k.r.nagara Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವ ಉದ್ಘಾಟನೆ
ಮೈಸೂರು, ಡಿ. ೦೧,೨೦೨೪ :  ನಮ್ಮ ನಾಡು ನುಡಿ, ಜನರ ಆಚಾರ ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಉತ್ಸವಗಳನ್ನು ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

2016 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಗಳು ಆಗಿದ್ದರು. ಅವರಿಗೆ ಕೆ ಆರ್ ನಗರ ಕ್ಷೇತ್ರದ ಮೇಲೆ ಹೆಚ್ಚು ಪ್ರೀತಿ. ಇಲ್ಲಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ಖಾಸಗಿ ಅವರಿಗೆ ವಹಿಸಿ ಉತ್ತಮವಾಗಿ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಜನರ ನಡೆ ನುಡಿ ಆಚಾರ ವಿಚಾರ ಆಚರಣೆಗಳನ್ನು ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳನ್ನು ಆಚರಣೆ ಮಾಡಲಾಗುತ್ತದೆ.

ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ ವೆಂಕಟೇಶ್ ಅವರು ಮಾತನಾಡಿ ಈ ವರ್ಷ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಡ್ಯಾಂ ಗಳು ತುಂಬಿವೆ. ಜನರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ನಾವು ಗಗನಚುಕ್ಕಿ ಭರಚುಕ್ಕಿ ಜಲಪಾತೋತ್ಸವ ಮಾಡಿದೆವು. ಇಂದು ಚುಂಚನಕಟ್ಟೆ ಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಂತಹ ಉತ್ಸವಗಳ ಮೂಲಕ ಜನರಿಗೆ ಉತ್ತಮ ಮನರಂಜನೆ ನೀಡಲಾಗುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಿ. ಶಾಸಕರಾದ ಡಿ ರವಿಶಂಕರ್ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್ ಮಾತನಾಡಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಸಂದರ್ಭದಿಂದ ತಾಲ್ಲೂಕಿನ ಅಭಿವೃದ್ಧಿಗೆ  ಶ್ರಮಿಸಲಾಗುತ್ತಿದೆ. ಈ ಭಾಗದ ರೈತರ ಜೀವನಾಡಿ ಆದ ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ನೊಂದಣಿ ಮಾಡಿಸಿ ಮುಂದಿನ ಜನವರಿಯಿಂದ ಪ್ರಾರಂಭವಾಗಿ ಮುನ್ನಡೆಯುತ್ತದೆ. ಕಪ್ಪಡಿಯ ಸೇತುವೆಯನ್ನು 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಸಾಲಿಗ್ರಾಮ ಹೊಸ ತಾಲ್ಲೂಕು ಆಗಿದೆ ಆದರೆ ಅಲ್ಲಿ ಮಿನಿ ವಿಧಾನ ಸೌಧ ಇಲ್ಲ ಹಾಗೂ ತಾಲ್ಲೂಕು ಕಚೇರಿಗಳು ಇಲ್ಲ. ಮಾನ್ಯ ಕಂದಾಯ ಸಚಿವರು ಮುಂದಿನ ಬಜೆಟ್ ನಲ್ಲಿ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅದೇ ರೀತಿ ತಾಲ್ಲೂಕು ಮಟ್ಟದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಈ ಒಂದು ಜಲಪಾತೋತ್ಸವ ಎರಡು ದಿನಗಳ ಕಾಲ ಇದ್ದು ಸಾರ್ವಜನಿಕರು ಭಾಗವಹಿಸಿ ಯಶಾಸ್ವಿಗೊಳಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

key words: Mysore, k.r.nagara, Dhanush Koti, jalapathosthsava, inaugurated by, dr.h.c.mahadevappa

The post ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವ ಉದ್ಘಾಟನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

#CRIMENEWS ಕೊರೊನಾ ಭೀತಿ ನಡುವೆಯೇ ಮೈಸೂರಲ್ಲಿ ಹೆಚ್ಚುತ್ತಿದೆ ಟೆಂಪಲ್ ಥೆಫ್ಟ್..!
ಮೈಸೂರು, ಜು26, 2020 : (www.justkannada.in news ) ಜಿಲ್ಲೆಯ ಕೆ. ಆರ್‌‌. ನಗರ ತಾಲ್ಲೂಕಿನ ಮತ್ತೊಂದು ದೇಗುಲದಲ್ಲಿ ಕಳ್ಳತನ. ಕೆಲವೇ ದಿನಗಳ ಅಂತರದಲ್ಲಿ ತಾಲ್ಲೂಕಿನ ಮೂರು ಪ್ರಮುಖ ದೇಗುಲಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಕಳ್ಳರು.

