insurance | Just Kannada - Daily News Updates

ರೈತರ ವಿಮೆ ಹಣ ಕಟ್ಟದ, ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ
ಬೆಂಗಳೂರು, ಸೆಪ್ಟಂಬರ್, 08,2026 (www.justkannada.in): ಬೆಳಗಾವಿಯ ಜೇವರ್ಗಿ ತಾಲ್ಲೂಕಿನ ಇಟ್ಟನಹಳ್ಳಿ ಗ್ರಾಮದ ರೈತರು ಬೆಳೆ ವಿಮೆಗೆ ಪಾವತಿಸಿದ್ದ ಹಣವನ್ನು ಡಿಸಿಸಿ ಬ್ಯಾಂಕಿಗೆ ಪಾವತಿ ಮಾಡದ ಕಾರಣ 93 ರೈತರ ವಿಮೆ ತಿರಸ್ಕಾರಗೊಂಡಿದ್ದು, ಈ ವಿಚಾರದಲ್ಲಿ ನಿರ್ಲಕ್ಷ ತೋರಿರುವ ಸ್ವಸಹಾಯ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದರು.

ಮಂಗಳವಾರ ಬೆಳ್ಳಂಬೆಳಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ಅವರು ಅಲ್ಲಿ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತೆಂಗು ಬೆಳೆಗಾರರು, ವರ್ತಕರು ಹಾಗೂ ಮಂಡಿ ಮಾಲೀಕರ ಜೊತೆ ಮಾತುಕತೆ ನಡೆಸಿ, ಅವರ ಸಮಸ್ಯೆ ಆಲಿಸಿದರು.

ಬೆಳಗಾವಿ ಜಿಲ್ಲೆಯ ಜೇವರ್ಗಿ ತಾಲ್ಲೋಕಿನ ಇಟ್ಟನಹಳ್ಳಿ ಗ್ರಾಮದ ರೈತ ಸಿಎಂ ಅವರನ್ನು ಭೇಟಿ ಮಾಡಿ ನಾವು ಬೆಳೆ ವಿಮೆಗೆ ಸ್ವಸಹಾಯ ಸೊಸೈಟಿಗೆ ಹಣ ಕಟ್ಟಿದ್ದು, ಅವರು ಡಿಸಿಸಿ ಬ್ಯಾಂಕಿಗೆ ಹಣ ಪಾವತಿ ಮಾಡದ ಕಾರಣ ನಮ್ಮ ವಿಮೆ ತಿರಸ್ಕೃತಗೊಂಡಿದೆ ಎಂದು ನಮಗೆ ಮೆಸೇಜ್ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ರೈತರು ಹಣ ಪಾವತಿ ಮಾಡಿರುವ ಪಟ್ಟಿ ಪರಿಶೀಲಿಸಿದ ಸಿಎಂ, ಕೂಡಲೇ ನಿರ್ಲಕ್ಷ ತೋರಿರುವ ಅಧಿಕಾರಿಯನ್ನು ವಜಾಗೊಳಿಸುವಂತೆ ಸೂಚನೆ ನೀಡಿದರು.

ಖುದ್ದಾಗಿ ತೂಕ ಪರಿಶೀಲನೆ:

ನೀವು ಈರುಳ್ಳಿ ತರಬೇಕಾದರೆ ಪೊಲೀಸರು ತಡೆದು ಹಣ ಪಡೆಯುತ್ತಾರಾ? ರೈತರಿಗೆ ಸರಿಯಾದ ಸಮಯಕ್ಕೆ ಹಣ ನೀಡುತ್ತಾರೆಯೇ? ರೈತರಿಂದ ಮಾರುಕಟ್ಟೆಯವರು ಕಮಿಷನ್ ಏನಾದರೂ ಪಡೆಯುತ್ತಾರಾ? ಪ್ರತಿ ಎಕರೆಗೆ ಎಷ್ಟು ಖರ್ಚು ಆಗುತ್ತದೆ? ನಿಮ್ಮ ಬೆಳೆಯ ತೂಕ ಸರಿಯಾಗಿ ಮಾಡುತ್ತಿದ್ದಾರಾ? ಎಂದು ರೈತರನ್ನು ವಿಚಾರಿಸಿ, ಮಾಹಿತಿ ಪಡೆದರು. ತಾವೇ ಖುದ್ದಾಗಿ ಈರುಳ್ಳಿ ತೂಕವನ್ನು ಪರಿಶೀಲನೆ ನಡೆಸಿದರು.

ಕಲಬುರ್ಗಿ, ಬೀದರ್, ವಿಜಯಪುರ ಮಾರುಕಟ್ಟೆಯಲ್ಲಿ 8ರಿಂದ 10ರೂ. ಕಮಿಷನ್ ಪಡೆಯುತ್ತಾರೆ. ಯಶವಂತಪುರ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಪಡೆಯುವುದಿಲ್ಲ. ಹೀಗಾಗಿ ನಾವು ಇಲ್ಲಿಗೆ ತಂದು ಹಾಕುತ್ತೇವೆ ಎಂದು ರೈತರು ಮಾಹಿತಿ ನೀಡಿದರು.

ಈ  ಬಾರಿ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಎಕರೆಗೆ 150-200 ಪ್ಯಾಕೆಟ್ ಈರುಳ್ಳಿ ಬರುತ್ತದೆ. ಆದರೆ ಈ ಬಾರಿ ಕೇವಲ 50 ಪ್ಯಾಕೆಟ್ ಮಾತ್ರ ಸಿಕ್ಕಿದೆ ಎಂದು ವಿವರಿಸಿದರು. ಮಳೆ ಹೆಚ್ಚಾದರೆ ಈರುಳ್ಳಿ ಜಮೀನಿನಲ್ಲೇ ಕೊಳೆಯುತ್ತದೆ ಆಗ ಸರಿಯಾದ ಬೆಲೆ ಸಿಗುವುದಿಲ್ಲ. ಅದನ್ನು ಮಾರುಕಟ್ಟೆಗೆ ತಂದು ಹಾಕಲು ಆಗುವ ಖರ್ಚಿನಷ್ಟು ಹಣ ಸಿಗುವುದಿಲ್ಲ ಎಂದು ರೈತರು ವಿವರಿಸಿದರು.

