ಈ ಸಂಘವೂ ಉದುರಿಹೋಗುತ್ತದೆ ಎಂದು ಭಾವಿಸಿದ್ದರು. ಆದರೆ ಆಶ್ಚರ್ಯ ಪರಮಾಶ್ಚರ್ಯ ಸಂಘದ ಸದಸ್ಯತ್ವ ನೋಡ ನೋಡುತ್ತಿದ್ದಂತೆ 150 ಕ್ಕೇರಿತು.

ಸಂಘದ ಸದಸ್ಯರಾಗಲು ಇದ್ದ ಎರಡು ಕಂಡೀಷನ್ ಪೈಕಿ ಒಂದನ್ನು ಹೇಳಲೇಬೇಕಿಲ್ಲ ಅವರು ಬಾಲ್ಡ್ ಆಗಿರಬೇಕು.. ಅಂದ ಮಾತ್ರಕ್ಕೆ ಸಂಘದ ಸದಸ್ಯತ್ವ ಸಿಕ್ಕಿಬಿಡುತ್ತಿರಲಿಲ್ಲ ತಾವು ಬಾಲ್ಡ್ ಎನ್ನುವ ಬಗ್ಗೆ ಹೆಮ್ಮೆ ಇರಬೇಕು, ಅಹಂ ಇರಬೇಕು, ಕೊಬ್ಬಿರಬೇಕು.. ಇದು ಎರಡನೆಯ ಕಂಡೀಶನ್. ಕೂದಲಿದ್ದ ತಲೆ ನೋಡಿದರೆ ಸಾಕು ಉಕ್ಕೀ ಉಕ್ಕಿ ನಗು ಬರಬೇಕು..

ಈ ಸಂಘ ಘನಂಧಾರಿ ಸಂಘವೇ. ಇದು ಗೌರವ ಸದಸ್ಯತ್ವವನ್ನೂ ಕೊಡುತ್ತಿತ್ತು. ಹಾಗೆ ಒಂದು ಸಲ ಗೌರವ ಸದಸ್ಯತ್ವ ಕೊಟ್ಟಿದ್ದು ಯಾರಿಗೆ ಗೊತ್ತಾ- ಐ ಕೆ ಗುಜ್ರಾಲ್ ಗೆ.

ಬಾಲ್ಡಿ ಸಂಘದಲ್ಲಿ ಬರೀ ಆಟ ಕೂಟ ಅಲ್ಲ, ವಿಚಾರ ವಿನಿಮಯವೂ ಆಗುತ್ತಿತ್ತು ಆದರೆ ಭಾಷಣಕಾರರಾಗಿ ಬರುವವರು ಸಹಾ -.ಗೊತ್ತಾಯ್ತಲ್ವಾ..

ಒಂದು ಸಲ ಹೀಗೆ ಎಲ್ಲಾ ಸಭೆ ಸೇರಿದ್ದಾರೆ. ಆಗ ಒಬ್ಬ ಸರ್ದಾರ್ಜಿ ಅಲ್ಲಿಗೆ ಎಂಟ್ರಿ ಕೊಟ್ಟರು. ತಮಗೂ ಸಂಘದ ಸದಸ್ಯತ್ವ ಕೊಡಬೇಕು ಅಂತ. ತಲೆಗೆ ಭಾರೀ ಪಂಜಾಬಿ ಪಗಡಿ. ಇವರು ಸಂಘಕ್ಕೆ ಅರ್ಹರೋ ಇಲ್ಲವೋ ಯಾರಿಗೆ ಗೊತ್ತು. ಪಗಡಿ ಬಿಚ್ಚಿ ಎನ್ನೋಣ ಅಂದರೆ ಆ ದಿನ ಸದಸ್ಯರ ಹೆಂಡಿರು ಮಕ್ಕಳೆಲ್ಲಾ ಇದ್ದಾರೆ.

ಕೊನೆಗೆ ಆ ಮಹನೀಯರನ್ನ ಒಂದಷ್ಟು ಜನ ಪಕ್ಕದಲ್ಲಿದ್ದ ಟಾಯ್ಲೆಟ್ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿಂದಲೇ ವಿಜಯದ ಕಹಳೆ ಮೊಳಗಿಸಿದರು. ಆ ಸರ್ದಾರ್ಜಿ ಹೊರಬಂದಾಗ ಎಲ್ಲರೂ ತಬ್ಬಿದ್ದೇನು, ಚಿಯರ್ಸ್ ಹೇಳಿದ್ದೇನು..

