H Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಎಲ್ಲಾ ಪೆಟ್ರೋಲ್ ಬಂಕ್ ಗಳಿಗೂ ಮೋದಿ ಹೆಸರಿಡಿ: ಬಡವರಿಗೆ 50 ರೂ.ಗೆ ಪೆಟ್ರೋಲ್ ವಿತರಿಸಿ- ಹೆಚ್.ಸಿ ಮಹದೇವಪ್ಪ ಟಾಂಗ್.
ಮೈಸೂರು,ಆಗಸ್ಟ್,18,2021(www.justkannada.in): ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ಕಿಡಿಕಾರಿದ್ದಾರೆ.

ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿರುವ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಎಲ್ಲಾ ಪೆಟ್ರೋಲ್ ಬಂಕ್ ಗಳಿಗೂ ನರೇಂದ್ರ ಮೋದಿ ಹೆಸರಿಡಿ. ಬಡವರಿಗೆ 50ರೂಪಾಯಿಗೆ ಪೆಟ್ರೋಲ್ ವಿತರಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಬಡವರಿಗೆ 10 ರೂಪಾಯಿಗೆ ಊಟ 5 ರೂಪಾಯಿಗೆ ಉಪಹಾರ ನೀಡುವುದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ. ಇವರು ಅವರ ನಾಯಕ ಹಾಗೂ ಸದಾ  ಸುಳ್ಳನ್ನೇ ಆಡುವ ಮೋದಿ ಅವರ ಹೆಸರನ್ನೇ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಇಡಿ. ಬಡವರಿಗೆ 50 ರೂಪಾಯಿಗೆ ಪೆಟ್ರೋಲ್ ವಿತರಿಸಿ ಎಂದು ಟೀಕಿಸಿದ್ದಾರೆ.

ENGLISH SUMMARY….

Name all the petrol bunks in the name of Modi: Provide petrol @ Rs.50 per litre – H.C. Mahadevappa

Mysuru, August 18, 2021 (www.justkannada.in): Responding to the statement by a BJP leader on renaming the name of Indira canteen, former Minister H.C. Mahadevappa has tweeted to rename all the petrol bunks in the name of Modi and provide petrol at the rate of Rs. 50 per liter.

“The BJP leaders won’t like Congress government providing food at the rate of Rs. 10 for lunch and Rs. 5 for breakfast. Hence, I request them to rename all the petrol bunks in the name of their favorite leader Modi, who is a lier but provide petrol at the rate of Rs. 50 per liter,” he tweeted.

Keywords: Former Minister H.C. Mahadevappa/ petrol/ Rs. 50/ rename petrol bunks/ Modi

Key words: Modi -name -all petrol –bunkers-Former minister-H, C Mahadevappa

The post ಎಲ್ಲಾ ಪೆಟ್ರೋಲ್ ಬಂಕ್ ಗಳಿಗೂ ಮೋದಿ ಹೆಸರಿಡಿ: ಬಡವರಿಗೆ 50 ರೂ.ಗೆ ಪೆಟ್ರೋಲ್ ವಿತರಿಸಿ- ಹೆಚ್.ಸಿ ಮಹದೇವಪ್ಪ ಟಾಂಗ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪೋಲಿ ಪುಂಡರಿಂದ ಬೀದಿ ಬೀದಿಗಳಲ್ಲಿ ಹಣ ಸಂಗ್ರಹ: ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..?- ಹೆಚ್,ಡಿ ಕುಮಾರಸ್ವಾಮಿ ಕಿಡಿ…
ಬೆಂಗಳೂರು,ಫೆಬ್ರವರಿ,17,2021(www.justkannada.in): ಶ್ರೀರಾಮ , ಧರ್ಮದ ಹೆಸರಿನಲ್ಲಿ ನಾವು ರಾಜಕಾರಣ ಮಾಢಿಲ್ಲ.  ರಾಮಮಂದಿರ ವಿಚಾರವಾಗಿ ದುರ್ಬಳಕೆಯಾಗುತ್ತಿದೆ. .   ಕೆಲವರು ಹಣವನ್ನ ದುರ್ಬಳಕೆ ಮಾಡುತ್ತಿದ್ದಾರೆ. ಪೋಲಿ ಪುಂಡರಿಂದ ಬೀದಿ ಬೀದಿಗಳಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ವಿಚಾರ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶ್ರೀರಾಮ ,ಧರ್ಮದ ಹೆಸರಿನಲ್ಲಿ ನಾನು ಭ್ರಷ್ಟಾಚಾರ ಮಾಡಿಲ್ಲ.  ರಾಮಮಂದಿರ ವಿಚಾರವಾಗಿ ಕೆಲವರು ಹಣವನ್ನ ದುರ್ಬಳಕೆ ಮಾಡುತ್ತಿದ್ದಾರೆ. ದೇಣಿಗೆ ಸಂಗ್ರಹಕ್ಕೆ ಅನುಮತಿ ನೀಡಿದವರು ಯಾರು..? ಜನರನ್ನು ಪ್ರೇರೇಪಿಸಲು ನೀವು ಬ್ಯಾನರ್ ಗಳನ್ನ ಹಾಕಿ ಮನೆಗಳಿಗೆ ಪೋಸ್ಟರ್ ಅಂಟಿಸುತ್ತಿರುವುದೇಕೆ…?  ರಾಮನ ಹೆಸರನ್ನ ಬಳಸಿ ಅವಮಾನ ಮಾಡುತ್ತಿರುವವರು ನೀವು . ರಾಮನ ಹೆಸರನಿನಲ್ಲಿ ಹಿಂದಿನಿಂದಲೂ ರಾಜಕಾರಣ ಮಾಡಿದ್ದೀರಿ. ಪೋಲಿ ಪುಂಡರು ಬೀದಿ ಬೀದಿಗಳಲ್ಲಿ ಹಣ ಸಂಗ್ರಹಿಸುತ್ತಿದಗ್ದಾರೆ. ಸಂಗ್ರಹಿಸಿ ಹಣವನ್ನ ರಾಮಮಂದಿರ ನಿರ್ಮಾಣಕ್ಕೆ ಕೊಡುತ್ತಿದ್ದಾರಾ..? ಎಂದು ಪ್ರಶ್ನಿಸಿದರು.

ಏನಪ್ಪ ಎಂದು ಪ್ರಶ್ನಿಸಿದರೇ ದೇಶದ ಪ್ರತೀಕ ಎಂದು ನನಗೆ ಬೆದರಿಕೆ ಹಾಕುತ್ತಾರೆ…

ನಾವು ಚಿಲ್ಲರೆ ರಾಜಕಾರಣ ಮಾಢಿದವರಲ್ಲ. ನಾವು ಸ್ವಾಭಿಮಾನದಿಂದ ಬದುಕಿದ್ದೇವೆ. ನಿಮ್ಮ ರೀತಿ ಅಭಿಮಾನ ಶೂನ್ಯರಲ್ಲ. ಬೆಂಕಿ ಹಚ್ಚುವ ಗುಣ ನಿಮ್ಮದು. ಬೆಂಕಿ ಆರಿಸುವ ಸಂಸ್ಕೃತಿ ನಮ್ಮದು. ದಿನಕ್ಕೆ ಮೂರು  ತಂಡ ದೇಣಿಗೆ ಸಂಗ್ರಹಿಸಲು ನಮ್ಮ ಮನೆಗೆ ಬರ್ತಾರೆ. ಆ ವೇಳೆ ಏನಪ್ಪ ಎಂದು ಪ್ರಶ್ನಿಸಿದರೇ ದೇಶದ ಪ್ರತೀಕ ಎಂದು ನನಗೆ ಬೆದರಿಕೆ ಹಾಕುತ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.

ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..?

ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..? ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ,  ದೇಣಿಗೆ ಸಂಗ್ರಹಿಸಲು ಗೈಡ್ ಲೈನ್ಸ್ ಏನಾದ್ರೂ ಇದೆಯಾ…? ರಾಮನ ಹೆಸರು ದುರ್ಬಳಕೆಯಾಗಬಾರದು. ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವತಂತ್ರವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಣಿಗೆ ಸಂಗ್ರಹಕ್ಕೆ ನನ್ನ ವಿರೋಧವಿಲ್ಲ…..

ದೇಣಿಗೆ ಸಂಗ್ರಹಕ್ಕೆ ನನ್ನ ವಿರೋಧವಿಲ್ಲ. ನಮ್ಮ ಪಕ್ಷದವರೂ ದೇಣಿಗೆ ನೀಡಿದ್ದಾರೆ. ಪಾರದರ್ಶಕವಾಗಿ ಎಷ್ಟು ದೇಣಿಗೆಯನ್ನಾದರೂ ಸಂಗ್ರಹಿಸಲಿ. ಸರಿಯಾದವರು ಬಂದು ದೇಣಿಗೆ ಕೇಳಿದರೇ ಒಂದು ಸಾರಿ ಅಲ್ಲ ಎರಡು ಬಾರಿ ಹಣ ನೀಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

Key words: ramamandira- streets –money- collected – former cm H, D Kumaraswamy

The post ಪೋಲಿ ಪುಂಡರಿಂದ ಬೀದಿ ಬೀದಿಗಳಲ್ಲಿ ಹಣ ಸಂಗ್ರಹ: ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..?- ಹೆಚ್,ಡಿ ಕುಮಾರಸ್ವಾಮಿ ಕಿಡಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗ್ರಾಮಸ್ವರಾಜ್ ಕಾರ್ಯಕ್ರಮ ಬಗ್ಗೆ ಲೇವಡಿ : ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ- ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ…
ಮೈಸೂರು,ಡಿಸೆಂಬರ್,5,2020(www.justkannada.in): ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ. ಬಿಜೆಪಿ ಸರ್ಕಾರ ಮುಂದಿನ ಎರಡುವರೇ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿ. ಉತ್ತಮ ಅಧಿಕಾರ ನಡೆಸಲಿ ಎನ್ನುವುದೇ ನಮ್ಮ ಉದ್ದೇಶ, ನಮ್ಮ ಸಹಕಾರವಿರಲಿದೆ. ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷ ಅಲ್ಲ ಅಂತ ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಗ್ರಾಮಪಂಚಾಯಿತಿ ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರೋದಿಲ್ಲ. ಆದ್ರೂ ಕಾರ್ಯಕರ್ತರಲ್ಲಿ‌ ಹುಮ್ಮಸ್ಸು ತರಲು ಸಭೆ ಮಾಡಿದ್ದೇವೆ. ಕೆಲವು ಮುಖಂಡರ ಹೇಳಿಕೆ‌ ಗಮನಿಸಿದ್ದೇನೆ. ಅವಿರೋಧ ಆಯ್ಕೆ ಮಾಡಿಕೊಂಡರೆ ಬಹುಮಾನ‌ ಹಾಗೂ ಹೆಚ್ಚಿನ ಅನುದಾನ ಕೊಡುವ ಹೇಳಿಕೆ‌ ನೋಡಿದ್ದೇನೆ. ಈ‌ ಚುನಾವಣೆಯಲ್ಲಿ ಚಿಹ್ನೆ ಇಲ್ಲವಾದರೂ ಪಕ್ಷದ ಕಾರ್ಯಕರ್ತರೇ ಚುನಾವಣೆಗೆ ನಿಲ್ತಾರೆ. ನಮ್ಮ‌ ಪಕ್ಷದ ಕಾರ್ಯಕರ್ತರಿಗು ಸಲಹೆ ಸೂಚನೆ ನೀಡಿದ್ದೇನೆ ಎಂದರು.

ಇದೇ ವೇಳೆ ಬಿಜೆಪಿಯ ಗ್ರಾಮಸ್ವರಾಜ್ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡಿದ ಹೆಚ್.ಡಿ ಕುಮಾರಸ್ವಾಮಿ, ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಂತ್ರಿಗಳು ಗ್ರಾಮಗಳಿಗೆ‌ ಹೋಗ್ತಿದ್ದಾರೆ. ಈಗಲಾದರೂ ಇವರಿಗೆ ಹಳ್ಳಿ ನೆನಪಾಯಿತಲ್ಲ. ಇವರು ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡ್ತಿದ್ದಾರೆ. ಆದ್ರೆ ಆ ಗ್ರಾಮಗಳಲ್ಲಿನ‌ ಸಮಸ್ಯೆ ಬಗ್ಗೆ ಮಾತನಾಡೋದನ್ನ ನಾನೇಲ್ಲು ಕಂಡಿಲ್ಲ. ಇವರಿಗೆ ಚುನಾವಣೆಯೇ ಮುಖ್ಯ ಎಂದು ಟೀಕಿಸಿದರು.

ಸಿಎಂ ಕೂಡ ಬೆಳಗಾವಿ ಪ್ರವಾಸ ಮಾಡ್ತಿದ್ದಾರೆ. ಅಲ್ಲಿ ಕೇವಲ ಕೋರ್ ಕಮಿಟಿ ಮೀಟಿಂಗ್‌ ಗಾಗಿ ಹೋಗಿ ವಾಪಸ್ಸಾಗುತ್ತಿದ್ದಾರೆ. ಬೆಳಗಾವಿಯಲ್ಲಿ ನೆರೆಯಿಂದ ಆಗಿರುವ ನಷ್ಟಕ್ಕೆ ಇನ್ನು ಪರಿಹಾರ ನೀಡಿಲ್ಲ. ಎಲ್ಲ‌ ಮಂತ್ರಿಗಳು ಅಲ್ಲೆ ಇದ್ದಾರೆ ಆದ್ರೂ ಅಲ್ಲಿನ ಸಮಸ್ಯೆ ಕೇಳೋಲ್ಲ.  ಗಾಂಧಿ ಪರಿಕಲ್ಪನೆ ಗ್ರಾಮಸ್ವರಾಜ್ ಹೆಸರಿನಲ್ಲಿ ಮಾಡುತ್ತಿದ್ದೀರಿ. ಅದಕ್ಕೆ ಗೌರವ ತರುವುದಾದರೆ ಜನರ ಕಷ್ಟ ಕೇಳಿ ಎಂದು ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.

ಉಪ ಚುನಾವಣೆಗಳ ಗೆಲುವು ಶಾಶ್ವತ ಅಲ್ಲ….