ಬೆಳೆ ವಿಮೆ ಸಿಕ್ಕಿಲ್ಲ ಎಂದು ಅಳಲು

ಬೆಳೆಗೆ ವಿಮೆ ಮಾಡಿಸುವುದಿಲ್ಲವೇ ಎಂದು ಸಿಎಂ ಡಿಕೆ ಶಿವಕುಮಾರ್ ಕೇಳಿದಾಗ, ನಾವು ಹೆಕ್ಟೆರ್ ಗೆ 6,500 ರೂ. ವಿಮೆ ಕಟ್ಟಿದ್ದರೂ ನಮಗೆ ಏನೂ ಸಿಕ್ಕಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೈತ ತಮ್ಮ ನೋವು ತೋಡಿಕೊಂಡರು. ರೈತರ ಮಾಹಿತಿ ಪಡೆಯುವಂತೆ ಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಎಂ ಕಾರ್ಯವೈಖರಿ ಶ್ಲಾಘಿಸಿದ ರೈತರು

ಕಳೆದ 30 ವರ್ಷಗಳಲ್ಲಿ ಯಾವುದೇ ಸಚಿವರು ಮುಖ್ಯಮಂತ್ರಿಗಳು ಮಾರುಕಟ್ಟೆಗೆ ಬಂದು ರೈತರ ಸಮಸ್ಯೆಗಳನ್ನು ವಿಚಾರಿಸಿರಲಿಲ್ಲ. ನೀವು ಬಂದು ಪರಿಸ್ಥಿತಿ ಪರಿಶೀಲನೆ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ರೈತರು ಸಿಎಂ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಹೆಚ್ಚು ಹಣ ಪಡೆದರೆ ಹೇಳಿ ಮಟ್ಟ ಹಾಕುವೆ:

ಮಾರುಕಟ್ಟೆಯಲ್ಲಿನ ಮಂಡಿ ವರ್ತಕರೊಂದಿಗೆ ಮಾತುಕತೆ ನಡೆಸಿದ ಸಿಎಂ, “ನೀವು ಎಪಿಎಂಸಿಗೆ ಎಷ್ಟು ಪಾವತಿ ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ವರ್ತಕರು ನೂರು ರೂ.ಗೆ 60 ಪೈಸೆ ಪಾವತಿ ಮಾಡುತ್ತೇವೆ ಎಂದರು. ಬೇರೆ ವರ್ತಕ 1 ರೂ. ಪಾವತಿ ಮಾಡುತ್ತಿರುವುದಾಗಿ ತಿಳಿಸಿದರು. ಆ ರೀತಿ ಏನಾದರೂ ಹೆಚ್ಚು ಹಣ ಪಡೆದರೆ ನನಗೆ ಹೇಳಿ ಅವರನ್ನು ನಾನು ಮಟ್ಟ ಹಾಕುತ್ತೇನೆ” ಎಂದು ಹೇಳಿದರು.

ರೈತರಿಂದ ನೇರ ಖರೀದಿ ವೇಳೆ ತೂಕ ಮೋಸ ಆಗದಂತೆ ಕ್ರಮ:

ಕೆಲವರು ಎಪಿಎಂಸಿ ಮಾರುಕಟ್ಟೆಗೆ ಬರುವುದಿಲ್ಲ ನೇರವಾಗಿ ರೈತರಿಂದ ಖರೀದಿ ಮಾಡುತ್ತಾರೆ. ಅಲ್ಲಿ ಒಂದು ಬೆಲೆ ನಿಗದಿ ಮಾಡಿ ತೂಕ ಹೆಚ್ಚು ಕಮ್ಮಿ ಮಾಡಿ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು. ಆಗ ಸಿಎಂ, ಈ ರೀತಿ ರೈತರಿಂದ ನೇರವಾಗಿ ಖರೀದಿ ಮಾಡುವವರು ತೂಕದಲ್ಲಿ ಹೆಚ್ಚು ಕಮ್ಮಿ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೂಡ್ಲಿಗಿಯ ರೈತನ ಮನೆಗೆ ವಿದ್ಯುತ್ ಸಂಪರ್ಕದ ಭರವಸೆ

ಕೂಡ್ಲಿಗಿಯ ಹೊಸಹಟ್ಟಿ ಗ್ರಾಮದ ಆಂಜನಪ್ಪ ಎಂಬ ಈರುಳ್ಳಿ ಬೆಳೆದ ರೈತನ ಜೊತೆ ಮಾತನಾಡುತ್ತಿರುವಾಗ, ಬೆಳೆಗೆ ನೀರಿನ ವ್ಯವಸ್ಥೆ ಹೇಗೆ ಎಂದು ಕೇಳಿದರು. ಅದಕ್ಕೆ ರೈತ, ನಾನು ತೋಟದಲ್ಲಿ ಮನೆ ಕಟ್ಟಿಕೊಂಡಿದ್ದು ಅದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಹಾಕಿದರೂ ಸಂಪರ್ಕ ಸಿಕ್ಕಿಲ್ಲ. ಕೇವಲ ನನಗೆ ಮಾತ್ರವಲ್ಲ ಇದೇ ರೀತಿ ಹತ್ತಾರು ಮನೆಗಳಿವೆ ಎಂದು ಸಮಸ್ಯೆ ಹೇಳಿಕೊಂಡರು. ರೈತನ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ, “ನಾನು ಪ್ರಜಾಸೇವೆ ಕಾರ್ಯಕ್ರಮ ಮಾಡಿದಾಗ, ಬಂದು ನನಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂದು ಅರ್ಜಿ ನೀಡಬಾರದೇ ಎಂದರು. ಯೋಚನೆ ಮಾಡುವುದು ಬೇಡ. ಎಲ್ಲರಿಗೂ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

“ನಿಮ್ಮ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ, 10 ಕೆಜಿ ಅಕ್ಕಿ ಸಿಗುತ್ತಿದೆಯೇ? ಎಂದು ವಿಚಾರಿಸಿದರು. ಆಗ ಗ್ಯಾರಂಟಿ ಯೋಜನೆಗಳು ನಮಗೆ ಸಿಗುತ್ತಿದ್ದು, ಅದರಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Key words: CM DK Shivakumar, visit, Yashavanthpur, APMC Market, farmers, insurance

ದಸರಾ ಜಂಬೂಸವಾರಿ ಎಲ್ಲಾ ಆನೆಗಳು, ಕಾವಾಡಿ, ಮಾವುತರಿಗೆ ವಿಮೆ- ಡಿಸಿಎಫ್ ಪ್ರಭುಗೌಡ
ಮೈಸೂರು,ಆಗಸ್ಟ್,8,2025 (www.justkannada.in): ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಎಲ್ಲಾ 14 ಆನೆಗಳಿಗೂ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, ಗಜಪಡೆಯ ಗಂಡಾನೆಗಳಿಗೆ ತಲಾ 5 ಲಕ್ಷ ರೂ., ಹೆಣ್ಣು ಆನೆಗಳಿಗೆ 2.5 ಲಕ್ಷ ರೂ., ಕಾವಾಡಿ ಮತ್ತು ಮಾವುತರಿಗೆ ತಲಾ 2 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ವಿಮೆ ಅವಧಿ ಗಜಪಯಣ ಆದಾಗಿನಿಂದ ಹಿಡಿದು ಗಜಪಡೆ ವಾಪಸ್ ಕ್ಯಾಂಪ್ ಗೆ ಹೋಗುವವರೆಗೂ ವಿಮೆ ಮಾಡಿಸಲಾಗಿದೆ. ಆನೆಗಳಿಂದ ಸಾರ್ವಜನಿಕರಿಗೆ ಯಾವುದೇ ಅನಾಹುತ ಆದರೂ ಅಥವಾ ಸಾರ್ವಜನಿಕರಿಂದ ಆನೆಗಳಿಗೆ ಏನಾದರೂ ಆದರೂ ವಿಮೆ ಅನ್ವಯವಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಆನೆಗಳಿಗೂ ಇನ್ಸೂರೆನ್ಸ್ ಮಾಡಿಸಲಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಅರಣ್ಯ ಭವನದಲ್ಲಿ ಎಲ್ಲಾ ಆನೆಗಳು ಆರೋಗ್ಯವಾಗಿವೆ. ನಾಡಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಎಂದಿನಂತೆ ಹುಲ್ಲು, ಭತ್ತ ಹಸಿ ಮೇವು,ಆಲದ ಸೊಪ್ಪು ಆಹಾರವಾಗಿ ಕೊಡುತ್ತಿದ್ದೇವೆ ಅರಮನೆಗೆ ಹೋದ ಮೇಲೆ ವಿಶೇಷವಾದ ಆಹಾರ ಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದರು.

