guidance Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದ ಸಚಿವ ಡಾ. ನಾರಾಯಣಗೌಡ…
ಮಂಡ್ಯ ಮೇ 06,2021(ww.justkannada.in):  ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ತರಲು ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಮಾರ್ಗಸೂಚಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿಯನ್ನು ನೀಡಿದ್ದು, ಜಿಲ್ಲೆಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.

ಸಚಿವರು ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ,  ತಾಲೂಕುವಾರು ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿ, ಆಸ್ಪತ್ರೆಗಳಿಗೆ, ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಅಪ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದು, ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಲು ಮುತುವರ್ಜಿವಹಿಸಿದ್ದಾರೆ. ಆದಾಗ್ಯೂ ಜಿಲ್ಲೆಯಲ್ಲಿ ದಿನೇ-ದಿನೇ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಹಾಗೂ ಮರಣ ಪ್ರಮಾಣವು ಸಹ ರಾಜ್ಯದ ಸರಾಸರಿಗಿಂತ ಹೆಚ್ಚಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತಷ್ಟು ಬಿಗಿ ಕ್ರಮಕ್ಕಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಬಗ್ಗೆ ತೀವ್ರ ನಿಗಾವಹಿಸಲು ಸರತಿಯಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು. ಅವರು ಸೋಂಕಿತರ ಯೋಗಕ್ಷೇಮ ಊಟ-ತಿಂಡಿ ಸರಬರಾಜು, ವೈದ್ಯಕೀಯ ಉಪಚಾರ ಇತ್ಯಾದಿಗಳು ಸೋಂಕಿತರಿಗೆ ಸರಿಯಾಗಿ ತಲುಪುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಂಡು ಪ್ರತಿದಿನ ಸಚಿವರಿಗೆ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ಸೋಂಕಿತರ ಅವಲಂಬಿತರನ್ನು ಆರೈಕೆಗಾಗಿ ನಿಯೋಜಿಸಬಾರದು.

ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆ, ಪೂರೈಕೆ ಮತ್ತು ಅಗತ್ಯತೆ ಬಗ್ಗೆ ತೀವ್ರ ನಿವಹಿಸಲು ಹಾಗೂ ಹೆಚ್ಚುವರಿಯಾಗಿ ಆಕ್ಸಿಜಿನ್ ಬೆಡ್ ಅಗತ್ಯವಿದ್ದಲ್ಲಿ ಜಿಲ್ಲೆ, ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಮೇಲುಸ್ತುವಾರಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರನನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು.

ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಿ, ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿದ ನಂತರ ವ್ಯಕ್ತಿಯು ಕಡ್ಡಾಯವಾಗಿ ಫಲಿತಾಂಶ ಬರುವವರೆಗೆ ಹೋಮ್ ಐಸೋಲೇಷನ್‌ನಲ್ಲಿರಲು ಸೂಚಿಸಿ, ಸಂಬಂಧಪಟ್ಟ ಪಿಡಿಓ ಮತ್ತು ಕಂದಾಯ ನಿರೀಕ್ಷಕರು ಹಾಗೂ ಆಶಾಕಾರ್ಯಕರ್ತೆಯರು ಇವರ ಮೇಲೆ ನಿಗಾವಹಿಸಬೇಕು. ಹೋಮ್ ಐಸೋಲೇಷನ್‌ ನಲ್ಲಿರುವವರಿಗೆ ಅಗತ್ಯ ಔಷಧಿ/ಸಲಕರಣೆಗಳ ಕಿಟ್‌ನ್ನು ಕಡ್ಡಾಯವಾಗಿ ನೀಡಬೇಕು.

ಸೋಂಕಿನ ತೀವ್ರತೆ ಜಾಸ್ತಿ ಇರುವವರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸೋಂಕಿತ ವ್ಯಕ್ತಿಯ ಕುಟುಂಬವರನ್ನು ಹೋಮ್ ಕ್ವಾರಂಟೈನ್ ಮಾಡಿ ಅವರ  ಮೇಲ್ವಿಚಾರಣೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಆರ್‌ಡಿಪಿಆರ್ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮ / ವಾರ್ಡ್‌ಗೆ ಕಡ್ಡಾಯವಾಗಿ ಭೇಟಿ ನೀಡಲು ಸೂಚಿಸಬೇಕು.