ಇದೀಗ ಇತಿಹಾಸ ಪ್ರಸಿದ್ದ ಮೀನಾಕ್ಷಮ್ಮ ಸಮೇತನಾಗಿರುವ ಅರ್ಕೆಶ್ವರಸ್ವಾಮಿ ದೇಗುಲ ಕಳ್ಳರ ಕಣ್ಣಿಗೆ.ಅರ್ಕೇಶ್ವರ ಸ್ವಾಮಿಯ ದೇವಾಲಯದ ಲಿಂಗದ ಮೇಲಿರುವ ನೀರು ಬೀಳುವ ತಾಮ್ರದ 1 ಧಾರಾ ಪಾತ್ರೆ, ಮಿನಾಕ್ಷಮ್ಮ ದೇವರ 1.5 ಅಡಿ ಎತ್ತರದ ತ್ರಿಶೂಲ ಹಾಗೂ ಸಣ್ಣ ಪುಟ್ಟ ತಾಮ್ರ ಮತ್ತು ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಕಳ್ಳರು.

ಕೆ. ಆರ್. ‌ನಗರ ಪಟ್ಟಣದ ಸಮೀಪದ ಕಾವೇರಿ ನದಿ ತೀರದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲೀಗ ನವೀಕರಣ ಕಾಮಗಾರಿ ಕೆಲಸ ಪ್ರಗತಿಯಲ್ಲಿತ್ತು. ದೇವಾಲಯದ ಸುತ್ತಮುತ್ತ ಕಾಂಪೌಂಡ್ ಹಾಗೂ ಭದ್ರತೆ ಇಲ್ಲದಿರುವುದರ ಜೊತೆಗೆ, ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಭೀತಿಯಿಂದಾಗಿ ದೇವಾಲಯದ ಜೀರ್ಣೋದ್ದಾರದಲ್ಲಿ ತೊಡಗಿರುವ ಕಾರ್ಮಿಕರು ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು.

ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಡಿ.ವೈ.ಎಸ್.ಪಿ ಸುಮಿತ್ ಹಾಗೂ ವೃತ್ತ ನಿರೀಕ್ಷಕ ಪಿ. ಕೆ. ರಾಜು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ.

ದೇವಾಲಯದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ.ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಪರಿಶೀಲನೆ ನಡೆಸಿ, ಕಳ್ಳರ ಶೋಧ ಕಾರ್ಯಕ್ಕೆ ಮುಂದಾಗಿರುವ ಪೊಲೀಸರು.

ಇದು ಮೂರನೇ ದೇಗುಲ :

ಇತ್ತೀಚೆಗೆ ಕೆ. ಆರ್‌‌. ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಕಾವೇರಿ ನದಿ ತೀರದಲ್ಲಿರುವ ಪುರಾಣಪ್ರಸಿದ್ದ ಶ್ರೀರಾಮ ದೇಗುಲದಲ್ಲಿ ಕಳ್ಳತನವಾಗಿತ್ತು. ಅದಾದ ಬಳಿಕ ಭೇರ್ಯ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಕರಿಯಮ್ಮ ದೇಗುಲದಲ್ಲಿ ಕಳ್ಳತನವಾಗಿತ್ತು. ಇದೀಗ ಕಾವೇರಿ ನದಿ ತೀರದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಅರ್ಕೇಶ್ವರ ಸ್ವಾಮಿ ದೇಗುಲದಲ್ಲಿ ತಮ್ಮ ಕೈಚಳಕ ತೋರಿರುವ ಕಳ್ಳರು.

oooo

key words : mysore-k.r.nagara-theft-temple-police-covid

The post #CRIMENEWS  ಕೊರೊನಾ ಭೀತಿ ನಡುವೆಯೇ ಮೈಸೂರಲ್ಲಿ ಹೆಚ್ಚುತ್ತಿದೆ ಟೆಂಪಲ್ ಥೆಫ್ಟ್..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.