ಈ ಬಾರಿ ಜಂಬೂಸವಾರಿಯಲ್ಲಿ ಮೂರು ಹೊಸ ಆನೆಗಳು ಪಾಲ್ಗೊಳ್ಳಲಿವೆ. ಎರಡನೇ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ತಂಡ ಸೇರಿಕೊಳ್ಳಲಿರುವ ಐದು ಆನೆಗಳಲ್ಲಿ ಶ್ರೀಕಂಠ, ರೂಪ ಮತ್ತು ಹೇಮಾವತಿ ಹೊಸ ಆನೆಗಳು ಇರಲಿವೆ.  ಹೇಮಾವತಿ ವೆರಿ ಎಂಗೆಸ್ಟ್ ಫೀ ಮೇಲ್ ಎಲಿಫೆಂಟ್. 10 ನೇ ತಾರೀಖು ಸಂಜೆ ಅರಮನೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಣ್ಯ ಭವನದಿಂದ ಅರಮನೆಗೆ ಬೀಳ್ಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

ವರಮಹಾಲಕ್ಷ್ಮಿ ಹಬ್ಬ: ದಸರಾ ಗಜಪಡೆ ನೋಡಲು ಬಂದ ಸಾರ್ವಜನಿಕರು

ದಸರಾ ಜಂಬೂಸವಾರಿಗೆಂದು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಆನೆಗಳನ್ನ ನೋಡಲು ವರ ಮಹಾಲಕ್ಷ್ಮಿ ಹಬ್ಬದಂದೂ  ಆನೆಗಳ ನೋಡಲಿಕ್ಕೆ ನಗರದ ಅರಣ್ಯ ಭವನದ ಬಳಿ ಸಾರ್ವಜನಿಕರು ಆಗಮಿಸಿದ್ದರು.  ನಗರದ ಅರಣ್ಯ ಭವನದ ಆವರಣದಲ್ಲಿ ಗಜಪಡೆ ಬೀಡು ಬಿಟ್ಟಿದ್ದು, ವರಮಹಾಲಕ್ಷ್ಮಿ ಹಬ್ಬದಂದೂ  ಆನೆಗಳ ನೋಡಲು ಸಾರ್ವಜನಿಕರು ಲಗ್ಗೆ ಇಟ್ಟಿದ್ದಾರೆ. ಅಶೋಕ್‌ ಪುರಂ, ಕುವೆಂಪುನಗರ, ಕೆ.ಜಿ ಕೊಪ್ಪಲ್ ಸೇರಿದಂತೆ ಸುತ್ತಮುತ್ತಲ ಬಡಾವಣೆ ಜನರು ಬಂದು ಆನೆಗಳನ್ನ ವೀಕ್ಷಣೆ ಮಾಡುತ್ತಿದ್ದಾರೆ.

ಸಾರ್ವಜನಿಕರನ್ನ ಆನೆಗಳ ಸನಿಹಕ್ಕೆ ಬಿಡದೆ ದೂರಲ್ಲೇ ನಿಂತು ನೋಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದಾರೆ.

Key words: Mysore dasara,  elephants, Insurance, DCF, Prabhugowda

ಆ.10ಕ್ಕೆ ಗಜಪಡೆ ಅರಮನೆ ಪ್ರವೇಶ: ಆನೆಗಳು, ಮಾವುತರಿಗೆ ಇನ್ಸೂರೆನ್ಸ್
ಮೈಸೂರು,ಆಗಸ್ಟ್,6,2025 (www.justkannada.in): ವಿಶ್ವವಿಖ್ಯಾತ  ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ಮೈಸೂರಿನ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಸ್ಟ್ 10 ರಂದು ಅರಮನೆಗೆ ಪ್ರವೇಶಿಸಲಿದೆ.

ಈಗಾಗಲೇ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ  ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ರಿಲ್ಯಾಕ್ಸ್ ಮೂಡಿನಲ್ಲಿವೆ. ಆ.7 ರಂದು ಗಜಪಡೆಯ  ಅರಮನೆ ಪ್ರವೇಶಕ್ಕೆ ದಿನಾಂಕ ನಿಗದಿಯಾಗಿದ್ದು ಆದರೆ ಅದನ್ನು ಮುಂದೂಡಿಕೆ ಮಾಡಲಾಗಿದೆ.  ಆಗಸ್ಟ್ 10ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

ಆಗಸ್ಟ್ 10 ಭಾನುವಾರ ಸಂಜೆ 6.45 ರಿಂದ 7.20 ವೇಳೆಗೆ ಆನೆಗಳು ಅರಮನೆ ಪ್ರವೇಶಿಸಲಿವೆ.  ಪ್ರತಿ ಬಾರಿ ಬೆಳಗ್ಗೆ ಹೊತ್ತು ಪ್ರವೇಶ ಮಾಡುತ್ತಿದ್ದ ಗಜಪಡೆ ಈ ಬಾರಿ ಸಂಜೆಯಲ್ಲಿ ಅರಮನೆ ಆವರಣಕ್ಕೆ ಎಂಟ್ರಿ ಕೊಡಲಿವೆ.

ಭಾನುವಾರ ಅರಮನೆ ವಿದ್ಯುತ್ ದೀಪಾಲಂಕಾರದ ಸಂದರ್ಭದಲ್ಲಿ ಒಳ ಪ್ರವೇಶಿಸಲಿದ್ದು ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗಳ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಜಿಲ್ಲಾಡಳಿತ  ಅನುಕೂಲ ಮಾಡಿಕೊಟ್ಟಿದೆ.