ಇನ್ನು 15 ದಿನಗಳು ಸೋಂಕಿನ ತೀವ್ರತೆ ಜಾಸ್ತಿಯಾಗುವ ಸಂಭವವಿರುವುದರಿಂದ 15 ದಿನಗಳಿಗೆ ಕಲ್ಪಿಸಬೇಕಾದ ವ್ಯವಸ್ಥೆ ಅಗತ್ಯವಿರುವ ಹೆಚ್ಚುವರಿ ಬೆಡ್‌ಗಳು, ಆಕ್ಸಿಜನ್, ಬೆಡ್ ಗಳು, ಆಕ್ಸಿಜನ್ ಪೂರೈಕೆ, ಔಷಧಿಗಳು, ಸಿಬ್ಬಂದಿ ವ್ಯವಸ್ಥೆ, ವೈದ್ಯೋಪಚಾರಕ್ಕೆ ಅವಕಾಶ್ಯವಿರುವ ಪರಿಕರಗಳು, ವಾಹನ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗೊಳಿಸಲು ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು.

ಕೋವಿಡ್ ಕೇರ್ ಸೆಂಟರ್,  ವಾರ್ ರೂಮ್‌ನ್ನು 24×7 ಕಾರ್ಯನಿರ್ವಹಿಸುವಂತೆ ವ್ಯವಸ್ಥೆಗೊಳಿಸಬೇಕು. ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಕೊರೊನಾ ಸೋಂಕಿತರ ಮೇಲ್ವಿಚಾರಣೆಗೆ,  ಉಪಚಾರಕ್ಕೆ ಕೈಗೊಂಡಿರುವ ಮಾಹಿತಿಯನ್ನು  SMS ಮೂಲಕ ಅಥವಾ ದೂರವಾಣಿ ಕರೆ  ಮೂಲಕ ಅವರ ಕುಟುಂಬಸ್ಥರಿಗೆ ನೀಡಬೇಕು. ಇದಕ್ಕಾಗಿ ಪಾಳಿಯಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ ಕೂಡಲೆ ನಿಯೋಜಿಸಬೇಕು. ಸಹಾಯವಾಣಿ ಕೇಂದ್ರದಲ್ಲಿ ಆಸ್ಪತ್ರೆಗಳ ಮಾಹಿತಿ, ಬೆಡ್‌ಗಳ ವ್ಯವಸ್ಥೆ, ಶಿಷ್ಟಾಚಾರದ ಮಾಹಿತಿಯನ್ನು ನೀಡಲು ಈ ತಂಡಕ್ಕೆ ಅಗತ್ಯ ತರಬೇತಿ, ಮಾಹಿತಿ ನೀಡಬೇಕು.

ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಬಿಗಿ ಕ್ರಮಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಹೆಚ್ಚಿನ ಜವಬ್ದಾರಿವಹಿಸಬೇಕು.

ಜಿಲ್ಲೆಯಾದ್ಯಂತ ಬಿಗಿ ಕ್ರಮದ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೊಳಗಾಗುವ ಜನರನ್ನು ಗುರುತಿಸಲು ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಸಬಲೀಕರಣ  ಇಲಾಖೆಯ ಅಧಿಕಾರಿಗಳನ್ನು ತಾಲೂಕುವಾರು ನಿಯೋಜಿಸಬೇಕು. ಅಲ್ಲದೆ ಸಂಕಷ್ಟಕ್ಕೀಡಾಗಿರುವವರನ್ನು ಗುರುತಿಸಿ, ಅವರ ಡೇಟಾ ಸಂಗ್ರಹಿಸಿ ದಾಖಲೀಕರಣ ಪ್ರಕ್ರಿಯೆಯನ್ನು ಕೂಡಲೇ ಮಾಡಬೇಕು. ತೀವ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಅಗತ್ಯ ನೆರವನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆ  ಅಥವಾ ದಾನಿಗಳಿಂದ ಕೊಡಿಸುವ ಕಾರ್ಯ ಮಾಡಬೇಕು.