ಅಲ್ಲಿದ್ದ ಬಾಲ್ದಿಗಳಲ್ಲೇ ಸುಮಾರು ಕೆಟಗರಿಗಳಿತ್ತು- ಮೂನ್ ಶೈನ್, ಸನ್ ಶೈನ್, ವಿಲ್ ಶೈನ್..

ಹಸ್ತಸಾಮುದ್ರಿಕೆ ಎನ್ನುವುದನ್ನೇ ಈ ಸಂಘ ಗೇಲಿ ಮಾಡುತ್ತಿತ್ತು. ಏಕೆಂದರೆ ಈ ಸಂಘದ ಸದಸ್ಯರ ಥಿಯರಿ ಪ್ರಕಾರ ಭವಿಷ್ಯ ಹುಡುಕಲು ಕೈಯನ್ನೇ ನೋಡಬೇಕಾದ್ದೇನಿಲ್ಲವಂತೆ. ಫಳ ಫಳ ಹೊಳೆಯುವ ತಲೆ ನೋಡಿದರೆ ಸಾಕು ಎನ್ನುವುದು ಎಲ್ಲರ ನಂಬಿಕೆಯಾಗಿತ್ತು.

ಈ ಸಂಘದ ಅತಿ ಹಿರಿಯ ಸದಸ್ಯರಾದ ಉದ್ಯಮಿ ಕೆ ಜಿ ಕೋಸ್ಲಾ ಯಾವಾಗಲೂ ಹೇಳುತ್ತಿದ್ದರು. ಮುಂದೆ ಬಾಲ್ಡಿ ಆಗಿದ್ದರೆ ಆತ ಚಿಂತಕ, ಹಿಂದೆ ಬಾಲ್ಡಿ ಆಗಿದ್ದರೆ ರಸಿಕ. ಹಿಂದೆ ಮುಂದೆ ಎರಡೂ ಬಾಲ್ಡಿ ಆಗಿದ್ದವರು ಚಿಂತಕ -ರಸಿಕರು.. ಹೀಗೆ.. ಆಹಾ ಎನ್ನದೆ ನನಗೇನು ಬೇರೆ ದಾರಿಯಿದೆ?.

ಹೀಗಿರುತ್ತಲೊಂದು ದಿನ ಈ ಸಂಘಕ್ಕೆ ಹೊಳೆದು ಹೋಯ್ತು. ಜಗತ್ತಿನ ಬಾಲ್ಡಿಗಳೇ ನೀವು ಕಳೆದುಕೊಳ್ಳುವುದೇನಿಲ್ಲ ಎಂದು ಹೇಳಿದ್ದು ಆಗಿದೆ. ಹಾಗಾದರೆ ಕಳೆದುಕೊಳ್ಳುವವರಾದರೂ ಯಾರು ಅಂತ ಯೋಚಿಸಿದಾಗ ಫಕ್ಕನೆ ಹೊಳೆದದ್ದು ಯಸ್! ನಿಮ್ಮ ಊಹೆ ಸರಿ ಅದು- ಕ್ಷೌರಿಕರು..

ಹೀಗೆಲ್ಲಾ ಓದುತ್ತಾ ಓದುತ್ತಾ ಕುಳಿತಾಗ ನನ್ನ ಎದುರಿದ್ದ ಫೋನ್ ‘ಟ್ರಿಣ್’ ಎಂದಿತು. ಫೋನ್ ಎತ್ತಿದೆ. ಆ ಕಡೆ ಇದ್ದವರು ‘ಏನು ಗೊತ್ತಾ ನಮ್ಮ ರಾಮೋಜಿ ಫಿಲಂ ಸಿಟಿಗೆ ಸಿಹಿಕಹಿ ಚಂದ್ರು ಬಂದಿದ್ದಾರೆ, ಸೀರಿಯಲ್ ಡಿಸ್ಕಷನ್ ಗೆ’ ಎಂದರು.

ನಾನು ಆಗ ‘ಈಟಿವಿ’ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥ. ಹಾಗೆ ಬೆಂಗಳೂರಿನಿಂದ ಬಂದ ಯಾರೇ ಆದರೂ ನಮ್ಮ ಹುಡುಗರ ಬಳಿ ಕರೆತರುತ್ತಿದ್ದೆ. ತೆಲುಗುವೀಡಿನಲ್ಲಿ ಒಂದಷ್ಟು ಕನ್ನಡದಲ್ಲಿ ಮಾತಾಡಿ ಬರ ತೀರಿಸಿಕೊಳ್ಳಲಿ ಅಂತ.