ಗಜಪಡೆಗೆ 2.04 ಕೋಟಿ ಇನ್ಸೂರೆನ್ಸ್

ಮೈಸೂರು ದಸರಾ ಗಜಪಡೆ ಆನೆಗಳಿಗೆ 2.04 ಕೋಟಿ ಇನ್ಸೂರೆನ್ಸ್  ಮಾಡಿಸಲಾಗಿದೆ . 14 ಆನೆ, 14 ಮಾವುತರು, 14 ಕಾವಾಡಿಗರಿಗೆ ಜಿಲ್ಲಾಡಳಿತದಿಂದ ದಿ ನ್ಯೂ ಇಂಡಿಯನ್ ಅಶ್ಯೂರೆನ್ಸ್ ಕಂಪನಿ ವತಿಯಿಂದ ವಿಮೆ ಮಾಡಿಸಲಾಗಿದೆ. ಈಗಾಗಲೇ ವಿಮಾ ಕಂಪನಿಗೆ 67 ಸಾವಿರ ಪ್ರೀಮಿಯಂ ಪಾವತಿ ಮಾಡಲಾಗಿದೆ.

ದಸರಾ ಸಂದರ್ಭದಲ್ಲಿ ಸಾರ್ವಜನಿಕರಿಗೆ, ಆಸ್ತಿ ಪಾಸ್ತಿಗೆ ತೊಂದರೆಯಾದರೆ ಸಾರ್ವಜನಿಕರು ಸೇರಿ, ಆಸ್ತಿ ಪಾಸ್ತಿಗೂ ವಿಮೆ ಮಾಡಿಸಲಾಗಿದೆ. ಅಭಿಮನ್ಯು ಸೇರಿ ಗಂಡಾನೆಗಳಿಗೆ ಒಟ್ಟಾರೆ 50 ಲಕ್ಷ ರೂಪಾಯಿ, ಹೆಣ್ಣಾನೆಗಳಿಗೆ 18 ಲಕ್ಷ ವಿಮೆ ಮಾಡಿಸಲಾಗಿದೆ.

Key words: Mysore dasara, Gajapade, Palace, Insurance

ಮೈಸೂರು ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ. ವಿಮೆ
ಮೈಸೂರು,ಆಗಸ್ಟ್,21,2024 (www.justkannada.in) ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಈ ಮಧ್ಯೆ ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ. ವಿಮೆ ಮಾಡಿಸಲಾಗಿದೆ.

ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿ ಲಿಮಿಟೆಡ್  ನಿಂದ ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ.  ವಿಮೆ ಸೌಲಭ್ಯ ಒದಗಿಸಲಾಗಿದೆ.  ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಮಾವುತರು, ಕಾವಾಡಿಗಳಿಗೆ ತಲಾ‌ 2 ಲಕ್ಷ‌ ರೂ ವಿಮೆ  ಸೌಲಭ್ಯ ಕಲ್ಪಿಸಲಾಗಿದೆ. ನಾಲ್ಕು ಮೀಸಲು ಆನೆಗಳನ್ನು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಸೌಲಭ್ಯ ಸಿಗಲಿದೆ.

ವಲಯ ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ಸಹಾಯಕರು, ಸಿಬ್ಬಂದಿಗಳಿಗೂ ವಿಮೆ ಸೌಲಭ್ಯ  ಮಾಡಿಸಲಾಗಿದ್ದು,  ಸಾರ್ವಜನಿಕ ಆಸ್ತಿ- ಪಾಸ್ತಿಗೆ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಗಜಪಡೆಗೆ ನಾಡಿಗೆ ಬಂದ ಸಂದರ್ಭದಲ್ಲಿ ತಾಲೀಮು ಅಥವಾ ಇನ್ನಿತರ ಸಂದರ್ಭದಲ್ಲಿ ಗಜಪಡೆಯಿಂದ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಗೆ ತೊಂದರೆಯಾದರೆ 50 ಲಕ್ಷದವರೆಗೆ ವಿಮೆ ಸೌಲಭ್ಯ ಜಾರಿಯಲ್ಲಿರಲಿದೆ.

ಈ ವಿಮೆಯು 15-8-2024 ರಿಂದ 18-10-2024 ರವರಗೆ ಜಾರಿಯಲ್ಲಿರಲಿದ್ದು 75 ಸಾವಿರ ರೂಗಳ ವಿಮೆ ಮೊತ್ತವನ್ನ ಅರಣ್ಯ ಇಲಾಖೆ ಪಾವತಿಸಿದೆ. ವಿಮಾ ಕಂಪನಿಗೆ ಪ್ರೀಮಿಯಂ ಹಣ ಪಾವತಿ ಮಾಡಲಾಗಿದೆ.

Key words: 2.50 crore, Mysore Dasara, Gajapade,  Insurance

ದ್ರಾಕ್ಷಿ, ಮಾವು ಬೆಳೆ ವಿಮೆಗೆ ನೊಂದಾಯಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್
ಬೆಂಗಳೂರು ಗ್ರಾಮಾಂತರ, ಜುಲೈ, 5, 2024 (www.justkannada.in): ತೋಟಗಾರಿಕಾ ಇಲಾಖೆ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)ಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸ ಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧೀನ ತಾಲ್ಲೂಕುಗಳಾದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಡಾ.ಎನ್  ಶಿವಶಂಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಇತ್ಯಾದಿ ಮಾಹಿತಿಗಳನ್ನು ಸರ್ಕಾರದಿಂದ ಅಧಿಸೂಚಿತ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರ ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕಿನ ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000, ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-2,80,000ರೂ, ರೈತರು ಪಾವತಿಸಬೇಕಾದ ದರ (ಶೇ.5%ಗಳಲ್ಲಿ)-14,000 ಮಾವು ಮತ್ತು ದ್ರಾಕ್ಷಿ ಬೆಳೆಯುವ ರೈತ ಬಾಂಧವರು ಈ ಯೋಜನೆಯಡಿ ನೋಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.

ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ / ಕಂದಾಯ ರಶೀದಿ / ಖಾತೆ ಪುಸ್ತಕ / ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು / ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸುವುದು. ವಿಮೆ ಮಾಡಿಸುವ ರೈತರು ಫ್ರೂಟ್ಸ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು,  ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.

ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕಿನವರು ವಿಮೆ ವ್ಯಾಪ್ತಿಗೆ ನೋಂದಾಯಿಸಲಿದ್ದು, ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸದ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ KSHEMA(ಕ್ಷೇಮ) ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ. ವಿಮೆ ನೋಂದಣಿಗೆ ಕೊನೆಯ ದಿನಾಂಕ ಜುಲೈ 31 ಆಗಿದೆ.

ಹೆಚ್ಚಿನ ಮಾಹಿತಿಗೆ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9480461234, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880210892, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 8217210320, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880461607, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಹತ್ತಿರದ ಬ್ಯಾಂಕ್ ಶಾಖೆ ಹಾಗೂ ವಿಮಾ ಕಂಪನಿಯ ದೂ.ಸಂ-8884141262 ಸಹಾಯವಾಣಿ ಸಂಖ್ಯೆ- 080 26564537 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎನ್  ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Register, crop, insurance, DC, Dr. N Sivashankar

ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಠೇವಣಿದಾರರಿಗೆ 5 ಲಕ್ಷ ರೂ. ವರೆಗಿನ ಠೇವಣಿ ವಿಮೆ ಮೊತ್ತ ಸಂದಾಯ.
ನವದೆಹಲಿ, ನವೆಂಬರ್ 29,2021(www.justkannada.in):  ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಠೇವಣಿದಾರರಿಗೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, 5 ಲಕ್ಷ ರೂ, ವರೆಗಿನ ಠೇವಣಿ ವಿಮೆ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳ ನೆರವಿಗೆ ತ್ವರಿತವಾಗಿ ಸ್ಪಂದಿಸಿದ್ದು ಶ್ಲಾಘನೀಯ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ತಿಳಿಸಿದರು.