ಕೋವಿಡ್ -19 ನಿಯಂತ್ರಣ, ಪರಿಹಾರ, ವ್ಯವಸ್ಥೆಗಳ ನಿರ್ವಹಣೆಗೆ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳಿಗೆ ಹೆಚ್ಚಿನ ಜವಬ್ದಾರಿ ನೀಡಬೇಕು. ಜನಸಾಮಾನ್ಯರು ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆಯನ್ನು ದಿನಪತ್ರಿಕೆ, ಸೋಷಿಯಲ್ ಮಿಡಿಯಾದಲ್ಲಿ ಪ್ರಕಟಿಸಬೇಕು. ಪ್ರತಿನಿತ್ಯ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಕೋರಲಾಗುವ ಬೇಡಿಕೆಗಳ ವಿವರವನ್ನು ತಮ್ಮ ಕಛೇರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಸಚಿವ ನಾರಾಯಣಗೌಡ ಸೂಚನೆ ನೀಡಿದ್ದಾರೆ.

Key words: guidance –corona-control-  Minister -Narayana Gowda-mandya

The post ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದ ಸಚಿವ ಡಾ. ನಾರಾಯಣಗೌಡ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಾಬು ಜಗಜೀವನ್ ರಾಮ್ ಬದುಕು, ಸಾಧನೆ ನಮ್ಮೆಲ್ಲರಿಗೂ ಮಾರ್ಗದರ್ಶನ : ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಏಪ್ರಿಲ್,05,2021(www.justkannada.in) : ಆಧುನಿಕ ಭಾರತದ ನಿರ್ಮಾಣ ಮತ್ತು ಮುನ್ನಡೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರನ್ನು ಅವರ ಜನ್ಮದಿನದಂದು ಗೌರವ ಮತ್ತು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಅವರ ಬದುಕು ಮತ್ತು ಸಾಧನೆ ನಮ್ಮೆಲ್ಲರಿಗೂ ಸದಾ ಮಾರ್ಗದರ್ಶನ ಮಾಡುತ್ತಿರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಟ್ವೀಟ್ ಮೂಲಕ ಗೌರವ ಸಲ್ಲಿಸಿದ ಅವರು, ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ದಿವಂಗತ ಬಾಬು ಜಗಜೀವನರಾಮ್ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆ ಎಂದು ಹೇಳಿದ್ದಾರೆ.

ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಇತರರು ಇದ್ದರು.

key words : Babu Jagjivan Ram-Live-achieve-all-Guidance-Former CM-Siddaramaiah

The post ಬಾಬು ಜಗಜೀವನ್ ರಾಮ್ ಬದುಕು, ಸಾಧನೆ ನಮ್ಮೆಲ್ಲರಿಗೂ ಮಾರ್ಗದರ್ಶನ : ಮಾಜಿ ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ದೇಶ, ವಿದೇಶಗಳ ಪರಿಣಿತರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಿ” : ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ
ಮೈಸೂರು,ಮಾರ್ಚ್,29,2021(www.justkannada.in) :  ವರ್ಷದಲ್ಲಿ ದೇಶ, ವಿದೇಶಗಳ 10 ಮಂದಿ ಪರಿಣಿತರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಾಹಿತಿ ತಿಳಿಸಿಕೊಡುವ ಕಾರ್ಯಮಾಡಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ರಾಸಾಯನಿಕ ಸಮಾಜ 2020-21 ಕಾರ್ಯಕ್ರಮ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಸಾಯನಿಕ ಸಮಾಜ ಎನ್ನುವುದು ಶೈಕ್ಷಣಿಕ ಉತ್ಸವವಾಗಿದ್ದು, ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರು ಇದರಲ್ಲಿ ಭಾಗವಹಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಅಂಥಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯವಾಗಿದೆ. ಪಠ್ಯದ ಜೊತೆಗೆ ಕೌಶಲ್ಯಗಳ ತರಬೇತಿಯನ್ನು ನೀಡುವ ಮೂಲಕ ಉದ್ಯೋಗ ಪಡೆದುಕೊಳ್ಳುವುದಕ್ಕೆ ಸಿದ್ಧಗೊಳಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಬೇಕು. ಹೊಸ ಆಲೋಚನೆ, ವಿಚಾರಗಳ ಮೂಲಕ ಗುರುತಿಸಿಕೊಳ್ಳಬೇಕು. ವಿಪುಲವಾದ ಅವಕಾಶಗಳಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕಲಿಯಬೇಕಿದೆ ಎಂದು ಸಲಹೆ ನೀಡಿದರು.