ಹಾಗೆ ಬಂದ ಸಿಹಿ ಕಹಿ ಚಂದ್ರುಗೆ ಒಬ್ಬ ಹುಡುಗ, ಸೊಂಪುಗೂದಲಿನವ ಕೇಳಿಯೇಬಿಟ್ಟ- ‘ನಿಮ್ಮ ಬಾಲ್ಡಿ ತಲೆಯ ರಹಸ್ಯವೇನು?’ ಅಂತ.

ಚಂದ್ರು ಹಿಂದೆ ಮುಂದೆ ನೋಡಲೇ ಇಲ್ಲ-

ಸಿಂಪಲ್, ಕೂದಲು ಸೊಂಪಾಗಿ ಬೆಳೆಯಲು ಗೊಬ್ಬರ ಬೇಕು. ಯಾರ ತಲೆಯಲ್ಲಿ ಗೊಬ್ಬರ ತುಂಬಿದೆಯೋ ಅವರಿಗೆ ಕೂದಲಿದೆ. ನನ್ನ ತಲೆಯಲ್ಲಿ ಗೊಬ್ಬರ ಇಲ್ಲ. ಹಾಗಾಗಿ ನಾನು ಬಾಲ್ಡಿ ಎಂದರು.

ಸುತ್ತಾ ಇದ್ದವರೆಲ್ಲಾ ಶಾಕ್ ಆಗಿ ನಿಂತಿದ್ದರು.

ಒಂದೇ ಒಂದು ದನಿ ‘ಹೋ’ ಎಂದು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡುತ್ತಿತ್ತು.

ಆ ದನಿ ಯಾರದು ಎಂದು ಸುತ್ತಾ ನೋಡಿದೆ.

ಅದು ನನ್ನದೇ …

key words : karnataka-journalist-g.m.mohan-story-kannada-media

The post ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಒಂದು ಮೊಟ್ಟೆಯ ಕಥೆ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಲೈಫ್ ಎಂಬ 13 ಎಪಿಸೋಡ್
ಅದು ಸರಿ 10:10 ಯಾಕೆ ಅಂತ ಕೇಳಿದೆ, ಅವನು ಅವಾಕ್ಕಾಗಿ ಹೋದ ಆ ಪ್ರಶ್ನೆ ಖಂಡಿತಾ ಅವನು ನಿರೀಕ್ಷಿಸಿರಲಿಲ್ಲ. ಬರುವ ಪ್ರಶ್ನೆ ಏನಿರಬಹುದು ಎಂದು ಆತ ಮೊದಲೇ ಲೆಕ್ಕ ಮಾಡಿ ಇಟ್ಟುಕೊಂಡಿದ್ದ ಹಾಗಾಗಿ ಉತ್ತರಗಳೂ. ಆದರೆ ಇದು ಅವನಿಗೆ ಖಂಡಿತಾ ಅನಿರೀಕ್ಷಿತ

ಹಾಗಾಗಿ ತಬ್ಬಿಬ್ಬಾಗಿ ನನ್ನ ಮುಖ ನೋಡಿದ, ಏನೋ ಒಂದು ಉತ್ತರ ಕೊಟ್ಟು ಪಾರಾಗುವ ಪ್ರಶ್ನೆಯೂ ಅದಾಗಿರಲಿಲ್ಲ. ಹಾಗಾಗಿ ‘ಒಂದು ನಿಮಿಷ ತಾಳಿ’ ಎಂದವನೇ ಎಲ್ಲೆಲ್ಲಿಗೋ ನಂಬರ್ ತಿರುಗಿಸತೊಡಗಿದ.

ಅದು ಒಂದು ಪತ್ರಿಕಾ ಗೋಷ್ಠಿ

ಟೈಟಾನ್ ವಾಚ್ ಕಂಪನಿ ‘ರಂಗೋಲಿ’ ಅನ್ನುವ ತನ್ನ ಹೊಸ ಸೀರೀಸ್ ಬಿಡುಗಡೆ ಮಾಡಲು ಸಜ್ಜಾಗಿತ್ತು, ಅದಕ್ಕಾಗಿ ಆ ಕಂಪನಿ ಕರೆದಿದ್ದ ಗೋಷ್ಠಿ ಅದು. ನಾನು ‘ರಂಗೋಲಿ’ ಅನ್ನೋ ಹೆಸರು ಏಕೆ ಇಟ್ಟಿರಿ, ಯಾಕೆ ಅಷ್ಟೊಂದು ರೇಟು. ಯಾವಾಗ ಮಾರ್ಕೆಟ್ ಗೆ ಬಿಡ್ತೀರಿ

ರಿಪೇರಿಗೆ ಬಂದರೆ ಎಲ್ಲಿ ಹೋಗ್ಬೇಕು ಅನ್ನೋ ಪ್ರಶ್ನೆ ಕೇಳಲಿಲ್ಲ.