ಉಪ ಚುನಾವಣೆಗಳ ಗೆಲುವು ಶಾಶ್ವತ ಅಲ್ಲ. ನಮಗು ಶಾಶ್ವತ ಅಲ್ಲ‌ ನಿಮಗೂ ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದರು. 6 ತಿಂಗಳಲ್ಲಿ ಅಂತರದಲ್ಲಿ ಅದೆ ಕ್ಷೇತ್ರದಲ್ಲು ಸೋತರು. ಉಪಚುನಾವಣೆ ಫಲಿತಾಂಶ‌ ಬೇರೆ ಸಾರ್ವತ್ರಿಕ ಚುನಾವಣೆ ಫಲಿತಾಂಶ ಬೇರೆ. ಉಪಚುನಾವಣೆ ಗೆದ್ದ ತಕ್ಷಣ ಇಡೀ‌ರಾಜ್ಯ ನಮ್ಮ‌ಕಡೆ ಇದೆ ಅಂದು‌ಕೊಳ್ಳಬೇಡಿ ಎಂದು ಬಿಜೆಪಿಗೆ ಹೆಚ್,ಡಿಕೆ ಟಾಂಗ್ ನೀಡಿದರು.

ಕರ್ನಾಟಕದಲ್ಲಿ ‌ಬಿಜೆಪಿ ಮುಖ್ಯಮಂತ್ರಿ‌ ಇದ್ದಾರೆ ಅನ್ನೋದನ್ನ ಮರೆತೆಬಿಟ್ಟಿದ್ದಾರೆ.

ಕೇಂದ್ರ ಸರ್ಕಾರ‌ ಕರ್ನಾಟಕವನ್ನ‌ ಲೆಕ್ಕಕ್ಕೆ ಇಟ್ಟಿಲ್ಲ. ಕರ್ನಾಟಕದಲ್ಲಿ ‌ಬಿಜೆಪಿ ಮುಖ್ಯಮಂತ್ರಿ‌ ಇದ್ದಾರೆ ಅನ್ನೋದನ್ನ ಮರೆತೆಬಿಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ರಾಜ್ಯವನ್ನ ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ನೀವು ಮಾಡಿರುವ ನಿಗಮ ಹಾಗೂ ಪ್ರಾಧಿಕಾರದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಏನಿದೆ. ಕೆಲವು ನಿಗಮದಲ್ಲಿ 50 ಲಕ್ಷವು ಹಣವಿಲ್ಲ. ಆದ್ರೂ ಅವುಗಳ ಅಭಿವೃದ್ಧಿಗೆ ಕೋಟಿ ಕೋಟಿ ಬೇಕಾಗಿದೆ. ಇದರಿಂದ ಪಕ್ಷ ಸಂಘಟನೆ ಆಗುತ್ತೆ ಕಾರ್ಯಕರ್ತರಿಗೆ ಸಮಾಧಾನ ಆಗುತ್ತೆ ಅಂದುಕೊಂಡಿದ್ದೀರಾ. ಆದ್ರೆ ಅದು ಸಾಧ್ಯವೇ ಇಲ್ಲ ಎಂದು ಹೆಚ್,ಡಿ ಕುಮಾರಸ್ವಾಮಿ ಕಿಡಿಕಾರಿದರು.

ಹೆಚ್.ವಿಶ್ವನಾಥ್ ಗೆ ತಿರುಗೇಟು…

ಇದೇ ವೇಳೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಅಸಮಾಧಾನ ಹೊರ ಹಾಕಿದ ಹೆಚ್.ಡಿ ಕುಮಾರಸ್ವಾಮಿ,  ನಮ್ಮ ಕುಟುಂಬಕ್ಕೆ ಅದೊಂದು ಶಾಪ ಇದೆ. ನಾವು ಯಾರನ್ನ ಬೆಳೆಸುತ್ತೇವೋ ಅಂತವರಿಂದಲೇ ಮೋಸಗೊಳ್ಳುತ್ತಿದ್ದೇವೆ. ಆ ಶಾಪವನ್ನ ಹೇಗೆ ವಿಮೋಚನೆ ಮಾಡಬೇಕೋ ಎನ್ನುವುದು ನಮಗಿನ್ನು ತಿಳಿಯುತ್ತಿಲ್ಲ. ಒಂದು ರಿಸರ್ಚ್ ಮಾಡಿ ಆ ಬಳಿಕ ಶಾಪ ವಿಮೋಚನೆ ಮಾಡಿಕೊಳ್ಳುತ್ತೆವೆ. ರಾಜಕೀಯವಾಗಿ ಅನಾಥರಾದಾಗ ಯಾವ ಹಕ್ಕಿಗಳು ಸೇರಿಸದ ಸಂದರ್ಭದಲ್ಲಿ ನಾವು ಗೂಡು ನೀಡಿದ್ದೆವು. ವಿಶ್ವನಾಥ್ ಗೆ ದೇವೇಗೌಡ್ರು ಬೇಕಂತೆ ಆದ್ರೆ ಕುಮಾರಸ್ವಾಮಿ ಕಂಡ್ರೆ ಆಗಲ್ಲವಂತೆ. ಈ ಸಮಸ್ಯೆ ನಮ್ಮ ಕುಟುಂಬಕ್ಕೆ ಬಹಳ ದಿನಗಳಿಂದಲೂ ಇದೆ. ಬೆಳೆಸಿದವರಿಂದಲೇ ನಮಗೆ ಮೋಸ ಆಗುತ್ತೆ ಎಂದು ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಗೆ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

Key words: Gramsvaraj- program-BJP — Former CM -H, D Kumaraswamy-mysore

The post ಗ್ರಾಮಸ್ವರಾಜ್ ಕಾರ್ಯಕ್ರಮ ಬಗ್ಗೆ ಲೇವಡಿ : ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ- ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅಂದು ಬಿಎಸ್ ವೈ ನನ್ನ ಮುಂದೆ ನಿಂತಿದ್ಧ ಸ್ಥಿತಿಯೇ ಬೇರೆ: ಈಗಿನ ಅವರ ನಡವಳಿಕೆಗಳೇ ಬೇರೆ- ಹೆಚ್.ವಿಶ್ವನಾಥ್ ಮತ್ತೆ ಅಸಮಾಧಾನ…
ಮೈಸೂರು, ಡಿಸೆಂಬರ್,2,2020(www.justkannada.in):  ಸಚಿವರಾಗಲು ಹೆಚ್.ವಿಶ್ವನಾಥ್ ಅನರ್ಹ ಎಂದು ಹೈಕೋರ್ಟ್ ತೀರ್ಪು ನೀಡಿದ್ಧ ಬೆನ್ನಲ್ಲೆ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಮತ್ತೆ ಮೈಸೂರಿನಲ್ಲಿ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ.

ನಿನ್ನೆಯಷ್ಟೇ ಸಿ.ಪಿ ಯೋಗೇಶ್ವರ್ ಮತ್ತು  ಸಂತೋಷ್  ವಿರುದ್ಧ ನೇರಾನೇರ ಆರೋಪ ಮಾಡಿದ್ಧ ಹೆಚ್.ವಿಶ್ವನಾಥ್ ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ತೀವ್ರ ಬೇಸರ ವ್ಯಕ್ತಪಡಿಸಿದ್ಧಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್.ವಿಶ್ವನಾಥ್,  ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‌ ಯಡಿಯೂರಪ್ಪ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿಎಸ್‌ವೈ ನಡವಳಿಕೆಗಳೇ ಬೇರೆ. ರಾಜಕಾರಣದಲ್ಲಿ‌ ಕೃತಜ್ಞತೆ ಕಡಿಮೆ ಆಗುತ್ತಿದೆ. ನಾವು ಮಾಡಿದ ಕೆಲಸವನ್ನ ಯಾರು ಕೃತಜ್ಞ ಮಾಡಿಕೊಂಡಿಲ್ಲ ಎಂದು ಸಿಎಂ ನಡವಳಿಕೆ ಬಗ್ಗೆ ಹೆಚ್.ವಿಶ್ವನಾಥ್  ಅಸಮಾಧಾನ ತೋರ್ಪಡಿಸಿದ್ದಾರೆ.

ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ

ಹಾಗೆಯೇ ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ. ಎಲ್ಲರು ಜೊತೆಯಾಗಿದ್ದಾರೆ. ನಾವಿದ್ದೀವಿ ಅಂತ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ ನಾನು ಒಂಟಿಯಾಗಿಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ..

ಇನ್ನು ನಿನ್ನೆಯ ಮಧ್ಯಂತರ ತೀರ್ಪಿನ ಆದೇಶ ನೋಡಿದ್ದೇನೆ. ಅದರ ತೀರ್ಪಿನ ಆರ್ಡರ್ ಕಾಪಿ‌ ಇನ್ನು ಕೈಸೆರಿಲ್ಲ. ಅದರಲ್ಲಿ ಸಚಿವರಾಗಬಾರದು ಅಂತ ಮಾತ್ರ ಹೇಳಿದ್ದಾರೆ. 2027ರವರೆಗೆ ನಾನು ವಿಧಾನಪರಿಷತ್ ಸ್ಥಾನಕ್ಕೆ ತೊಂದರೆಯಿಲ್ಲ. ಚುನಾವಣೆಗೆ ಸ್ಪರ್ಧಿಸುವ ಮೂಲಕ ಅನರ್ಹತೆ ಹೋಗಲಾಡಿಸಿಕೊಳ್ಳಿ ಅಂತ ಸುಪ್ರೀಂಕೋರ್ಟ್ ಹೇಳಿದೆ.  ಸೋಲು- ಗೆಲುವಿನ ಬಗ್ಗೆ ತೀರ್ಪಿನಲ್ಲಿ ಉಲ್ಲೇಖವಾಗಿಲ್ಲ. ಆದ್ದರಿಂದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಸಿ.ಪಿ.ಯೋಗೇಶ್ವರ್‌ ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೇ..?

ಎಂಎಲ್ ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದಕ್ಕೆ ಆಕ್ಷೇಪಿಸಿರುವ ಹೆಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್‌ ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೇ? ಅವರೇನು ಸರ್ಕಾರ ಬಿಳಿಸೋಕೆ ಕಾರಣರಾದವರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಬಾಂಬೆ ಪುಣೆಯಲ್ಲಿ ಸೂಟ್‌ ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನ ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೇ ಬೇಕು. ಬಿಜೆಪಿ ಸರ್ಕಾರ ಬರೋದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು. ಯತ್ನಾಳ್ ಅಥವ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರಿಗೆ ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ಸಲಹೆ ನೀಡಿದರು.

ತಂದೆಯನ್ನ ಕೊಂದವನನ್ನೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ…

ಶೇಕ್ಸ್‌ಪೀಯರ್ ನಾಟಕದ ಉದಾಹರಣೆ ಉಲ್ಲೇಖಿಸಿ ಸರ್ಕಾರದ ಇಂದಿನ ಸ್ಥಿತಿ ಬಗ್ಗೆ ಮಾರ್ಮಿಕ ಹೇಳಿಕೆ ನೀಡಿದ ಹಳ್ಳಿಹಕ್ಕಿ ವಿಶ್ವನಾಥ್. ನಾವು ವಿರೋಧಿಸಿದವರೇ ಈಗ ಅವರ ಸ್ನೇಹಿತರಾಗಿದ್ದಾರೆ. ನಾವು ಯಾರನ್ನ ವಿರೋಧ ಮಾಡಿ ಬಂದ್ವಿ ಅವರೇ ಈಗ ಬಿಎಸ್‌ವೈ ಸ್ನೇಹಿತರಾಗಿದ್ದಾರೆ. ಇದು ತಂದೆಯನ್ನ ಕೊಂದವನ್ನನ್ನ ತಾಯಿ ಮದುವೆಯಾದಂತೆ ಕಾಣುತ್ತಿದೆ. ಶೇಕ್ಸ್‌ಪೀಯರ್ ನಾಟಕದಲ್ಲಿ ಇದೆ ರೀತಿಯ ಪ್ರಸಂಗ ಇದೆ. ನಮ್ಮ‌ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಇದೆ ಎಂದು  ಪರೋಕ್ಷವಾಗಿ ಕುಮಾರಸ್ವಾಮಿ ಸಖ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಲವ್ ಜಿಹಾದ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯನ್ನ ಖಂಡಿಸಿದ ಹೆಚ್.ವಿಶ್ವನಾಥ್. ಮಾಜಿ‌ ಸಿಎಂ ಆದವರೋಬ್ಬರು ಆ ರೀತಿಯ ಪದ ಬಳಕೆ ಮಾಡಬಾರದು. ಬೆರಕೆ ಅನ್ನೋ ಪದ ಸರಿಯಲ್ಲ. ಆ ಲೆಕ್ಕದಲ್ಲಿ ನೀವು ಬೆರಕೆಯೇ, ನಾನು ಬೆರಕೆಯೇ. ಬೇರೆ ಬೇರೆ ಪಕ್ಷದಲ್ಲಿ ಇದ್ದು ಬಂದಿದ್ದೀರಾ ಅದಕ್ಕೆ ಬೆರಕೆ ಅನ್ನಬಹುದೇ? ಒಬ್ಬ ಮುತ್ಸದ್ದಿಯಾಗಿ ನಾವು ಭಾರತೀಯ ಸಂಸ್ಕೃತಿಯನ್ನ ಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಲೇವಡಿ ಮಾಡಿದರು.

ಸಾ.ರಾ.ಮಹೇಶ್ ಬಗ್ಗೆ ನನಗೆ ಪ್ರಶ್ನೆಯನ್ನೆ ಕೇಳಬೇಡಿ…

ಸಾ.ರಾ ಮಹೇಶ್ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೈಮುಗಿದು ಉತ್ತರಿಸಿದ ಹೆಚ್.ವಿಶ್ವನಾಥ್, ಸಾ.ರಾ.ಮಹೇಶ್ ಬಗ್ಗೆ ನನಗೆ ಪ್ರಶ್ನೆಯನ್ನೆ ಕೇಳಬೇಡಿ. ಸಾ.ರಾ.ಮಹೇಶ್ ನನ್ನ ಅನುಭವದ ಮುಂದೆ ನನಗೆ ಸಮನಲ್ಲ. ಅಂತವರ ಬಗ್ಗೆ ನಾನು ಪ್ರತಿಕ್ರಿಯೆಯನ್ನೆ ನೀಡೋಲ್ಲ. ಆತ‌ ನಮ್ಮ‌ ಊರಿನವನು ಅಲ್ವಾ. ಅದಕ್ಕೆ ನನ್ನ‌ ಮೇಲಿನ ಪ್ರಿತಿಯಿಂದ ಪದೆ ಪದೆ ಮಾತನಾಡುತ್ತಾನೆ. ಆದ್ರೆ ಅವನ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನೆ ಕೇಳಬೇಡಿ. ಸಾ.ರಾ.ಮಹೇಶ್ ಬಗ್ಗೆ ಮಾತನಾಡೋಲ್ಲ ಎಂದರು.

english summary….