ಸೋಮವಾರ ಒಂದೇ ದಿನದಲ್ಲಿ, 12,014 ಠೇವಣಿದಾರರಿಗೆ, ಠೇವಣಿ ಖಾತರಿ & ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ -2021 ರ ಅನ್ವಯ 401 ಕೋಟಿ ರೂ, ಗಳಷ್ಟು ಮೊತ್ತ ಠೇವಣಿದಾರರ ಖಾತೆಗಳಿಗೆ ಠೇವಣಿ ವಿಮಾ ಮೊತ್ತ ಸಂದಾಯವಾಗಿದೆ. ಉಳಿದ ಠೇವಣಿದಾರರಿಗೆ ಈ ವಾರದಲ್ಲಿ ಮೊತ್ತ ಸಂದಾಯವಾಗಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವೀಸೂರ್ಯ, ” ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನ  ಠೇವಣಿದಾರರ ಸಂಕಷ್ಟ ಆರಂಭದಿಂದಲೇ ತುರ್ತಾಗಿ ಸ್ಪಂದಿಸಿದ  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಕೇಂದ್ರದ ಹಣಕಾಸು ಸಚಿವರು, ಬಡ,ಮಧ್ಯಮ ವರ್ಗದ ಠೇವಣಿದಾರರ ಹಿತಾಸಕ್ತಿ ಗೆ ಪೂರಕವಾದ ಕ್ರಮಗಳನ್ನು  ತೆಗೆದುಕೊಂಡು, ಕೋ ಆಪರೇಟಿವ್ ಬ್ಯಾಂಕ್ ಗಳನ್ನು ಇನ್ನಷ್ಟು ಪಾರದರ್ಶಕತೆ ಹಾಗೂ ವೃತ್ತಿಪರತೆ ತರುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ  ಶ್ರಮಿಸಿದ್ದು ಗಮನಾರ್ಹ ಎಂದು ಶ್ಲಾಘಿಸಿದರು.

2020 ರಲ್ಲಿ ಠೇವಣಿದಾರರ ವಿಮೆ ಮೊತ್ತವನ್ನು 1 ಲಕ್ಷ ರೂ, ಗಳಿಂದ 5 ಲಕ್ಷಕ್ಕೆ ಏರಿಸಿ, ಅದೇ ವರ್ಷದಲ್ಲಿ (ಸೆಪ್ಟೆಂಬರ್ 17,2020) 1949 ರ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ ಗೆ ತಿದ್ದುಪಡಿ ತಂದು, ಎಲ್ಲ ಕೋ ಆಪರೇಟಿವ್ ಬ್ಯಾಂಕ್ ಗಳನ್ನು ರಿಸರ್ವ್ ಬ್ಯಾಂಕ್ ನ ನಿಬಂಧನೆಗಳು ಹಾಗೂ ನಿಯಮಾವಳಿಗಳ ಅಡಿಗೆ ತಂದಿದ್ದು ಕೇಂದ್ರ ಸರ್ಕಾರದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ನೆರವಿಗೆ ನಿಂತಿದ್ದು ಗಣನೀಯ ಸಾಧನೆ.

ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸರಕಾರವು, 1961ರ ಠೇವಣಿ ಖಾತರಿ ಮತ್ತು ಸಾಲ ಖಾತರಿ ನಿಗಮ ಮಸೂದೆಗೆ ತಿದ್ದುಪಡಿ ತಂದು, ಬ್ಯಾಂಕ್ ಗಳು ದಿವಾಳಿ ಹೊಂದಿದ 90 ದಿನಗಳ ಒಳಗಾಗಿ, ಠೇವಣಿದಾರರಿಗೆ 5 ಲಕ್ಷ ರೂ, ಗಳ ಠೇವಣಿ ವಿಮಾ ಮೊತ್ತ ಸಂದಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಶೇ 98.3 ರಷ್ಟು ಠೇವಣಿದಾರರಿಗೆ ಅನುಕೂಲವಾಗಲಿದ್ದು, ಶೇ 50.9 ರಷ್ಟು ಠೇವಣಿ ಮೊತ್ತಕ್ಕೆ ಸುರಕ್ಷತೆ ದೊರಕಲಿದೆ ” ಎಂದು ಸಂಸದ ತೇಜಸ್ವೀ ಸೂರ್ಯ ಇದೇ ಸಂದರ್ಭದಲ್ಲಿ ವಿವರಿಸಿದರು.

ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನಲ್ಲಿನ ಹಲವು ಅಕ್ರಮಗಳನ್ನು  ಗಮನಿಸಿ ಆರ್ ಬಿಐ, ಜನವರಿ 10 2020 ರಂದು ನಿಬಂಧನಗಳಿಗೆ ಒಳಪಡಿಸಿ ನಿರ್ಬಂಧಗಳನ್ನು ಹೇರಿತ್ತು. ಈ ಬ್ಯಾಂಕ್ ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390 ರಷ್ಟು  ಜನರು ರೂ,5 ಲಕ್ಷ ವರೆಗೆ ಠೇವಣಿ ಮಾಡಿದ್ದಾರೆ.

ಬ್ಯಾಂಕ್ ನ ಒಟ್ಟು ಠೇವಣಿ 2403.21 ಕೋಟಿ ರೂ, ಗಳಷ್ಟು ಇದ್ದರೆ, ನೀಡಿರುವ ಸಾಲದ ಮೊತ್ತವು 1438,00 ಕೋಟಿ ರೂ, ಗಳಷ್ಟಿದೆ.ನಿವ್ವಳ ಕಾರ್ಯನಿರ್ವಹಿಸದ ಸ್ವತ್ತು (NPA) ಗಳ ಮೊತ್ತವು, 31ನೇ ಮಾರ್ಚ್ 2020 ರವರೆಗೆ 1438.00 ಕೋಟಿ ರೂ, ಗಳಷ್ಟು ಇದ್ದು, ಕೇವಲ 27 ಸಾಲಗಾರರಿಂದ 927 ಕೋಟಿ ರೂ, ಗಳಷ್ಟು ಮೊತ್ತ ಹಂಚಿಕೆಯಿಂದ ಬ್ಯಾಂಕ್ ಗೆ ಶೇ.70 ರಷ್ಟು ಕಾರ್ಯನಿರ್ವಹಿಸದ ಸ್ವತ್ತು ಆಗಿ ಪರಿವರ್ತನೆಯಾಗಿದ್ದು ದುರಂತ.

ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ದಿವಾಳಿಯಾಗಿರುವ ಕೋ ಆಪರೇಟಿವ್ ಬ್ಯಾಂಕ್ ಗಳಿಂದ ತ್ವರಿತಗತಿಯಲ್ಲಿ ಠೇವಣಿದಾರರು, ಠೇವಣಿ ವಿಮೆಯನ್ನು ಪಡೆದಿದ್ದು ಗಮನಾರ್ಹ. ದೇಶದ ಇಂತಹ 16 ಬ್ಯಾಂಕ್ ಗಳ ದೊಡ್ಡ ಹಂತದ ಠೇವಣಿ ವಿಮೆಯ ಮರುಪಾವತಿ ಕಾರ್ಯ ಸೋಮವಾರ ಆರಂಭವಾಗಿದ್ದು, ಉಳಿದ ಠೇವಣಿದಾರರ ವಿಮೆ ಮೊತ್ತವನ್ನು ಶೀಘ್ರದಲ್ಲಿಯೇ ಪಾವತಿ ಮಾಡಲಾಗುತ್ತಿದೆ. 2ನೇ ಹಂತದ ದಾಖಲಾತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10 ಆಗಿದ್ದು, ಮರುಪಾವತಿಯನ್ನು ಡಿಸೆಂಬರ್ 31,2021 ರಂದು ಮಾಡಲಾಗುವುದು” ಎಂದು ಸಂಸದ ತೇಜಸ್ವಿಸೂರ್ಯ ತಿಳಿಸಿದರು.

Key words: 5 lakh – depositors – Sri Guru Raghavendra -Co-operative –Bank-deposit -insurance –amount-MP-Tejaswi surya

ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೆ ವಿಮಾ ನಿಗಮ ನೌಕರರ ಸಂಘ ಸ್ವಾಗತ
ಮೈಸೂರು,ನವೆಂಬರ್,20,2021(www.justkannada.in): ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಖಿಲ ಭಾರತ ವಿಮಾ ನೌಕರರ ಸಂಘಕ್ಕೆ ಸಂಯೋಜಿತವಾಗಿರುವ ವಿಮಾ ನಿಗಮ ನೌಕರರ ಸಂಘ, ಮೈಸೂರು ವಿಭಾಗ ಸ್ವಾಗತಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿಮಾ ನಿಗಮ ನೌಕರರ ಸಂಘ, ಮೈಸೂರು ವಿಭಾಗ ಅಧ್ಯಕ್ಷ ಎಸ್. ಕೆ. ರಾಮು, ಪ್ರಧಾನ ಕಾರ್ಯದರ್ಶಿ ಎಸ್. ಎಸ್. ನಾಗೇಶ್, ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಯನ್ನು ಮಾಡಿರುವುದನ್ನು ಸ್ವಾಗತಿಸುತ್ತೇವೆ. ನವೆಂಬರ್ 29 ರಂದು ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಈ ಕಾನೂನುಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ಈ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.ಈ ಕಾನೂನುಗಳು ಅವರಿಗೆ ಕೃಷಿಯ ಕಾರ್ಪೊರೇಟೀಕರಣದ ಹೆಜ್ಜೆಯಾಗಿ ಕಂಡವು. ಅಂತಹ ಕ್ರಮವು ದೊಡ್ಡ ಸಂಸ್ಥೆಗಳ ಶೋಷಣೆಗೆ ರೈತರನ್ನು ಇರಿಸುತ್ತದೆ ಮತ್ತು ರೈತರು  ಜೀವನೋಪಾಯದಿಂದಲೂ ವಂಚಿತರಾಗುತ್ತಾರೆ ಎಂಬ ನಿಜವಾದ ಭಯವಿತ್ತು. ಅಲ್ಲದೇ ಈ ಕಾನೂನುಗಳನ್ನು ರೈತ ಸಮುದಾಯದೊಂದಿಗೆ ಸಮಾಲೋಚನೆ ಇಲ್ಲದೆ ಮತ್ತು ಯಾವುದೇ ಚರ್ಚೆ ಇಲ್ಲದೆ ಸಂಸತ್ತಿನ ಮೂಲಕ ತಳ್ಳಲಾಯಿತು  ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಕಳೆದ ಒಂದು ವರ್ಷದಿಂದ ಈ ಕಾನೂನುಗಳ ವಿರುದ್ಧ ದೇಶವು ದೊಡ್ಡ ಪ್ರಮಾಣದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಬಹು ದೊಡ್ಡ ವರ್ಗದ ಜನರನ್ನು ಒಳಗೊಂಡ ಇಂತಹ ಸುದೀರ್ಘ ಪ್ರತಿಭಟನೆಯು  ಪ್ರಜಾಪ್ರಭುತ್ವದ ಆಡಳಿತದಲ್ಲಿ ಜನರ ಒಳಗೊಳ್ಳುವಿಕೆಯ ಕುರಿತು ಪ್ರಶ್ನೆಗಳನ್ನು ಎತ್ತಿತು.

ಕಳೆದ ಒಂದು ವರ್ಷದಲ್ಲಿ ನೂರಾರು ಜೀವಗಳು ಅಗಲಿವೆ ಮತ್ತು ಆರ್ಥಿಕತೆಯ ಮೇಲೆಯೂ ಕೆಟ್ಟ ಪರಿಣಾಮ ಬೀರಿತು. ಸರ್ಕಾರ ಸ್ವಲ್ಪ ನಮ್ಯತೆ ತೋರಿಸಿದ್ದರೆ, ಈ ಅಮೂಲ್ಯ ಜೀವಗಳ ನಷ್ಟವನ್ನು ತಪ್ಪಿಸುವ ಮೂಲಕ ಸಮಸ್ಯೆಯನ್ನು ಬಹಳ ಹಿಂದೆಯೇ ಪರಿಹರಿಸಬಹುದಿತ್ತು.ರೈತರ ಹೋರಾಟ ಕೇವಲ ಮೂರು ಕೃಷಿ ಕಾನೂನುಗಳ ಬಗ್ಗೆ ಮಾತ್ರ ಅಲ್ಲ. ರೈತರು ಮತ್ತು ರಾಷ್ಟ್ರೀಯ ಆರ್ಥಿಕತೆಯ ಜೀವನ ಮತ್ತು ಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸಮಸ್ಯೆಗಳನ್ನು ಸಹ ಈ ಪ್ರತಿಭಟನೆಗಳು ಎತ್ತಿವೆ. ಕೃಷಿಯಲ್ಲಿ ಆದಾಯ ಹೆಚ್ಚಿಸಲು ಸರಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿಯೂ ಈ ಪ್ರತಿಭಟನೆಗಳು ನಡೆಯುತ್ತಿವೆ. ಈ ದೇಶದಲ್ಲಿ 50% ಕ್ಕಿಂತ ಹೆಚ್ಚು ಉದ್ಯೋಗಿಗಳು ಕೃಷಿ ಮೇಲೆ ಜೀವನೋಪಾಯಕ್ಕಾಗಿ  ಅವಲಂಬಿತರಾಗಿದ್ದಾರೆ.

ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳು ಮತ್ತು ಅವರ ಜೀವನಮಟ್ಟವನ್ನು ವೃದ್ಧಿಸುವ ಅವರ ನೈಜ ವಿಷಯಗಳ ಬಗ್ಗೆ ಗಮನ ನೀಡದಿದ್ದರೆ ದೇಶವು ಪ್ರಗತಿ ಹೊಂದಲು ಸಾಧಿಸಲು ಸಾಧ್ಯವಿಲ್ಲ. ಸರ್ಕಾರವು ರೈತರ ಹೋರಾಟದ ಎಲ್ಲ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡು ಹಿಡಿಯಲು ಚರ್ಚೆಗಳನ್ನು ನಡೆಸಿ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಎಲ್ಲಾ ರೈತರನ್ನು ಅವರ ಆಂದೋಲನದ ಯಶಸ್ಸಿಗಾಗಿ ನಾವು ಅಭಿನಂದಿಸುತ್ತೇವೆ. ದೇಶಾದ್ಯಂತ ಆಂದೋಲನವನ್ನು ಶಾಂತಿಯುತವಾಗಿ ಹಮ್ಮಿಕೊಂಡ ಮತ್ತು ರೈತರು, ಕಾರ್ಮಿಕರು ಮತ್ತು ಪ್ರಗತಿಪರ ಜನ ವಿಭಾಗಗಳ ವಿಶಾಲ ಏಕತೆಯನ್ನು ನಿರ್ಮಿಸಲು ಪ್ರಯತ್ನಗಳನ್ನು ನಡೆಸಿದ  ಚಳುವಳಿಯ ನಾಯಕತ್ವ ಪ್ರಶಂಸೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ.

Key words: Insurance- Corporation- Union-welcomes -Center’s- decision – repeal – Agricultural Amendment Act.

ಇನ್ಶೂರೆನ್ಸ್ ಕಂಪನಿಗಳಿಂದ ಕ್ಲೇಮ್ ಮಾಡದೆ ಹಾಗೇ ಉಳಿದಿರುವ ಮೊತ್ತ ರೂ.49,000 ಕೋಟಿ.
ನವದೆಹಲಿ, ಜುಲೈ 29, 2021 (www.justkannada.in): ಸುಮಾರು ರೂ.೪೯,೦೦೦ ಕೋಟಿ ಕ್ಲೇಮ್ ಆಗದಿರುವಂತಹ ಹಣ ಬ್ಯಾಂಕುಗಳು ಹಾಗೂ ಇನ್ಶೂರೆನ್ಸ್ ಕಂಪನಿಗಳ ಬಳಿ ಹಾಗೇ ಉಳಿದುಕೊಂಡಿದೆ ಎಂಬ ವಿಷಯವನ್ನು ಸ್ವತಃ ಹಣಕಾಸು ಇಲಾಖೆಯ ರಾಜ್ಯ ಸಚಿವರಾದ ಭಗವತ್ ಕರಾಡ್ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಈ ಕ್ಲೇಮ್ ಮಾಡದಿರುವಂತಹ ಮೊತ್ತದ ವಿವರ ಡಿಸೆಂಬರ್ 31, 2020ರವರೆಗೆ ಅಷ್ಟೆ.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ವಿವರಗಳನ್ನು ನೀಡಿದ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಂದ ಬಂದಿರುವ ಮಾಹಿತಿಯ ಪ್ರಕಾರ ಬ್ಯಾಂಕುಗಳಲ್ಲಿ ಕ್ಲೇಮ್ ಮಾಡದೆ ಉಳಿದಿರುವ ಠೇವಣಿಗಳ ಒಟ್ಟು ಮೊತ್ತ, ಡಿಸೆಂಬರ್ ೩೧, ೨೦೨೦ ರಂತೆ ರೂ.೨೪,೩೫೬ ಕೋಟಿಗಳಂತೆ.

ಇನ್ಶೂರೆನ್ಸ್ ರೆಗ್ಯೂಲೇಟರಿ ಡೆವೆಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರಡಿಎಐ) ಪ್ರಕಾರ ಸಾರ್ವಜನಿಕ ಹಾಗೂ ಖಾಸಗಿ ವಿಮಾ ಕಂಪನಿಗಳಲ್ಲಿ ಪಾಲಿಸಿದಾರರು ಕ್ಲೇಮ್ ಮಾಡದೇ ಉಳಿದುಕೊಂಡಿರುವ ಮೊತ್ತ ರೂ.೨೪,೫೮೬ ಕೋಟಿಗಳಂತೆ (ಇದೂ ಸಹ ಡಿಸೆಂಬರ್ ೨೦೨೦ರ ಅಂತ್ಯಕ್ಕೆ). ಆರ್‌ಬಿಐ, ಡೆಪಾಸಿಟರ್ ಎಜುಕೇಷನ್ ಅಂಡ್ ಅವೇರ್‌ನೆಸ್ ಫಂಡ್ (DEAF) ಯೋಜನೆಯನ್ನು, ೨೦೧೪ನ್ನು ರೂಪಿಸಿದೆ.

ಈ ಯೋಜನೆಯ ಪ್ರಕಾರ, ಬ್ಯಾಂಕುಗಳಲ್ಲಿ ಕ್ಲೇಮ್ ಆಗದೆ ಉಳಿದಿರುವ ಹಣವನ್ನು ಬ್ಯಾಂಕುಗಳಿಂದ ಈ DEAF ಗೆ ವರ್ಗಾಯಿಸಲಾಗುತ್ತದೆ, ಈ ಮೊತ್ತವನ್ನು ಠೇವಣಿದಾರರಿಗೆ ನೀಡುವ ಬಡ್ಡಿಗೆ ಬಳಸಲಾಗುತ್ತದೆ.

ಮತ್ತೊಂದೆಡೆ, ೧೦ ವರ್ಷಗಳಿಗಿಂತ ಹೆಚ್ಚಿನ ಸಮಯದವರೆಗೆ ಪಾಲಿಸಿದಾರರು ಕ್ಲೇಮ್ ಮಾಡದೆ ಇರುವಂತಹ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಗಳು ಪ್ರತಿ ವರ್ಷ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (SCWF) ವರ್ಗಾಯಸುತ್ತವೆ. SCWF ಅನ್ನು ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತದಂತೆ.

ಬ್ಯಾಂಕುಗಳಲ್ಲಿ ಠೇವಣಿ ಹಣವನ್ನು ಕ್ಲೇಮ್ ಮಾಡದೇ ಇರುವಂತಹವರು ಹಾಗೂ ಕಾರ್ಯನಿರ್ವಹಣೆ ಇಲ್ಲದಿರುವಂತಹ ಖಾತೆಗಳ ಖಾತೆದಾರರನ್ನು ಪತ್ತೆ ಹಚ್ಚುವಲ್ಲಿ ಬ್ಯಾಂಕುಗಳ ಮತ್ತಷ್ಟು ಉತ್ತಮ ಪ್ರಯತ್ನ ನಡೆಸಬೇಕು ಎಂದು ಆರ್‌ಬಿಐ ಬ್ಯಾಂಕುಗಳಿಗೆ ಸಲಹೆ ನೀಡಿದೆಯಂತೆ.