ನಾನು ಕೇಳಿದ್ದು-

ಯಾಕೆ ಎಲ್ಲಾ ವಾಚ್ ನಲ್ಲೂ ಮುಳ್ಳುಗಳು 10:10 ಮಾತ್ರ ತೋರಿಸುತ್ತೆ, ನೀವು ಅಂಗಡೀನಲ್ಲಿ ಇಡೋ ಡಿಸ್ಪ್ಲೇ ಪೀಸ್ ನಲ್ಲಿ

ಕೊಡೋ ಜಾಹೀರಾತಲ್ಲಿ, ಈಗ ನಮ್ಮೆದುರು ನೀವು ಇಟ್ಟಿರೋ ಸೆಟ್ ನಲ್ಲಿ ಕೂಡಾ.. ಅಂದೆ.  ಬಹುಷಃ ಆತನೂ ಆಗ ಅದನ್ನು ಮನವರಿಕೆ ಮಾಡಿಕೊಂಡನೋ ಏನೋ. ಉತ್ತರ ಹುಡುಕಲಾರಂಭಿಸಿದ.

ಅದಕ್ಕೂ ಸಾಕಷ್ಟು ಮುಂಚೆ ಹೀಗೆ ಒಂದು ಪ್ರಶ್ನೆ ಕೇಳಿದ್ದೆ, ವಾಚ್ ಅಂಗಡಿಯವರಿಗಲ್ಲ ‘ವಾಚ್ ಡಾಗ್’ ಅನಿಸಿಕೊಂಡಿದ್ದ ದೂರದರ್ಶನದ ಮುಂದೆ. ಯಾವುದೋ ಕಾರಣಕ್ಕಾಗಿ ದೂರದರ್ಶನದ ನಿರ್ದೇಶಕರು ದೆಹಲಿಯಿಂದ ಇಲ್ಲಿಗೆ ಬಂದಿದ್ದರು. ಅದು ಇನ್ನೂ ಖಾಸಗಿ ಚಾನಲ್ ಗಳನ್ನು ಕಾಣದ ಕಾಲ. ದೂರದರ್ಶನ ಒಂದೇ ಮನರಂಜನೆಗೆ ಕಿಟಕಿ. ಆದರೆ ಎಲ್ಲಾ ಧಾರಾವಾಹಿಗಳು 13 ವಾರಕ್ಕೆ ಮುಗಿದು ಹೋಗುತ್ತಿದ್ದವು.

ನನಗೆ ಅದೇ ಕುತೂಹಲ- ಸಾವಿರಲಿ ನೋವಿರಲಿ, ನಲಿವಿರಲಿ ಒಲವಿರಲಿ. ಅದು ಹೇಗಪ್ಪಾ ಸರಿಯಾಗಿ 13 ವಾರವನ್ನೇ ಆಯ್ಕೊಂಡು ಅಡ್ಜಸ್ಟ್ ಆಗಿಬಿಡುತ್ತೆ ಅಂತ. ಹಾಗಾಗಿ ದೆಹಲಿಯಿಂದ ನಿರ್ದೇಶಕರು ಬಂದು ಪತ್ರಿಕಾ ಗೋಷ್ಟಿ ಮುಗಿಸಿದಾಗ ಈ ಪ್ರಶ್ನೆ ಹಾಕಿಬಿಟ್ಟಿದ್ದೆ. ಅವರೋ ದೂರದರ್ಶನದ ಒಳಗಿನ ನೂರೆಂಟು ಕಷ್ಟ ಕೋಟಲೆ ಬಗ್ಗೆ, ಸರ್ಕಾರಿ ಪರ ನಿಲುವಿನ ಬಗ್ಗೆ, ಇಲ್ಲಾ ಪ್ರಸಾರ ಭಾರತಿ ಬಗ್ಗೆ ಪ್ರಶ್ನೆ ಬರುತ್ತೇನೋ ಅಂದುಕೊಂಡಿದ್ದರು. ನಾನು ಯಾಕೆ ನಿಮ್ಮ ಎಲ್ಲಾ ಧಾರಾವಾಹಿಗಳೂ 13 ಎಪಿಸೋಡ್ ನಲ್ಲಿ ಮುಗಿದು ಹೋಗಿಬಿಡುತ್ತೆ ಅಂತ ಕೇಳಿದ್ದೆ, ಥೇಟ್ ವಾಚ್ ಕಂಪನಿಯವನ ಥರವೇ ನಿರ್ದೇಶಕರೂ ಮುಖ ಮಾಡಿದ್ದರು.