“BSY who was standing in front of me that day and his present behaviour is entirely different”: H. Vishwanath

Mysuru, Dec. 2, 2020 (www.justkannada.in): Following Hon’ble High Court orders stating that he is ineligible to become a minister, MLC H. Vishwanath has yet again expressed his displeasure on BJP leaders.

Following his allegations against on C.P. Yogeshwar and N.R.Santhosh yesterday, H. Vishwanath today expressed his displeasure on Chief Minister B.S. Yedyurappa. Addressing a press here in Mysuru today he said that Yedyurappa’s behaviour had changed completely now. “In politics gratitude no more has any place. Nobody has gratitude for the work done by us,” he said.

On the occasion, he also clarified that he would appeal in the Hon’ble Supreme Court, over the HC orders.

Keywords: H.Vishwanath/ Supreme Court/ B S Yedyurappa

Key words: BS yeddyurappa- stood -behavior – different –nowmysore- MLC-H, Vishwanath – upset

The post ಅಂದು ಬಿಎಸ್ ವೈ ನನ್ನ ಮುಂದೆ ನಿಂತಿದ್ಧ ಸ್ಥಿತಿಯೇ ಬೇರೆ: ಈಗಿನ ಅವರ ನಡವಳಿಕೆಗಳೇ ಬೇರೆ- ಹೆಚ್.ವಿಶ್ವನಾಥ್ ಮತ್ತೆ  ಅಸಮಾಧಾನ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆರ್.ಆರ್ ನಗರ ‘ಕೈ’ ಅಭ್ಯರ್ಥಿ ವಿರುದ್ಧ ಎಫ್ ಐ ಆರ್ ವಿಚಾರ: ಎಂಎಲ್ ಸಿ ಹೆಚ್,ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ….
ಮೈಸೂರು,ಅಕ್ಟೋಬರ್,15,2020(www.justkannada.in):  ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್ ಐಆರ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮಾಜಿ ಸಿಎಂ, ಹಾಲಿ ಸಿಎಂ ಎಲ್ಲರಿಗೂ ಒಂದೇ ನಿಯಮ. ಎಲ್ಲವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಯಾರಿಗೆ ಎಲ್ಲಿವರೆಗೆ ಪ್ರವೇಶವಿರುತ್ತೆ ಅನ್ನೋದು ಗೊತ್ತಿದೆ. ಹೀಗಿದ್ದೂ ಕೆಲವರು ನೂಕುನುಗ್ಗಲು ಮಾಡಿಕೊಂಡು ಒಳಗೆ ಹೋಗಿದ್ದರು. ಅಂಥವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಎಲ್ಲವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆ ಹಿನ್ನೆಲೆ ಎಲ್ಲಾ ಮೂರು ಪಕ್ಷದ ಅಭ್ಯರ್ಥಿಗಳೂ ನಾವೇ ಗೆಲ್ಲುತ್ತೇವೆ ಅಂತಾರೆ. ನಾವೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಅಂತಲೇ ಹೇಳುತ್ತೇವೆ. ಅಂತಿಮವಾಗಿ ಗೆಲುವು, ಸೋಲು ನಿರ್ಧಾರ ಮಾಡೋದು  ಮತದಾರರು ಎಂದು ಹೆಚ್.ವಿಶ್ವನಾತ್ ಅಭಿಪ್ರಾಯ ವ್ಯಕ್ತಪಡಿಸಿದರು.

Key words: FIR -against -RR nagar-congress candidate-MLC -H, Vishwanath-reaction

The post ಆರ್.ಆರ್ ನಗರ ‘ಕೈ’ ಅಭ್ಯರ್ಥಿ ವಿರುದ್ಧ ಎಫ್ ಐ ಆರ್ ವಿಚಾರ: ಎಂಎಲ್ ಸಿ ಹೆಚ್,ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಹದಾಯಿ ನದಿ ವಿವಾದ : ಸುಪ್ರೀಂ ಆದೇಶಕ್ಕೆ ಗೋವಾ ಸರ್ಕಾರ ತಕರಾರು: ಶೀಘ್ರ ಅಧಿಸೂಚನೆಗೆ ಕೇಂದ್ರಕ್ಕೆ ಒತ್ತಡ ಹೇರುವಂತೆ ಹೆಚ್,ಕೆ ಪಾಟೀಲ್ ಒತ್ತಾಯ…
ಬೆಂಗಳೂರು,ಫೆ,24,2020(www.justkannada.in): ಮಹಾದಾಯಿ ಜಲವಿವಾದ ನ್ಯಾಯಾಧೀಕರಣವು ಆಗಸ್ಟ್-14, 2018ರಂದು ನೀಡಿರುವ ಐತೀರ್ಪನ್ನು ಅನುಷ್ಠಾನಗೊಳಿಸಲು ಗೆಜೆಟ್ ಅಧಿಸೂಚನೆ ಹೊರಡಿಸುವ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಮತ್ತೊಮ್ಮೆ ಗೋವಾ ಸರ್ಕಾರ ತಕರಾರು ಮಾಡುತ್ತಿದೆ. ಸುಪ್ರೀಕೋರ್ಟ್ ನೀಡಿರುವ  ಆದೇಶಕ್ಕೆ ತಡೆ ಕೋರಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿಕೆ ನೀಡುವ ಮೂಲಕ ದೇಶಕ್ಕೆ ಆಶ್ಚರ್ಯ ತಂದಿದ್ದಾರೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್,  ಮಹಾದಾಯಿ ನ್ಯಾಯಾಧೀಕರಣದ ಐತೀರ್ಪನ್ನು ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲು ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶ ಹೊರಡಿಸುವ ಮುನ್ನ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಾದ ವಿವಾದದ ಸಂದರ್ಭದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅಧಿಸೂಚನೆ ಪ್ರಕಟಿಸುವುದಕ್ಕೆ ಯಾವುದೇ ತಕರಾರು ಎತ್ತದಿರುವುದು ಮತ್ತು ಪ್ರಸ್ತಾಪಿಸದಿರುವುದರ ಬಗ್ಗೆ ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಆದರೇ ಸುಪ್ರೀಂ ಆದೇಶಕ್ಕೆ ಗೋವಾ ಸರ್ಕಾರ ತಕರಾರು  ಎತ್ತಲು ಮುಂದಾಗಿದೆ.  ಗೋವಾ ಸಿಎಂ ಪ್ರಮೋದ ಸಾವಂತ ಅವರು ಎರಡು ಮೂರು ದಿನಗಳಲ್ಲಿ ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳುವ ಮೂಲಕ ನ್ಯಾಯಾಲಯದಲ್ಲಿ ಈಗಾಗಲೇ ತಳೆದಿರುವ ನಿಲುವನ್ನು ವಿರೋಧಿಸುವ ಮಟ್ಟಕ್ಕೆ ಹೋಗಿದ್ದಾರೆ. ಅದು ಅಲ್ಲದೇ ಕರ್ನಾಟಕಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಚಾಳಿ ಇದೆ ಎಂದು ಕಪೋಲ ಕಲ್ಪಿತ ಆರೋಪವನ್ನು ಮಾಡಿದ್ದಾರೆ. ಕಾನೂನಿನ ಆಡಳಿತದಲ್ಲಿ ನಂಬಿಕೆ ಇಟ್ಟಿರುವ ಕರ್ನಾಟಕ ರಾಜ್ಯ ಯಾವಾಗಲೂ ನ್ಯಾಯಾಂಗ ಸಂಸ್ಥೆ ಆದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿಲ್ಲ. ಇಂಥ ಆರೋಪಗಳನ್ನು ಮಾಡುವ ಮೂಲಕ ತನ್ನ ಸಣ್ಣತನವನ್ನು ಗೋವಾ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಿಡಿಕಾರಿದರು.

ಮಹಾದಾಯಿ ನ್ಯಾಯಾಧೀಕರಣದ ಐತೀರ್ಪು ಅಧಿಸೂಚನೆಗೆ ಕರ್ನಾಟಕ ಸರ್ಕಾರ ಯಾವುದೇ ಸಮಯ ವಿಳಂಬವಿಲ್ಲದೇ ಪ್ರಯತ್ನ ಮಾಡಬೇಕು. ಇನ್ನು ಎರಡು ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿ ಕರ್ನಾಟಕದ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ತಕ್ಷಣ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಧಿಸೂಚನೆ ಪ್ರಕಟಿಸುವಂತೆ ಮಾಡಬೇಕು.  ಇಷ್ಟೆ ಅಲ್ಲದೇ ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಮಹಾದಾಯಿ ಯೋಜನೆಗೆ ಪ್ರಸ್ತುತ ಅಗತ್ಯವಿರುವ 2000 ಕೋಟಿ ರೂಪಾಯಿಗಳ ಅನುದಾನವನ್ನು ಇದೇ ಮುಂಗಡ ಪತ್ರದಲ್ಲಿ ಘೋಷಣೆ ಮಾಡಬೇಕು. ಇದಲ್ಲದೇ ಸಾಕಷ್ಟು ಸಮಯ ವಿಳಂಬವಾಗಿರುವುದರಿಂದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಲು ನೀರಾವರಿ ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ  ಹೆಚ್.ಕೆ ಪಾಟೀಲ್ ಹೇಳಿದರು.

ಮಹಾದಾಯಿ ಜಲವಿವಾದವು ನಾಲ್ಕು ದಶಕಗಳ ಇತಿಹಾಸವನ್ನು ಹೊಂದಿದ್ದು ಮೊದಲ ಎರಡು ದಶಕಗಳಲ್ಲಿ ಯಾವುದೇ ಪ್ರಗತಿ ಸಾಧಿಸಿರಲಿಲ್ಲ. 1999-2004ರ ಅವಧಿಯ ಕಾಂಗ್ರೆಸ್ ಪಕ್ಷದ ಸರ್ಕಾರದ ಕಾಲದಲ್ಲಿ ಕಳಸಾ-ಬಂಡೂರಿ ಯೋಜನೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರದಿಂದ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ಪಡೆಯಲಾಯಿತು. ರಾಜಕೀಯ ಕಾರಣಗಳಿಗಾಗಿ ಗೋವಾದ ಒತ್ತಡಕ್ಕೆ ಮಣಿದ ಕೇಂದ್ರದ ಅಂದಿನ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ತಾತ್ವಿಕ ಒಪ್ಪಿಗೆ ತಡೆಹಿಡಿದಿತ್ತು. ಗೋವಾದೊಂದಿಗೆ ಕಳೆದ ಹಲವಾರು ಅಂತರಾಜ್ಯ ಸಭೆಗಳ ನಂತರ  2003ರಲ್ಲಿ ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅರಣ್ಯ ಸಲಹಾ ಸಮಿತಿಯ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಗೋವಾ ಸರ್ಕಾರವು ತಾತ್ವಿಕ ಆದೇಶ ನೆನೆಗುದಿಯಲ್ಲಿಡುವ ಆದೇಶ ಪಡೆದಿದ್ದರಿಂದ ಮುಂದೆ ಯಾವುದೇ ಪ್ರಗತಿ ಸಾಧಿಸಲಾಗಲಿಲ್ಲ ಎಂದರು.

ನ್ಯಾಯಾಧೀಕರಣದ ಮೊರೆ ಹೋದ ಕರ್ನಾಟಕ ಸರ್ಕಾರ ತನ್ನ ಪಾಲಿನ ನೀರನ್ನು ಪಡೆದುಕೊಳ್ಳುವಲ್ಲಿ ಬಾಗಶಃ ಯಶ ಕಂಡಿತು. ಈ ಹಿನ್ನೆಲೆಯಲ್ಲಿ ಈಗ ಬಂದಿರುವ ನ್ಯಾಯಾಧೀಕರಣದ ಆದೇಶ ಮತ್ತು ಸರ್ವೋಚ್ಚ ನ್ಯಾಯಾಲಯದ ಫೆಬ್ರುವರಿ-20ರ ಆದೇಶಗಳು ಕರ್ನಾಟಕಕ್ಕೆ ಪೂರ್ಣವಲ್ಲದಿದ್ದರೂ ಅಲ್ಪಮಟ್ಟಿನ ಸಮಾಧಾನ ತಂದಿದೆ. ತಕ್ಷಣ ಕರ್ನಾಟಕ ಸರ್ಕಾರ ಯಾವುದೇ ವಿಳಂಬವಿಲ್ಲದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅಧಿಸೂಚನೆ ಪ್ರಕಟಣೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಸ್ತುತ 2020-21ರ ಮುಂಗಡ ಪತ್ರದಲ್ಲಿಯೇ 2000 ಕೋಟಿ ರೂಪಾಯಿ ಹಣಕಾಸು ಒದಗಿಸುವಂತೆ ಹಾಗೂ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸುತ್ತೇನೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

Key words: Mahadai- River –Controversy-  Goa government -disputes -Supreme -Court order-former minister- H, K Patil

The post ಮಹದಾಯಿ ನದಿ ವಿವಾದ : ಸುಪ್ರೀಂ ಆದೇಶಕ್ಕೆ ಗೋವಾ ಸರ್ಕಾರ ತಕರಾರು: ಶೀಘ್ರ ಅಧಿಸೂಚನೆಗೆ ಕೇಂದ್ರಕ್ಕೆ ಒತ್ತಡ ಹೇರುವಂತೆ ಹೆಚ್,ಕೆ ಪಾಟೀಲ್ ಒತ್ತಾಯ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫೋನ್ ಕದ್ಧಾಲಿಕೆ ಮಾಡಿದ್ದಾರೆ:– ಅನರ್ಹ ಶಾಸಕ ಹೆಚ್,ವಿಶ್ವನಾಥ್ ಗಂಭೀರ ಆರೋಪ..
ಮೈಸೂರು,ಆ,14,2019(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದ ನನ್ನ ಫೋನ್ ಕದ್ಧಾಲಿಕೆ ಆಗಿದೆ. ನೀವು ಬಂದು ರಾಜೀನಾಮೆ ವಾಪಾಸ್ ತಗೋಳಿ ಎಂದು ಒತ್ತಡ ಬಂದಿತ್ತು  ಎಂದು ಅನರ್ಹ  ಹೆಚ್ ವಿಶ್ವನಾಥ್  ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನರ್ಹ ಶಾಸಕ ಹೆಚ್,ವಿಶ್ವನಾಥ್,  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಟೆಲಿಫೋನ್ ಕದ್ದಾಲಿಕೆ ಆಗಿದೆ. ಯಾವುದೇ ವ್ಯಕ್ತಿ ಅವನ ಹೆಂಡತಿಯ ಫೋನ್ ಕಾಲ್ ಟ್ರೇಸ್  ಮಾಡುವ ಹಾಗಿಲ್ಲ. 17 ಜನ  ಶಾಸಕರ ಫೋನ್ ಡೀಟೇಲ್ಸ್ ತಗೊಂಡು ನಮಗೆ ಧಮ್ಕಿ ಹಾಕ್ತಿದ್ರು. ನಮಗೆ ಫೋನ್  ಮಾಡಿ  ಆಡಿಯೋ ಹೊರಗೆ ಬಿಡ್ತೇನೆ ಎಂದು ಎದುರಿಸುತ್ತಿದ್ದರು.ಒಬ್ಬ ಜೆಡಿಎಸ್  ರಾಜ್ಯಾದ್ಯಕ್ಷನ  ಫೋನ್  ಕದ್ದಾಲಿಕೆ ಮಾಡಿದ  ಸಿಎಂ ನನ್ನ ಮೇಲೆ ನಂಬಿಕೆ ಇಲ್ಲದೆ ಕದ್ದಾಲಿಕೆ ಮಾಡಿದ್ದಾರೆ. ಪೊಲೀಸ್ ಆಫೀಸರ್ಸ್ ಮೇಲೂ  ಫೋನ್  ಕದ್ದಾಲಿಕೆ ಆಗಿದೆ ಇದು  ಮಹಾಪರಾಧ ಎಂದು ಕಿಡಿಕಾರಿದರು.