ರಸಾಯನಶಾಸ್ತ್ರ ಅಧ್ಯಯನ ವಿಭಾಗವು ನನಗೆ ಹೃದಯಭಾಗದಂತೆ. ಅಪಾರ ಸಮಯವನ್ನು ನಾನು ಇಲ್ಲಿ ಕಳೆದಿದ್ದೇನೆ. ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ, ಕುಲಪತಿಯಾಗಿದ್ದೇನೆ ಎಂದು ಸ್ಮರಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ರಸಾಯನಶಾಸ್ತ್ರ ಅಧ್ಯಯನ ವಿಭಾಗವು ವಿಶ್ವವಿದ್ಯಾನಿಲಯದ ಹಳೆಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಅಧ್ಯಯನ ಮಾಡಿದವರು ದೇಶ, ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಈವರೆಗೆ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದವರ ಉತ್ತಮ ಸೇವೆಯಿಂದಾಗಿ ವಿಭಾಗವು ವಿವಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇತರೆ ವಿಭಾಗಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.

ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ರಸಾಯನಶಾಸ್ತ್ರ ಅಧ್ಯಯನ ವಿಭಾಗಕ್ಕೆ 115 ವರ್ಷದ ಇತಿಹಾಸವಿದೆ. ಅಪಾರ ಕೊಡುಗೆಯನ್ನು ನೀಡಿದೆ. ವಿಭಾಗದ ಸೇವೆ ಗುರುತಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಉಪಕರಣಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಕೆ.ಎನ್.ಮೋಹನ್ ಇತರರು ಉಪಸ್ಥಿತರಿದ್ದರು.

ENGLISH SUMMARY….

“Provide guidance to the students from National and International experts”: Prof. K.S. Rangappa, UoM former VC

Mysuru, Mar.29, 2021 (www.justkannada.in): “Efforts should be made to provide special guidance and information to the students by inviting at least 10 subject experts from across the country and other countries,” opined Prof. K.S. Rangappa, former Vice-Chancellor of the University of Mysore.

He inaugurated the ‘Social Chemistry 2020-21’ and book release program organized by the Department of Chemistry, University of Mysore, held at Manasagangotri.

In his address, he expressed his view that “Social Chemistry is an educational festival, in which students, researchers, and professors should participate. There are many talented students. Efforts should be made to recognize and encourage them.”

“Students today require future guidance. Along with the curriculum, they should be job-enabled by providing skill training,” he opined.

Prof. G. Hemanth Kumar, Vice-Chancellor, University of Mysore, in his address informed that the Department of Chemistry of the University is one of the oldest Departments and many students who pursued education here are presently serving in prestigious jobs across the world. “Because of the exemplary service of several Heads of this Department, the University is recognized across the world and has also set an example for other Departments to emulate,” he added.

Prof. R. Shivappa, Registrar, University of Mysore, Prof. K.N. Mohan, and others were present.

Keywords: University of Mysore/ Prof. K.S. Rangappa/ Department of Chemistry/ Social Chemistry/ book release program

key words : Country-Foreign-expert-students-Guidance-Give-Mysore VV-emeritus-Chancellor-Prof.K.S.Rangappa

The post “ದೇಶ, ವಿದೇಶಗಳ ಪರಿಣಿತರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಿ” : ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತಜ್ಞ ಸಮಿತಿ ವರದಿ, ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ನಡೆಸುವಂತೆ ಸುತ್ತೋಲೆ ಹೊರಡಿಸಲು ಸಚಿವ ಸುರೇಶ್ ಕುಮಾರ್ ಸೂಚನೆ…
ಬೆಂಗಳೂರು,ಅಕ್ಟೋಬರ್,21,2020(www.justkannada.in): ಆನ್ ಲೈನ್ ಶಿಕ್ಷಣ ಕುರಿತು ತಜ್ಞ ಸಮಿತಿ ನೀಡಿರುವ ವರದಿಯನ್ವಯ ಮತ್ತು ಸಿದ್ಧಪಡಿಸಲಾದ ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ಕೈಗೊಳ್ಳುವಂತೆ ವಿವರವಾದ ಸುತ್ತೋಲೆ ಹೊರಡಿಸಿಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಆನ್ ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆಯಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಆನ್ ಲೈನ್ ಶಿಕ್ಷಣವನ್ನು ತಮಗೆ ತೋಚಿದಂತೆ ಮಾಡದೇ, ಆನ್ ಲೈನ್ ಶಿಕ್ಷಣ ಕುರಿತು ತಜ್ಞ ಸಮಿತಿ ನೀಡಿರುವ ವರದಿಯನ್ವಯ ಸಿದ್ಧಪಡಿಸಲಾದ ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ಕೈಗೊಳ್ಳುವಂತೆ ವಿವರವಾದ ಸುತ್ತೋಲೆ ಹೊರಡಿಸಿಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಜಾರಿ ಮಾಡಲಾಗಿದ್ದು, ಆನ್ ಲೈನ್  ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಆದ್ರೇ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗೆ ಹಾಜರಾಗುತ್ತಿರುವುದರಿಂದ ಅವರುಗಳು ಕಣ್ಣಿನ ಸಮಸ್ಯೆ ಎದುರಿಸುವಂತಾಗಿದೆ.