ವಾಚ್ ಕಂಪೆನಿಯವನು ಅಲ್ಲಿ ಇಲ್ಲಿ ಫೋನ್ ತಿರುಗಿಸಿ ಆದ ಮೇಲೆ ಹೇಳಿದ ನೋಡಿ ವಾಚ್ ನಲ್ಲಿ 10 10 ಸಮಯ ಇದ್ರೆ ಬೊಂಬಾಟ್ ಆಗಿರುತ್ತೆ. ಏಕೆ ಅಂದ್ರೆ ಮುಳ್ಳುಗಳೆರಡೂ 10 10 ರಲ್ಲಿದ್ದಾಗ ಮಾತ್ರ ನಮ್ಮ ಕಂಪನಿ ಲೋಗೋ ಚೆನ್ನಾಗಿ ಕಾಣುತ್ತೆ. ಡೇಟು ಸರಿಯಾಗಿ ಕಾಣಿಸುತ್ತೆ.

ನನಗೋ ಪ್ರಶ್ನೆಗಳು ಮುಗಿದಿರಲಿಲ್ಲ. ಸರಿ 8 20 ಕ್ಕೆ ಸೆಟ್ ಮಾಡಿದ್ರೂ ಹಾಗೇ ಇರುತ್ತಲ್ಲ. ನಿಮ್ಮ ಲೋಗೋ, ಡೇಟು ಎಲ್ಲಾ ಅಂದೆ.ಅವನು ಮತ್ತೆ ಫೋನ್ ತಿರುಗಿಸಲು ಆರಂಭಿಸಿದ. ಆಮೇಲೆ ಅವನ ಮುಖ ಎಷ್ಟು ಹಸನ್ಮುಖವಾಗಿ ಹೋಯಿತು ಎಂದರೆ

32 ಹಲ್ಲೂ ಕಿರಿದು ಹೇಳಿದ, ಸಮಯ 10 10 ಕ್ಕೆ ಇಟ್ಟರೆ ಅದು ನಗುಮುಖದ ಥರಾ ಕಾಣುತ್ತೆ ಹ್ಯಾಪಿ ಫೀಲಿಂಗ್ ಕೊಡುತ್ತೆ

8 20ಕ್ಕೆ ಇಟ್ಟರೆ ಅದು ದುಃಖದ ಮುಖದ ಥರಾ ಕಾಣುತ್ತೆ. ಅಷ್ಟೇ ಅಲ್ಲ ಸರಿಯಾಗಿ ನೋಡಿ ಅದು, V ಅಂದ್ರೆ Victory ಸಿಂಬಲ್ ಥರಾ ಕಾಣಲ್ವಾ..? ಅಂದಿದ್ದ

ದೂರದರ್ಶನದ ನಿರ್ದೇಶಕರೇನೂ ಯಾರಿಗೂ ಫೋನ್ ತಿರುಗಿಸಲಿಲ್ಲ. ನನಗೇ ಕೇಳಿದರು- ಒಂದು ತಿಂಗಳಿಗೆ ಎಷ್ಟು ವಾರ?ನಾನೋ ಇದೇನಪ್ಪ ಪ್ರಶ್ನೆಗೆ ಪ್ರಶ್ನೆನೇ ಉತ್ತರ ಅಂದುಕೊಂಡು ನನಗೆ ಗೊತ್ತಿರೋ ಗಣಿತ ತಿರುವಾಕಿ 4 ಅಂದೆ. ಹಾಗಾದ್ರೆ 13 ಅಂದ್ರೆ ಎಷ್ಟು ತಿಂಗಳಾಯಿತು ಎಂದರು. 4×3=12. ಮೂರು ತಿಂಗಳು ಅಂದೆ.