ಫೋನ್ ಕದ್ದಾಲಿಕೆ ಆಗ್ತಿದೆ  ಎಂದು 6 ತಿಂಗಳ ಹಿಂದೆ ಹೆಚ್ ಕೆ ಪಾಟೀಲ್ ಹಾಗೂ ಆರ್ ಅಶೋಕ್ ಅವರೇ ಹೇಳಿದ್ರು. ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ರಾಜ್ಯದ  ಕಾನೂನಿನ  ಉಲ್ಲಂಘನೆ ಮಾಡಿದ್ರು. ಫೋನ್ ಕದ್ದಾಲಿಕೆ ಇದೆ. ಮೊದಲಲ್ಲ ದೇಶದಲ್ಲಿ ಇಂದಿನಿಂದಲೂ ಈ ಅಪರಾಧ ನಡೆದಿದೆ. ಈ  ಹಿನ್ನೆಲೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದು ಹೆಚ್,ವಿಶ್ವನಾಥ್ ತಿಳಿಸಿದರು.

ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ: ಸರ್ಕಾರ ಮತ್ತು ಸಮಾಜ ಒಟ್ಟಾಗಿ ಸೇರಿ  ಕಾರ್ಯನಿರ್ವಹಿಸಬೇಕಿದೆ.

ರಾಜ್ಯದಲ್ಲಿ  ಪ್ರವಾಹ ಉಂಟಾಗಿದೆ. ಹೀಗಾಗಿ ಸರ್ಕಾರ ಮತ್ತು ಸಮಾಜ ಒಟ್ಟಾಗಿ ಸೇರಿ  ಕಾರ್ಯನಿರ್ವಹಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರಿಗೊಬ್ಬರ ಸಹಕಾರದಿಂದ ಸಂತ್ರಸ್ಥರನ್ನ ಕಾಪಾಡಬೇಕಿದೆ. ಹೆಚ್ ಡಿ  ದೇವೇಗೌಡರು ಕೂಡ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಜೊತೆ ನಾವು ಇರುತ್ತೇವೆ, ನೀವು ಏಕಾಂಗಿಯಲ್ಲ ಎಂದು ಬರೆದಿದ್ದಾರೆ.ಅವರು ಪತ್ರವನ್ನ ನಾನು ಸ್ವಾಗತಿಸುತ್ತೇವೆ. ಈ  ವಿಚಾರದಲ್ಲಿ  ಮೂರು ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಸಿಸಬೇಕು ಎಂದು  ಅಭಿಪ್ರಾಯ ಸೂಚನೆ ತಿಳಿಸಿದ್ದಾರೆನಿಜವಾದ ಚಾಲೆಂಜ್ ನಮಗೆ ಈಗ ಶುರುವಾಗಿದೆ. ಬಹಳಷ್ಟು ಜನರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಸಮಾಜ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಚ್ಚು  ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಬಾದಾಮಿಯಲ್ಲೂ ಇಲ್ಲ, ಮೈಸೂರಿನಲ್ಲೂ ಕಾಣುತ್ತಿಲ್ಲ.

ಸಿ.ಎಲ್ ಪಿ  ಲೀಡರ್ ಸಿದ್ದರಾಮಯ್ಯ ಎಲ್ಲೋಗಿದ್ದರೋ ಗೊತ್ತಿಲ್ಲ,  ಈ ರೀತಿಯ ಪರಿಸ್ಥಿತಿ ನಿಭಾಯಿಸಿರುವ ಅನುಭವ ಸಿದ್ದರಾಮಯ್ಯಗೆ ಇದೆ. ಅವರು ಬಾದಾಮಿಯಲ್ಲೂ, ಮೈಸೂರಿನಲ್ಲೂ ಕಾಣುತ್ತಿಲ್ಲ. ಅವರು‌ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಇಂತಹ ವಿಷಯದಲ್ಲಿ ಬಹಳಷ್ಟು ಅನುಭವವಿದೆ. ಅವರು ಹೊರಗಡೆ ಬಂದು ಮಾತನಾಡಲಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಶಾಸಕ  ಜಿಡಿ ದೇವೇಗೌಡ ಬಿಜೆಪಿಗೆ ಸೇರುವ ಬಗ್ಗೆ ಸುಳಿವು ನೀಡಿದ ಮಾಜಿ ಶಾಸಕ  ಹೆಚ್ ವಿಶ್ವನಾಥ್…

ಇದೇ ವೇಳೆ ಶಾಸಕ  ಜಿಡಿ ದೇವೇಗೌಡ ಬಿಜೆಪಿಗೆ ಸೇರುವ ಬಗ್ಗೆ ಸುಳಿವು ನೀಡಿದ ಮಾಜಿ ಶಾಸಕ  ಹೆಚ್ ವಿಶ್ವನಾಥ್, ಜಿಟಿ ದೇವೇಗೌಡರಿಗೆ  ಬಿಜೆಪಿ ಹಳೆ ಪಾರ್ಟಿ. ಜಿಟಿಡಿ -ಬಿಎಸ್ವೈ  ಭೇಟಿಯಾಗಿದ್ದು  ನಿಜ. ಜಿಟಿಡಿ ಅವರನ್ನ ನಾನೇನು ಕರೆದುಕೊಂಡು ಹೋಗಿರ್ಲಿಲ್ಲ, ಅವರೇ  ಬಿಎಸ್ವೈ ಮನೆಗೆ ಬಂದಿದ್ರು. ಜಿಟಿ ದೇವೇಗೌಡ ಅವರು ಒಬ್ಬ ರಾಜ್ಯದ ಮುಖ್ಯಮಂತ್ರಿಯನ್ನ  ಭೇಟಿ  ಮಾಡಿದ್ದೂ ನಿಜ ಅದರಲ್ಲಿ ತಪ್ಪೇನಿದೆ..?ಶಾಸಕರಾದ  ಮೇಲೆ ಅವರ ಕೆಲಸಗಳು ಇರ್ತವೆ  ಹೀಗಾಗಿ  ಭೇಟಿ  ನೀಡಿದ್ದಾರೆ ಅಷ್ಟೇ ಎಂದು ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ತಿಳಿಸಿದರು.