Key words: Minister –S.Suresh Kumar- instructs – online education -under -guidance -expert – report.

The post ತಜ್ಞ ಸಮಿತಿ ವರದಿ, ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ನಡೆಸುವಂತೆ ಸುತ್ತೋಲೆ ಹೊರಡಿಸಲು ಸಚಿವ ಸುರೇಶ್ ಕುಮಾರ್ ಸೂಚನೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆ.31 ರಂದು ಮೈಸೂರು ವಿವಿಯಲ್ಲಿ ವೆಬಿನಾರ್ : ರವಿ ಡಿ.ಚೆನ್ನಣ್ಣನವರ್ ಅವರಿಂದ ದಿಕ್ಸೂಚಿ ಮಾರ್ಗದರ್ಶನ…
ಮೈಸೂರು, ಆಗಸ್ಟ್,25,2020(www.justkannada.in) ;  ಮೈಸೂರು ವಿಶ್ವವಿದ್ಯಾನಿಲಯ  ಪ್ರಾಣಿಶಾಸ್ತ್ರ ವಿಭಾಗವೂ ಆಗಸ್ಟ್ 31 ರಂದು ವೆಬಿನಾರ್ ಆಯೋಜಿಸಿದೆ.

ಐಎಎಸ್, ಐಪಿಎಸ್ ಹುದ್ದೆಯ ಕನಸನ್ನು ನನಸಾಗಿಸುವ ಉದ್ದೇಶದಿಂದ ರವಿ.ಡಿಚೆನ್ನಣ್ಣನವರ್(ಐಪಿಎಸ್) ಅವರ ದಿಕ್ಸೂಚಿ ಮಾರ್ಗದರ್ಶನ ಪಡೆಯುವ ಅವಕಾಶ ಕಲ್ಪಿಸಿದೆ.

ಆ.31 ರಂದು ಬೆಳಗ್ಗೆ 10.30 ರಿಂದ 12.30ರವರೆಗೆ ವೆಬಿನಾರ್ ನಡೆಯಲಿದ್ದು, ಮೈಸೂರು ವಿವಿ ವಿದ್ಯಾರ್ಥಿಗಳು ಹಾಗೂ ಆಸಕ್ತರು ಝೂಮ್ ಆಪ್ ನಲ್ಲಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬಹುದು. ವೆಬಿನಾರ್ ನಲ್ಲಿ ರವಿ ಡಿ.ಚೆನ್ನಣ್ಣನವರ್ ಅವರು ಐಎಎಸ್, ಐಪಿಎಸ್ ಹುದ್ದೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.

ಝೂಮ್ ಮೂಲಕ ಕಾರ್ಯಕ್ರಮಕ್ಕೆ ಲಿಂಕ್ ಬಳಸಿ https://zoom.us/j/93396797432?pwd=U2hmQVlQUFNsM1ZacWMvK0Q5SUU0UT09, Meeting ID: 933 9679 7432, Passcode: 559350  ಸೇರಬಹುದು ಎಂದು ಮೈಸೂರು ವಿವಿ ಪ್ರಾಣಿಶಾಸ್ತ್ರವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎಸ್.ಮಾಲಿನಿ ಮಾಹಿತಿ ನೀಡಿದ್ದಾರೆ.

Key words ; Webinar-Ravi D.Chennannavar-Mysore Vivi-31st August-Compass-guidance

The post ಆ.31 ರಂದು ಮೈಸೂರು ವಿವಿಯಲ್ಲಿ ವೆಬಿನಾರ್ : ರವಿ ಡಿ.ಚೆನ್ನಣ್ಣನವರ್ ಅವರಿಂದ ದಿಕ್ಸೂಚಿ ಮಾರ್ಗದರ್ಶನ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.