ಅದೇ ಕಾರಣ, ಸರ್ಕಾರಿ ವ್ಯವಹಾರದಲ್ಲಿ ಒಂದು ವರ್ಷ ಅಂದ್ರೆ 4 ಕ್ವಾರ್ಟರ್. ಒಂದು ಕ್ವಾರ್ಟ್ರ್ ಅಂದ್ರೆ 3 ತಿಂಗಳು. ನಾವು ಇಡೀ ಯೋಜನೇ ತಯಾರಿಸೋದೇ ಮೂರು ತಿಂಗಳ ನಾಲ್ಕು ಅವಧಿಗೆ. ಹಾಗಾಗಿ ಎಂತಹ ಕಥೆಯಾದರೂ, ಚರಿತ್ರೆ ಪುರಾಣವಾದರೂ ಮೂರು ತಿಂಗಳಿಗೆ ಮುಕ್ತಾಯ ಎಂದರು.

ಎರಡೂ ಗೋಷ್ಠಿಗಳಿಂದ ಆಚೆ ಎದ್ದು ಬಂದ ನಾನು ಈಗ ಟೈಟಾನ್ ವಾಚ್ ನಂತೆ, ದೂರದರ್ಶನ ಸೀರಿಯಲ್ ನಂತೆ ಆಗಿ ಹೋಗಿದ್ದೇನೆ. ಏನೇ ಇರಲಿ, ಎಂತಹ ಅಳುವ ಕಡಲನ್ನು ಈಜುತ್ತಿದ್ದರೂ, ನಗೆಯ ಹಾಯಿ ದೋಣಿ ಏರಿದವನಂತೆ ಇರಬೇಕು ಅನ್ನುವುದು ಮನದಟ್ಟಾಗಿ ಹೋಗಿದೆ.

ನಾನು ಸದಾ10 10 ರ ಮುಳ್ಳಿನಂತೆ . ಎಲ್ಲರಿಗೂ ನನ್ನ ಇರುವು ಗೊತ್ತಾಗುವಂತೆ, ಬಿದ್ದು ಹೋದ ಬದುಕಿದ್ದರೂ ನಗು ಮುಖ ಹೊತ್ತು

ಸದಾ ಎರಡು ಬೆರಳೆತ್ತಿ ವಿಕ್ಟರಿ ಸೈನ್ ತೋರಿಸಿತ್ತಾ ಬದುಕುತ್ತಿದ್ದೇನೆ.

ಅಷ್ಟೇ ಅಲ್ಲ, ನನ್ನ ನೋವು, ನಲಿವು, ಸುಖ ದುಃಖ ಹಾಡು ಪಾಡು ಎಲ್ಲವನ್ನೂ 13 ವಾರಕ್ಕೆ ಅಂದರೆ ಸರಿಯಾಗಿ ಮೂರು ತಿಂಗಳಿಗೆ

ಮುದುರಿ ಸುತ್ತಿಡುತ್ತೇನೆ. ನನ್ನ ಎಂತಹ ಗೋಳಿದ್ದರೂ, ಕಥೆ ಇದ್ದರೂ, ರಂಗಿನಾಟವಿದ್ದರೂ ಯಸ್, ಮೂರು ತಿಂಗಳು ಅಥವಾ 13 ಎಪಿಸೋಡ್ ಗಳು ಮಾತ್ರ.

ಆಮೇಲೆ ಹೊಸದೇ ಕಥೆ.. ಹೊಸದೇ ಹಾಡು.. ಹೊಸದೇ ಪಾಡು

key words : kannada-media-journalist-g.n.mohan-qurantine-read-bangalore-karnataka

The post ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು:  ಲೈಫ್ ಎಂಬ 13 ಎಪಿಸೋಡ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಎನ್. ಭೃಂಗೀಶ್ ನಿವೃತ್ತಿ.
ಬೆಂಗಳೂರು, ಏಪ್ರಿಲ್ 30, 2020 :(www.justkannada.in news ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಎನ್. ಭೃಂಗೀಶ್ ಅವರು ಇಂದು ವಯೋ ನಿವೃತ್ತಿ ಹೊಂದಿದರು.

ಸರ್ಕಾರಿ ಸೇವೆಗಿಂತ ಮುಂಚಿತವಾಗಿ ದಿನಪತ್ರಿಕೆಯೊಂದರ ವರದಿಗಾರರಾಗಿದ್ದ ಅವರು 1990 ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ತಮ್ಮ ಸರ್ಕಾರಿ ವೃತ್ತಿಯನ್ನು ತುಮಕೂರು ಜಿಲ್ಲೆಯ ಮಧುಗಿರಿ ಉಪ ವಿಭಾಗೀಯ ಕಚೇರಿಯಲ್ಲಿ ಆರಂಭಿಸಿದ್ದರು. ಪ್ರಸ್ತುತ ಅವರು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿದ್ದಾರೆ.