ಮೈಸೂರು ದಸರಾ ವಿಜೃಂಭಣೆಯಿಂದಲೇ ಆಗಬೇಕು….

ಮೈಸೂರು ದಸರಾ ವಿಜೃಂಭಣೆಯಿಂದಲೇ ಆಗಬೇಕು.ಯಾವುದೇ ಕಾರಣಕ್ಕೂ‌ ನೆರೆ ಬರ ಅಂತ ಹೇಳಿ ಸರಳ ದಸರಾ ಮಾಡ ಬಾರದು. ದಸರಾ ಉತ್ಸವ ಮಾಡೋದು ಚಾಮುಂಡೇಶ್ವರಿ ತಾಯಿ ದುಷ್ಟರ ಶಿಕ್ಷಿಸಿ ಶಿಷ್ಠರ ರಕ್ಷಣೆ ಮಾಡಲಿ ಅಂತ.  ನಾಡಿಗೆ ಒಳ್ಳೆಯದಾಗಲಿ ಅಂತಾನೇ ಆಚರಣೆ ಮಾಡೋದು. ನಾನು ಸಹ ಉಸ್ತುವಾರಿಯಾಗಿದ್ದೆ.  ಆಗಲೂ ಬರ ಇತ್ತು. ದಸರಾ ಉತ್ಸವವನ್ನು ಸ್ಪನ್ಸಾರ್ ಶಿಫ್ ನಿಂದಲೇ ಮಾಡಬಹುದು. ಸರ್ಕಾರದ ಹಣವನ್ನೇ ಖರ್ಚು ಮಾಡಬೇಕೆಂದು ಇಲ್ಲ. ನಾವು ಉಸ್ತುವಾರಿ ಆಗಿ ಆಚರಣೆ ಮಾಡ್ದಾಗ ಒಂದು ಕೋಟಿ ಐದು ಲಕ್ಷ ಹಣ ಸಂಗ್ರವಾಗಿತ್ತು. ದಸರಾ ಉತ್ಸವ ಮಾಡಿ ಸರ್ಕಾರಕ್ಕೆ ಹಣ ವಾಪಾಸ್ ಕೊಟ್ಟಿದ್ದೆ ಎಂದು ಹೆಚ್.ವಿಶ್ವನಾಥ್  ಸಲಹೆ ನೀಡಿದರು.

Key words: Former CM- HD Kumaraswamy Phone tapping-H, Vishwanath -accused

The post ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫೋನ್ ಕದ್ಧಾಲಿಕೆ ಮಾಡಿದ್ದಾರೆ:– ಅನರ್ಹ ಶಾಸಕ ಹೆಚ್,ವಿಶ್ವನಾಥ್ ಗಂಭೀರ ಆರೋಪ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ್ದು ಸಾ.ರಾ ಮಹೇಶ್: ಹೆಚ್ ವಿಶ್ವನಾಥ್ ಕಿಡಿ: ರಮೇಶ್ ಕುಮಾರ್ ವಿರುದ್ದವೂ ಗುಡುಗಿದ ಹಳ್ಳಿಹಕ್ಕಿ….
ಮೈಸೂರು,ಆ,4,2019(www.justkannada.in):  ನನ್ನ ಮಗನಿಗೆ ವಿಷ ಹಾಕಿದ ರೀತಿ ಮತ್ತೊಬ್ಬರಿಗೆ ಹಾಕಬೇಡಿ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್,  ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ್ದು ಸಾ.ರಾ ಮಹೇಶ್ ಎಂದು ಕಿಡಿಕಾರಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಸಾ.ರಾ ಮಹೇಶ್ ಓರ್ವ ಅಪ್ರಬುದ್ಧ ವ್ಯಕ್ತಿ. ನನ್ನ ವಿರುದ್ದ 26 ಕೋಟಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಮಹಾನ್ ಸುಳ್ಳುಗಾರ.  ಅಪ್ಪ ಅವ್ವ ಮಕ್ಕಳ ಮೇಲೆ ಸದನದಲ್ಲಿ ಆಣೆ ಹಾಕಿದ್ದು ನೋವುಂಟು ಮಾಡಿದೆ. ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ನಿಜವಾಗಲು ವಿಷ ಉಣಿಸಿದ್ದು ಸಾ.ರಾ ಮಹೇಶ್ ಎಂದು ಹರಿಹಾಯ್ದರು.

ಹಾಗೆಯೇ ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದವೂ ಗುಡುಗಿದ ಹಳ್ಳಿಹಕ್ಕಿ, ಸದನದಲ್ಲಿ ನಾವು ಇಲ್ಲದಾಗ ಮಾತನಾಡಲು ಅವಕಾಶ ನೀಡಿ ಸಂಪ್ರದಾಯವನ್ನ ಉಲ್ಲಂಘಿಸಿದ್ದಾರೆ. ಅವರಿಗೆ ಅವರೇ ಸಂತ ಪ್ರಾಮಾಣಿಕ ಅಂತಾ ಹೇಳಿಕೊಳ್ತಾರೆ. ಸದನದಲ್ಲಿ ಸಾ.ರಾ ಮಹೇಶ್ ನನ್ನ ವಿರುದ್ದ 26 ಕೋಟಿ ಹಣ ಪಡೆದಿರುವ ಆರೋಪ ಮಾಡಿದ್ದರು. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಸಹ ಪ್ರಸ್ತಾಪಿಸಿದ್ದರು. ಸದನ ಕೇವಲ ನಿಂದನೆಗೆ ಸೀಮಿತವಾಯಿತು.  ಈ ಮೂಲಕ ವ್ಯಕ್ತಿಯ ವ್ಯಕ್ತತ್ವಹರಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಹುಲ್ ಪ್ರಚಾರಕ್ಕೆ ಬಂದಾಗ ಅವರ ಭೇಟಿಗೆ ಯತ್ನಿಸಿದೆ. ಆದರೆ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಬಾರದು. ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಲ್ಲೂ ನನಗೆ ತೊಂದರೆಯಾಗಿತ್ತು. ಇಲ್ಲೂ ತೊಂದರೆಯಾಯಿತು ಎಂದು ಹೆಚ್.ವಿಶ್ವನಾಥ್ ಹೇಳಿದರು.

ನಾವು ಪದವಿ ,ದುಡ್ಡಿಗಾಗಿ ನಮ್ಮನ್ನು ಮಾರಿಕೊಂಡಿಲ್ಲ. ಮುನಿರತ್ನ, ಎಸ್.ಟಿ ಸೋಮಶೇಖರ್, ಎಂಟಿಬಿ ನಾಗರಾಜ್ ಸಾಕಷ್ಟು ಹಣ ಹೊಂದಿದ್ದಾರೆ. ಹೀಗಾಗಿ  ನಾವು ಹಣಕ್ಕೆ ಮಾರಿಕೊಂಡಿಲ್ಲ.  ನಮಗಾದ ಅವಮಾನದಿಂದ ನಾವು ರಾಜೀನಾಮೆ ನೀಡಿದ್ದೇವೆ ಎಂದರು.

Key words: HD Deve Gowda’s- family -poison- Sara Mahesh-H, Vishwanath

The post ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ್ದು ಸಾ.ರಾ ಮಹೇಶ್: ಹೆಚ್ ವಿಶ್ವನಾಥ್  ಕಿಡಿ: ರಮೇಶ್ ಕುಮಾರ್ ವಿರುದ್ದವೂ ಗುಡುಗಿದ ಹಳ್ಳಿಹಕ್ಕಿ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.