Inauguration of the first Women's Specialty Care Center in Mysore Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರಲ್ಲಿ ಮೊದಲ ಮಹಿಳಾ ವಿಶೇಷ ಕೋವಿಡ್ ಕೇರ್ ಕೇಂದ್ರ ಉದ್ಘಾಟನೆ
ಗೋಕುಲಂ ಎರಡನೇ ಹಂತದಲ್ಲಿರುವ ಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್ ‌ನಲ್ಲಿ ಮಹಿಳೆಯರಿಗೆ ವಿಶೇಷ ಕೋವಿಡ್ ಸೆಂಟರ್‌ಅನ್ನು ಮಂಗಳವಾರ ಸಂಜೆ ಉದ್ಘಾಟಿಸಲಾಯಿತು.

ಸ್ಥಳೀಯ ಶಾಸಕರಾದ ಎಲ್. ನಾಗೇಂದ್ರ, ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಮಾಜಿ ಶಾಸಕರಾದ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರ ಗಣ್ಯರು ಉದ್ಘಾಟಿಸಿದರು.

ಮೈಸೂರು ನಗರದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆರಂಭಿಸಿದ ಮೊದಲ ಕೋವಿಡ್ ಕೇರ್ ಸೆಂಟರ್ ಇದು.

ಇಲ್ಲಿ 64 ಹಾಸಿಗೆಗಳ ಸೌಲಭ್ಯವಿದೆ. ವಿವಿ ಪುರಂ ಹೆರಿಗೆ ಆಸ್ಪತ್ರೆಯು ಈ ಸಿಸಿಸಿಯ ಉಸ್ತುವಾರಿ ಮತ್ತು ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಆಶಾಕಿರಣ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಸಹ ಇಲ್ಲಿ ಸೇವೆ ಸಲ್ಲಿಸುವರು‌.

ಮೈಸೂರು ಇನ್ನೂ 3 ಸಿಸಿಸಿಗಳನ್ನು ಮಾಡಲಾಗುತ್ತಿದೆ. ಚಾಮರಾಜ ಕ್ಷೇತ್ರದ ಸರ್ಕಾರಿ ಪೃಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 50 ಹಾಸಿಗೆಗಳ ಸಿಸಿಸಿ, ಎನ್.ಆರ್. ಕ್ಷೇತ್ರದ ಫರೂಕಿಯ ಫಾರ್ಮಸಿ ಕಾಲೇಜಿನಲ್ಲಿ 200 ಹಾಸಿಗೆಗಳ ಸಿಸಿಸಿ ಮತ್ತು ಕೆ.ಆರ್.ಕ್ಷೇತ್ರದ ಆರ್.ಎಂ.ಸಿ. ಎದುರು ಇರುವ ಮೆಟ್ರಿಕ್ ನಂತರದ ಬಿಸಿಎಂ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ 300 ಹಾಸಿಗೆಗಳ ಸಿಸಿಸಿ ಮಾಡಲಾಗುತ್ತಿದೆ.

ಮೈಸೂರಿನ ಜನತೆಗಾಗಿ ಈ 3 ಸಿಸಿಸಿಗಳನ್ನು ಮಾಡಲಾಗಿದೆ. ಎಲ್ಲಾ ಸಿಸಿಸಿಗಳಲ್ಲು ಉಚಿತ ಸೇವೆ ದೊರೆಯಲಿದೆ.

ಜಿಲ್ಲಾ ಎಲ್ಲಾ ಸಿಸಿಸಿಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಬೇಕಾದ ಸೌಲಭ್ಯಗಳಿವೆ. ಆದರೆ ಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್ ‌ನಲ್ಲಿ ಮಹಿಳೆಯರಿಗಾಗಿ ವಿಶೇಷ ಕೋವಿಡ್ ಕೇರ್ ಆರಂಭಿಸಲಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈ ವರೆಗೆ 19 ಸಿಸಿಸಿಗಳನ್ನು ತೆರೆಯಲಾಗಿದೆ. ಈ ಎಲ್ಲಾ ಸಿಸಿಸಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಇದ್ದಾರೆ. 1700 ಜನ ಈ ಸಿಸಿಸಿಗಳಲ್ಲಿ ಇದ್ದಾರೆ.

ಮೈಸೂರು ನಗರದಲ್ಲಿ 8535 ಸಕ್ರಿಯ ಪ್ರಕರಣಗಳು, ಮತ್ತು ಗ್ರಾಮೀಣ ಪ್ರದೇಶದಲ್ಲಿ 6550 ಸಕ್ರಿಯ ಪ್ರಕರಣಗಳು ಇವೆ.

ಈಗ ಮೈಸೂರು ನಗರಕ್ಕೆ ವಿಶೇಷವಾಗಿ ‌3 ಸಿಸಿಸಿ ಮತ್ತು 1 ಮಹಿಳಾ ಸಿಸಿಸಿ ಆರಂಭಿಸಲಾಗಿದೆ.

ಇದರಿಂದ ವಿವಿಧ ಕಾರಣಕ್ಕಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸಾಧ್ಯವಾಗದವರಿಗೆ ತುಂಬಾ ಅನುಕೂಲವಾಗಲಿದೆ.

ಈ ಸಿಸಿಸಿಗಳಿಂದ ಪ್ರೋತ್ಸಾಹದಾಯಕ ಫಲಿತಾಂಶ ಬಂದಿದೆ. ವಿಶೇಷವಾಗಿ ಮಹಿಳೆಯರಿಗೆ ಅನುಕೂಲವಾಗಿದೆ. ಜುಲೈ 1ರಂದು ಕೋವಿಡ್ ಮುಕ್ತ ಮೈಸೂರು ಹೋರಾಟಕ್ಕೆ ಇದು ನಮಗೆ ಸಹಾಯವಾಗಲಿದೆ.

The post ಮೈಸೂರಲ್ಲಿ ಮೊದಲ ಮಹಿಳಾ ವಿಶೇಷ ಕೋವಿಡ್ ಕೇರ್ ಕೇಂದ್ರ ಉದ್ಘಾಟನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.