ತಮ್ಮ ಸುದೀರ್ಘ 30 ವರ್ಷಗಳ ಸೇವಾ ಅವಧಿಯಲ್ಲಿ 25ಕ್ಕೂ ಹೆಚ್ಚಿನ ವರ್ಷಗಳನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮಾಧ್ಯಮ ಮುಖ್ಯಸ್ಥರಾಗಿ ಕರ್ನಾಟಕ ಕಂಡ 10 ಮುಖ್ಯಮಂತ್ರಿಗಳ ಜೊತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಇಂದು ಬೀಳ್ಕೊಡೆಗೆಯ ಸರಳ ಸಮಾರಂಭ ಆಯೋಜಿಸಲಾಗಿತ್ತು.

key words : karnataka-kannada-media-brungesh-retired-bangalore

The post ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಎನ್. ಭೃಂಗೀಶ್ ನಿವೃತ್ತಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕರೋನಾ ಕಳೆಯುವ ತನಕ ರಾಜ್ಯದ ಎಲ್ಲ ಖಾಸಗಿ ನ್ಯೂಸ್ ಚಾನಲ್ ಬಂದ್ ಮಾಡಿ : ವೈರಲ್ ಆಯ್ತು ಸಿಎಂಗೆ ಬರೆದ ಪತ್ರ.
ಬೆಂಗಳೂರು, ಏ.20, 2020 : (www.justkannada.in news) : ಕರ್ನಾಟಕವೂ ಸೇರಿದಂತೆ ಇತರೆ ಕೆಲ ರಾಜ್ಯಗಳಲ್ಲಿನ ಮಾಧ್ಯಮ ಪ್ರತಿನಿಧಿಗಳಿಗೆ ಕರೋನಾ ಸೊಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾಗೂ ಕುಟುಂಬದ ಹಿತದ ಸಲುವಾಗಿ ಮಾಧ್ಯಮಗಳನ್ನು ಕೆಲಕಾಲ ಮುಚ್ಚುವಂತೆ ಕ್ರಮ ಜರುಗಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ವಿನಂತಿಸಲಾಗಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್ ಗಳ ಪತ್ರ ವೈರಲ್ ಆಗಿದೆ. ಪತ್ರಕರ್ತರ ಆರೋಗ್ಯದ ಕಾಳಜಿಗೆ ಸಂಬಂಧಿಸಿದಂತೆ ಮಾಡಿರುವ ಮನವಿಗೆ ಅಪೂರ್ವ ಬೆಂಬಲ ವ್ಯಕ್ತವಾಗಿರುವುದು ವಿಶೇಷ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರ ಹೀಗಿದೆ..

ಮಾನ್ಯ ಮುಖ್ಯಮಂತ್ರಿಗಳೇ,

ಆದರಪೂರ್ವಕ ನಮಸ್ಕಾರಗಳು.

ಕರೋನಾ‌ ಶುರುವಾದಾಗಿನಿಂದ ನೀವು ತೆಗೆದುಕೊಂಡ ಎಲ್ಲ ಕ್ರಮಗಳನ್ನು ಈ‌ ನಾಡಿನ ಪ್ರಜೆಗಳಾಗಿ ನಾವು ಅತ್ಯಂತ ಪ್ರಾಮಾಣಿಕವಾಗಿ ಬೆಂಬಲಿಸುತ್ತ ಬಂದಿದ್ದೇವೆ. ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಪಾಲಿಸುತ್ತ ಬಂದಿದ್ದೇವೆ.

ದಯಮಾಡಿ ಈ‌ ಒಂದು ವಿಷಯದ ಕುರಿತು ಗಮನಹರಿಸಿ. ಮುಂಬೈನಲ್ಲಿ ಮೀಡಿಯಾ ಸಂಸ್ಥೆಯೊಂದರ 57 ಮಂದಿಗೆ ಕೋವಿಡ್ -19 ಸೋಂಕು ಹೊಂದಿರುವುದು ಪತ್ತೆಯಾಗಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಇವರ ಪೈಕಿ ವರದಿಗಾರರು, ಕ್ಯಾಮೆರಾಮನ್ ಗಳಿಂದ ಹಿಡಿದು ಮೀಡಿಯಾ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಸಿಬ್ಬಂದಿಯೂ ಸಹ ಸೇರಿದ್ದಾರೆ. ಇದು ನಮ್ಮ ರಾಜ್ಯಕ್ಕೂ ಎಚ್ಚರಿಕೆಯ ಕರೆಘಂಟೆ.