Key words: 49,000 crores -remaining -uninsured – insurance -companies.

ಪತ್ರಿಕೆ ಹಂಚುವ ಯುವಕರಿಗೆ ಕರೋನಾ ಕವಚ ವಿಮೆಯ ಒಂದು ಲಕ್ಷ ರೂ.ಗಳ ಬಾಂಡ್ ವಿತರಣೆ…
ಮೈಸೂರು,ಮೇ,22,2021(www.justkannada.in): ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು ಅವರ ಹುಟ್ಟು ಹಬ್ಬದ ಅಂಗವಾಗಿ ಅಸಂಘಟಿತ ವಲಯದಲ್ಲಿ ಕಾಯಕ ಮಾಡುವ ಮನೆ ಮನೆಗಳಿಗೆ  ಪತ್ರಿಕೆ ಹಂಚುವ ಯುವಕರಿಗೆ ಕರೋನಾ ಕವಚದ ಒಂದು ಲಕ್ಷರೂ ಗಳ ಬಾಂಡ್ ವಿತರಣೆ ಮಾಡಲಾಯಿತು.

ಈ ಬಗ್ಗೆ ಮಾತನಾಡಿದ ಜೋಗಿಮಂಜು,  ಶ್ರಮಿಕವರ್ಗ, ಅಸಂಘಟಿತ ವಲಯ, ಸ್ವಾಭಿಮಾನಿ ಕಾಯಕವಾದ ಹಾಗೂ ಕೋವಿಡ್ 2.0 ನಾ ಸಂಧರ್ಭದಲ್ಲಿ  ಕರೋನ ವಾರಿಯರ್ಸ್‌ ಗಳನ್ನು ಗುರುತಿಸಿ ಸುಮಾರು 20 ಜನರಿಗೆ ಉಚಿತವಾಗಿ ಕರೋನಾ ಕವಚದ ಒಂದು ಲಕ್ಷ. ರೂಗಳ ಬಾಂಡ್ ವಿತರಣೆ ಮಾಡುವ ಮೂಲಕ ಅಚರಿಸುತ್ತಿರುವುದು ಆತ್ಮ ತೃಪ್ತಿ ಇದೆ ಎಂದು ತಿಳಿಸಿದರು.

ಪತ್ರಿಕೆ ಹಂಚುವ ಯುವಕರುಗಳು ದಿನನಿತ್ಯ ಬೆಳ್ಳಗೆ ಮನೆ ಮನೆಗಳಿಗೆ ತೆರಳಿ ವಿಶ್ವದ ಎಲ್ಲ ಸುದ್ದಿಗಳನ್ನು ನಾಗರೀಕರಿಗೆ ಮುಟ್ಟಿಸುತ್ತಾರೆ. ಇವರುಗಳಿಗೆ ಕೋವಿಡ್ ರೋಗ ತಗಲಿದ ಸಂಧರ್ಭದಲ್ಲಿ ಅವರುಗಳಿಗೆ ಯಾವುದೇ ವಿಮೆ ಭದ್ರತೆ, ಪ್ರಾವಿಡೆಂಟ್ ಫಂಡ್, ರಾಜ್ಯ ಕಾರ್ಮಿಕರ ವಿಮೆ ಯಾವುದು ಇಲ್ಲ, ಈಗ ಕೊಡುತ್ತಿರುವ #ಕೋವಿಡ್ ಕವಚ ವಿಮೆಯು ಸುಮಾರು 5 ಲಕ್ಷದವರೆಗೂ ಸವಲತ್ತುಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು.

ಈ ಸಂಧರ್ಭದಲ್ಲಿ ಯುವ ಮೋರ್ಚಾ ಉಪಾಧ್ಯಕ್ಷ ನಿಶಾಂತ್, ಹಿಂದುಳಿದ ವರ್ಗಗಳ ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ್, ಆಟೋ ಮಾಲೀಕರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಸತ್ಯ, ಪ್ರಶಾಂತ್, ಗಿರೀಶ್, ರಾಜೇಶ್, ಇದ್ದರು.

Key words: mysore- news paper-distributers- young people – Insurance-Bond -bjp

ವಿಮಾ ರಂಗದಲ್ಲಿ ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಳ ಪ್ರಸ್ತಾಪಕ್ಕೆ ಖಂಡನೆ….
ಮೈಸೂರು,ಫೆಬ್ರವರಿ,1,2021(www.justkannada.in): ಕೇಂದ್ರ ಸರ್ಕಾರವು ತನ್ನ 2021ರ ಬಜೆಟ್ ಪ್ರಸ್ತಾವನೆಯಲ್ಲಿ ವಿಮಾ ರಂಗದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಈಗಿರುವ ಶೇ.49 ರಿಂದ ಶೇ.74ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿರುವುದನ್ನು ಮೈಸೂರು ವಿಭಾಗದ ವಿಮಾ ನೌಕರರು ಮತ್ತು ಅಧಿಕಾರಿಗಳ ಜಂಟಿ ವೇದಿಕೆ ಉಗ್ರವಾಗಿ ಖಂಡಿಸಿದೆ.

ಹಾಗೆಯೇ, ಈ ಬಜೆಟ್ ನಲ್ಲಿ ಎಲ್. ಐ. ಸಿ. ಕಾಯಿದೆ 1938ಕ್ಕೆ ತಿದ್ದುಪಡಿ ತರುವ ಮೂಲಕ ಎಲ್. ಐ. ಸಿ. ಯ ಷೇರು ಮಾರಾಟವನ್ನು ಮಾಡಲು ಸರ್ಕಾರ ಮಾಡಿರುವ ಪ್ರಸ್ತಾಪವನ್ನು ಸಹ ತೀವ್ರವಾಗಿ ಖಂಡಿಸುತ್ತಿದೆ. ಭಾರತ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಅತ್ಯದ್ಭುತ ಕೊಡುಗೆ ನೀಡುತ್ತಿರುವ ಎಲ್. ಐ. ಸಿ. ಯನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಬೇಕು, ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಳದ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಜಂಟಿ ವೇದಿಕೆ ಆಗ್ರಹಿಸಿದೆ. ಮೈಸೂರು ವಿಭಾಗದ ಎಲ್ಲಾ ಎಲ್. ಐ. ಸಿ. ಕಛೇರಿಗಳ ಎದುರು ಇಂದು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಒಂದು ಮಿಂಚಿನ ಬೃಹತ್ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಎಲ್. ಐ. ಸಿ.,ಮೈಸೂರು ವಿಭಾಗೀಯ ಕಚೇರಿ ಬಳಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎಸ್. ಎಸ್. ನಾಗೇಶ್, ಎಸ್. ವೆಂಕಟರಾಮನ್ ಮತ್ತು ಜೆ. ಸುರೇಶ್ ಮಾತನಾಡಿದರು.

key words : Insurance-arena-Condemnation-foreign-direct- investment-limit-increase-proposal….