ತಮಗೆ ತಿಳಿದ ಹಾಗೆ ಮೀಡಿಯಾ ಸಿಬ್ಬಂದಿ ತಾವೂ ಸೇರಿದಂತೆ, ತಮ್ಮ ಮಂತ್ರಿಮಂಡಲದ ಸದಸ್ಯರು, ಅಧಿಕಾರಿಗಳ ಬೈಟ್ ಪಡೆಯುತ್ತಿರುತ್ತಾರೆ. ನಾವು ಗಮನಿಸಿದಂತೆ ಅವರು ಸುರಕ್ಷಿತ ದೈಹಿಕ ಅಂತರವನ್ನು ಕಾಪಾಡುತ್ತಿಲ್ಲ. ಇದಲ್ಲದೆ ಅವರು ರಸ್ತೆಗಳಲ್ಲಿ ಜನಸಾಮಾನ್ಯರನ್ನು ಸಹ ಸಂದರ್ಶಿಸುತ್ತಿರುತ್ತಾರೆ. ಒಂದು ವೇಳೆ ಒಬ್ಬನೇ ಒಬ್ಬ ಪತ್ರಕರ್ತನಿಗೆ ಸೋಂಕು ತಗುಲಿದರೂ ಅದು ಎಲ್ಲ ಮೀಡಿಯಾ ಸಂಸ್ಥೆಗಳಿಗೆ ಹಬ್ಬುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ ಅವರ ಸಂಪರ್ಕಕ್ಕೆ ಬರುವ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು, ಜನಸಾಮಾನ್ಯರಿಗೂ ಸೋಂಕು ಹರಡುವ ಅಪಾಯವಿರುತ್ತದೆ. ಇದು ಅತ್ಯಂತ ಅಪಾಯಕಾರಿ.

ತಾವು ಗಮನಿಸಿದಂತೆ ಹೈಕೋರ್ಟ್, ಸುಪ್ರೀಂಕೋರ್ಟ್ ಗಳೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿವೆ. ಸ್ವತಃ ಪ್ರಧಾನಿ ಮೋದಿಯವರೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸುತ್ತಿದ್ದಾರೆ. ಈ ವಿಷಮ ಕಾಲದಲ್ಲಿ ಇದೆಲ್ಲವೂ ಅನಿವಾರ್ಯವಾಗಿದೆ.

ಇದೆಲ್ಲವನ್ನು ಗಮನಿಸಿ, ಈ ಕೂಡಲೇ ಎಲ್ಲ ಖಾಸಗಿ ವಾಹಿನಿಗಳನ್ನು ಈಗಿಂದೀಗಲೇ ಬಂದ್ ಮಾಡಿಸಬೇಕಾಗಿ ತಮ್ಮಲ್ಲಿ ವಿನಂತಿ‌ ಮಾಡುತ್ತೇವೆ. ಸರ್ಕಾರದ ಎಲ್ಲ ಸೂಚನೆಗಳು, ಮಾರ್ಗದರ್ಶನವನ್ನು ದೂರದರ್ಶನ ಚಂದನ ವಾಹಿನಿಯ ಮೂಲಕ ಸಾಮಾನ್ಯ ಜನರನ್ನು ತಲುಪಿಸಬಹುದಾಗಿದೆ. ಕರೋನಾ ಕಂಟಕ‌ ಮುಗಿದ ನಂತರ ಖಾಸಗಿ ಚಾನಲ್ ಗಳ ಪುನರಾರಂಭಕ್ಕೆ ಅವಕಾಶ ನೀಡಬಹುದಾಗಿದೆ. ತಾವು ದಯಮಾಡಿ, ಈ ಕೋರಿಕೆಯನ್ನು ಮಾನ್ಯ ಮಾಡಿ ತಕ್ಷಣವೇ ಕ್ರಮ ಕೈಗೊಂಡು ಜನರ ಜೀವರಕ್ಷಣೆ ಮಾಡಬೇಕಾಗಿ ಕೋರುತ್ತೇವೆ.

key words : journalist-kannada-media-corona-declare-holiday-cm-letter

The post ಕರೋನಾ ಕಳೆಯುವ ತನಕ ರಾಜ್ಯದ ಎಲ್ಲ ಖಾಸಗಿ ನ್ಯೂಸ್ ಚಾನಲ್  ಬಂದ್ ಮಾಡಿ : ವೈರಲ್ ಆಯ್ತು ಸಿಎಂಗೆ ಬರೆದ ಪತ್ರ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.